Tag: ಆರ್.ಅಶೋಕ

  • ಮುಸ್ಲಿಮರ ಋಣ ತೀರಿಸಲು ಕಾಂಗ್ರೆಸ್ ಮುಂದಾಗಿದೆ: ಹುಬ್ಬಳ್ಳಿ ಕೇಸ್ ವಾಪಸ್‌ಗೆ ಅಶೋಕ್ ಕಿಡಿ

    ಮುಸ್ಲಿಮರ ಋಣ ತೀರಿಸಲು ಕಾಂಗ್ರೆಸ್ ಮುಂದಾಗಿದೆ: ಹುಬ್ಬಳ್ಳಿ ಕೇಸ್ ವಾಪಸ್‌ಗೆ ಅಶೋಕ್ ಕಿಡಿ

    ಬೆಂಗಳೂರು: ಮುಸ್ಲಿಮರ ಋಣ ತೀರಿಸುವ ಕೆಲಸಕ್ಕೆ ಕಾಂಗ್ರೆಸ್ (Congress) ಮುಂದಾಗಿದೆ. ಹೀಗಾಗಿ ಮತಬ್ಯಾಂಕ್, ಹಗರಣಗಳನ್ನು ಮರೆಮಾಚಲು ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R Ashok) ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಫ್ರೀಡಂ ಪಾರ್ಕ್‌ನಲ್ಲಿ (Freedom Park) ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಬಿಜೆಪಿ ಶಾಸಕರು, ಮುಖಂಡರೊಂದಿಗೆ ರಾಜಭವನಕ್ಕೆ ತೆರಳಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನು ಭೇಟಿ ಮಾಡಿ ದೂರು ನೀಡಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿ ಚಟುವಟಿಕೆ, ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿಹಾಕಿದೆ. ರೈತ ಹೋರಾಟ, ಕನ್ನಡ ಹೋರಾಟಗಳಿಗೆ ಇದನ್ನು ಹೋಲಿಸಬಾರದು. ಕುರ್ಚಿ ಅಲುಗಾಡುತ್ತಿರುವ ಸಮಯದಲ್ಲಿ ಮುಸ್ಲಿಮರು ನನ್ನ ಪರವಾಗಿದ್ದಾರೆ ಹಾಗೂ ಕಾಂಗ್ರೆಸ್‌ಗೆ ಮುಸ್ಲಿಮರ ವೋಟು ಬೇಕೆಂದು ಹೀಗೆ ಮಾಡಲಾಗಿದೆ. ಜೊತೆಗೆ ರೈತರ ವಿರುದ್ಧದ ಪ್ರಕರಣ ವಾಪಸ್ ಪಡೆಯಲು ಸಿ.ಟಿ.ರವಿ ಮನವಿ ಮಾಡಿದ್ದರೂ ಅದಕ್ಕೆ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.ಇದನ್ನೂ ಓದಿ:ಹಕ್ಕಿಯಂತೆ ಹಾರಬಹುದು, ಆಕಾಶದಿಂದ ನಂದಿಬೆಟ್ಟ ನೋಡಬಹುದು – ನಂದಿಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್‌ ಆಕರ್ಷಣೆ

    ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿದಾಗಲೂ ಇದೇ ರೀತಿ ಮಾಡಿದ್ದಾರೆ. ಇರ‍್ಯಾರೂ ಸ್ವಾತಂತ್ರ‍್ಯ ಹೋರಾಟಗಾರರಲ್ಲ. ಮುಡಾ, ವಾಲ್ಮೀಕಿ ನಿಗಮದ ಹಗರಣದಿಂದ ತಪ್ಪಿಸಿಕೊಳ್ಳಲು ಈ ತಂತ್ರ ಮಾಡಿರಬಹುದು. ಆದರೆ ಬಿಜೆಪಿಯಿಂದ ಈ ಎರಡೂ ಹಗರಣಗಳ ವಿರುದ್ಧ ಹೋರಾಟ ಮುಂದುವರಿಯಲಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಅನುದಾನ ತಾರತಮ್ಯ ಮಾಡಿದೆ ಎಂಬ ಸುಳ್ಳು ಹಬ್ಬಿಸುತ್ತಿದ್ದಾರೆ. ಮೆಟ್ರೊ, ಜಲಜೀವನ್ ಮಿಷನ್, ಉಪನಗರ ರೈಲು ಮೊದಲಾದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಅನುದಾನ ನೀಡಿದ್ದಾರೆ. ಅಷ್ಟು ಆರೋಪ ಮಾಡುವುದಾದರೆ ಶ್ವೇತಪತ್ರ ಬಿಡುಗಡೆಗೊಳಿಸಿ ಎಷ್ಟು ಅನುದಾನ ನೀಡಲಾಗಿದೆ ತಿಳಿಸಲಿ ಎಂದು ಸವಾಲೊಡ್ಡಿದರು.

