Tag: ಆರ್ಯವರ್ಧನ ಗುರೂಜಿ

  • ಬಿಗ್ ಬಾಸ್‌ಗೆ ಬರಲು‌ ಸುದೀಪ್‌ ಸಂಭಾವನೆ ಲೆವೆಲ್‌ಗೆ ಪೇಮೆಂಟ್ ಕೇಳಿದ್ದೆ: ಆರ್ಯವರ್ಧನ್

    ಬಿಗ್ ಬಾಸ್‌ಗೆ ಬರಲು‌ ಸುದೀಪ್‌ ಸಂಭಾವನೆ ಲೆವೆಲ್‌ಗೆ ಪೇಮೆಂಟ್ ಕೇಳಿದ್ದೆ: ಆರ್ಯವರ್ಧನ್

    ಬಿಗ್ ಬಾಸ್ (Bigg Boss) ಸೀಸನ್ 9ಕ್ಕೆ ಆರ್ಯವರ್ಧನ್ ಗುರೂಜಿ (Aryavardhan) ಕಾಲಿಟ್ಟಿದ್ದರು. ಟಾಸ್ಕ್, ಮನರಂಜನೆ, ಅಡುಗೆ ಅಂತಾ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದರು. ಆದರೆ ಫಿನಾಲೆ ಅಂತಿಮ ಘಟ್ಟದಲ್ಲಿರುವಾಗ ಮಿಡ್ ನೈಟ್ ಎಲಿಮಿನೇಟ್ ಆಗಿ ಹೊರಬಂದರು. ಈಗ ದೊಡ್ಮನೆಗೆ ಎಂಟ್ರಿ ಕೊಡಲು ಸುದೀಪ್ ಸರ್ ಸಂಭಾವನೆ (Kiccha Sudeep) ಲೆವೆಲ್‌ಗೆ ಪೇಮೆಂಟ್ ಮಾತನಾಡಿದ್ದೆ ಎಂದು ಆರ್ಯವರ್ಧನ್ ಗುರೂಜಿ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

    ಆರ್ಯವರ್ಧನ್ ಒಟಿಟಿ ಮತ್ತು ಟಿವಿ ಬಿಗ್ ಬಾಸ್ ಎರಡರಲ್ಲೂ ಆಕ್ಟೀವ್ ಆಗಿದ್ದರು. ಬಾಡಿ ಶೇಮಿಂಗ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ಎಲ್ಲದರಲ್ಲೂ ಮುಂದಿರುತ್ತಿದ್ದರು. ಇತ್ತೀಚೆಗೆ ನಡುರಾತ್ರಿ ಎಲಿಮಿನೇಷನ್ ಮೂಲಕ ಗುರೂಜಿ ಆಟಕ್ಕೆ ಬ್ರೇಕ್ ಬಿದ್ದಿತ್ತು. ಫಿನಾಲೆ ಬಾಗಿಲಿಗೆ ಕದ ತಟ್ಟುವ ಮುನ್ನವೇ ಗುರೂಜಿ ಹೊರಬಂದರು. ಈಗ ಬಿಗ್ ಬಾಸ್‌ಗೆ ಬರಲು ಸುದೀಪ್ ಸರ್ ಸಂಭಾವನೆ ಲೆವೆಲ್‌ಗೆ ಪೇಮೆಂಟ್ ಮಾತನಾಡಿದ್ದೆ ಎಂದು ಗುರೂಜಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ರಾಕೇಶ್ ಅಡಿಗ ಬಿಗ್‌ ಬಾಸ್ ವಿನ್ ಆಗಬೇಕು ಆದ್ರೆ ನನಗೆ ರೂಪೇಶ್ ಶೆಟ್ಟಿ ಇಷ್ಟ: ದಿವ್ಯಾ ಸುರೇಶ್

