Tag: ಆರ್ ಆರ್ ಆರ್

  • ಪ್ರತಿಷ್ಠಿತ ಮೂರು ಪ್ರಶಸ್ತಿ ಬಾಚಿಕೊಂಡ ‘ಆರ್.ಆರ್.ಆರ್’ ಸಿನಿಮಾ

    ಪ್ರತಿಷ್ಠಿತ ಮೂರು ಪ್ರಶಸ್ತಿ ಬಾಚಿಕೊಂಡ ‘ಆರ್.ಆರ್.ಆರ್’ ಸಿನಿಮಾ

    ರಾಜ ಮೌಳಿ (Rajamouli ) ನಿರ್ದೇಶನದ, ಈ ವರ್ಷ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ ‘ಆರ್.ಆರ್.ಆರ್’ (RRR) ಸಿನಿಮಾಗೆ ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆನ್ಯುವಲ್ ಅವಾರ್ಡ್’ನಲ್ಲಿ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮೊನ್ನೆಯಷ್ಟೇ ಈ ಸಿನಿಮಾ ನಾಮನಿರ್ದೇಶನಕ್ಕೆ ಆಯ್ಕೆಯಾಗಿದ್ದನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದೀಗ ಮೂರು ಪ್ರಶಸ್ತಿಗಳನ್ನು ಅದು ಪಡೆದುಕೊಂಡಿದೆ. ಈ ವಿಷಯವನ್ನು ಸ್ವತಃ ಚಿತ್ರತಂಡವೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.

    ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆನ್ಯುವಲ್ ಅವಾರ್ಡ್ ಸಂಸ್ಥೆಯು ಆರ್.ಆರ್.ಆರ್ ಸಿನಿಮಾಗೆ ಅತ್ಯುತ್ತಮ ವಿದೇಶಿ ಸಿನಿಮಾ, ಅತ್ಯುತ್ತಮ ಸಂಗೀತ ಸಂಯೋಜನೆ ಮತ್ತು ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಗಳನ್ನು ನೀಡಿರುವ ಸಂಸ್ಥೆಗೆ ರಾಜಮೌಳಿ ಅಂಡ್ ಟೀಮ್ ಧನ್ಯವಾದಗಳನ್ನು ಅರ್ಪಿಸಿದೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

    ಆರ್.ಆರ್.ಆರ್ ಸಿನಿಮಾ ಐದು ವಿಭಾಗಗಳಲ್ಲಿ ನಾಮಿನೇಷನ್ ಪಟ್ಟಿಯಲ್ಲಿತ್ತು. ಅದರಲ್ಲಿ ಮೂರು ಪ್ರಶಸ್ತಿಗಳನ್ನು ಅದು ಬಾಚಿದೆ. ಅಲ್ಲದೇ ಈ ಬಾರಿಯ ಆಸ್ಕರ್ ಪ್ರಶಸ್ತಿಗೂ ಆರ್.ಆರ್.ಆರ್ ಸಿನಿಮಾ ಸ್ಪರ್ಧೆಯಲ್ಲಿದೆ. ಇನ್ನೂ ಅನೇಕ ಪ್ರಶಸ್ತಿಗಳಲ್ಲಿ ಚಿತ್ರ ಸ್ಪರ್ಧೆ ಮಾಡುತ್ತಿದೆ. ಅದರಲ್ಲೂ ಆಸ್ಕರ್ ಮೇಲೆ ಕಣ್ಣಿಟ್ಟು ಚಿತ್ರತಂಡ ಕೂತಿರುವುದರಿಂದ ಆ ಪ್ರಶಸ್ತಿ ಸಿಗುತ್ತಾ ಎನ್ನುವ ಕುತೂಹಲ ಕೂಡ ಮೂಡಿದೆ.

    ಆರ್.ಆರ್.ಆರ್ ಸಿನಿಮಾ ಭಾರತೀಯ ಚಿತ್ರರಂಗವನ್ನೇ ಬೆರಗಿನಿಂದ ನೋಡುವಂತೆ ಮಾಡಿತ್ತು. ಸಾವಿರಾರು ಕೋಟಿ ರೂಪಾಯಿಗಳನ್ನು ಬಾಚಿತ್ತು. 2022ರಲ್ಲಿ ತೆರೆಗೆ ಕಂಡ ಸಿನಿಮಾಗಳ ಪೈಕಿ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಈ ಹೊತ್ತಿನಲ್ಲಿ ಪ್ರಶಸ್ತಿಗಳು ಬರುತ್ತಿರುವುದು ಸಹಜವಾಗಿಯೇ ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ಸಂಭ್ರಮ ಹೆಚ್ಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆರ್.ಆರ್.ಆರ್ ಸಿನಿಮಾ

    ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆರ್.ಆರ್.ಆರ್ ಸಿನಿಮಾ

    ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಾಗಿ ಎರಡು ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಇಂಗ್ಲಿಷ್ ಹೊರತಾದ ಸಿನಿಮಾಗಳಿಗೆ ನೀಡುವ ವಿಭಾಗದಲ್ಲಿ ಈ ಸಿನಿಮಾ ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ಗೀತೆ ವಿಭಾಗದಲ್ಲಿ ಸಿನಿಮಾ ನಾಮಿನೇಟ್ ಆಗಿದೆ. ಇಂಗ್ಲಿಷ್ ಹೊರತಾದ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಹಾಗೂ ಹಾಡಿನ ವಿಭಾಗದಲ್ಲಿ ಈ ಸಿನಿಮಾದ ನಾಟು ನಾಟು ಚಿತ್ರ ಪ್ರಬಲ ಸ್ಪರ್ಧೆಯನ್ನು ನೀಡಲಿದೆ. ಹೀಗಾಗಿ ಸಹಜವಾಗಿಯೇ ರಾಜಮೌಳಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ.