    224 ಶಾಸಕರಿಗೆ ಎಷ್ಟು ಅನುದಾನ ನೀಡಲಾಗಿದೆ? ಎಂದು ರಾಜ್ಯ ಸರ್ಕಾರ ಪಟ್ಟಿ ನೀಡಲಿ. ಪ್ರತಿ ಜಿಲ್ಲೆಗೆ ತೆರಿಗೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಿ. ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಹೆಚ್ಚಿದ್ದು, ವಾಹನಗಳ ಸರಾಸರಿ ವೇಗ 17 ಕಿ.ಮೀ.ನಿಂದ 12 ಕಿ.ಮೀ.ಗೆ ಇಳಿದಿದೆ. ರಾಜ್ಯದ ಜನರಿಗೆ ಕಾಂಗ್ರೆಸ್ ಎಷ್ಟು ತಾರತಮ್ಯ ಮಾಡಿದೆ ತಿಳಿಸಲಿ ಎಂದು ಕಿಡಿಕಾರಿದರು.

    ಯಾರು ಯಾವಾಗ ಜೈಲಿಗೆ ಹೋಗುತ್ತಾರೆ? ಯಾವಾಗ ಮರಳಿ ಚುನಾವಣೆ ಬರಲಿದೆ? ಎಂದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಅದಕ್ಕಾಗಿ ಮತ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ಈ ಸರ್ಕಾರ ಉಳಿಯುವುದಿಲ್ಲ ಎಂದು ಅವರಿಗೂ ಗೊತ್ತಿದೆ. ಅವರ ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಮಾನ ಮರ್ಯಾದೆ ಇದ್ದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.ಇದನ್ನೂ ಓದಿ: Mumbai | ಲಘು ಮೋಟರ್ ವಾಹನಗಳಿಗೆ ಟೋಲ್ ಫ್ರೀ ಪ್ರವೇಶ: ಸಿಎಂ ಶಿಂಧೆ

    ಮುಸ್ಲಿಮರ ಋಣ ತೀರಿಸುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ. ಒಂದು ಕಡೆ ಸಿದ್ದರಾಮಯ್ಯ ಸೈಟು ವಾಪಸ್ ಕೊಟ್ಟರೆ, ಮತ್ತೊಂದೆಡೆ ಮಲ್ಲಿಕಾರ್ಜುನ ಖರ್ಗೆ ಸೈಟು ವಾಪಸ್ ನೀಡಿದ್ದಾರೆ. ಇನ್ನೊಂದೆಡೆ ಸರ್ಕಾರ ಪ್ರಕರಣ ವಾಪಸ್ ಪಡೆದಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡುವ ಜೊತೆಗೆ ಕ್ರಿಮಿನಲ್‌ಗಳ ಪ್ರಕರಣ ವಾಪಸ್ ಪಡೆದಿದ್ದಾರೆ. ಕನ್ನಡ ಹೋರಾಟಗಾರ ನಾರಾಯಣಗೌಡರನ್ನು ಜೈಲಿಗೆ ಹಾಕಿದ್ದರು. ಆದರೆ ಭಯೋತ್ಪಾದಕರಿಗೆ ಮಾತ್ರ ಪರೋಕ್ಷವಾಗಿ ಬೆಂಬಲ ನೀಡಲಾಗುತ್ತಿದೆ. ಡಿಜೆ ಹಳ್ಳಿ ಗಲಭೆಯಲ್ಲಿ ಭಾಗಿಯಾದವರು ಕಾಂಗ್ರೆಸ್‌ನ ಪದಾಧಿಕಾರಿಗಳಾಗಿದ್ದಾರೆ. ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

    ಈ ಸರ್ಕಾರ ಟಿಪ್ಪು ಆಡಳಿತ ನೀಡುತ್ತಿದೆ. ಸಿದ್ದರಾಮಯ್ಯನವರು ಟಿಪ್ಪುವನ್ನೇ ಮನೆ ದೇವರಾಗಿ ಮಾಡಿಕೊಂಡಿದ್ದಾರೆ. ಎಂದಿಗೂ ಕುಂಕುಮ ಇಡದ ಸಿದ್ದರಾಮಯ್ಯ ಈಗ ದೇವಸ್ಥಾನಕ್ಕೆ ಹೋಗಿ ಬೊಟ್ಟು ಇಡುತ್ತಿದ್ದಾರೆ. ಕುರ್ಚಿಯಿಂದ ಕೆಳಕ್ಕಿಳಿಯುವುದು ಖಾತರಿಯಾಗಿರುವುದರಿಂದ ದೇವರ ಮೊರೆ ಹೋಗಿದ್ದಾರೆ. ಹಿಂದೂಗಳು ಈಗ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದರೆ ಮುಸಲ್ಮಾನರೇ ಕಾಂಗ್ರೆಸ್‌ಗೆ ಬಿಗ್‌ಬಾಸ್ ಆಗಿ, ಅವರು ಹೇಳಿದಂತೆಯೇ ಸರ್ಕಾರ ನಡೆದುಕೊಳ್ಳಲಿದೆ ಎಂದು ತಿಳಿಸಿದರು.

