Tag: ಆರ್ಥಿಕ ಸಮೀಕ್ಷೆ

  • ವಿಚಾರಣೆಗೆ ಹಾಜರಾಗುವಂತೆ ರಾಹುಲ್‌ಗೆ ಕೋರ್ಟ್‌ ಸಮನ್ಸ್‌

    ವಿಚಾರಣೆಗೆ ಹಾಜರಾಗುವಂತೆ ರಾಹುಲ್‌ಗೆ ಕೋರ್ಟ್‌ ಸಮನ್ಸ್‌

    ನವದೆಹಲಿ: ಲೋಕಸಭೆ ಚುನಾವಣೆ (Lok Sabha Election) ಪ್ರಚಾರದ ವೇಳೆ ಆರ್ಥಿಕ ಸಮೀಕ್ಷೆಗೆ (Economic Survey) ಸಂಬಂಧಿಸಿದಂತೆ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ನ್ಯಾಯಾಲಯ (Uttar Pradesh Court) ಸಮನ್ಸ್ ಜಾರಿ ಮಾಡಿದೆ.

    ಜನವರಿ 7 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ರಾಹುಲ್‌ಗೆ ಸೂಚಿಸಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಂಘದ ಅಧ್ಯಕ್ಷ ಪಂಕಜ್ ಪಾಠಕ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುಧೀರ್ ಕುಮಾರ್ ಅವರು ಸಮನ್ಸ್ ಜಾರಿ ಮಾಡಿದ್ದಾರೆ.

    ಪಾಠಕ್ ಅವರನ್ನು ಪ್ರತಿನಿಧಿಸಿದ ವಕೀಲ ವೀರೇಂದ್ರ ಪಾಲ್ ಗುಪ್ತಾ ಪ್ರತಿಕ್ರಿಯಿಸಿ, ರಾಹುಲ್‌ ಗಾಂಧಿ ಬಡ ವರ್ಗಗಳನ್ನು ಪ್ರಚೋದಿಸಲು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗಳು ರಾಜಕೀಯ ಲಾಭಕ್ಕಾಗಿ ವರ್ಗ ದ್ವೇಷವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ ಎಂದು ಆರೋಪಿಸಿದರು.

    court order law

    ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಉದ್ದೇಶಪೂರ್ವಕವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳ ನಡುವೆ ಹಗೆತನ ಮತ್ತು ದ್ವೇಷವನ್ನು ಬಿತ್ತಲು ಕಾಂಗ್ರೆಸ್‌ (Congress) ಪ್ರಯತ್ನಿಸಿದೆ ಎಂದು ದೂರಿದರು.

    ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶನ ನೀಡುವಂತೆ ಕೋರಿ ಆಗಸ್ಟ್‌ನಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 27 ರಂದು ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಪಾಠಕ್ ಅವರು ಸೆಷನ್ಸ್ ನ್ಯಾಯಾಲಯದಲ್ಲಿ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸಿದ್ದರು. ಇದನ್ನೂ ಓದಿ: ಬೆಂಗಳೂರಿನ ಟೆಕ್ಕಿಗಳ Work Culture ಹೊಗಳಿದ ಅಮೆಜಾನ್‌ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ

    ರಾಹುಲ್‌ ಗಾಂಧಿ ಹೇಳಿದ್ದೇನು?
    ಬಡವರ ಶೇಕಡಾವಾರು ಮತ ಪ್ರಮಾಣ ಹೆಚ್ಚಿದ್ದರೂ, ಅವರು ಹೊಂದಿರುವ ಆಸ್ತಿಯ ಶೇಕಡಾವಾರು ಪ್ರಮಾಣವು ತುಂಬಾ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹೆಚ್ಚಿನ ಜನಸಂಖ್ಯೆ ಹೊಂದಿರುವವರು ಹೆಚ್ಚಿನ ಆಸ್ತಿಗೆ ಬೇಡಿಕೆ ಸಲ್ಲಿಸಬಹುದು. ಹಿಂದುಳಿದ ಜಾತಿಗಳು, ಪರಿಶಿಷ್ಟ ಜಾತಿಗಳು (ಎಸ್‌ಸಿಗಳು), ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು), ಅಲ್ಪಸಂಖ್ಯಾತರು ಮತ್ತು ಇತರ ಸಮುದಾಯಗಳ ಜನಸಂಖ್ಯೆ ಮತ್ತು ಸ್ಥಿತಿಯನ್ನು ನಿಖರವಾಗಿ ನಿರ್ಣಯಿಸಲು ಜಾತಿ ಗಣತಿಯನ್ನು ನಡೆಸಬೇಕು ಎಂದು ಹೇಳಿದ್ದರು.

     

  • ಶೇ.6.5 -7 ರಷ್ಟು ಆರ್ಥಿಕ ಬೆಳವಣಿಗೆ – ಬಡವರಿಗೆ 9 ವರ್ಷದಲ್ಲಿ 2.63 ಕೋಟಿ ಮನೆ ನಿರ್ಮಾಣ

    ಶೇ.6.5 -7 ರಷ್ಟು ಆರ್ಥಿಕ ಬೆಳವಣಿಗೆ – ಬಡವರಿಗೆ 9 ವರ್ಷದಲ್ಲಿ 2.63 ಕೋಟಿ ಮನೆ ನಿರ್ಮಾಣ

    – ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ

    ನವದೆಹಲಿ: 2025 ರಲ್ಲಿ ಶೇ.6.5 -7 ರಷ್ಟು ಆರ್ಥಿಕ ಬೆಳವಣಿಗೆಯಾಗಲಿದೆ. PM-AWAS-ಗ್ರಾಮೀಣ ಯೋಜನೆಯ ಅಡಿ ಕಳೆದ ಒಂಬತ್ತು ವರ್ಷಗಳಲ್ಲಿ ಬಡವರಿಗೆ 2.63 ಕೋಟಿ ಮನೆ ನಿರ್ಮಾಣ ಮಾಡಲಾಗಿದೆ. ಪಿಎಂ ಉಜ್ವಲ ಯೋಜನೆಯ ಅಡಿ 10.3 ಕೋಟಿ LPG ಸಂಪರ್ಕ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಬಜೆಟ್‌ ಮುನ್ನಾ ದಿನವಾದ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಆರ್ಥಿಕ ಸಮೀಕ್ಷೆಯನ್ನು (Economic Survey) ಲೋಕಸಭೆಯಲ್ಲಿ ಮಂಡಿಸಿದರು.

    ಭಾರತದ ಆರ್ಥಿಕತೆಯ (Indian Economy) ಬಲವಾಗಿದೆ. ಸ್ಥಿರವಾದ ಹೆಜ್ಜೆಯನ್ನು ಇಡುತ್ತಿದೆ. ಕೋವಿಡ್ ನಂತರ ಆರ್ಥಿಕತೆ ಚೇತರಿಕೆ ಕಂಡಿದ್ದು, ಆರ್ಥಿಕ ಸ್ಥಿರತೆಯನ್ನು ಖಾತರಿಪಡಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್‌ಗೆ ಜೈಲೂಟವೇ ಗತಿ


    ಆರ್ಥಿಕ ಸಮೀಕ್ಷೆ ಪ್ರಮುಖಾಂಶಗಳು
    * 2024-25ರಲ್ಲಿ ಆರ್ಥಿಕತೆ 6.5% ರಿಂದ 7% ರಷ್ಟು ಬೆಳವಣಿಗೆ.
    * ಬಂಡವಾಳ ಮಾರುಕಟ್ಟೆ ಪಾತ್ರ ಮಹತ್ವವಾಗಿದೆ.
    * ತಂತ್ರಜ್ಞಾನ, ನಾವೀನ್ಯತೆ, ಡಿಜಿಟಲೀಕರಣ ಮತ್ತಷ್ಟು ವಿಸ್ತಾರ.

    * ಜಾಗತಿಕ ಮಟ್ಟದಲ್ಲಿ ಆರ್ಥಿಕ, ರಾಜಕೀಯ ಸಂಘರ್ಷಗಳಿದ್ದರೂ ಭಾರತದ ಮಾರುಕಟ್ಟೆ ಸ್ಥಿರ.
    * ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾಗವಹಿಸುವಿಕೆಯಲ್ಲಿ ಹೆಚ್ಚಾದ ಭಾರತದ ಪಾತ್ರ.
    * ರಕ್ಷಣಾ ಉತ್ಪನ್ನಗಳ ರಫ್ತಿನ ಪ್ರಮಾಣದಲ್ಲಿ ಹೆಚ್ಚಳ. ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ ಶಾಕಿಂಗ್‌ ಸುದ್ದಿ – 9 ಗಂಟೆಯಲ್ಲ, 14 ಗಂಟೆ ದುಡಿಯಬೇಕು

    * ಹೆಚ್ಚುತ್ತಿರುವ ಬಡ್ಡಿ ದರ, ಬೆಲೆ ಏರಿಕೆ ನಡುವೆ ಅಭಿವೃದ್ಧಿ ಕಾಣುತ್ತಿರುವ ಅತ್ಯುತ್ತಮ ಮಾರುಕಟ್ಟೆ ಭಾರತ.
    * ಬಿಎಸ್‌ಇ ಸೆನ್ಸೆಕ್ಸ್ ಶೇ.25ರಷ್ಟು ಬೆಳವಣಿಗೆ ಕಂಡಿದ್ದು, 2025ರಲ್ಲೂ ಮುಂದುವರಿಕೆ ವಿಶ್ವಾಸ.
    * ಜು.3ರಂದು 30 ಷೇರುಗಳ ಇಂಡೆಕ್ಸ್ ದಿನದ ವಹಿವಾಟು 80 ಸಾವಿರ ಗಡಿ ದಾಟಿ ಇತಿಹಾಸ ಸೃಷ್ಟಿ.
    * ಸಮತೋಲಿತ, ವೈವಿಧ್ಯಮಯ ಆಹಾರದ ಕಡೆಗೆ ಪರಿವರ್ತನೆ ಅಗತ್ಯ.

     

    * 11.57 ಕೋಟಿ ಶೌಚಾಲಯಗಳು ಮತ್ತು 2.39 ಲಕ್ಷ ಸಮುದಾಯ ಶೌಚಾಲಯ ಸಂಕೀರ್ಣಗಳನ್ನು ಸ್ವಚ್ಛ ಭಾರತ್ ಮಿಷನ್-ಗ್ರಾಮೀನ್ ಅಡಿಯಲ್ಲಿ ನಿರ್ಮಾಣ
    * 11.7 ಕೋಟಿ ಕುಟುಂಬಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ನಲ್ಲಿ ನೀರಿನ ಸಂಪರ್ಕ.
    * 2015 ರಿಂದ ಸೌಭಾಗ್ಯ ಅಡಿಯಲ್ಲಿ 21.4 ಕೋಟಿ ಗ್ರಾಮೀಣ ಕುಟುಂಬಕ್ಕೆ ವಿದ್ಯುತ್‌ ಸಂಪರ್ಕ.

     

  • ಕರ್ನಾಟಕ ತಲಾ ಆದಾಯ: 2.65 ಲಕ್ಷದಿಂದ 3.01 ಲಕ್ಷಕ್ಕೆ ಏರಿಕೆ

    ಕರ್ನಾಟಕ ತಲಾ ಆದಾಯ: 2.65 ಲಕ್ಷದಿಂದ 3.01 ಲಕ್ಷಕ್ಕೆ ಏರಿಕೆ

    ಬೆಂಗಳೂರು: ಕರ್ನಾಟಕ ರಾಜ್ಯದ ತಲಾ ಆದಾಯವು (Per Capita Income) 3,01,673 ರೂಪಾಯಿಗಳಿದೆ ಎಂದು ಆರ್ಥಿಕ ಸಮೀಕ್ಷೆ (Economic Survey) ತಿಳಿಸಿದೆ.

    ಕರ್ನಾಟಕ ರಾಜ್ಯದ ತಲಾ ಆದಾಯ (ರಾಜ್ಯದ ಒಟ್ಟು ಆದಾಯವನ್ನು ಜನಸಂಖ್ಯೆಯಿಂದ ಭಾಗಿಸಿದಾಗ ಸಿಗುವ ಮೊತ್ತ) 2021-22ನೇ ಸಾಲಿನಲ್ಲಿ ಪ್ರಸಕ್ತ ಬೆಲೆಗಳಲ್ಲಿ ರೂ.2,65,623 ಇಂದ ಶೇ.13.6ರ ಬೆಳವಣಿಗೆಯೊಂದಿಗೆ ರೂ.3,01,673 ಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ. ಇದೇ ಅವಧಿಯಲ್ಲಿ ಸ್ಥಿರ ಬೆಲೆಗಳಲ್ಲಿ ರೂ.1,64,471 ನಿಂದ ಶೇ.7.2ರ ಬೆಳವಣಿಗೆಯೊಂದಿಗೆ ರೂ.1,76,383 ಕ್ಕೆ ಏರಿಕೆ ಆಗುವ ನಿರೀಕ್ಷೆಯಿದೆ ಎಂದು 2022-23ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ.

    ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ?
    ಕರ್ನಾಟಕ ರಾಜ್ಯ ಆಂತರಿಕ ಉತ್ಪನ್ನವು (GSDP) 2021- 22ನೇ ಸಾಲಿನಲ್ಲಿ ಪ್ರಸಕ್ತ ಬೆಲೆಗಳಲ್ಲಿ ರೂ. 19.62 ಲಕ್ಷ ಕೋಟಿಗಳಿದ್ದು, 2022- 23ನೇ ಸಾಲಿನಲ್ಲಿ ಶೇ.14.2 ರ ಬೆಳವಣಿಗೆಯೊಂದಿಗೆ ರೂ.22.41 ಲಕ್ಷ ಕೋಟಿ ಗಳಷ್ಟು ಆಗುವ ನಿರೀಕ್ಷೆ ಇದೆ. ಇದೇ ಅವಧಿಯಲ್ಲಿ ರಾಜ್ಯ ಆಂತರಿಕ ಉತ್ಪನ್ನವು ಸ್ಥಿರ ಬೆಲೆಗಳಲ್ಲಿ ರೂ. 13.26 ಲಕ್ಷ ಕೋಟಿಗಳಿದ್ದು, ಶೇ.7.9ರ ಬೆಳವಣಿಗೆಯೊಂದಿಗೆ ರೂ.13.26 ಲಕ್ಷ ಕೋಟಿ ಗಳಷ್ಟು ಆಗುವ ನಿರೀಕ್ಷೆ ಇದೆ. ಇದನ್ನೂ ಓದಿ: ನಮ್ಮದು ವಿವೇಕಾನಂದರ ಕೇಸರಿ, ಬಿಜೆಪಿಯವ್ರದ್ದು ಗೋಡ್ಸೆ ಕೇಸರಿ: ಸಿದ್ದರಾಮಯ್ಯ

    ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ದರ ಸ್ಥಿರ ಬೆಲೆಗಳಲ್ಲಿ ಶೇ.7.9ರಷ್ಟು ಹಾಗೂ ರಾಷ್ಟ್ರೀಯ ಅಂತರಿಕ ಉತ್ಪನ್ನದ ಬೆಳವಣಿಗೆ ದರ ಶೇ.7 ರಷ್ಟು ಆಗುವ ನಿರೀಕ್ಷೆಯಿದೆ. 2021-22 ನೇ ಸಾಲಿನ ರಾಷ್ಟ್ರೀಯ ಆದಾಯಕ್ಕೆ ಹೋಲಿಸಿದಾಗ ರಾಜ್ಯ ಆದಾಯದ ಕೊಡುಗೆಯು ಶೇ.8.3 ರಷ್ಟಿದ್ದು, ಇದು 2022-23ರ ರಲ್ಲಿ ಶೇ.8.2 ರಷ್ಟಿರುತ್ತದೆ.

    2021-22ನೇ ಸಾಲಿನ ಕೃಷಿ ವಲಯದ ಬೆಳವಣಿಗೆ ದರ ಶೇ.8.7 ಕ್ಕೆ ಹೋಲಿಸಿದರೆ 2022-23ನೇ ಸಾಲಿಗೆ ಶೇ.5.5 ರಷ್ಟು ಬೆಳವಣಿಗೆ ಯಾಗಬಹುದೆಂದು ಅಂದಾಜಿಸಲಾಗಿದೆ. ಕೋವಿಡ್-19ರ ಪರಿಣಾಮಗಳಿಂದಾಗಿ, ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ಕಾರ್ಮಿಕರು ವಲಸೆ ಹೊಗಿರುವುದು ಮತ್ತು ಕೃಷಿ ಪದಾರ್ಥಗಳ ಮೌಲ್ಯವರ್ಧನೆಯ ಸರಪಳಿಯ ಬಲವರ್ಧನೆಯಿಂದಾಗಿ ಕೃಷಿ ವಲಯದ ಬೆಳವಣಿಗೆ ದರ 2020-21ನೇ ಸಾಲಿನಲ್ಲಿ ಶೇ.15.2 ರಷ್ಟಿತ್ತು. ಮೀನುಗಾರಿಕೆ ವಲಯದ ಶೇ.16.6 ಹಾಗೂ ಜಾನುವಾರು ವಲಯದ ಶೇ.10ರ ಬೆಳವಣಿಗೆಯು ಪ್ರಸಕ್ತ ವರ್ಷದ ಕೃಷಿ ವಲಯದ ಬೆಳವಣಿಗೆ ದರ ಏರಿಕೆಯಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Economic Survey 2022: ಹೊಸ ಹಣಕಾಸು ವರ್ಷಕ್ಕೆ ಶೇ.8-8.5 ಬೆಳವಣಿಗೆ ನಿರೀಕ್ಷೆ

    Economic Survey 2022: ಹೊಸ ಹಣಕಾಸು ವರ್ಷಕ್ಕೆ ಶೇ.8-8.5 ಬೆಳವಣಿಗೆ ನಿರೀಕ್ಷೆ

    ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ ಸಂಸತ್‌ನಲ್ಲಿ ಮಂಗಳವಾರ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆರ್ಥಿಕ ಸಮೀಕ್ಷಾ ವರದಿಯನ್ನು ಇಂದು ಮಂಡಿಸಿದರು.

