Tag: ಆರ್ಯನ್ ಖಾನ್

  • ಸಿಗದ ಜಾಮೀನು – ಜೈಲಿನಲ್ಲಿ ರಾಮನ ಮೊರೆ ಹೋದ ಆರ್ಯನ್ ಖಾನ್

    ಸಿಗದ ಜಾಮೀನು – ಜೈಲಿನಲ್ಲಿ ರಾಮನ ಮೊರೆ ಹೋದ ಆರ್ಯನ್ ಖಾನ್

    ಮುಂಬೈ: ಡ್ರಗ್ಸ್ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ಬಾಲಿವುಡ್ ಕಿಂಗ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಜಾಮೀನು ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಆರ್ಯನ್ ಜೈಲಿನಲ್ಲಿಯೇ ಬಂಧಿಯಾಗಿದ್ದು, ಇದೀಗ ರಾಮ ಹಾಗೂ ಸೀತೆಯ ಮೊರೆ ಹೋಗಿದ್ದಾನೆ.

    ಸದ್ಯ ಆರ್ಯನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದು, ಧಾರ್ಮಿಕ ಪುಸ್ತಕಗಳನ್ನು ತರಿಸಿ ಓದುತ್ತಿದ್ದಾನೆ. ರಾಮ, ಸೀತೆಯ ಪುಸ್ತಕ ಓದುತ್ತಿರುವುದಾಗಿ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

    ಜಾಮೀನು ನಿರಾಕರಣೆಗೊಂಡ ಬಳಿಕದಿಂದ ಆರ್ಯನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಹೀಗಾಗಿ ಆತನಿಗೆ ಕೆಲವೊಂದು ಪುಸ್ತಕಗಳನ್ನು ಓದಲು ಸಲಹೆ ನೀಡಿರುವುದಾಗಿ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೈಲಿನಲ್ಲಿರುವ ಗ್ರಂಥಾಲಯದಿಂದ ಕೈದಿಗಳು ಕೇಳಿದ ಪುಸ್ತಕಗಳನ್ನು ನೀಡಲಾಗುತ್ತದೆ. ಇಲ್ಲಿ ಆರ್ಯನ್ ತಮಗೆ ರಾಮ ಹಾಗೂ ಸೀತೆಯ ಪುಸ್ತಕವನ್ನು ನೀಡುವಂತೆ ಕೇಳಿದ್ದರಿಂದ ಅದನ್ನೇ ತರಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ಶಾರೂಖ್ ನಿವಾಸದ ಮೇಲೆ ಎನ್‍ಸಿಬಿ ದಾಳಿ

    ಜೈಲಿನ ಲೈಬ್ರೆರಿಯಲ್ಲಿ ಕೇವಲ ಧಾರ್ಮಿಕ ಪುಸ್ತಕಗಳು ಮಾತ್ರವಲ್ಲದೇ ಕೆಲವೊಂದು ಸ್ಫೂರ್ತಿದಾಯವಾಗಿರುವ ಪುಸ್ತಕಗಳು ಕೂಡ ಇವೆ. ಯಾವುದೇ ಕೈದಿ ಮನೆಯಿಂದಲೂ ಪುಸ್ತಕಗಳನ್ನು ತರಿಸಿ ಓದಬಹುದು. ಆದರೆ ಧಾರ್ಮಿಕ ಮತ್ತು ಸ್ಫೂರ್ತಿದಾಯಕ ಪುಸ್ತಕಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದನ್ನೂ ಓದಿ: ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್

    ಕಳೆದ ಗುರುವಾರವಷ್ಟೇ ನಟ ಶಾರೂಖ್ ಕಾನ್ ಅವರು ತಮ್ಮ ಪುತ್ರನನ್ನು ಭೇಟಿಯಾಗಲೆಂದು ಜೈಲಿಗೆ ತೆರಳಿದ್ದರು. ಈ ವೇಳೆ ಅವರು ಪುತ್ರನ ಜೊತೆ 18 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ತಂದೆಯ ಮುಂದೆ ಆರ್ಯನ್ ಭಾವುಕನಾಗಿದ್ದನು ಎಂಬುದಾಗಿ ತಿಳಿದುಬಂದಿತ್ತು.

  • ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ – NCB ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ

    ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ – NCB ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ

    ಮುಂಬೈ: ಬಾಲಿವುಡ್ ನಟ ಶಾರೂಕ್ ಖಾನ್ ಮಗ ಶಾರೂಖ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ ಸಿಕ್ಕಿದೆ. ಎನ್‍ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ವಿರುದ್ಧ ಬಿಜೆಪಿಯ ಕೆಪಿ ಗೋಸಾವಿ ಆಪ್ತ ಪ್ರಭಾಕರ್ ಸೈಲ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

    ಆರ್ಯನ್ ಬಿಡುಗಡೆ ಮಾಡೋಕೆ 25 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. 18 ಕೋಟಿಗೆ ಡೀಲ್ ಆಗುವಂತೆ ಕಾಣುತ್ತಿದೆ. ಇದರಲ್ಲಿ ಸಮೀರ್ ವಾಂಖೆಡೆಗೆ 8 ಕೋಟಿ ಹೋಗ್ಬೇಕು ಅಂತಾ ಎನ್‍ಸಿಬಿ ಕಚೇರಿಯಲ್ಲಿಯೇ ಕೆಪಿ ಗೋಸಾವಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕ್ರೂಸ್ ರೇಡ್‍ಗೆ ಸಂಬಂಧಿಸಿದಂತೆ ಖಾಲಿ ಪುಟುಗಳ ಪಂಚನಾಮೆ ಪತ್ರಕ್ಕೆ ಸಮೀರ್ ವಾಂಖೆಡೆ ತಮ್ಮಿಂದ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಪ್ರಭಾಕರ್ ಸೈಲ್ ಕೂಡ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಶಾರೂಖ್ ಖಾನ್ ಬಿಜೆಪಿ ಸೇರಿದ್ರೆ ಡ್ರಗ್ಸ್ ಸಕ್ಕರೆ ಪುಡಿಯಾಗುತ್ತೆ: ಛಗನ್ ಭುಜ್‍ಬಲ್

