Tag: ಆರ್ ಆರ್ ಆರ್

  • ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

    ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

    ಆರ್.ಆರ್.ಆರ್ ಯಶಸ್ಸಿನಲ್ಲಿ ತೇಲುತ್ತಿರುವ ನಿರ್ದೇಶಕ ರಾಜಮೌಳಿ, ಸದ್ದಿಲ್ಲದೇ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಮಹೇಶ್ ಬಾಬು ಅವರಿಗಾಗಿ ಸಿನಿಮಾ ಮಾಡಲಿದ್ದು, ಈ ಕೆಲಸದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರಂತೆ. ಸ್ಕ್ರಿಪ್ಟ್ ಕೆಲಸದಲ್ಲಿ ತಲ್ಲೀಣರಾಗಿರುವ ನಿರ್ದೇಶಕರು ಮಹೇಶ್ ಬಾಬು ಅವರನ್ನು ಈ ಸಿನಿಮಾದಲ್ಲಿ ಹೊಸ ರೀತಿಯಲ್ಲಿ ತೋರಿಸಲಿದ್ದಾರಂತೆ. ಕಥೆಯೇ ಬಗ್ಗೆ ಯಾವುದೇ ಮಾಹಿತಿ ಕೊಡದೇ ಇದ್ದರೂ, ಇದು ಕೂಡ ಐತಿಹಾಸಿಕ ಸಂಬಂಧವನ್ನು ಹೊಂದಿದೆಯಂತೆ.

    ರಾಜಮೌಳಿ ಅವರ ಮುಂದಿನ ಸಿನಿಮಾಗೆ ಮಹೇಶ್ ಬಾಬು ಅವರೇ ನಾಯಕ ಎಂದು ಹೇಳಲಾದರೂ, ನಾಯಕಿ ಯಾರು ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ಈ ಬಾರಿ ಯಾವ ನಾಯಕಿಗೆ ರಾಜಮೌಳಿ ಅವರು ಅವಕಾಶ ನೀಡಲಿದ್ದಾರೆ ಎಂಬ ಪ್ರಶ್ನೆ ಮೂಡಿತ್ತು. ತೆಲುಗು ಸಿನಿಮಾ ರಂಗದಲ್ಲಿ ಸದ್ಯ ಐಶ್ವರ್ಯ ರೈ ಅವರ ಹೆಸರು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿ ಐಶ್ವರ್ಯ ರೈ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್‌ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್

    ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ ನ ಈ ಸಿನಿಮಾ ಸೆಟ್ಟೇರುವುದು ತಡವಾಗಿದ್ದರೂ, ಈಗಾಗಲೇ ಹಲವು ಸುತ್ತು ಚರ್ಚೆಗಳು ನಡೆದಿವೆ. ಸಿನಿಮಾದ ಬಜೆಟ್, ಕಲಾವಿದರ ಆಯ್ಕೆ, ಕಥೆ ಹೀಗೆ ಹಲವು ಕಾರಣಗಳಿಂದಾಗಿ ಸಿನಿಮಾ ಈಗಿನಿಂದಲೇ ನಿರೀಕ್ಷೆ ಮೂಡಿಸಿದೆ. ಆರ್.ಆರ್.ಆರ್ ಸಿನಿಮಾದ ನಂತರ ಈ ಸಿನಿಮಾ ಬರುತ್ತಿರುವುದರಿಂದ ಮತ್ತಷ್ಟು ಬೇಡಿಕೆಯಂತೂ ಹೆಚ್ಚಾಗಲಿದೆ.

  • ಆರ್.ಆರ್.ಆರ್ ಸಿನಿಮಾದಲ್ಲಿ ಜ್ಯೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಸಲಿಂಗ ಕಾಮಿಗಳಾ?

    ಆರ್.ಆರ್.ಆರ್ ಸಿನಿಮಾದಲ್ಲಿ ಜ್ಯೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಸಲಿಂಗ ಕಾಮಿಗಳಾ?

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಆರ್.ಆರ್.ಆರ್ ಸಿನಿಮಾ ಈವರೆಗೂ ಬಾಕ್ಸ್ ಆಫೀಸ್ ಗಳಿಕೆ, ಸಿನಿಮಾ ಮೂಡಿ ಬಂದ ರೀತಿ ಮತ್ತು ಮೇಕಿಂಗ್ ನಿಂದಾಗಿ ಸಾಕಷ್ಟು ಸದ್ದು ಮಾಡಿದೆ. ಇದೀಗ ಸಿನಿಮಾದ ಕಥೆಯಿಂದಾಗಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಅದರಲ್ಲೂ ವಿದೇಶಿ ನೋಡುಗರು ಈ ಕಥೆಯನ್ನು ಬೇರೆಯದ್ದಾಗಿಯೇ ಸ್ವೀಕರಿಸಿರುವುದು ಇನ್ನೂ ಸುದ್ದಿಗೆ ಕಾರಣವಾಗಿದೆ.

