Tag: ಆರ್ಬಿಟರ್

  • ಚಂದ್ರನ ಮೇಲಿರುವ ಚಂದ್ರಯಾನ-3 ಲ್ಯಾಂಡರ್‌ ಫೋಟೋ ಸೆರೆ ಹಿಡಿದ ಚಂದ್ರಯಾನ-2ರ ಆರ್ಬಿಟರ್‌

    ಚಂದ್ರನ ಮೇಲಿರುವ ಚಂದ್ರಯಾನ-3 ಲ್ಯಾಂಡರ್‌ ಫೋಟೋ ಸೆರೆ ಹಿಡಿದ ಚಂದ್ರಯಾನ-2ರ ಆರ್ಬಿಟರ್‌

    ನವದೆಹಲಿ: ಚಂದ್ರನ (Moon) ಮೇಲ್ಮೈನಲ್ಲಿರುವ ಲ್ಯಾಂಡರ್‌ ಮಾಡ್ಯೂಲ್‌ (Lander Module) ಮತ್ತು ರೋವರ್‌ (Rover) ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಇದೇ ಹೊತ್ತಿನಲ್ಲಿ ಚಂದ್ರನ ಮೇಲಿರುವ ಚಂದ್ರಯಾನ-3ರ (Chandrayaan-3) ವಿಕ್ರಮ್‌ ಲ್ಯಾಂಡರ್‌ನ ಫೋಟೋವನ್ನು ಚಂದ್ರಯಾನ-2ರ ಆರ್ಬಿಟರ್‌ (Chandrayaan-2 Orbiter) ಸೆರೆ ಹಿಡಿದಿದೆ.

    ಚಂದ್ರಯಾನ-3 ಲ್ಯಾಂಡರ್‌ನ ಫೋಟೋವನ್ನು ಟ್ವಿಟ್ಟರ್‌ ಖಾತೆಯಲ್ಲಿ (ಎಕ್ಸ್‌) ಹಂಚಿಕೊಂಡಿರುವ ಇಸ್ರೋ, “ನಾನು ನಿನ್ನ ಮೇಲೆ ಕಣ್ಣಿಟ್ಟಿದ್ದೇನೆ. ಚಂದ್ರಯಾನ-3ರ ಲ್ಯಾಂಡರ್‌ನ ಫೋಟೋವನ್ನು ಚಂದ್ರಯಾನ-2 ಆರ್ಬಿಟರ್‌ ಸೆರೆ ಹಿಡಿದಿದೆ. ಚಂದ್ರಯಾನ-2 ನ ಆರ್ಬಿಟರ್ ಹೈ-ರೆಸಲ್ಯೂಶನ್ ಕ್ಯಾಮೆರಾ (OHRC) ಮೂಲಕ ಈ ಫೋಟೋ ತೆಗೆದಿದೆ” ಎಂದು ತಿಳಿಸಿದೆ. ಇದನ್ನೂ ಓದಿ: Chandrayaan-3 ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ರೋವರ್ – ವೀಡಿಯೋ ರಿಲೀಸ್ ಮಾಡಿದ ಇಸ್ರೋ

    ಲ್ಯಾಂಡರ್‌ ಮತ್ತು ರೋವರ್‌ನ ಮುಂದಿನ ಕಾರ್ಯಾಚರಣೆಯನ್ನು ನಿಗದಿಪಡಿಸಲಾಗಿದೆ. ಎಲ್ಲಾ ಸಿಸ್ಟಮ್‌ಗಳು ನಾರ್ಮಲ್‌ ಆಗಿದೆ. ಲ್ಯಾಂಡರ್ ಮಾಡ್ಯೂಲ್ ಪೇಲೋಡ್‌ಗಳಾದ ILSA, RAMBHA ಮತ್ತು ChaSTE ಅನ್ನು ಆನ್ ಮಾಡಲಾಗಿದೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳು ಪ್ರಾರಂಭವಾಗಿವೆ. ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿನ SHAPE ಪೇಲೋಡ್ ಅನ್ನು ಭಾನುವಾರ ಆನ್‌ ಮಾಡಲಾಗಿದೆ ಎಂದು ಗುರುವಾರ ಇಸ್ರೋ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿತು.

    ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌ ಆ.23 ರಂದು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು. ಅದಾದ ಕೆಲವೇ ಗಂಟೆಗಳಲ್ಲಿ ಪ್ರಗ್ಯಾನ್‌ ರೋವರ್‌, ಲ್ಯಾಂಡರ್‌ನಿಂದ ಹೊರಬಂದು ಚಂದ್ರನ ಮೇಲೆ ತನ್ನ ವೈಜ್ಞಾನಿಕ ಅಧ್ಯಯನ ಆರಂಭಿಸಿದೆ. ಇವು ಒಂದು ಚಂದ್ರನ ದಿನ (ಭೂಮಿಯ 14 ದಿನ) ತಮ್ಮ ಕಾರ್ಯಾಚರಣೆಯನ್ನು ನಡೆಸಲಿವೆ. ಇದನ್ನೂ ಓದಿ: ಭಾರತದ ಚಂದ್ರಯಾನ-3 ಯಶಸ್ಸಿಗೆ ವಿಶ್ವಸಂಸ್ಥೆಯಲ್ಲಿ ಸಂಭ್ರಮಾಚರಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Welcome, buddy.. ಚಂದ್ರಯಾನ-3ಗೆ ಸ್ವಾಗತ ಕೋರಿದ ಚಂದ್ರಯಾನ-2 ಆರ್ಬಿಟರ್‌; ಇಸ್ರೋಗೆ ಇನ್ನಷ್ಟು ತಾಂತ್ರಿಕ ಬಲ

    Welcome, buddy.. ಚಂದ್ರಯಾನ-3ಗೆ ಸ್ವಾಗತ ಕೋರಿದ ಚಂದ್ರಯಾನ-2 ಆರ್ಬಿಟರ್‌; ಇಸ್ರೋಗೆ ಇನ್ನಷ್ಟು ತಾಂತ್ರಿಕ ಬಲ

    ಬೆಂಗಳೂರು: ಚಂದ್ರಯಾನ-3 (Chandrayaan-3) ಸಕ್ಸಸ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಚಂದ್ರಯಾನ-3 ರಲ್ಲಿ ಕಳುಹಿಸಿರುವ ವಿಕ್ರಮ್‌ ಲ್ಯಾಂಡರ್, ಚಂದ್ರಯಾನ-2 ನಲ್ಲಿ ಕಳುಹಿಸಿದ್ದ ಆರ್ಬಿಟರ್ (Ch-2 orbiter) ಸಂಪರ್ಕ ಸಾಧಿಸಿದೆ. ಚಂದ್ರಯಾನ-2 ಆರ್ಬಿಟರ್‌ನೊಂದಿಗೆ ಸಂಪರ್ಕ ಸಾಧಿಸಿರುವ ಮಾಹಿತಿಯನ್ನು ಇಸ್ರೋ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

    2019ರಲ್ಲಿ ಇಸ್ರೋ (ISRO) ಚಂದ್ರಯಾನ-2 ಯೋಜನೆ ಆರಂಭಿಸಿದಾಗ ಅದರ ಆರ್ಬಿಟರ್‌ ಅನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಗಿತ್ತು. ಆದರೆ, ಇದರ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲು ವಿಫಲವಾಗಿದ್ದರಿಂದ ಸಂವಹನ ಕಡಿತಗೊಂಡಿತ್ತು. ಕಳೆದ 5 ವರ್ಷಗಳಿಂದ ಏಕಾಂಗಿಯಾಗಿ ಚಂದ್ರನ ಕಕ್ಷೆ ಸುತ್ತುತ್ತಿದ್ದ ಈ ಆರ್ಬಿಟರ್ ವಿಕ್ರಮ್‌ ಲ್ಯಾಂಡರ್‌ನ (Vikram Lander) ಸಂಪರ್ಕ ಸಿಕ್ಕಿದೆ. ಕಳೆದ ಬಾರಿ ಕಳುಹಿಸಿದ್ದ ಆರ್ಬಿಟರ್ ಸುಸ್ಥಿತಿಯಲ್ಲಿದ್ದ ಕಾರಣ ಈ ಬಾರಿ ಕೇವಲ ಲ್ಯಾಂಡರ್‌ ಮತ್ತು ರೋವರ್ ಅನ್ನು ಕಳುಹಿಸಿತ್ತು. ಈ ಎರಡರ ಸಂಪರ್ಕ ಇಸ್ರೋಗೆ ತಾಂತ್ರಿಕ ಬಲ ಸಿಕ್ಕಾಂತಾಗಿದೆ.

    ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಇಸ್ರೋ ಚಂದ್ರಯಾನ-3 ನೌಕೆಯ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಈ ಪ್ರಕ್ರಿಯೆ ಯಶಸ್ವಿಯಾದರೆ ಚಂದ್ರನ ಮೇಲೆ ಲ್ಯಾಂಡರ್‌ ಇಳಿಸಿದ ಜಗತ್ತಿನ 4ನೇ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಇದನ್ನೂ ಓದಿ: ವೀಸಾ ಅವಧಿ ಮುಗಿದರೂ ಗುಜರಾತ್‌ನಲ್ಲಿ ಅಕ್ರಮ ನೆಲೆ – 45 ಪಾಕಿಸ್ತಾನಿ ಹಿಂದೂಗಳ ಬಂಧನ

    ಚಂದ್ರ ಚುಂಬನಕ್ಕೆ‌ ಕ್ಷಣಗಣನೆ: ಇನ್ನೂ ತೀವ್ರ ಕುತೂಹಲ ಮೂಡಿಸಿರುವ ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇದಕ್ಕೂ ಮೊದಲೇ ಚಂದ್ರಯಾನ-3 ಗಗನನೌಕೆಯು ಚಂದ್ರನ ಸನಿಹದಿಂದ ಫೋಟೋಗಳನ್ನು ಕ್ಲಿಕ್ಕಿಸಿ ಇಸ್ರೋಗೆ ಕಳಿಹಿಸಿಕೊಟ್ಟಿದೆ. ಈ ಫೋಟೋಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಈ ಫೋಟೋದಲ್ಲಿ ಭೂಮಿಗೆ ಕಾಣಿಸದ ಚಂದ್ರನ ಮತ್ತೊಂದು ಮುಖ ಕಾಣಿಸಿದೆ. ಚಂದ್ರನ ಮಗ್ಗುಲಿನಲ್ಲಿ ಸಾಕಷ್ಟು ಕುಳಿಗಳು ಇರುವುದು ಫೋಟೋದಲ್ಲಿ ಕಂಡು ಬಂದಿದೆ.

    ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆಂಡ್‌ ಅವಾಯಿಡೆನ್ಸ್ ಕ್ಯಾಮೆರಾ ಮೂಲಕ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆಂಡ್‌ ಅವಾಯಿಡೆನ್ಸ್ ಕ್ಯಾಮೆರಾ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನ ಪತ್ತೆಹಚ್ಚಲು ನೆರವಾಗಲಿದೆ. ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಸ್ಥಳದಲ್ಲಿ ಇಳಿಯಲು ಇದು ನೆರವಾಗಲಿದೆ. ಇದನ್ನೂ ಓದಿ: ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇಯಲ್ಲಿ ಕಂಟೈನರ್ ಪಲ್ಟಿ; ಇಬ್ಬರು ಸಾವು, ನಾಲ್ವರಿಗೆ ಗಾಯ

     