    ಇದಕ್ಕೆ ಸಂಬಂಧಿಸಿ ವೀಡಿಯೋ ರಿಲೀಸ್ ಮಾಡಿರುವ ಸಂಜಯ್ ರೌತ್, ಇದೆಲ್ಲ ಸುಳ್ಳು ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಸೈಲ್‍ನ್ನು ಬಂಧಿಸಬೇಕು ಎಂದು ಸಮೀರ್ ಒತ್ತಾಯಿಸಿದ್ದಾರೆ. ಜೊತೆಗೆ ಈ ಆರೋಪಗಳೆಲ್ಲ ಸುಳ್ಳು. ಶೀಘ್ರ ಸ್ಪಷ್ಟನೆ ಕೊಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಎನ್‍ಸಿಬಿ ಕೂಡ ಸಮೀರ್ ಬೆಂಬಲಕ್ಕೆ ಧಾವಿಸಿದೆ. ಸದ್ಯ ಕೆಪಿ ಗೋಸಾವಿ ನಾಪತ್ತೆಯಾಗಿದ್ದಾರೆ. ತಮ್ಮ ಜೀವಕ್ಕೆ ಸಮೀರ್‍ರಿಂದ ಅಪಾಯವಿದೆ ಎಂಬ ಆತಂಕವನ್ನು ಸೈಲ್ ಹೊರಹಾಕಿದ್ದಾರೆ. ಇದನ್ನೂ ಓದಿ: ಶಾರೂಖ್ ಖಾನ್ ಪುತ್ರನಾಗಿದ್ದರಿಂದ ಆರ್ಯನ್ ಖಾನ್ ಬಲಿಪಶು: ದಿಗ್ವಿಜಯ್ ಸಿಂಗ್

  • ಶಾರೂಖ್ ಖಾನ್ ಪುತ್ರನಾಗಿದ್ದರಿಂದ ಆರ್ಯನ್ ಖಾನ್ ಬಲಿಪಶು: ದಿಗ್ವಿಜಯ್ ಸಿಂಗ್

    ಶಾರೂಖ್ ಖಾನ್ ಪುತ್ರನಾಗಿದ್ದರಿಂದ ಆರ್ಯನ್ ಖಾನ್ ಬಲಿಪಶು: ದಿಗ್ವಿಜಯ್ ಸಿಂಗ್

    ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾತ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಸಂಬಂಧಿಸಿದಂತೆ ಎನ್ ಸಿಬಿಯಿಂದ ಬಂಧನಕ್ಕೊಳಗಾಗಿದ್ದಾನೆ. ಶಾರೂಖ್ ಖಾನ್ ಪುತ್ರನಾಗಿರುವುದರಿಂದ ಆತನನ್ನು ಬಲಿಪಶು ಮಾಡಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಶಾರೂಖ್ ಖಾನ್ ಪುತ್ರನಾಗಿರುವುದರಿಂದ ಆತನನ್ನು ಬಲಿಪಶು ಮಾಡಿರುವುದು ಬೇಸರವಾಗಿದೆ. ಆತನ ಅಪರಾಧ ಏನು? ಆತನ ಜೊತೆಯಲ್ಲಿದ್ದವನ ಬಳಿ 5 ಗ್ರಾಮ್ ಡ್ರಗ್ಸ್ ಸಿಕ್ಕಿದೆ. ಮುಂದ್ರಾ ಬಂದರಿನಲ್ಲಿ ಟನ್ ಗಟ್ಟಲೇ ವಶಕ್ಕೆ ಪಡೆದ ಹೆರಾಯಿನ್ ಬಗ್ಗೆ ಏನಾಯಿತು? ಕುಲದೀಪ್ ಸಿಂಗ್ ಯಾರು? ಎನ್‍ಸಿಬಿ ಮತ್ತು ಎನ್‍ಐಎ ಈ ಕೇಸ್ ಬಗ್ಗೆ ವಿಚಾರಣೆ ನಡೆಸುತ್ತಿದ್ದೆಯೇ ಎಂಬುದನ್ನು ನಮಗೆ ಹೇಳಲಿ ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

    ನ್ಯಾಯಾಲಯದ ಆದೇಶ ಕಾಯದೆ ಕಾಂಗ್ರೆಸ್ ಮುಖಂಡರೇ ತೀರ್ಪು ನೀಡಿದ್ದಾರೆ. ಅಂತಿಮವಾಗಿ ದಿಗ್ವಿಜಯ್ ಸಿಂಗ್ ಆರ್ಯನ್ ಖಾನ್ ರಕ್ಷಣೆಗೆ ಬಂದಿದ್ದಾರೆ. ತನಿಖಾ ತಂಡ ವಾಸ್ತವ ಅಂಶ ಪರಿಶೀಲಿಸುತ್ತಿರುವಾಗ ದಿಗ್ವಿಜಯ್ ಸಿಂಗ್ ತೀರ್ಪು ನೀಡಿದ್ದಾರೆ. ಇಂತಹ ತುಷ್ಟೀಕರಣ ರಾಜಕಾರಣ ಮಾಡುವ ಮೂಲಕ ಎಷ್ಟು ದಿನಗಳವರೆಗೆ ಜನರನ್ನು ನೀವು ಹಾದಿ ತಪ್ಪಿಸುತ್ತೀರಾ? ಎಂದು ಬಿಜೆಪಿ ಪ್ರಶ್ನಿಸಿದೆ ಎಂದು ದಿಗ್ವಿಜಯ್ ಹೇಳಿಕೆ ವಿರುದ್ಧ ಮಧ್ಯ ಪ್ರದೇಶ ಬಿಜೆಪಿ ಪ್ರತಿದಾಳಿ ನಡೆಸಿದೆ. ಇದನ್ನೂ ಓದಿ:  ಜೀವನದ ಹೊಸದೊಂದು ಹೆಜ್ಜೆ, ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ: ನಟಿ ಚಂದನಾ

    ಮುಂಬೈಯ ಕರಾವಳಿಯಲ್ಲಿ ಕ್ರೂಸ್ ಶಿಪ್ ಮೇಲೆ ಅಕ್ಟೋಬರ್ 3 ರಂದು ಎನ್‍ಸಿಬಿ ದಾಳಿಯ ನಂತರ ಆರ್ಯನ್ ಖಾನ್‍ನನ್ನು ಬಂಧಿಸಲಾಗಿದೆ. ಸದ್ಯ ಜೈಲಿನಲ್ಲಿರುವ ಆರ್ಯನ್ ಖಾನ್, ವಿಶೇಷ ಕೋರ್ಟ್ ಜಾಮೀನು ಅರ್ಜಿಯನ್ನು ನಿರಾಕರಿಸಿದ ನಂತರ ಬಾಂಬೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.