    ರಾಜ್ಯಪಾಲರಿಗೆ ಮನವಿ
    ಪ್ರಕರಣ ಹಿಂಪಡೆದ ಕುರಿತು ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಪತ್ರ ಸಲ್ಲಿಸಲಾಗಿದೆ. ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಬಗ್ಗೆ ಸರ್ಕಾರದ ಬಳಿ ಸ್ಪಷ್ಟನೆ ಕೇಳಲಾಗುವುದು ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಸರ್ಕಾರದ ಈ ಕ್ರಮದ ವಿರುದ್ಧ ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಇದನ್ನೂ ಓದಿ: 2 ವರ್ಷಗಳ ಹಿಂದೆ ಘೋಷಿಸಿದ್ದ ಎಥೆನಾಲ್ ಘಟಕ ಇನ್ನೂ ಆರಂಭವಾಗಿಲ್ಲ: ಸುಮಲತಾ ಆಪ್ತ ಬೇಸರ

  • ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ, ಯತ್ನಾಳ್ ಅವರ ನ್ಯಾಯದ ಹೋರಾಟಕ್ಕೆ ನಮ್ಮ ಬೆಂಬಲ- ಆರ್.ಅಶೋಕ್

    ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ, ಯತ್ನಾಳ್ ಅವರ ನ್ಯಾಯದ ಹೋರಾಟಕ್ಕೆ ನಮ್ಮ ಬೆಂಬಲ- ಆರ್.ಅಶೋಕ್

    -ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಜೊತೆ ಈಗ ಖರ್ಗೆ ಹಗರಣ ನಡೆದಿದೆ
    -ಪಂಚೆ ಉಟ್ಟುಕೊಂಡು ಬಂದ್ರೆ ಬೆಲೆ ಇಲ್ಲ. ಸೂಟು ಬೂಟು ಧರಿಸಿ, ಹಣದ ಸೂಟ್‌ಕೇಸ್ ಜೊತೆ ಬಂದ್ರೆ ಮಾತ್ರ ಬೆಲೆ

    ಬೆಂಗಳೂರು: ಕಲಬುರ್ಗಿ (Kalburgi) ಜಿಲ್ಲೆಯ ಸಿದ್ದಸಿರಿ ಸಕ್ಕರೆ ಕಾರ್ಖಾನೆಯ (Siddasiri Sugar Factory) ಮರು ಆರಂಭಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದರು.

    ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯಲ್ಲಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದುಳಿದ ಪ್ರದೇಶವಾದ ಕಲಬುರ್ಗಿಯಲ್ಲಿ ಮುಳುಗಿಹೋಗಿದ್ದ ಸಕ್ಕರೆ ಕಾರ್ಖಾನೆಯನ್ನು ಶಾಸಕ ಯತ್ನಾಳ್ ಅಭಿವೃದ್ಧಿಪಡಿಸಿದ್ದಾರೆ. ಈ ಕಾರ್ಖಾನೆಯಿಂದ ಎರಡು ಸಾವಿರ ಜನರಿಗೆ ಉದ್ಯೋಗ ದೊರೆತಿದೆ. ಸಾವಿರಾರು ರೈತರಿಗೆ ಲಾಭವಾಗುತ್ತಿದೆ ಎಂದರು.ಇದನ್ನೂ ಓದಿ: ಪ್ರಮೋದ್ ಚಿತ್ರಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್

    ಇಲ್ಲಿನ ಅಧಿಕಾರಿಗಳು ಸ್ಥಳಕ್ಕೆ ಬಾರದೆ ವಿಧಾನಸೌಧದ ಕಡೆಗೆ ಮುಖ ಮಾಡಿಕೊಂಡು ಕೂತಿದ್ದಾರೆ. ಒಂದು ಕಡೆ ಮುಡಾ ಹಗರಣ (MUDA), ಮತ್ತೊಂದು ಕಡೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಇನ್ನೊಂದು ಖರ್ಗೆ ಹಗರಣ ನಡೆದಿದೆ. ಇಂತಹ ಸ್ಥಿತಿಯಲ್ಲಿ ಸ್ವಾಯತ್ತ ಸಂಸ್ಥೆಯ ಮೇಲೆ ಈ ಕೆಟ್ಟ ಸರ್ಕಾರ ಒತ್ತಡ ಹೇರಿದೆ. ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ. ಹೈಕೋರ್ಟ್ ಆದೇಶವಿದ್ದರೂ ಕಾರ್ಖಾನೆ ಮರು ಆರಂಭಕ್ಕೆ ಅನುಮತಿ ನೀಡುತ್ತಿಲ್ಲ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

    ಶಾಸಕ ಯತ್ನಾಳ್ ಅವರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ನಾವೆಲ್ಲರೂ ಅವರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ. ಇದು ಸ್ವಾಯತ್ತ ಸಂಸ್ಥೆಯಾಗಿದ್ದರೂ, ಇಲ್ಲಿ ಸ್ವಾತಂತ್ರ‍್ಯ ಕಾಣುತ್ತಿಲ್ಲ. ಅಧಿಕಾರಿಗಳು ಪ್ರತಿಯೊಂದಕ್ಕೂ ಸಚಿವರ ಕಡೆ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ ಎಂದು ದೂರಿದರು.ಇದನ್ನೂ ಓದಿ: Video | ಆ.31ಕ್ಕೆ ಪವಿತ್ರಾಗೌಡ ಬೇಲ್‌ ಭವಿಷ್ಯ – ಅಲ್ಲಿವರೆಗೂ ಜೈಲೇ ಗತಿ

    ಮಾಲಿನ್ಯ ನಿಯಂತ್ರಣ ಮಂಡಳಿ ಎಂದರೆ ಮಾಲಿನ್ಯವನ್ನು ನಿಯಂತ್ರಿಸುವ ಸಂಸ್ಥೆ. ಆದರೆ ಇಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲ. ಇಲ್ಲಿಗೆ ಪಂಚೆ ಉಟ್ಟುಕೊಂಡು ಬಂದರೆ ಬೆಲೆ ಇಲ್ಲ. ಸೂಟು ಬೂಟು ಧರಿಸಿ, ಹಣದ ಸೂಟ್‌ಕೇಸ್ ತೆಗೆದುಕೊಂಡು ಬಂದರೆ ಮಾತ್ರ ಬೆಲೆ. ಇದು ಕಾರ್ಪೊರೇಟ್ ಕಂಪನಿಯಂತಾಗಿದೆ. ಅಧಿಕಾರಿಗಳಿಗೆ ಮೇಲಿನಿಂದ ಕರೆ ಬಂದಿದ್ದು, ಯತ್ನಾಳ್ ಅವರಿಗೆ ತೊಂದರೆ ಕೊಡಲು ಸೂಚಿಸಲಾಗಿದೆ. ಮಂಡಳಿಯ ಅಧ್ಯಕ್ಷರು ಸ್ಥಳಕ್ಕೆ ಬಾರದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಹೈಕೋರ್ಟ್ ಆದೇಶವನ್ನು ಜಾರಿ ಮಾಡುವುದಿಲ್ಲ ಎಂದು ಲಿಖಿತವಾಗಿ ಕೊಡಲಿ ಎಂದು ಆಗ್ರಹಿಸಿದರು.

  • ಕಾಂಗ್ರೆಸ್‍ನದ್ದು ದೇಶದಲ್ಲಿ ಹಾರದ ಬಾವುಟ: ಆರ್. ಅಶೋಕ್  ವ್ಯಂಗ್ಯ

    ಕಾಂಗ್ರೆಸ್‍ನದ್ದು ದೇಶದಲ್ಲಿ ಹಾರದ ಬಾವುಟ: ಆರ್. ಅಶೋಕ್ ವ್ಯಂಗ್ಯ

    ಧಾರವಾಡ (ಹುಬ್ಬಳ್ಳಿ): ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನವೇ ಅವರ ಬಾವುಟ ಹಾರಲಿಲ್ಲ, ಬಿದ್ದು ಹೋಗಿದೆ. ಇನ್ನೂ ಅವರದ್ದು ಎಂದಿಗೂ ದೇಶದಲ್ಲಿ ಹಾರದ ಬಾವುಟ ಎಂದು ಕಂದಾಯ ಸಚಿವ ಆರ್.  ಅಶೋಕ್ ವ್ಯಂಗ್ಯವಾಡಿದರು.

    ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಫಾಲ್ಗೊಳ್ಳುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೀಳುವ ಬಾವುಟದ ಅಡಿ ಕೆಲಸ ಮಾಡುತ್ತಿರುವ ಡಿ.ಕೆ. ಶಿವಕುಮಾರ್ ಅಧಿಕಾರಕ್ಕಾಗಿ ಹಗಲುಗನಸು ಕಾಣುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ತಿರುಕನ ಕನಸು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟ ಆಗಿದೆ ಎಂದರು. ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ – ಹಲವು ವಲಯಗಳಿಂದ ಇನ್ನು ಸಿಕ್ಕಿಲ್ಲ ಪರಿಪೂರ್ಣ ಬೆಂಬಲ

    ನಿನ್ನೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಧ್ವಜಾರೋಹಣ ಮಾಡುವ ವೇಳೆ ಕಾಂಗ್ರೆಸ್ ಧ್ವಜ ಕೆಳಗೆ ಬಿದ್ದಿತ್ತು. ಇದನ್ನೂ ಓದಿ: ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಹೃದಯ ಸ್ತಂಭನದಿಂದ ನಿಧನ

    ಕಾಂಗ್ರೆಸ್ ಪ್ರಕಾರ ಮತಾಂತರ ಒಳ್ಳೆಯದು. ಹಿಂದೂಗಳ ದಲಿತರು ಮತಾಂತರ ಆಗಬೇಕು ಎಂಬುದು ಅವರ ಭಾವನೆಯಾಗಿದೆ. ಮುಂದಿನ ದಿನಗಳಲ್ಲಿ ಬಹುಸಂಖ್ಯಾತರು ಕಾಂಗ್ರೆಸ್ಸ್ ದೂರ ಇಡಲಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರು ವೀರಶೈವ, ಲಿಂಗಾಯತ ಎಂದು ಒಡೆಯಲು ಮುಂದಾಗಿ ಕಾಂಗ್ರೆಸ್ ನುಚ್ಚು ನೂರಾಗಿತ್ತು. ವಿರೋಧ ಪಕ್ಷವು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಹಿಂದೂ ವಿರೋಧಿ ಕಾಂಗ್ರೆಸ್ ಆಸೆ ಈಡೇರುವುದಿಲ್ಲ ಎಂದರು.

