Tag: ಆರ್ಮಿ ಆಫೀಸರ್

  • ಪ್ರಭಾಸ್ ‘ಸಲಾರ್’ ಸಿನಿಮಾದಲ್ಲಿ ಆರ್ಮಿ ಆಫೀಸರ್?

    ಪ್ರಭಾಸ್ ‘ಸಲಾರ್’ ಸಿನಿಮಾದಲ್ಲಿ ಆರ್ಮಿ ಆಫೀಸರ್?

    ಲಾರ್ ಸಿನಿಮಾದಲ್ಲಿ ಪ್ರಭಾಸ್ ಡಬಲ್ ರೋಲ್ ಮಾಡಿದ್ದಾರಾ? ಇಂಥದ್ದೊಂದು ಚರ್ಚೆಯನ್ನು ಹುಟ್ಟು ಹಾಕಿದೆ ‘ಸಲಾರ್’ ಟೀಮ್. ಒಂದು ಕಡೆ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡ ಪ್ರಭಾಸ್ ಫೋಟೋಗಳು ಹರಿದಾಡುತ್ತಿದ್ದರೆ ಮತ್ತೊಂದು ಕಡೆ ಸಲಾರ್ ಹೆಸರಿನ ಎಕ್ಸ್ ಖಾತೆಯಲ್ಲಿ ಆರ್ಮಿ (Army Officer) ಯೂನಿಫಾರ್ಮ್ ತೊಟ್ಟ ಪ್ರಭಾಸ್ ಫೋಟೋ ಅಪ್ ಲೋಡ್ ಆಗಿದೆ. ಹಾಗಾಗಿ ಈ ಸಿನಿಮಾದಲ್ಲಿ ಪ್ರಭಾಸ್ ದ್ವಿಪಾತ್ರ ಮಾಡಿದ್ದಾರಾ ಎನ್ನುವ ಅನುಮಾನ ಮೂಡಿಸಿದೆ. ಇದಕ್ಕೆ ಚಿತ್ರತಂಡವೇ ಉತ್ತರಿಸಬೇಕಿದೆ.

    ಅಂದುಕೊಂಡಂತೆ ಆಗಿದ್ದರೆ ಮೊನ್ನೆಯೇ ‘ಸಲಾರ್’ ಸಿನಿಮಾ ರಿಲೀಸ್ ಆಗಬೇಕಿತ್ತು. ನಾನಾ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ, ಸಲಾರ್ ಯಾವಾಗ ರಿಲೀಸ್ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಸ್ವತಃ ನಿರ್ಮಾಣ ಸಂಸ್ಥೆಯೇ (Hombale Films)  ಹೊಸ ದಿನಾಂಕವನ್ನು ಘೋಷಣೆ ಮಾಡಿದ್ದು, ಡಿಸೆಂಬರ್ 22 ರಂದು ವಿಶ್ವದಾದ್ಯಂತ ಸಲಾರ್ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

    ಭಾರತೀಯ ಸಿನಿಮಾ ರಂಗದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ ಶಾರುಖ್ (Shah Rukh Khan) ಚಿತ್ರದ ಎದುರು ವಿಶ್ವಮಟ್ಟದಲ್ಲಿ ಪ್ರಭಾಸ್ ಸಿನಿಮಾ ಎದುರಾಗಿದೆ. ಇಂಥದ್ದೊಂದು ಮಾಹಿತಿಯನ್ನು ಅಧಿಕೃತವಾಗಿ ಚಿತ್ರತಂಡಗಳೇ ಹೇಳಿಕೊಂಡಿವೆ.

    ಈಗಾಗಲೇ ಶಾರುಖ್ ಖಾನ್ ನಟನೆಯ ಡಂಕಿ (Dunki) ಸಿನಿಮಾವನ್ನು  ಕ್ರಿಸ್ ಮಸ್ ಹಬ್ಬಕ್ಕಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧ ಮಾಡಿಕೊಂಡಿದೆ. 22 ಡಿಸೆಂಬರ್ 2023ರಂದು ಡಂಕಿ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಅಂದೇ ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಸಲಾರ್’ ಚಿತ್ರವನ್ನೂ ಬಿಡುಗಡೆ ಮಾಡಲು ಹೊಂಬಾಳೆ ಫಿಲ್ಮ್ಸ್ ರೆಡಿಯಾಗಿದೆ.