  • ಅಮಿತ್ ಶಾಗೆ ವಿಶ್ ಮಾಡಿ ಟ್ರೋಲ್‍ಗೊಳಗಾದ ನಟಿ ಸಾರಾ ಅಲಿಖಾನ್

    ಅಮಿತ್ ಶಾಗೆ ವಿಶ್ ಮಾಡಿ ಟ್ರೋಲ್‍ಗೊಳಗಾದ ನಟಿ ಸಾರಾ ಅಲಿಖಾನ್

    ನವದೆಹಲಿ: ಬಾಲಿವುಡ್ ನಟಿ ಸಾರಾ ಅಲಿಖಾನ್ ಅವರು ಗೃಹ ಸಚಿವ ಅಮಿತ್ ಶಾ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

    ಹೌದು. ಇಂದು ಅಮಿತ್ ಶಾ ಅವರ ಹುಟ್ಟುಹಬ್ಬವಾಗಿತ್ತು. ಈ ಹಿನ್ನೆಲೆಯಲ್ಲಿ ನಟಿ, ಗೃಹ ಸಚಿವರಿಗೆ ವಿಶ್ ಮಾಡಿದ್ದಾರೆ. ಆದರೆ ಇದುವರೆಗೆ ವಿಶ್ ಮಾಡಿದಿರುವ ಸಾರಾ ಈ ಬಾರಿ ಶುಭಕೋರಿರುವುದಕ್ಕೆ ನೆಟ್ಟಿಗರು ಆಕೆಯನ್ನು ಟ್ರೋಲ್ ಮಾಡಿದ್ದಾರೆ.

    ಇತ್ತೀಚೆಗೆ ಬಾಲಿವುಡ್ ಸೆಲೆಬ್ರಿಟಿಗಳ ಮನೆ ಮೇಲೆ ಎನ್‍ಸಿಬಿ ದಾಳಿ ನಡೆಯುತ್ತಿದೆ. ಇದರಿಂದ ಪಾರಾಗುವ ಸಲುವಾಗಿ ಸಾರಾ ಅವರು ಅಮಿತ್ ಶಾಗೆ ವಿಶ್ ಮಾಡಿದ್ದಾರೆ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ಶಾರೂಖ್ ನಿವಾಸದ ಮೇಲೆ ಎನ್‍ಸಿಬಿ ದಾಳಿ

    ಸಾರಾ ಟ್ವೀಟ್ ನಲ್ಲೇನಿದೆ..?
    ಗೃಹ ಸಚಿವ ಅಮಿತ್ ಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಸಾರಾ ಟ್ವೀಟ್ ಮಾಡಿದ್ದಾರೆ. ನಟಿ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಆಕೆಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಒಬ್ಬರು, ‘ನಿಮ್ಮ ಮನೆ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ಮಾಡಲ್ಲ. ಈ ಮೂಲಕ ನೀವು ಸರಕ್ಷಿತವಾಗಿದ್ದೀರಿ’ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಅನೇಕರು ಸಾರಾ ಕಾಲೆಳೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.

    https://twitter.com/sunilssihag/status/1451430377298415622

    ಇತ್ತ ಮುಂಬೈನ ಕ್ರೂಸ್‍ನಲ್ಲಿ ನಡೆದ ಡ್ರಗ್ಸ್ ಕೇಸ್ ಪ್ರಕರಣದ ಬಗ್ಗೆ ಕೆದಕಿದಷ್ಟು ಮಾಹಿತಿ ಹೊರಬರ್ತಿದೆ. ಆರ್ಯನ್ ಖಾನ್ ಜೊತೆ ವಾಟ್ಸಪ್‍ನಲ್ಲಿ ಡ್ರಗ್ಸ್ ಬಗ್ಗೆ ಚಾಟಿಂಗ್ ಮಾಡಿದ್ದಂತೆ ನಟಿ ಅನನ್ಯ ಪಾಂಡೆಗೆ ಇಂದು ಕೂಡ ಎನ್‍ಸಿಬಿ ಡ್ರಿಲ್ ಮಾಡಿತು. ನಿಮಗೆ ಯಾರು ಡ್ರಗ್ಸ್ ತಂದು ಕೊಡ್ತಿದ್ರು..? ಯಾವ್ಯಾವ ಟೈಮಲ್ಲಿ ಡ್ರಗ್ಸ್ ತಗೋತಿದ್ರಿ..? ಆರ್ಯನ್ ಜೊತೆ ಎಷ್ಟು ದಿನಗಳಿಂದ ಡ್ರಗ್ಸ್ ತೆಗೆದುಕೊಳ್ತಿದ್ದೀರಿ..? ನಿಮ್ ಜೊತೆ ಯಾರ್ಯಾರು ಡ್ರಗ್ಸ್ ತಗೋತಿದ್ರು..? ಪೆಡ್ಲರ್‍ಗೆ ಹೇಗೆ ಹಣ ಕೊಡ್ತಿದ್ರಿ..? ಯಾವ್ಯಾವ ಸ್ಥಳದಲ್ಲಿ ಪೆಡ್ಲರ್‍ನ ಭೇಟಿಯಾಗ್ತಿದ್ರಿ ಅಂತಾ ಪ್ರಶ್ನಿಸಿದ್ದಾರೆ.

    https://twitter.com/Nher_who/status/1451429295012802566

    ಇದಕ್ಕೆ ಉತ್ತರಿಸಿರೋ ಅನನ್ಯ ಪಾಂಡೆ, ನಾನು ಡ್ರಗ್ಸ್ ತಗೋಳಲ್ಲ. ಆರ್ಯನ್ ಜೊತೆ ಗಾಂಜಾ ಕುರಿತು ಜೋಕ್ ಮಾಡಿದ್ದೇ ಅಷ್ಟೇ. ಅದೂ 1 ಒಂದು ವರ್ಷದ ಹಿಂದಿನ ಚಾಟ್ ಅದು ಅಂತ ಹೇಳಿದ್ದಾರೆ. ಆದರೆ ಆರ್ಯನ್ ಡ್ರಗ್ಸ್ ಕೇಳಿದಾಗ, ತಂದು ಕೊಡೋದಾಗಿ ಅನನ್ಯ ಪಾಂಡೆ ಚಾಟ್‍ನಲ್ಲಿ ಹೇಳಿದ್ದಳು ಅಂತ ಎನ್‍ಸಿಬಿ ಹೇಳಿದೆ.

    https://twitter.com/xecular7/status/1451448068822478848

  • ವಿಚಾರಣೆಗೆ ಹಾಜರಾದ ನಟಿ ಅನನ್ಯಾ ಪಾಂಡೆ – ಎರಡನೇ ದಿನವೂ NCB ಡ್ರಿಲ್‌

    ವಿಚಾರಣೆಗೆ ಹಾಜರಾದ ನಟಿ ಅನನ್ಯಾ ಪಾಂಡೆ – ಎರಡನೇ ದಿನವೂ NCB ಡ್ರಿಲ್‌

    ನವದೆಹಲಿ: ಡ್ರಗ್ ಪಾರ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಅನನ್ಯಾ ಪಾಂಡೆ ಅವರನ್ನು ಎನ್‍ಸಿಬಿ (NCB) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು, ಇಂದೂ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದರು.

