Tag: ಆರ್ಯನ್ ಖಾನ್

  • ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಬಾಲಿವುಡ್‌ನ ನಂಬರ್ ಒನ್ ಶೋ `ಕಾಫಿ ವಿತ್ ಕರಣ್’ ಸಖತ್ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಆಲಿಯಾ ಭಟ್ ಮತ್ತು ರಣ್‌ವೀರ್ ಸಿಂಗ್ ಈ ಶೋನಲ್ಲಿ ಕಾಣಿಸಿಕೊಂಡು ಮನಬಿಚ್ಚಿ ಮಾತನಾಡಿದ್ದರು. ಶಾರುಖ್ ಪತ್ನಿ ಗೌರಿ ಖಾನ್ ಕೂಡ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

    ಕಾಫಿ ವಿತ್ ಕರಣ್ ಸೀಸನ್ 7 ಸದ್ಯ ಓಟಿಟಿನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆಲಿಯಾ ಮತ್ತು ರಣ್‌ವೀರ್ ಸಂದರ್ಶನದ ಬೆನ್ನಲ್ಲೇ ಗೌರಿ ಖಾನ್ ಕೂಡ ಮಹೀರ್ ಕಪೂರ್ ಮತ್ತು ಭಾವನಾ ಪಾಂಡೆ ಜತೆ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಗೌರಿ ಖಾನ್, ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಬಗ್ಗೆ ಮಾತನಾಡಿದ್ದಾರೆ. ಆ ಸಮಯದಲ್ಲಿ ಎದುರಿಸಿದ ಸವಾಲಿನ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ʻಬಿಗ್ ಬಾಸ್’ ಮನೆಗೆ ಇವರಿಗಿದೆಯಂತೆ ಎಂಟ್ರಿ: ಸಂಭವನೀಯ ಪಟ್ಟಿ ರಿಲೀಸ್

    ಕಳೆದ ವರ್ಷ ಡ್ರಗ್ಸ್ ಕೇಸ್‌ನಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಅರೆಸ್ಟ್ ಆಗಿದ್ದರು. ಕಾನೂನು ಹೋರಾಟದ ನಂತರ ಎನ್‌ಸಿಬಿ ಕ್ಲಿನ್ ಚೀಟ್ ನೀಡಿತ್ತು. ಇಷ್ಟೇಲ್ಲಾ ಆರ್ಯನ್ ಖಾನ್‌ನ ಡ್ರಗ್ಸ್ ಕೇಸ್‌ನಲ್ಲಿ ಅವಾಂತರ ಆಗಿತ್ತು. ಈ ಕುರಿತು ಶಾರುಖ್ ದಂಪತಿ ಯಾವುದೇ ರಿಯಾಕ್ಷನ್ ಕೊಟ್ಟಿರಲಿಲ್ಲ. ಆರ್ಯನ್ ಕೇಸ್‌ನ ವಿಚಾರದಲ್ಲಿ ಮೌನ ವಹಿಸಿದ್ದರು. ಈಗ `ಕಾಫಿ ವಿತ್ ಕರಣ್’ ಶೋನಲ್ಲಿ ಈ ಕುರಿತು ಗೌರಿ ಖಾನ್ ಮನಬಿಚ್ಚಿ ಮಾತನಾಡಿದ್ದಾರಂತೆ. ಅಷ್ಟಕ್ಕೂ ಈ ವಿಚಾರ ನಿಜಾನಾ ಅಂತಾ ಶೋ ತೆರೆಯ ಮೇಲೆ ಬರುವವೆರೆಗೂ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಸ್ ಪೋರ್ಟ್ ಗಾಗಿ ಮುಂಬೈ ಹೈಕೋರ್ಟ್ ಮೆಟ್ಟಿಲು ಏರಿದ ಶಾರುಖ್ ಪುತ್ರ

    ಪಾಸ್ ಪೋರ್ಟ್ ಗಾಗಿ ಮುಂಬೈ ಹೈಕೋರ್ಟ್ ಮೆಟ್ಟಿಲು ಏರಿದ ಶಾರುಖ್ ಪುತ್ರ

    ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮುಂಬೈ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ. ಈ ಹಿಂದೆ ಅವರ ಮೇಲೆ ಡ್ರಗ್ಸ್ ಕೇಸ್ ಆರೋಪ ಹೊರಿಸಲಾಗಿತ್ತು. ಅಲ್ಲದೇ, ಜೈಲಿಗೂ ಕಳುಹಿಸಲಾಗಿತ್ತು. ಈ ಸಮಯದಲ್ಲಿ ದೇಶ ಬಿಡದಿರುವಂತೆ ಸೇರಿದಂತೆ ಹಲವು ನಿಬಂಧನೆಗಳನ್ನು ಹಾಕಿ ಜಾಮೀನಿನ ಮೇಲೆ ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಹಾಗಾಗಿ ಅವರ ಪಾಸ್ ಪೋರ್ಟ್ ಅನ್ನು ಎನ್.ಸಿ.ಬಿ ವಶಪಡಿಸಿಕೊಂಡಿತ್ತು.