    ಆರ್ಥಿಕ ಸಮೀಕ್ಷೆಯಲ್ಲೇನಿದೆ?
    * 2022-23ರ ಆರ್ಥಿಕ ವರ್ಷದಲ್ಲಿ ದೇಶವು ಶೇ.8ರಿಂದ ಶೇ.8.5ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬಹುದು. ಇದನ್ನೂ ಓದಿ: ಪಣಜಿ ಕ್ಷೇತ್ರದಿಂದ ಅಭ್ಯರ್ಥಿಯನ್ನು ದಿಢೀರ್ ಹಿಂಪಡೆದ ಶಿವಸೇನೆ

    * ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.9.2ರಷ್ಟು ಆರ್ಥಿಕ ಬೆಳವಣಿಗೆ ಅಂದಾಜಿಸಲಾಗಿದೆ. ಆದರೆ ಮುಂದಿನ ವರ್ಷದ ಆರ್ಥಿಕ ಬೆಳವಣಿಗೆ ಪ್ರಮಾಣ ಇದಕ್ಕಿಂತ ಕಡಿಮೆಯಾಗಲಿದೆ.

    * ʼಫ್ರೇಜಿಲ್‌ ಫೈವ್‌ʼ ರಾಷ್ಟ್ರಗಳಿಂದ ಭಾರತವು 4ನೇ ಅತಿದೊಡ್ಡ ವಿದೇಶಿ ವಿನಿಮಯ ಮೀಸಲು ಸ್ಥಾನಕ್ಕೆ ಬಂದಿದೆ. ಇದು ತಂತ್ರಗಾರಿಕೆಗೆ ನೀತಿ ಅವಕಾಶವನ್ನು ನೀಡುತ್ತದೆ.

    * 2070ರ ವೇಳೆಗೆ ಶೂನ್ಯ ಇಂಗಾಲದ ಹೊರಸೂಸುವಿಕೆ ಗುರಿಯನ್ನು ಸಾಧಿಸಲು ದೇಶಕ್ಕೆ ಹವಾಮಾನ ಹಣಕಾಸು ನಿರ್ಣಯವಾಗಿ ಉಳಿಯುತ್ತದೆ.

    * ಕೃಷಿ ಮತ್ತು ಕೈಗಾರಿಕಾ ಉತ್ಪಾದನೆಗಳಲ್ಲಿನ ಬೆಳವಣಿಗೆಗಳಿಂದಾಗಿ ದೇಶದ ಆರ್ಥಿಕತೆಯು ಸದ್ಯ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಲಾವಣ್ಯ ಆತ್ಮಹತ್ಯೆ ಕೇಸ್ ತನಿಖೆ ಸಿಬಿಐ ಹೆಗಲಿಗೆ: ಹೈಕೋರ್ಟ್ ಆದೇಶ

    * ಸಣ್ಣ ಹಿಡುವಳಿ ಕೃಷಿ ತಂತ್ರಜ್ಞಾನಗಳ ಮೂಲಕ ಸಣ್ಣ, ಅತಿ ಸಣ್ಣ ರೈತರ ಉತ್ಪಾದಕತೆ ಸುಧಾರಿಸಲು ಸಮೀಕ್ಷೆ ಕರೆ ನೀಡಿದೆ.

    * ಎಣ್ಣೆ ಕಾಳುಗಳು, ದ್ವಿದಳ ಧಾನ್ಯಗಳು ಮತ್ತು ತೋಟಗಾರಿಕೆ ಕಡೆಗೆ ಬೆಳೆ ವೈವಿಧ್ಯೀಕರಣಕ್ಕೆ ಆದ್ಯತೆ.

    * ಆರ್ಥಿಕತೆಯ ಪುನರುಜ್ಜೀವನಕ್ಕೆ ಬೆಂಬಲ ಒದಗಿಸಲು ಹಣಕಾಸು ವ್ಯವಸ್ಥೆಯೊಂದಿಗೆ ಆಯ್ಕೆ ಮಾಡಲು ಖಾಸಗಿ ವಲಯದ ಹೂಡಿಕೆ.

  • 2021-22ರಲ್ಲಿ ‘ವಿ’ ಶೇಪ್‌ ಪ್ರಗತಿ – ಶೇ.11 ರಷ್ಟು ಜಿಡಿಪಿ ಬೆಳವಣಿಗೆ

    2021-22ರಲ್ಲಿ ‘ವಿ’ ಶೇಪ್‌ ಪ್ರಗತಿ – ಶೇ.11 ರಷ್ಟು ಜಿಡಿಪಿ ಬೆಳವಣಿಗೆ

    – ಈ  ವರ್ಷಮೈನಸ್‌ 7.7% ಜಿಡಿಪಿ

    ನವದೆಹಲಿ: 2021-22ರ ಆರ್ಥಿಕ ವರ್ಷದಲ್ಲಿ ʼವಿʼ ಶೇಪ್ ಪ್ರಗತಿ ಸಾಧಿಸಲಿದ್ದು, ಅಂದಾಜು 11%ರಷ್ಟು ಜಿಡಿಪಿ ಬೆಳವಣಿಗೆ ದರ ನಮೂದಾಗಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

    ಪ್ರಸಕ್ತ ಆರ್ಥಿಕ ವರ್ಷದ ಬೆಳವಣಿಗೆ ದರ ಮೈನಸ್ 7.7%ಕ್ಕೆ ಇಳಿಕೆಯಾಗಲಿದೆ. ಲಾಕ್‍ಡೌನ್‍ನಿಂದ ಲಕ್ಷ ಲಕ್ಷ ಪ್ರಜೆಗಳ ಪ್ರಾಣ ಉಳಿದಿದೆ. ಬಿಗಿಯಾದ ಲಾಕ್‌ಡೌನ್‌ನಿಂದಾಗಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದೆ.

    ಕೋವಿಡ್ ಸಂದರ್ಭದಲ್ಲಿ ಕೃಷಿ ವಲಯ ಮಾತ್ರ ಬೆಳವಣಿಗೆ ಸಾಧಿಸಿದೆ. ನೂತನ ಕೃಷಿ ಕಾಯ್ದೆಗಳಿಂದ ರೈತರಿಗೆ ನೆರವಾಗಲಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

    ಸಂಸತ್‍ನ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ದೇಶದ ಚರಿತ್ರೆಯಲ್ಲೇ ಮೊದಲ ಬಾರಿಗೆ ಕಳೆದ ವರ್ಷ ಆರ್ಥಿಕ ಪ್ಯಾಕೇಜ್‍ಗಳ ರೂಪದಲ್ಲಿ ವಿತ್ತ ಸಚಿವರು ನಾಲ್ಕೈದು ಮಿನಿ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಮಂಡಿಸುವ ಬಜೆಟ್ ಆ ಮಿನಿ ಬಜೆಟ್‍ಗಳ ಒಂದು ಭಾಗವಾಗಿ ಇರಲಿದೆ ಎಂದು ಹೇಳಿದರು.

    ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಿದ ನಂತರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸಿದರು. ಆರ್ಥಿಕ ಸಮೀಕ್ಷೆ ರೂಪಿಸಿದ ಮುಖ್ಯ ಆರ್ಥಿಕ ಸಲಹೆಗಾರ ಕೆವಿ ಸುಬ್ರಹ್ಮಣ್ಯಂ ಮಾಧ್ಯಮಗಳ ಜೊತೆ ಮಾತನಾಡಿ. ಕೋವಿಡ್ ಕಾರಣದಿಂದ ಹದಗೆಟ್ಟ ದೇಶದ ಆರ್ಥಿಕತೆ ಮತ್ತೆ ಚೇತರಿಸಿಕೊಳ್ಳಲಿದೆ. ದೇಶದ ಜಿಡಿಪಿ ಮತ್ತೆ ಎರಡಂಕಿಗೆ ಜಿಗಿಯಲಿದೆ ಎಂದು ಭವಿಷ್ಯ ನುಡಿದರು.

    ಜಿಡಿಪಿ ದಿಢೀರ್‌ ಕುಸಿದು ದಿಢೀರ್‌ ಮೇಲಕ್ಕೆ ಏರುವುದನ್ನು ವಿ ಶೇಪ್‌ ಪ್ರಗತಿ ಎಂದು ಕರೆಯಲಾಗುತ್ತದೆ. ಬೆಳವಣಿಗೆಯ ಗ್ರಾಫ್‌ ಲೆಕ್ಕಾಚಾರಗಳು ನೋಡುವಾಗ ಇಂಗ್ಲೀಷಿನ ‘V’ ಅಕ್ಷರದಂತೆ ಕಾಣುತ್ತದೆ. ಈ ಕಾರಣಕ್ಕೆ ಈ ಪ್ರಗತಿಯನ್ನು ಅರ್ಥ ಶಾಸ್ತ್ರದಲ್ಲಿ ವಿ ಶೇಪ್‌ಗೆ ಹೋಲಿಸಲಾಗುತ್ತದೆ.

  • ಆರ್ಥಿಕ ಸಮೀಕ್ಷೆ 2018-19 – ಜಿಡಿಪಿ ಶೇ.7ರ ನಿರೀಕ್ಷೆ

    ಆರ್ಥಿಕ ಸಮೀಕ್ಷೆ 2018-19 – ಜಿಡಿಪಿ ಶೇ.7ರ ನಿರೀಕ್ಷೆ

    ನವದೆಹಲಿ: ವಾರ್ಷಿಕ ಶೇ.8ರ ದರದಲ್ಲಿ ಜಿಡಿಪಿ ಬೆಳವಣಿಗೆಯಾದರೆ 2025ರ ವೇಳೆಗೆ ಭಾರತ 5 ಲಕ್ಷ ಕೋಟಿ ಡಾಲರ್ ಅರ್ಥವ್ಯವಸ್ಥೆಯ ದೇಶವಾಗಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

    ಬಜೆಟ್ ಮಂಡನೆಯ ಮುನ್ನ ದಿನವಾದ ಗುರುವಾರ ಲೋಕಸಭೆಯಲ್ಲಿ ಪ್ರತಿ ಬಾರಿಯಂತೆ ಆರ್ಥಿಕ ಸಮೀಕ್ಷೆ ಮಂಡನೆಯಾಗಿದೆ. ಆರ್ಥಿಕ ಮುನ್ನೋಟದ ಸಮಗ್ರ ವಿವರ, ಪ್ರಮುಖ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ, ದೇಶದ ಬೆಳವಣಿಗೆಯನ್ನು ವಿವರಿಸುವ ಆರ್ಥಿಕ ಸಮೀಕ್ಷೆಯನ್ನು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ನೇತೃತ್ವದ ತಂಡ ತಯಾರಿಸಿದ್ದು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.

    ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು
    * ವಾರ್ಷಿಕವಾಗಿ ಶೇ.8 ಜಿಡಿಪಿ ಬೆಳವಣಿಗೆ ಸಾಧಿಸಿದರೆ 2025ರ ಹಣಕಾಸು ವರ್ಷದಲ್ಲಿ 5 ಲಕ್ಷ ಕೋಟಿ ಡಾಲರ್ ಅರ್ಥವ್ಯವಸ್ಥೆಯ ದೇಶವಾಗಿ ಭಾರತ ಹೊರಹೊಮ್ಮಬಹುದು.
    * 2019-20ರಲ್ಲಿ ಜಿಡಿಪಿ ಶೇ.7ರಷ್ಟು ಇರುವ ನಿರೀಕ್ಷೆ
    * 2018-19 ಸಾಲಿನಲ್ಲಿ 283.7 ಮಿಲಿಯನ್ ಟನ್ ಆಹಾರ ಉತ್ಪಾದನೆ
    * ಶೇ.5.8 ರಷ್ಟು ವಿತ್ತೀಯ ಕೊರತೆ
    * ಸ್ವಚ್ಛ ಭಾರತ ಅಭಿಯಾನ ಆರಂಭದ ಬಳಿಕ ದೇಶದಲ್ಲಿ 9.5 ಕೋಟಿಗೂ ಅಧಿಕ ಶೌಚಾಲಯಗಳ ನಿರ್ಮಾಣ, 5.5 ಲಕ್ಷಕ್ಕೂ ಅಧಿಕ ಗ್ರಾಮಗಳು ಬಯಲು ಶೌಚಾಲಯದಿಂದ ಮುಕ್ತವಾಗಿದೆ.

    * ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಅಭಿವೃದ್ಧಿ ದರ ಈ ರೀತಿಯಾಗಿದೆ. 2016-17ರಲ್ಲಿ ಶೇ.6.3, 2017-18ರಲ್ಲಿ ಶೇ.5.0 ಮತ್ತು 2018-19ರಲ್ಲಿ ಶೇ.2.9
    * 2017-18 ಸಾಲಿನಲ್ಲಿ ರಫ್ತು ಪ್ರಮಾಣ ಹೆಚ್ಚಾಗಿದ್ದು, ಆಮದು ಕಡಿಮೆಯಾಗಿದೆ. 2017-18ರಲ್ಲಿ ಶೇ.17.6ರಷ್ಟು ಆಮದು, ಶೇ.4.7ರಷ್ಟು ರಫ್ತು ಇತ್ತು. 2018-19ರಲ್ಲಿ ಆಮದು ಶೇ.15.4 ಮತ್ತು ರಫ್ತು ಶೇ.12.5ರಷ್ಟಿದೆ.
    * 2017-18 ಸಾಲಿಗಿಂತ 2018-19ರಲ್ಲಿ ವಿದೇಶಿ ಹಣ ಸಂಗ್ರಹಣ ಕಡಿಮೆಯಾಗಿದೆ. 424.5 ಬಿಲಿಯನ್ ಅಮೆರಿಕನ್ ಡಾಲರ್ ನಿಂದ 412.9 ಬಿಲಿಯನ್ ಅಮೆರಿಕನ್ ಡಾಲರ್ ಗೆ ಇಳಿಕೆಯಾಗಿದೆ.

    * ಕೇಂದ್ರದಲ್ಲಿ ಬಹುಮತ ಪಡೆದ ಸರ್ಕಾರ ರಚನೆಯಾಗಿದ್ದು, ಭವಿಷ್ಯದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
    * 2019-20ರ ಹಣಕಾಸಿನ ವರ್ಷದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಆರ್ಥಿಕ ಸಮೀಕ್ಷೆ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ.

    * ನೇರ ತೆರಿಗೆ ಸಂಗ್ರಹಣೆಯಲ್ಲಿ ಶೇ.13.4ರಷ್ಟು ಹೆಚ್ಚಳವಾಗೋದರ ಜೊತೆಗೆ ಕಾರ್ಪೋರೇಟ್ ಟ್ಯಾಕ್ಸ್ ನಲ್ಲಿಯೂ ಏರಿಕೆ ಕಂಡಿದೆ. ಇನ್ನು ಪರೋಕ್ಷ ತೆರಿಗೆ ಸಂಗ್ರಹ ಶೇ.16ರಷ್ಟು ಇಳಿಕೆಯಾಗಿದೆ. ಜಿಎಸ್‍ಟಿ ಆದಾಯ ಕಡಿಮೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

     

    * ಆರ್ಥಿಕ ವರ್ಷದಲ್ಲಿ 97 ಲಕ್ಷ ಕಾರ್ಮಿಕರ ಸಂಖ್ಯೆ ಹೆಚ್ಚಳವಾಗಲಿದೆ. 2030ರೊಳಗೆ ಕಾರ್ಮಿಕ ವಲಯದಲ್ಲಿ ಪ್ರತಿ ವರ್ಷ 42 ಲಕ್ಷ ಶ್ರಮಿಕರ ಸಂಖ್ಯೆ ಏರಿಕೆಯಾಗಲಿದೆ.

    * ಆರ್ಥಿಕ ಸಮೀಕ್ಷೆಯು ಜಲಕ್ಷಾಮದ ಮುನ್ಸೂಚನೆಯನ್ನೂ ಗಂಭೀರವಾಗಿ ಪರಿಗಣಿಸಿದೆ. 2050ರಷ್ಟರಲ್ಲಿ ಭಾರತದಲ್ಲಿ ಜಲ ಸಂಗ್ರಹಣೆಯೂ ಕಷ್ಟಕರವಾಗಲಿದೆ ಎಂದು ಸರ್ವೆಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ. ಹೀಗಾಗಿ ಈ ವರ್ಷದಿಂದಲೇ ಹನಿ ನೀರಾವರಿ ಪದ್ಧತಿಯನ್ನು ಜಾರಿಗೊಳಿಸಿ ಕೃಷಿ ಉತ್ಪಾದನೆಯತ್ತ ಹೆಚ್ಚು ಮಾಡಲು ಗಮನ ಹರಿಸಬೇಕಿದೆ.