    ಎನ್‍ಸಿಬಿ ಸಮನ್ಸ್ ಹಿನ್ನಲೆಯಲ್ಲಿ ಇಂದು ಅನನ್ಯಾ ಪಾಂಡೆ ಮುಂಬೈನಲ್ಲಿರುವ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಸುಧೀರ್ಘ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಆರ್ಯನ್ ಖಾನ್ ಜೊತೆಗಿನ ಸಂಬಂಧ ಕುರಿತು ಅಧಿಕಾರಿಗಳು ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಆರ್ಯನ್ ಖಾನ್ ಮತ್ತು ಅನನ್ಯಾ ಪಾಂಡೆ ನಡುವೆ ಮಾದಕ ವಸ್ತುಗಳ ಹಂಚಿಕೆ ಸಂಬಂಧ ವ್ಯಾಟ್ಸಪ್‍ನಲ್ಲಿ ಚಾಟ್ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಎನ್‍ಸಿಬಿ ಅಧಿಕಾರಿಗಳು ಇದೇ ವ್ಯಾಟ್ಸಪ್ ಚಾಟ್ ಅನ್ನೇ ಪ್ರಮುಖ ಸಾಕ್ಷಿಯನ್ನಾಗಿಸಿಕೊಂಡು ಕೋರ್ಟ್‍ನಲ್ಲಿ ವಾದ ಮಂಡಿಸಿತ್ತು. ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಈ ಸಾಕ್ಷ್ಯಗಳ ಮೇಲೆ ವಿಚಾರಣೆ ಮುಂದುವರಿಸಿರುವ ಎನ್‍ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಆರ್ಯನ್ ಖಾನ್ ಜೊತೆಗಿನ ವ್ಯಾಟ್ಸಪ್ ಮಾತುಕತೆಯಲ್ಲಿ ಗಾಂಜಾ ಬಗ್ಗೆ ಪ್ರಸ್ತಾಪಿಸಲಾಗಿದ್ದು ಆರ್ಯನ್ ಖಾನ್ ಬಾಲಿವುಡ್ ನ ಪ್ರಮುಖ ಜನರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

    ಈ ಹಿಂದೆ ಕೋರ್ಟ್‍ನಲ್ಲಿವಾದ ಮಂಡಿಸಿದ್ದ ಎನ್‍ಸಿಬಿ ಪರ ವಕೀಲರು, ಆರ್ಯನ್ ಖಾನ್ ಅಂತರಾಷ್ಟ್ರೀಯ ಡ್ರಗ್ ಪೆಡ್ಲರ್ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಅವರಿಂದ ಮಾಧಕ ವಸ್ತುಗಳನ್ನು ಖರೀದಿಸಿ ಬಾಲಿವುಡ್ ಮಂದಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಸದ್ಯ ಇದೇ ಅಂಶಗಳನ್ನು ಆಧರಿಸಿ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ:  ಡ್ರಗ್ಸ್ ಕೇಸ್ – ಶಾರೂಖ್ ನಿವಾಸದ ಮೇಲೆ ಎನ್‍ಸಿಬಿ ದಾಳಿ

  • ಡ್ರಗ್ಸ್ ಕೇಸ್ – ಶಾರೂಖ್ ನಿವಾಸದ ಮೇಲೆ ಎನ್‍ಸಿಬಿ ದಾಳಿ

    ಡ್ರಗ್ಸ್ ಕೇಸ್ – ಶಾರೂಖ್ ನಿವಾಸದ ಮೇಲೆ ಎನ್‍ಸಿಬಿ ದಾಳಿ

    ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರೂಖ್ ಮನೆ ಮೇಲೆ ಎನ್‍ಸಿಬಿ ದಾಳಿ ಮಾಡಿದೆ. ಶಾರೂಖ್ ಅಲ್ಲದೇ ನಟಿ ಅನನ್ಯ ಪಾಂಡೆ ಮನೆ ಮೇಲೂ ದಾಳಿ ನಡೆಸಿದೆ.

    shah rukh khan

    ಎನ್‍ಸಿಬಿಯಿಂದ ಅಕ್ಟೋಬರ್ 8 ರಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಅವರನ್ನು ಇಂದು ಶಾರೂಖ್ ಭೇಟಿಯಾಗಿದ್ದರು. ಶಾರೂಖ್ ಮಗನನ್ನು ಅರ್ಥರ್ ರೋಡ್ ಜೈಲಿನಲ್ಲಿ ಭೇಟಿಯಾದ ಬೆನ್ನಲ್ಲೇ ಎನ್‍ಸಿಬಿ ಶಾಕ್ ನೀಡಿದೆ.  ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಅಕ್ಟೋಬರ್ 2 ರಂದು ಮುಂಬೈನಿಂದ ಗೋವಾಗೆ ಹೊರಟಿದ್ದ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಅವರನ್ನು ಎನ್‍ಸಿಬಿ ಬಂಧಿಸಿತ್ತು. ನಿನ್ನೆ ಮುಂಬೈಯ ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.  ಇದನ್ನೂ ಓದಿ: ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್

    ಕೋವಿಡ್-19 ಮಧ್ಯೆ ಮಹಾರಾಷ್ಟ್ರ ಸರ್ಕಾರ ಜೈಲಿನಲ್ಲಿರುವವರನ್ನು ಭೇಟಿಯಾಗದೇ ಇರುವಂತೆ ನಿರ್ಬಂಧ ಹೇರಿತ್ತು. ಇದೀಗ ಈ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಶಾರೂಖ್ ಮಗನನ್ನು ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಕಳೆದಿದ್ದರು.

    https://www.youtube.com/watch?v=zCq_cskdwY4

  • ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್

    ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್

    ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ಅಧಿಕಾರಿಗಳಿಂದ ಅಕ್ಟೋಬರ್ 8 ರಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್‍ ಅವರನ್ನು ಬಾಲಿವುಡ್ ನಟ ಶಾರೂಖ್ ಖಾನ್ ಇಂದು ಮುಂಬೈನ ಆರ್ಥರ್ ರೋಡ್ ಜೈಲಿಗೆ ಆಗಮಿಸಿ ಭೇಟಿಯಾಗಿದ್ದಾರೆ.