    ಆರ್.ಆರ್.ಆರ್ ಸಿನಿಮಾ ಓಟಿಟಿಯಲ್ಲಿ ನೋಡಲು ಲಭ್ಯವಿದೆ. ಹೀಗಾಗಿ ಅನೇಕರು ಈ ಸಿನಿಮಾವನ್ನು ಅದೇ ವೇದಿಕೆಯಲ್ಲೇ ವೀಕ್ಷಿಸುತ್ತಿದ್ದಾರೆ. ಸಿನಿಮಾ ನೋಡಿದ ವಿದೇಶಿಗರು ಈ ಸಿನಿಮಾವನ್ನು ಗೇ ಕಥೆಯುಳ್ಳ ಚಿತ್ರ ಎಂದು ಕಾಲೆಳೆದಿದ್ದಾರೆ. ಜ್ಯೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಪಾತ್ರಗಳು ಸಲಿಂಗ ಕಾಮಿಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಇಂತಹ ಸಾಕಷ್ಟು ಕಾಮೆಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದಕ್ಕೆ ಉತ್ತರಿಸಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಉರಿವ ಬೆಂಕಿಗೆ ತುಪ್ಪವಲ್ಲ, ಪೆಟ್ರೊಲ್ ಸುರಿದು ಮತ್ತಷ್ಟು ಬೆಂಕಿ ಉಗುಳುವಂತೆ ಮಾಡಿದ್ದಾರೆ. ‘ಇದೊಂದು ಸಲಿಂಗ ಪ್ರೇಮ ಎನ್ನುವಂತಹ ಕಥೆಯನ್ನು ಈ ಸಿನಿಮಾ ಹೊಂದಿದೆ ಎನ್ನುವ ಅರ್ಥದಲ್ಲಿ ಟ್ವೀಟ್‌ ಮಾಡಿದ್ದಾರೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

    ಈ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್‌ ಮತ್ತು ರಾಮ್ ಚರಣ್ ತೇಜ್ ಇಬ್ಬರೂ ಒಟ್ಟೊಟ್ಟಿಗೆ ತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಮುಗಿಯುವ ತನಕ ಒಬ್ಬರಿಗಾಗಿ ಒಬ್ಬರು ಫೈಟ್ ಮಾಡುತ್ತಾರೆ. ನೃತ್ಯ ಮಾಡುತ್ತಾರೆ. ಹೀಗಾಗಿ ಇದೊಂದು ಸಲಿಂಗ ಪ್ರೇಮಕಥೆ ಎಂದು ಉಲ್ಲೇಖಿಸಲಾಗುತ್ತಿದೆ.

  • ಒಟಿಟಿಯಲ್ಲೂ ರಾಜಮೌಳಿ ‘RRR’ ದಾಖಲೆ

    ಒಟಿಟಿಯಲ್ಲೂ ರಾಜಮೌಳಿ ‘RRR’ ದಾಖಲೆ

    ಎಸ್.ಎಸ್.ರಾಜಮೌಳಿ ನಿರ್ದೇಶನದ ಜೂನಿಯರ್ ಎನ್.ಟಿಆರ್ ಹಾಗೂ ರಾಮ್ ಚರಣ್ ನಟನೆಯ ಆರ್.ಆರ್.ಆರ್ ಸಿನಿಮಾ ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿತ್ತು. ದಾಖಲೆಯ ರೀತಿಯಲ್ಲಿ ಹಣ ಬಾಚಿಕೊಂಡಿತ್ತು. ಇದೀಗ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಇದೇ ತಿಂಗಳ 20ರಂದು ತಾರಕ್ ಹುಟ್ಟುಹಬ್ಬದಂದು ಒಟಿಟಿಗೆ ಲಗ್ಗೆ ಇಟ್ಟ ತ್ರಿಬಲ್ ಆರ್ ಸಿನಿಮಾ ಹೊಸದೊಂದು ರೆಕಾರ್ಡ್ ಬರೆದಿದೆ. ಇದನ್ನೂ ಓದಿ : ‘ಮುದುಕನ ಲವ್ ಸ್ಟೋರಿ’ಗೆ ಕೆಜಿಎಫ್ ತಾತ ಕೃಷ್ಣರಾವ್ ಹೀರೋ

    ಈ ಸಿನಿಮಾ ಜೀ5 ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾದ ದೃಶ್ಯ ವೈಭವ ತ್ರಿಬಲ್ ಆರ್ ಸಿನಿಮಾ, ಜಸ್ಟ್ ಒಂದೇ ಒಂದು ನಿಮಿಷದಲ್ಲಿ 1000 ಮಿಲಿಯನ್ಸ್ ಸ್ಟ್ರೀಮಿಂಗ್ ಪಡೆದುಕೊಂಡಿದ್ದು, ಜೊತೆಗೆ ಜೀ5ಯಲ್ಲಿ ನಾಲ್ಕು ಭಾಷೆಯಲ್ಲಿಯೂ ಟ್ರೇಡಿಂಗ್ ಕಮಾಲ್ ಮಾಡ್ತಿದೆ. ಇದನ್ನೂ ಓದಿ : ಅಪ್ಪು ಅಗಲಿ ಇಂದಿಗೆ 7 ತಿಂಗಳು : ಸಮಾಧಿ ಮುಂದೆ ಜನಸಾಗರ

    ಈ ಕುರಿತು ಟ್ವಿಟ್ ಮಾಡಿರುವ ಜ್ಯೂನಿಯರ್ ಎನ್.ಟಿ.ಆರ್ ‘ಆರ್.ಆರ್.ಆರ್ ಸಿನಿಮಾಕ್ಕೆ ನೀವು ತೋರಿಸುತ್ತಿರುವ ಪ್ರೀತಿಗೆ ನಾನು ಕೃತಜ್ಞ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಈ ನಾಲ್ಕು ಭಾಷೆಯಲ್ಲಿಯೂ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು,ನಿಮ್ಮ ಅದ್ಭುತ ಪ್ರತಿಕ್ರಿಯೆ ಧನ್ಯವಾದ’ ಎಂದು ಹೇಳಿದ್ದಾರೆ. ಇದನ್ನೂ ಓದಿ : ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್

    ರಾಜಮೌಳಿ ಸಿನಿಮಾ ಎಂದರೆ ಅಭಿಮಾನಿಗಳು ಸಹಜವಾಗಿಯೇ ಅದ್ದೂರಿತನ ಬಯಸುತ್ತಾರೆ. ಅದಕ್ಕೆ ತಕ್ಕಂತೆಯೇ ‘ಆರ್​ಆರ್​ಆರ್​’ ಸಿನಿಮಾ ಮೂಡಿಬಂದಿದೆ. ಜ್ಯೂ. ಎನ್​ಟಿಆರ್​ ಮತ್ತು ರಾಮ್​ ಚರಣ್​ ಆ್ಯಕ್ಷನ್​ ಖದರ್ ನಲ್ಲಿ ಮೆರೆದಿದ್ದರು. ಜೊತೆಗೆ ಸೆಂಟಿಮೆಂಟ್​ ಕೂಡ ಸಿನಿಮಾದಲ್ಲಿ ಹೈಲೈಟ್​ ಆಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗಿದೆ.

