Tag: ಆರ್‍ಆರ್‍ಆರ್ ಸಿನಿಮಾ

  • ಆಸ್ಕರ್ ಗೆದ್ದು ತಾಯ್ನಾಡಿಗೆ ವಾಪಸ್ ಆದ ರಾಮ್ ಚರಣ್ ನೋಡಲು ಮುಗಿಬಿದ್ದ ಫ್ಯಾನ್ಸ್

    ಆಸ್ಕರ್ ಗೆದ್ದು ತಾಯ್ನಾಡಿಗೆ ವಾಪಸ್ ಆದ ರಾಮ್ ಚರಣ್ ನೋಡಲು ಮುಗಿಬಿದ್ದ ಫ್ಯಾನ್ಸ್

    `ಆರ್‌ಆರ್‌ಆರ್’ ಸಿನಿಮಾ ರಿಲೀಸ್ ಆದ ದಿನದಿಂದ ಇಂದಿನವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ದಾಖಲೆ ಮಾಡುತ್ತಲೇ ಬಂದಿದೆ. ಆಸ್ಕರ್ ವೇದಿಕೆಯಲ್ಲಿ ಇಂಡಿಯನ್ ಸಿನಿಮಾ RRR ಚಿತ್ರದ `ನಾಟು ನಾಟು’ ಹಾಡಿಗೆ ಆಸ್ಕರ್ (Oscars 2023) ಗೆದ್ದು ಬೀಗಿದೆ. ಇದೀಗ ಆಸ್ಕರ್ ಗೆದ್ದು ತಾಯ್ನಾಡಿಗೆ ವಾಪಸ್ ಆದ ರಾಮ್ ಚರಣ್ (Ram Charan) ನೋಡಲು ದೆಹಲಿ ಏರ್‌ಪೋರ್ಟ್‌ನಲ್ಲಿ ಫ್ಯಾನ್ಸ್ ಮುತ್ತಿಕೊಂಡಿದ್ದಾರೆ.

    ರಾಜಮೌಳಿ (Rajamouli) ನಿರ್ದೇಶನದ RRR ಸಿನಿಮಾ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. `ನಾಟು ನಾಟು’ ಹಾಡಿಗೆ ಓರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಗಿಟ್ಟಿಸಿಕೊಂಡಿತ್ತು. ಚಿತ್ರದಲ್ಲಿ `ನಾಟು ನಾಟು’ ಹಾಡಿಗೆ ರಾಮ್ ಚರಣ್- ಜ್ಯೂ.ಎನ್‌ಟಿಆರ್ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಇಬ್ಬರ ಸ್ಟಾರ್ಸ್‌ ಡ್ಯಾನ್ಸ್‌ಗೆ ಸಿನಿಪ್ರಿಯರು ಬೋಲ್ಡ್ ಆಗಿದ್ದರು. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಸ್ತ್ ಆಗಿ ಕಂಗೊಳಿಸಿದ ರಾಗಿಣಿ

    ಆಸ್ಕರ್ ಸಮಾರಂಭ ಮತ್ತು ಪಾರ್ಟಿ ಮುಗಿಸಿ ಇದೀಗ ರಾಮ್ ಚರಣ್ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟ ಏರ್‌ಪೋರ್ಟ್‌ನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಅದ್ದೂರಿ ಸ್ವಾಗತಕ್ಕೆ ಕಾದು ನಿಂತಿದ್ದರು. ಅಪಾರ ಸಂಖ್ಯೆಯ ಜನ ರಾಮ್ ಚರಣ್ ಕಾರನ್ನು ಸುತ್ತುವರೆದರು. ರಾಮ್ ಚರಣ್ ಎಂದು ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ರಾಮ್ ಚರಣ್ ಎಲ್ಲರತ್ತ ಕೈ ಬೀಸಿ ಕಾರಿನಲ್ಲಿ ಸಾಗಿದರು. ಚರಣ್ ಎಂಟ್ರಿ ಕೊಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಮ್ ಚರಣ್ ಮತ್ತು ಪತ್ನಿ ಉಪಾಸನಾ (Upasana) ಇಬ್ಬರೂ ಬ್ಲ್ಯಾಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಯಲ್ಲಿ ಮುದ್ದು ನಾಯಿ ಕೂಡ ಇರುವುದು ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Viral Bhayani (@viralbhayani)

    ಈ ವೇಳೆ ರಾಮ್ ಚರಣ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಸುತ್ತುವರೆದ ಅಭಿಮಾನಿಗಳನ್ನ ಕಂಟ್ರೋಲ್ ಮಾಡೋದೇ ಪೊಲೀಸ್‌ರಿಗೆ ಹರಸಾಹಸ ಪಡುವಂತೆ ಆಗಿದೆ.

  • ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕಂಗೊಳಿಸಿದ ದೀಪಿಕಾ ಪಡುಕೋಣೆ

    ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕಂಗೊಳಿಸಿದ ದೀಪಿಕಾ ಪಡುಕೋಣೆ

    ಬಾಲಿವುಡ್ (Bollywood) ಬ್ಯೂಟಿ ದೀಪಿಕಾ ಪಡುಕೋಣೆ (Deepika Padukone) ಅವರು ಭಾರತೀಯ ಚಿತ್ರರಂಗವನ್ನು (India) ಪ್ರತಿನಿಧಿಸಿ ಆಸ್ಕರ್ ಅವಾರ್ಡ್‌ನಲ್ಲಿ ನಿರೂಪಣೆ ಮಾಡಿದ್ದರು. ʻನಾಟು ನಾಟುʼ ಹಾಡಿನ ಬಗ್ಗೆ ಮೆಚ್ಚುಗೆ ಸೂಚಿಸಿ, ಹಾಡಿನ ವಿಶೇಷತೆಯನ್ನು ವಿವರಿಸಿದರು. ಇದೀಗ ಆಸ್ಕರ್ ಸಮಾರಂಭದಲ್ಲಿ ನಟಿ ಬೋಲ್ಡ್ ಲುಕ್‌ನಿಂದ ಕಂಗೊಳಿಸಿದ್ದಾರೆ. ಈ ಫೋಟೋಶೂಟ್ ಸದ್ಯ ಸದ್ದು ಮಾಡ್ತಿದೆ. ಇದನ್ನೂ ಓದಿ: Oscar-ಆಸ್ಕರ್ ಪ್ರಶಸ್ತಿ ಪಡೆದ ನಾಟು ನಾಟು ‘ಲಹರಿ’ಯ ಹಾಡು ನೀವಿನ್ನೂ ನೋಡಿಲ್ವಾ?

    ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಪಡುಕೋಣೆ ಆಸ್ಕರ್ ಅಂಗಳದಲ್ಲಿ ಸದ್ದು ಮಾಡ್ತಿದ್ದಾರೆ. ಒಂದ್ ಕಡೆ ನಿರೂಪಣೆಯ ವಿಚಾರವಾಗಿ ಗಮನ ಸೆಳೆದಿದ್ದರೆ, ಇನ್ನೊಂದ್ ಕಡೆ ತನ್ನ ಭಿನ್ನ ಡ್ರೆಸ್ ಸೆನ್ಸ್‌ನಿಂದ ನಟಿ ಹೈಲೈಟ್ ಆಗಿದ್ದಾರೆ.

    ಕ್ಲಾಸಿ ಕಪ್ಪು ಬಣ್ಣದ ಗೌನ್‌ನಲ್ಲಿ ದೀಪಿಕಾ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಕಪ್ಪು ಬಣ್ಣದ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಅದಷ್ಟೇ ಅಲ್ಲದೇ, ಪಿಂಕ್ ಬಣ್ಣದ ಮಾಡ್ರನ್ ಡ್ರೆಸ್‌ನಲ್ಲಿ ಕೂಡ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಸ್ಕರ್ ಅವಾರ್ಡ್ ಕಾರ್ಯಕ್ರಮ ಮುಗಿದ ಮೇಲೆ ಪಾರ್ಟಿ ಅರೆಂಜ್ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಪಿಂಕ್ ಬಣ್ಣದ ಧಿರಿಸಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Deepika Padukone (@deepikapadukone)

    ಇನ್ನೂ ಆಸ್ಕರ್ ವೇದಿಕೆಯಲ್ಲಿ ಭಾರತವು ಎರಡು ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದೆ. ಬೆಸ್ಟ್ ಕಿರುಚಿತ್ರ ವಿಭಾಗದಲ್ಲಿ `ದಿ ಎಲಿಫೆಂಟ್ ವಿಸ್ಪರರ್ಸ್’ ಮತ್ತು ಅತ್ಯುತ್ತಮ ಒರಿಜಿನಲ್ ಸಾಂಗ್ ವಿಭಾಗದಲ್ಲಿ `ಆರ್‌ಆರ್‌ಆರ್’ ಚಿತ್ರದ ನಾಟು ನಾಟು ಸಾಂಗ್ ಪ್ರಶಸ್ತಿ ಬಾಚಿಕೊಂಡಿದೆ. ʻನಾಟು ನಾಟುʼ ಹಾಡಿಗೆ ಚಿತ್ರತಂಡ ಪ್ರಶಸ್ತಿ ಪಡೆಯುವಾಗ ದೀಪಿಕಾ ಭಾವುಕರಾಗಿದ್ದಾರೆ.

  • `ನಾಟು ನಾಟು’ ಆಸ್ಕರ್‌ ಗೆದ್ದಿದ್ದಕ್ಕೆ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ

    `ನಾಟು ನಾಟು’ ಆಸ್ಕರ್‌ ಗೆದ್ದಿದ್ದಕ್ಕೆ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ

    ಡೀ ವಿಶ್ವವೇ ಕಾಯುತ್ತಿದ್ದ ಆಸ್ಕರ್ 2023 ಸಮಾರಂಭಕ್ಕೆ ತೆರೆಬಿದ್ದಿದೆ. ಭಾರತವು 2 ಪ್ರಶಸ್ತಿಯನ್ನ ಬಾಚಿಕೊಂಡಿದೆ. ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ (Naatu Naatu) ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ತನ್ನದಾಗಿಸಿಕೊಂಡಿದೆ. ಈ ವೇಳೆ ನಟಿ ದೀಪಿಕಾ ಪಡುಕೋಣೆ ಭಾವುಕರಾಗಿದ್ದಾರೆ. ಎಂ.ಎಂ ಕೀರವಾಣಿ ಅವರು ಪ್ರಶಸ್ತಿ ಪಡೆಯುವಾಗ ದೀಪಿಕಾ ಗಳಗಳನೆ ಅತ್ತಿದ್ದಾರೆ. ಇದನ್ನೂ ಓದಿ: Oscar-ಆಸ್ಕರ್ ಪ್ರಶಸ್ತಿ ಪಡೆದ ನಾಟು ನಾಟು ‘ಲಹರಿ’ಯ ಹಾಡು ನೀವಿನ್ನೂ ನೋಡಿಲ್ವಾ?

    ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಚಿತ್ರದ ನಾಟು ನಾಟು ಹಾಡಿಗೆ ಎಂ.ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದರು. ವಿಶ್ವದೆಲ್ಲೆಡೆ ಈ ಸಾಂಗ್ ಟ್ರೆಂಡ್ ಸೃಷ್ಟಿಸಿತ್ತು. ಈಗ ಆಸ್ಕರ್ ವೇದಿಕೆಯಲ್ಲೂ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದು ಕೊಟ್ಟಿದೆ.

    ಈ ವರ್ಷದ ಆಸ್ಕರ್ (Oscars 2023) ವೇದಿಕೆಯಲ್ಲಿ ದೀಪಿಕಾ ಪಡುಕೋಣೆ (Deepika Padukone) ನಿರೂಪಣೆ (Anchoring) ಮಾಡಿರೋದು ಮತ್ತೊಂದು ಹೆಮ್ಮೆಯ ಸಂಗತಿ. ವೇದಿಕೆಯಲ್ಲಿ ನಾಟು ನಾಟು ಸಾಂಗ್‌ನ ವಿಶೇಷತೆ ಬಗ್ಗೆ ನಟಿ ಹೇಳಿದರು. ಚಿತ್ರದ ಬಗ್ಗೆ ದೀಪಿಕಾ ಮೆಚ್ಚುಗೆ ಸೂಚಿದರು. ವಿನ್ನರ್ ಅನೌನ್ಸ್‌ಮೆಂಟ್ ಬಳಿಕ `ಆರ್‌ಆರ್‌ಆರ್’ (RRR) ಟೀಂ ವೇದಿಕೆ ಮೇಲೆ ಏರುತ್ತಿದ್ದಂತೆ ಕೆಳಗೆ ಕುಳಿತಿದ್ದ ದೀಪಿಕಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಇಂಡಿಯಾ ಸಿನಿಮಾಗೆ ಸಂದ ಗೌರವಕ್ಕೆ ನಟಿ ಹೆಮ್ಮೆ ಪಟ್ಟಿದ್ದಾರೆ.