    ಅಕ್ಟೋಬರ್ 2 ರಂದು ಮುಂಬೈನಿಂದ ಗೋವಾಗೆ ಹೊರಟಿದ್ದ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಲಾಗಿತ್ತಿತ್ತು. ಈ ಪಾರ್ಟಿಯಲ್ಲಿ ಸ್ನೇಹಿತರ ಜೊತೆಗೆ ಭಾಗಿಯಾಗಿದ್ದ ಆರ್ಯನ್ ಖಾನ್ ಡ್ರಗ್ ಸೇವನೆ ಮಾಡಿದ್ದರು ಎಂದು ಆರೋಪಿಸಿ ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದರು, ಇದೀಗ ಮೊದಲ ಬಾರಿಗೆ ಆರ್ಯನ್ ಖಾನ್ ಅವರನ್ನು ಶಾರೂಖ್ ಖಾನ್ ಭೇಟಿಯಾಗಿದ್ದಾರೆ.

    aryan

    ಕೋವಿಡ್-19 ಮಧ್ಯೆ ಮಹಾರಾಷ್ಟ್ರ ಸರ್ಕಾರ ಜೈಲಿನಲ್ಲಿರುವವರನ್ನು ಭೇಟಿಯಾಗದೇ ಇರುವಂತೆ ನಿರ್ಬಂಧ ಹೇರಿತ್ತು. ಇದೀಗ ಈ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಶಾರೂಖ್ ಮಗನನ್ನು ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಕಳೆದರು. ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಈವರೆಗೂ ಎರಡು ಬಾರಿ ಆರ್ಯನ್ ಖಾನ್‍ಗೆ ಜಾಮೀನನ್ನು ನಿರಾಕರಿಸಲಾಗಿದ್ದು, ಇದೀಗ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಲಾಗಿದೆ. ಅಲ್ಲದೇ ಇಂದಿಗೆ ಆರ್ಯನ್ ಖಾನ್ ನ್ಯಾಯಾಂಗ ಬಂಧನ ಅಂತ್ಯಗೊಳ್ಳಲಿದೆ. ಶುಕ್ರವಾರ ಆರ್ಯನ್ ಖಾನ್ ಶಾರೂಖ್ ಹಾಗೂ ಗೌರಿ ಖಾನ್ ಜೊತೆ ವೀಡಿಯೋ ಕಾಲ್ ಮೂಲಕ ಮಾತನಾಡಿದ್ದರು. ಇದನ್ನೂ ಓದಿ: ಆರ್ಯನ್‍ಗೆ ಜಾಮೀನು ಸಿಗುವವರೆಗೂ ಸಿಹಿ ಅಡುಗೆ ಮಾಡ್ಬೇಡಿ – ಸಿಬ್ಬಂದಿಗೆ ಗೌರಿ ಸೂಚನೆ

  • ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಜೈಲೇ ಗತಿ

    ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಜೈಲೇ ಗತಿ

    ಮುಂಬೈ: ಶಾರೂಕ್ ಖಾನ್ ಪುತ್ರ ಆರ್ಯನ್ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

    ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿ ಎನ್‍ಸಿಬಿ ಬಲೆಗೆ ಬಿದ್ದಿದ್ದ ಬಾಲಿವುಡ್ ನಟ ಶಾರೂಕ್ ಖಾನ್ ಮತ್ತಷ್ಟು ದಿನ ಜೈಲಿನಲ್ಲೇ ಕಳೆಯಬೇಕಿದೆ. ಮುಂಬೈನ ಸೆಷನ್ಸ್ ಕೋರ್ಟ್ ಆರ್ಯನ್ ಖಾನ್‍ಗೆ ಜಾಮೀನು ನೀಡಲು ನಿರಾಕರಿಸಿದೆ. ಇದನ್ನೂ ಓದಿ: ಇಂದು ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಭವಿಷ್ಯ ನಿರ್ಧಾರ

    ಅಕ್ಟೋಬರ್ 13 ಮತ್ತು 14 ರಂದು ಎರಡು ದಿನ ಆರ್ಯನ್ ಖಾನ್ ಸೇರಿದಂತೆ ಇತರೆ ಆರೋಪಿಗಳ ಜಾಮೀನು ಅರ್ಜಿಗಳ ವಾದ ಆಲಿಸಿದ್ದ ಮುಂಬೈನ ಸೆಷನ್ಸ್ ಕೋರ್ಟ್‍ನ ನ್ಯಾ.ವಿ.ವಿ ಪಾಟೀಲ್‍ರವರ ಪೀಠ ಬಳಿಕ ಇಂದು ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್ ಬೇಲ್ ನೀಡಲು ತಿರಸ್ಕರಿಸಿದೆ. ಈ ಮೂಲಕ ಆರ್ಯನ್ ಖಾನ್‍ಗೆ ಮತ್ತೆ ಜೈಲು ವಾಸ ಗತಿ ಎಂಬಂತಾಗಿದೆ. ಇದನ್ನೂ ಓದಿ: ಆರ್ಯನ್‍ಗೆ ಜಾಮೀನು ಸಿಗುವವರೆಗೂ ಸಿಹಿ ಅಡುಗೆ ಮಾಡ್ಬೇಡಿ – ಸಿಬ್ಬಂದಿಗೆ ಗೌರಿ ಸೂಚನೆ

    ವಿಚಾರಣೆಯ ವೇಳೆ ಆರ್ಯನ್ ಖಾನ್ ಪರ ವಾದ ಏನಿತ್ತು?
    ಎನ್‍ಸಿಬಿ ದಾಳಿ ವೇಳೆ ಆರ್ಯನ್ ಖಾನ್ ಬಳಿ ಮಾದಕ ವಸ್ತುಗಳು ಪತ್ತೆಯಾಗಿಲ್ಲ. ದಾಳಿ ವೇಳೆ ಆರ್ಯನ್ ಖಾನ್ ಡ್ರಗ್ಸ್ ಸೇವನೆ ಮಾಡಿರಲಿಲ್ಲ ಮತ್ತು ಅವರ ಬಳಿಕ ಹಣವೂ ಇರಲಿಲ್ಲ, ಹೀಗಾಗಿ ಡ್ರಗ್ ಸೇವನೆ, ಮಾರಾಟ, ಖರೀದಿ ಆರೋಪಗಳೇಲ್ಲ ಸುಳ್ಳು. ಆರ್ಯನ್ ಖಾನ್ ಅತಿಥಿಯಾಗಿ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ಹೆಚ್ಚಿನ ವಿಚಾರಣೆ ಅವಶ್ಯಕತೆ ಇಲ್ಲ ಎಂದು ಹೇಳಿದೆ. ತನ್ನ ವ್ಯಾಪ್ತಿಯಲ್ಲಿ ಪ್ರಕರಣ ಇಲ್ಲದ ಕಾರಣ ಜಾಮೀನು ನೀಡಲು ನಿರಾಕರಿಸಿದೆ. ಅಂತರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಜೊತೆಗೆ ನಂಟು ಆರೋಪಿಸಿದರು ಅದನ್ನು ಪ್ರಕರಣದಲ್ಲಿ ಉಲ್ಲೇಖಿಸಿಲ್ಲ. ಆರ್ಯನ್ ಖಾನ್ ನಿಂದ ಯಾವುದೇ ಸಾಕ್ಷ್ಯ ಸಿಗದ ಹಿನ್ನಲೆ ಇಡೀ ತನಿಖೆ ವಾಟ್ಸಪ್ ಮೇಲೆ ಅವಲಂಬಿಸಿದೆ. ಜಾಮೀನು ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾದ ಮಂಡಿಸಬಹುದು.