    ಕಳೆದ 8 ಸೀಸನ್‌ನಿಂದ ನನಗೆ ಬಿಗ್ ಬಾಸ್ ತಂಡದಿಂದ ಆಫರ್ ಬರುತ್ತಿತ್ತು. ಆದರೆ ಎಲ್ಲಿ ಈ ಶೋಗೆ ಹೋದರೆ ನನ್ನ ವೃತ್ತಿ ಜೀವನಕ್ಕೆ ಹೊಡೆತ ಬೀಳುತ್ತೆ ಎಂದು ಹೆದರಿ ಹೋಗಿರಲಿಲ್ಲ. ಆದರೆ ಈ ಬಾರಿ ವಾಹಿನಿ ಮುಖ್ಯಸ್ಥ ಪರವೇಶ್ವರ್ ಗುಂಡ್ಕಲ್ ಮಾತಿಗೆ ಬೆಲೆ ಕೊಟ್ಟು ಹೋಗಿದ್ದೆ. ಇನ್ನೂ ಬಿಗ್ ಬಾಸ್ ಮನೆಗೆ ಬರಲು ಸುದೀಪ್ ಸರ್ ಸಂಭಾವನೆ ಲೆವೆಲ್‌ಗೆ ಪೇಮೆಂಟ್ ಡಿಮ್ಯಾಂಡ್ ಮಾಡಿದ್ದೆ. ಬಿಗ್ ಬಾಸ್ ಟೀಮ್ ಈ ಬಗ್ಗೆ ಗಾಬರಿಯಾಗಿದ್ದರು. ಕೊನೆಗೆ ಎಲ್ಲರಿಗಿಂತ ಕಮ್ಮಿ ಪೇಮೆಂಟ್‌ಗೆ ಒಪ್ಪಿಕೊಂಡು ಹೋದೆ ಎಂದು ಗುರೂಜಿ ಹೇಳಿದ್ದಾರೆ.

    ಇನ್ನೂ ಈ ಬಾರಿ ಬಿಗ್ ಬಾಸ್ ಪಟ್ಟವನ್ನ ನನ್ನ ಮಗ ರೂಪೇಶ್ ಶೆಟ್ಟಿ ಗೆಲ್ಲಬೇಕು ಎಂದು ಆಶಿಸುತ್ತೇನೆ. ಅವರೇ ಗೆಲ್ಲುತ್ತಾರೆ ಎಂದು ಆರ್ಯವರ್ಧನ್ ಗುರೂಜಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಿವ್ಯಾ- ಅರವಿಂದ್ ಮದುವೆ ಆದರೆ ಡಿವೋರ್ಸ್ ಗ್ಯಾರಂಟಿ: ಆರ್ಯವರ್ಧನ್

    ದಿವ್ಯಾ- ಅರವಿಂದ್ ಮದುವೆ ಆದರೆ ಡಿವೋರ್ಸ್ ಗ್ಯಾರಂಟಿ: ಆರ್ಯವರ್ಧನ್

    ಬಿಗ್ ಬಾಸ್ ಮನೆ (Bigg Boss House) ಆಟ ಗ್ರ್ಯಾಂಡ್‌ ಫಿನಾಲೆಗೆ ಲಗ್ಗೆ ಇಡ್ತಿದ್ದಂತೆ ದೊಡ್ಮನೆಯಿಂದ ಆರ್ಯವರ್ಧನ್ ಗುರೂಜಿ ಹೊರಬಂದಿದ್ದಾರೆ. ಮಿಡ್ ನೈಟ್‌ನಲ್ಲಿ ಎಲಿಮಿನೇಟ್ ಆಗುವ ಮೂಲಕ ಗುರೂಜಿ ಆಟಕ್ಕೆ ಬ್ರೇಕ್ ಬಿದ್ದಿದೆ. ದೊಡ್ಮನೆಯಲ್ಲಿ ದಿವ್ಯಾ (Divya Uruduga) ಮತ್ತು ಅರವಿಂದ್ (Aravind Kp) ಮದುವೆಯಾದರೆ ಡಿವೋರ್ಸ್ (Divorce) ಆಗುತ್ತೆ ಎಂಬ ಮಾತನ್ನ ಹೇಳಿದ್ದರು. ಇದೀಗ ಈ ಬಗ್ಗೆ ಗುರೂಜಿ ಮಾತನಾಡಿದ್ದಾರೆ.