    `ಆರ್‌ಆರ್‌ಆರ್’ ತಂಡದಿಂದ ನಟಿ ದೂರ ಕುಳಿತಿದ್ದರು ಕೂಡ. ತಂಡಕ್ಕೆ ದೀಪಿಕಾ ಬೆಂಬಲ ಸೂಚಿಸಿದ್ದಾರೆ. ಭಾರತಕ್ಕೆ ಎರಡು ಪ್ರಶಸ್ತಿ ಸಿಕ್ಕ ಸಂಭ್ರಮದಲ್ಲಿ ನಟಿ ಭಾವುಕರಾಗಿದ್ದಾರೆ. ಈ ಕುರಿತ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

  • ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಹಾಡಿಗೆ ಕುಣಿಯಲಿರುವ ಈ ಯುವತಿ ಯಾರು?

    ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಹಾಡಿಗೆ ಕುಣಿಯಲಿರುವ ಈ ಯುವತಿ ಯಾರು?

    ಸ್ಕರ್ 2023 (Oscars 2023) ಪ್ರಶಸ್ತಿ ಪ್ರದಾನ ಆರಂಭವಾಗಲು ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿ ತೆಲುಗಿನ ʻಆರ್‌ಆರ್‌ಆರ್ʼ ಚಿತ್ರದ `ನಾಟು ನಾಟು’ (Naatu Naatu Song) ಸಾಂಗ್ ಆಸ್ಕರ್‌ಗೆ ನಾಮಿನೇಟ್ ಆಗಿದ್ದು, ಗೆಲ್ಲುವ ಭರವಸೆ ಕೂಡ ಮೂಡಿಸಿದೆ. ಈ ವೇದಿಕೆಯ ಮೇಲೆ ರಾಹುಲ್ ಸಿಪ್ಲಿಗಂಜ ಮತ್ತು ಕಾಲಭೈರವ ಅವರು ಲೈವ್ ಆಗಿ ಹಾಡಲಿದ್ದಾರೆ. ಅವರ ಹಾಡಿಗೆ ರಾಮ್ ಚರಣ್- ಜ್ಯೂ.ಎನ್‌ಟಿಆರ್ (Jr.Ntr) ಬದಲು ಅಮೆರಿಕದ ಯುವತಿಯೊಬ್ಬರು ಹೆಜ್ಜೆ ಹಾಕಲಿದ್ದಾರೆ.

    ರಾಜಮೌಳಿ (Rajamouli) ನಿರ್ದೇಶನದ `ಆರ್‌ಆರ್‌ಆರ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಚಿತ್ರದ ನಾಟು ನಾಟು ಸಾಂಗ್ ಈಗಾಗಲೇ `ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಕೂಡ ಬಾಚಿಕೊಂಡಿದೆ. ಇದೇ ಹಾಡು ಈಗ ಆಸ್ಕರ್ ಅವಾರ್ಡ್‌ಗೆ ನಾಮಿನೇಟ್ ಆಗಿದೆ. ಈ ಹಿಂದೆ ನಾಟು ನಾಟು ಹಾಡಿಗೆ ರಾಮ್‌ಚರಣ್- ಜ್ಯೂ.ಎನ್‌ಟಿಆರ್ ಡ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಮಯದ ಅಭಾವದಿಂದ ಕೈಬೀಡಲಾಯಿತು. ಈ ಸುವರ್ಣಾವಕಾಶ ಅಮೆರಿಕದ ನಟಿ ಲಾರೆನ್ ಗೋತ್ಲಿಬ್ ಅವರ  (Lauren Gottileb) ಪಾಲಾಗಿದೆ.