  • ಪ್ಯಾನ್ ಇಂಡಿಯಾ ಸಿನಿಮಾ ಇಂದಿನದ್ದಲ್ಲ : ರಾಜಮೌಳಿಗೆ ಟಾಂಗ್ ಕೊಟ್ಟ ಕಮಲ್ ಹಾಸನ್

    ಪ್ಯಾನ್ ಇಂಡಿಯಾ ಸಿನಿಮಾ ಇಂದಿನದ್ದಲ್ಲ : ರಾಜಮೌಳಿಗೆ ಟಾಂಗ್ ಕೊಟ್ಟ ಕಮಲ್ ಹಾಸನ್

    ಕ್ಷಿಣದ ಭಾರತದ ಸಿನಿಮಾಗಳು ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗಿ, ಹಲವು ಭಾಷೆಗಳಿಗೆ ಡಬ್ ಆಗಿ ಭಾರೀ ಹವಾ ಕ್ರಿಯೇಟ್ ಮಾಡುತ್ತಿವೆ. ಹೀಗಾಗಿಯೇ ಪ್ಯಾನ್ ಇಂಡಿಯಾ ಕಲ್ಪನೆಗೂ ತುಸು ಹೆಚ್ಚಾಗಿಯೇ ದಕ್ಷಿಣದ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಆರ್.ಆರ್.ಆರ್, ಕೆಜಿಎಫ್ 2 ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಾಗಿನಿಂದ, ಪ್ಯಾನ್ ಇಂಡಿಯಾ ಚಳವಳಿ ಹುಟ್ಟಿದ್ದು ಇದೇ ಸಿನಿಮಾಗಳಿಂದ ಎನ್ನುವಂತೆ ಬಿಂಬಿಸಲಾಗುತ್ತಿದೆ. ಈ ಮಾತಿಗೆ ಕಮಲ್ ಹಾಸನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.  ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    ಕಮಲ್ ಹಾಸನ್ ನೀಡಿರುವ ಪ್ರತಿಕ್ರಿಯೆಯನ್ನು ರಾಜಮೌಳಿ ಅವರಿಗೆ ಕೊಟ್ಟ ಟಾಂಗ್ ಎಂದೇ ತಮಿಳು ಸಿನಿಮಾ ರಂಗದಲ್ಲಿ ಬಿಂಬಿಸಲಾಗುತ್ತಿದೆ. ಅಷ್ಟಕ್ಕೂ ಕಮಲ್ ಹಾಸನ್ ಹೇಳಿದ್ದೇನು ಅಂದರೆ, ‘ಪ್ಯಾನ್ ಇಂಡಿಯಾ ಸಿನಿಮಾಗಳು ಈಗ ಹುಟ್ಟಿಲ್ಲ. ಹಲವು ವರ್ಷಗಳ ಹಿಂದೆಯೇ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಲಾಗಿದೆ. ಅವುಗಳಿಗೆ ಪ್ಯಾನ್ ಇಂಡಿಯಾ ಅಂತ ಹೆಸರು ಇರಲಿಲ್ಲವಷ್ಟೆ. ಈಗ ಅದನ್ನೇ ದೊಡ್ಡದು ಮಾಡಿ ಹೇಳಲಾಗುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

    ಆರ್.ಆರ್.ಆರ್, ಕೆಜಿಎಫ್ 2 ಸಿನಿಮಾಗಳಿಗಿಂತ ಮುಂಚೆಯೇ ಪ್ಯಾನ್ ಇಂಡಿಯಾ ಚಿತ್ರಗಳು ಬಂದಿವೆ. ಮಲಯಾಳಂನ ಚಮ್ಮೇನ್, ಮುಘಲ್ ಎ ಅಜಮ್ , ಪಡೋಸನ್ ರೀತಿಯ ಸಿನಿಮಾಗಳನ್ನು ಏನೆಂದು ಕರೆಯಬೇಕು? ನಮ್ಮದು ಹಲವು ಭಾಷೆಗಳನ್ನು ಹೊಂದಿದ ದೇಶ. ಅದನ್ನು ಅರ್ಥ ಮಾಡಿಕೊಂಡರೆ, ಎಲ್ಲವೂ ಅರ್ಥವಾದೀತು ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ ಕಮಲ್ ಹಾಸನ್. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ

    ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳು ಎಂದು ಬೇರ್ಪಡಿಸುವುದನ್ನು ನಾನು ಒಪ್ಪಲಾರೆ ಎಂದಿರುವ ಕಮಲ್ ಹಾಸನ್, ಎಲ್ಲವೂ ನಮ್ಮದೇ ಎಂದು ಸಾಗಬೇಕು. ತಾಜ್ ಮಹಲ್ ನನ್ನದು, ಮಧುರೈ ಮೀನಾಕ್ಷಿ ದೇವಾಲಯ ಕೂಡ ನನ್ನದೇ ಎಂದು ಹೇಳುವ ಮೂಲಕ ದೇಶ, ಭಾಷೆಯನ್ನು ಒಡೆಯಬೇಡಿ ಎಂದಿದ್ದಾರೆ ಕಮಲ್ ಹಾಸನ್.