  • ಕೊರೊನಾ ಮೂರನೇ ಅಲೆ ತಡೆಯಲು ಸಕಲ ಸಿದ್ಧತೆ: ಆರ್ ಅಶೋಕ್

    ಕೊರೊನಾ ಮೂರನೇ ಅಲೆ ತಡೆಯಲು ಸಕಲ ಸಿದ್ಧತೆ: ಆರ್ ಅಶೋಕ್

    ಬೆಂಗಳೂರು: ಕೊರೊನಾ ತಡೆಗೆ ಮುಂಜಾಗ್ರತಾ ಕ್ರಮವಾಗಿ ಬೆಡ್, ಆಕ್ಸಿಜನ್ ಸೇರಿದಂತೆ ಸಕಲ ಸಿದ್ಧತೆಗಳನ್ನು ಮಾಡಲು ಎಲ್ಲಾ ಡಿಸಿಗಳಿಗೂ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಓಮಿಕ್ರಾನ್ ಇಡೀ ದೇಶದಲ್ಲಿ ಜಾಸ್ತಿ ಆಗಿದೆ. ಕಳೆದ ಬಾರಿ ತೊಂದರೆ ಆದಂತೆ ಈ ಬಾರಿ ಆಗದಿರಲು ಎಚ್ಚರಿಕೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

    ಕೊರೊನಾ ತಡೆಗೆ ಎಲ್ಲೆಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಎರಡನೇ ಅಲೆಯ ಪಾಠ ನಮ್ಮ ಮುಂದೆ ಇದೆ. ಹೀಗಾಗಿ ಕೊರೊನಾ ತಡೆಗೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈವರೆಗೂ ಯಾವುದೇ ತೀರ್ಮಾನ ಆಗಿಲ್ಲ. ಸಿಎಂ ಜೊತೆ ಸಭೆ ನಂತರ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

    ಟಫ್ ರೂಲ್ಸ್ ಜಾರಿಗೆ ಕಾಂಗ್ರೆಸ್ ವಿರೋಧಿಸಿರುವ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಕೇಳಿ ಸರ್ಕಾರ ನಡೆಸಲು ಆಗುವುದಿಲ್ಲ. ನಾವು ಜನರ ಕಷ್ಟಕ್ಕೆ ಮಿಡಿಯಬೇಕಾಗಿದೆ. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕು ಎಂದರು.

    ಕೊರೊನಾ ಮೂರನೇ ಅಲೆ ಬಾರದಂತೆ ತಡೆಯುವುದು ನಮ್ಮ ಮೊದಲ ಆದ್ಯತೆ ಆಗಿದೆ. ತಜ್ಞರ ವರದಿ ಆಧರಿಸಿ ಸರ್ಕಾರ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ – ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಯಾರು ಗೊತ್ತಾ?

    ಬಿಪಿನ್ ರಾವತ್ ನಿಧನಕ್ಕೆ ಸಂತಾಪ: ಬಿಪಿನ್ ರಾವತ್ ಅವರು ಸೇನಾ ಕುಟುಂಬದಲ್ಲಿ ಜನಿಸಿದವರು. ಅವರು ದೇಶ ಸೇವೆಗೆ ತಮ್ಮ ಜೀವನ ಮುಡುಪಿಟ್ಟಿದ್ದರು. ಅನೇಕ ಯುದ್ಧದಲ್ಲಿ ಹೋರಾಟ ಮಾಡಿದ್ದ ಬಿಪಿನ್ ರಾವತ್, ಪಾಕಿಸ್ತಾನದ ವಿರುದ್ಧ ಹೋರಾಡಿದ್ದರು. ಅವರ ನಿಧನದಿಂದಾಗಿ ದೇಶ ವೀರಪುತ್ರರನ್ನ ಕಳೆದುಕೊಂಡಿದೆ. ಪಾಕಿಸ್ತಾನದ ಪತ್ರಿಕೆಗಳಲ್ಲಿ ಬಿಪಿನ್ ರಾವತ್ ಅವರ ನಿಧನದ ಸುದ್ದಿಯನ್ನು ಸಂಭ್ರಮಿಸಲಾಗಿದೆ. ಇದು ಅವರ ಹೀನ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಪತನಗೊಂಡ ಹೆಲಿಕಾಪ್ಟರ್‌ನಲ್ಲಿ ಬ್ಲ್ಯಾಕ್‌ ಬಾಕ್ಸ್ ಪತ್ತೆ- ಬಯಲಾಗುತ್ತಾ ದುರಂತದ ರಹಸ್ಯ?