    RRR NEW SONG ONE

    ತೆಲುಗಿನ ಸಿನಿಮಾವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡುವ ಮೂಲಕ ಸಾವಿರಾರು ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಅಲ್ಲದೇ, ಆಸ್ಕರ್ ಪ್ರಶಸ್ತಿಗಾಗಿ ಅದು ಭಾರತದಿಂದ ನಾಮನಿರ್ದೇಶನಗೊಂಡಿರಲಿಲ್ಲ ಎಂದು ಅಭಿಮಾನಿಗಳು ನಿರಾಸೆಯಾಗಿದ್ದರು. ಆಸ್ಕರ್ ಪ್ರಶಸ್ತಿಗಾಗಿ ಚಿತ್ರತಂಡ ನೇರವಾಗಿ ಸ್ಪರ್ಧಿಸುವ ಮೂಲಕ ಇನ್ನೂ ರೇಸ್ ನಲ್ಲಿ ಇದೆ. ಅದಕ್ಕೂ ಮುನ್ನ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಾಗಿ ನಾಮಿನೇಟ್ ಆಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ಪರಿಚಯಿಸಿದ `ಯುವರತ್ನ’ ನಟಿ

    ಈ ವಿಷಯವನ್ನು ಸ್ವತಃ ರಾಜಮೌಳಿ ಅವರೇ ಟ್ವಿಟ್ ಮಾಡುವ ಮೂಲಕ ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದ್ದಾರೆ. ತಮ್ಮ ತಂಡಕ್ಕೂ ಶುಭಾಶಯ ಕೋರಿದ್ದಾರೆ. ಹಾಗಂತ ಸ್ಪರ್ಧೆಯು ಸಾಧಾರಣವಾಗಿಲ್ಲ, ದಕ್ಷಿಣ ಕೊರಿಯಾ, ಅರ್ಜೆಂಟೀನಾ, ಜರ್ಮನಿ, ಬೆಲ್ಜಿಯಂ ಸಿನಿಮಾಗಳ ಜೊತೆ ಅದು ಪೈಪೋಟಿ ಮಾಡಬೇಕಿದೆ. ಇವೆಲ್ಲವೂ ಹೆಸರಾಂತ ಸಿನಿಮಾಗಳೇ ಆಗಿವೆ ಎನ್ನುವುದು ವಿಶೇಷ. 11 ಜನವರಿ 2023ರಂದು ಈ ಪ್ರಶಸ್ತಿಯನ್ನು ಲಾಸ್ ಎಂಜಲೀಸ್ ನಲ್ಲಿ ಪ್ರದಾನ ಮಾಡಲಾಗುತ್ತದೆ.

    ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ ನ ಆರ್.ಆರ್.ಆರ್ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಅಷ್ಟೂ ಕಡೆ ಉತ್ತಮ ಪ್ರದರ್ಶನವನ್ನೇ ಕಂಡಿತ್ತು. ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ಮಿಂಚಿದ್ದರೆ, ಕೊಮರಮ್ ಭೀಮ ಪಾತ್ರಕ್ಕೆ ಜ್ಯೂನಿಯರ್ ಜೀವ ತುಂಬಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಬ್ಬರ ಕಥೆಯನ್ನು ಒಳಗೊಂಡಿದ್ದ ಸಿನಿಮಾ ಇದಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಆಸ್ಕರ್ ಸ್ಪರ್ಧೆಗೆ ಆಯ್ಕೆಯಾದ ಗುಜರಾತಿ ಸಿನಿಮಾ ಭಾರತದ್ದಲ್ಲ: ವಿವಾದದಲ್ಲಿ ‘ಚೆಲ್ಲೋ ಶೋ’ ಸಿನಿಮಾ

    ಆಸ್ಕರ್ ಸ್ಪರ್ಧೆಗೆ ಆಯ್ಕೆಯಾದ ಗುಜರಾತಿ ಸಿನಿಮಾ ಭಾರತದ್ದಲ್ಲ: ವಿವಾದದಲ್ಲಿ ‘ಚೆಲ್ಲೋ ಶೋ’ ಸಿನಿಮಾ

    ಭಾರತದಿಂದ ಅಧಿಕೃತವಾಗಿ ಆಸ್ಕರ್ (Oscar) ಸ್ಪರ್ಧೆಗೆ ಕಳುಹಿಸಿರುವ ಚೆಲ್ಲೋ ಶೋ (Chello Show) ಸಿನಿಮಾ ಬಗ್ಗೆ ಆಕ್ಷೇಪವೊಂದು (Controversy) ಮೂಡಿದೆ. ಈ ಸಿನಿಮಾ ಭಾರತದ್ದೇ ಅಲ್ಲ, ಹೇಗೆ ಭಾರತದಿಂದ ಈ ಸಿನಿಮಾ ಸ್ಪರ್ಧೆ ಮಾಡುತ್ತದೆ ಎಂದು ಫೆಡರೇಶನ್ ಆಫ್ ವೆಸ್ಟರ್ನ್ ಸಿನಿಮಾ ಎಂಪ್ಲಾಯ್ಸ್ ಸಂಘವು ಆಕ್ಷೇಪಿಸಿದೆ. ಈ ಆಯ್ಕೆಯನ್ನು ಕೂಡಲೇ ತಡೆಹಿಡಿದು, ಬೇರೆ ಸಿನಿಮಾವನ್ನು ಆಯ್ಕೆ ಮಾಡುವಂತೆ ಸಂಘದ ಅಧ್ಯಕ್ಷ ಬಿ.ಎನ್. ತಿವಾರಿ (B.N. Tiwari)ಹೇಳಿದ್ದಾರೆ. ಈ ಕುರಿತು ಅವರು ಸಂಬಂಧಪಟ್ಟ ಮಂತ್ರಿಗಳಿಗೂ ಪತ್ರ ಬರೆಯುವುದಾಗಿ ಹೇಳಿದ್ದಾರೆ.