    ಇದೀಗ ಆರ್ಯನ್ ಗೆ ಕ್ಲೀನ್ ಚಿಟ್ ನೀಡಲಾಗಿದೆ. ಡ್ರಗ್ಸ್ ಕೇಸ್ ನಲ್ಲಿ ಅವರು ಡ್ರಗ್ಸ್ ಸೇವಿಸಿರಲಿಲ್ಲ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಕೇಸ್ ಕೈ ಬಿಡಲಾಗಿದೆ. ಹಾಗಾಗಿ ವಶಪಡಿಸಿಕೊಂಡಿರುವ ತಮ್ಮ ಪಾಸ್ ಪೋರ್ಟ್ ಅನ್ನು ಮರಳಿ ಕೊಡಿಸುವಂತೆ ಅವರು ಮುಂಬೈ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ. ಅವರು ವಿದೇಶಕ್ಕೆ ತೆರಳಬೇಕಾಗಿದ್ದರಿಂದ ಆದಷ್ಟು ಬೇಗ ಪಾಸ್ ಪೋರ್ಟ್ ಕೊಡಿಸುವಂತೆ ಆರ್ಯನ್ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್

    ಮುಂಬೈನ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ಆರ್ಯನ್ ಭಾಗಿಯಾಗಿದ್ದರು ಮತ್ತು ಡ್ರಗ್ಸ್ ಸೇವಿಸಿದ್ದರು ಎನ್ನುವ ಕಾರಣಕ್ಕಾಗಿ 2021 ಅಕ್ಟೋಬರ್ 2 ರಂದು ಬಂಧನವಾಗಿತ್ತು. 25 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೂ ಅವರನ್ನು ಕಳುಹಿಸಲಾಗಿತ್ತು. 25 ದಿನಗಳ ಬಳಿಕೆ ಅವರಿಗೆ ಜಾಮೀನು ಸಿಕ್ಕಿತ್ತು. ನಂತರ ಯಾವುದೇ ಸಾಕ್ಷಿಗಳು ಸಿಗಲಿಲ್ಲ ಅನ್ನುವ ಕಾರಣಕ್ಕಾಗಿ ಕೇಸ್ ಖುಲಾಸೆ ಆಗಿತ್ತು.

    Live Tv

  • ಶಾರುಖ್ ಪುತ್ರನಿಗೆ ಕ್ಲೀನ್ ಚೀಟ್ ನೀಡಿದ ಬಳಿಕ ರಿಯಾ ಚಕ್ರವರ್ತಿ ಡ್ರಗ್ ಕೇಸ್ ತನಿಖೆಗೆ ಮನವಿ

    ಶಾರುಖ್ ಪುತ್ರನಿಗೆ ಕ್ಲೀನ್ ಚೀಟ್ ನೀಡಿದ ಬಳಿಕ ರಿಯಾ ಚಕ್ರವರ್ತಿ ಡ್ರಗ್ ಕೇಸ್ ತನಿಖೆಗೆ ಮನವಿ

    ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಎನ್‌ಸಿಬಿ ಕ್ಲೀನ್ ಚೀಟ್ ನೀಡಿದ ಬೆನ್ನಲ್ಲೆ ರಿಯಾ ಚಕ್ರವರ್ತಿ ವಿರುದ್ಧ ದಾಖಲಾದ ಡ್ರಗ್ ಪ್ರಕರಣದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ನಟಿ ರಿಯಾ ಪರ ವಕೀಲ ಸತೀಶ್ ಮನೇಶಿಂಡೆ ಒತ್ತಾಯಿಸಿದ್ದಾರೆ.

    ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ವಿಚಾರವಾಗಿ ಯಾವುದೇ ಸಾಕ್ಷಿ ಆಧಾರಯಿಲ್ಲದೇ ಇರುವ ಕಾರಣ ಎನ್‌ಸಿಬಿ ಕ್ಲೀನ್ ಚೀಟ್ ನೀಡಿದ್ದಾರೆ. ಇದರ ಬೆನ್ನಲ್ಲೇ ರಿಯಾ ಚಕ್ರವರ್ತಿ ಪರ ವಕೀಲ ಡ್ರಗ್ಸ್ ಪ್ರಕರಣ ಹೊಸದಾಗಿ ತನಿಖೆ ನಡೆಯಬೇಕು ಎಂದು ಮನವಿ ಮಾಡಿದ್ದಾರೆ. ೨೦೨೦ರಲ್ಲಿ ರಿಯಾ ಮತ್ತು ಶ್ಲೋಕ್ ಚಕ್ರವರ್ತಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಳಿಕ ಕೆಲ ದಿನಗಳ ಬಳಿಕ ಇಬ್ಬರನ್ನು ರಿಲೀಸ್ ಮಾಡಲಾಯ್ತು. ಇದನ್ನೂ ಓದಿ:ಬೈಕಾಟ್ ಲಾಲ್ ಸಿಂಗ್ ಛಡ್ಡಾ: ಅಮೀರ್ ಖಾನ್ ಚಿತ್ರಕ್ಕೆ ಸಂಕಷ್ಟ

