Tag: ಆರ್ಮಿ ಕ್ಯಾಪ್

  • ಆರ್ಮಿ ಕ್ಯಾಪ್ ಧರಿಸಿ ಆಡಿದ್ದು ತಪ್ಪು – ಬಿಸಿಸಿಐ ವಿರುದ್ಧ ಕ್ರಮಕೈಗೊಳ್ಳಿ ಪಾಕ್

    ಆರ್ಮಿ ಕ್ಯಾಪ್ ಧರಿಸಿ ಆಡಿದ್ದು ತಪ್ಪು – ಬಿಸಿಸಿಐ ವಿರುದ್ಧ ಕ್ರಮಕೈಗೊಳ್ಳಿ ಪಾಕ್

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ವಿಶೇಷ ಆರ್ಮಿ ಕ್ಯಾಪ್ ಧರಿಸಿ ಆಡಿದ್ದಕ್ಕೆ ಪಾಕ್ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನದ ಸಚಿವ ಫಾರ್ವದ್ ಚೌಧರಿ ಈ ಸಂಬಂಧ ಐಸಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತದ ಯೋಧರಿಗೆ ಗೌರವ ಸೂಚಿರುವ ಕ್ರಮವಾಗಿ ಟೀಂ ಇಂಡಿಯಾ ಆಟಗಾರರು ವಿಶೇಷ ಆರ್ಮಿ ಕ್ಯಾಪ್ ಧರಿಸಿ ಆಡಿದ್ದರು. ಅಲ್ಲದೇ ಪ್ರತಿ ವರ್ಷ ಒಂದು ಪಂದ್ಯದಲ್ಲಿ ಆಟಗಾರರಿಗೆ ಆರ್ಮಿ ಕ್ಯಾಪ್ ಧರಿಸಿ ಆಡಲಿದ್ದಾರೆ. ಆ ಮೂಲಕ ಸೇನೆಗೆ ಗೌರವ ಸೂಚಿಸಲಿದ್ದಾರೆ ಎಂದು ಬಿಸಿಸಿಐ ಘೋಷಣೆ ಮಾಡಿತ್ತು.

    ಬಿಸಿಸಿಐ ಈ ನಿರ್ಧಾರದ ಬಗ್ಗೆ ಕಿಡಿಕಾರಿರುವ ಚೌಧರಿ, ಇದು ಕೇವಲ ಕ್ರಿಕೆಟ್ ಅಲ್ಲ. ಇಂತಹ ಕ್ಯಾಪ್‍ಗಳನ್ನು ಧರಿಸುವ ಮೂಲಕ ಜೆಂಟಲ್‍ಮನ್ ಗೇಮನ್ನು ರಾಜಕೀಯ ಮಾಡಿದ್ದಾರೆ ದೂರಿದ್ದಾರೆ. ಅಲ್ಲದೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಬಿಸಿಸಿಐ ನಡೆಯ ವಿರುದ್ಧ ಪ್ರತಿಭಟನೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

    ಒಂದೊಮ್ಮೆ ಭಾರತ ಇಂತಹ ಕ್ಯಾಪ್ ಧರಿಸುವುದನ್ನು ನಿಲ್ಲಿಸದಿದ್ದರೆ, ಪಾಕಿಸ್ತಾನ ತಂಡ ಕೂಡ ಕಪ್ಪುಪಟ್ಟಿ ಧರಿಸಿ ಆಡಬೇಕು. ಈ ಮೂಲಕ ಕಾಶ್ಮೀರದ ಸಮಸ್ಯೆಯನ್ನು ಜಗತ್ತಿಗೆ ತಿಳಿಸಬೇಕು ಎಂದಿದ್ದಾರೆ. ಕೇವಲ ಪಾಕ್ ರಾಜಕೀಯ ನಾಯಕರು ಮಾತ್ರವಲ್ಲದೇ ಹಲವರು ಬಿಸಿಸಿಐ ವಿರುದ್ಧ ಕಿಡಿಕಾರಿದ್ದು, ಕ್ರಿಕೆಟ್ ಆಟವನ್ನು ರಾಜಕೀಯಕ್ಕೆ ಎಳೆದು ತರಬೇಡಿ ಎಂದಿದ್ದಾರೆ.

    ಪುಲ್ವಾಮಾ ದಾಳಿ ಬಳಿಕ ಬಿಸಿಸಿಐ ಸಮಿತಿ ಪಾಕಿಸ್ತಾವನ್ನು ದೂರ ಇಡುವಂತೆ ಐಸಿಸಿಗೆ ಮನವಿ ಮಾಡಿತ್ತು. ಆ ಮೂಲಕ ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳನ್ನು ಕ್ರಿಕೆಟ್‍ನಿಂದ ಹೊರಗಿಡಿ ಎಂದು ಮನವಿ ಮಾಡಿದ್ದರು. ಆದರೆ ಐಸಿಸಿ ಈ ಬಗ್ಗೆ ನಕಾರಾತ್ಮ ಪ್ರತಿಕ್ರಿಯೆ ನೀಡಿದ್ದರು ಕೂಡ ನಮ್ಮ ಮನವಿ ಮತ್ತೆ ಐಸಿಸಿ ಮುಂದಿಡುತ್ತೇವೆ ಎಂದು ಬಿಸಿಸಿಐ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv