Tag: ಆರ್ಥಿಕ ಬಿಕ್ಕಟ್ಟು

  • ಮಿತ್ರ ರಾಷ್ಟ್ರಗಳು ನಮ್ಮನ್ನು ಭಿಕ್ಷುಕನಂತೆ ನೋಡುತ್ತಿವೆ – ಪಾಕ್ ಪ್ರಧಾನಿ

    ಮಿತ್ರ ರಾಷ್ಟ್ರಗಳು ನಮ್ಮನ್ನು ಭಿಕ್ಷುಕನಂತೆ ನೋಡುತ್ತಿವೆ – ಪಾಕ್ ಪ್ರಧಾನಿ

    ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ (Economic Crisis) ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ವಿಶ್ವದ ಕಣ್ಣಲ್ಲಿ ಪಾಕ್ (Pakistan) ಸ್ಥಿತಿ ಏನು ಎನ್ನುವುದನ್ನು ಪ್ರಧಾನಿ ಷೆಹಬಾಜ್ (Shehbaz Sharif) ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.

    ಉಜ್ಬೇಕಿಸ್ತಾನ ಶಾಂಘೈ ಸಹಕಾರ ಸಂಘಟನೆ ದೇಶಗಳ (SCO) ಶೃಂಗಸಭೆಯಲ್ಲಿಂದು ಮಾತನಾಡಿದ ಶೆಹಬಾಜ್ ಷರೀಫ್, ಮಿತ್ರದೇಶಗಳು ಪಾಕಿಸ್ತಾನವನ್ನು ಭಿಕ್ಷುಕನಂತೆ (Begging) ನೋಡುತ್ತಿವೆ. ಯಾವುದೇ ದೇಶದ ಮುಖ್ಯಸ್ಥರಿಗೆ ಕರೆ ಮಾಡಿದ್ರೂ, ಇವರೇನೋ ಕೇಳೋಕೆ ಕರೆ ಮಾಡಿದ್ದಾರೆ ಅಂತಾನೆ ಭಾವಿಸುತ್ತಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Breaking: ಓಟಿಟಿಯಿಂದ ಬಿಗ್ ಬಾಸ್ 9ಕ್ಕೆ ಬರಲಿದ್ದಾರೆ ಈ ನಾಲ್ಕು ಜನ ಸ್ಪರ್ಧಿಗಳು

    ದೇಶದಲ್ಲಿ ಭಾರಿ ಪ್ರವಾಹದಿಂದ (Flood) ಉಂಟಾದ ವಿನಾಶದ ಬಗ್ಗೆ ಮಾತನಾಡುತ್ತಾ ಪಿಎಂ ಶೆಹಬಾಜ್ ಷರೀಫ್, ಪ್ರವಾಹಕ್ಕೂ ಮುನ್ನ ನಮ್ಮ ಆರ್ಥಿಕತೆ ಹೆಣಗಾಡುತ್ತಿತ್ತು. ಈಗ ಪ್ರವಾಹ ಬಂದು ಇನ್ನಷ್ಟು ಹದಗೆಡಿಸಿತು. ನಾನು ಏಪ್ರಿಲ್‌ನಲ್ಲಿ ಅಧಿಕಾರ ವಹಿಸಿಕೊಂಡಾಗ ಪಾಕಿಸ್ತಾನದ ಆರ್ಥಿಕತೆ ಅಳಿವಿನ ಅಂಚಿನಲ್ಲಿತ್ತು. ನಮ್ಮ ಸರ್ಕಾರ (Pakistan Government) ಸ್ಥಾಪನೆಯಾದ ಬಳಿಕ ಸತತ ಪರಿಶ್ರಮದಿಂದ ದೇಶ ಉಳಿದಿದೆ ಜೊತೆಗೆ ಆರ್ಥಿಕ ಅಸ್ಥಿರತೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಶೇಷತೆ ಏನು? ತಯಾರಿ ಹೇಗೆ?

    ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಹಣದುಬ್ಬರ ಗಗನಕ್ಕೇರುವಂತೆ ಮಾಡಿದ್ದಾರೆ. ಅನೇಕ ಒಪ್ಪಂದದ ನಿಯಮಗಳನ್ನು ಹಿಂದಿನ ಸರ್ಕಾರ ಉಲ್ಲಂಘಿಸಿದೆ. ಇದೆಲ್ಲವೂ ಇಂದಿನ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಶೆಹಬಾಜ್ ಷರೀಫ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಂಕಾ ಆರ್ಥಿಕ ಬಿಕ್ಕಟ್ಟು – ಶಾಲೆಗಳ ಪಠ್ಯಪುಸ್ತಕ ಮುದ್ರಣಕ್ಕೆ ಭಾರತದಿಂದ ಭಾರೀ ನೆರವು

    ಲಂಕಾ ಆರ್ಥಿಕ ಬಿಕ್ಕಟ್ಟು – ಶಾಲೆಗಳ ಪಠ್ಯಪುಸ್ತಕ ಮುದ್ರಣಕ್ಕೆ ಭಾರತದಿಂದ ಭಾರೀ ನೆರವು

    ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿರುವ ಶ್ರೀಲಂಕಾಗೆ (Srilanka) 2023ನೇ ಸಾಲಿನ ಶಾಲಾ (School) ಮಕ್ಕಳಿಗೆ ಪಠ್ಯಪುಸ್ತಕಗಳ ಮುದ್ರಣಕ್ಕೆ ಅಗತ್ಯ ನೆರವು ನೀಡಲು ಭಾರತ ಮುಂದಾಗಿದ್ದು, 4 ವರ್ಷಗಳಲ್ಲಿ 2.9 ಶತಕೋಟಿ ಡಾಲರ್ ನೆರವು ನೀಡಲಿದೆ.

    ಭಾರತೀಯ ಸಾಲ ಯೋಜನೆ ಅಡಿಯಲ್ಲಿ ಪಠ್ಯಪುಸ್ತಕ (Text Book) ಮುದ್ರಣಕ್ಕೆ ಅಗತ್ಯವಿರುವ ಕಾಗದ, ಶಾಯಿ ಸೇರಿದಂತೆ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುಸಿಲ್ ಪ್ರೇಮೇಜನಾಥ ತಿಳಿಸಿದ್ದಾರೆ. ಇದನ್ನೂ ಓದಿ: ಗೇಮಿಂಗ್ ಆ್ಯಪ್ ಸ್ಕ್ಯಾಮ್- ಉದ್ಯಮಿ ಮನೆಯಿಂದ 12 ಕೋಟಿ ನಗದು ವಶ

    SRILANKA (1)

    ಡಾಲರ್ ಕೊರತೆ ಇರುವುದರಿಂದ ಪಠ್ಯಪುಸ್ತಕಗಳ ಮುದ್ರಣಕ್ಕೆ ಅತ್ಯಂತ ಪ್ರಮುಖವಾಗಿ ಬೇಕಾದ ಕಚ್ಚಾವಸ್ತುಗಳ ಖರೀದಿಗೂ ಶ್ರೀಲಂಕಾ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷದ ಮಾರ್ಚ್ನಲ್ಲಿ ಪ್ರಶ್ನೆಪತ್ರಿಕೆ ಮುದ್ರಿಸಲು ಕಾಗದದ ಕೊರತೆ ಉಂಟಾಗಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಪರೀಕ್ಷೆ ರದ್ದುಪಡಿಸಲಾಗಿತ್ತು.