    ವಿಕ್ರಮ್ ಸೆರೆ ಹಿಡಿದ ಫೋಟೋಗಳಲ್ಲಿ ಹೈನ್‌, ಬಾಸ್‌ ಎಲ್‌, ಮಾರ್‌ ಹಬ್ಲೊಲ್ಡಿಟಿನಿಯಮ್‌ ಮತ್ತು ಬೆಲ್‌ಕೊವಿಚ್‌ ಎಂಬ ಕುಳಿಗಳನ್ನ ಗುರುತಿಸಲಾಗಿದೆ. ಭೂಮಿಗೆ ಕಾಣಿಸದ ಚಂದ್ರನ ಭಾಗವು ಗೋಳಾರ್ಧವಾಗಿದೆ. ಚಂದ್ರನ ಕಕ್ಷೆಯಲ್ಲಿ ಸಿಂಕ್ರೊನಸ್‌ ಆಗಿ ತಿರುಗುವಿಕೆಯಿಂದಾಗಿ ಈ ಭಾಗ ಭೂಮಿಗೆ ಕಾಣಿಸುವುದೇ ಇಲ್ಲ. ಇದೀಗ ಇಸ್ರೋದ ಕ್ಯಾಮೆರಾವು ಆ ಭಾಗದ ಚಿತ್ರಗಳನ್ನು ತೆಗೆದಿದೆ.‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್ ಫೋಟೋ ಕಳುಹಿಸಿದ ನಾಸಾ

    ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್ ಫೋಟೋ ಕಳುಹಿಸಿದ ನಾಸಾ

    ನ್ಯೂಯಾರ್ಕ್: ಚಂದ್ರನ ಮೇಲೆ ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್ ಫೋಟೋಗಳನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಬಿಡುಗಡೆಗೊಳಿಸಿದೆ. ಇಸ್ರೋದಿಂದ ಅನುಮತಿ ಪಡೆದು ನಾಸಾ ವಿಕ್ರಂ ಲ್ಯಾಂಡರ್ ಪತ್ತೆಗೆ ಮುಂದಾಗಿತ್ತು. ಇದೀಗ ನಾಸಾ ತನ್ನ ವರದಿಯನ್ನು ನೀಡಿದೆ.

    ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈಯ ಮೇಲೆ ಹಾರ್ಡ್ ಲ್ಯಾಂಡಿಂಗ್ ಮಾಡಿದೆ ಎಂದು ತಿಳಿಸಿ ಅಲ್ಲಿಯ ಕೆಲ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ರಾತ್ರಿ ಆಗಿದ್ದರಿಂದ ನಿಖರವಾಗಿ ವಿಕ್ರಂ ಲ್ಯಾಂಡರ್ ಎಲ್ಲಿ ಸ್ಪರ್ಶವಾಗಿದೆ ಎಂಬುವುದು ತಿಳಿದು ಬಂದಿಲ್ಲ. ಚಂದ್ರನ ಮೇಲೆ ನೆರಳು ಆವರಿಸಿದ್ದರಿಂದ ವಿಕ್ರಂ ಲ್ಯಾಂಡರ್ ಮರೆಯಾಗಿದೆ ಎಂದು ನಾಸಾ ಹೇಳಿದೆ.

    ಅಕ್ಟೋಬರ್ ನಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಬೆಳಕು ಬರಲಿದೆ. ನಾಸಾ ಮತ್ತೊಮ್ಮೆ ತನ್ನ ಲೂನಾರ್ ರಿಕಾನೆಸ್ ಆರ್ಬಿಟರ್ (ಎಲ್‍ಆರ್‍ಓ) ಕ್ಯಾಮೆರಾ ಮೂಲಕ ವಿಕ್ರಂ ಲ್ಯಾಂಡರ್ ಸ್ಥಳ ಮತ್ತು ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಲಿದೆ. ಮೊದಲಿಗೂ ನಾಸಾ ಈ ಪ್ರಯತ್ನ ಮಾಡಿದ್ದು, ಸಫಲವಾಗಿಲ್ಲ. ಹಾರ್ಡ್ ಲ್ಯಾಂಡಿಂಗ್ ಪರಿಮಾಣ ವಿಕ್ರಂ ಲ್ಯಾಂಡರ್ ವಕ್ರವಾಗಿದ್ದು, ಮುರಿದಿಲ್ಲ. ಇಸ್ರೋ ಸಹ ಸೆಪ್ಟೆಂಬರ್ 21ರವರೆಗೆ ವಿಕ್ರಂ ಸಂಪರ್ಕಿಸಲು ಪ್ರಯತ್ನಿಸಿತ್ತು.