  • ನೋಟ್ ನಿಷೇಧ, ಜಿಎಸ್‍ಟಿಯಿಂದ ತೆರಿಗೆದಾರರ ಸಂಖ್ಯೆ ಹೆಚ್ಚಳ: ಆರ್ಥಿಕ ಸಮೀಕ್ಷೆ

    ನೋಟ್ ನಿಷೇಧ, ಜಿಎಸ್‍ಟಿಯಿಂದ ತೆರಿಗೆದಾರರ ಸಂಖ್ಯೆ ಹೆಚ್ಚಳ: ಆರ್ಥಿಕ ಸಮೀಕ್ಷೆ

    ನವದೆಹಲಿ: ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ನೋಟ್ ನಿಷೇಧ ಮತ್ತು ಜಿಎಸ್‍ಟಿ ತೆರಿಗೆ ಜಾರಿಯಿಂದ ಪರೋಕ್ಷ ತೆರಿಗೆದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

    ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. 500 ಮತ್ತು 1 ಸಾವಿರ ರೂ. ನೋಟುಗಳ ನಿಷೇಧ ಮತ್ತು ಜಿಎಸ್‍ಟಿ ಜಾರಿ ಬಳಿಕ 18 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದು, ಪರೋಕ್ಷ ತೆರಿಗೆದಾರರ ಸಂಖ್ಯೆ ಶೇ 50ರಷ್ಟು ಹೆಚ್ಚಿದೆ ಎಂದು ತಿಳಿಸಿದರು.

    ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) 6.75%ರಿಂದ 7ರಿಂದ 7.5% ಏರಿಕೆಯಾಗಲಿದ್ದು, ಕಳೆದ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆ 4% ಅಂಕಗಳಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣ ಮುಂದಿನ ವರ್ಷಗಳಲ್ಲಿ ಜಿಡಿಪಿ ಮೇಲೆ ಪರಿಣಾಮ ಬೀರಬಹುದು.

    ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳು ನಾಡು ಮತ್ತು ತೆಲಂಗಾಣ ರಾಜ್ಯಗಳು ಭಾರತದ ರಫ್ತಿನಲ್ಲಿ 70% ಕೊಡುಗೆ ನೀಡಿವೆ. ಕೃಷಿಕ್ಷೇತ್ರ ಈ ವರ್ಷ ಶೇ 2.1ರ ಬೆಳವಣಿಗೆ ಸಾಧಿಸಿದ್ದು ಖಾಸಗಿ ಬಂಡವಾಳ ಹೂಡಿಕೆ ಏರಿಕೆಯಾಗಬಹುದು. ತಯಾರಿಕಾ ವಲಯ 8% ರ ಬೆಳವಣಿಗೆಯಾಗಲಿದೆ.

  • ಜನ್‍ಧನ್ ಎಫೆಕ್ಟ್: ಗ್ರಾಮೀಣ ಭಾಗದಲ್ಲಿ ಮದ್ಯ, ತಂಬಾಕು ಖರೀದಿ ಇಳಿಕೆ

    ಜನ್‍ಧನ್ ಎಫೆಕ್ಟ್: ಗ್ರಾಮೀಣ ಭಾಗದಲ್ಲಿ ಮದ್ಯ, ತಂಬಾಕು ಖರೀದಿ ಇಳಿಕೆ

    ನವದೆಹಲಿ: ಜನ್‍ಧನ ಖಾತೆ ಆರಂಭದಿಂದ ಗ್ರಾಮೀಣ ಭಾಗದ ಜನರ ಆದಾಯದ ಉಳಿತಾಯ ಪ್ರಮಾಣ ಹೆಚ್ಚಳವಾಗಿದ್ದು. ಅದರಲ್ಲೂ ಮದ್ಯ, ತಂಬಾಕು ಉತ್ಪನ್ನ ಕೊಳ್ಳುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಆರ್ಥಿಕ ಸಂಶೋಧನಾ ವಿಭಾಗ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದೆ. ಗ್ರಾಮೀಣ ಭಾಗದಲ್ಲಿ ಪ್ರಧಾನ ಮಂತ್ರಿ ಜನ್‍ಧನ್ ಯೋಜನೆ(ಪಿಎಂಜೆಡಿವೈ)ಯ ಮೂಲಕ ಬ್ಯಾಂಕ್‍ನಲ್ಲಿ ಖಾತೆಯನ್ನು ಆರಂಭಸಿದ ನಂತರ ಜನರ ಉಳಿತಾಯ ಪ್ರಮಾಣ ಹೆಚ್ಚಳವಾಗಿದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕ ಹಣಕಾಸು ಮತ್ತು ನೀತಿ ರಾಷ್ಟ್ರೀಯ ಸಂಸ್ಥೆಯ ಪ್ರಾಧ್ಯಾಪಕರಾದ ಎನ್.ಆರ್.ಭಾನುಮೂರ್ತಿ ವ್ಯಕ್ತಪಡಿಸಿದ್ದಾರೆ.

    ಸಮೀಕ್ಷೆಯಲ್ಲಿ ತಿಳಿದು ಬಂದಿರುವ ಮತ್ತೊಂದು ಪ್ರಮುಖ ಅಂಶವೆಂದರೆ ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಪ್ರಮಾಣವು ಇಳಿಕೆಯಾಗಿದೆ. ಪಿಎಂಜೆಡಿವೈ ಯೋಜನೆಯಿಂದ ದೇಶಾದ್ಯಂತ ತೆರೆಯಲಾಗಿರುವ ಒಟ್ಟು ಖಾತೆಗಳಲ್ಲಿ ಶೇ.50 ರಷ್ಟು ಖಾತೆಗಳು ಗ್ರಾಮೀಣ ಭಾಗದಲ್ಲಿ ಆರಂಭವಾಗಿದ್ದು, ಸ್ಥಳೀಯ ಮಟ್ಟದಲ್ಲಿ ಎಲ್ಲರಿಗೂ ಬ್ಯಾಂಕ್‍ಗಳ ಉತ್ತಮ ಸೌಲಭ್ಯ ಲಭ್ಯವಾಗುತ್ತಿದೆ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಕಳೆದ ನವೆಂಬರ್ ತಿಂಗಳಿಗೆ ಕೊನೆಯ ವೇಳೆ ಸುಮಾರು 30 ಕೋಟಿಗೂ ಹೆಚ್ಚು ಜನ್‍ಧನ್ ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ ಪ್ರಮುಖವಾಗಿ ಕೇಂದ್ರ ಸರ್ಕಾರ ನೋಟ್ ಬ್ಯಾನ್ ತೀರ್ಮಾನವನ್ನು ಪ್ರಕಟಿಸಿದ ನಂತರ ಅತೀ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ ಎಂಬುವುದು ಗಮನಿಸಬೇಕಾದ ಅಂಶವಾಗಿದೆ.

    ದೇಶಾದ್ಯಂತ ತೆರೆಯಲಾಗಿರುವ ಒಟ್ಟು ಖಾತೆಗಳಲ್ಲಿ ಶೇ.75 ರಷ್ಟು ಪ್ರಮಾಣ ಆಂದರೆ 23 ಕೋಟಿ ಬ್ಯಾಂಕ್ ಖಾತೆಗಳನ್ನು ಕೇವಲ 10 ರಾಜ್ಯಗಳಲ್ಲಿ ಹಂಚಿಕೊಂಡಿವೆ. ಇದರಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು ಸುಮಾರು 4.7 ಕೋಟಿ ಖಾತೆಗಳನ್ನು ಆರಂಭಿಸಲಾಗಿದೆ. ಇನ್ನುಳಿದಂತೆ ಬಿಹಾರ ರಾಜ್ಯದಲ್ಲಿ 3.2 ಕೋಟಿ ಖಾತೆಗಳು, ಪಶ್ಚಿಮ ಬಂಗಾಳದಲ್ಲಿ 2.9 ಕೋಟಿ ಖಾತೆಗಳನ್ನು ತೆರೆಯಲಾಗಿದೆ.

    ಜನ್‍ಧನ್ ಯೋಜನೆ ಜಾರಿಗೆ ಬಂದ ನಂತರ ಕರ್ನಾಟಕದಲ್ಲಿ ತೆರೆಯಲಾದ ಒಟ್ಟು ಖಾತೆಗಳಲ್ಲಿ ಶೇ.61 ರಷ್ಟು ಖಾತೆಗಳು ಪಿಎಂಜೆಡಿವೈ ಯೋಜನೆಯ ಅಡಿಯಲ್ಲಿ ಆರಂಭಿಸಿರುವ ಖಾತೆಗಳಾಗಿದ್ದು, ದೇಶಾದ್ಯಂತ ಆರಂಭಿಸಲಾದ ಒಟ್ಟು ಖಾತೆಗಳ ಪ್ರಮಾಣದಲ್ಲಿ ಕರ್ನಾಟಕವು ಆರನೇ ಸ್ಥಾನವನ್ನು ಪಡೆದಿದೆ.

    ಜನ್‍ಧನ್ ಖಾತೆಯ ಮೂಲಕ ಆರಂಭಿಸಲಾಗಿರುವ ಬ್ಯಾಂಕ್ ಖಾತೆಗಳ ಪರಿಣಾಮವಾಗಿ ಗ್ರಾಮೀಣ ಭಾಗದ ಜನರ ಉಳಿತಾಯ ಪ್ರಮಾಣ ಹೆಚ್ಚಳವಾಗಿದ್ದು, ಜನರು ಮಾದಕ ದ್ರವ್ಯಗಳನ್ನು ಕೊಳ್ಳಲು ಖರ್ಚು ಮಾಡುವ ಪ್ರಮಾಣವು ಕಡಿಮೆಯಾಗಿದೆ ಎಂದು ಸಂಶೋಧನೆಯ ಕೈಗೊಂಡಿರುವ ಎಸ್‍ಬಿಐ ಆರ್ಥಿಕ ವಿಭಾಗದ ಮುಖ್ಯಸ್ಥ ಸೌಮ್ಯ ಕಾಂತಿ ಘೋಷ್ ತಿಳಿಸಿದ್ದಾರೆ.

    ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ್ ರಾಜ್ಯಗಳಲ್ಲಿ ಮನೆಯಲ್ಲಿ ಆರೋಗ್ಯಕ್ಕೆ ಸಂಬಂಧಸಿದ ವೈದ್ಯಕೀಯ ವೆಚ್ಚಗಳು ಅಧಿಕವಾಗಿದೆ ಎಂಬ ಅಂಶವು ಬೆಳಕಿಗೆ ಬಂದಿದೆ. ಅಲ್ಲದೇ ನೋಟು ನಿಷೇಧದ ನಂತರ ಜನರು ಖಚ್ಚು ಮಾಡುವ ವಿಧಾನದಲ್ಲೂ ಸುಧಾರಣೆಗಳಾಗಿವೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರೊ. ನಾಬ್ ಸೇನ್ ತಿಳಿಸಿದರು.

    ಸಂಶೋಧನೆಯ ಮುಂದಿನ ಭಾಗವಾಗಿ ಜನ್‍ಧನ್ ಖಾತೆಯಲ್ಲಿ ಉಳಿತಾಯವಾದ ಹಣದ ಚಲಾವಣೆಯ ಪ್ರಮಾಣದ ಕುರಿತು ಹೆಚ್ಚಿನ ಅಧ್ಯಯನಗಳನ್ನು ನಡೆಸಲಾಗುವುದು. ಅಲ್ಲದೇ ಮಾರುಕಟ್ಟೆಯ ಹಲವು ಉತ್ಪನ್ನಗಳ ಮೌಲ್ಯಗಳ ಮೇಲು ಇದರ ಪ್ರಭಾವ ಉಂಟಾಗಿದೆ ಎಂದು ಇನ್ಫೋಸಿಸ್ ನ ಅಂತರಾಷ್ಟ್ರೀಯ ಆರ್ಥಿಕ ಸಂಬಂಧಗಳ ಪ್ರ್ರಾಧ್ಯಾಪಕರಾದ ಅಶೋಕ್ ಗುಲಾಟಿ ತಿಳಿಸಿದರು.