    ಉಚಿತ ಶಿಕ್ಷಣ ಯೋಜನೆಯಡಿ ಶ್ರೀಲಂಕಾವು ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಒದಗಿಸುತ್ತದೆ. 2023ರ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕ ಮುದ್ರಣಕ್ಕೆ ಸುಮಾರು 44 ಮಿಲಿಯನ್ ಡಾಲರ್ ಖರ್ಚಾಗಲಿದೆ ಎಂದು ಅಂದಾಜಿಸಿದೆ. ಇದನ್ನೂ ಓದಿ: 6 ತಿಂಗಳು ರಜೆ ಹಾಕಿ- ಡೀನ್ ವಿರುದ್ಧ ಸಚಿವ ಸೋಮಣ್ಣ ಗರಂ

    ಹಾಗಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(IMF) ಆರ್ಥಿಕ ಬಿಕ್ಕಟ್ಟಿನಿಂದ ಲಂಕಾವನ್ನು ರಕ್ಷಿಸಲು ವಿವಿಧ ಷರತ್ತುಗಳೊಂದಿಗೆ 4 ವರ್ಷಗಳಲ್ಲಿ 2.9 ಶತಕೋಟಿ ಡಾಲರ್ ನೆರವು ನೀಡಲಿದೆ. ಇದರಿಂದ 2022ರಲ್ಲಿ ಭಾರತ ದೇಶವೊಂದರಿಂದಲೇ ಲಂಕಾಕ್ಕೆ 4 ಶತಕೋಟಿ ಡಾಲರ್ ನೆರವು ಒದಗಿಸಿದಂತಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ನರೇಂದ್ರ ಮೋದಿಯಿಂದಾಗಿ ನೀವೆಲ್ಲರೂ ಬದುಕಿದ್ದೀರಿ – ಲಸಿಕೆ ಪಡೆದ ಜನತೆಗೆ ಬಿಹಾರ ಸಚಿವ ಮಾತು

    ನರೇಂದ್ರ ಮೋದಿಯಿಂದಾಗಿ ನೀವೆಲ್ಲರೂ ಬದುಕಿದ್ದೀರಿ – ಲಸಿಕೆ ಪಡೆದ ಜನತೆಗೆ ಬಿಹಾರ ಸಚಿವ ಮಾತು

    ಪಾಟ್ನಾ: ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಡೆದ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ಶ್ಲಾಘಿಸಿರುವ ಬಿಹಾರದ ಸಚಿವ ರಾಮ್ ಸೂರತ್ ರೈ, ಭಾರತೀಯರ ಜೀವ ಉಳಿಸಿದ ಶ್ರೇಯಸ್ಸನ್ನು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ್ದಾರೆ.

    ನೀವಿಂದು ಬದುಕಿದ್ದರೆ ಅದರ ಕ್ರೆಡಿಟ್ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅವರು ಲಸಿಕೆಯನ್ನು ಅಭಿವೃದ್ಧಿಪಡಿಸಿ, ದೇಶದ ಜನರಿಗೆ ಉಚಿತವಾಗಿ ನೀಡಿದರು. ಅದರಿಂದಾಗಿಯೇ ನೀವೆಲ್ಲರೂ ಇಂದು ಬದುಕಿದ್ದೀರಿ ಎಂದು ಈಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,692 ಮಂದಿಗೆ ಕೊರೊನಾ ಸೋಂಕು – ಇಬ್ಬರು ಸಾವು

    ಕೊರೊನಾ ಕಾರಣದಿಂದಾಗಿ ಅನೇಕ ದೇಶಗಳು ಈಗಲೂ ಆರ್ಥಿಕ ಪರಿಸ್ಥಿತಿ ಎದುರು ಹೋರಾಡುತ್ತಿವೆ. ಆದರೆ ಭಾರತದಲ್ಲಿ ಆರ್ಥಿಕತೆ ಬಲಪಡಿಸುವ ನಿಟ್ಟಿನಲ್ಲಿ ಅತ್ಯಂತ ವೇಗವಾಗಿ ಕೆಲಸಗಳು ಸಾಗುತ್ತಿವೆ.

    ನರೇಂದ್ರ ಮೋದಿ ಅವರು ಲಸಿಕೆಯನ್ನು ತಂದುಕೊಡದೆ ಇದ್ದಿದ್ದರೇ ಮತ್ತು ಅದನ್ನು ಜನರಿಗೆ ಉಚಿತವಾಗಿ ನೀಡದೇ ಇದ್ದಿದ್ದರೆ ಪರಿಸ್ಥಿತಿ ಬಹಳ ಕೆಟ್ಟದಾಗಿರುತ್ತಿತ್ತು. ನಮ್ಮ ಕುಟುಂಬಗಳು ಮತ್ತು ಸ್ನೇಹಿತರ ನಡುವೆಯೂ ಕೋವಿಡ್ ಸಾವುಗಳನ್ನು ನಾವೆಲ್ಲ ಕಂಡಿದ್ದೇವೆ. ನಾನು ನನ್ನ ಬಾಮೈದುನನ್ನೂ ಕಳೆದುಕೊಂಡಿದ್ದೇನೆ ಎಂದು ನೆನೆದಿದ್ದಾರೆ. ಇದನ್ನೂ ಓದಿ: ಎನ್‌ಕೌಂಟರ್‌ ವೇಳೆ ಭಯೋತ್ಪಾದಕರ ಗುಂಡೇಟಿಗೆ ಮಡಿದ ಸೇನಾ ಶ್ವಾನ

    ಈ ವರ್ಷದ ಜುಲೈ 17ರಂದು ಭಾರತ 200 ಕೋಟಿ ಡೋಸ್ ಲಸಿಕೆ ನೀಡಿ ಮೈಲಿಗಲ್ಲಿಗೆ ಹೆಸರಾಗಿದೆ. ಲಸಿಕಾ ಅಭಿಯಾನ ಆರಂಭವಾದ 18 ತಿಂಗಳ ಬಳಿಕ ಈ ಸಾಧನೆ ಮಾಡಲಾಗಿದೆ. ಸ್ವಾತಂತ್ರ‍್ಯ ದಿನಾಚರಣೆಗೂ ಮುನ್ನ ಕೇಂದ್ರ ಸರ್ಕಾರವು `ಕೋವಿಡ್ ಲಸಿಕೆ ಅಮೃತ ಮಹೋತ್ಸವ’ದ ವಿಶೇಷ ಅಭಿಯಾನ ಘೋಷಿಸಿದೆ. ಜುಲೈ 15 ರಿಂದ ಸೆಪ್ಟೆಂಬರ್ 30ರ ವರೆಗೆ 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಉಚಿತ ಮುಂಜಾಗ್ರತಾ ಡೋಸ್ (ಬೂಸ್ಟರ್ ಡೋಸ್) ಸಹ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ

    ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ

    ಕೊಲಂಬೋ: ರನಿಲ್ ವಿಕ್ರಮಸಿಂಘೆ ಗುರುವಾರ ಶ್ರೀಲಂಕಾದ 9ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಬುಧವಾರ ಅಧ್ಯಕ್ಷೀಯ ಚುನಾವಣೆಯಲ್ಲಿ 134 ಮತಗಳನ್ನು ಪಡೆಯುವ ಮೂಲಕ ಬಹುಮತದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ರನಿಲ್ ವಿಕ್ರಮ ಸಿಂಘೆ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದ್ದರೂ ಇದರ ನಡುವೆಯೇ ಅವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಪ್ರಧಾನಿಯಾಗಿದ್ದಾಗ ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿ, ಬೆಂಕಿ ಹಚ್ಚಿ, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಬ್ಯಾಂಕ್ ಮುಂದೆ ಪ್ರತಿಭಟನೆ – ಜನರನ್ನು ಚದುರಿಸಲು ಯುದ್ಧ ಟ್ಯಾಂಕರ್ ನಿಲ್ಲಿಸಿದ ಚೀನಾ

     

    ಬುಧವಾರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ವಿಕ್ರಮಸಿಂಘೆ, ಸಂಸತ್ತಿನ ಸಂಕೀರ್ಣದ ಒಳಗಡೆ ಪ್ರಮಾಣವಚನ ಸ್ವೀಕರಿಸಲು ಅನುಮತಿ ನೀಡಬೇಕೆಂದು ಸ್ಪೀಕರ್ ಅವರಿಗೆ ಮನವಿಯಿಟ್ಟರು. ಶ್ರೀಲಂಕಾವನ್ನು ಈ ಭೀಕರ ಬಿಕ್ಕಟ್ಟಿನಿಂದ ಪಾರು ಮಾಡಲು ಎಲ್ಲಾ ಪಕ್ಷಗಳೊಂದಿಗೆ ಕೆಲಸ ಮಾಡುವುದಾಗಿ ಪ್ರತಿಪಕ್ಷಗಳಿಗೆ ಭರವಸೆ ನೀಡಿದರು. ಇದನ್ನೂ ಓದಿ: ಪಂಜಾಬ್ ಸಿಎಂ ಭಗವಂತ್ ಮಾನ್ ಆಸ್ಪತ್ರೆಗೆ ದಾಖಲು

    Live Tv
    [brid partner=56869869 player=32851 video=960834 autoplay=true]

  • ಆರ್ಥಿಕ ಬಿಕ್ಕಟ್ಟು – ಒಂದೊತ್ತಿನ ಊಟಕ್ಕಾಗಿ ವೇಶ್ಯಾವಾಟಿಕೆ ಹಾದಿ ಹಿಡಿಯುತ್ತಿರುವ ಲಂಕಾ ಮಹಿಳೆಯರು

    ಆರ್ಥಿಕ ಬಿಕ್ಕಟ್ಟು – ಒಂದೊತ್ತಿನ ಊಟಕ್ಕಾಗಿ ವೇಶ್ಯಾವಾಟಿಕೆ ಹಾದಿ ಹಿಡಿಯುತ್ತಿರುವ ಲಂಕಾ ಮಹಿಳೆಯರು

    ಕೊಲಂಬೊ: ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ವಿಷಮಸ್ಥಿತಿ ತಲುಪುತ್ತಿದೆ. ಸುಮಾರು 60 ಲಕ್ಷ ಜನರು ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಈ ನಡುವೆ ಅಗತ್ಯ ಔಷಧಗಳು ಹಾಗೂ ಎರಡು ಹೊತ್ತಿನ ಊಟಕ್ಕಾಗಿ ವೇಶ್ಯಾವಾಟಿಕೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ವರದಿಯಾಗಿದೆ.

    ಅಂಕಿ-ಅಂಶಗಳ ವರದಿಯ ಪ್ರಕಾರ ಜನರು ಈಗ ಆಹಾರ ಉಳಿಸಲು ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡುತ್ತಿದ್ದಾರೆ. ಶೇ.25 ರಷ್ಟು ಜನರು ತೀವ್ರ ತೊಂದರೆಯಲ್ಲಿದ್ದು ವೇಶ್ಯಾವಾಟಿಕೆಯಲ್ಲಿ ತೊಡಗಿರುವವರು ಹೆಚ್ಚಾಗುವುದರೊಂದಿಗೆ ಮಹಿಳೆಯರನ್ನು ಬಲವಂತದಿಂದಲೂ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

    ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಹಣಕ್ಕಾಗಿ ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಮಾಡುತ್ತಿದೆ. ಆಯುರ್ವೇದ ಮತ್ತು ಸ್ಪಾ ಕೇಂದ್ರಗಳು ಈಗ ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿವೆ. ಮಹಿಳೆಯರು ಈ ವ್ಯವಹಾರದಲ್ಲಿ ವೇಗವಾಗಿ ಸೇರಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಕೊಂಚ ಹಣ ಸಂಪಾದಿಸಲು ಸಾಧ್ಯವಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಸ್ಪಾ-ಕೇಂದ್ರಗಳಲ್ಲಿ ಕರ್ಟನ್‌ಗಳನ್ನು ನೇತುಹಾಕುವ ಮೂಲಕ ಲೈಂಗಿಕ ಕ್ರಿಯೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜವಳಿ ಉದ್ಯಮದಲ್ಲಿ ತೊಡಗಿರುವ ಮಹಿಳೆಯರು ಅತ್ಯಂತ ವೇಗವಾಗಿ ಈ ವ್ಯವಹಾರಕ್ಕೆ ಸೇರುತ್ತಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ, ಈ ದೇಶದಲ್ಲಿ ಈ ಪರಿಸ್ಥಿತಿ ಸಂಪೂರ್ಣವಾಗಿ ಹರಡುತ್ತದೆ ಎಂದು ಇಲ್ಲಿನ ತಜ್ಞರು ಹೇಳುತ್ತಿದ್ದಾರೆ. ಜವಳಿ ಉದ್ಯಮ ಮುಚ್ಚುವ ಭೀತಿಯೂ ಎದುರಾಗಿದ್ದು, ಮಹಿಳೆಯರು ಜೀವನ ನಿರ್ವಹಣೆಗಾಗಿ ಪರ್ಯಾಯ ಮಾರ್ಗಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಕೆಲವರು ವೇಶ್ಯಾವಾಟಿಕೆಯನ್ನೇ ವೃತ್ತಿಯಾಗಿ ಮಾಡಿಕೊಳ್ಳುತ್ತಿದ್ದಾರೆ.

    ಈ ಕುರಿತು ಲೈಂಗಿಕ ಕಾರ್ಯಕರ್ತರೊಬ್ಬರು ಮಾತನಾಡಿ, ದೇಶದ ಆರ್ಥಿಕತೆ ಹದಗೆಟ್ಟಿರುವುದು ಮಹಿಳೆಯರನ್ನು ಈ ಉದ್ಯಮಕ್ಕೆ ಬರುವಂತೆ ಮಾಡಿದೆ. ಈ ಸಮಯದಲ್ಲಿ ನಾವು ನೋಡಬಹುದಾದ ಉತ್ತಮ ಪರಿಹಾರವೆಂದರೆ ಲೈಂಗಿಕ ಕೆಲಸ ಎಂದು ನಾವು ನಂಬಿದ್ದೇವೆ. ನಮ್ಮ ತಿಂಗಳ ಸಂಬಳ ಸುಮಾರು 28,000 ರೂ. ಮತ್ತು ನಾವು ಓವರ್‌ಟೈಮ್ ಮೂಲಕ 35 ಸಾವಿರದವರೆಗೆ ಗಳಿಸಬಹುದು. ಲೈಂಗಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ನಾವು ಇದಕ್ಕಿಂತ ಹೆಚ್ಚಿನದನ್ನು ಗಳಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್‌ ವಿಕ್ರಮಸಿಂಘೆ ಆಯ್ಕೆ

    ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್‌ ವಿಕ್ರಮಸಿಂಘೆ ಆಯ್ಕೆ

    ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ನಡುವೆ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಗೆ ನಡೆದ ಮತದಾನದಲ್ಲಿ ರನಿಲ್‌ ವಿಕ್ರಮಸಿಂಘೆ ಬಹುಮತದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷ ಸ್ಥಾನಕ್ಕೆ ಗೊಟಬಯಾ ರಜಪಕ್ಸೆ ಅವರು ರಾಜೀನಾಮೆ ನೀಡಿದ ನಂತರ ಹಂಗಾಮಿ ಅಧ್ಯಕ್ಷರಾಗಿ ರನಿಲ್‌ ವಿಕ್ರಮಸಿಂಘೆ ನೇಮಕಗೊಂಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ಬೆಂಗಳೂರು ಮಹಿಳೆ ಅಮೆರಿಕದಿಂದ ಏರ್‌ಲಿಫ್ಟ್‌ – 26 ಗಂಟೆ ಪ್ರಯಾಣಕ್ಕೆ 1 ಕೋಟಿ ವೆಚ್ಚ

    ಆರು ಬಾರಿ ಪ್ರಧಾನಿಯಾಗಿರುವ ವಿಕ್ರಮಸಿಂಘೆ ಅವರು 225 ಸದಸ್ಯರ ಸಂಸತ್ತಿನಲ್ಲಿ ಅತಿದೊಡ್ಡ ಬಣವಾದ ರಾಜಪಕ್ಸೆಗಳ ಎಸ್‌ಎಲ್‌ಪಿಪಿಯಿಂದ ಬೆಂಬಲಿತರಾಗಿರುವುದರಿಂದ ಅವರನ್ನು ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ.

    ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಅವರು, ದೇಶವು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದೆ. ನಮ್ಮ ಮುಂದೆ ದೊಡ್ಡ ಸವಾಲುಗಳಿವೆ ಎಂದು ಹೇಳಿದರು. ಇದನ್ನೂ ಓದಿ: ಕೊಲೊಂಬೊದಲ್ಲಿ ನಡೆದ ದಾಳಿಯಲ್ಲಿ ಭಾರತೀಯ ಅಧಿಕಾರಿಗೆ ಗಂಭೀರ ಗಾಯ

    Live Tv
    [brid partner=56869869 player=32851 video=960834 autoplay=true]

  • ಗೊಟಬಯ ರಾಜಪಕ್ಸೆಗೆ ಶಾಕ್ ಕೊಟ್ಟ ಸಿಂಗಾಪುರ – ದೇಶ ಬಿಟ್ಟು ಹೊರಡಿ ಎಂದು ಖಡಕ್ ಸೂಚನೆ

    ಗೊಟಬಯ ರಾಜಪಕ್ಸೆಗೆ ಶಾಕ್ ಕೊಟ್ಟ ಸಿಂಗಾಪುರ – ದೇಶ ಬಿಟ್ಟು ಹೊರಡಿ ಎಂದು ಖಡಕ್ ಸೂಚನೆ

    ಸಿಂಗಾಪುರ: ಶ್ರೀಲಂಕಾವನ್ನು ಆರ್ಥಿಕವಾಗಿ ಮುಳುಗಿಸಿ ಜನರ ಆಕ್ರೋಶಕ್ಕೆ ಹೆದರಿ ದೇಶ ಬಿಟ್ಟು ಸಿಂಗಾಪುರಕ್ಕೆ ಓಡಿ ಹೋದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆಗೆ ಸಿಂಗಾಪುರ ಆಡಳಿತ ಬಿಗ್ ಶಾಕ್ ನೀಡಿದೆ.

    ಸಿಂಗಾಪುರ ಬಿಟ್ಟು ತೆರಳುವಂತೆ ಗೊಟಬಯಗೆ ಸೂಚಿಸಿದೆ. `ನೀವು ಪ್ರವಾಸಿ ವೀಸಾ ಮೇಲೆ ಬಂದಿದ್ದೀರಿ. ಅದನ್ನು ವಿಸ್ತರಿಸಲು ನಾವು ಸಿದ್ಧರಿಲ್ಲ. ನೀವಿನ್ನು ನಮ್ಮ ದೇಶದಿಂದ ಹೊರಡಬಹುದು’ ಎಂದು ಗೊಟಬಯಗೆ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಉಕ್ರೇನ್ ಉನ್ನತ ಅಧಿಕಾರಿಗಳನ್ನ ಅಮಾನತು ಮಾಡಿದ ಝೆಲೆನ್ಸ್ಕಿ

    ಈ ಮಧ್ಯೆ ಶ್ರೀಲಂಕಾದಲ್ಲಿ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತೊಮ್ಮೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಶಾಂತಿ-ಭದ್ರತೆಯ ಕಾರಣ ನೀಡಿ ವಿಕ್ರಮಸಿಂಘೆ ತುರ್ತು ಪರಿಸ್ಥಿತಿ ಹೇರಿದ್ದಾರೆ.