  • ವಿಕ್ರಮ್ ಲ್ಯಾಂಡರ್ ಸ್ಥಳದ ಮಾಹಿತಿ ಲಭ್ಯ: ಇಸ್ರೋ

    ವಿಕ್ರಮ್ ಲ್ಯಾಂಡರ್ ಸ್ಥಳದ ಮಾಹಿತಿ ಲಭ್ಯ: ಇಸ್ರೋ

    ಬೆಂಗಳೂರು: ವಿಕ್ರಮ್ ಲ್ಯಾಂಡರ್ ಸ್ಥಳದ ಮಾಹಿತಿ ಲಭ್ಯವಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ಚಂದ್ರನ ಮೇಲ್ಮೈ ಸ್ಪರ್ಶಿಸಬೇಕಿದ್ದ ವಿಕ್ರಮ್ ಲ್ಯಾಂಡರ್ ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತ್ತು.

    ಆರ್ಬಿಟರ್ ವಿಕ್ರಮ್ ಲ್ಯಾಂಡರ್ ನ ಥರ್ಮಲ್ ಫೋಟೋವನ್ನು ಕ್ಲಿಕ್ಕಿಸಿದೆ. ಆದರೆ ಇದೂವರೆಗೂ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಾಧ್ಯವಾಗಿಲ್ಲ. ಸಂಪರ್ಕಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ತಂಡ ವಿಕ್ರಮ್ ಲ್ಯಾಂಡರ್ ಸಂಪರ್ಕಿಸಲು ನಿರಂತರವಾಗಿ ಶ್ರಮಿಸುತ್ತಿದ್ದು, ಶೀಘ್ರದಲ್ಲಿಯೇ ಸಂಪರ್ಕ ಸಾಧ್ಯವಾಗಲಿದೆ ಎಂದು ಶಿವನ್ ಭರವಸೆ ನೀಡಿದ್ದಾರೆ. ಇದನ್ನೂ ಓದಿ:  ಭಾರತದ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಆಗುತ್ತಿದೆ: ಭೂತಾನ್ ಪ್ರಧಾನಿ

    ಮುಂದಿನ ಮೂರು ದಿನಗಳಲ್ಲಿ ವಿಕ್ರಮ್ ಲ್ಯಾಂಡರ್ ಎಲ್ಲಿದೆ ಮತ್ತು ಹೇಗಿದೆ ಎಂಬಿತ್ಯಾದಿಗಳ ವಿಷಯಗಳ ಮಾಹಿತಿ ಸಿಗಲಿದೆ ಎಂದು ಹಲವು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು. ಹಿರಿಯ ವಿಜ್ಞಾನಿಯೊಬ್ಬರು, ಮುಂದಿನ ಮೂರು ದಿನಗಳಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಿಗುವ ಸಾಧ್ಯತೆಗಳಿವೆ. ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡು ಸ್ಥಳ ತಲುಪಲು ಆರ್ಬಿಟರ್ ಗೆ ಮೂರು ದಿನ ಸಮಯ ಬೇಕಾಗುತ್ತದೆ. ಕೊನೆಯ ಕ್ಷಣದಲ್ಲಿ ವಿಕ್ರಮ್ ತನ್ನ ಪಥ ಬದಲಿಸಿದ್ದರಿಂದ ಸಂಪರ್ಕ ಕಡಿತಗೊಂಡಿತು ಎಂದು ವಿವರಿಸಿದ್ದರು.