    ಎನ್‍ಸಿಬಿ ಪರ ವಕೀಲರ ವಾದ ಏನಿತ್ತು?
    ಅನೀಲ್ ಸಿಂಗ್, ಆರ್ಯನ್ ಖಾನ್ ನಿಯಮಿತವಾಗಿ ಡ್ರಗ್ ಸೇವನೆ ಮಾಡುತ್ತಿದ್ದಾರೆ. ಮಾಹಿತಿಗಳ ಪ್ರಕರಣ ಮೂರು ವರ್ಷದಿಂದ ಮಾದಕ ವಸ್ತುಗಳ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಸ್ನೇಹಿತ ಅರ್ಬಾಜ್ ಮಚೆರ್ಂಟ್ ಬಳಿಕ ಮಾದಕ ವಸ್ತು ಪತ್ತೆಯಾಗಿದ್ದು, ಆರ್ಯನ್ ಖಾನ್ ಕೂಡಾ ಮಾದಕ ವ್ಯಸನಿ ಎನ್ನುವುದು ಸೂಚಿಸುತ್ತಿದೆ ಆರ್ಯನ್ ಖಾನ್ ತಮ್ಮ ಬಳಿ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ವಾದಿಸಬಹುದು, ಆದರೆ ಆತನ ಸ್ನೇಹಿತ ತನ್ನ ಬಳಿ ಡ್ರಗ್ ಇರುವುದು ಒಪ್ಪಿಕೊಂಡಿದ್ದಾನೆ. ಪಂಚೆನಾಮೆಗೂ ಆರೋಪಿಗಳು ಸಹಿ ಮಾಡಿದ್ದಾರೆ. ಎನ್‍ಡಿಪಿಎಸ್ ಕಾಯ್ದೆಯಡಿ ಆರೋಪಿಗಳಿಂದ ಎಷ್ಟು ಪ್ರಮಾಣದ ಮಾದಕ ವಸ್ತುವನ್ನು ವಶಕ್ಕೆ ಪಡೆದೆವು ಎನ್ನುವುದು ಮುಖ್ಯವಲ್ಲ. ಆರೋಪಿಗೆ ಪ್ರಕರಣಕ್ಕಿರುವ ನಂಟನ್ನು ಭೇದಿಸಬೇಕಿದೆ. ಹೀಗಾಗಿ ಇದು ಒಂದು ವರ್ಷದ ಶಿಕ್ಷೆಯ ಪ್ರಕರಣವೂ ಎನ್ನುವಂತಿಲ್ಲ. ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕು, ಯಾರನ್ನು ತನಿಖೆ ಒಳಪಡಿಸಬೇಕು ಅದು ತನಿಖಾಧಿಕಾರಿಯ ಹಕ್ಕು. ಈ ಹಂತದಲ್ಲಿ ಜಾಮೀನು ನೀಡಬಾರದು ಎಂದು ಅನಿಲ್ ಸಿಂಗ್ ಕೋರ್ಟ್ ಗೆ ಮನವಿ ಮಾಡಿದ್ದರು. ಇದನ್ನೂ ಓದಿ: ಇನ್ಮುಂದೆ ತಪ್ಪು ಮಾಡಲ್ಲ, ಬಡವರಿಗೆ ನೆರವಾಗುತ್ತೇನೆ: ಆರ್ಯನ್ ಖಾನ್

    ಮಾದಕ ವಸ್ತುಗಳು ಪತ್ತೆಯಾಗಿಲ್ಲ ಎಂದ ಮಾತ್ರಕ್ಕೆ ಪ್ರಕರಣಕ್ಕೂ ಆರೋಪಿಗೂ ಸಂಬಂಧವೇ ಇಲ್ಲ ಎನ್ನುವಂತಿಲ್ಲ. ವಾಟ್ಸಪ್ ಚಾಟ್ ಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಖರೀದಿಸುವ ಬಗ್ಗೆ ಚರ್ಚೆ ನಡೆದಿದೆ. ಇದು ಅಂತರಾಷ್ಟ್ರೀಯ ನಂಟು ಹೊಂದಿರುವ ಸಾಧ್ಯತೆ ಇದೆ. ಅಂತರಾಷ್ಟ್ರೀಯ ಪೆಡ್ಲರ್ ಪತ್ತೆ ಹಚ್ಚಬೇಕು ಅದಕ್ಕೆ ಆರ್ಯನ್ ಖಾನ್ ಅವಶ್ಯಕತೆ ಇದೆ. ಆರ್ಯನ್ ಖಾನ್ ಮೂರು ವರ್ಷಗಳಿಂದ ಡ್ರಗ್ ಬಳಕೆ ಮಾಡುತ್ತಿರುವುದಕ್ಕೆ ಸಾಕ್ಷ್ಯಗಳಿದೆ. ದಾಳಿ ವೇಳೆ ಅವರು ಡ್ರಗ್ ಸೇವನೆಗೆ ಪ್ಲ್ಯಾನ್ ಮಾಡಿದ್ದರು ಎಂದು ಪಂಚೆನಾಮೆಯಿಂದ ತಿಳಿದು ಬಂದಿದೆ. ಸ್ನೇಹಿತರ ಬಳಿ ಮಾದಕ ವಸ್ತುಗಳು ಪತ್ತೆಯಾಗಿದ್ದು ಆರ್ಯನ್ ಇದರ ಭಾಗವಾಗಿದ್ದಾರೆ. ತನಿಖೆಯ ಹಂತದಲ್ಲಿ ಜಾಮೀನು ನೀಡಬಾರದು ಎಂದು ವಾದಿಸಬಹುದು.

  • ಇಂದು ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಭವಿಷ್ಯ ನಿರ್ಧಾರ

    ಇಂದು ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಭವಿಷ್ಯ ನಿರ್ಧಾರ

    ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿ ಎನ್‍ಸಿಬಿ ಬಲೆಗೆ ಬಿದ್ದಿದ್ದ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ತೀರ್ಪು ಹೊರಬಿಳಲಿದೆ. ಇಂದು ಆರ್ಯನ್ ಖಾನ್‍ಗೆ ಜಾಮೀನು ಸಿಗಬಹುದೇ ಅಥವಾ ಇನ್ನಷ್ಟು ದಿನ ಜೈಲುವಾಸ ಮುಂದುವರಿಯುವುದೇ ಎಂಬ ಕುತೂಹಲ ಮನೆಮಾಡಿದೆ.

