ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಯಶಸ್ಸಿನ ನಂತರ ಇಂಥದ್ದೇ ಮಾದರಿಯ ಚಿತ್ರಗಳು ಭಾರತೀಯ ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲೂ ‘ಫೈಲ್ಸ್’ ಹೆಸರಿನಲ್ಲಿ ನಾನಾ ಭಾಷೆಗಳಲ್ಲಿ ಚಿತ್ರಗಳು ತಯಾರಾಗುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ‘ದಿ ಭವಾನಿ ಫೈಲ್ಸ್’ (The Bhavani Files) ಕನ್ನಡದಲ್ಲೂ ಫೈಲ್ಸ್ ಮಾದರಿಯ ಚಿತ್ರವೊಂದು ತಯಾರಾಗುತ್ತಿದ್ದು, ಈ ಚಿತ್ರಕ್ಕೆ ಈಗಾಗಲೇ ಚಾಲನೆ ಕೂಡ ಸಿಕ್ಕಿದೆ.
ನೂರು ಜನ್ಮಕ್ಕೂ, ಡಿಯರ್ ಸತ್ಯ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಪ್ರತಿಭಾನ್ವಿತ ನಾಯಕ ಆರ್ಯನ್ (Aryan). ಇದೀಗ ಆರ್ಯನ್ ದಿ ಭವಾನಿ ಫೈಲ್ಸ್ ಎಂಬ ಹೊಸ ಸಿನಿಮಾ ಘೋಷಿಸಿದ್ದು, ಈ ಚಿತ್ರದಲ್ಲಿ ನಟನೆ ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ಚಿತ್ರಕ್ಕೆ ದೊಡ್ಮನೆ ಸೊಸೆ ಸಾಥ್ ಕೊಟ್ಟಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆದ ನಟಿ- ಐಕಾನ್ ಸ್ಟಾರ್‌ಗೆ ಶ್ರೀಲೀಲಾ ನಾಯಕಿ
ದಿ ಭವಾನಿ ಫೈಲ್ಸ್ ಸಿನಿಮಾದ ಟೈಟಲ್ (Title)ಲಾಂಚ್ ಮಾಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Rajkumar) ಶುಭ ಹಾರೈಸಿದ್ದಾರೆ. ಸದ್ಯ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಮುಂದಿನ ತಿಂಗಳು ಫಸ್ಟ್ ಲುಕ್ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. 14ನೇ ಶತಮಾನದ ಕಥೆಯನ್ನು ಆರ್ಯನ್ ತಮ್ಮ ಸ್ನೇಹಿತರ ಜೊತೆಗೂಡಿ ನಿರ್ದೇಶಿಸುತ್ತಿದ್ದಾರೆ.
ಮೋಹನ್ ಮೆನನ್, ಜೇಕಬ್ ವರ್ಗೀಸ್ ಹಾಗೂ ಆರ್ಯನ್ ಸಿನಿಮಾಗೆ ಚಿತ್ರಕಥೆ ಬರೆದಿದ್ದು, ಚೇತನ್ ಡಿಕ್ರೋಸ್ ಸ್ಟಂಟ್, ಜೋ ಕೋಸ್ಟ್ ಟ್ಯೂನ್ ಹಾಕಿದ್ದಾರೆ. ವೈಟ್ ಹಾರ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ದಿ ಭವಾನಿ ಫೈಲ್ಸ್ ಸಿನಿಮಾವನ್ನು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ನಿರ್ಮಾಣದಲ್ಲಿ ಸಾಥ್ ಕೊಡಲಿದೆ. ಕಲ್ಟ್ ಜಾನರ್ ಈ ಸಿನಿಮಾದ ಉಳಿದ ಸ್ಟಾರ್ ಕಾಸ್ಟ್ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ.
ಶಾರೂಖ್ ಖಾನ್ ಅವರ ಹಿರಿಯ ಮಗ ಆರ್ಯನ್ ಖಾನ್ ಕೊನೆಗೂ ಚಿತ್ರರಂಗಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಈಗವರು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ವೆಬ್ ಸರಣಿ ಮತ್ತು ಚಲನಚಿತ್ರದಲ್ಲಿ ಆರ್ಯನ್ ಕೆಲಸ ಮಾಡುತ್ತಿದ್ದಾರೆ.
ದೀರ್ಘಕಾಲದವರೆಗೆ, ಆರ್ಯನ್ ಖಾನ್ ಓಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ತಮ್ಮ ಪಾತ್ರಕ್ಕಾಗಿ ಸಿದ್ದತೆ ನಡೆಸುತ್ತಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಅವರು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ ಎಂದು ಈ ಹಿಂದೆ ವರದಿಯಾಗಿದೆ. ಶುಕ್ರವಾರ ಮತ್ತು ಶನಿವಾರದಂದು ಮುಂಬೈನಲ್ಲಿ ಆರ್ಯನ್ ತನ್ನ ವೆಬ್ ಸರಣಿಗಾಗಿ ಟೆಸ್ಟ್ ಶೂಟ್ ಮಾಡಿದ್ದಾರೆ. ಆದರೆ, ಚಿತ್ರೀಕರಣ ಯಾವಾಗ ಎಂಬ ಬಗ್ಗೆ ಅವರು ನಿರ್ಧಾರ ಕೈಗೊಂಡಿಲ್ಲ. ಇದನ್ನೂ ಓದಿ: ಆಲಿಯಾ-ರಣಬೀರ್ ಮದುವೆ ಮುಂದೂಡಿಕೆ: ಕಾರಣ ವಿಚಿತ್ರ
ಪ್ರಾಜೆಕ್ಟ್ ಬರೆಯುವುದರ ಜೊತೆಗೆ, ಆರ್ಯನ್ ಅದನ್ನು ನಿರ್ದೇಶಿಸಲಿದ್ದಾರೆ. ಶುಕ್ರವಾರ ಮತ್ತು ಶನಿವಾರ ನಡೆದ ಟೆಸ್ಟ್ ಶೂಟ್‍ನಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರ ಮತ್ತು ಸಿಬ್ಬಂದಿಯ ಪೂರ್ವಸಿದ್ಧತೆಯ ಭಾಗವಾಗಿ, ಆರ್ಯನ್ ಅವರು ಅದರ ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲು ಎಲ್ಲರನ್ನೂ ಒಟ್ಟಿಗೆ ಸೇರಿಸಲು ಮತ್ತು ಯೋಜನೆಯನ್ನು ಅರ್ಥಮಾಡಿಕೊಳ್ಳಲು ಬಯಸಿದ್ದರು. ಇನ್ನೂ ಹೆಸರಿಡದ ಈ ಕಾರ್ಯಕ್ರಮದ ಬಗ್ಗೆ ಅವರು ತುಂಬಾ ಉತ್ಸುಕರಾಗಿದ್ದಾರೆ. ಈಗಾಗಲೇ ಪ್ರಿ-ಪೆÇ್ರಡಕ್ಷನ್‍ನ ಕೆಲಸವನ್ನು ಪ್ರಾರಂಭಿಸಿದ್ದಾರೆ. ಆರ್ಯನ್ ಶೀಘ್ರದಲ್ಲೇ ನಿಜವಾದ ಶೂಟಿಂಗ್ ದಿನಾಂಕಗಳನ್ನು ಅಂತಿಮಗೊಳಿಸುತ್ತಾರೆ. ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2
ಆರ್ಯನ್ ಮತ್ತು ಸುಹಾನಾ ಇಬ್ಬರೂ ಯುನೈಟೆಡ್ ಸ್ಟೇಟ್ಸ್‍ನಲ್ಲಿ ಶಿಕ್ಷಣ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಸುಹಾನಾ ಖಾನ್ ಕೂಡ ಬಾಲಿವುಡ್‍ಗೆ ಪಾದಾರ್ಪಣೆ ಮಾಡಲಿದ್ದಾರೆ. ಆರ್ಚಿ ಕಾಮಿಕ್ಸ್-ಪ್ರೇರಿತ ನೆಟ್‍ಫ್ಲಿಕ್ಸ್ ಸರಣಿಯ ಜೋಯಾ ಅಖ್ತರ್ ತನ್ನ ಮೊದಲ ಪಾತ್ರದಲ್ಲಿ ಸುಹಾನಾ ಅವರನ್ನು ಸೇರಿಸಿಕೊಳ್ಳುತ್ತಾರೆ. ಖುಷಿ ಕಪೂರ್ ಮತ್ತು ಅಗಸ್ತ್ಯ ನಂದಾ ಕೂಡ ಈ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ.
ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಕಾಯ್ದಿರಿಸಲಾಗಿದ್ದು, ಅಲ್ಲಿಯವರೆಗೂ ಆರ್ಯನ್ ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿಯೇ ಉಳಿಯಬೇಕಾಗುತ್ತದೆ.
ಕೋವಿಡ್-19 ಪರೀಕ್ಷೆಯಲ್ಲಿ ಆರ್ಯನ್‍ಗೆ ನೆಗಟಿವ್ ವರದಿ ಬಂದ ನಂತರ, ಗುರುವಾರ ಅವರನ್ನು ಬ್ಯಾರಕ್‍ಗೆ ವರ್ಗಾಯಿಸಲಾಯಿತು. ಇದೀಗ ಆರ್ಯನ್‍ಗೆ ಖೈದಿ ಸಂಖ್ಯೆ ಎನ್956 ಎಂದು ನಿಗದಿಪಡಿಸಲಾಗಿದೆ. ಆರ್ಯನ್‍ಗೆ ಜೈಲಿನಲ್ಲಿರಲು ಗೊಂದಲ, ಉದ್ವಿಗ್ನತೆ ಹಾಗೂ ಅನ್ ಕಂಫರ್ಟ್‍ಟೇಬಲ್ ಆಗುತ್ತಿದ್ದು, ಜೈಲಿನ ಆಹಾರ ಕೂಡ ಇಷ್ಟವಾಗುತ್ತಿಲ್ಲ. ಹೀಗಾಗಿ ಮಗನಿಗೆ ಕ್ಯಾಂಟೀನ್‍ನಲ್ಲಿ ಊಟದ ವ್ಯವಸ್ಥೆಗೊಳಿಸಲು ಆರ್ಥರ್ ರೋಡ್ ಜೈಲು ಅಧಿಕಾರಿಗಳಿಗೆ ಶಾರೂಖ್ ಖಾನ್ 4,500ರೂ. ಮನಿ ಆರ್ಡರ್ ಕಳುಹಿಸಿದ್ದಾರೆ. ಇದನ್ನೂ ಓದಿ: ಮಗನ ಆರೋಗ್ಯ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟ ಶಾರೂಖ್ ದಂಪತಿ!
ಮುಂಬೈ ಸಮುದ್ರದಲ್ಲಿ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಿದ ಆರೋಪದಲ್ಲಿ ಎನ್‍ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಮತ್ತು ಇತರೆ ಆರೋಪಿಗಳು ಜಾಮೀನು ಕೋರಿ ಮುಂಬೈ ಸೆಷನ್ಸ್ ಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ ಈ ಅರ್ಜಿ ವಿಚಾರಣೆ ನಡೆದಿದ್ದು, ನ್ಯಾ.ವಿವಿ ಪಾಟೀಲ್ ಸುದೀರ್ಘ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಕಾಯ್ದಿರಿಸಿದ್ದಾರೆ.
ಮುಂಬೈ: ಮಾದಕ ದ್ರವ್ಯ ಪ್ರಕರಣದಲ್ಲಿ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಶಾರೂಖ್ ಮತ್ತು ಗೌರಿ ಖಾನ್ ಬೆಂಬಲಕ್ಕೆ ಸುಸಾನೆ ಖಾನ್ ಮತ್ತು ಮಿಕಾ ಸಿಂಗ್ ನಿಂತಿದ್ದಾರೆ.
ಶನಿವಾರ ರಾತ್ರಿ(ಅ.2) ನಡೆದ ಕಾರ್ಡೆಲಿಯಾ ಕ್ರೂಸ್ ಎಕ್ಸ್ ಪ್ರೆಸ್ ಹಡಗಿನಲ್ಲಿ ಮಾದಕದ್ರವ್ಯದ ದಂಧೆಯ ನಂತರ ಅಕ್ಟೋಬರ್ 3 ರಂದು ಆರ್ಯನ್ ನನ್ನು ಬಂಧಿಸಲಾಯಿತು. ನಿನ್ನೆ ಆರ್ಯನ್ ಕಸ್ಟಡಿಯನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಈ ಹಿನ್ನೆಲೆ ಬಾಲಿವುಡ್ ಸೆಲೆಬ್ರಿಟಿಗಳಾದ ಸುಸ್ಸಾನೆ ಮತ್ತು ಮಿಕಾ ಅವರು ‘ಸ್ಟಾರ್ ಕಿಡ್’ ನ ಬಂಧನವನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್
ಆರ್ಯನ್ ಖಾನ್ ಒಳ್ಳೆಯ ಮಗು!
ಮುಂಬೈ ಕೋರ್ಟ್ ಸೋಮವಾರ ಆರ್ಯನ್ ಖಾನ್ ನ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‍ಸಿಬಿ) ಕಸ್ಟಡಿಯನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಈ ಹಿನ್ನೆಲೆ ಬಾಲಿವುಡ್ ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನೆ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಬಾಲಿವುಡ್ ಮಂದಿ ತಮಗೆ ತೋಚಿದಂತೆ ಹೇಳಿಕೊಳ್ಳುತ್ತಿದ್ದಾರೆ. ಆರ್ಯನ್ ಖಾನ್ ಒಳ್ಳೆಯ ಮಗು, ಆದರೆ ದುರದೃಷ್ಟವಶಾತ್ ಅವರು ಕೆಟ್ಟ ಸಮಯದಲ್ಲಿ, ತಪ್ಪಾದ ಸ್ಥಳದಲ್ಲಿದ್ದರು. ಇದನ್ನು ಬಳಸಿಕೊಂಡು ಅವರನ್ನು ಬಾಲಿವುಡ್‍ನ ಕೆಲವರು ತಮ್ಮದೇ ಶೈಲಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರ್ಯನ್ ಒಳ್ಳೆಯ ಮಗುವಾಗಿದ್ದರಿಂದ ಇದು ಅನ್ಯಾಯವಾಗಿದೆ. ನಾನು ಗೌರಿ ಮತ್ತು ಶಾರೂಖ್ ಪರವಾಗಿ ನಿಲ್ಲುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಸುಸಾನೆ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಲೇಖಕಿ ಶೋಭಾ ಡಿ, ಆರ್ಯನ್ ಬಂಧನವು ಅವರ ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಆ ಜಾಗಕ್ಕೆ ನಾನು ಹೋಗಬೇಕಿತ್ತು..!