    ಬಿಗ್ ಬಾಸ್ ಸೀಸನ್ 8ರಲ್ಲಿ ಲವ್ ಬರ್ಡ್ಸ್ (Love Birds) ಆಗಿ ದಿವ್ಯಾ ಮತ್ತು ಅರವಿಂದ್ ಕಾಣಿಸಿಕೊಂಡಿದ್ದರು. ಈ ಶೋ ಮೂಲಕ ಇಬ್ಬರ ಪ್ರೀತಿಯ ವಿಚಾರ ಇಡೀ ಕರ್ನಾಟಕಕ್ಕೆ ಪರಿಚಯವಾಗಿತ್ತು. ಹೀಗಿರುವಾಗ ದಿವ್ಯಾ ಮತ್ತು ಅರವಿಂದ್ ಮದುವೆ ಆದರೆ ಡಿವೋರ್ಸ್ ಆಗುತ್ತೆ ಎಂದು ಮಾತನಾಡಿದ್ದರು. ಬಿಗ್ ಬಾಸ್ ಜರ್ನಿಯ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಳ್ಳುವಾಗ ದಿವ್ಯಾ, ಅರವಿಂದ್ ಬಗ್ಗೆ ಕೂಡ ಮಾತನಾಡಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ ಮಾಡಲು ಲಂಡನ್‌ಗೆ ಹಾರಿದ ರಮ್ಯಾ- ಅಮೃತಾ

    ಯಾವಾಗಲೂ ರಾಂಗ್ ಡೇಟ್ ಬೆಸ್ಟ್ ಫ್ರೆಂಡ್ಸ್ ಆಗುತ್ತಾರೆ. ಆದರೆ ಬೆಸ್ಟ್ ಜೋಡಿಯಾಗಿ ಬದುಕೋಕೆ ಆಗಲ್ಲ. ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಗ್ಯಾರಂಟಿ ಎಂದು ಗುರೂಜಿ ಹೇಳಿದ್ದಾರೆ.

    ಇನ್ನೂ ದಿವ್ಯಾ ಉರುಡುಗ ಕೂಡ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ರೂಪೇಶ್ ಶೆಟ್ಟಿ, ರಾಕೇಶ್, ರಾಜಣ್ಣ, ದೀಪಿಕಾ, ದಿವ್ಯಾ ಈ ಐವರಲ್ಲಿ ಬಿಗ್ ಬಾಸ್ ವಿನ್ನರ್ ಪಟ್ಟ ಯಾರಿಗೆ ಸಿಗಲಿದೆ ಎಂದು ಕಾದುನೋಡಬೇಕಿದೆ. ಫಿನಾಲೆಗೆ ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

    ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

    ಬಿಗ್ ಬಾಸ್ (Bigg Boss) ಇನ್ನು ಕೇವಲ ಒಂದೇ ವಾರ ಇರುವುದು. ಏಳು ದಿನವಾದ ಮೇಲೆ ಮನೆಯ ಸದಸ್ಯರು ಮನೆಯ ಹೊರಗೆ ಇರುತ್ತಾರೆ. ಈ ಬಗ್ಗೆ ಕಿಚ್ಚ ಸುದೀಪ್ (Kichcha Sudeepa) ವಾರದ ಕಥೆಯಲ್ಲೂ ಕನ್ಫರ್ಮ್ ಮಾಡಿದ್ದಾರೆ. ಹೀಗಿರುವಾಗ ಮನೆಯಲ್ಲಿ ಉಳಿದಿರುವವರ ನಡುವೆಯೇ ಒಂದೊಳ್ಳೆ ಬಾಂಧವ್ಯ, ಒಂದೊಳ್ಳೆ ಒಡನಾಟವಿರಬೇಕು. ಆದ್ರೆ ಈಗಲೂ ಅಂತ ಒಡನಾಟ ಕೆಲವರಲ್ಲಿ ಆಗುತ್ತಿಲ್ಲ. ಒಂಟಿತನ ಎಂಬುದು ಹಲವರಲ್ಲಿ ಕಾಡುತ್ತಿದೆ. ನಿನ್ನೆಯೆಲ್ಲಾ ಸೋಮಣ್ಣ (Somanna Machimada) ಕೂಡ ನನಗು ಒಂದು ಕಂಪನಿ ಬೇಕು ಅಂತ ಫುಲ್ ಫೀಲ್ ಮಾಡಿಕೊಳ್ಳುತ್ತಿದ್ದರು. ಆದ್ರೆ ಆ ಸರದಿ ಇಂದು ಜಯಶ್ರೀಯದ್ದಾಗಿದೆ.

