Tag: ಆರ್ಯವರ್ಧನ್‌ ಗೂರೂಜಿ

  • ಕ್ಯಾಪ್ಟನ್ ಆದ ಆರ್ಯವರ್ಧನ್‌ ಗುರೂಜಿಗೆ ಮಗಳಿಂದ ಲವ್ಲಿ ವಿಶ್

    ಕ್ಯಾಪ್ಟನ್ ಆದ ಆರ್ಯವರ್ಧನ್‌ ಗುರೂಜಿಗೆ ಮಗಳಿಂದ ಲವ್ಲಿ ವಿಶ್

    ಬಿಗ್ ಬಾಸ್ ಸೀಸನ್ 9ರ(Bigg Boss Kannada 9) ಆಟ ದಿನದಿಂದ ದಿನಕ್ಕೆ ಸಾಕಷ್ಟು ಟ್ವಿಸ್ಟ್‌ಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇನ್ನೂ ಬಿಗ್ ಬಾಸ್ ಹೆಸರಿನಲ್ಲಿ ಪ್ರಾಂಕ್ ಮಾಡಿದ ಮನೆಮಂದಿಗೆ ಬಿಗ್ ಬಾಸ್ ಕೂಡ ಪ್ರಾಂಕ್ ಮಾಡಿ, ಎಚ್ಚರಿಕೆ ಕೊಟ್ಟಿದ್ದಾರೆ. ಸದ್ಯ 13ನೇ ದಿನದಿಂದ ಕ್ಯಾಪ್ಟನ್ ಆಗಿ ಆರ್ಯವರ್ಧನ್‌ ಗುರೂಜಿ (Aryavardhan Guruji) ಹೊರಹೊಮ್ಮಿದ್ದಾರೆ. ಮಗಳಿಂದ ಲವ್ಲಿ ವಿಶ್ ಕೂಡ ಗುರೂಜಿ ಪಡೆದಿದ್ದಾರೆ.

    ಬಿಗ್ ಬಾಸ್ (Bigg Boss) ತಂಡದ ಕ್ಯಾಪ್ಟನ್ ಅನುಪಮಾಗೆ ಕ್ಯಾಪ್ಟನ್ಸಿ ಆಯ್ಕೆಗೆ ಸೂಚನೆ ನೀಡಿದ್ದರು. ಅದರಂತೆ ಅಮೂಲ್ಯ, ದಿವ್ಯಾ, ಆರ್ಯವರ್ಧನ್ ಗುರೂಜಿ‌, ದರ್ಶ್‌ ಆಯ್ಕೆಯಾದರು. ತೆಂಗಿನಕಾಯಿ ಇರುವ ಮರದ ಪಟ್ಟಿಯನ್ನು ಅಡ್ಡಲಾಗಿ ಸಿಕ್ಕಿಸಿ, ಸಂಖ್ಯೆಗಳನ್ನು ಮೂಡುವಂತೆ ಮಾಡಬೇಕು. ನಾಲ್ವರು ಸದಸ್ಯರಿಗೂ ಪ್ರತ್ಯೇಕ ಫ್ರೇಮ್ ಇಡಲಾಗಿತ್ತು. ಈ ಟಾಸ್ಕ್ ನಲ್ಲಿ ಗುರೂಜಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ:ಪವನ್ ಒಡೆಯರ್ ಬಾಲಿವುಡ್ ಚಿತ್ರಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಾಯಕಿ

    ತಮ್ಮ ನೇರ ಮಾತಿನ ಮೂಲಕ ಮನೆಯವರ ಕೆಂಗಣ್ಣಿಗೆ ಆಗಾಗ ಗುರಿಯಾಗುವ ಗುರೂಜಿ, ಅಡುಗೆ, ಟಾಸ್ಕ್, ಎಲ್ಲದರಲ್ಲೂ ಮುಂದು. ಇದೀಗ 3ನೇ ವಾರದ ಕ್ಯಾಪ್ಟನ್ ಆಗಿ ಗುರೂಜಿ ಹೊರಹೊಮ್ಮಿದ್ದಾರೆ. ಕ್ಯಾಪ್ಟನ್ ಆಗಿರುವ ಗುರೂಜಿಗೆ ಅವರ ಮುದ್ದು ಮಗಳು ಕೂಡ ಶುಭಹಾರೈಸಿದ್ದಾರೆ. ವಾಯ್ಸ್‌ ನೋಟ್‌ ಮೂಲಕ ಅಪ್ಪನಿಗೆ ಮಗಳು ವಿಶ್‌ ಮಾಡಿದ್ದಾರೆ. ಈ ಮೂಲಕ ಗುರೂಜಿಗೆ ಬಿಗ್ ಬಾಸ್ ಗಿಫ್ಟ್ ಕೊಟ್ಟಿದ್ದಾರೆ. ಇದನ್ನೂ ಓದಿ:ಪವನ್ ಒಡೆಯರ್ ಬಾಲಿವುಡ್ ಚಿತ್ರಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಾಯಕಿ

    ಇನ್ನೂ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಆಡುವಾಗ ಗುರೂಜಿಗೆ ರಾಕೇಶ್ ಮತ್ತು ರೂಪೇಶ್ ಶೆಟ್ಟಿ ಸಹಾಯ ಮಾಡಿದ್ದಾರೆಂದು ಅನುಪಮಾ ಮತ್ತು ನೇಹಾ ಗೌಡ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ ಬಾಸ್‌ ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಗುರೂಜಿ

    ಬಿಗ್‌ ಬಾಸ್‌ ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಗುರೂಜಿ

    ಬಿಗ್ ಬಾಸ್ ಮನೆಯಲ್ಲಿ(Bigg Boss House) ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಆರ್ಯವರ್ಧನ್ ಗುರೂಜಿ (Aryavardhan Guruji), ನಂಬರ್ ಅಂದ್ರೆ ನಾನು ಎಂದು ಹೇಳುವ ಮೂಲಕ ಸಖತ್ ಹೈಲೆಟ್ ಆಗಿದ್ದರು. ಜ್ಯೋತಿಷ್ಯವನ್ನೇ ನಂಬಿ ಬದುಕುತ್ತಿರುವ ಗುರೂಜಿ ಇದೀಗ ದೊಡ್ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ್ದಾರೆ.

    ದೊಡ್ಮನೆ ಈಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಡು ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಕಾಲಿಗೆ ಒಂದು ಕಾಲ ಎಂಬ ಟಾಸ್ಕ್ ಅನ್ನು ಕೊಡಲಾಗಿದೆ. ದಿವ್ಯಾ ಉರುಡುಗ(Divya Uruduga) ಮತ್ತು ಸಾನ್ಯ (Sanya Iyer) ಒಂದು ಜೋಡಿ ಮತ್ತು ದೀಪಿಕಾ ಮತ್ತು ರೂಪೇಶ್ ಮತ್ತೊಂದು ಜೋಡಿಯಾಗಿ ಎರಡು ತಂಡಗಳ ಜಟಾಪಟಿ ನಡೆದಿದೆ. ಈ ವೇಳೆ ಗುರೂಜಿ ಮತ್ತು ನಟಿ ಅಮೂಲ್ಯ ಸಂಭಾಷಣೆ ಎಲ್ಲರ ನಗುವಿಗೆ ಕಾರಣವಾಗಿದೆ.

    ಟಾಸ್ಕ್ ವೀಕ್ಷಿಸುವ ಸಮಯದಲ್ಲಿ ಗುರೂಜಿ ಅಮೂಲ್ಯ ತುಟಿ ನೋಡಿ ಭವಿಷ್ಯ ನುಡಿದಿದ್ದಾರೆ. ನಿಮ್ಮ ತುಟಿ ಮೇಲೆ ಚೂಪಾಗಿದೆ. ಹೀಗಿದ್ದರೆ ಒಳ್ಳೆಯದು ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಗುರೂಜಿ ಹೇಳಿದ್ದಾರೆ. ಅವರ ಮಾತಿಗೆ ಅಮೂಲ್ಯ ನಕ್ಕಿದ್ದಾರೆ. ಇದೇ‌ ವೇಳೆ ರಾಕೇಶ್ ಅಡಿಗ ನನ್ನ ತುಟಿ ಭವಿಷ್ಯ ಹೇಳಿ ಎಂದು ಕೇಳಿದ್ದಾರೆ. ಆಗ ಗುರೂಜಿ, ನಿನ್ನ ಹಿಂದೆ ಯಾರು ಬೀಳಲ್ಲ, ನೀನೇ ಎಲ್ಲರ ಹಿಂದೆ ಹೋಗುತ್ತಿಯಾ ಟಾಂಗ್ ಕೊಟ್ಟಿದ್ದಾರೆ. ಗುರೂಜಿ ಮಾತಿಗೆ ಮನೆಮಂದಿಯೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ. ಇದನ್ನೂ ಓದಿ:ಒಂದು ವಾರಕ್ಕೆ ‘ಕಾಂತಾರ’ದ ಕಲೆಕ್ಷನ್ 50 ಕೋಟಿ: ಸಿನಿ ಪಂಡಿತರ ಅಚ್ಚರಿಯ ಲೆಕ್ಕಾಚಾರ