ಸಿಂಗರ್ ಮಿಕಾ ಸಿಂಗ್ ಕೂಡ ಈ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದು, ಆರ್ಯನ್ ಬಿಟ್ಟರೇ ಬೇರೆ ಯಾರೂ ಆ ಹಡಗಿನಲ್ಲಿ ಇರಲಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ವಾವ್ ಎಂತಹ ಸುಂದರವಾದ ಕಾರ್ಡೆಲಿಯಾ ಕ್ರೂಸ್. ಅಲ್ಲಿಗೆ ನಾನು ಭೇಟಿ ಕೊಡಬೇಕಿತ್ತು. ಅಲ್ಲಿ ಬಹಳಷ್ಟು ಜನರಿದ್ದಾರೆ, ಆದರೆ ಆರ್ಯನ್ ನನಗೆ ಕಾಣಿಸುತ್ತಿಲ್ಲ. ಆದರೆ ಇವರಿಗೆ ಮಾತ್ರ ಈ ದೊಡ್ಡ ಹಡಗಿನಲ್ಲಿ ಆರ್ಯನ್ ಮಾತ್ರ ಕಾಣಿಸುತ್ತಿದ್ದಾನೆ ಎಂದು ವ್ಯಂಗ್ಯವಾಗಿ ಬರೆದು ಶುಭೋದಯ ಅದ್ಭುತ ದಿನ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಾರೂ ನನ್ನನ್ನು ಕೈಹಿಡಿದಿಲ್ಲ: ರಣವೀರ್ ಸಿಂಗ್
Wow what a beautiful @CordeliaCruises I wish I could have visted. I heard lots people were there but I couldn’t see anyone els accept #AaryanKhan ..
Itne bade cruse mei sirf aariyan hi ghoom raha tha kya.. hadd hai.. good morning have a wonderful day.. pic.twitter.com/BJ72yHpkl5
ಈ ಹಿಂದೆ ಬಾಲಿವುಡ್ ಸೆಲೆಬ್ರಿಟಿಗಳಾದ ಸುನೀಲ್ ಶೆಟ್ಟಿ, ಸುಚಿತ್ರಾ ಕೃಷ್ಣಮೂರ್ತಿ, ಹಂಸಲ್ ಮೆಹ್ತಾ ಮತ್ತು ಪೂಜಾ ಭಟ್ ಇತರರು ಶಾರುಖ್ ಖಾನ್ ಪರವಾಗಿ ಮಾತನಾಡಿದರು. ಸಲ್ಮಾನ್ ಖಾನ್ ಅವರು ತಮ್ಮ ಬೆಂಬಲವನ್ನು ಸೂಚಿಸಲು ಎಸ್‌ಆರ್‌ಕೆ ಅವರ ಮನೆ ಮನ್ನತ್‍ಗೆ ಭೇಟಿ ನೀಡಿದರು.
ಮುಂಬೈ: ಸಮುದ್ರದಲ್ಲಿ ಐಷಾರಾಮಿ ಕ್ರ್ಯೂಸ್‍ನಲ್ಲಿ ನಡೆದ ರೇವ್ ಪಾರ್ಟಿ ವೇಳೆ ಸಿಕ್ಕಿಬಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್‍ಗೆ ಜಾಮೀನು ನಿರಾಕರಿಸಲಾಗಿದೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಎನ್‍ಸಿಬಿ ವಾದಕ್ಕೆ ಮಣೆ ಹಾಕಿದೆ. ಆರ್ಯನ್‍ನನ್ನು ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 7ರವರೆಗೂ ಎನ್‍ಸಿಬಿ ವಶಕ್ಕೆ ನೀಡಿದೆ.
ಶಾರೂಖ್ ಪುತ್ರನ ಪರವಾಗಿ ಖ್ಯಾತ ಕ್ರಿಮಿನಲ್ ವಕೀಲ ಸತೀಶ್ ಮಾನ್ ಶಿಂಧೆ ಸುದೀರ್ಘವಾದ ಮಂಡಿಸಿದ್ರೂ ಪ್ರಯೋಜನ ಆಗಲಿಲ್ಲ. ಪುತ್ರನಿಗೆ ಬಂದೊದಗಿದ ಸ್ಥಿತಿ ಕಂಡು ಶಾರೂಖ್, ಗೌರಿ ಖಾನ್ ಕಣ್ಣೀರು ಇಟ್ಟಿದ್ದಾರೆ. ವಿಚಾರಣೆ ವೇಳೆ ಕಾನೂನು ಪ್ರಕಾರವೇ, ಶಾರೂಖ್ ಜೊತೆ ಫೋನ್‍ನಲ್ಲಿ ಮಾತನಾಡಲು ಆರ್ಯನ್‍ಗೆ ಎನ್‍ಸಿಬಿ ಎರಡು ನಿಮಿಷ ಅವಕಾಶ ನೀಡಿತ್ತು. ಈ ವೇಳೆ ಇಬ್ಬರು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬಂಧನದ ಬಳಿಕ ಪುತ್ರನ ಜೊತೆ 2 ನಿಮಿಷ ಮಾತಾಡಿದ ನಟ ಶಾರೂಖ್!
ಶಾರೂಖ್ ಪುತ್ರನ ಜೊತೆಗೆ ಇನ್ನಿಬ್ಬರನ್ನು ಕೂಡ ಎನ್‍ಸಿಬಿ ಕಸ್ಟಡಿಗೆ ಪಡೆದುಕೊಂಡಿದೆ. ಇದಕ್ಕೂ ಮುನ್ನ, ಆರ್ಯನ್ ಸೇರಿ ಇತರೆ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯ್ತು. ಈ ಮಧ್ಯೆ ವೀ ಸ್ಟ್ಯಾಂಡ್ ವಿತ್ ಶಾರೂಖ್ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್
ಎನ್‍ಸಿಬಿ ವಾದ ಏನು..?
ಹೈಪ್ರೊಫೈಲ್ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ ಇದೆ. ಅದಲ್ಲದೆ 4 ವರ್ಷದಿಂದ ಡ್ರಗ್ಸ್ ಸೇವನೆ ಮಾಡ್ತಿರುವ ಬಗ್ಗೆ ಆರ್ಯನ್ ತಪ್ಪೊಪ್ಪಿಕೊಂಡಿದ್ದಾರೆ. ಕೊಕೇನ್ ಸೇರಿದಂತೆ ಹಲವು ಮಾದಕ ವಸ್ತುಗಳ ಸೇವನೆ ಮಾಡಿದ್ದಾರೆ. ಆರ್ಯನ್‍ಗೆ ಡ್ರಗ್ ಪೆಡ್ಲರ್ ಗಳ ಜೊತೆಗೆ ನಂಟಿರುವ ಮೊಬೈಲ್ ಸಾಕ್ಷ್ಯ ಸಿಕ್ಕಿದೆ. ಮೊಬೈಲ್ ವಾಟ್ಸಪ್‍ನಲ್ಲಿ ಕೋಡ್ ವರ್ಡ್ ಬಳಸಿ ಡ್ರಗ್ ಖರೀದಿಸಿದ್ದಾರೆ. ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಜೊತೆಗೂ ನಂಟಿರಬಹುದು. ವಾಣಿಜ್ಯ ಉದ್ದೇಶಕ್ಕಾಗಿಯೂ ಡ್ರಗ್ಸ್ ಖರೀದಿ ಮಾಡಿರುವ ಸಾಕ್ಷ್ಯ ಸಿಕ್ಕಿದೆ. ಎನ್‍ಡಿಪಿಎಸ್ ಕಾಯ್ದೆಯಡಿ ತಕ್ಷಣಕ್ಕೆ ಜಾಮೀನು ಕೊಡಲು ಬರಲ್ಲ (ರಿಯಾ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತೀರ್ಪು ಉಲ್ಲೇಖ) ಖ್ಯಾತನಾಮರ ಡ್ರಗ್ಸ್ ಸೇವನೆಯಿಂದ ವಿದ್ಯಾರ್ಥಿಗಳು ಪ್ರಭಾವಿತರಾಗಬಹುದು. ಆರ್ಯನ್‍ಗೆ ಜಾಮೀನು ನೀಡಬಾರದು, ಸಾಕ್ಷ್ಯ ನಾಶದ ಸಂಭವ ಇದೆ ಹಾಗಾಗಿ ಅಕ್ಟೋಬರ್ 11ರವರೆಗೂ ಆರೋಪಿಗಳನ್ನು ಎನ್‍ಸಿಬಿ ವಶಕ್ಕೆ ನೀಡಬೇಕು ಎಂದು ಪ್ರಬಲ ವಾದ ಮಂಡಿಸಿತು.
ಆರ್ಯನ್ ಪರ ವಕೀಲರ ವಾದ ಏನು?
ನನ್ನ ಕಕ್ಷಿದಾರನ ಹಕ್ಕಿನ ವಿಚಾರವಾಗಿ ಜಾಮೀನು ಬಯಸುತ್ತಿಲ್ಲ. ಪಾರ್ಟಿಗೆ ಆರ್ಯನ್ ಖಾನ್ ವಿಶೇಷ ಆಹ್ವಾನಿತರಾಗಿದ್ದರು ಹಾಗಾಗಿ ಅಲ್ಲಿಗೆ ತೆರಳಿದ್ದರು. ಆರ್ಯನ್ ಡ್ರಗ್ ಸೇವಿಸಿರುವ ಬಗ್ಗೆ ಸಾಕ್ಷ್ಯ ಇಲ್ಲ. ಆರ್ಯನ್ ಬಳಿಯಿಂದ ಯಾವುದೇ ಡ್ರಗ್ಸ್ ವಶಕ್ಕೆ ಪಡೆದಿಲ್ಲ. ಆತನ ಬ್ಯಾಗ್ ಪರಿಶೀಲನೆ ವೇಳೆ ಏನೂ ಸಿಕ್ಕಿಲ್ಲ. ಆರ್ಯನ್ ಖಾನ್ ವಿರುದ್ಧ ಪ್ರಬಲ ಸಾಕ್ಷ್ಯಗಳಿಲ್ಲ. ಸ್ನೇಹಿತನ ಬಳಿ ಚರಸ್ ಪತ್ತೆಯಾಗಿದ್ರೆ, ನಮ್ಮ ಕಕ್ಷಿದಾರನ ಬಂಧನ ಏಕೆ..? ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಜೊತೆ ನಂಟು ಆರೋಪ ಸುಳ್ಳು. ರಿಯಾ ಚಕ್ರವರ್ತಿ ಕೇಸ್‍ಗೂ ಇದಕ್ಕೂ ತಾಳೆ ಆಗಲ್ಲ. ಇದಲ್ಲದೆ 300 ಗ್ರಾಂ ಡ್ರಗ್ಸ್ ಸಿಕ್ಕಿದ ಪ್ರಕರಣದಲ್ಲಿಯೂ ಜಾಮೀನು ನೀಡಲಾಗಿದೆ. ಹೀಗಾಗಿ ಪ್ರಕರಣದಲ್ಲಿ ಆರ್ಯನ್‍ಗೆ ಜಾಮೀನು ನೀಡಬೇಕೆಂದು ವಾದ ಮಂಡಿಸಿದರು.