    ಅಮೆರಿಕದ ನಟಿ ಲಾರೆನ್ (Lauren) ಅವರು ಈಗಾಗಲೇ ಹಿಂದಿ ಸಿನಿಮಾ ಮತ್ತು ಕಿರುತೆರೆಯ ಡ್ಯಾನ್ಸ್‌ ಶೋಗಳಲ್ಲಿ ಗುರುತಿಸಿಕೊಂಡಿದ್ದಾರೆ. ಖ್ಯಾತ ನಟ ಪ್ರಭುದೇವ ನಟಿಸಿ, ರೆಮೊ ಡಿಸೋಜಾ ನಿರ್ದೇಶನ ಮಾಡಿದ್ದ `ಎಬಿಸಿಡಿ’ ಸಿನಿಮಾದಲ್ಲಿಯೂ ನಟಿಸಿದರು. ಆ ಬಳಿಕ ಸಾಲು ಸಾಲು ಹಿಂದಿ ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಲೇ ಬಂದಿದ್ದಾರೆ.

    ತಮಗೆ ನಾಟು-ನಾಟು ಹಾಡಿಗೆ ಆಸ್ಕರ್‌ನಲ್ಲಿ ಡ್ಯಾನ್ಸ್‌ಗೆ ಅವಕಾಶ ದೊರತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದ ಲಾರೆನ್, ವಿಶೇಷ ಸುದ್ದಿ, ನಾನು ಆಸ್ಕರ್‌ನಲ್ಲಿ ನಾಟು-ನಾಟು ಹಾಡಿಗೆ ವಿಶೇಷ ಪ್ರದರ್ಶನ ನೀಡಲಿದ್ದೇನೆ. ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಉತ್ಸುಕಳಾಗಿದ್ದೇನೆ. ನಿಮ್ಮ ಶುಭ ಹಾರೈಕೆಗಳಿರಲಿ ಎಂದು ಬರೆದುಕೊಂಡಿದ್ದರು. ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ನಟಿಗೆ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಬಿದಿರಿನ ಉಡುಪಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ಉರ್ಫಿ ಜಾವೇದ್

     

    View this post on Instagram

     

    A post shared by Lauren Gottlieb (@laurengottlieb)

    ʻನಾಟು-ನಾಟುʼ ಹಾಡಿಗೆ ತಾವು ತಮ್ಮ ತಂಡದೊಂದಿಗೆ ತಯಾರಿ ಮಾಡುತ್ತಿರುವ ಕೆಲವು ವಿಡಿಯೋಗಳನ್ನು ಸಹ ಲಾರೆನ್ ಹಂಚಿಕೊಂಡಿದ್ದರು. ಮಾರ್ಚ್ 12 ರಂದು (ಭಾರತದ ಕಾಲಮಾನದಂತೆ ಮಾರ್ಚ್ 13) ಲಾಸ್ ಏಂಜಲಸ್‌ನ ಆಸ್ಕರ್ ಮುಖ್ಯ ವೇದಿಕೆಯಲ್ಲಿ ತಮ್ಮ ತಂಡದೊಂದಿಗೆ ಲಾರೆನ್ ನಾಟು-ನಾಟು ಹಾಡಿಗೆ ಕುಣಿಯಲಿದ್ದಾರೆ.