  • ರಾಜಮೌಳಿ ಮುಂದಿನ ಚಿತ್ರಕ್ಕೆ ಮಹೇಶ್ ಬಾಬು ಹೀರೋ

    ರಾಜಮೌಳಿ ಮುಂದಿನ ಚಿತ್ರಕ್ಕೆ ಮಹೇಶ್ ಬಾಬು ಹೀರೋ

    ಆರ್.ಆರ್.ಆರ್ ಯಶಸ್ಸಿನಲ್ಲಿ ತೇಲುತ್ತಿರುವ ರಾಜಮೌಳಿ ಮುಂದಿನ ಸಿನಿಮಾ ಯಾವುದು  ಎಂಬ ಚರ್ಚೆ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಈ ಕುರಿತು ರಾಜಮೌಳಿ ಅವರು ಏನೂ ಹೇಳದೇ ಇದ್ದರೂ, ಅವರ ತಂದೆ ವಿಜಯೇಂದ್ರ ಪ್ರಸಾದ್ ಈ ಕುರಿತು ಮಾತನಾಡಿದ್ದಾರೆ. ಅಂದುಕೊಂಡಂತೆ ಆದರೆ, ರಾಜಮೌಳಿ ನಿರ್ದೇಶನದ ಮುಂದಿನ ಸಿನಿಮಾ 2023ರಲ್ಲಿ ಸೆಟ್ಟೇರಲಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ರಾಜಮೌಳಿ ಅವರ ಮುಂದಿನ ಚಿತ್ರಕ್ಕೆ ಅವರ ತಂದೆಯೇ ಚಿತ್ರಕತೆ ಬರೆಯುತ್ತಿದ್ದಾರೆ. ಈಗಾಗಲೇ ಕಥೆ ಸಿದ್ದಗೊಂಡಿದ್ದು, ಸ್ಕ್ರೀನ್ ಪ್ಲೇ ಹೆಣೆಯುವಲ್ಲಿ ವಿಜಯೇಂದ್ರ ಪ್ರಸಾದ್ ಬ್ಯುಸಿಯಾಗಿದ್ದಾರಂತೆ. 2023ರ ಜೂನ್‍ನಿಂದ ಚಿತ್ರೀಕರಣ ಮಾಡುವುದಾಗಿ ಅವರು ತಿಳಿಸಿದ್ದಾರೆ. ಇದು ಕೂಡ ಭಾರೀ ಬಜೆಟ್ ಸಿನಿಮಾವಾಗಿರಲಿದೆಯಂತೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಅಂದಹಾಗೆ ಈ ಚಿತ್ರಕ್ಕೆ ಮಹೇಶ್ ಬಾಬು ಹೀರೋ. ಐತಿಹಾಸಿಕ ಕಥಾವಸ್ತುವನ್ನು ಈ ಸಿನಿಮಾ ಹೊಂದಿದ್ದು, ಮಹೇಶ್ ಬಾಬು ಈ ಪಾತ್ರಕ್ಕಾಗಿ ಕನಿಷ್ಠ ಆರು ತಿಂಗಳ ಕಾಲ ತಯಾರಿ ಮಾಡಿಕೊಳ್ಳಬೇಕಂತೆ. ಸದ್ಯ ಮಹೇಶ್ ಬಾಬು ಅವರು  ‘ಸರ್ಕಾರು ವಾರಿ ಪಾಟ’ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದು, ರಾಜಮೌಳಿ ಅವರ ಕಥೆಯನ್ನು ಒಪ್ಪಿಕೊಂಡಿದ್ದಾರಂತೆ. ಅಲ್ಲದೇ, ವಿಶೇಷ ಪಾತ್ರಕ್ಕೆ ತಯಾರಿ ಮಾಡಿಕೊಳ್ಳುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿತ್ತು. ಈ ಹಿಂದಿನ ಅವರ ಬಾಹುಬಲಿ ಚಿತ್ರ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಬಿರುದಾಂಕಿತಗೊಂಡಿತ್ತು. ಮಹೇಶ್ ಬಾಬುಗಾಗಿ ಬರೆದ ಕಥೆಯು, ಈ ಎರಡೂ ಸಿನಿಮಾಗಳನ್ನೂ ಮೀರಿಸಲಿದೆ ಎಂದು ಸಿನಿಪಂಡಿತರ ಲೆಕ್ಕಾಚಾರ.