    ಇದೇ ವೇಳೆ ಅರುಣ್ ಸಾಗರ್ ಕೂಡ ನನ್ನ ತುಟಿ ನೋಡಿ ಭವಿಷ್ಯ ಹೇಳಿ ಎಂದಿದ್ದಾರೆ. ನೀವು ಮೊದಲು‌ ಮೀಸೆ ಬೊಳಿಸಿಕೊಂಡು ಬನ್ನಿ ಎಂದು ಗುರೂಜಿ ಚಮಕ್ ಕೊಟ್ಟಿದ್ದಾರೆ. ಈ ಮೂಲಕ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ನೇರ ಮಾತಿನ ಮೂಲಕ ಹೈಲೆಟ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀ ಮೇಲೆ ಆರ್ಯವರ್ಧನ್ ಗುರೂಜಿ ಕೋಪಿಸಿಕೊಂಡ್ರಾ?

    ಜಯಶ್ರೀ ಮೇಲೆ ಆರ್ಯವರ್ಧನ್ ಗುರೂಜಿ ಕೋಪಿಸಿಕೊಂಡ್ರಾ?

    ನುಷ್ಯನಿಗೆ ತಾಳ್ಮೆ ಇರುವುದು ಸಹಜ. ಆದರೆ ತುಂಬಾ ಪ್ರೆಶರ್ ಆದಾಗ ಆ ತಾಳ್ಮೆ ಎಂಬ ಕಟ್ಟೆ ಒಡೆಯುತ್ತದೆ. ಅದು ಒಡೆದಾಗ ಎದುರಿಗಿದ್ದವರು ಯಾರು ಬೇಕಾದರೂ ಅದರ ಅಪಾಯದಲ್ಲಿ ಸಿಲುಕಬಹುದು. ಇಂದು ಬಿಗ್ ಬಾಸ್ ಮನೆಯಲ್ಲಿ ಕಂಡದ್ದು ಅದೇ. ಆರ್ಯವರ್ಧನ್ ಗುರೂಜಿಗೆ ಕೋಪ ಬಂದರೆ ಏನಾಗಬಹುದು ಎಂಬ ಸುಳಿವು ಸಿಕ್ಕಿದೆ.

    ಆರ್ಯವರ್ಧನ್ ಗುರೂಜಿ ಎಂದಾಕ್ಷಣ ಬಿಗ್ ಬಾಸ್ ಮನೆಯ ಯಾವ ಸದಸ್ಯರನ್ನು ಕೇಳಿದರು ಎಲ್ಲರೂ ಹೇಳುವುದು ಅವರು ಒಂಥರ ಮಗುವಿನಂಥವರು. ಅವರಿಗೆ ಮಗುವಿನಂಥ ಮನಸ್ಸಿದೆ ಎಂದು. ಅದರ ಜೊತೆಗೆ ಇನ್ನು ಒಂದು ಮಾತು ಕೂಡ ಕೇಳಿ ಬಂದಿದೆ. ಗುರೂಜಿಗೂ ಒಮ್ಮೊಮ್ಮೆ ಮನಸ್ಸಿಗೆ ನೋವಾಗುತ್ತದೆ. ಆದರೆ ನೋವಾದರೂ ಆ ನೋವನ್ನು ತೋರಿಸಿಕೊಳ್ಳಲ್ಲ. ಬದಲಿಗೆ ಅವರೇ ಅನುಭವಿಸಿ, ಖುಷಿಯನ್ನು ಹಂಚುತ್ತಾರೆ ಎನ್ನುತ್ತಾರೆ.

    ಅದಷ್ಟೇ ಅಲ್ಲದೆ ಕೆಲವೊಮ್ಮೆ ಏನೇ ಪ್ರಶ್ನೆ ಕೇಳಿದರೂ ಅದು ಗುರೂಜಿಗೆ ಅರ್ಥವಾಗಿರುವುದಿಲ್ಲ ಎಂದೇ ಕಾಣುತ್ತದೆ. ಅಥವಾ ಅದಕ್ಕೆ ಸರಿಯಾದ ಉತ್ತರ ಕೊಡುವುದಕ್ಕೂ ಬರಲ್ಲ. ಅದು ಈಗಾಗಲೇ ಕಿಚ್ಚ ಸುದೀಪ್ ವೇದಿಕೆಯಲ್ಲೂ ಪ್ರೂವ್ ಆಗಿದೆ. ಆದರೆ ಅದನ್ನು ಕಿಚ್ಚ ಸುದೀಪ್ ತಮಾಷೆಯಂತೆಯೇ ಬಿಂಬಿಸಿ ಸುಮ್ಮನೆ ಆಗಿದ್ದಾರೆ. ಗುರೂಜಿಯ ಮುಖಭಾವವನ್ನು ಆ ಸಮಯದಲ್ಲಿ ನೋಡಿದರೆ ಅವರು ಅವರದ್ದೇ ಯೋಚನಾ ಲೋಕದಲ್ಲಿ ಇರುತ್ತಾರೆ ಎಂಬ ಭಾವನೆ ಬರುತ್ತದೆ. ಇದೆಲ್ಲಾ ಗುರೂಜಿಯ ಮೇಲೆ ಪ್ರಭಾವ ಬೀರಿದೆಯೇನೋ? ಮನೆಯಲ್ಲಿ ಯಾವಾಗಲೂ ಸೀರಿಯಸ್‌ನೆಸ್ ಇಲ್ಲದಂತೆ ಆಡುವುದು ಗುರೂಜಿಗೆ ಕಿರಿಕಿರಿಯಾಗಿತ್ತು ಎನಿಸುತ್ತದೆ. ಅದೆಲ್ಲವನ್ನು ಇವತ್ತು ಒಂದೇ ಸಲ ಹೊರಹಾಕಿದ್ದಾರೆ. ಇದನ್ನೂ ಓದಿ: ಸುದೀಪ್ ಹುಟ್ಟು ಹಬ್ಬಕ್ಕೆ ಯಾಕೆ ಸಿನಿಮಾ ಘೋಷಣೆ ಇಲ್ಲ?: ಅನುಮಾನ ಮೂಡಿಸಿದ ಕಿಚ್ಚನ ನಡೆ

    ಇಂದಿಗೆ ಸೋಮಣ್ಣ ಕ್ಯಾಪ್ಟೆನ್ಸಿ ಮುಗಿದಿದೆ. ರೂಪೇಶ್ ಕೊನೆಯ ಕ್ಯಾಪ್ಟನ್ ಆಗಿದ್ದಾರೆ. ಈ ಮಧ್ಯೆ ಕ್ಯಾಪ್ಟನ್ ಬಗ್ಗೆ ಏನು ಅನ್ನಿಸಿತು, ಎಷ್ಟು ಮಾರ್ಕ್ಸ್ ಕೊಡುತ್ತೀರಾ ಎಂಬುದು ಮನೆಯ ಸದಸ್ಯರ ಟಾಸ್ಕ್ ಆಗಿರುತ್ತೆ. ಎಲ್ಲರೂ ಸೋಮಣ್ಣ ಅವರ ಕ್ಯಾಪ್ಟೆನ್ಸಿಗೆ ಸಮಾಧಾನಗೊಂಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಹೇಳುವ ಸರದಿ ಆರ್ಯವರ್ಧನ್ ಅವರಿಗೆ ಬಂತು. ಆಗ, ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಹೇಳಿಕೊಳ್ಳುತ್ತಾ ಇದ್ದರು. ಬರುವಾಗ ಬಹಳಷ್ಟು ನೋವಲ್ಲಿ ಬಂದಿದ್ರು ಎನಿಸುತ್ತೆ. ಆದರೆ ಯಾರು ಊಹೆ ಮಾಡಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಅವರಿಗೆ ಗೊತ್ತಿತ್ತು. ಯಾರ್ ಯಾರನ್ನು ಕ್ಯಾಪ್ಟನ್ ಮಾಡಬೇಕು ಅಂತ. ಅವರ ಟೀಂನಲ್ಲಿ ಮಾಡಿದ ಸೆಲೆಕ್ಷನ್, ನಡೆದುಕೊಂಡ ರೀತಿ ಚೆನ್ನಾಗಿದೆ. ಜಯಶ್ರೀ ಅವರು ಹಠ ಹಿಡಿದು ಗೆದ್ದರು. ಆದರೆ ಸೋಮಣ್ಣ ಸ್ವಲ್ಪ ನೊಂದುಕೊಂಡರು ಎಂದರು. ಆಗ ಸೋಫಾ ಮೇಲೆ ಕುಳಿತಿದ್ದ ಜಯಶ್ರೀ ಏನೋ ಮಾತನಾಡಿದಂತೆ ಆಯಿತು.