ಈ ನಡುವೆ 1997ರಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್, ಸಂದರ್ಶನವೊಂದರ ವೇಳೆ ಹಾಸ್ಯಮಯವಾಗಿ ನನ್ನ ಮಗ ಮದ್ಯ, ಮದಿರೆ, ಮಾನಿನಿ ಸೇರಿ ಎಲ್ಲಾ ರೀತಿಯ ಶೋಕಿ ಮಾಡಬಹುದು ಎಂದಿದ್ರು. ಇದು ಮಗನ ಬದುಕಲ್ಲಿ ನಿಜ ಆಗಿದ್ದು, ಇದೀಗ ಕಂಬಿ ಎಣಿಸುವಂತೆ ಆಗಿರುವುದು ವಿಪರ್ಯಾಸ. ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ
ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡ್ತಿದ್ದ ಆರೋಪದಡಿ ರಾಷ್ಟ್ರೀಯ ಮಾದಕ ದ್ರವ್ಯ ತಡೆ ದಳ (ಎನ್‍ಸಿಬಿ) ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಒಳಗೊಂಡು 3 ಮಂದಿಯನ್ನು ಬಂಧಿಸಿದೆ. ಆತನನ್ನ ನಿನ್ನೆ ಎನ್‍ಸಿಬಿ ಕೋರ್ಟ್ ಒಂದು ದಿನದ ಮಟ್ಟಿಗೆ ಎನ್‍ಸಿಬಿ ಕಸ್ಟಡಿಗೆ ಒಪ್ಪಿಸಿದೆ. ಇದನ್ನೂ ಓದಿ: ಶಾರುಖ್ ಪುತ್ರ ಆರ್ಯನ್ ಇನ್ನೂ ಮಗು, ಉಸಿರಾಡಲು ಬಿಡಿ: ನಟ ಸುನೀಲ್ ಶೆಟ್ಟಿ
ಆರ್ಯನ್ ಖಾನ್ ಇವತ್ತು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದು, ಎನ್‍ಸಿಬಿ ಮತ್ತೆ ಆತನ ಕಸ್ಟಡಿ ಕೇಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಶೀಘ್ರವೇ ಶಾರೂಖ್ ಖಾನ್ ಮಗ ಜಾಮೀನಿನಡಿ ಬಿಡುಗಡೆಯಾದರೂ ಅಚ್ಚರಿ ಇಲ್ಲ. ದಾಳಿ ವೇಳೆ ಆರ್ಯನ್ ಖಾನ್ ಬಳಿ ಮಾದಕ ದ್ರವ್ಯ ಪತ್ತೆ ಆಗಿಲ್ಲ. ಆದರೆ ಆತ ದಾಳಿಗೂ ಮೊದಲು ಮಾದಕ ದ್ರವ್ಯ ಸೇವಿಸಿರಬಹುದು ಮತ್ತು ಡ್ರಗ್ಸ್ ಪಾರ್ಟಿಗಾಗಿ ವಾಟ್ಸಾಪ್ ಚ್ಯಾಟ್, ಫೋನ್ ಮೂಲಕ ಸಂಪರ್ಕ ಮಾಡಿರಬಹುದು ಎಂದು ಎನ್‍ಸಿಬಿ ಅನುಮಾನಿಸಿದೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದೇವೆ: ಎನ್‍ಸಿಬಿ ಮುಖ್ಯಸ್ಥ ಪ್ರಧಾನ್
ದಾಳಿ ವೇಳೆ 13 ಗ್ರಾಂ ಕೊಕೇನ್, 21 ಎನ್‍ಡಿಎಂಎ ಮಾತ್ರೆ, 21 ಗ್ರಾಂ ಚರಸ್ ಮತ್ತು 1.33 ಲಕ್ಷ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯ ಹೊಂದಿರುವ, ಮಾದಕ ದ್ರವ್ಯ ಖರೀದಿ, ಸಾಗಾಟ ಆರೋಪದಡಿ ಶಾರೂಖ್ ಪುತ್ರನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಇತ್ತ ಶಾರೂಖ್ ಮನೆಗೆ ನಿನ್ನೆ ತಡ ರಾತ್ರಿ ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ
ಚಿತ್ರ: ಗ್ರೂಫಿ ನಿರ್ದೇಶನ : ಡಿ. ರವಿ ಅರ್ಜುನ್ ನಿರ್ಮಾಪಕ: ಕೆ.ಜಿ.ಸ್ವಾಮಿ ಛಾಯಾಗ್ರಹಕ: ಲಕ್ಷೀಕಾಂತ್ ಸಂಗೀತ: ವಿಜೇತ್ ಕೃಷ್ಣ ತಾರಾಬಳಗ: ಆರ್ಯನ್, ಪದ್ಮಶ್ರೀ ಜೈನ್, ಗಗನ್, ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ, ಇತರರು
ಯುವ ಜನತೆಯ ಜೀವಕ್ಕೆ ಮಾರಕವಾಗುತ್ತಿರುವ ಸೆಲ್ಫೀ ಗೀಳಿನ ಬಗ್ಗೆ ಸಿನಿಮಾ ಬೆಳಕು ಚೆಲ್ಲುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಿನಿಮ್ಯಾಟಿಕ್ ಆಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.
ಚಿತ್ರದ ನಾಯಕ ಕಾರ್ತಿಕ್ ಒಬ್ಬ ಫೋಟೋ ಜರ್ನಲಿಸ್ಟ್. ಪ್ರಕೃತಿ ಸೌಂದರ್ಯವನ್ನು ಪ್ರೀತಿಸುವ ಕಾರ್ತಿಕ್ ಸದಾ ತನ್ನ ಕ್ಯಾಮೆರಾ ಕಣ್ಣಲ್ಲಿ ಅದರ ಸೌಂದರ್ಯವನ್ನು ಸೆರೆ ಹಿಡಿಯುವಲ್ಲಿ ನಿರತನಾಗಿರುತ್ತಾನೆ. ಕ್ಯಾಮೆರಾ ಹಿಡಿದು ರಮಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತಾನೆ. ಹೀಗಿರುವಾಗ ಒಮ್ಮೆ ಒಂದಷ್ಟು ಸ್ನೇಹಿತರು ಆತನಿಗೆ ಪರಿಚಯವಾಗುತ್ತಾರೆ. ಅವರೆಲ್ಲರದ್ದು ಒಂದೊಂದು ರೀತಿಯ ಸ್ವಭಾವ. ನಾಯಕಿ ಭುವಿಗೆ ಸದಾ ಸೆಲ್ಫೀ ತೆಗೆದುಕೊಳ್ಳುವ ಹುಚ್ಚು, ಭಯದಲ್ಲೇ ಬದುಕುವ ಪುನೀತ್, ಹೊಸತನಕ್ಕೆ ಹಾತೊರೆಯುವ ಪೂರ್ವಿ ಹೀಗೆ ಒಬ್ಬೊಬ್ಬರದ್ದು ಒಂದು ನೇಚರ್. ಇವರೆಲ್ಲರೂ ಒಂದು ಸುಂದರ ತಾಣದಲ್ಲಿ ಭೇಟಿಯಾಗಿ ಸ್ನೇಹಿತರಾಗುತ್ತಾರೆ. ಆನಂತರ ಏನೆಲ್ಲ ಘಟನೆ ನಡೆಯುತ್ತೆ ಎನ್ನುವುದೇ ಗ್ರೂಫಿ ಸಿನಿಮಾದ ಇಂಟ್ರಸ್ಟಿಂಗ್ ಸಂಗತಿ. ಇದನ್ನೂ ಓದಿ: ‘ಗ್ರೂಫಿ’ ಮೂಲಕ ಗಾಂಧಿನಗರಕ್ಕೆ ನಿರ್ಮಾಪಕರಾಗಿ ಕೆ.ಜಿ.ಸ್ವಾಮಿ
ಛಾಯಾಗ್ರಾಹಕ ಲಕ್ಷೀಕಾಂತ್ ಕ್ಯಾಮೆರಾ ವರ್ಕ್ ಕಣ್ಣಿಗೆ ಹಬ್ಬ ನೀಡುತ್ತದೆ. ನಿಸರ್ಗದ ಮಡಿಲಲ್ಲೇ ಚಿತ್ರೀಕರಣ ನಡೆದಿರುವುದರಿಂದ ಅದನೆಲ್ಲ ಸೊಗಸಾಗಿ ಸೆರೆಹಿಡಿದು ತೆರೆ ಮೇಲೆ ತಂದಿದ್ದಾರೆ. ನಿಸರ್ಗ ಸೌಂದರ್ಯದ ಜೊತೆ ಪ್ರಾಕೃತಿಕ ವಿಕೋಪಕ್ಕೆ ಕಾರಣವಾದ ಅಂಶಗಳ ಮೇಲೆ ಚಿತ್ರ ಬೆಳಕು ಚೆಲ್ಲಿದೆ. ವಿಜೇತ ಕೃಷ್ಣ ಸಂಗೀತದಲ್ಲಿ ಒಂದೆರಡು ಹಾಡುಗಳು ಮನಸಿಗೆ ಮುದ ನೀಡುತ್ತವೆ. ನಿರ್ದೇಶಕ ಡಿ. ರವಿ ಅರ್ಜುನ್ ಸಿನಿಮಾ ಪ್ರೀತಿ ಬಗ್ಗೆ ಮೆಚ್ಚುಗೆ ಸೂಚಿಸಲೇಬೇಕು. ಇದನ್ನೂ ಓದಿ: ‘ಗ್ರೂಫಿ’ ಚಿತ್ರದ ಆಡಿಯೋಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಾಥ್
ಫೋಟೋ ಜರ್ನಲಿಸ್ಟ್ ಆಗಿ ನಾಯಕ ಆರ್ಯನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕಿ ಪದ್ಮಶ್ರೀ ಜೈನ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ನೇಹಿತರ ಪಾತ್ರಗಳಲ್ಲಿ ನಟಿಸಿರುವ ಗಗನ್, ಉಮಾ ಮಯೂರಿ, ಸಂಧ್ಯಾ, ಪ್ರಜ್ವಲ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸ್ನೇಹ, ಪ್ರೀತಿ, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಎಳೆಗಳನ್ನು ಒಳಗೊಂಡಿರುವ ಈ ಚಿತ್ರ ನೋಡುಗರಿಗೆ ಥ್ರಿಲ್ ನೀಡೋದ್ರ ಜೊತೆ ಸಾಮಾಜಿಕ ಕಳಕಳಿಯನ್ನು ಒಳಗೊಂಡಿದೆ. ಒಟ್ನಲ್ಲಿ ಒಂದೊಳ್ಳೆ ಅನುಭವ ಗ್ರೂಫಿ ಚಿತ್ರ ನೀಡೋದ್ರಲ್ಲಿ ಡೌಟೇ ಇಲ್ಲ.
ಕನ್ನಡ ಚಿತ್ರರಂಗದಲ್ಲೀಗ ಹೊಸಾ ಅಲೆಯ ಶಕೆ ಚಾಲ್ತಿಯಲ್ಲಿದೆ. ಸಣ್ಣಗೊಂದು ಅವಲೋಕನ ನಡೆಸಿದರೂ ಈ ವರ್ಷವೇ ಹೊಸ ಬಗೆಯ ಸಿನಿಮಾಗಳು, ಹೊಸ ಪ್ರತಿಭೆಗಳ ಆಗಮನ ನಿರ್ಣಾಯಕವಾಗಿಯೇ ಆಗಿದೆ. ಹಲವು ಹೊಸಬರು ನಾಯಕ ನಾಯಕಿಯರಾಗಿ ಭರವಸೆ ಹುಟ್ಟಿಸಿದ್ದಾರೆ. ಅದೇ ಸಾಲಿನಲ್ಲಿ ಹೊಸ ವರ್ಷದ ಆರಂಭಿಕ ಘಳಿಗೆಯಲ್ಲಿಯೇ ಮತ್ತೊಂದು ನವ ಪ್ರತಿಭೆ ವೇಷಧಾರಿಯಾಗಿ ಆಗಮಿಸಲು ಅಖಾಡ ಸಜ್ಜುಗೊಂಡಿದೆ.ಈ ವಾರ ಬಿಡುಗಡೆಗೊಳ್ಳಲಿರುವ ವೇಷಧಾರಿ ಚಿತ್ರದ ಮೂಲಕ ಆರ್ಯನ್ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಶಿವಾನಂದ ಭೂಶಿ ನಿರ್ದೇಶನದಲ್ಲಿ ಮೂಡಿ ಬಂದಿರೋ ವೇಷಧಾರಿ ತನ್ನ ನಾನಾ ಗೆಟಪ್ಪುಗಳ ಮೂಲಕ ಟ್ರೇಲರ್ ಮತ್ತು ಪೋಸ್ಟರ್‍ಗಳ ಸ್ವರೂಪದಲ್ಲಿ ಎಲ್ಲರನ್ನೂ ಸೆಳೆದುಕೊಂಡಿದ್ದಾನೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರೋ ಆರ್ಯನ್ ಪಾಲಿಗಿದು ಮೊದಲ ಅನುಭವ. ಈ ಮೊದಲ ಹೆಜ್ಜೆಯಲ್ಲಿಯೇ ಅವರಿಗೆ ಸವಾಲಿನ ಪಾತ್ರವೇ ಸಿಕ್ಕಿದೆ. ಯಾಕೆಂದರೆ, ಅವರ ಪಾತ್ರಕ್ಕಿಲ್ಲಿ ಹಲವಾರು ಶೇಡುಗಳಿವೆ. ಪ್ರೇಮಿಯಾಗಿ, ಸರ್ವಸಣಂಗ ಪರಿತ್ಯಾಗದ ಬಯಕೆ ಹೊಂದಿದ ಪಾತ್ರವಾಗಿ ಕಾಣಿಸಿಕೊಂಡಿರೋ ಅವರು ಪಕ್ಕಾ ಆಕ್ಷನ್ ಮೂಡಿನಲ್ಲಿಯೂ ಮಿಂಚಿದ್ದಾರೆ.
ಈ ಮೂಲಕವೇ ಆರ್ಯನ್ ಆರಂಭಿಕ ಹಂತದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಅವರಿಲ್ಲಿ ಪಳಗಿದ ನಟನಂತೆಯೇ ಕಾಣಿಸಿಕೊಂಡು ಅಚ್ಚರಿ ಹುಟ್ಟಿಸಿದ್ದಾರೆ. ಈ ಸಿನಿಮಾದಲ್ಲಿ ಶ್ರುತಿ, ಸೋನಂ ರೈ, ಅಶ್ವಿತಾ ನಾಯಕಿಯರಾಗಿ ಆರ್ಯಗೆ ಜೊತೆಯಾಗಿದ್ದಾರೆ. ಕುರಿ ರಂಗ, ವೈಜನಾಥ್ ಬಿರಾದಾರ್, ಮೈಕಲ್ ಮಧು, ಮಿಮಿಕ್ರಿ ಗೋಪಿ ಮುಂತಾದ ಕಲಾವಿದರ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ವಿ ಮನೋಹರ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಹಾಡುಗಳಂತೂ ಎಲ್ಲರಿಗೂ ಹಿಡಿಸಿವೆ. ಕನ್ನಡದಲ್ಲಿ ಈವರೆಗೂ ಬಾರದಿರೋ ವಾಸ್ತವಕ್ಕೆ ಹತ್ತಿರಾದ ಕಥೆಯನ್ನೊಳಗೊಂಡಿರುವ ವೇಷಧಾರಿ ಈ ವಾರವೇ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾನೆ.
ಬೆಂಗಳೂರು: ಕಿರಣ್ ಹೆಗ್ಡೆ ನಿರ್ದೇಶನದಲ್ಲಿ ಮೂಡಿ ಬಂದಿರೋ ಬಹು ನಿರೀಕ್ಷಿತ ಚಿತ್ರ ಮನರೂಪ. ಟೈಟಲ್ ಪೋಸ್ಟರ್ ಮೂಲಕವೇ ಪ್ರೇಕ್ಷಕರನ್ನೆಲ್ಲ ಅಚ್ಚರಿಗೀಡು ಮಾಡಿದ್ದ ಈ ಸಿನಿಮಾ ಇದೇ 22ರಂದು ತೆರೆಗಾಣಲಿದೆ. ಒಂದು ಸಿನಿಮಾ ಯಾವ ಯಾವ ರೀತಿಯಲ್ಲಿ ಸೆಳೆಯುವಂಥಾ ಕಂಟೆಂಟು ಹೊಂದಿರಬೇಕೋ ಅದೆಲ್ಲವನ್ನೂ ಬೆರೆಸಿಯೇ ನಿರ್ದೇಶಕರು ಈ ಕಥೆಯನ್ನು ಸಿದ್ಧಗೊಳಿಸಿದ್ದಾರೆ. ಇದುವರೆಗೆ ಪ್ರೇಕ್ಷಕರು ಅಂದುಕೊಂಡಿರುವಂತೆ, ಮೊನ್ನೆ ಬಿಡುಗಡೆಯಾದ ಟ್ರೇಲರ್‍ನಲ್ಲಿ ಕಾಣಿಸಿದಂತೆ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಧಾಟಿಯ ಕಥಾನಕವನ್ನೊಳಗೊಂಡಿದೆ ಅಂತಲೇ ಹೇಳಲಾಗುತ್ತದೆ. ನೋಡುಗರನ್ನು ಕ್ಷಣ ಕ್ಷಣವೂ ಕ್ಯೂರಿಯಾಸಿಟಿಯ ಕಮರಿಗೆ ತಳ್ಳುವಂತಹ ರೋಚಕ ಕಥೆಯನ್ನೊಳಗೊಂಡಿರೋ ಈ ಕಥೆಗೆ ಶೀರ್ಷಿಕೆಗೆ ತಕ್ಕುದಾದ ಛಾಯೆಯೂ ಇದೆ. ಒಂದು ಜನರೇಷನ್ನಿನ ಒಟ್ಟಾರೆ ಮನೋ ಪಲ್ಲಟಗಳನ್ನೂ ಕೂಡ ಈ ಕಥೆಯೊಂದಿಗೆ ಬೆರೆಸಲಾಗಿದೆ. ಅದುವೇ ಈ ಸಿನಿಮಾದ ಪ್ರಧಾನ ಅಂಶವೆಂದರೂ ತಪ್ಪಲ್ಲ.
ಮನರೂಪ ಸಿನಿಮಾ 1980 ರಿಂದ 2000ದ ನಡುವಿನ ವರ್ಷಗಳ ನಡುವಿನ ಅವಧಿಯಲ್ಲಿ ಹುಟ್ಟಿರುವವರ ಕಥೆ. ಹೊಸ ತಲೆಮಾರು ಅಥವಾ ಮಿಲೆನಿಯಲ್ಸ್ ಎಂದು ಕರೆಸಿಕೊಳ್ಳುವ ಈ ಅವಧಿಯಲ್ಲಿ ಜನಿಸಿದ ಸಮೂಹದಲ್ಲಿ ಕಾಣುವ ಎರಡು ಬಗೆಯ ಭಿನ್ನತೆಯನ್ನು ಮನರೂಪ ಸಿನಿಮಾದಲ್ಲಿ ನಿರೂಪಿಸಲಾಗಿದೆ. ಖಂಡಿತವಾಗಿಯೂ, ಮನರೂಪ ಹೊಸ ತಲೆಮಾರಿನ ಸಿನಿಮಾ. ಪರಸ್ಪರ ಪ್ರೀತಿ ವಿಶ್ವಾಸದಿಂದ ಕುಟುಂಬದಲ್ಲಿ ಇರಲಾಗದ, ಹೊಂದಿಕೊಂಡು ಜೀವಿಸಲಾಗದ, ಒಂಟಿಯಾಗಿಯೇ ಉಳಿಯಲು ಇಚ್ಛಿಸುವ, ಆದರೆ ತಮ್ಮನ್ನೇ ಗಮನಿಸಬೇಕು ಎನ್ನುವ ಮನೋಭಾವದ ಯುವ ಮನಸ್ಸಿನ ಕಥೆ ಇಲ್ಲಿದೆ.
ಉತ್ತರಕನ್ನಡದ ಶಿರಸಿ, ಸಿದ್ಧಾಪುರ ಭಾಗಗಳಲ್ಲಿ ಮನರೂಪ ಚಿತ್ರೀಕರಣ ಮಾಡಲಾಗಿದೆ. ಮುಖ್ಯ ಭೂಮಿಕೆಯಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್ ಅಭಿನಯಿಸಿದ್ದಾರೆ. ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ ವಿಭಿನ್ನ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದ ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ, ಭಾಗೀರತಿ ಕನ್ನಡತಿ ಮುಂತಾದವರು ಅಭಿನಯಿಸಿದ್ದಾರೆ. ನಿರ್ದೇಶಕ ಕಿರಣ್ ಹೆಗ್ಡೆ ಹಲವಾರು ವರ್ಷಗಳ ಕಾಲ ಕಾಡಿಸಿಕೊಂಡು, ಅದಕ್ಕಾಗಿ ತಯಾರಾಗಿ, ವರ್ಷಗಟ್ಟಲೆ ಶ್ರಮವಹಿಸಿ ರೂಪಿಸಿರೋ ಚಿತ್ರ ಮನೋರೂಪ. ಅದು ನಿಮ್ಮೆಲ್ಲರೆದುರು ಬಿಚ್ಚಿಕೊಳ್ಳಲು ದಿನಗಣನೆ ಶುರುವಾಗಿದೆ.
ಬೆಂಗಳೂರು: ಕಾಡು ಮತ್ತು ಅದರೊಳಗಿನ ನಿಗೂಢಗಳ ಕಥೆ ಈ ವರೆಗೂ ಅನೇಕ ಸಿನಿಮಾ ರೂಪದಲ್ಲಿ ಪ್ರೇಕ್ಷಕರನ್ನು ಎದುರುಗೊಂಡಿವೆ. ಕಾಡೊಳಗೆ ಸಂಚರಿಸುವ ಕಥೆಯನ್ನೊಳಗೊಂಡಿರೋ ಸಿನಿಮಾಗಳ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲಿ ಎಂದೂ ಬತ್ತದ ಬೆರಗುಗಳಿವೆ. ಈ ಕಾರಣದಿಂದಲೇ ಆಗಾಗ ಅಂಥಾ ಸಿನಿಮಾಗಳು ಅಣಿಗೊಂಡರೆ ಎಲ್ಲರೂ ಅದರತ್ತ ಆಕರ್ಷಿತರಾಗುತ್ತಾರೆ. ಇಂಥಾ ಕಾಡಿನ ರಹಸ್ಯಗಳ ಜೊತೆಗೆ ಮನುಷ್ಯನ ಮಾನಸಿಕ ತಲ್ಲಣಗಳೂ ಸೇರಿದ ಕಥೆಯೊಂದಿಗೆ ತೆರೆಗಾಣಲು ರೆಡಿಯಾಗಿರೋ ಚಿತ್ರ ಮನರೂಪ. ಕಿರಣ್ ಹೆಗ್ಡೆ ನಿರ್ದೇಶನದ ಈ ಸಿನಿಮಾ ಇದೇ ತಿಂಗಳ 22ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ.
ಪತ್ರಿಕೋದ್ಯಮ ಮತ್ತು ಸಾಹಿತ್ಯದತ್ತ ಅಪಾರ ಆಸಕ್ತಿ ಹೊಂದಿರುವ, ಆ ಮೂಲಕವೇ ಸೂಕ್ಷ್ಮವಾದ ಮನಸ್ಥಿತಿಯನ್ನು ತಮ್ಮದಾಗಿಸಿಕೊಂಡಿರುವವರು ನಿರ್ದೇಶಕ ಕಿರಣ್ ಹೆಗ್ಡೆ. ಸಾಹಿತ್ಯಾಸಕ್ತಿ ಮತ್ತು ತಾವು ಹುಟ್ಟಿ ಬೆಳೆದ ಶಿರಸಿ ಭಾಗದ ವಾತಾವರಣದಿಂದಲೇ ಅವರಿಗೆ ಸೂಕ್ಷ್ಮವಂತಿಕೆಯ ಮನಸ್ಥಿತಿ ಸಿದ್ಧಿಸಿದೆ. ಬಹುಶಃ ಸಾಹಿತ್ಯದ ಸಂಗವಿರದೆ ಮನರೂಪದಂಥಾ ಕಥೆಗಳು ರೂಪುಗೊಳ್ಳಲು ಸಾಧ್ಯವೇ ಇಲ್ಲವೇನೋ… ಈ ಸಿನಿಮಾ ಹೊಸತನ ದ ಕಥೆಯನ್ನೊಳಗೊಂಡಿದೆ ಅನ್ನೋ ಸುಳಿವು ಈ ಹಿಂದೆ ಪೋಸ್ಟರ್ ಗಳ ಮೂಲಕವೇ ಸಿಕ್ಕಿ ಹೋಗಿತ್ತು. ಇದೀಗ ಮನರೂಪ ಬಿಡುಗಡೆಯ ಹೊಸ್ತಿಲಲ್ಲಿರುವ ಘಳಿಗೆಯಲ್ಲಿ ನಿರ್ದೇಶಕರು ಮತ್ತೂ ಇಂಟರೆಸ್ಟಿಂಗ್ ಆದ ಒಂದಷ್ಟು ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದುವೇ ಈ ಸಿನಿಮಾದತ್ತ ಪ್ರೇಕ್ಷಕರಲ್ಲಿರೋ ಕುತೂಹಲವನ್ನು ಮತ್ತಷ್ಟು ತೀವ್ರಗೊಳಿಸುವಂತಿವೆ.
ಇಲ್ಲಿನ ಇಡೀ ಕಥೆ ಕಾಡಿನ ಬ್ಯಾಕ್‍ಡ್ರಾಪ್‍ನಲ್ಲಿ ಕಳೆಗಟ್ಟಿಕೊಳ್ಳುವಂತೆ ಕಿರಣ್ ಹೆಗ್ಡೆ ನೋಡಿಕೊಂಡಿದ್ದಾರೆ. ಕಾಡೊಳಗಿನ ನಿಶ್ಯಬ್ಧ ಮೋಹಕವೂ ಹೌದು, ಭಯಾನಕವೂ ಹೌದು. ಅಂಥಾ ವಾತಾವರಣಕ್ಕೆ ಎಂಭತ್ತರ ದಶಕದಿಂದ ಎರಡು ಸಾವಿರನೇ ಇಸವಿಯ ವರೆಗಿನ ಜನರೇಷನ್ನಿನ ಮನೋಲೋಕವನ್ನು ಸಮ್ಮಿಳಿತಗೊಳಿಸಿ ಕಿರಣ್ ಹೆಗ್ಡೆ ಈ ಕಥೆಯನ್ನು ರೂಪಿಸಿದ್ದಾರಂತೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್‍ನಲ್ಲಿ ಇಡೀ ಸಿನಿಮಾ ಅದೆಷ್ಟು ಕುತೂಹಲಕರವಾಗಿ ಮೂಡಿ ಬಂದಿದೆ ಎಂಬುದು ಸ್ಪಷ್ಟವಾಗಿಯೇ ಗೊತ್ತಾಗಿದೆ. ಸದರಿ ಟ್ರೇಲರ್ ನಲ್ಲಿನ ತೀವ್ರತೆಯೇ ಸಿನಿಮಾದುದ್ದಕ್ಕೂ ಪ್ರೇಕ್ಷಕರನ್ನು ಥ್ರಿಲ್ ಆಗಿಸಲಿದೆಯಂತೆ.
ಹತ್ತು ವರ್ಷಗಳ ನಂತರ ಮುಖಾಮುಖಿಯಾಗಿ ಖುಷಿಗೊಳ್ಳುವ ಸ್ನೇಹಿತರ ದಂಡೊಂದು ಕರಡಿ ಗುಹೆಯೆಂಬ ಪ್ರದೇಶಕ್ಕೆ ಚಾರಣ ಹೊರಡುತ್ತೆ. ಆ ಹಾದಿಯಲ್ಲಿ ಎದುರಾಗುವ ವಿಕ್ಷಿಪ್ತ ಮತ್ತು ಭಯಾನಕ ಸನ್ನಿವೇಶಿಗಳಿಗೆ ಅವರೆಲ್ಲ ಹೇಗೆ ಸ್ಪಂದಿಸುತ್ತಾರೆ, ಅವರ ಮಾನಸಿಕ ಸ್ಥಿತಿಗತಿಗಳು ಹೇಗೆಲ್ಲ ರೂಪಾಂತರಗೊಳ್ಳುತ್ತವೆ ಎಂಬುದರ ಸುತ್ತ ಕಥೆ ಚಲಿಸುತ್ತೆ. ಹಾಗಂತ ಇದನ್ನು ಬೇರೆ ಜಾಡಿನ ಸಿನಿಮಾ ಅಂದುಕೊಳ್ಳಬೇಕಿಲ್ಲ. ಅದೆಷ್ಟೋ ವರ್ಷಗಳಿಂದ ಸಿನಿಮಾ ವ್ಯಾಮೋಹ ಹೊಂದಿರುವ ಕಿರಣ್ ಹೆಗ್ಡೆ ಕಮರ್ಶಿಯಲ್ ಹಾದಿಯಲ್ಲಿಯೇ ಈ ದೃಷ್ಯಗಳನ್ನು ಕಟ್ಟಿ ಕೊಟ್ಟಿದ್ದಾರಂತೆ. ಅಂತೂ ಕಾಡುತ್ತಲಾ ಬೆಚ್ಚಿ ಬೀಳಿಸಲಿರೋ ಮನರೂಪ ಇದೇ 22ರಂದು ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.