    ವಿಕ್ರಮ್ ಸಂಪರ್ಕ ಕಡಿತಕ್ಕೆ ಎಕ್ಸ್ಟ್ರಾ ಬ್ರೇಕ್ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಆರ್ಬಿಟರ್‍ನಿಂದ ಸಾಫ್ಟ್ ಲ್ಯಾಂಡಿಂಗ್ ಮಾಡುವಾಗ ಎಕ್ಸ್ಟ್ರಾ ಹಾರ್ಡ್ ಥ್ರಸ್ಟರ್ ನಿಂದ ಒತ್ತಡ ಹೆಚ್ಚಾಗಿದೆ. ಹಾಗಾಗಿ, ಸಂಪರ್ಕ ಕಡಿತವಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ತಡರಾತ್ರಿಯಿಂದ ಬೆಳಗ್ಗೆ 10 ಗಂಟೆಯವರೆಗೆ ಸಂಪರ್ಕ ಸಾಧಿಸಲು ವಿಜ್ಞಾನಿಗಳ ಶತಪ್ರಯತ್ನ 

    ಆರಂಭದಲ್ಲಿ ಥ್ರಸ್ಟರ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವಿಜ್ಞಾನಿಗಳು ಭಾವಿಸಿದ್ದರು. ಆದರೀಗ, ಡೇಟಾ ಪರಿಶೀಲನೆಯಲ್ಲಿ ಥ್ರಸ್ಟರ್ ಒತ್ತಡ ತಂದಿದೆ ಎನ್ನಲಾಗ್ತಿದೆ. ಚಂದ್ರಯಾನ 2 ಲ್ಯಾಂಡರ್ ಜೊತೆ ಮತ್ತೆ ಸಂಪರ್ಕ ಸಾಧಿಸಲು ಮುಂದಿನ 14 ದಿನಗಳ ಕಾಲ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ಚಂದ್ರನನ್ನು ಸುತ್ತುತ್ತಿರುವ ಆರ್ಬಿಟರ್ 7 ವರ್ಷಗಳ ಕಾಲ ತನ್ನ ಕೆಲಸ ಮಾಡಲಿದೆ. ಯೋಜನೆ ಶೇ.90 ರಿಂದ 95ರಷ್ಟು ಯಶಸ್ವಿಯಾಗಿದೆ ಅಂತ ಇಸ್ರೋ ಹೇಳಿದೆ.

    ಈ ಮಧ್ಯೆ, ಇಸ್ರೋಗೆ ಅಮೆರಿಕದ ನಾಸಾ ಧೈರ್ಯ ತುಂಬಿದೆ. ಬಾಹ್ಯಾಕಾಶ ಭಾರೀ ಕಷ್ಟಕರ. ಆದರೂ, ಭಾರತದ ಸಾಧನೆ ಏನೂ ಕಡಿಮೆಯಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಯತ್ನವನ್ನು ನಾವು ಶ್ಲಾಘಿಸುತ್ತೇವೆ. ನಿಮ್ಮ ಕಾರ್ಯದಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಒಟ್ಟಾಗಿ ಶ್ರಮಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ನಾಸಾ ಟ್ವೀಟ್ ಮಾಡಿದೆ. ಇದನ್ನೂ ಓದಿ:  ರೈತನ ಮಗ ಇಸ್ರೋ ರಾಕೆಟ್ ಮ್ಯಾನ್ ಆದ ಕಥೆ ಓದಿ

    ಚಂದ್ರಯಾನ-2 ಪಯಣ:
    ಶನಿವಾರ ಬೆಳಗಿನ ಜಾವ 1.39ಕ್ಕೆ ಲ್ಯಾಂಡರ್ ಚಂದ್ರನತ್ತ ಇಳಿಯುವ ಕೊನೆಯ ಸಿದ್ಧತೆ ಆರಂಭಗೊಂಡಿತ್ತು. ಇಸ್ರೋ ನಿಗದಿಪಡಿಸಿದ ಪಥದಲ್ಲೇ ಲ್ಯಾಂಡರ್ ಚಲಿಸುತಿತ್ತು. 1.48 ಕೇವಲ 6.ಕಿ.ಮೀ ದೂರದಲ್ಲಿತ್ತು. ಕೊನೆಯ ಹಂತದಲ್ಲಿ ಲ್ಯಾಂಡರ್ ವೇಗೋತ್ಕರ್ಷವನ್ನು ಕಳೆದುಕೊಂಡಿತು. ದೊಡ್ಡ ಪರದೆಯಲ್ಲಿ ಕೆಂಪು ಬಣ್ಣದ ರೇಖೆ ಸಾಗಬೇಕಾದ ದಾರಿ ತೋರಿಸುತ್ತಿದ್ದರೆ ಹಸಿರು ಬಣ್ಣ ಟ್ರಾಜೆಕ್ಟರಿ ರೇಖೆ ಕೆಂಪು ಬಣ್ಣದ ಮೇಲೆಯೇ ಹೋಗುತಿತ್ತು. 1.55ಕ್ಕೆ ಹಸಿರು ಬಣ್ಣದ ಟ್ರಾಜೆಕ್ಟರಿ ರೇಖೆ ಕೆಂಪು ಬಣ್ಣವನ್ನು ಬಿಟ್ಟು ಬೇರೆ ಕಡೆ ಹೋಗುವುದನ್ನು ನೋಡುತ್ತಿದ್ದ ವಿಜ್ಞಾನಿಗಳು ಆಂತಕಕ್ಕೆ ಒಳಗಾದರು. ಅಲ್ಲಿಯವರೆಗೆ ಸಂಭ್ರಮದಲ್ಲೇ ಇದ್ದ ವಿಜ್ಞಾನಿಗಳು ಲ್ಯಾಂಡರಿನಿಂದ ಬರುತ್ತಿರುವ ಸಿಗ್ನಲ್ ನೋಡಿ ಮುಖದಲ್ಲಿದ್ದ ಸಂಭ್ರಮ ಮರೆಯಾಗಿ ಆತಂಕ ಹೆಚ್ಚಾಯಿತು. ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ತಿಳಿಯಲಿಲ್ಲ. ಕೊನೆಗೆ 2.17 ಕ್ಕೆ ಇಸ್ರೋ ಅಧ್ಯಕ್ಷ ಶಿವನ್ 2.1 ಕಿ.ಮೀ ದೂರದಲ್ಲಿದ್ದಾಗ ವಿಕ್ರಮ್ ಸಂಪರ್ಕ ಕಡಿತಗೊಂಡಿದೆ ಎಂದು ಬಹಳ ಗದ್ಗದಿತವಾಗಿ ಪ್ರಕಟಿಸಿ, ಸಂಪರ್ಕ ಸಾಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್ ನ ಕ್ಷಣಕ್ಷಣದ ಕೌತುಕ

    ವಿಡಿಯೋ ವೈರಲ್: ಮಂಗಳಯಾನ ಗುರಿ ಮುಟ್ಟದ್ದಕ್ಕೆ  ಬೇಸರದಲ್ಲಿದ್ದ ಶಿವನ್ ಅವರನ್ನು ಪ್ರಧಾನಿ ಮೋದಿ ಸಮಾಧಾನ ಪಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಇಸ್ರೋ ಕಚೇರಿಯಿಂದ ಹೊರ ಬರುತ್ತಲೇ ಪ್ರಧಾನಿ ಮೋದಿ ಅವರನ್ನು ನೋಡಿ ಇಸ್ರೋ ಮುಖ್ಯಸ್ಥ ಕೆ.ಶಿವನ್ ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಶಿವನ್ ಅವರನ್ನು ಅಪ್ಪಿ ಬೆನ್ನು ತಟ್ಟಿ ಸಮಾಧಾನಪಡಿಸಿದರು. ಇದನ್ನೂ ಓದಿ: ಮೋದಿ ಆಲಂಗಿಸಿ ಕಣ್ಣೀರಿಟ್ಟ ಶಿವನ್