    ಜಯಶ್ರೀಗೆ ಚೈತ್ರಾ ಇದ್ದಾಗ ದಿನ ಹೋಗುತ್ತಿದ್ದದ್ದು ಗೊತ್ತೇ ಆಗುತ್ತಿರಲಿಲ್ಲ. ಆದರೆ ಚೈತ್ರಾ (Chaitra Hallikere) ಹೋದ ಮೇಲೆ ಅಕ್ಷರಶಃ ಕುಗ್ಗಿ ಹೋಗಿದ್ದಳು. ದಿನ ಕಳೆದರೆ ಅಳುತ್ತಾ ಕೂರುತ್ತಿದ್ದಳು. ನಂಗೆ ಇರುವುದಕ್ಕೆ ಆಗುತ್ತಿಲ್ಲ. ದಯವಿಟ್ಟು ನನ್ನನ್ನು ಕಳುಹಿಸಿ ಬಿಡಿ ಎನ್ನುತ್ತಿದ್ದಳು. ಆದ್ರೆ ಅದು ಎರಡು ದಿನ ಮಾತ್ರ. ಬಳಿಕ ಮಾಮೂಲಿಯಂತೆ ಎಲ್ಲರ ಜೊತೆ ಜಗಳವಾಡುತ್ತಾ, ಮಾತನಾಡುತ್ತಾ ಇದ್ದಾಳೆ. ಆದ್ರೆ ಅದ್ಯಾಕೋ ಬಿಗ್ ಬಾಸ್ ಮನೆಯಲ್ಲಿರುವ ಹುಡುಗರು ಇವಳನ್ನು ನೋಡುತ್ತಿಲ್ಲ ಎಂಬ ಬೇಸರ ಅವಳನ್ನು ಕಾಡುತ್ತಿದೆ. ಆ ಬಗ್ಗೆ ಗುರೂಜಿ (Aryavardhan Guruji) ಹತ್ರ ಹೇಳಿಕೊಂಡು ಗೊಳೋ ಅಂತಿದ್ದಾಳೆ. ಇದನ್ನೂ ಓದಿ: ರೂಪೇಶ್‍ಗೆ ಶುರುವಾಯ್ತು ಇಮೇಜ್ ಚಿಂತೆ – ಮಂಗ್ಳೂರು ಹುಡ್ಗಿ ಬಿಟ್ಟಳಾ ಹುಳ?

    ಬೆಳಗ್ಗೆ ಗೂರೂಜಿ, ಸೋನು (Sonu Srinivas Gowda) ಜೊತೆ ಕುಳಿತು ತಿನ್ನುತ್ತಾ ಕುಳಿತಿದ್ದಳು. ಆಗ ಏನೋ ಗುರುಗಳೇ ಎಷ್ಟೇ ಚೆನ್ನಾಗಿದ್ದರೂ, ಯಾವ ಹುಡುಗರು ನನ್ನ ಮಾತನಾಡಿಸುವುದೇ ಇಲ್ಲ ಅಂತಾರಲ್ಲ ಅಂದಿದ್ದಾಳೆ. ಆಗ ಗುರೂಜಿ ಆಯ್ತು ಬಿಡು ನಾನು ಒಂದೆರಡು ಹುಡುಗರನ್ನು ಕಳುಹಿಸಿ ಕೊಡುತ್ತೀನಿ ಎಂದಿದ್ದಾರೆ. ನಾನು ಇಷ್ಟು ಚೆನ್ನಾಗಿದ್ರು ಯಾರು ನನ್ನ ಮಾತನಾಡಿಸಲ್ಲ ಅಂತಿದ್ದಾಳೆ. ಅದ್ಕೆ ನಾನು ಹೇಳಿದ್ದೀನಿ, ಸುಮ್ನೆ ಇರು ನಮ್ಮ ಆಫೀಸಿನಲ್ಲಿ ಇರುವ ಹುಡುಗರನ್ನು ಕಳುಹಿಕೊಡ್ತೀನಿ ಅಂತ ಹೇಳಿದೆ ಎಂದು ಸೋನು ಬಳಿ ಹೇಳಿಕೊಂಡು ಗುರೂಜಿ ನಗುತ್ತಾರೆ. ಇದನ್ನೂ ಓದಿ: ಬಿಗ್ ಬಾಸ್’ ಮನೆಯಿಂದ ನಂದಿನಿ ಔಟ್