  • ಹೌದು, ಈ ಫೋಟೋದಲ್ಲಿರುವ ವ್ಯಕ್ತಿ ಕಾರಿನಲ್ಲಿದ್ದರು: ಪ್ರತ್ಯಕ್ಷದರ್ಶಿ

    ಹೌದು, ಈ ಫೋಟೋದಲ್ಲಿರುವ ವ್ಯಕ್ತಿ ಕಾರಿನಲ್ಲಿದ್ದರು: ಪ್ರತ್ಯಕ್ಷದರ್ಶಿ

    -ಅಪಘಾತದ ನಂತರ ಮತ್ತೊಂದು ಬ್ರ್ಯಾಂಡೆಡ್ ಕಾರಿನಲ್ಲಿ ಹೋದ್ರು

    ಬಳ್ಳಾರಿ: ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಚಾಲಕ ಯುವಕನಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಅಪಘಾತದ ವೇಳೆ ಪ್ರತ್ಯಕ್ಷದರ್ಶಿಯೊಬ್ಬರು ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿ ವರದಿಗಾರ ನವೀನ್ ಅವರು ಪ್ರತ್ಯಕ್ಷದರ್ಶಿಗೆ ಸಚಿವ ಆರ್. ಅಶೋಕ್ ಅವರ ಪುತ್ರ ಶರತ್ ಫೋಟೋವನ್ನು ತೋರಿಸಿ ಕಾರಿನಲ್ಲಿ ಈ ವ್ಯಕ್ತಿ ಇದ್ದರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತ್ಯಕ್ಷದರ್ಶಿ ಹೌದು ಈ ಫೋಟೋದಲ್ಲಿರುವ ವ್ಯಕ್ತಿ ಕಾರಿನಲ್ಲಿ ಇದ್ದರು ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಅಪಘಾತದ ಸುತ್ತ ಅನುಮಾನ: ಅಶೋಕ್ ಮಗ ಕೃತ್ಯ ಎಸಗಿ ಪರಾರಿ?ಪೊಲೀಸರಿಂದಲೇ ಬಚಾವ್?

    ಇದೇ ವೇಳೆ ಪ್ರತ್ಯಕ್ಷದರ್ಶಿ ಅಪಘಾತದ ಬಗ್ಗೆ ವಿವರಿಸಿದ್ದಾರೆ. ಇದು ಡಬಲ್ ರೋಡ್ ಆಗಿದ್ದು, ಒಂದು ಕಡೆಯಿಂದ ಇವರ ಕಾರು ಬರುತ್ತಿತ್ತು. ಮತ್ತೊಂದು ಕಡೆಯಲ್ಲಿ ಲಾರಿ ಬರುತ್ತಿತ್ತು. ದೊಡ್ಡ ಕಾರು ಎಂದರೆ ಮಾಮೂಲಿ ಸ್ಪೀಡ್ ಆಗಿ ಬರುತ್ತಿರುತ್ತೆ. ಹಾಗೆಯೇ ಸೋಮವಾರ ಈ ಕಾರು ಕೂಡ ಸ್ಪೀಡ್ ಆಗಿ ಬರುತ್ತಿತ್ತು. ಪಕ್ಕದಲ್ಲಿ ಲಾರಿ ಕೂಡ ಬರುತ್ತಿತ್ತು. ಈ ವೇಳೆ ಚಾಲಕ ಟೀ ಕುಡಿಯಲು ಎಂದು ತಕ್ಷಣ ತನ್ನ ಲಾರಿಯನ್ನು ಸೈಡ್‍ನಲ್ಲಿ ಪಾರ್ಕ್ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಪಘಾತವಾದ ಕಾರಿಗೆ ನಮ್ಗೂ ಸಂಬಂಧವಿಲ್ಲ: ಅಡ್ಡಗೋಡೆಯ ಮೇಲೆ ದೀಪವಿಟ್ಟ ಅಶೋಕ್

    ಚಾಲಕ ತಕ್ಷಣ ಸೈಡಿನಲ್ಲಿ ಲಾರಿ ಪಾರ್ಕ್ ಮಾಡಿದ್ದನ್ನು ನೋಡಿದ ಕಾರು ಚಾಲಕ ನಾನು ಸ್ಪೀಡಾಗಿ ಬಂದರೆ ಅಪಘಾತವಾಗುತ್ತೆ ಎಂದು ತಿಳಿದಿದ್ದನು. ಈ ವೇಳೆ ಒಂದು ಕಡೆ ಮಣ್ಣು ಇರುವುದು ನೋಡಿ ಮತ್ತೊಂದು ಕಡೆಯೂ ಮಣ್ಣು ಇರಬಹುದು. ಅಲ್ಲಿ ಮುಖ್ಯರಸ್ತೆ ಇರಬಹುದು ಎಂದು ತಿಳಿದುಕೊಂಡು ಆ ಕಡೆ ಹೋದ. ಲಾರಿ ಕೂಡ ಅಡ್ಡ ಇದ್ದಿದ್ದರಿಂದ ಕಾರು ಚಾಲಕ ಯುವಕನನ್ನು ನೋಡಿಲ್ಲ. ಆ ಯುವಕನನ್ನು ಹೊಡೆದುಕೊಂಡು ಮುಂದೆ ಬೋರ್ಡ್ ಹೊಡೆದುಕೊಂಡು ಮುಂದೆ ಹೋಯ್ತು ಎಂದು ವಿವರಿಸಿದರು. ಇದನ್ನೂ ಓದಿ: ಪ್ರಭಾವಿ ವ್ಯಕ್ತಿಯನ್ನ ರಕ್ಷಿಸಲು ಬಿಜೆಪಿ ಸರ್ಕಾರದಿಂದ ಪ್ರಯತ್ನ – ಕಾಂಗ್ರೆಸ್

    ಘಟನೆ ನಡೆದ ನಂತರ ಆ ಗಲಾಟೆಯಲ್ಲಿ ಅಶೋಕ್ ಪುತ್ರ ಶರತ್ ಎಲ್ಲಿ ಹೋದರು ಎಂದು ಸರಿಯಾಗಿ ನೋಡಲಿಲ್ಲ. ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ನೋಡಿದ್ದೇವೆ ಅಷ್ಟೇ. ಇನ್ನೊಬ್ಬ ವ್ಯಕ್ತಿಯ ಮೃತದೇಹವನ್ನು ಅಂಬುಲೆನ್ಸ್ ನಲ್ಲಿ ಕಳುಹಿಸಿಕೊಟ್ಟೇವು. ಇವರೆಲ್ಲರೂ ಒಂದೇ ಕಾರಿನಲ್ಲಿ ಹೋಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ಘಟನೆಯನ್ನು ವಿವರಿಸಿದ್ದರು.