    ಅಂದುಕೊಂಡಂತೆ ಆಗಿದ್ದರೆ, ಸೆಪ್ಟೆಂಬರ್ 28ರಂದು ಸಲಾರ್ (Salaar) ಸಿನಿಮಾ ರಿಲೀಸ್ ಆಗಬೇಕಿತ್ತು. ಈ ದಿನಾಂಕವನ್ನು ಘೋಷಿಸಿಯೂ ಆಗಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ರಿಲೀಸ್ ಆಗಲಿಲ್ಲ. ಮುಂದಿನ ದಿನಾಂಕವನ್ನೂ ಹೊಂಬಾಳೆ ಫಿಲ್ಮ್ಸ್ ಘೋಷಿಸುವುದಾಗಿ ತಿಳಿಸಿತ್ತು ಅದರಂತೆ ಮೊನ್ನೆ ದಿನಾಂಕ ಘೋಷಣೆ ಮಾಡಿದೆ.

     

    ಈಗಾಗಲೇ ಒಂದರ ಹಿಂದೆ ಒಂದು ಸಿನಿಮಾವನ್ನು ಗೆಲ್ಲಿಸಿಕೊಂಡಿದ್ದಾರೆ ಶಾರುಖ್ ಖಾನ್, ಪಠಾಣ್ ಮತ್ತು ಜವಾನ್ ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿವೆ. ಈ ಗೆಲುವಿನ ನಂತರ ಡಂಕಿ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಹೊತ್ತಲ್ಲಿ ಸಲಾರ್ ಸಿನಿಮಾ ಕೂಡ ರಿಲೀಸ್ ( Release) ಆಗುತ್ತಿದೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಹೇಗೆ ಕಮಾಯಿ ಮಾಡಲಿವೆ ಎಂದು ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೀತಿಯ ಶ್ವಾನವನ್ನು ರಕ್ಷಿಸಿ ಬೆಂಕಿಗೆ ಆಹುತಿಯಾದ ಆರ್ಮಿ ಆಫೀಸರ್

    ಪ್ರೀತಿಯ ಶ್ವಾನವನ್ನು ರಕ್ಷಿಸಿ ಬೆಂಕಿಗೆ ಆಹುತಿಯಾದ ಆರ್ಮಿ ಆಫೀಸರ್

    ಶ್ರೀನಗರ: ತನ್ನ ಪ್ರೀತಿಯ ಶ್ವಾನವನ್ನು ಕಾಪಾಡಲು ಹೋಗಿ ಆರ್ಮಿ ಅಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಜಮ್ಮ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ ಪ್ರದೇಶದಲ್ಲಿ ನಡೆದಿದೆ.

    ಮೇಜರ್ ಅಂಕಿತ್ ಬುಧರಾಜಾ ಪ್ರಾಣ ಕಳೆದುಕೊಂಡ ಅಧಿಕಾರಿ. ಶನಿವಾರ ರಾತ್ರಿ ಅಕಸ್ಮಿಕವಾಗಿ ಅಂಕಿತ್ ಅವರ ಮನೆಗೆ ಬೆಂಕಿ ಬಿದ್ದಿದೆ. ಈ ವೇಳೆ ಮನೆಯ ಒಳಗೆ ಇದ್ದ ನಾಯಿಯನ್ನು ರಕ್ಷಿಸಲು ಹೋಗಿ ಅಂಕಿತ್ ಪ್ರಾಣ ಬಿಟ್ಟಿದ್ದಾರೆ.

    ಅಂಕಿತ್ ಅವರು ಇದ್ದ ಮನೆಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಅಂಕಿತ್ ತನ್ನ ಪತ್ನಿ ಮತ್ತು ಒಂದು ನಾಯಿಯನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಮನೆಯ ಪೂರ್ತಿ ಬೆಂಕಿ ಹೊತ್ತಿಕೊಂಡಾಗ ಮನೆಯೊಳಗೆ ಇನ್ನೊಂದು ನಾಯಿ ಇದ್ದದ್ದು ನೆನಪಿಗೆ ಬಂದಿದೆ. ಆಗ ಅದನ್ನು ರಕ್ಷಿಸಲು ಅಂಕಿತ್ ಮತ್ತೆ ಮನೆಯೊಳಗೆ ಹೋಗಿದ್ದಾರೆ. ಆದರೆ ಹೊರಬರುವಷ್ಟರಲ್ಲಿ ಶೇ.90 ರಷ್ಟು ಸುಟ್ಟುಹೋಗಿದ್ದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಈ ಘಟನೆಯ ನಂತರ ಸ್ಥಳೀಯ ಪೊಲೀಸರ ಸಹಾಯದಿಂದ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಮೃತ ಅಂಕಿತ್ ಬುಧರಾಜಾ ಅವರ ಪಾರ್ಥಿವ ಶರೀರವನ್ನು ಟ್ಯಾಂಗ್‍ಮಾರ್ಗ್‍ನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.