    ಆಗ ಆರ್ಯವರ್ಧನ್ ಕೊಂಚ ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ. ದಯವಿಟ್ಟು ಕೇಳಿ. ನಿಮ್ಮದೆಲ್ಲಾ ಮುಚ್ಚಿಕೊಂಡು ಕೇಳಲಿಲ್ಲವಾ..? ನಾನು ರಾಶಿ ಭವಿಷ್ಯ ಹೇಳಿದಾಗ ಹರ್ಕೊಳ್ತಾ ಇದ್ರಿ. ಜೀವನ ಕೆಟ್ಟದಾದಾಗ ಇಲ್ಲ ವಿಷ ಕುಡಿತೀರಾ, ಇಲ್ಲ ಹೋಗಿ ಸಾಯ್ತೀರ. ನಿಮ್ಮ ನಾಯಿ ಬುದ್ಧಿ ಕೋತಿ ಬುದ್ಧಿ ಎಲ್ಲಾ ನಿಮ್ಮ ಊರಲ್ಲಿ ಇಟ್ಕೊಳಿ. ಇದು ಬಿಗ್ ಬಾಸ್, ಬಿಗ್ ಬಾಸ್‌ಗೆ ಮೊದಲು ಮರ್ಯಾದೆ ಕೊಡಿ. ನಾಯಿ ಥರ ಎಲ್ಲಾ ಆಡಬೇಡಿ. ಒಳ್ಳೆ ದೆವ್ವದ ಥರ ಆಡುತ್ತೀರಾ. ನನ್ನ ಮಾತುಗಳು ಪರ್ಫೆಕ್ಟ್ ಆಗಿ ಇದ್ದಾವೆ.

    ಉದಾಹರಣೆಗಳನ್ನು ಕೊಟ್ಟು ಮಾತನಾಡುತ್ತೇನೆ. ನಾವೂ ದಿವಸ ನೂರು ಜನಕ್ಕೆ ಬೈಯ್ಯುವವರು. ಮೂರು ಜನಕ್ಕೆ ಬೈಯ್ಯುವುದು ದೊಡ್ಡ ಕೆಲಸವೇನಲ್ಲ. ನಾಯಿಗೆ ಉಗಿದವರಂತೆ ಉಗಿಯುತ್ತೀನಿ. ಉಗಿದರೆ ಡಿಕ್ಷನರಿಯಲ್ಲಿ ಇಲ್ಲದ ಪದಗಳನ್ನೇ ಹೇಳುತ್ತೇನೆ. ನಾಲ್ಕು ಪದ ಅರ್ಥ ಆಗಬಹುದು. ಆದರೆ ನಾಲ್ಕು ನೂರು ವರ್ಷದ ಮಾತನ್ನು ಬೇಕಾದರೂ ಮಾತನಾಡುತ್ತೇನೆ ಎಂದು ಗರಂ ಆಗಿ ಬಳಿಕ ಮಾತನಾಡಿ, ಬಿಗ್ ಬಾಸ್‌ನಲ್ಲಿ ಎಲ್ಲಾ ಗೇಮ್ ಅನ್ನು ಅಟ್ಯಾಕ್ ಮಾಡುವ ತಾಕತ್ತು ಇರುವುದು ಸೋಮಣ್ಣನಿಗೆ ಮಾತ್ರ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಕಳಪೆ ಎಂದ ರಾಕೇಶ್ ಮೇಲೆ ಸೋನುಗೆ ಕೆಂಡದಷ್ಟು ಕೋಪ

    Live Tv
    [brid partner=56869869 player=32851 video=960834 autoplay=true]