    ಅಪಘಾತವಾದ ನಂತರ ಮತ್ತೊಂದು ಬ್ರ್ಯಾಂಡೆಡ್ ಕಾರಿನಲ್ಲಿ ಅವರು ಮೃತದೇಹವನ್ನು ತೆಗೆದುಕೊಂಡು ಹೋಗಲಾಯಿತು. ಅಪಘಾತವಾದ ನಂತರ ಮತ್ತೊಂದು ಕಾರು ತಕ್ಷಣ ಬಂತು. ಆಗ ನಾವು ಅವರ ಪರಿಚಯಸ್ಥರು ಎಂದು ತಿಳಿದುಕೊಂಡಿದ್ದೇವೆ. ಅವರು ಅವರ ಜೊತೆಗಿದ್ದ ವ್ಯಕ್ತಿಯ ಮೃತದೇಹವನ್ನು ತೆಗೆದುಕೊಂಡು ಹೋದರು. ಸ್ಥಳದಲ್ಲಿದ್ದ ಜನರು ಯುವಕನ ಮೃತದೇಹವನ್ನು ಅಂಬುಲೆನ್ಸ್‍ನಲ್ಲಿ ಕಳುಹಿಸಿಕೊಟ್ಟರು ಎಂದು ತಿಳಿಸಿದರು.

  • ರಾಮನಗರದಲ್ಲಿ ಗೆಲ್ಲೋದಕ್ಕಿಂತ ಪಕ್ಷ ಕಟ್ಟಲು ಹೋಗಿದ್ವಿ: ಆರ್.ಅಶೋಕ್

    ರಾಮನಗರದಲ್ಲಿ ಗೆಲ್ಲೋದಕ್ಕಿಂತ ಪಕ್ಷ ಕಟ್ಟಲು ಹೋಗಿದ್ವಿ: ಆರ್.ಅಶೋಕ್

    ಮಂಡ್ಯ: ಹಣದ ಆಮಿಷದಿಂದ ಬೆನ್ನಿಗೆ ಚೂರಿ ಹಾಕಿ ರಾಮನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಓಡಿ ಹೋಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆರೋಪಿಸಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ಅವರು, ಇದೊಂದು ರಾಜಕೀಯ ವ್ಯಭಿಚಾರ. ಈ ತರದ ಘಟನೆ ರಾಜ್ಯ ತಲೆತಗ್ಗಿಸುವಂತದ್ದು. ಇದರಲ್ಲಿ ಭಾಗಿಯಾದ ಕಾಂಗ್ರೆಸ್‍ನವರು ತಲೆ ತಗ್ಗಿಸಬೇಕು. ಮುಂದೊಂದು ದಿನ ಅವರಿಗೂ ಇದೇ ರೀತಿ ಆಗುತ್ತದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನು ಓದಿ: ಉಪಚುನಾವಣೆಗೆ ಸ್ಫೋಟಕ ಟ್ವಿಸ್ಟ್-ಚುನಾವಣೆ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

    ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ 12 ಜನ ರಾಮನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕಿಂತ ಶಕ್ತಿ ಕೊಡಲು ಸಾಧ್ಯವಿಲ್ಲ. ಸತ್ತರೆ ನನ್ನ ಹೆಣ ಕೂಡ ಜೆಡಿಎಸ್‍ಗೆ ಹೋಗಲ್ಲ ಅಂತ ಚಂದ್ರಶೇಖರ್ ಅವರ ತಂದೆ ಹೇಳಿದ್ದರು. ಆದರೆ ಈಗ ಚಂದ್ರಶೇಖರ್ ನಡೆದುಕೊಂಡಿರುವ ರೀತಿ ಮುಂದೆ ಅವರಿಗೆ ಕಾನೂನಿನ ರೀತಿ ತೊಡಕಾಗಬಹುದು. ನಾವೇನು ರಾಮನಗರ ಗೆಲ್ಲತ್ತೇವೆ ಅಂತಾ ಹೋಗಿಲ್ಲ. ಪಕ್ಷ ಕಟ್ಟಲು ಹೋಗಿದ್ದೆವು ಎಂದು ಅಶೋಕ್ ಅಸಮಾಧಾನ ಹೊರಹಾಕಿದರು.