    ಈಗ ಡ್ರಗ್ಸ್ ಪ್ರಕರಣದಲ್ಲಿ ಮತ್ತೆ ಹೊಸದಾಗಿ ತನಿಖೆಯಾಗಬೇಕು. ಯಾವುದೇ ಮಾದಕ ದ್ರವ್ಯ ಪತ್ತೆಯಾಗಿಲ್ಲ, ಯಾವುದೇ ಪರೀಕ್ಷೆ ಕೂಡ ಮಾಡಲಾಗಿಲ್ಲ. ಕೇವಲ ವಾಟ್ಸಾಪ್ ಚಾಟ್‌ಗಳಷ್ಟೇ ಇದ್ದವು. ಹಾಗಾಗಿ ಈ ಕುರಿತು ಹೆಚ್ಚಿನ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಾಕಷ್ಟು ಜನರಿಗೆ ಎನ್‌ಸಿಬಿ ತೊಂದರೆ ಕೊಟ್ಟಿದೆ. ಅವರ ವಿರುದ್ಧವು ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ.

  • ಡ್ರಗ್ಸ್ ಕೇಸ್ ಕ್ಲೀನ್ ಚಿಟ್ ಸಿಕ್ಕ ಬೆನ್ನಲ್ಲೆ ಅಮೆರಿಕಾಗೆ ಹೊರಟು ನಿಂತ ಶಾರುಖ್ ಪುತ್ರ

    ಡ್ರಗ್ಸ್ ಕೇಸ್ ಕ್ಲೀನ್ ಚಿಟ್ ಸಿಕ್ಕ ಬೆನ್ನಲ್ಲೆ ಅಮೆರಿಕಾಗೆ ಹೊರಟು ನಿಂತ ಶಾರುಖ್ ಪುತ್ರ

    ಕ್ರೂಸ್ ಶಿಪ್ ನಲ್ಲಿ ನಡೆದಿದೆ ಎನ್ನಲಾದ ಡ್ರಗ್ಸ್ ಪಾರ್ಟಿಯಲ್ಲಿ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನವಾಗಿ, ಆನಂತರ ಜಾಮೀನು ಮೇಲೆ ಬಿಡುಗಡೆ ಆಗಿದ್ದರು. ಇದೀಗ ಆ ಕೇಸ್ ಕುರಿತಾಗಿ ವರದಿ ಸಲ್ಲಿಸಿದ್ದು, ಈ ಕೇಸ್ ನಲ್ಲಿ ಆರ್ಯನ್ ಗೆ ಕ್ಲೀನ್ ಚಿಟ್ ನೀಡಲಾಗಿದೆ. ಹಾಗಾಗಿ ವಶಪಡಿಸಿಕೊಂಡಿರುವ ಪಾಸ್ ಪೋರ್ಟ್ ಅವರಿಗೆ ಮರಳಿ ಸಿಗಲಿದೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಕೇಸ್ ಗೆ ಸಂಬಂಧಿಸಿದಂತೆ ಕೋರ್ಟ್ ಅವರಿಗೆ ವಿದೇಶಕ್ಕೆ ತೆರಳದಂತೆ ನಿರ್ಬಂಧ ಹೇರಿತ್ತು. ಪಾಸ್ ಪೋರ್ಟ್ ವಶಪಡಿಸಿಕೊಂಡಿತ್ತು. ಇದೀಗ ಕ್ಲೀನ್ ಚಿಟ್ ಸಿಕ್ಕಿದ್ದರಿಂದ ವಿದೇಶಕ್ಕೆ ತೆರಳಲು ಅನುಮತಿ ಸಿಗಲಿದೆ ಮತ್ತು ವಶದಲ್ಲಿರುವ ಪಾಸ್ ಪೋರ್ಟ್ ಮರಳಿ ಸಿಗಲಿದೆ. ಪಾಸ್ ಪೋರ್ಟ್ ಸಿಗುತ್ತಿದ್ದಂತೆಯೇ ಅಮೆರಿಕಾಗೆ ಹಾರಲು ಆರ್ಯನ್ ಸಿದ್ಧರಾಗುತ್ತಿದ್ದಾರೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

    ಶಾರುಖ್ ಖಾನ್ ಪುತ್ರಿಗೆ ನಟಿಯಾಗಿ ಸಿನಿಮಾ ರಂಗಕ್ಕೆ ಬರಲು ಒಲವಿದ್ದರೆ, ಮಗನಿಗೆ ನಟನಾಗಲು ಇಷ್ಟವಿಲ್ಲವಂತೆ. ನಿರ್ದೇಶನ ಮಾಡುವ ಉತ್ಸಾಹವಿದೆ. ಅಲ್ಲದೇ, ವೆಬ್ ಸೀರಿಸ್ ಮಾಡಲು ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇದರ ತಯಾರಿಗಾಗಿ ಆರ್ಯನ್ ಅಮೆರಿಕಾಗೆ ಹೊರಡಬೇಕಂತೆ. ಅಮೆರಿಕಾದಲ್ಲೇ ಸಿದ್ಧತೆ ಮುಗಿಸಿಕೊಂಡು ಭಾರತಕ್ಕೆ ವಾಪಸ್ಸಾಗಲಿದ್ದಾರೆ ಎಂದು ಸುದ್ದಿಯಾಗಿದೆ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಆರ್ಯನ್ ಗೆ ನಿರ್ದೇಶಕನಾಗುವ ಕನಸು ಬಾಲ್ಯದಿಂದಲೇ ಇದೆಯಂತೆ. ಅಪ್ಪನಂತೆ ನಟನಾಗುವುದಕ್ಕಿಂತ ನಿರ್ದೇಶಕನಾಗಿ ಸಾಧನೆ ಮಾಡಬೇಕು ಎನ್ನುವುದು ಮೊದಲಿನಿಂದಲೂ ತುಡಿತ. ಅದಕ್ಕೆ ಶಾರುಖ್ ಕೂಡ ಬೆಂಬಲ ಕೊಡುತ್ತಿದ್ದಾರಂತೆ. ಹಾಗಾಗಿ ಮುಂದಿನ ದಿನಗಳಲ್ಲಿ ಆರ್ಯನ್ ನಿರ್ದೇಶಕನಾಗಿ ಲಾಂಚ್ ಆಗಲಿದ್ದಾರೆ.

  • ಸಾಕ್ಷ್ಯಾಧಾರಗಳ ಕೊರತೆ- ಆರ್ಯನ್ ಖಾನ್ ಸೇರಿ 6 ಮಂದಿಗೆ ಎನ್‍ಸಿಬಿ ಕ್ಲೀನ್‌ಚಿಟ್

    ಸಾಕ್ಷ್ಯಾಧಾರಗಳ ಕೊರತೆ- ಆರ್ಯನ್ ಖಾನ್ ಸೇರಿ 6 ಮಂದಿಗೆ ಎನ್‍ಸಿಬಿ ಕ್ಲೀನ್‌ಚಿಟ್

    ನವದೆಹಲಿ: ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರುಖ್‍ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಆರು ಮಂದಿ ಆರೋಪಿಗಳಿಗೆ ಎನ್‍ಸಿಬಿ ಕ್ಲೀನ್‌ಚಿಟ್ ನೀಡಿದೆ. ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪದಿಂದ ಮುಕ್ತಗೊಳಿಸಲಾಗಿದೆ.

    ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸೈನ್ಸ್ (NDPS) ಕಾಯ್ದೆಯಡಿ ವಿಶೇಷ ನ್ಯಾಯಾಧೀಶರ ಮುಂದೆ NCB ಇಂದು ಪ್ರಕರಣದ ಆರೋಪಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ.

    ಚಾರ್ಜ್‍ಶೀಟ್‍ನಲ್ಲಿ, ಎನ್‍ಸಿಬಿಯ ವಿಶೇಷ ತನಿಖಾ ತಂಡ (ಎಸ್‍ಐಟಿ) 20 ಆರೋಪಿಗಳಲ್ಲಿ 14 ಆರೋಪಿಗಳನ್ನು ಆರೋಪಿಸಿದ್ದು, ಖಾನ್ ಸೇರಿದಂತೆ 6 ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಿಚಾರಣೆ ನಡೆಸುತ್ತಿಲ್ಲ ಎಂದು ಹೇಳಿದೆ. ಆರ್ಯನ್ ಖಾನ್, ಅವಿನ್ ಶಾಹು, ಗೋಪಾಲ್ ಜಿ ಆನಂದ್, ಸಮೀರ್ ಸೈಘನ್, ಭಾಸ್ಕರ್ ಅರೋಡಾ ಮತ್ತು ಮಾನವ್ ಸಿಂಘಾರ ವಿರುದ್ಧ ತನಿಖೆ ನಡೆಸುತ್ತಿಲ್ಲ ಎಂದು ತಿಳಿಸಿದೆ.

    20 ಮಂದಿಯ ಪೈಕಿ 14 ಮಂದಿಯ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ದೂರು ದಾಖಲಿಸಲಾಗುತ್ತಿದೆ. ಉಳಿದ 6 ಮಂದಿಯ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದ ಅರ್ಜಿ ಸಲ್ಲಿಸಲಾಗುತ್ತಿಲ್ಲ ಎಂದು ಎನ್‍ಸಿಬಿ ತನ್ನ ಮಾಧ್ಯಮ ಪ್ರಕಟಣೆಯಲ್ಲೂ ತಿಳಿಸಿದೆ.

    ಅಕ್ಟೋಬರ್ 2, 2021 ರಂದು ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ ಎನ್‍ಸಿಬಿ, ಆರ್ಯನ್ ಖಾನ್ ಸೇರಿ ಹಲವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡಿತು. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟೆನ್ಸ್ (ಎನ್‍ಡಿಪಿಎಸ್) ಕಾಯ್ದೆಯ ಸೆಕ್ಷನ್ 8(ಸಿ), 20(ಬಿ), 27, 28, 29 ಮತ್ತು 35 ರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೂಪಿಸಲಾಗಿತ್ತು. ಇದನ್ನೂ ಓದಿ: ರಾಜ್ಯದಲ್ಲಿ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ: ಮುರುಗೇಶ್ ನಿರಾಣಿ