    ಚೆಲ್ಲೋ ಶೋ ಸಿನಿಮಾವನ್ನು ಭಾರತದ ಸಿನಿಮಾ (Cinema) ಎಂದು ಹೇಗೆ ಪರಿಗಣಿಸಿದರೋ ಗೊತ್ತಿಲ್ಲ. ಅದು ಭಾರತೀಯ ಸಿನಿಮಾವಲ್ಲ. ದಿ ಕಾಶ್ಮೀರ್ ಫೈಲ್ಸ್ (The Kashmir Files), ಆರ್.ಆರ್.ಆರ್ (RRR) ಸೇರಿದಂತೆ ಸಾಕಷ್ಟು ಸಿನಿಮಾಗಳು ರೇಸ್ ನಲ್ಲಿ ಇದ್ದವು. ಆದರೆ, ಚೆಲ್ಲೋ ಶೋ ಸಿನಿಮಾವನ್ನು ಯಾವ ಮಾನದಂಡದಿಂದ ಆಯ್ಕೆ ಮಾಡಲಾಗಿದೆ ಎನ್ನುವುದು ಗೊತ್ತಿಲ್ಲ. ಕೂಡಲೇ ಆಯ್ಕೆ ಸಮಿತಿ ಈ ಕುರಿತು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ ತಿವಾರಿ. ಅಪ್ಪಟ ಭಾರತೀಯ ಸಿನಿಮಾಗಳನ್ನು ಆಯ್ಕೆ ಮಾಡದೇ ಇರುವುದಕ್ಕೆ ದಿಗ್ಭ್ರಮೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ

    ಆಯ್ಕೆಯ ಸಮಿತಿಯ ಬಗ್ಗೆಯೂ ಆಕ್ಷೇಪ ವ್ಯಕ್ತ ಪಡಿಸಿರುವ ತಿವಾರಿ, ಪ್ರತಿ ವರ್ಷವೂ ಜ್ಯೂರಿ ಕಮಿಟಿಯಲ್ಲಿ ಇದ್ದವರೇ ಇರುತ್ತಾರೆ. ಅವರು ಸಿನಿಮಾವನ್ನು ನೋಡದೇ ಸುಮ್ಮನೆ ವೋಟು ಮಾಡುತ್ತಾರೆ. ಹೀಗಾಗಿ ಅಪ್ಪಟ ದೇಶಿಯ ಚಿತ್ರಗಳಿಗೆ ಮೋಸವಾಗಿದೆ. ಆಯ್ಕೆಯಾಗಿರುವ ಸಿನಿಮಾವನ್ನು ಕೂಡಲೇ ಹಿಂತೆಗೆದುಕೊಂಡು ಬೇರೆ ಸಿನಿಮಾವನ್ನು ಆಯ್ಕೆ ಮಾಡಬೇಕು ಎಂದು ಅವರು ಕೋರಿದ್ದಾರೆ. ಇಲ್ಲದಿದ್ದರೆ ಹೋರಾಟ ಮಾಡುವ ಎಚ್ಚರಿಕೆಯನ್ನೂ ಅವರು ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Breaking- ಆಸ್ಕರ್ ಅಂಗಳದಲ್ಲಿರುವ ಗುಜರಾತಿ ಚಿತ್ರಕ್ಕೆ ಕನ್ನಡದ ಹುಡುಗನೇ ಸಂಕಲನಕಾರ: ಪವನ್ ಭಟ್ ಎಂಬ ಎಡಿಟರ್

    Breaking- ಆಸ್ಕರ್ ಅಂಗಳದಲ್ಲಿರುವ ಗುಜರಾತಿ ಚಿತ್ರಕ್ಕೆ ಕನ್ನಡದ ಹುಡುಗನೇ ಸಂಕಲನಕಾರ: ಪವನ್ ಭಟ್ ಎಂಬ ಎಡಿಟರ್

    ಗುಜರಾತಿ ಭಾಷೆಯಲ್ಲಿ ಮೂಡಿ ಬಂದಿರುವ ‘ಚೆಲ್ಲೋ ಶೋ’ ಸಿನಿಮಾ 2023ರ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಅಧಿಕೃತವಾಗಿ ಸ್ಪರ್ಧಿಸುತ್ತಿದೆ.  ಈಗಾಗಲೇ ಮೂವತ್ತು ಹೆಚ್ಚು ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಭಾರತದಲ್ಲಿ ಇನ್ನೂ ಬಿಡುಗಡೆ ಆಗಬೇಕಿದೆ. ಅದಕ್ಕೂ ಮೊದಲು ಆಸ್ಕರ್ ಪ್ರಶಸ್ತಿಯ ರೇಸ್ ನಲ್ಲಿ ಈ ಚಿತ್ರ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಪಾನ್ ನಲಿನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ, ಚಿತ್ರರಂಗದ ಬೆಳವಣಿಗೆ ಕುರಿತಾದ ಕಥಾ ಹಂದರವನ್ನೂ ಹೊಂದಿದೆ. ಈ ಚಿತ್ರಕ್ಕೆ ಕನ್ನಡದ ಪವನ್ ಭಟ್ ಎನ್ನುವವರು ಸಂಕಲನದ ಕೆಲಸ ಮಾಡಿದ್ದಾರೆ.

    ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಪವನ್ ಭಟ್ ಮೂಲತಃ ಉಪ್ಪಿನಂಗಡಿಯ ಹುಡುಗ. ಓದಿದ್ದು ಇಂಜಿನಿಯರಿಂಗ್. ಆದರೆ, ಆಸಕ್ತಿ ಬೆಳೆದದ್ದು ಸಿನಿಮಾ ಎಡಿಟಿಂಗ್ ನತ್ತ. ಹಾಗಾಗಿ ಮೊದಲು ಎಂಟು ವರ್ಷಗಳ ಕಾಲ ಮುಂಬೈನಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಎಡಿಟಿಂಗ್ ಮಾಡಿದ ಹೆಗ್ಗಳಿಕೆ ಇವರದ್ದು. ಸೀನಿಯರ್ ಎಡಿಟರ್ ಜೊತೆ ಸೇರಿಕೊಂಡು ಚೆಲ್ಲೋ ಶೋ ಸಿನಿಮಾಗಾಗಿ ಭಟ್ ಕೆಲಸ ಮಾಡಿದ್ದಾರೆ. ಈಗ ಅವರು ಸಂಕಲಿಸಿದ ಸಿನಿಮಾಗೆ ಆಸ್ಕರ್ ಗೆ ಹೋಗುವಂತಹ ಅವಕಾಶ ಸಿಕ್ಕಿದೆ. ಇದನ್ನೂ ಓದಿ:‘ಸೈಮಾ ಅವಾರ್ಡ್’ ಐಷಾರಾಮಿ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳ ತಡರಾತ್ರಿ ಪಾರ್ಟಿ : FIR ದಾಖಲು