    ನಾನು ಹೇಳುತ್ತಾ ಇರುವುದು ಬಿಗ್ ಬಾಸ್ ಮನೆಯಲ್ಲಿ ಹೊರಗಡೆಯಲ್ಲ. ಹೊರಗಡೆ ಏನು ಬೇಡ ನಂಗೆ ಎಂದಿದ್ದಾಳೆ. ಆಗ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ಅವರವರನ್ನು ಮಾತನಾಡಿಸುವುಕ್ಕೆ ಸಮಯ ಇಲ್ಲ. ಇನ್ನು ನಿನ್ನ ಮಾತನಾಡಿಸುತ್ತಾರಾ ಅಂತ ಕಾಮಿಡಿ ಮಾಡಿದ್ದಾರೆ. ನಿಮಗೆ ಯಾಕೆ ಸುಮ್ನೆ ಇರು ಹೊರಗೆ ಹೋದ ಮೇಲೆ ಕಳುಹಿಸಿಕೊಡ್ತೀನಿ ಅಂದಾಗ, ಸೋನು ಮಾತನಾಡಿ, ಗುರೂಜಿಗಿಂತ ಬೇಕೆನೆ ನಿಂಗೆ. ನಮ್ಮ ಜನಗಳಿಗೆ ಎಷ್ಟು ದುರಾಸೆ ಅಂದ್ರೆ ಸಿಕ್ಕಿರುವುದನ್ನು ಬಿಟ್ಟು ಬಿಡುತ್ತಾರೆ ಎಂದಾಗ ಗುರೂಜಿ ಕೂಡ ಅದೇ ಡೈಲಾಗ್ ಹೊಡೆದಿದ್ದಾರೆ. ಗುರೂಜಿ ಯುವಕ ಅಲ್ವಲ್ಲ ಎಂದು ಜಯಶ್ರೀ (Jayashree) ಹೇಳಿದರೆ, ಗುರೂಜಿಯಲ್ಲಿಯೇ ಯುವಕನನ್ನು ನೋಡು. ಯಾಕೆ ಮಾತನಾಡಲ್ವಾ, ತುಂಟ ತುಂಟ ಮಾತನಾಡಲ್ವಾ, ಯೂಸ್ ಲೆಸ್ ಮಾತುಗಳು ಎಂದು ಸೋನು ಹೇಳಿದ್ದಾಳೆ.

    ಆಗ ಜಯಶ್ರೀ ನೋಡಿ ಗುರೂಜಿ ನಿಮ್ಮನ್ನೆ ಯೂಸ್ ಲೆಸ್ ಅಂತಿದ್ದಾಳೆ ಅಂತ ಹಾಕೊಟ್ಟಿದ್ದಾಳೆ. ಆಗ ಗುರೂಜಿ ಅವಳಿಗೆ ನಾನು ಆ ರೀತಿ ಕಂಡಿರಬಹುದು. ಆದರೆ ನಾನು ಅದಲ್ವಲ್ಲ. ನೀನು ನನ್ನಲ್ಲಿ ಒಳ್ಳೆಯವನನ್ನು ನೋಡಿದ್ದೀಯಾ, ಅವಳು ನನ್ನಲ್ಲಿ ಕೆಟ್ಟವಳನ್ನು ನೋಡಿದ್ದಾಳೆ. ಅದಕ್ಕೆ ನಾನ್ಯಾಕೆ ತಪ್ಪು ತಿಳಿದುಕೊಳ್ಳಲಿ ಅಂತ ಗುರೂಜಿ ಬುದ್ಧಿವಂತಿಕೆಯ ಮಾತನಾಡಿದ್ದಾರೆ. ಅಲ್ಲಿಗೆ ಬಂದ ರಾಕಿ(Rakesh Adiga) ಗೂ ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆಮೇಲೆ ಸೋನು ಮೇಲೆ ಒಂದು ಹಾಡನ್ನು ರಚಿಸಿ ಕಾಮಿಡಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]