    ಅಂದಹಾಗೆ ರನಿಲ್ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಆಡಳಿತಾರೂಢ ಪಕ್ಷ ಪೊಡುಜನ ಪೆರಮುನ ಚಿಂತನೆ ನಡೆಸಿದೆ. ಇದು ರಾಜಪಕ್ಸೆ ಕುಟುಂಬಕ್ಕೆ ಸೇರಿದ ಪಕ್ಷ. ಹೀಗಾಗಿ ರನಿಲ್ ಗೆಲುವು ಖಚಿತ ಎನ್ನಲಾಗುತ್ತಿದೆ. ಇದನ್ನೂ ಓದಿ: ನೀವು ಬರಬೇಡಿ.. ನಿಮ್ಮ ಮನೆಯ ಪುರುಷರನ್ನು ಕೆಲಸಕ್ಕೆ ಕಳಿಸಿ: ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್‌ ಸೂಚನೆ

    ಇದೇ ನಡೆದಲ್ಲಿ ಶ್ರೀಲಂಕಾದಲ್ಲಿ ಮತ್ತೆ ಬರೋದು ರಾಜಪಕ್ಸೆ ಸರ್ಕಾರವೇ ಆಗಿರಲಿದೆ. ನಮಗೆ ನ್ಯಾಯ ಸಿಗಲ್ಲ. ದೇಶವೂ ಉದ್ಧಾರ ಆಗಲ್ಲ ಎಂದು ಹೋರಾಟಗಾರರು ನೋವು ವ್ಯಕ್ತಪಡಿಸ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಂಕಾ ಆರ್ಥಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ಜು.19 ರಂದು ಸರ್ವಪಕ್ಷಗಳ ಸಭೆ – ಪ್ರಹ್ಲಾದ್ ಜೋಶಿ

    ಲಂಕಾ ಆರ್ಥಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ಜು.19 ರಂದು ಸರ್ವಪಕ್ಷಗಳ ಸಭೆ – ಪ್ರಹ್ಲಾದ್ ಜೋಶಿ

    ನವದೆಹಲಿ: ಇಂದಿಗೆ 100 ದಿನಗಳನ್ನು ಪೂರೈಸಿರುವ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ಮಂಗಳವಾರ (ಜುಲೈ 21ರಂದು) ಸರ್ವಪಕ್ಷಗಳ ಸಭೆ ಕರೆಯಲಾಗಿದ್ದು, ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ನೇತೃತ್ವದಲ್ಲಿ ಸಭೆ ನಡೆಯಲಿದೆ.

    ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ವಿವಿಧ ಪಕ್ಷಗಳ ನಾಯಕರು ಭಾಗವಹಿಸಿದ್ದ ಸರ್ವಪಕ್ಷ ಸಭೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಸಂಸತ್ತಿನ ನಿಯಮಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ಸರ್ಕಾರವು ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಮುಕ್ತವಾಗಿದೆ ಎಂದು ಹೇಳಿದ್ದಾರೆ.

    ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಕುರಿತು ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಇಂದಿಗೆ 100ನೇ ದಿನ ತಲುಪಿದೆ. ಇದನ್ನೂ ಓದಿ: ವಿದ್ಯಾರ್ಥಿನಿ ಸಾವಿಗೆ ತೀವ್ರಗೊಂಡ ಪ್ರತಿಭಟನೆ – ಸ್ಕೂಲ್ ಬಸ್, ಪೊಲೀಸ್ ವಾಹನಗಳಿಗೆ ಬೆಂಕಿ

    ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಗೊಟಬಯ ರಾಜಪಕ್ಸೆ ತಮ್ಮ ಸ್ಥಾನಕ್ಕೆ ಈಚೆಗೆ ರಾಜೀನಾಮೆ ನೀಡಿದರು. ತಮ್ಮ ವಿರುದ್ಧದ ಪ್ರತಿಭಟನೆಯಿಂದ ತಪ್ಪಿಸಿಕೊಳ್ಳಲು ಶ್ರೀಲಂಕಾ ತೊರೆದು ಪಲಾಯನಗೈದಿರುವ ಹಿನ್ನೆಲೆ ಕಳೆದ ಗುರುವಾರ ಸಂಸತ್ತಿನ ಸ್ಪೀಕರ್‌ಗೆ ರಾಜೀನಾಮೆ ಪತ್ರವನ್ನು ಇ-ಮೇಲ್ ಮಾಡಿದ್ದರು.

    ಇದಕ್ಕೂ ಮುನ್ನ ಲಂಕಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಲ್ಲಿನ ಜನರು ಬೃಹತ್ ಪ್ರತಿಭಟನೆ ನಡೆಸಿದ್ದು, ರಾಜಪಕ್ಸೆ ಹಾಗೂ ಪ್ರಧಾನಿ ವಿಕ್ರಮಸಿಂಘೆ ತಮ್ಮ ಅಧಿಕಾರದಿಂದ ಕೆಳಗಿಳಿಯುವಂತೆ ಒತ್ತಾಯಿಸಿ, ಅಧ್ಯಕ್ಷೀಯ ಭವನಕ್ಕೆ ಮುತ್ತಿಗೆ ಹಾಕಿದ್ದರು. ಇದನ್ನೂ ಓದಿ: 18 ತಿಂಗಳಲ್ಲಿ 200 ಕೋಟಿ ಡೋಸ್‌ ಕೊರೊನಾ ಲಸಿಕೆ- ದಾಖಲೆ ಸೃಷ್ಟಿಸಿದ ಭಾರತ

    ಆ ನಂತರ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕರಿಸಿದ್ದು, ಹೊಸ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ 7 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು. ಸದ್ಯ ಮುಂದಿನ ವಾರ ನಡೆಯುವ ಮತದಾನದಲ್ಲಿ ಅವರು ಶಾಶ್ವತವಾಗಿ ಉತ್ತರಾಧಿಕಾರಿಯಾಗುವ ಪ್ರಮುಖ ಅಭ್ಯರ್ಥಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಈ ದೇಶಗಳಿಗೂ ಬರಲಿದೆ ಶ್ರೀಲಂಕಾ ಪರಿಸ್ಥಿತಿ – ಆರ್ಥಿಕ ಸಂಕಷ್ಟದ ಹೊಸ್ತಿಲಲ್ಲಿ 12 ರಾಷ್ಟ್ರಗಳು

    ಈ ದೇಶಗಳಿಗೂ ಬರಲಿದೆ ಶ್ರೀಲಂಕಾ ಪರಿಸ್ಥಿತಿ – ಆರ್ಥಿಕ ಸಂಕಷ್ಟದ ಹೊಸ್ತಿಲಲ್ಲಿ 12 ರಾಷ್ಟ್ರಗಳು

    ರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ದೇಶ ತತ್ತರಿಸಿ ಹೋಗಿದೆ. ದೇಶದ ಜನರ ಬದುಕು ಬೀದಿಪಾಲಾಗಿದೆ. ಆಡಳಿತದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಮಿತ್ರ ರಾಷ್ಟ್ರಕ್ಕೆ ನೆರೆಯ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಶ್ರೀಲಂಕಾ ಅಷ್ಟೇ ಅಲ್ಲ ಇನ್ನೂ ಅನೇಕ ರಾಷ್ಟ್ರಗಳು ಇಂತಹ ಭೀಕರ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.