  • ಕೆಜಿಎಫ್ 2 ಕಲೆಕ್ಷನ್ 1129.38 ಕೋಟಿ : ಆರ್.ಆರ್.ಆರ್ ದಾಖಲೆ ಉಡಿಸ್

    ಕೆಜಿಎಫ್ 2 ಕಲೆಕ್ಷನ್ 1129.38 ಕೋಟಿ : ಆರ್.ಆರ್.ಆರ್ ದಾಖಲೆ ಉಡಿಸ್

    ಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಕೆಜಿಎಫ್ 2’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ದಾಖಲೆಗಳನ್ನು ಮುರಿಯುತ್ತಾ ಮುಂದೆ ಸಾಗುತ್ತಿದೆ. 25ನೇ ದಿನದತ್ತ ಮುನ್ನುಗ್ಗಿದ್ದರೂ, ಕಲೆಕ್ಷನ್ ಮಾತ್ರ ಯಾವುದೇ ರೀತಿಯಲ್ಲಿ ಕಡಿಮೆಯಾಗಿಲ್ಲ. ಈವರೆಗೂ ಕೆಜಿಎಫ್ 2 ಅಂದಾಜು 1129.38 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಈ ಮೂಲಕ ಆರ್.ಆರ್.ಆರ್ ಸಿನಿಮಾದ ವರ್ಲ್ಡ್ ವೈಡ್ ಕಲೆಕ್ಷನ್ ದಾಖಲೆಯನ್ನೂ ಕೆಜಿಎಫ್ 2 ಪುಡಿಪುಡಿ ಮಾಡಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    25ನೇ ದಿನದೊಳಗಿನ ಆರ್.ಆರ್.ಆರ್ ಸಿನಿಮಾದ ಒಟ್ಟು ಲೆಕ್ಕಾಚಾರ 1127.65 ಕೋಟಿ ಎಂದು ಹೇಳಲಾಗಿತ್ತು. ಕೆಜಿಎಫ್ 2 ಸಿನಿಮಾ 1129.38 ಕೋಟಿ ಗಳಿಕೆ ಮಾಡುವ ಮೂಲಕ ಆರ್.ಆರ್.ಆರ್ ದಾಖಲೆಯನ್ನು ಮುರಿಯಲಾಗಿದೆ. ಅಲ್ಲಿಗೆ ಭಾರತೀಯ ಸಿನಿಮಾ ರಂಗದಲ್ಲೇ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಕೀರ್ತಿಗೆ ಕೆಜಿಎಫ್ 2 ಪಾತ್ರವಾಗಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    2022 ನಲ್ಲಿ ಅತೀ ಹೆಚ್ಚು ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಗೂ ಕೆಜಿಎಫ್ 2 ಕಾರಣವಾಗಿದ್ದರೆ, ಭಾರತೀಯ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಮೂರನೇ ಸಿನಿಮಾ ಎಂಬ ಖ್ಯಾತಿಯೂ ಈ ಸಿನಿಮಾದ್ದು. ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿರುವುದರಿಂದ ಈವರೆಗಿನ ಎಲ್ಲ ದಾಖಲೆಗಳನ್ನು ಕೆಜಿಎಫ್ 2 ಮುರಿದು, ಹೊಸ ದಾಖಲೆಯನ್ನು ಬರೆಯಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಸದ್ಯ ಆರ್. ಆರ್. ಆರ್ ಸಿನಿಮಾದ ವರ್ಲ್ಡ್ ವೈಡ್ ಕಲೆಕ್ಷನ್ ದಾಖಲೆಯನ್ನು ಕೆಜಿಎಫ್ 2 ಮುರಿದಿದ್ದು, ದಂಗಲ್ ಮತ್ತು ಆರ್.ಆರ್.ಆರ್ ಸಿನಿಮಾದ ಒಟ್ಟು ಕಲೆಕ್ಷನ್ ದಾಖಲೆಯನ್ನು ಸದ್ಯದಲ್ಲೇ ದಾಟಲಿದೆ ಎನ್ನುತ್ತಿವೆ ಬಾಕ್ಸ್ ಆಫೀಸ್ ಮೂಲಗಳು. ಈ ಮೂಲಕ ಕನ್ನಡದ ಸಿನಿಮಾವೊಂದು ಐತಿಹಾಸಿಕ ದಾಖಲೆ ಮಾಡಲು ಹೊರಟಿರುವುದು ಹೆಮ್ಮೆಯ ಸಂಗತಿ ಆಗಿದೆ.

  • ತೆಲುಗು, ಕನ್ನಡ ಕೋವಿಡ್ ಹೊಡೆತಕ್ಕೆ ಬಾಲಿವುಡ್ ಸೋಂಕಿತ : ಬೆಂಕಿ ಹಚ್ಚಿದ ರಾಮ್ ಗೋಪಾಲ್ ವರ್ಮಾ

