ಹೈದರಾಬಾದ್: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ್ ನಟನೆಯ, ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ಕೆಲ ದೃಶ್ಯಗಳು ಉಕ್ರೇನ್ ನಲ್ಲಿ ಚಿತ್ರೀಕರಣವಾಗಿದೆ. ಕೆಲ ದಿನಗಳ ಕಾಲ ಇಡೀ ಚಿತ್ರತಂಡ ಉಕ್ರೇನ್ ನಲ್ಲಿಯೇ ಬೀಡುಬಿಟ್ಟು, ಅಲ್ಲಿನ ಸುಂದರ ತಾಣಗಳನ್ನು ಸೆರೆ ಹಿಡಿದಿತ್ತು. ಅದಾದ ಕೆಲವೇ ತಿಂಗಳ ಬಳಿಕೆ ಉಕ್ರೇನ್ ಮತ್ತು ರಷ್ಯಾ ಯುದ್ಧ ಶುರುವಾಯಿತು. ಇಡೀ ದೇಶಕ್ಕೆ ದೇಶವೇ ಯುದ್ಧದ ಭಯದಲ್ಲಿ ಬದುಕಿತ್ತು. ಈ ಸಂದರ್ಭದಲ್ಲಿ ನಟ ರಾಮ್ ಚರಣ್ ತೇಜ್, ತಮಗೆ ಪರಿಚಯ ಇರುವ ಭದ್ರತಾ ಸಿಬ್ಬಂದಿಯ ಮುಖ್ಯಸ್ಥರಿಗೆ ಕರೆ ಮಾಡಿ, ಅಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡಿದ್ದಾರೆ.

ಭದ್ರತಾ ಸಿಬ್ಬಂದಿಯು ನೀಡಿದ ಮಾಹಿತಿ ರಾಮ್ ಚರಣ್ ಅವರಲ್ಲೂ ಆತಂಕ ಮೂಡಿಸಿತ್ತಂತೆ. “ನನ್ನ ತಂದೆ ಬಂದೂಕಿನೊಂದಿಗೆ ರಸ್ತೆಯಲ್ಲಿದ್ದಾರೆ. ಯಾವ ಕಡೆಯಿಂದ ಏನು ಬರುತ್ತದೋ ಗೊತ್ತಿಲ್ಲವೆಂದು’ ಭದ್ರತಾ ಸಿಬ್ಬಂದಿಯ ಮುಖ್ಯಸ್ಥರು ತಿಳಿಸಿದ್ದಾರೆ. “ನನ್ನ ಕೈಲಾದ ಸಹಾಯವನ್ನು ನಾನೂ ಮಾಡುತ್ತೇನೆ. ನಿಮ್ಮ ದೇಶಕ್ಕೆ ಬರಲು ಆಗದೇ ಇರಬಹುದು. ಇಲ್ಲಿಂದಲೇ ನಾನು ಶಾಂತಿಗಾಗಿ ಪ್ರಾರ್ಥಿಸುವೆ” ಎಂದು ಮರು ಉತ್ತರ ಕೊಟ್ಟಿದ್ದರಂತೆ ರಾಮ್ ಚರಣ್ ತೇಜ್. ಈ ಘಟನೆಯನ್ನು ಅವರು ಆರ್.ಆರ್.ಆರ್ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ ಮೆಗಾ ಪವರ್ ಸ್ಟಾರ್. ಅಲ್ಲದೇ, ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ನಾನು ಇಲ್ಲಿಯವರೆಗೆ ಚಿತ್ರೀಕರಿಸಿದ ಅತ್ಯುತ್ತಮ ದೇಶಗಳಲ್ಲಿ ಉಕ್ರೇನ್ ದೇಶವು ಕೂಡ ಒಂದಾಗಿದೆ’ ಎಂದು ಉಕ್ರೇನ್ ಬಗ್ಗೆ ಬಣ್ಣಿಸಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್

ದೇಶದ ಜನತೆ ಮತ್ತು ವಿಶ್ವದಾದ್ಯಂತ ಇರುವ ಅವರು ತಮ್ಮ ಅಭಿಮಾನಿಗಳ ಜತೆ ತಾವು ಸದಾ ಇರುವುದನ್ನು ಅವರು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಇದ್ದಾರೆ. ಕೋವಿಡ್-19 ಸಮಯದಲ್ಲೂ ಅವರು ಹತ್ತಾರು ಕೆಲಸಗಳನ್ನು ಮಾಡಿದ್ದರು. ಸಾಕಷ್ಟು ಕುಟುಂಬಗಳಿಗೆ ಸಹಾಯಹಸ್ತ ಚಾಚಿದ್ದರು. ಇದನ್ನೂ ಓದಿ: ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನ
‘ಆರ್‍ಆರ್‍ಆರ್’ ಕುರಿತು ಹೇಳುವುದಾದರೆ, ಉಕ್ರೇನ್ ಮತ್ತು ಬಲ್ಗೇರಿಯಾದಲ್ಲಿ ಈ ಚಿತ್ರದ ಕೆಲ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. 400 ಕೋಟಿ ರೂಪಾಯಿ ಬಜೆಟ್‍ನಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ಆರಂಭದಲ್ಲಿ ಜುಲೈ 30, 2020 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅಂತಿಮವಾಗಿ, ಚಿತ್ರವನ್ನು ಮಾರ್ಚ್ 25, 2022 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.














ಸತತ ಆರೇಳು ತಿಂಗಳಿಂದ ಜಗನ್ ರೆಡ್ಡಿ ಅವರನ್ನು ತೆಲುಗು ಸಿನಿಮಾ ರಂಗದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಮತ್ತು ಅಲ್ಲಿನ ವಾಣಿಜ್ಯ ಮಂಡಳಿ ಭೇಟಿ ಮಾಡಿ ಮನವಿ ಮಾಡಿಕೊಂಡರೂ, ಜಗನ್ ಜಗ್ಗಿರಲಿಲ್ಲ. ಮೊನ್ನೆಯಷ್ಟೇ ಹಿರಿಯ ನಟ ಚಿರಂಜೀವಿ, ನಿರ್ದೇಶಕ ರಾಜಮೌಳಿ ಸೇರಿದಂತೆ ಹಲವು ಕಲಾವಿದರು ಜಗನ್ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದೀಗ ಮಾತುಕತೆ ಫಲ ಕೊಟ್ಟಿದೆ. ಶೇ.100ರಷ್ಟು ಆಸನಕ್ಕೆ ಅವಕಾಶ ಕಲ್ಪಿಸಿರುವ ಸರಕಾರ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಡಲಿಕೆಯನ್ನು ಮಾಡಲಿಂದು ಎಂದು ಹೇಳಿದೆ. ಹಾಗಾಗಿ ತೆಲುಗು ಸಿನಿಮಾ ರಂಗ ನಿಟ್ಟುಸಿರಿಟ್ಟಿದೆ. 