    ತಮ್ಮ ಸಿನಿಮಾ ಆಯ್ಕೆಗೆ ನಿರ್ದೇಶಕರು ಕೃತಜ್ಞತೆ ತಿಳಿಸಿದ್ದಾರೆ. ಒಂಬತ್ತು ವರ್ಷದ ಹುಡುಗನೊಬ್ಬ ಡಿಜಿಟಲ್ ಕ್ರಾಂತಿಯ ಮಾಂತ್ರಿಕತೆ ಬೆನ್ನು ಬೀಳುವಂತಹ ಕಥೆಯು ಸಿನಿಮಾದಲ್ಲಿ ಇದೆಯಂತೆ. ನಿರ್ದೇಶಕರ ಜೀವನದಲ್ಲಿ ನಡೆದ ಹಲವು ಘಟನೆಗಳನ್ನೂ ಸಿನಿಮಾದಲ್ಲಿ ಬಳಸಿದ್ದಾರಂತೆ. ಈ ಸಿನಿಮಾ ಈಗಾಗಲೇ ವಿವಿಧ ದೇಶಗಳಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ಹತ್ತಾರು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ಆಸ್ಕರ್‌ಗೆ ಹೋಗಲಿಲ್ಲ ‘ದಿ ಕಾಶ್ಮೀರ್ ಫೈಲ್ಸ್’, ‘ಆರ್‌ಆರ್‌ಆರ್‌’: ಆಸ್ಕರ್ ರೇಸ್‌ನಲ್ಲಿ ಗುಜರಾತಿ ಫಿಲ್ಮ್

    ಕೊನೆಗೂ ಆಸ್ಕರ್‌ಗೆ ಹೋಗಲಿಲ್ಲ ‘ದಿ ಕಾಶ್ಮೀರ್ ಫೈಲ್ಸ್’, ‘ಆರ್‌ಆರ್‌ಆರ್‌’: ಆಸ್ಕರ್ ರೇಸ್‌ನಲ್ಲಿ ಗುಜರಾತಿ ಫಿಲ್ಮ್

    ಕೆಲ ದಿನಗಳಿಂದ ಆಸ್ಕರ್ (Oscar) ಪ್ರಶಸ್ತಿ ಕುರಿತಾಗಿಯೇ ಭಾರತೀಯ ಸಿನಿಮಾ ರಂಗದಲ್ಲಿ ಚರ್ಚೆ ಶುರುವಾಗಿತ್ತು. 2023ನೇ ಸಾಲಿನ ಆಸ್ಕರ್‌ಗೆ ಭಾರತದ ಅಧಿಕೃತ ಸಿನಿಮಾವಾಗಿ ಯಾವುದನ್ನು ಕಳುಹಿಸಬೇಕು ಎನ್ನುವ ಮಾತುಕತೆ ಕೂಡ ನಡೆದಿತ್ತು. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ (RRR) ಮತ್ತು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಕಳುಹಿಸುವಂತೆ ಒತ್ತಡ ಹೇರಲಾಗಿತ್ತು.

    ಆರ್.ಆರ್.ಆರ್ ಅಥವಾ ದಿ ಕಾಶ್ಮೀರ್ ಫೈಲ್ಸ್ (The Kashmir Files) ಈ ಎರಡು ಸಿನಿಮಾಗಳಲ್ಲಿ ಒಂದು ಚಿತ್ರ ಭಾರತದಿಂದ ಆಸ್ಕರ್‌ಗೆ ಸ್ಪರ್ಧಿಸಲಿದೆ ಎಂದೇ ನಂಬಲಾಗಿತ್ತು. ಹಾಗಾಗಿ ಈ ಎರಡೂ ಸಿನಿಮಾಗಳ ಅಭಿಮಾನಿಗಳು ಯಾವ ಚಿತ್ರ ಸೆಲೆಕ್ಟ್ ಆಗಬಹುದು ಎನ್ನುವ ಕುತೂಹಲದೊಂದಿಗೆ ದಿನಗಳನ್ನು ದೂಡುತ್ತಿದ್ದಾರೆ. ಆದರೆ, ಈ ಎರಡೂ ಸಿನಿಮಾಗಳ ಬದಲಾಗಿ ಗುಜರಾತಿನ ‘ಚೆಲ್ಲೋ ಶೋ’ (Chello Show) ಸಿನಿಮಾವನ್ನು ಭಾರತದ ಅಧಿಕೃತ ಪ್ರವೇಶದ ಸಿನಿಮಾ ಎಂದು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಘೋಷಣೆ ಮಾಡಿದೆ. ಇದನ್ನೂ ಓದಿ:‘ಸೈಮಾ ಅವಾರ್ಡ್’ ಐಷಾರಾಮಿ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳ ತಡರಾತ್ರಿ ಪಾರ್ಟಿ : FIR ದಾಖಲು

    ದಕ್ಷಿಣದವರು ಆರ್.ಆರ್.ಆರ್ ಸಿನಿಮಾ ಕಳುಹಿಸಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದರೆ, ಹಿಂದಿಯವರ ಆಸಕ್ತಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಮೇಲಿತ್ತು. ಆದರೆ, ಅಲ್ಲಿ ಆಯ್ಕೆಯಾಗಿದ್ದೇ ಬೇರೆ ಸಿನಿಮಾ. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆಯು ಪಾನ್ ನಳಿನ್ (Paan Nalin) ನಿರ್ದೇಶನದ ‘ಚೆಲ್ಲೋ ಶೋ; ಸಿನಿಮಾವನ್ನು ಆಯ್ಕೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಭಾವಿನ್ ರಾಬರಿ, ದಿಚಾ ಮೀನಾ, ಪರೇಶ್ ಮೆಹ್ತಾ ಸೇರಿದಂತೆ ಹಲವರು ನಟಿಸಿದ್ದಾರೆ.

    ತಮ್ಮ ಸಿನಿಮಾ ಆಯ್ಕೆಗೆ ನಿರ್ದೇಶಕರು ಕೃತಜ್ಞತೆ ತಿಳಿಸಿದ್ದಾರೆ. ಒಂಭತ್ತು ವರ್ಷದ ಹುಡುಗನೊಬ್ಬ ಡಿಜಿಟಲ್ ಕ್ರಾಂತಿಯ ಮಾಂತ್ರಿಕತೆ ಬೆನ್ನು ಬೀಳುವಂತಹ ಕಥೆಯು ಸಿನಿಮಾದಲ್ಲಿ ಇದೆಯಂತೆ. ನಿರ್ದೇಶಕರ ಜೀವನದಲ್ಲಿ ನಡೆದ ಹಲವು ಘಟನೆಗಳನ್ನೂ ಸಿನಿಮಾದಲ್ಲಿ ಬಳಸಿದ್ದಾರಂತೆ. ಈ ಸಿನಿಮಾ ಈಗಾಗಲೇ ವಿವಿಧ ದೇಶಗಳಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ಹತ್ತಾರು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಸಮಂತಾ ನೋ ಅಂದಿದ್ಯಾಕೆ?

    ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಸಮಂತಾ ನೋ ಅಂದಿದ್ಯಾಕೆ?

    `ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್‌ಗೆ ಮತ್ತಷ್ಟು ಡಿಮ್ಯಾಂಡ್ ಜಾಸ್ತಿ ಆಗಿದೆ. ಸದ್ಯ ಡೈರೆಕ್ಟರ್ ಕೊರಟಾಲ ಶಿವ ನಿರ್ದೇಶನದ ಚಿತ್ರಕ್ಕೆ ಜ್ಯೂ.ಎನ್‌ಟಿಆರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನೂ ಟಿಟೌನ್ ಅಡ್ಡಾದಲ್ಲಿ ಹೊಸ ವಿಚಾರವೊಂದು ಸೌಂಡ್ ಮಾಡುತ್ತಿದೆ. ಜ್ಯೂ.ಎನ್‌ಟಿಆರ್ ಈ ಹೊಸ ಸಿನಿಮಾಗೆ ಸಮಂತಾ ನೋ ಅಂದಿದ್ದಾರೆ.

    ಟಾಲಿವುಡ್ ಸ್ಟಾರ್ ನಟ ಜ್ಯೂ.ಎನ್‌ಟಿಆರ್ `ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ನಂತರ ಚಿತ್ರದ ಸೆಲೆಕ್ಷನ್‌ನಲ್ಲಿ ಮತ್ತಷ್ಟು ಚ್ಯೂಸಿಯಾಗಿದ್ದಾರೆ. ಸದ್ಯ ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರಕ್ಕೆ ಜ್ಯೂ.ಎನ್‌ಟಿಆರ್ ಓಕೆ ಅಂದಿದ್ದಾರೆ. ಭಿನ್ನ ಕಥೆಯ ಮೂಲಕ ಮತ್ತೆ ತಾರಕ್ ಎಂಟ್ರಿ ಕೊಡಲಿದ್ದಾರೆ.

    ಜ್ಯೂ.ಎನ್‌ಟಿಆರ್ ನಟನೆಯ ಹೊಸ ಚಿತ್ರಕ್ಕೆ ನಾಯಕಿ ನಟಿಸಲು ಸಮಂತಾಗೆ ಆಫರ್ ನೀಡಲಾಗಿತ್ತು. ಪುಷ್ಪ ಚಿತ್ರದ ಸಕ್ಸಸ್ ನಂತರ ಸಮಂತಾ ಮೇಲಿನ ಕ್ರೇಜ್ ಮತ್ತಷ್ಟು ಜಾಸ್ತಿಯಾಗಿದೆ. ಹಾಗಾಗಿ ಸಮಂತಾ ಅವರೇ ಸೂಕ್ತ ಎಂದೆನಿಸಿ ಚಿತ್ರತಂಡ ನಟಿಸಲು ಕೇಳಿಕೊಂಡಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಹೀರೋಯಿನ್‌ಗೆ 2.5 ಕೋಟಿ ಆಫರ್ ಮಾಡಿದ್ದರಂತೆ. ಆದರೆ ಸಮಂತಾ 4 ಕೋಟಿ ರೂಪಾಯಿ ಸಮಂತಾ ಬೇಡಿಕೆ ಇಟ್ಟಿದ್ದಾರೆ. ಸಂಭಾವನೆ ವಿಚಾರ ಸರಿ ಹೋಗದ ಕಾರಣ ಸ್ಯಾಮ್ ಈ ಚಿತ್ರಕ್ಕೆ ನೋ ಅಂದಿದ್ದಾರೆ. ಇದನ್ನೂ ಓದಿ:ಹಾಲಿವುಡ್‌ಗೆ ಹಾರಿದ ಸ್ಟಾರ್ ನಟ ಅಲ್ಲು ಅರ್ಜುನ್

    ಈ ಹಿಂದೆ ಜ್ಯೂ.ಎನ್‌ಟಿಆರ್ ಮತ್ತು ಸಮಂತಾ ಕಾಂಬಿನೇಷನ್‌ನಲ್ಲಿ `ಜನತಾ ಗ್ಯಾರೇಜ್’ ಚಿತ್ರ ಅಭಿಮಾನಿಗಳ ಮನಗೆದ್ದಿತ್ತು. ಆದರೆ ಮತ್ತೆ ಈ ಜೋಡಿಯನ್ನ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಫ್ಯಾನ್ಸ್ಗೆ ನಿರಾಸೆ ಆಗಿದೆ. ಆದಷ್ಟು ಬೇಗ ಈ ಜೋಡಿ ಮತ್ತೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿ ಎಂಬುದೇ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]

  • ದಿ ಕಾಶ್ಮೀರ್ ಫೈಲ್ಸ್ ಬದಲು ಆರ್.ಆರ್.ಆರ್ ಸಿನಿಮಾ ಆಸ್ಕರ್ ಗೆ ಕಳುಹಿಸಿ: ಮತ್ತೆ ತಿವಿದ ಅನುರಾಗ್ ಕಶ್ಯಪ್

    ದಿ ಕಾಶ್ಮೀರ್ ಫೈಲ್ಸ್ ಬದಲು ಆರ್.ಆರ್.ಆರ್ ಸಿನಿಮಾ ಆಸ್ಕರ್ ಗೆ ಕಳುಹಿಸಿ: ಮತ್ತೆ ತಿವಿದ ಅನುರಾಗ್ ಕಶ್ಯಪ್

    ಗತ್ತಿನ ಅತೀ ದೊಡ್ಡ ಸಿನಿಮಾ ಪ್ರಶಸ್ತಿ ಆಸ್ಕರ್ ಗೆ ಭಾರತದಿಂದ ಯಾವ ಸಿನಿಮಾವನ್ನು ಕಳುಹಿಸಬೇಕು ಎಂಬ ಚರ್ಚೆ ನಡೆದಿದೆ. ಈವರೆಗೂ ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿರುವ ಮತ್ತು ದೇಶದ ಗಮನ ಸೆಳೆದಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನೇ ಆಸ್ಕರ್ ರೇಸ್ ನಲ್ಲಿ ಬಿಡಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಆದರೆ, ನಿರ್ದೇಶಕ ಅನುರಾಗ್ ಕಶ್ಯಪ್ ಅದನ್ನು ವಿರೋಧಿಸಿದ್ದಾರೆ. ಆಸ್ಕರ್ ಗೆ ಹೋಗುವಂತಹ ಯಾವ ಅರ್ಹತೆನೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಇಲ್ಲ ಎಂದು ಹೇಳುವ ಮೂಲಕ ವಿವಾದ ಕಿಡಿ ಹೊತ್ತಿಸಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತು ಕೆನಡಾ ಸಿನಿಮಾ ನಿರ್ದೇಶಕ ಡಿಲನ್ ಮೋಹನ್ ಗ್ರೇ ಕೂಡ ಪ್ರತಿಕ್ರಿಯಿಸಿದ್ದು, ಈ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸಿದರೆ ಭಾರತದ ಗೌರವ ಹೊರಟು ಹೋಗುತ್ತದೆ ಎಂದು ಹೇಳಿದ್ದರು. ಈ ಪ್ರತಿಕ್ರಿಯೆಯನ್ನು ಕೊಡುವುದಕ್ಕೆ ಕಾರಣ ಇದೇ ಅನುರಾಗ್ ಕಶ್ಯಪ್ ಅವರ ಟ್ವಿಟ್ ಎನ್ನುವುದು ವಿಶೇಷ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಮ್ಮ ಭಾರತವನ್ನು ಪ್ರತಿನಿಧಿಸಿ, ಆಸ್ಕರ್ ಗೆ ಹೋಗಬಾರದು ಎಂದು ಕಶ್ಯಪ್ ಹೇಳಿದ್ದಾರೆ. ಅದರ ಬದಲಿಗೆ ಆರ್.ಆರ್.ಆರ್ ಸಿನಿಮಾ ಕಳುಹಿಸಿ ಎಂದಿದ್ದಾರೆ. ಇದನ್ನೂ ಓದಿ: ದುಬಾರಿ ಮೊತ್ತದ ಕಾರು ಖರೀದಿಸಿದ `ಬಿಗ್ ಬಾಸ್’ ಖ್ಯಾತಿಯ ಅನುಪಮಾ ಗೌಡ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತು ಮೊದಲಿನಿಂದಲೂ ಕೆಲವರು ಆಕ್ಷೇಪ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಆದರೂ, ಸಿನಿಮಾ ಗೆದ್ದಿದೆ. ಬಾಕ್ಸ್ ಆಫೀಸಿನಲ್ಲಿ 200 ಕೋಟಿಗೂ ಅಧಿಕ ಹಣ ಮಾಡಿದೆ. ಅಲ್ಲದೇ, ಅನೇಕರು ಈ ಸಿನಿಮಾ ಮೆಚ್ಚಿ ಮಾತನಾಡಿದ್ದಾರೆ. ಹಿಂದಿಯಲ್ಲಿ ಮಾತ್ರವಲ್ಲ, ನಾನಾ ಭಾಷೆಗಳಿಗೂ ಈ ಸಿನಿಮಾ ಡಬ್ ಆಗಿ ರಿಲೀಸ್ ಕೂಡ ಆಗಿದೆ. ಇದೀಗ ಆಸ್ಕರ್ ವಿಷಯದಲ್ಲಿ ಸಿನಿಮಾ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಆಸ್ಕರ್ ರೇಸ್ ನಲ್ಲಿ ‘ಆರ್.ಆರ್.ಆರ್’ ಹೆಸರು, ‘ಕೆಜಿಎಫ್ 2’ ಯಾಕಿಲ್ಲ ಎಂದ ಅಭಿಮಾನಿಗಳು

    ಆಸ್ಕರ್ ರೇಸ್ ನಲ್ಲಿ ‘ಆರ್.ಆರ್.ಆರ್’ ಹೆಸರು, ‘ಕೆಜಿಎಫ್ 2’ ಯಾಕಿಲ್ಲ ಎಂದ ಅಭಿಮಾನಿಗಳು

    ಸ್ಕರ್ ಪ್ರಶಸ್ತಿಗಳ ಕುರಿತು ಇದೀಗ ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ. ಈ ಬಾರಿ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಆರ್.ಆರ್.ಆರ್ ಹೆಸರು ಕೇಳಿ ಬರುತ್ತಿದ್ದು, ಈ ಬಾರಿ ಈ ಸಿನಿಮಾ ಭಾರೀ ಪೈಪೋಟಿ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ. ಈ ಸಿನಿಮಾಗಿಂತಲೂ ಹೆಚ್ಚು ಸದ್ದು ಮಾಡಿದ್ದ ಕನ್ನಡದ ಕೆಜಿಎಫ್ 2 ಸಿನಿಮಾ ಹೆಸರು ಯಾಕೆ ರೇಸ್ ನಲ್ಲಿ ಕೇಳಿ ಬರುತ್ತಿಲ್ಲ ಎಂಬ ಪ್ರಶ್ನೆ ಕನ್ನಡ ಅಭಿಮಾನಿಗಳದ್ದು.

    ದಕ್ಷಿಣದ ಸಿನಿಮಾಗಳು ಒಂದೇ ಎಂದು ನಂಬಿಸುತ್ತಾ ಬರುತ್ತಿದ್ದರೂ, ಕನ್ನಡ ಮೂಲದ ಸಿನಿಮಾಗಳಿಗೆ ಅದಕ್ಕೆ ಸಿಗಬೇಕಾದ ಮನ್ನಣೆ ದೊರೆಯದೇ ಇರುವುದಕ್ಕೂ ಕೆಲವರು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾಗಿಂತಲೂ ಕೆಜಿಎ‍ಫ್ 2 ಸಿನಿಮಾ ಹೆಚ್ಚು ಕಡೆ ರಿಲೀಸ್ ಆಗಿದೆ. ಬಾಕ್ಸ್ ಆಫೀಸಿನಲ್ಲು ಸದ್ದು ಮಾಡಿದೆ, ಇನ್ನೂ ಹಲವು ಕಡೆ ಪ್ರದರ್ಶನ ಕಾಣುತ್ತಿದೆ. ಕನ್ನಡದ ಸಿನಿಮಾವೊಂದು ಈ ಮಟ್ಟಕ್ಕೆ ಹೆಸರು ಮಾಡಿದ್ದರೂ ಆಸ್ಕರ್ ರೇಸ್ ನಲ್ಲಿ ಈ ಸಿನಿಮಾ ಇದೆ ಎಂದು ಎಲ್ಲೂ ಬಿಂಬಿತವಾಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

    ಕೆಜಿಎಫ್ 2 ಸಿನಿಮಾ ಬಾಲಿವುಡ್ ಮಂದಿಯನ್ನು ನಿದ್ದೆಗೆಡಿಸಿದೆ. ಬಾಕ್ಸ್ ಆಫೀಸಿನಲ್ಲಿ ಅತೀ ಹೆಚ್ಚು ಹಣಗಳಿಸಿದ್ದು ಹಿಂದಿಯಲ್ಲಿ. ಹಾಗಾಗಿ ಬಾಲಿವುಡ್ ನವರು ಆರ್.ಆರ್.ಆರ್ ಗೆ ಮಣೆ ಹಾಕಿ, ಕೆಜಿಎಫ್ 2 ಸಿನಿಮಾವನ್ನು ಹಿಂದಿಕ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಇದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಂತೂ ಭಾರೀ ಚರ್ಚೆ ಆಗುತ್ತಿದೆ. ಕನ್ನಡದ ಸಿನಿಮಾಗೆ ಮನ್ನಣೆ ಸಿಗಲೇಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರ್.ಆರ್.ಆರ್ ಸಿನಿಮಾ ಸಲಿಂಗ ಪ್ರೇಮಕಥೆ ಎಂದ ಆಸ್ಕರ್ ಪ್ರಶಸ್ತಿ ವಿಜೇತ ರೆಸೂಲ್

    ಆರ್.ಆರ್.ಆರ್ ಸಿನಿಮಾ ಸಲಿಂಗ ಪ್ರೇಮಕಥೆ ಎಂದ ಆಸ್ಕರ್ ಪ್ರಶಸ್ತಿ ವಿಜೇತ ರೆಸೂಲ್

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಸಲಿಂಗ ಪ್ರೇಮಕಥೆಯನ್ನು ಹೊಂದಿದೆ ಎಂದು ಈ ಹಿಂದೆ ವಿದೇಶಿಗರು ಆಡಿಕೊಂಡಿದ್ದರು. ಈ ಬಾರಿ ಭಾರತದವರೇ ಆ ರೀತಿಯ ಹೇಳಿಕೆಯನ್ನು ಕೊಡುತ್ತಿದ್ದಾರೆ. ಸೌಂಡ್ ವಿನ್ಯಾಸಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿರುವ ಮಲಯಾಳಂ ಚಿತ್ರರಂಗದ ರೆಸೂಲ್ ಪೂಕಟ್ಟಿ ಆರ್.ಆರ್.ಆರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇದೊಂದು ಸಲಿಂಗ ಪ್ರೇಮಕಥೆಯನ್ನು ಹೊಂದಿರುವ ಚಿತ್ರ ಎಂದಿದ್ದಾರೆ.

    ರೆಸೂಲ್ ಪೂಕಟ್ಟಿ ಆಸ್ಕರ್ ಪ್ರಶಸ್ತಿ ಪಡೆದ ಸಿನಿಮಾ ಸೌಂಡ್ ಇಂಜಿನಿಯರ್. ಭಾರತದ ಸಿನಿಮಾ ರಂಗಕ್ಕೆ ಒಂದೊಳ್ಳೆ ಹೆಸರು ತಂದು ಕೊಟ್ಟ ತಂತ್ರಜ್ಞ. ಅವರು ಭಾರತೀಯ ಸಿನಿಮಾ ರಂಗವೇ ಹೆಮ್ಮೆ ಪಡುವಂತಹ ಸಿನಿಮಾಗೆ ಈ ರೀತಿ ಹೇಳಿದ್ದು ಸಹಜವಾಗಿಯೇ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ವಿಶ್ವವೇ ಮೆಚ್ಚಿಕೊಂಡಿದ್ದ ಸಿನಿಮಾಗೆ ಆ ರೀತಿ ಅವರು ಹೇಳಬಾರದಿತ್ತು ಎನ್ನುವ ಮಾತೂ ಕೇಳಿ ಬಂದಿದೆ. ಅಲ್ಲದೇ, ಆರ್.ಆರ್.ಆರ್ ಸಿನಿಮಾ ನಿರ್ಮಾಪಕರು ಈ ಕುರಿತು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ಗೆ ಕರ್ನಾಟಕದಲ್ಲಿ ಧರ್ಮ ಸಂಕಟ

    ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ್ ಕಾಂಬಿನೇಷನ್ ನ ಸಿನಿಮಾ ಇದಾಗಿದ್ದು, ಸಾವಿರಾರು ಕೋಟಿ ಗಳಿಕೆ ಮಾಡಿದೆ. ಮಿತ್ರರಿಬ್ಬರು ಒಬ್ಬರಿಗೊಬ್ಬರು ಸಹಾಯ ಪಡೆದುಕೊಳ್ಳುತ್ತಾ, ತಮ್ಮ ಹಠವನ್ನು ಹೇಗೆ ಸಾಧಿಸುತ್ತಾರೆ ಎನ್ನುವುದೇ ಸಿನಿಮಾದ ಕಥೆ. ಈ ಕಥೆಗೆ ಸಲಿಂಗ ಪ್ರೇಮಕಥೆ ಎಂದು ವ್ಯಂಗ್ಯವಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್.ಆರ್.ಆರ್ ಅಕೌಂಟ್ ಕ್ಲೋಸ್ : ನಿರ್ಮಾಪಕರಿಗೆ ಒಟ್ಟು ಹರಿದು ಬಂದ ಹಣವೆಷ್ಟು?

    ಆರ್.ಆರ್.ಆರ್ ಅಕೌಂಟ್ ಕ್ಲೋಸ್ : ನಿರ್ಮಾಪಕರಿಗೆ ಒಟ್ಟು ಹರಿದು ಬಂದ ಹಣವೆಷ್ಟು?

    ರಾಜಮೌಳಿ ನಿರ್ದೇಶನದ ಬಹುಕೋಟಿ ಬಜೆಟ್ ಸಿನಿಮಾ ಆರ್.ಆರ್.ಆರ್ ಸಿನಿಮಾ ಬಹುತೇಕ ಚಿತ್ರಮಂದಿರಗಳಿಂದ ಎತ್ತಂಗಡಿ ಆಗಿದೆ. ಹಾಗಾಗಿ ಈ ಸಿನಿಮಾ ಎಷ್ಟೆಲ್ಲ ಹಣವನ್ನು ತಂದುಕೊಟ್ಟಿತು ಎನ್ನುವ ಕುತೂಹಲ ಮೂಡಿದೆ. ಸಿನಿಮಾ ರಿಲೀಸ್ ಆಗಿ ಎರಡ್ಮೂರು ವಾರಗಳ ಕಾಲ, ನೂರು ಕೋಟಿ ಬಂತು, ಐನೂರು ಕೋಟಿ ಆಯಿತು ಹೀಗೆ ಸುದ್ದಿಗಳನ್ನು ಓದಿದ್ದೇವೆ. ಇದೀಗ ಒಟ್ಟು ಎಷ್ಟು ಹಣ ಬಂದಿದೆ ಎನ್ನುವ ಪ್ರಶ್ನೆ ಕ್ಯೂರಿಯಾಸಿಟಿ ಮೂಡಿಸಿದೆ.

    ಕೇವಲ ರಾಜಮೌಳಿ ನಿರ್ದೇಶನ ಮಾಡಿದಾಗ, ಬಾಕ್ಸ್ ಆಫೀಸಿನಲ್ಲಿ ಒಂದು ಲೆಕ್ಕಚಾರ ಇದ್ದೇ ಇರುತ್ತದೆ. ಆದರೆ, ಈ ಬಾರಿ ಇಬ್ಬರು ಸೂಪರ್ ಸ್ಟಾರ್ ಜೊತೆ ರಾಜಮೌಳಿ ಬಂದಿದ್ದಾರೆ. ಹಾಗಾಗಿ ಲೆಕ್ಕಾಚಾರ ಭರ್ಜರಿಯಾಗಿಯೇ ಇರುತ್ತದೆ ಎನ್ನುವ ನಂಬಿಕೆ ಚಿತ್ರೋದ್ಯಮದ್ದು. ರಾಜಮೌಳಿಯೂ ಸೇರಿದಂತೆ ಮೂವರು ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ ಸಮಾಗಮವಾಗಿದ್ದರಿಂದ ಸಾವಿರ ಕೋಟಿಯೇ ನಿರ್ಮಾಪಕರ ಜೇಬಿಗೆ ಹರಿದು ಬಂದಿದೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ಸಿನಿ ರಂಗದ ಲೆಕ್ಕಾಚಾರದ ಪಂಡಿತರ ಪ್ರಕಾರ ಥಿಯೇಟರ್ ನಿಂದಲೇ ಒಟ್ಟು 1100 ಕೋಟಿ ಬಂದಿದೆ ಎಂದು ಹೇಳಲಾಗುತ್ತಿದೆ. ಟಿವಿ ರೈಟ್ಸ್, ಡಿಜಿಟಲ್ ರೈಟ್ಸ್, ಆಡಿಯೋ ಹಕ್ಕುಗಳನ್ನು ಸೇರಿಸಿದರೆ, 1450 ಕೋಟಿಯಷ್ಟು ಹಣವು ಆರ್.ಆರ್.ಆರ್ ಗಳಿಸಿದೆ ಎನ್ನಲಾಗುತ್ತಿದೆ. ಟ್ಯಾಕ್ಸ್, ಕಮಿಷನ್, ಇತ್ಯಾದಿ ಇತ್ಯಾದಿ ಕಡಿತಗೊಂಡು ನಿರ್ಮಾಪಕರಿಗೆ ಎಷ್ಟು ಹಣ ಸೇರುತ್ತದೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಮುಂದಿನ ದಿನಗಳಲ್ಲಿ ಅದೂ ಗೊತ್ತಾಗಬಹುದು.

    Live Tv