    ತೆಲುಗು, ಕನ್ನಡ ಕೋವಿಡ್ ಹೊಡೆತಕ್ಕೆ ಬಾಲಿವುಡ್ ಸೋಂಕಿತ : ಬೆಂಕಿ ಹಚ್ಚಿದ ರಾಮ್ ಗೋಪಾಲ್ ವರ್ಮಾ

    ಕೆಜಿಎಫ್ 2, ಆರ್.ಆರ್.ಆರ್, ಪುಷ್ಪಾ ಸಿನಿಮಾಗಳು ಬಾಲಿವುಡ್ ನಲ್ಲಿ ಕಮಾಯಿ ಮಾಡುತ್ತಿದ್ದಂತೆಯೇ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿಪರೀತ ಆಕ್ಟಿವ್ ಆಗಿದ್ದಾರೆ. ದಕ್ಷಿಣದ ಸಿನಿಮಾಗಳನ್ನು ಹಿಗ್ಗಾಮುಗ್ಗಾ ಹೊಗಳಿ, ಹಿಂದಿ ಸಿನಿಮಾಗಳ ಬಗ್ಗೆ ಸಖತ್ ಟಾಂಗ್ ಕೊಡುತ್ತಿದ್ದಾರೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಮೊನ್ನೆಯಷ್ಟೇ ರಾಮ್ ಗೋಪಾಲ್ ವರ್ಮಾ ಅವರ ಹೊಸ ಸಿನಿಮಾದ ಟೈಟಲ್ ಲಾಂಚ್ ಬೆಂಗಳೂರಿನಲ್ಲಿ ನಡೆಯಿತು. ಈ ಸಿನಿಮಾದ ಪತ್ರಿಕಾಗೋಷ್ಠಿಯಲ್ಲೂ ಕೆಜಿಎಫ್ 2 ಸಿನಿಮಾದ ಬಗ್ಗೆ ಮೆಚ್ಚಿ ಮಾತನಾಡಿದರೆ, ಅದರ ದಾಖಲೆಯನ್ನು ವಿವರಿಸಿದರು. ಕೆಜಿಎಫ್ 2 ಸಿನಿಮಾ ಬಾಲಿವುಡ್ ಮಂದಿಯನ್ನು ಹೇಗೆಲ್ಲ ಜಾಗೃತವಾಗಿರುವಂತೆ ಮಾಡಿದೆ ಎನ್ನುವುದನ್ನು ಹೇಳಿದ್ದರು. ಇದೀಗ ಇದೇ ವಿಷಯವಾಗಿ ಟ್ವಿಟ್ ವೊಂದನ್ನು ಮಾಡಿದ್ದಾರೆ ಆರ್.ಜಿ.ವಿ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ತೆಲುಗು ಮತ್ತು ಕನ್ನಡ ಸಿನಿಮಾಗಳು ಹಿಂದಿ ಚಿತ್ರಗಳನ್ನು ಕೋವಿಡ್ 19 ರೀತಿಯಲ್ಲಿ ಸೋಂಕಿತರನ್ನಾಗಿ ಮಾಡಿವೆ. ಅತೀ ಶೀಘ್ರದಲ್ಲೇ ಬಾಲಿವುಡ್ ವ್ಯಾಕ್ಸಿನ್ ತಗೆದುಕೊಂಡು ಮರಳಲಿದೆ ಎಂದು ಟ್ವಿಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ಈ ಟ್ವಿಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದು, ನೂರಾರು ಹಿಂದಿ ಸಿನಿಮಾಗಳ ಅಭಿಮಾನಿಗಳು ಅದಕ್ಕೆ ಉತ್ತರವನ್ನೂ ಕೊಟ್ಟಿದ್ದಾರೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ತೆಲುಗಿನ ಆರ್.ಆರ್.ಆರ್ ಮತ್ತು ಕನ್ನಡದ ಕೆಜಿಎಫ್ 2 ಸದ್ಯ ಬಾಲಿವುಡ್ ಅನ್ನು ಆಳುತ್ತಿವೆ. ನೂರಾರು ಕೋಟಿ ಕೊಳ್ಳೆ ಹೊಡೆದಿವೆ. ಅದರಲ್ಲೂ ಕನ್ನಡದ ಕಜಿಎಫ್ 2 ಚಿತ್ರ ಮುನ್ನೂರು ಕೋಟಿ ಕ್ಲಬ್ ತಲುಪಿ, ಇನ್ನೂ ಮುನ್ನುಗ್ಗುತ್ತಿದೆ. ಬಾಲಿವುಡ್ ಕಲಾವಿದರು ಈ ಓಟಕ್ಕೆ ಬೆಚ್ಚಿ ಬಿದ್ದಿದ್ದಾರೆ. ಕೆಲವು ಕಲಾವಿದರು ತಮ್ಮದೇ ಆದ ರೀತಿಯಲ್ಲಿ ರಿಯ್ಯಾಕ್ಟ್ ಕೂಡ ಮಾಡುತ್ತಿದ್ದಾರೆ. ಹೀಗಾಗಿ ರಾಮ್ ಗೋಪಾಲ್ ವರ್ಮಾ ಟ್ವಿಟ್ ಮಹತ್ವ ಪಡೆದಿದೆ.

  • ಆರ್.ಆರ್.ಆರ್ : ಬಾಕ್ಸ್ ಆಫೀಸ್ ಗಳಿಕೆ ಸುಳ್ಳು ಸುಳ್ಳು ಎಂದ ಬಾಲಿವುಡ್ ಖಾನ್

    ಆರ್.ಆರ್.ಆರ್ : ಬಾಕ್ಸ್ ಆಫೀಸ್ ಗಳಿಕೆ ಸುಳ್ಳು ಸುಳ್ಳು ಎಂದ ಬಾಲಿವುಡ್ ಖಾನ್

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಿದೆ. ಈವರೆಗಿನ ಎಲ್ಲಾ ದಾಖಲೆಗಳನ್ನು ಅದು ಮುರಿದು ಮುನ್ನುಗ್ಗುತ್ತಿದೆ. ಹತ್ತಿರ ಹತ್ತಿರ ಸಾವಿರ ಕೋಟಿ ಸಮೀಪಕ್ಕೆ ಸಿನಿಮಾ ಬರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಬಾಲಿವುಡ್ ನ ಸ್ವಯಂ ವಿಮರ್ಶಕ ಕಮಲ್ ಆರ್ ಖಾನ್ ಹೇಳುವುದೇ ಬೇರೆ. ಇದನ್ನೂ ಓದಿ: ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

    ಭಾರತೀಯ ಬಹುತೇಕ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಇತರ ದೇಶಗಳ ಭಾಷೆಗಳಿಗೂ ಅದು ಡಬ್ ಆಗಿ ಬಿಡುಗಡೆ ಆಗಿದೆ. ಮೊದಲ ಮೂರು ದಿನಗಳ ಗಳಿಕೆಯಲ್ಲೇ ಅದು ದಾಖಲೆ ನಿರ್ಮಿಸಿತ್ತು. ರಿಲೀಸ್ ಆದ ವಾರದೊಳಗೆ ಹಿಂದಿಯೊಂದರಲ್ಲೇ ಅದು ನೂರು ಕೋಟಿ ಕ್ಲಬ್ ಸೇರಿ ಆಗಿದೆ. ಆದರೆ, ಅದೆಲ್ಲ ಸುಳ್ಳು ಪ್ರಚಾರ ಎಂದು ಕಮಲ್ ಟ್ವೀಟ್ ಮಾಡಿದ್ದಾರೆ. ಓದಿ: ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

    ಬಾಲಿವುಡ್ ನ ಸ್ವಯಂ ವಿಮರ್ಶಕ ಖ್ಯಾತಿಯ ಈ ಕಮಲ್ ಆರ್ ಖಾನ್ ಇಂತಹ ಅಚ್ಚರಿಯ ಹೇಳಿಕೆಯನ್ನು  ಕೊಡುವುದು ಇದೇ ಮೊದಲೇನೂ ಅಲ್ಲ. ಬಾಲಿವುಡ್ ನ ಬಹುತೇಕ ಸ್ಟಾರ್ ನಟ ನಟಿಯರನ್ನು ಕಾಲೆಳೆದು ಕಂಗೆಣ್ಣಿಗೆ ಗುರಿಯಾದವರು ಇವರು. ನಿರ್ದೇಶಕರನ್ನೂ, ನಿರ್ಮಾಪಕರನ್ನೂ ಬಿಡದೇ ತಮ್ಮದೇ ಆದ ರೀತಿಯಲ್ಲಿ ಕಟುವಾಗಿ ಟೀಕಿಸುತ್ತಲೇ ಇರುತ್ತಾರೆ ಕಮಲ್. ಇದೀಗ ಆರ್.ಆರ್.ಆರ್ ವಿಷಯದಲ್ಲೂ ಅದನ್ನೇ ಮಾಡಿದ್ದಾರೆ.

     

    ‘ನನ್ನ ಪ್ರಕಾರ ಆರ್.ಆರ್.ಆರ್ ಸಿನಿಮಾವನ್ನು ಜನರು ತಿರಸ್ಕರಿಸಿದ್ದಾರೆ. ಅಷ್ಟೊಂದು ಪ್ರಮಾಣದಲ್ಲಿ ಬಾಕ್ಸ್ ಆಫೀಸ್ ತುಂಬುವುದಕ್ಕೆ ಹೇಗೆ ಸಾಧ್ಯ? ನಿರ್ಮಾಪಕರು ಮತ್ತು ನಿರ್ದೇಶಕರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ, ಈ ಸಿನಿಮಾ 680 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಅದು ಕೂಡ ಸುಳ್ಳು. ಜನರಿಗೆ ಬಜೆಟ್ ಅರ್ಥವಾಗಲ್ಲ. ಆ ಪ್ರಮಾಣದಲ್ಲಿ ಈ ಚಿತ್ರಕ್ಕೆ ಹಣ ಹೂಡಿಲ್ಲ ಎಂದು ಮುಂದಿನ ದಿನಗಳಲ್ಲಿ ಸಾಬೀತು ಮಾಡುವುದಾಗಿ’ ನಮ್ಮ ಟ್ವಿಟರ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

    ಕಮಲ್ ಈ ರೀತಿ ಟ್ವಿಟ್ ಮಾಡುತ್ತಿದ್ದಂತೆಯೇ ರಾಜಮೌಳಿ, ರಾಮ್ ಚರಣ್ ತೇಜ, ಜೂನಿಯರ್ ಎನ್.ಟಿ.ಆರ್ ಮತ್ತು ಆಲಿಯಾ ಭಟ್ ಅಭಿಮಾನಿಗಳು ಒಟ್ಟಾಗಿ ಕಮಲ್ ಮೇಲೆ ಮುಗಿಬಿದ್ದಿದ್ದಾರೆ. ಕಮಲ್ ಕುರಿತಾಗಿ ನಿಂದಿಸಿದ್ದಾರೆ. ಕಮಲ್ ಯಾರು ಎನ್ನುವುದನ್ನೂ ಕೆಲವರು ಬಿಚ್ಚಿಟ್ಟಿದ್ದಾರೆ. ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಇಡುತ್ತಿರುವ ಆರ್.ಆರ್.ಆರ್ ತನ್ನದೇ ದಾಖಲೆ ಮುರಿದು ಮುನ್ನುಗ್ಗುತ್ತಿದೆ. ಅತೀ ಶೀಘ್ರದಲ್ಲೇ ಅದು ಮೈಲುಗಲ್ಲು ಸ್ಥಾಪಿಸಲಿದೆ ಎಂದಿದ್ದಾರೆ ಅಭಿಮಾನಿಗಳು.

  • ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವಿಟ್ ವಾಪಸ್ಸು ಅವರ ಬುಡಕ್ಕೆ ಬಂದಿದೆ. ನಿರ್ದೇಶಕ ರಾಜಮೌಳಿ ಅವರನ್ನು ಕಾಲೆಳೆಯಲು ಹೋಗಿ, ಅಭಿಮಾನಿಗಳಿಂದ ತಾವೇ ಕಾಲೆಳಿಸಿಕೊಂಡಿದ್ದಾರೆ ವರ್ಮಾ. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಮೂವರು ಇರುವ ಫೋಟೋವೊಂದನ್ನು ಹಾಕಿ, ‘ರಾಜಮೌಳಿ ಸರ್, ನಿಮ್ಮೊಂದಿಗೆ ಇಬ್ಬರು ಡೇಂಜರ್ಸ ಗಂಡಸರಿದ್ದರೆ, ನನ್ನ ಹತ್ತಿರ ಡೇಂಜರ್ಸ್ ಹುಡುಗಿಯರು ಇದ್ದಾರೆ’ ಎಂದು ಬರೆದು ಟ್ವಿಟ್ ಮಾಡಿದ್ದಾರೆ. ಆ ಹುಡುಗಿಯರು ಯಾರು ಎನ್ನುವುದನ್ನೂ ಬಹಿರಂಗ ಪಡಿಸಿದ್ದಾರೆ.  ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

    ಸದ್ಯ ರಾಮ್ ಗೋಪಾಲ್ ವರ್ಮಾ ‘ಖತ್ರಾ ಡೇಂಜರಸ್’ ಎನ್ನುವ ಸಿನಿಮಾ ಮಾಡಿದ್ದಾರೆ. ಅದು ಭಾರತೀಯ ಸಿನಿಮಾ ರಂಗದಲ್ಲಿ ಬರುತ್ತಿರುವ ಮೊದಲ ಲೆಸ್ಬಿಯನ್ ಚಿತ್ರ. ನೈನಾ ಮತ್ತು ಅಪ್ಸರಾ ಲೆಸ್ಬಿಯನ್ ಗಳಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇವರನ್ನೇ ವರ್ಮಾ ಡೇಂಜರಸ್ ಹುಡುಗಿಯರು ಎಂದು ಹೇಳಿಕೊಂಡಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕಾಗಿ ವರ್ಮಾ ಬೆಂಗಳೂರಿಗೆ ಕೂಡ ಬಂದಿದ್ದರು.

    ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ ಕುರಿತಾಗಿ ಸಾಕಷ್ಟು ಪೋಸ್ಟ್ ಮಾಡಿದ್ದಾರೆ ವರ್ಮಾ. ಅದಕ್ಕೂ ಮುನ್ನ ಈ ಕಲಾವಿದೆಯರ ಜತೆ ಪಬ್, ಹೊಟೇಲ್ ಅಂತ ಸುತ್ತಾಡಿ ಸುದ್ದಿ ಆಗಿದ್ದರು. ಅಲ್ಲದೇ, ಈ ಹುಡುಗಿಯರ ಹಾಟ್ ಹಾಟ್ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಪಡ್ಡೆಗಳ ನಿದ್ದೆ ಗೆಡಿಸಿದ್ದರು.

    ರಾಮ್ ಗೋಪಾಲ್ ವರ್ಮಾ ಅವರ ಟ್ವಿಟ್ ಅನ್ನು ರಾಜಮೌಳಿ, ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೇ ತಮ್ಮ ಹುಡುಗಿಯರಿಗೂ ಟ್ಯಾಗ್ ಮಾಡಿದ್ದಾರೆ. ಯಾರೂ, ಅಷ್ಟಾಗಿ ವರ್ಮಾ ಅವರ ಟ್ವಿಟ್ ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ರಾಜಮೌಳಿ ಮತ್ತು ಇತರ ಕಲಾವಿದರ ಅಭಿಮಾನಿಗಳು ಮಾತ್ರ ವರ್ಮಾ ಮೇಲೆ ರೊಚ್ಚಿಗೆದ್ದಿದ್ದಾರೆ. ‘ನೀನು 100 ರೂಪಾಯಿ ಟಿಕೆಟ್ ನ ಸಿನಿಮಾ ಮಾಡುವವನು. ದೊಡ್ಡವರಿಗೆ ಹೋಲಿಸಿಕೊಳ್ಳಬೇಡ’ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

  • ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ಶ್ ನಟನೆಯ ‘ಕೆಜಿಎಫ್ 2’ ರಿಲೀಸ್ ಗೆ ಭರದಿಂದ ಸಿದ್ಧತೆ ನಡೆದಿದೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಆಯಾ ಭಾಷೆಯ ಅಭಿಮಾನಿಗಳು ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅಂದೇ ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಚಿತ್ರ ಕೂಡ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

    ಥಿಯೇಟರ್ ನಲ್ಲಿ ಜೇಮ್ಸ್ ಸಿನಿಮಾ ಇನ್ನೂ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ. ಆರ್.ಆರ್.ಆರ್ ಸಿನಿಮಾದ ಅಬ್ಬರದ ನಡುವೆಯೂ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜೇಮ್ಸ್ ಇದೆ. ಬಿಡುಗಡೆಯಾಗಿ ಒಂದು ತಿಂಗಳ ಮುಂಚೆಯೇ ಓಟಿಟಿಯಲ್ಲಿ ಚಿತ್ರ ರಿಲೀಸ್ ಆಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ಚೆನ್ನಮ್ಮ, ರಾಯಣ್ಣನೂ ಅಲ್ಲ: ನಟ ಚೇತನ್

    ಒಂದು ಕಡೆ ಯಶ್ ನಟನೆಯ ಕೆಜಿಎಫ್ 2 ಸಾವಿರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಆರ್.ಆರ್.ಆರ್ ಸಿನಿಮಾ ಕೂಡ ಬಿಡುಗಡೆ ಆಗಿದೆ. ಅಲ್ಲದೇ, ತಮಿಳಿನ ವಿಜತ್ ಅವರ ಚಿತ್ರ ಕೂಡ ಬಿಡುಗಡೆ ಆಗುತ್ತಿದೆ. ಸಹಜವಾಗಿಯೇ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗಲಿದೆ.

     

    ಜೇಮ್ಸ್ ಸಿನಿಮಾ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿರುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಓಟಿಟಿಯಲ್ಲಿ ಏಪ್ರಿಲ್ 14ಕ್ಕೆ ಸ್ಟ್ರೀಮಿಂಗ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ತಂದೆ, ತಾತನ ಹೆಸರು ಬಳಸಿಕೊಳ್ಳದೆ ಜಿಪಂ ಸ್ಥಾನ ಗೆಲ್ಲಲಿ: ನಿಖಿಲ್‍ಗೆ ಸುಮಲತಾ ಸವಾಲು

    ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲೆಯಾಳಂ ಈ ನಾಲ್ಕೂ ಭಾಷೆಗಳಲ್ಲೂ ಜೇಮ್ಸ್ ರಿಲೀಸ್ ಆಗುತ್ತಿದೆ. ಈ ಕಾರಣದಿಂದಾಗಿ ಸ್ಯಾಂಡಲ್ ವುಡ್ ಪಾಲಿಗೆ ಡಬಲ್ ಸಂಭ್ರಮ ತಂದಿದೆ. ಒಂದು ಕಡೆ ಯಶ್ ನಟನೆಯ ಸಿನಿಮಾ ಮತ್ತೊಂದು ಕಡೆ ಪುನೀತ್ ಅವರ ಜೇಮ್ಸ್. ಎರಡೂ ಸಿನಿಮಾಗಳನ್ನೂ ನೋಡಿ ಆನಂದಿಸಬಹುದಾಗಿದೆ.