  • ರಾಯಚೂರು ಜಿಲ್ಲೆ ಚುನಾವಣಾ ರಾಯಭಾರಿಯಾಗಿ ನಿರ್ದೇಶಕ ರಾಜಮೌಳಿ ಆಯ್ಕೆ

    ರಾಯಚೂರು ಜಿಲ್ಲೆ ಚುನಾವಣಾ ರಾಯಭಾರಿಯಾಗಿ ನಿರ್ದೇಶಕ ರಾಜಮೌಳಿ ಆಯ್ಕೆ

    ರಾಜ್ಯದಲ್ಲಿ ರಾಜಕೀಯ (Politics) ಕಾವು ಜೋರಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ತೆರೆಮರೆಯಲ್ಲಿ ತಯಾರಿ ಜೋರಾಗಿ ನಡೆಯುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಜಾಗೃತಿಗಾಗಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಚುನಾವಣಾ ನೇಮಕ ಮಾಡಲಾಗಿದೆ. ಅದರಂತೆಯೇ ರಾಯಚೂರು (Raichur) ಜಿಲ್ಲೆಗೆ ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಅವರನ್ನು ಚುನಾವಣಾ (Election) ರಾಯಭಾರಿಯಾಗಿ (Ambassador) ನೇಮಕ ಮಾಡಿದೆ. ಇದನ್ನೂ ಓದಿ: ಅಪ್ಪು ನಟಿಸಬೇಕಿದ್ದ ಕತೆಯಲ್ಲಿ ವಿನಯ್ ರಾಜ್‌ಕುಮಾರ್ ಹೀರೋ

    ರಾಜಮೌಳಿ ಅವರು ತನ್ನ ಹುಟ್ಟೂರಿಗೆ ಚುನಾವಣಾ ರಾಯಭಾರಿಯಾಗಿರುವುದು ವಿಶೇಷ. ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ ಸೇರಿ ಹತ್ತು ಜಿಲ್ಲೆಗಳಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಚುನಾವಣಾ ರಾಯಭಾರಿಗಳಾಗಿ ನೇಮಕ ಮಾಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಪೈಕಿ ರಾಜಮೌಳಿ ಹೆಸರು ಸಾಕಷ್ಟು ಗಮನ ಸೆಳೆದಿದೆ. ಎಸ್.ಎಸ್ ರಾಜಮೌಳಿ ಅವರನ್ನ ನೇಮಕ ಮಾಡಿರುವ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.

    ರಾಯಚೂರು ಜಿಲ್ಲೆ ಕರ್ನಾಟಕ ಹಾಗೂ ಆಂಧ್ರ ಗಡಿಯಲ್ಲಿದೆ. ಇದರ ಜೊತೆಗೆ ರಾಜಮೌಳಿಗೆ ರಾಯಚೂರು ಜಿಲ್ಲೆಯ ಕನೆಕ್ಷನ್ ಕೂಡ ಇದೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಆಂಧ್ರದಲ್ಲಿ ಜಮೀನು ಹೊಂದಿದ್ದರು. ಆದರೆ, ರೈಲ್ವೇ ಟ್ರ‍್ಯಾಕ್ ನಿರ್ಮಾಣದಿಂದ ಜಮೀನನ್ನು ಕಳೆದುಕೊಂಡರು. ಈ ವೇಳೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು 1968ರಲ್ಲಿ ರಾಯಚೂರಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ 7 ಎಕರೆ ಭತ್ತದ ಜಮೀನು ಪಡೆದು ಅಲ್ಲಿಯೇ ಕೃಷಿ ಮಾಡಿದರು. ರಾಜಮೌಳಿ ಹುಟ್ಟಿದ್ದು 1973ರಲ್ಲಿ. 1977ರಲ್ಲಿ ವಿಜಯೇಂದ್ರ ಪ್ರಸಾದ್ ಅವರು ಕುಟುಂಬ ಸಮೇತ ಮತ್ತೆ ಆಂಧ್ರ ಪ್ರದೇಶಕ್ಕೆ ತೆರಳಿದರು. ಹೀಗಾಗಿ, ರಾಜಮೌಳಿಗೆ ರಾಯಚೂರು ಜಿಲ್ಲೆಯ ಬಗ್ಗೆ ವಿಶೇಷ ಗೌರವ ಇದೆ.

    ಪ್ರತಿಯೊಬ್ಬರೂ ಮತನದಾನ ಮಾಡಬೇಕು ಎಂದು ಸರ್ಕಾರ ಜಾಗೃತಿ ಮೂಡಿಸುತ್ತದೆ. ಆಯಾ ಜಿಲ್ಲೆಯ ರಾಯಭಾರಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತದೆ. ಇದಕ್ಕಾಗಿ ಏರ್ಪಡಿಸುವ ವಿವಿಧ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ ಭಾಗಿಯಾಗಲಿದ್ದಾರೆ.