    ಎನ್‍ಸಿಬಿ 13 ಗ್ರಾಂ ಕೊಕೇನ್, 5 ಗ್ರಾಂ ಮೆಫೆಡ್ರೋನ್ ಎಂಡಿ, 21 ಗ್ರಾಂ ಚರಸ್ ಮತ್ತು 22 ಎಂಡಿಎಂಎ ಎಕ್ಸ್‍ಟಾಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದೆ ಎಂದು ಈ ಹಿಂದೆ ಎನ್‍ಸಿಬಿ ಹೇಳಿತ್ತು. ಕೆಳ ಹಂತದ ನ್ಯಾಯಾಲಯಗಳಲ್ಲಿ ಜಾಮೀನು ನಿರಾಕರಿಸಿದ ಹಿನ್ನಲೆ ಮುಂಬೈ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಆರ್ಯನ್ ಖಾನ್, ಅಕ್ಟೋಬರ್ 28, 2021 ರಂದು ಜಾಮೀನು ಪಡೆದುಕೊಂಡಿದ್ದರು. ಇದನ್ನೂ ಓದಿ: ಪೊಲೀಸರಿಂದ ದೌರ್ಜನ್ಯ ಆರೋಪ – ನಾಲ್ವರ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

  • ಆರ್ಯನ್ ಖಾನ್ ಡ್ರಗ್ಸ್ ಕೇಸ್‌ – ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್‍ಗೆ ಹೃದಯಾಘಾತ

    ಆರ್ಯನ್ ಖಾನ್ ಡ್ರಗ್ಸ್ ಕೇಸ್‌ – ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್‍ಗೆ ಹೃದಯಾಘಾತ

    ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಪುತ್ರ ಆರ್ಯನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಅವರು ಹೃದಯಾಘಾತಕ್ಕೀಡಾಗಿ ಇಂದು ಮೃತಪಟ್ಟಿದ್ದಾರೆ.

    ARYAN

    ಚೆಂಬೂರಿನ ಮಹುಲ್ ಪ್ರದೇಶದ ತಮ್ಮ ನಿವಾಸದಲ್ಲಿ ಪ್ರಭಾಕರ್ ಸೈಲ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವಕೀಲ ತುಷಾರ್ ಖಂಡಾರೆ ತಿಳಿಸಿದ್ದಾರೆ. ಪ್ರಭಾಕರ್ ಸೈಲ್ ಅವರ ಮೃತದೇಹವನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಅಂಧೇರಿಯಲ್ಲಿರುವ ಅವರ ಮನೆಗೆ ತಂದು ಅಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

    ಸೈಲ್ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸದ್ಯ ಅಂತ್ಯಕ್ರಿಯೆ ನಡೆಸಲು ಸೈಲ್ ಸಹೋದರನ ಬರುವಿಕೆಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾನೂನು ಸುವ್ಯವಸ್ಥೆ ಅತ್ಯಂತ ಕೆಳಮಟ್ಟದಲ್ಲಿದೆ: ನವಜೋತ್ ಸಿಂಗ್

    ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಕಾರ್ಡೆಲಿಯಾ ಕ್ರೂಸ್ ಡ್ರಗ್ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈ ಪ್ರಕರಣದ ತನಿಖೆಯನ್ನು ಎನ್‍ಸಿಬಿ ಕೈಗೊಂಡಿದೆ. ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಆರ್ಯನ್ ಖಾನ್ ಕೂಡಾ ಆರೋಪಿಯಾಗಿದ್ದು, ಇದೇ ವೇಳೆ ಪ್ರಭಾಕರ್ ಸೈಲ್ ಹೆಸರು ಕೂಡ ಬೆಳಕಿಗೆ ಬಂದಿತ್ತು. ಡ್ರಗ್ಸ್ ಪ್ರಕರಣದ ಪ್ರಮುಖ ವ್ಯಕ್ತಿಯಾದ ಕಿರಣ್ ಗೋಸಾವಿ ಅವರ ಅಂಗರಕ್ಷಕರಾಗಿದ್ದ ಪ್ರಭಾಕರ್ ಸೈಲ್ ಅವರು ಎನ್‍ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸುಲಿಗೆ ಆರೋಪ ಮಾಡಿದ್ದರು.

  • ಓಟಿಟಿ ಜಗತ್ತಿಗೆ ಕಾಲಿಟ್ಟ ಶಾರೂಖ್ ಖಾನ್

    ಓಟಿಟಿ ಜಗತ್ತಿಗೆ ಕಾಲಿಟ್ಟ ಶಾರೂಖ್ ಖಾನ್

    ಮುಂಬೈ: ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಈಗಾಗಲೇ ಹಲವು ರೀತಿಯ ಬ್ಯುಸ್ನೆಸ್ ಮಾಡುತ್ತಿದ್ದಾರೆ. ಅದಕ್ಕೆ ಸೇರ್ಪಡೆ ಎನ್ನುವಂತೆ ಮತ್ತೊಂದು ಕಾಯಕವನ್ನು ಶೂರು ಮಾಡಿದ್ದಾರೆ. ಜಗತ್ತಿನಾದ್ಯಂತ ಹೊಸ ಸಂಚಲನ ಮೂಡಿಸಿರುವ ಮತ್ತು ಮನೆಯಲ್ಲಿಯೇ ಕೂತು ಸಿನಿಮಾ ವೀಕ್ಷಿಸಲು ನೆರವಾಗಿರುವ ಓಟಿಟಿ ಓನರ್ ಆಗಿ ಶಾರೂಖ್ ಆ ಜಗತ್ತಿಗೆ ಕಾಲಿಟ್ಟಿದ್ದಾರೆ. ಈಗ ತಮ್ಮದೇ ಎಸ್‍ಆರ್‌ಕೆ+ ಎಂಬ ಒಟಿಟಿ ಪ್ಲಾಟ್‍ಫಾರ್ಮ್ ರೆಡಿ ಮಾಡಿಕೊಂಡಿದ್ದು, ಅದನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ‘ಎಸ್‍ಆರ್‌ಕೆ+ ಶೀಘ್ರದಲ್ಲೇ ಬರಲಿದೆ’ ಎಂಬ ಫಾಂಟ್‍ನ ಪಕ್ಕದಲ್ಲಿ ಥಂಬ್ಸ್ ಅಪ್ ನೀಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, (ಕುಚ್ ಕುಚ್ ಹೋನೆ ವಾಲಾ ಹೈ, ಒಟಿಟಿ ಕಿ ದುನಿಯಾ ಮೇ) ಈ ಮೂಲಕ ಓಟಿಟಿ ಜಗತ್ತಿನಲ್ಲಿ ಏನೆಲ್ಲಾ ಆಗೋದಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು, ಆದರೆ…: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ

     

    View this post on Instagram

     

    A post shared by Shah Rukh Khan (@iamsrk)

    ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಶಾರೂಖ್ ಅವರ ಟ್ವೀಟ್‍ಗೆ ರಿ-ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಕನಸು ನನಸಾಗುತ್ತಿದೆ ಅವರ ಹೊಸ ಒಟಿಟಿ ಅಪ್ಲಿಕೇಶನ್, ಎಸ್‍ಆರ್‌ಕೆ+ ನಲ್ಲಿ ನಾನು ಕೂಡ ಸಹಭಾಗಿತ್ವ ಪಡೆದುಕೊಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಮಾದಕ ವಸ್ತು ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಆರ್ಯನ್ ಖಾನ್ ವಿವಾದದಲ್ಲಿ ಸಿಲುಕಿದ ಮೇಲೆ ಶಾರೂಖ್ ಖಾನ್ ಮೌನಕ್ಕೆ ಶರಣಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೇ, ಎನ್‍ಸಿಬಿಯ ವಿಶೇಷ ತನಿಖಾ ತಂಡ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಆರ್ಯನ್ ಖಾನ್ ಡ್ರಗ್ಸ್ ಹೊಂದಿರಲಿಲ್ಲ, ಆದ್ದರಿಂದ ಅವರ ಫೋನ್ ತೆಗೆದುಕೊಂಡು ಅವರ ಚಾಟ್‍ಗಳನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೆ ನಿರಾಳತೆಗೆ ಜಾರಿದ್ದರು.

    ಮತ್ತೆ ಶಾರೂಖ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ‘ಪಠಾಣ್’ ಚಿತ್ರದ ಫಸ್ಟ್ ಲುಕ್‍ನೊಂದಿಗೆ ಅಭಿಮಾನಿಗಳ ಹುಮ್ಮಸ್ಸು ಹೆಚ್ಚಿಸಿದ್ದರು.

  • ಡ್ರಗ್ಸ್‌ ಕೇಸ್‌ – ಆರ್ಯನ್‌ ಖಾನ್‌ ಖುಲಾಸೆ?

    ಡ್ರಗ್ಸ್‌ ಕೇಸ್‌ – ಆರ್ಯನ್‌ ಖಾನ್‌ ಖುಲಾಸೆ?

    ಮುಂಬೈ: ಡ್ರಗ್ಸ್ ಕೇಸ್‍ನಲ್ಲಿ ಅರೆಸ್ಟ್ ಆಗಿ ಬಿಡುಗಡೆಯಾಗಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದಿಂದಲೇ ಖುಲಾಸೆಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ARYAN KHAN

    ಅಂತರಾಷ್ಟ್ರೀಯ ಡ್ರಗ್ಸ್ ಜಾಲದ ಸಂಪರ್ಕವಿದೆ ಎಂದು ಆರ್ಯನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪರಿಣಾಮ ಅವರನ್ನು ವಿಚಾರಣೆಯನ್ನು ಸಹ ಮಾಡಲಾಗಿದ್ದು, 22 ದಿನಗಳ ಕಾಲ ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ ಕೆಲವು ದಿನಗಳ ನಂತರ ಅವರಿಗೆ ಜಾಮೀನು ಸಹ ನೀಡಲಾಗಿತ್ತು. ಆದರೆ ಈಗ ಈ ಪ್ರಕರಣದಲ್ಲಿ ಆರ್ಯನ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಲಿಲ್ಲ ಎಂದು ವರದಿ ಆಗಿದ್ದು, ಕೇಸ್ ನಿಂದಲೇ ಮುಕ್ತಿ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ. ಇದನ್ನೂ ಓದಿ: ಮಾಜಿ MLA ಪುತ್ರನಿಗೆ ಸಪೋರ್ಟ್ ಆರೋಪ – CPI ಸಸ್ಪೆಂಡ್

    ARYAN

    ಈ ಪ್ರಕರಣವನ್ನು ವಿಶೇಷ ತನಿಖಾ ತಂಡ ಸಹ ಅಲ್ಲಗಳೆದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಇನ್ನೂ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ ಎಂದು ಹೇಳಿದೆ. ಎಸ್‍ಐಟಿ ಪ್ರಕರಣ ಕುರಿತು ತನಿಖೆ ಮುಂದುವರಿಸಿದೆ.

    2021ರ ಅಕ್ಟೋಬರ್ 2ರಂದು ಎನ್‍ಸಿಬಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ನೇತೃತ್ವದ ತಂಡ ಕ್ರೂಸ್ ಹಡಗಿನ ಮೇಲೆ ದಾಳಿ ಮಾಡಿತ್ತು. ಆರ್ಯನ್ ಖಾನ್ ಸೇರಿದಂತೆ 20 ಜನರನ್ನು ಡ್ರಗ್ಸ್ ಸೇವನೆ ಆರೋಪದ ಮೇಲೆ ಬಂಧಿಸಲಾಗಿತ್ತು. ಇದನ್ನೂ ಓದಿ: ಭಾರತೀಯರನ್ನು ಒದೆಯುತ್ತಿದ್ದಾರೆ – ದುಃಸ್ವಪ್ನವಾಯ್ತು ಉಕ್ರೇನ್‍ನಿಂದ ಸ್ಥಳಾಂತರಿಸುವ ಆದೇಶ

  • ಮಗನ ಬಂಧನದ ಬಳಿಕ ಜೊತೆಯಾಗಿ ಕಾಣಿಸಿಕೊಂಡ ಶಾರೂಖ್ ದಂಪತಿ

    ಮಗನ ಬಂಧನದ ಬಳಿಕ ಜೊತೆಯಾಗಿ ಕಾಣಿಸಿಕೊಂಡ ಶಾರೂಖ್ ದಂಪತಿ

    ಮುಂಬೈ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾಗಿದ್ದರು. ಇದಾದ ಬಳಿಕ ಶಾರೂಖ್ ಖಾನ್ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದರು. ಇದೀಗ ಬಾಲಿವುಡ್ ಬಾದ್‌ಶಾ ಮತ್ತೆ ಸಾಮಾಜಿಕ ಮಾಧ್ಯಮಗಳಿಗೆ ಮರಳಿದ್ದಾರೆ.

    ಶಾರೂಖ್ ಖಾನ್ ಬುಧವಾರ ಮಧ್ಯಾಹ್ನ ದೀರ್ಘ ವಿರಾಮದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದೂರದರ್ಶನ ಬ್ರ್ಯಾಂಡ್ ಒಂದರ ಜಾಹೀರಾತು ವೀಡಿಯೋವನ್ನು ಶಾರೂಖ್ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಂಗಳಸೂತ್ರ ಧರಿಸಿದಾಗ ಆದ ಅನುಭವ ಹಂಚಿಕೊಂಡ ಪ್ರಿಯಾಂಕಾ

    ಟಿವಿ ಜಾಹೀರಾತಿನಲ್ಲಿ ಶಾರೂಖ್ ರೊಂದಿಗೆ ಅವರ ಪತ್ನಿ ಗೌರಿ ಕೂಡಾ ಕಾಣಿಸಿಕೊಂಡಿದ್ದಾರೆ. ನಟ ಸಾಮಾಜಿಕ ಮಾಧ್ಯಮಕ್ಕೆ ಮತ್ತೆ ಮರಳಿ ಬಂದಿರುವುದರಿಂದ ಅವರ ಅಭಿಮಾನಿಗಳು ಶಾರೂಖ್‌ಗೆ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಅವರ ಅಭಿಮಾನಿಗಳು ಹೃದಯ ಎಮೋಜಿಗಳ ಸುರಿಮಳೆ ಹರಿಸಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಚೇತರಿಸಿಕೊಂಡು ಹಾಲಿಡೇ ಮೂಡಿನಲ್ಲಿ ಜಾನ್ವಿ

  • NCB ವಿಚಾರಣೆಯಿಂದ ಆರ್ಯನ್ ಖಾನ್ ಎಸ್ಕೇಪ್- ಶಾರೂಖ್ ಮಗ ಕೊಟ್ಟ ಕಾರಣ ಏನು?

    NCB ವಿಚಾರಣೆಯಿಂದ ಆರ್ಯನ್ ಖಾನ್ ಎಸ್ಕೇಪ್- ಶಾರೂಖ್ ಮಗ ಕೊಟ್ಟ ಕಾರಣ ಏನು?

    ಮುಂಬೈ: ಡ್ರಗ್ ಕೇಸ್‍ನಲ್ಲಿ ಸಿಕ್ಕಿ ಬಿದ್ದಿದ್ದ ಬಾಲಿವುಡ್ ನಟ ಆರ್ಯನ್‍ ಖಾನ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೆ ಇಂದು ನಡೆಯ ಬೇಕಿದ್ದ ಎನ್‍ಸಿಬಿ ವಿಚಾರಣೆಯಿಂದ ಆರ್ಯನ್‍ಖಾನ್ ತಪ್ಪಿಸಿಕೊಂಡಿದ್ದಾರೆ.

    ARYAN

    ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿತ್ತು. ಆದರೆ ಈಗ ಆರ್ಯನ್‍ ಖಾನ್ ಇಂದು (ನವೆಂಬರ್ 7) ವಿಚಾರಣೆಗೆ ಹಾಜರಾಗಿಲ್ಲ. ತಾವು ವಿಚಾರಣೆಗೆ ಏಕೆ ಹಾಜರಾಗುತ್ತಿಲ್ಲ ಎಂಬುದಕ್ಕೆ ಆರ್ಯನ್‍ ಖಾನ್ ಎನ್‍ಸಿಬಿ ಅಧಿಕಾರಿಗಳಿಗೆ ಕಾರಣವನ್ನೂ ನೀಡಿದ್ದಾರೆ.

    ಡಿಡಿಜಿ ಎನ್‍ಸಿಬಿ ಸಂಜಯ್ ಸಿಂಗ್ ಅವರು ಆರ್ಯನ್‍ ಖಾನ್‍ಗೆ ಬುಲಾವ್ ನೀಡಿದ್ದರು. ಆದರೆ ಆರ್ಯನ್‍ಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಈ ಕಾರಣಕ್ಕೆ ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದರಿಂದ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಹೀಗಾಗಿ ವಿಚಾರಣೆಗೆ ಬೇರೊಂದು ದಿನಾಂಕ ನೀಡುವಂತೆ ಅವರು ಕೋರಿದ್ದಾರೆ. ಇದಕ್ಕೆ ಎನ್‍ಸಿಬಿ ಅಧಿಕಾರಿಗಳು ಸಮ್ಮತಿ ನೀಡಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ವಿಚಾರಣೆ ದಿನಾಂಕ ನಿಗದಿ ಮಾಡಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಮೈಸೂರಲ್ಲಿ ಶಿಕ್ಷಕರಿಗೆ ಜೀನ್ಸ್ ಪ್ಯಾಂಟ್ ಬ್ಯಾನ್

    ARYAN

    ಆರ್ಯನ್‍ ಖಾನ್ ಭಾಗಿಯಾಗಿದ್ದರು ಎನ್ನಲಾದ ರೇವ್ ಪಾರ್ಟಿ ಮೇಲೆ ದಾಳಿ ನಡೆದ ದಿನ ಎನ್‍ಸಿಬಿ ಅಧಿಕಾರಿಗಳ ಜೊತೆ ಖಾಸಗಿ ಡಿಟೆಕ್ಟೀವ್ ಕಿರಣ್ ಗೋಸಾವಿ ಮತ್ತು ಅವರ ಬಾಡಿಗಾರ್ಡ್ ಪ್ರಭಾಕರ್ ಸೈಲ್ ಕೂಡ ಹಾಜರಿದ್ದರು. ಇವರಿಬ್ಬರು ಪ್ರಮುಖ ಸಾಕ್ಷಿಗಳಾಗಿದ್ದಾರೆ. ಇದನ್ನೂ ಓದಿ:  ಕೇರಳದಲ್ಲಿ120 ವರ್ಷಗಳಲ್ಲಿಯೇ ಅತ್ಯಧಿಕ ಮಳೆ

    ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಖಂಡ ನವಾಬ್ ಮಲಿ ಕೂಡ ಸಮೀರ್ ವಾಂಖೆಡೆ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ಇವುಗಳ ಆಧಾರದ ಮೇಲೆ ಮಹಾರಾಷ್ಟ್ರ ಸರ್ಕಾರವು ತನಿಖೆ ನಡೆಸಲು ವಿಶೇಷ ತಂಡ ರಚಿಸಿದೆ. ಇತ್ತೀಚೆಗೆ ತನಿಖಾ ನೇತೃತ್ವವೂ ಸಮೀರ್ ಅವರ ಕೈತಪ್ಪಿತ್ತು. ಶಾರುಖ್‍ಖಾನ್ ಪುತ್ರ ಆರ್ಯನ್‍ಖಾನ್ ಅವರನ್ನು ಬಂಧಿಸಿದ ಎನ್‍ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಅನೇಕ ಆರೋಪಗಳು ಕೇಳಿಬಂದಿವೆ. ಈ ಬೆನ್ನಲ್ಲೇ, ಪ್ರಕರಣದ ತನಿಖೆಯಿಂದ ಸಮೀರ್ ವಾಂಖೆಡೆಯನ್ನು ಹೊರಗಿಡಲಾಗಿದೆ. ಈ ಪ್ರಕರಣದ ಬಗ್ಗೆ ಕೇಂದ್ರದ ಉನ್ನತ ತಂಡ ತನಿಖೆ ನಡೆಸಲು ಆರಂಭಿಸಿದೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