    ಅಗತ್ಯ ವಸ್ತುಗಳ ಖರೀದಿ ಹಾಗೂ ವಹಿವಾಟಿಗೆ ಡಾಲರ್‌ ಕೊರತೆ, ಸಾಲ, ಹಣದುಬ್ಬರ, ಸೇರಿದಂತೆ ಹಲವಾರು ಸಮಸ್ಯೆಗಳಿಂದ 12 ಅಭಿವೃದ್ಧಿಶೀಲ ರಾಷ್ಟ್ರಗಳು ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾದ ಪರಿಸ್ಥಿತಿಯಲ್ಲಿವೆ. ಆ ದೇಶಗಳಿಗೆ ಶ್ರೀಲಂಕಾದ ಪರಿಸ್ಥಿತಿಯೇ ಎದುರಾಗುವ ಸಾಧ್ಯತೆ ಇದೆ. ಆ ದೇಶಗಳು ಯಾವುವು? ಅಲ್ಲಿನ ಬಿಕ್ಕಟ್ಟುಗಳೇನು ಎಂಬ ಬಗ್ಗೆ ಇಲ್ಲಿದೆ ವಿವರ.

    ಅರ್ಜೆಂಟೀನಾ
    ಆರ್ಥಿಕ ಬಿಕ್ಕಟ್ಟು ಎದುರಿಸುವ ಸಾಧ್ಯತೆಯಿರುವ ದೇಶಗಳ ಪಟ್ಟಿಯಲ್ಲಿ ಅರ್ಜೆಂಟೀನಾ ಮೊದಲ ಸ್ಥಾನದಲ್ಲಿದೆ. ಪೆಸೊ (ಕರೆನ್ಸಿ) ಈಗ ಕಪ್ಪು ಮಾರುಕಟ್ಟೆಯಲ್ಲಿ ಸುಮಾರು ಶೇ.50 ರಿಯಾಯಿತಿಯಲ್ಲಿ ವಹಿವಾಟು ನಡೆಸುತ್ತಿದೆ. ಮೀಸಲುಗಳು ಕಡಿಮೆಯಾಗಿದೆ. ಡಾಲರ್‌ನಲ್ಲಿ ಕೇವಲ 20 ಸೆಂಟ್‌ಗಳಲ್ಲಿ ಬಾಂಡ್‌ ವ್ಯಾಪಾರ ನಡೆಯುತ್ತಿದೆ. 2024ರ ವರೆಗೆ ಸಾಲದ ಹೊರೆ ದೇಶವನ್ನು ಹೆಚ್ಚು ಬಾಧಿಸುವುದಿಲ್ಲ. ಆದರೆ ಆ ನಂತರ ದೇಶ ಆರ್ಥಿಕ ಬಿಕ್ಕಟ್ಟು ಎದುರಿಸುವ ಸಾಧ್ಯತೆಯಿದೆ. ಮುಂದೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್‌) ಸಿಗುವ ಸಾಲವೂ ನಿಲ್ಲಬಹುದು ಎಂದು ಅರ್ಜೆಂಟೀನಾ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಭಾರತ ಖರೀದಿಸುತ್ತಿರುವ S-400 ಕ್ಷಿಪಣಿಗೆ ಎದುರಾಗಿದ್ದ ಕಾಟ್ಸಾ ಭೀತಿ ದೂರ

    ಉಕ್ರೇನ್‌
    ರಷ್ಯಾದ ಆಕ್ರಮಣದಿಂದ ತತ್ತರಿಸಿ ಹೋಗಿರುವ ಉಕ್ರೇನ್‌ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಲಿದೆ. ರಷ್ಯಾ ಸೇನೆ ನಡೆಸುತ್ತಿರುವ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನ್‌ ಈಗಾಗಲೇ 20 ಬಿಲಿಯನ್‌ ಡಾಲರ್‌ನಷ್ಟು ಸಾಲ ಮಾಡಿದ್ದು, ಅದನ್ನು ತೀರಿಸುವುದು ದೇಶಕ್ಕೆ ತಲೆನೋವಾಗಿದೆ. ರಷ್ಯಾ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಅಪಾರ ನಷ್ಟ ಸಂಭವಿಸಿದೆ.

    ಟುನೀಶಿಯಾ
    ಐಎಂಎಫ್‌ನಿಂದ ನೆರವು ಪಡೆಯುತ್ತಿರುವ ದೇಶಗಳ ಸಮೂಹವನ್ನೇ ಆಫ್ರಿಕಾ ಹೊಂದಿದೆ. ಆದರೆ ಟುನೀಶಿಯಾ ಈ ಸಂಕಷ್ಟದ ಹಾದಿಯಲ್ಲಿದೆ. ಆರ್ಥಿಕ ಬಿಕ್ಕಟ್ಟು ನಿಭಾಯಿಸಲು ಅಂತರಾಷ್ಟ್ರೀಯ ಹಣಕಾಸು ನಿಧಿಯೊಂದಿಗಿನ ಒಪ್ಪಂದವು ಅನಿವಾರ್ಯವಾಗುತ್ತದೆ ಎಂದು ಟುನೀಶಿಯಾದ ಕೇಂದ್ರ ಬ್ಯಾಂಕ್ ಮುಖ್ಯಸ್ಥ ಮಾರೂವಾನ್ ಅಬಾಸ್ಸಿ ಅಭಿಪ್ರಾಯಪಟ್ಟಿದ್ದಾರೆ.

    ಘಾನಾ
    ಘಾನಾ ದೇಶ ಹೆಚ್ಚಿನ ಸಾಲ ಮಾಡಿರುವುದರಿಂದ ಸಾಲ-ಜಿಡಿಪಿ ಅನುಪಾತವು ಸುಮಾರು ಶೇ.85ಕ್ಕೆ ಏರಿದೆ. ದೇಶದ ಕರೆನ್ಸಿ ಸೆಡಿ ಈ ಹಣಕಾಸು ವರ್ಷದಲ್ಲಿ ಕಾಲು ಭಾಗದಷ್ಟು ಮೌಲ್ಯ ಕಳೆದುಕೊಂಡಿದೆ. ತೆರಿಗೆಯಿಂದ ಬರುವ ಹಣದಲ್ಲಿ ಅರ್ಧಕ್ಕಿಂತ ಹೆಚ್ಚಿನ ಪಾಲನ್ನು ಸಾಲದ ಬಡ್ಡಿ ಪಾವತಿಗೆ ವ್ಯಯಿಸಲಾಗುತ್ತಿದೆ. ಹಣದುಬ್ಬರವೂ ಶೇ.30ರ ಸಮೀಪಕ್ಕೆ ಬರುತ್ತಿದೆ. ಇದನ್ನೂ ಓದಿ: ಅನುಮತಿಯಿಲ್ಲದೇ ದೇಶ ಬಿಟ್ಟು ಹೋಗಬೇಡಿ: ರಾಜಪಕ್ಸೆ ಕುಟುಂಬಕ್ಕೆ ಸುಪ್ರೀಂ ಕೋರ್ಟ್‌ ಆದೇಶ

    ಈಜಿಪ್ಟ್‌
    ಈಜಿಪ್ಟ್ ಸುಮಾರು ಶೇ.95 ಸಾಲ-ಜಿಡಿಪಿ ಅನುಪಾತವನ್ನು ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ಪಾವತಿಸಲು ಈಜಿಪ್ಟ್ 100 ಬಿಲಿಯನ್ ಕರೆನ್ಸಿ ಸಾಲವನ್ನು ಹೊಂದಿದೆ.

    ಕೀನ್ಯಾ
    ಕೀನ್ಯಾ ತನ್ನ ಆದಾಯದಲ್ಲಿ ಸುಮಾರು ಶೇ.30 ಪಾಲನ್ನು ಬಡ್ಡಿ ಪಾವತಿಗೆ ಖರ್ಚು ಮಾಡುತ್ತದೆ. ಅದರ ಬಾಂಡ್‌ಗಳು ಅವುಗಳ ಅರ್ಧದಷ್ಟು ಮೌಲ್ಯವನ್ನು ಕಳೆದುಕೊಂಡಿವೆ.

    ಇಥಿಯೋಪಿಯಾ
    ಈ ದೇಶದಲ್ಲಿ ನಡೆಯುತ್ತಿರುವ ಅಂತರ್ಯುದ್ಧವು ಪ್ರಗತಿಯನ್ನು ತಡೆಹಿಡಿದಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುವ ರಾಷ್ಟ್ರಗಳ ಸಾಲಿನಲ್ಲಿ ಇದು ಕೂಡ ಇದೆ.

    ಎಲ್ ಸಾಲ್ವಡಾರ್
    ಬಿಟ್‌ಕಾಯಿನ್ ಅನ್ನು ಕಾನೂನುಬದ್ಧ ಟೆಂಡರ್ ಮಾಡುವುದು IMF ಭರವಸೆಗಳಿಗೆ ಬಾಗಿಲು ಮುಚ್ಚಿದಂತಾಗಿದೆ. 800 ಮಿಲಿಯನ್ ಡಾಲರ್ ಬಾಂಡ್‌ಗಳು 30% ರಿಯಾಯಿತಿಯಲ್ಲಿ ಮತ್ತು ದೀರ್ಘಾವಧಿಯವು 70% ರಿಯಾಯಿತಿಯಲ್ಲಿ ವಹಿವಾಟು ನಡೆಸುವ ಹಂತಕ್ಕೆ ಟ್ರಸ್ಟ್ ಕುಸಿದಿದೆ.

    ಪಾಕಿಸ್ತಾನ
    ಪಾಕಿಸ್ತಾನವು ಈ ವಾರ ನಿರ್ಣಾಯಕ IMF ಒಪ್ಪಂದವನ್ನು ಮಾಡಿದೆ. ಅಗತ್ಯ ವಸ್ತು, ಸಂಪನ್ಮೂಲ ಆಮದಿಗೆ ಹೆಚ್ಚಿನ ವಿನಿಯೋಗ ಮಾಡುತ್ತಿರುವುದು ದೇಶವನ್ನು ಬಿಕ್ಕಟ್ಟಿಗೆ ತಳ್ಳಲಿದೆ. ವಿದೇಶಿ ಕರೆನ್ಸಿ ಮೀಸಲು 9.8 ಶತಕೋಟಿಯಷ್ಟು ಕಡಿಮೆಯಾಗಿದೆ. ಇದು ಐದು ವಾರಗಳ ಆಮದುಗಳಿಗೆ ಸಾಕಾಗುವುದಿಲ್ಲ. ಪಾಕಿಸ್ತಾನದ ರೂಪಾಯಿ ದಾಖಲೆಯ ಮಟ್ಟಕ್ಕೆ ಕುಸಿದಿದೆ. ಹೊಸ ಸರ್ಕಾರವು ತನ್ನ ಆದಾಯದ 40% ಅನ್ನು ಬಡ್ಡಿ ಪಾವತಿಗೆ ಖರ್ಚು ಮಾಡುತ್ತಿದೆ.

    ಬೆಲಾರಸ್
    ಪಾಶ್ಚಿಮಾತ್ಯ ನಿರ್ಬಂಧಗಳು ಕಳೆದ ತಿಂಗಳು ರಷ್ಯಾವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಉಕ್ರೇನ್‌ ಮೇಲಿನ ಯುದ್ಧದ ವಿಚಾರವಾಗಿ ರಷ್ಯಾ ಬೆಂಬಲಕ್ಕೆ ನಿಂತಿರುವ ಬೆಲಾರಸ್‌ ಕೂಡ ಈಗ ನಿರ್ಬಂಧಗಳೊಂದಿಗೆ ಆರ್ಥಿಕ ಬಿಕ್ಕಟ್ಟಿಗೆ ದೂಡಲ್ಪಟ್ಟಿದೆ. ಇದನ್ನೂ ಓದಿ: ಖಶೋಗಿ ಹತ್ಯೆಗೆ ಸೌದಿ ಕ್ರೌನ್ ಪ್ರಿನ್ಸ್ ಹೊಣೆಗಾರಿಕೆ: ಬೈಡನ್

    ಈಕ್ವೆಡಾರ್
    ಲ್ಯಾಟಿನ್‌ ಅಮೆರಿಕನ್‌ ದೇಶವು ಕಳೆದ ಎರಡು ವರ್ಷಗಳಿಂದ ಆರ್ಥಿಕ ಕುಸಿತ ಸಮಸ್ಯೆ ಎದುರಿಸುತ್ತಿದೆ. ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಅವರನ್ನು ಪದಚ್ಯುತಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಮತ್ತಷ್ಟು ಸಂಕಷ್ಟ ಎದುರಾಗಿದೆ.

    ನೈಜೀರಿಯಾ
    ಬಾಂಡ್ ಸ್ಪ್ರೆಡ್‌ಗಳು ಕೇವಲ 1,000 bps ಗಿಂತ ಹೆಚ್ಚಿವೆ. ನೈಜೀರಿಯಾ ತನ್ನ ಸಾಲದ ಮೇಲೆ ಬಡ್ಡಿಯನ್ನು ಪಾವತಿಸಲು ಸುಮಾರು 30% ಸರ್ಕಾರದ ಆದಾಯವನ್ನು ಖರ್ಚು ಮಾಡುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಪೆಟ್ರೋಲ್ ಇಲ್ಲದೇ ಕ್ರಿಕೆಟ್ ಅಭ್ಯಾಸಕ್ಕೂ ಹೋಗೋಕಾಗ್ತಿಲ್ಲ- ಲಂಕಾ ಕ್ರಿಕೆಟಿಗ ಕರುಣಾರತ್ನೆ ಬೇಸರ

    ಪೆಟ್ರೋಲ್ ಇಲ್ಲದೇ ಕ್ರಿಕೆಟ್ ಅಭ್ಯಾಸಕ್ಕೂ ಹೋಗೋಕಾಗ್ತಿಲ್ಲ- ಲಂಕಾ ಕ್ರಿಕೆಟಿಗ ಕರುಣಾರತ್ನೆ ಬೇಸರ

    ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಜನಸಾಮಾನ್ಯರು ಮಾತ್ರವಲ್ಲದೇ ಕ್ರಿಕೆಟಿಗರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಪೆಟ್ರೋಲ್‌ಗಾಗಿ ಕಳೆದ ಎರಡು ದಿನಗಳಿಂದಲೂ ದೊಡ್ಡ ಸಾಲಿನಲ್ಲಿ ನಿಂತಿದ್ದ 2019ರಲ್ಲಿ ಲಂಕಾ ತಂಡಕ್ಕೆ ಪದಾರ್ಪಣೆ ಮಾಡಿದ ಕ್ರಿಕೆಟಿಗ ಚಮಿಕಾ ಕರುಣಾರತ್ನೆ ತಮ್ಮ ಬೇಸರವನ್ನು ಮಾಧ್ಯಮಗಳ ಮುಂದೆ ಹೊರಹಾಕಿದ್ದಾರೆ.

    ಅದೃಷ್ಟವಶಾತ್ ಸತತ ಎರಡು ದಿನಗಳ ಕಾಲ ಸಾಲಿನಲ್ಲಿ ನಿಂತಿದ್ದಕ್ಕೆ ನನಗೆ ಪೆಟ್ರೋಲ್ ಸಿಕ್ಕಿದೆ. ಪ್ರಸ್ತುತ ತೈಲ ಬಿಕ್ಕಟ್ಟಿನಿಂದಾಗಿ, ನಾನು ಕ್ರಿಕೆಟ್ ಅಭ್ಯಾಸಕ್ಕೆ ತೆರಳಲೂ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‍ಗಳು ಲಾಕ್ – ರಾಯಚೂರಿನಲ್ಲಿ ಹೆಚ್ಚಾದ ಪ್ರವಾಹ ಭೀತಿ

    ಸದ್ಯದಲ್ಲೇ ಶ್ರೀಲಂಕಾ `ಏಷ್ಯಾಕಪ್-2022′ ಅಂತಾರಾಷ್ಟ್ರೀಯ ಟೂರ್ನಿ ಆಯೋಜಿಸುತ್ತಿದೆ. ಆದರೆ ಇಡೀ ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ತೈಲದ ಕೊರತೆ ಕ್ರಿಕೆಟಿಗರ ಮೇಲೂ ಗಾಢವಾದ ಪರಿಣಾಮ ಬೀರಿದೆ. ಏಷ್ಯಾಕಪ್‌ನೊಂದಿಗೆ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್) ಸಹ ಹತ್ತಿರವಾಗುತ್ತಿದೆ. ಇದಕ್ಕಾಗಿ ವಿವಿಧ ಸ್ಥಳಗಳಲ್ಲಿ ಅಭ್ಯಾಸ ಮಾಡಬೇಕಿದೆ. ಕ್ರಿಕೆಟ್ ಕ್ಲಬ್‌ನಲ್ಲಿ ನಡೆಯುವ ಸೀಸನ್‌ಗಳಲ್ಲಿಯೂ ಆಡಬೇಕಿದೆ. ಪೆಟ್ರೋಲ್ ಲಭ್ಯವಿಲ್ಲದ ಕಾರಣ ಎಲ್ಲಿಗೂ ಹೋಗಿ ಅಭ್ಯಾಸ ಮಾಡಲು ಆಗುತ್ತಿಲ್ಲ. ಮುಂದೆ ಏನಾಗಲಿದೆ ಎಂಬುದು ನನಗೆ ಗೊತ್ತಿಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.

    ಕಳೆದ ಎರಡು ದಿನಗಳಿಂದ ನಾನು ಎಲ್ಲಿಗೂ ತೆರಳಿಲ್ಲ. ಏಕೆಂದರೆ ಪೆಟ್ರೋಲ್‌ಗಾಗಿ ದೊಡ್ಡ ಸಾಲಿನಲ್ಲಿ ನಿಂತಿದ್ದೆ. ಅದೃಷ್ಟವಶಾತ್ ಇಂದು ನನಗೆ ಪೆಟ್ರೋಲ್ ಸಿಕ್ಕಿದೆ. 10 ಸಾವಿರ ರೂ. ಗಳಿಗೆ ಪೆಟ್ರೋಲ್ ತೆಗೆದುಕೊಂಡೆ. ಇದರಲ್ಲಿ ಎರಡು ಮೂರು ದಿನಗಳು ಮಾತ್ರ ನಾನು ಓಡಾಡಬಹುದು ಅಷ್ಟೇ ಎಂದು ಲಂಕಾ ಯುವ ಕ್ರಿಕೆಟಿಗ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ನಟನೆಯತ್ತ ಮತ್ತೆ ಮರಳಿದ ಮೇಘನಾ ರಾಜ್ : ಮೇಘನಾಗಾಗಿ ಪನ್ನಗಾಭರಣ ನಿರ್ಮಾಣ

    ಏಷ್ಯಾ ಕಪ್ ಟೂರ್ನಿಗೆ ನಾವು ಸಿದ್ಧರಾಗಿದ್ದೇವೆ ಹಾಗೂ ಇದು ದೊಡ್ಡ ಟೂರ್ನಿಯಾಗಿದ್ದು, ಇದಕ್ಕೆ ಬೇಕಾಗುವ ಪೆಟ್ರೋಲ್ ಅನ್ನು ದೇಶ ನೀಡಲಿದೆ ಎಂದು ಭಾವಿಸುತ್ತೇನೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಸರಣಿಗಳನ್ನು ಮುಗಿಸಿದ್ದೇವೆ, ಇದು ಅತ್ಯುತ್ತಮವಾಗಿತ್ತು. ಇದೀಗ ಏಷ್ಯಾ ಕಪ್ ಟೂರ್ನಿಗೆ ತಯಾರಿ ನಡೆಸುತ್ತಿದ್ದೇವೆ, ಎಂದು ಚಮಿಕಾ ಕರುಣಾರತ್ನೆ ಹೇಳಿದ್ದಾರೆ.

    Live Tv

    [brid partner=56869869 player=32851 video=960834 autoplay=true]