    ಅಕ್ಟೋಬರ್ 13 ಮತ್ತು 14 ರಂದು ಎರಡು ದಿನ ಆರ್ಯನ್ ಖಾನ್ ಸೇರಿದಂತೆ ಇತರೆ ಆರೋಪಿಗಳ ಜಾಮೀನು ಅರ್ಜಿಗಳ ವಾದ ಆಲಿಸಿದ್ದ ಮುಂಬೈನ ಸೆಷನ್ಸ್ ಕೋರ್ಟ್‍ನ ನ್ಯಾ.ವಿ.ವಿ ಪಾಟೀಲ್‍ರವರ ಪೀಠ ಬಳಿಕ ಅಕ್ಟೋಬರ್ 20ಕ್ಕೆ ತೀರ್ಪು ಕಾಯ್ದಿರಿಸಿತ್ತು. ಅಂತಿಮವಾಗಿ ಇಂದು ಜಾಮೀನು ನೀಡುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ಇನ್ನೊಂದು ವಾರ ಶಾರೂಖ್ ಮಗನಿಗೆ ಜೈಲೇ ಗತಿ

    ವಿಚಾರಣೆಯ ವೇಳೆ ಆರ್ಯನ್ ಖಾನ್ ಪರ ವಾದ ಏನು?
    ಎನ್‍ಸಿಬಿ ದಾಳಿ ವೇಳೆ ಆರ್ಯನ್ ಖಾನ್ ಬಳಿ ಮಾಧಕ ವಸ್ತುಗಳು ಪತ್ತೆಯಾಗಿಲ್ಲ. ದಾಳಿ ವೇಳೆ ಆರ್ಯನ್ ಖಾನ್ ಡ್ರಗ್ಸ್ ಸೇವನೆ ಮಾಡಿರಲಿಲ್ಲ ಮತ್ತು ಅವರ ಬಳಿಕ ಹಣವೂ ಇರಲಿಲ್ಲ, ಹೀಗಾಗಿ ಡ್ರಗ್ ಸೇವನೆ, ಮಾರಾಟ, ಖರೀದಿ ಆರೋಪಗಳೇಲ್ಲ ಸುಳ್ಳು. ಆರ್ಯನ್ ಖಾನ್ ಅತಿಥಿಯಾಗಿ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ಹೆಚ್ಚಿನ ವಿಚಾರಣೆ ಅವಶ್ಯಕತೆ ಇಲ್ಲ ಎಂದು ಹೇಳಿದೆ. ತನ್ನ ವ್ಯಾಪ್ತಿಯಲ್ಲಿ ಪ್ರಕರಣ ಇಲ್ಲದ ಕಾರಣ ಜಾಮೀನು ನೀಡಲು ನಿರಾಕರಿಸಿದೆ. ಅಂತರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಜೊತೆಗೆ ನಂಟು ಆರೋಪಿಸಿದರು ಅದನ್ನು ಪ್ರಕರಣದಲ್ಲಿ ಉಲ್ಲೇಖಿಸಿಲ್ಲ. ಆರ್ಯನ್ ಖಾನ್ ನಿಂದ ಯಾವುದೇ ಸಾಕ್ಷ್ಯ ಸಿಗದ ಹಿನ್ನಲೆ ಇಡೀ ತನಿಖೆ ವಾಟ್ಸಪ್ ಮೇಲೆ ಅವಲಂಬಿಸಿದೆ. ಜಾಮೀನು ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾದ ಮಂಡಿಸಬಹುದು. ಇದನ್ನೂ ಓದಿ: ಆರ್ಯನ್‍ಗೆ ಜಾಮೀನು ಸಿಗುವವರೆಗೂ ಸಿಹಿ ಅಡುಗೆ ಮಾಡ್ಬೇಡಿ – ಸಿಬ್ಬಂದಿಗೆ ಗೌರಿ ಸೂಚನೆ

    ಎನ್‍ಸಿಬಿ ಪರ ವಕೀಲರ ವಾದ ಏನು?
    ಅನೀಲ್ ಸಿಂಗ್, ಆರ್ಯನ್ ಖಾನ್ ನಿಯಮಿತವಾಗಿ ಡ್ರಗ್ ಸೇವನೆ ಮಾಡುತ್ತಿದ್ದಾರೆ. ಮಾಹಿತಿಗಳ ಪ್ರಕರಣ ಮೂರು ವರ್ಷದಿಂದ ಮಾದಕ ವಸ್ತುಗಳ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಸ್ನೇಹಿತ ಅರ್ಬಾಜ್ ಮಚೆರ್ಂಟ್ ಬಳಿಕ ಮಾದಕ ವಸ್ತು ಪತ್ತೆಯಾಗಿದ್ದು, ಆರ್ಯನ್ ಖಾನ್ ಕೂಡಾ ಮಾದಕ ವ್ಯಸನಿ ಎನ್ನುವುದು ಸೂಚಿಸುತ್ತಿದೆ ಆರ್ಯನ್ ಖಾನ್ ತಮ್ಮ ಬಳಿ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ವಾದಿಸಬಹುದು, ಆದರೆ ಆತನ ಸ್ನೇಹಿತ ತನ್ನ ಬಳಿ ಡ್ರಗ್ ಇರುವುದು ಒಪ್ಪಿಕೊಂಡಿದ್ದಾನೆ. ಪಂಚೆನಾಮೆಗೂ ಆರೋಪಿಗಳು ಸಹಿ ಮಾಡಿದ್ದಾರೆ. ಎನ್‍ಡಿಪಿಎಸ್ ಕಾಯ್ದೆಯಡಿ ಆರೋಪಿಗಳಿಂದ ಎಷ್ಟು ಪ್ರಮಾಣದ ಮಾದಕ ವಸ್ತುವನ್ನು ವಶಕ್ಕೆ ಪಡೆದೆವು ಎನ್ನುವುದು ಮುಖ್ಯವಲ್ಲ. ಆರೋಪಿಗೆ ಪ್ರಕರಣಕ್ಕಿರುವ ನಂಟನ್ನು ಭೇದಿಸಬೇಕಿದೆ. ಹೀಗಾಗಿ ಇದು ಒಂದು ವರ್ಷದ ಶಿಕ್ಷೆಯ ಪ್ರಕರಣವೂ ಎನ್ನುವಂತಿಲ್ಲ. ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕು, ಯಾರನ್ನು ತನಿಖೆ ಒಳಪಡಿಸಬೇಕು ಅದು ತನಿಖಾಧಿಕಾರಿಯ ಹಕ್ಕು. ಈ ಹಂತದಲ್ಲಿ ಜಾಮೀನು ನೀಡಬಾರದು ಎಂದು ಅನಿಲ್ ಸಿಂಗ್ ಕೋರ್ಟ್ ಗೆ ಮನವಿ ಮಾಡಿದ್ದರು.

    ಮಾದಕ ವಸ್ತುಗಳು ಪತ್ತೆಯಾಗಿಲ್ಲ ಎಂದ ಮಾತ್ರಕ್ಕೆ ಪ್ರಕರಣಕ್ಕೂ ಆರೋಪಿಗೂ ಸಂಬಂಧವೇ ಇಲ್ಲ ಎನ್ನುವಂತಿಲ್ಲ. ವಾಟ್ಸಪ್ ಚಾಟ್ ಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಖರೀದಿಸುವ ಬಗ್ಗೆ ಚರ್ಚೆ ನಡೆದಿದೆ. ಇದು ಅಂತರಾಷ್ಟ್ರೀಯ ನಂಟು ಹೊಂದಿರುವ ಸಾಧ್ಯತೆ ಇದೆ. ಅಂತರಾಷ್ಟ್ರೀಯ ಪೆಡ್ಲರ್ ಪತ್ತೆ ಹಚ್ಚಬೇಕು ಅದಕ್ಕೆ ಆರ್ಯನ್ ಖಾನ್ ಅವಶ್ಯಕತೆ ಇದೆ. ಆರ್ಯನ್ ಖಾನ್ ಮೂರು ವರ್ಷಗಳಿಂದ ಡ್ರಗ್ ಬಳಕೆ ಮಾಡುತ್ತಿರುವುದಕ್ಕೆ ಸಾಕ್ಷ್ಯಗಳಿದೆ. ದಾಳಿ ವೇಳೆ ಅವರು ಡ್ರಗ್ ಸೇವನೆಗೆ ಪ್ಲ್ಯಾನ್ ಮಾಡಿದ್ದರು ಎಂದು ಪಂಚೆನಾಮೆಯಿಂದ ತಿಳಿದು ಬಂದಿದೆ. ಸ್ನೇಹಿತರ ಬಳಿ ಮಾದಕ ವಸ್ತುಗಳು ಪತ್ತೆಯಾಗಿದ್ದು ಆರ್ಯನ್ ಇದರ ಭಾಗವಾಗಿದ್ದಾರೆ. ತನಿಖೆಯ ಹಂತದಲ್ಲಿ ಜಾಮೀನು ನೀಡಬಾರದು ಎಂದು ವಾದಿಸಬಹುದು. ಇದನ್ನೂ ಓದಿ: ಇನ್ಮುಂದೆ ತಪ್ಪು ಮಾಡಲ್ಲ, ಬಡವರಿಗೆ ನೆರವಾಗುತ್ತೇನೆ: ಆರ್ಯನ್ ಖಾನ್

  • ಆರ್ಯನ್‍ಗೆ ಜಾಮೀನು ಸಿಗುವವರೆಗೂ ಸಿಹಿ ಅಡುಗೆ ಮಾಡ್ಬೇಡಿ – ಸಿಬ್ಬಂದಿಗೆ ಗೌರಿ ಸೂಚನೆ

    ಆರ್ಯನ್‍ಗೆ ಜಾಮೀನು ಸಿಗುವವರೆಗೂ ಸಿಹಿ ಅಡುಗೆ ಮಾಡ್ಬೇಡಿ – ಸಿಬ್ಬಂದಿಗೆ ಗೌರಿ ಸೂಚನೆ

    ಮುಂಬೈ:  ಡ್ರಗ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ (NCB) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಜಾಮೀನು ಪಡೆದು ಜೈಲಿನಿಂದ ಹೊರ ಬರುವವರೆಗೂ ಮನೆಯಲ್ಲಿ ಸಿಹಿ ತಿನಿಸು ಮಾಡದಂತೆ ಅಡುಗೆ ಸಿಬ್ಬಂದಿಗೆ ತಾಯಿ ಗೌರಿ ಖಾನ್ ಸೂಚನೆ ನೀಡಿದ್ದಾರೆ.

    ದಸರಾ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಮನ್ನತ್ ನಿವಾಸದಲ್ಲಿ ಖೀರ್ ಮಾಡಲಾಗುತ್ತಿತ್ತು. ಇದನ್ನು ಶಾರೂಖ್ ಖಾನ್ ಪತ್ನಿ ಗೌರಿ ಗಮನಿಸಿದ್ದಾರೆ. ಅಲ್ಲದೆ ಅಡುಗೆ ಸಿಬ್ಬಂದಿಗೆ ಆರ್ಯನ್ ಖಾನ್ ಜಾಮೀನು ಪಡೆದು ಜೈಲಿನಿಂದ ಹೊರ ಬರುವವರೆಗೂ ಸಿಹಿ ತಿನಿಸು ಮಾಡದಂತೆ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಇನ್ಮುಂದೆ ತಪ್ಪು ಮಾಡಲ್ಲ, ಬಡವರಿಗೆ ನೆರವಾಗುತ್ತೇನೆ: ಆರ್ಯನ್ ಖಾನ್

    ಆರ್ಯನ್ ಖಾನ್ ಜೈಲು ಸೇರಿದ ಮೇಲೆ ಮನ್ನತ್ ನಲ್ಲಿ ಖುಷಿಯ ವಾತಾವರಣ ಇಲ್ಲ. ಅವರು ಯಾರನ್ನೂ ಭೇಟಿಯಾಗಲು ಬಯಸುತ್ತಿಲ್ಲ ಎಂದು ಆಪ್ತ ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಗೌರಿ ಹಬ್ಬದ ದಿನಗಳಲ್ಲೂ ಸಿಹಿ ತಿನಿಸು ಮಾಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಅಕ್ಟೋಬರ್ 2 ರಂದು ಮುಂಬೈನಿಂದ ಗೋವಾಗೆ ಹೊರಟಿದ್ದ ಐಷರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಲಾಗಿತ್ತಿತ್ತು. ಈ ಪಾರ್ಟಿಯಲ್ಲಿ ಸ್ನೇಹಿತರ ಜೊತೆಗೆ ಭಾಗಿಯಾಗಿದ್ದ ಆರ್ಯನ್ ಖಾನ್ ಡ್ರಗ್ ಸೇವನೆ ಮಾಡಿದ್ದರು ಎಂದು ಆರೋಪಿಸಿ ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ಖಾನ್ ಜಾಮೀನು ಅರ್ಜಿ ಆದೇಶ ಅಕ್ಟೋಬರ್ 20 ರಂದು ಪ್ರಕಟವಾಗಲಿದೆ.