    ಈ ಬೆಳವಣಿಗೆಯಿಂದ ಇದೇ ಅವಧಿಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಲು ಹಿನ್ನಡೆ ಆಗಲ್ಲ. ಇದಕ್ಕೆ ಪೂರಕವಾಗಿ ಬೇರೆ ನಿರ್ಧಾರ ಕೈಗೊಳ್ಳಲು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಹೈಕಮಾಂಡ್ ನಾಯಕ ಜೊತೆಗೆ ಮಾತುಕತೆ ನಡೆಸುತ್ತೇವೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡ ಅವರ ಗೆಲವು ಕಷ್ಟವಿದೆ. ಹೀಗಾಗಿ ನಾವು ಅಲ್ಲಿ ಹೊಸ ತಂತ್ರ ಹೂಡಲಿದ್ದೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/SUz3348T4QA

  • ಬಿಜೆಪಿಗೆ ಡಬಲ್ ಸೀಟ್, ಸರ್ಕಾರದ ಕೌಂಟ್‍ಡೌನ್ ಆರಂಭ: ಆರ್. ಅಶೋಕ್

    ಬಿಜೆಪಿಗೆ ಡಬಲ್ ಸೀಟ್, ಸರ್ಕಾರದ ಕೌಂಟ್‍ಡೌನ್ ಆರಂಭ: ಆರ್. ಅಶೋಕ್

    ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ನೋಡುವಾಗ ಈ ಸಮ್ಮಿಶ್ರ ಸರ್ಕಾರದ ಕೌಂಟ್‍ಡೌನ್ ಶುರುವಾಗಿದೆ ಎಂದು ಬಿಜೆಪಿ ಮುಖಂಡ ಆರ್. ಆಶೋಕ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಂದಿದ್ದ ಹೊಸ ಸರ್ಕಾರಕ್ಕೆ ಬೆಂಬಲ ಸಿಗುತ್ತದೆ. ಕುಮಾರಸ್ವಾಮಿ ಅವರು ದೊಡ್ಡ ಅಂತರದಲ್ಲಿ ಇಡೀ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಅಂತ ಹೇಳಿದ್ದರು. ಆದರೆ ಈ ಸ್ಥಳೀಯ ಸಂಸ್ಥೆಗಳ ಚುನವಾಣೆಯಲ್ಲಿ ಜೆಡಿಎಸ್ ಒಂದು ರೀತಿ ಹೀನಾಯ ಸ್ಥಿತಿಗೆ ಹೋಗಿರುವುದು ಗೊತ್ತಾಗುತ್ತಿದೆ ಎಂದು ವ್ಯಂಗ್ಯವಾಗಿ ಹೇಳಿದರು.

    ಕಾಂಗ್ರೆಸ್ ಕೂಡ ಕಳೆದ ಬಾರಿ ಗೆದ್ದಿದ್ದ ಸ್ಥಾನಕ್ಕಿಂತ ಕಡಿಮೆ ಸ್ಥಾನವನ್ನು ಗಳಿಸಿದ್ದು, ಸ್ಥಾನಗಳನ್ನು ಕಳೆದುಕೊಂಡಿರುವುದು ಕಾಣುತ್ತದೆ. ಕೆಲವು ಮಹಾನಗರ ಪಾಲಿಕೆ, ಪುರಸಭೆ ಮತ್ತು ನಗರಸಭೆಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಗಳಿಸಿದೆ. ಕಳೆದ ಬಾರಿಗಿಂತ ಡಬಲ್ ಸೀಟುಗಳು ಬಿಜೆಪಿ ಕಡೆ ವಾಲಿದೆ. ಆದ್ದರಿಂದ ನನಗೆ ಎಲ್ಲೋ ಒಂದು ಕಡೆ ಈ ಸರ್ಕಾರದ ಕೌಂಟ್‍ಡೌನ್ ಶುರುವಾಗಿದೆ ಅನ್ನಿಸುತ್ತದೆ ಎಂದು ಹೇಳಿದ್ದಾರೆ.

    ಈ ಫಲಿತಾಂಶಕ್ಕೆ ಜೆಡಿಎಸ್ ನ ಪ್ರಾಬಲ್ಯ ಮತ್ತು ಕಾಂಗ್ರೆಸ್ಸಿನ ಜಗಳ ಇರಬಹುದು. ಇವರ ಮಧ್ಯೆ ಇಂದು ರಾಜ್ಯದ ಜನರು, ಸಾಮಾನ್ಯವಾಗಿ ಯಾವ ಸರ್ಕಾರ ಅಧಿಕಾರದಲ್ಲಿ ಇರುತ್ತದೋ ಆ ಸರ್ಕಾರಕ್ಕೆ ಸಾರ್ವಜನಿಕರು ಬೆಂಬಲ ಕೊಡುತ್ತಾರೆ. ಆದ್ದರಿಂದ ಈ ಚುನಾವಣೆಯಲ್ಲಿ ಜನರು ಬೆಂಬಲ ಕೊಡುವುದು ಸರ್ವೇ ಸಾಮಾನ್ಯ. ಆದರೆ ಎಲ್ಲೂ ಕೂಡ ಈ ಸರ್ಕಾರಕ್ಕೆ ಸ್ಪಷ್ಟ ಬಹುಮತ ಬಂದಿಲ್ಲ ಎಂದ್ರು.

    ಮೈಸೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಸ್ಪಷ್ಟ ಬಹುಮತ ಲಭಿಸಿಲ್ಲ. ಜೆಡಿಎಸ್ ನ ಭದ್ರಕೋಟೆಯಾದ ಹಾಸನದಲ್ಲೂ ಸ್ಪಷ್ಟ ಬಹುಮತ ಸಿಗಲಿಲ್ಲ. ಶಿವಮೊಗ್ಗದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಇದೆಲ್ಲವನ್ನು ನೋಡಿದರೆ ಈ ಸರ್ಕಾರಕ್ಕೆ ಜನ ಬೆಂಬಲ ಇಲ್ಲ ಎಂದು ಅನಿಸುತ್ತದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv