Tag: ಆರ್ಥಿಕ ಬಿಕ್ಕಟ್ಟು

  • ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಐಎಂಎಫ್‌ನಿಂದ ಸಿಗುತ್ತಾ ಬೂಸ್ಟರ್‌ ಡೋಸ್‌!

    ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಐಎಂಎಫ್‌ನಿಂದ ಸಿಗುತ್ತಾ ಬೂಸ್ಟರ್‌ ಡೋಸ್‌!

    ಸಾಮಾನ್ಯವಾಗಿ ಯಾವುದೇ ಒಂದು ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಾಗ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಆರ್ಥಿಕ ನೆರವು ಪಡೆಯುತ್ತವೆ. ಇದೀಗ ದಿವಾಳಿ ಹಂತ ತಲುಪಿರುವ ಪಾಕಿಸ್ತಾನ ಕೂಡ ಅದೇ ದಾರಿ ಅನುರಿಸಿದೆ. ಈ ಹಿಂದೆ ಐಎಂಎಫ್ ಮಾತ್ರವಲ್ಲದೇ ಸೌದಿ, ಚೀನಾ (China) ದೇಶಗಳಿಂದ ಸಾಲ ಪಡೆದಿದ್ದರೂ ಪಾಕ್‌ ದಾರಿದ್ರ್ಯ ನೀಗಿಲ್ಲ. ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಈ ನಡುವೆ ಐಎಂಎಫ್‌ ಷರತ್ತುಗಳಿಗೆ ಒಪ್ಪಿ‌ ಮತ್ತೆ ಸಾಲ ಪಡೆದುಕೊಳ್ಳಲು ಮುಂದಾಗಿದೆ.

    ಕಳೆದ ಜುಲೈ ತಿಂಗಳಲ್ಲೇ 7 ಶತಕೋಟಿ ಡಾಲರ್‌ ಸಾಲಕ್ಕೆ (Billion USD Loan) ಐಎಂಎಫ್‌ ಜೊತೆಗೆ ಮಾತುಕತೆ ಮುಕ್ತಾಯಗೊಂಡಿದೆ. ಆದರೂ ಈವರೆಗೆ ಸಾಲ ಸಿಕ್ಕಿಲ್ಲ. ಏಕೆಂದರೆ ಐಎಂಎಫ್‌ ಕಾರ್ಯಕಾರಿ ಮಂಡಳಿ ಸಾಲಕ್ಕೆ ಅನುಮೋದನೆ ನೀಡಿಲ್ಲ. ಇದೇ ಸೆಪ್ಟೆಂಬರ್‌ 25ರಂದು ಐಎಂಎಫ್‌ ಕಾರ್ಯಕಾರಿ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಕಿಸ್ತಾನಕ್ಕೆ ಸಾಲ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧಸಲಾಗುತ್ತದೆ. ಒಂದು ವೇಳೆ ಪಾಕ್‌ಗೆ ಸಾಲ ಕೊಡಲು ಅನುಮತಿ ಸಿಕ್ಕರೆ ಮುಂದಿನ 37 ತಿಂಗಳಲ್ಲಿ ಹಂತ ಹಂತವಾಗಿ ಪಾಕ್‌ 7 ಶತಕೋಟಿ ಡಾಲರ್‌ ನೆರವು ಪಡೆದುಕೊಳ್ಳಲಿದೆ. ಹಾಗಿದ್ದರೆ ಐಎಂಎಫ್‌ನ ಷರತ್ತುಗಳೇನು? ಪಾಕ್‌ನ ಪರಿಸ್ಥಿತಿಗೆ ಕಾರಣವೇನು? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..

    ಐಎಂಎಫ್‌ ಷರತ್ತುಗಳೇನು?

    ಐಎಂಎಫ್‌ ಪಾಕ್‌ಗೆ ಸಾಲ ನೀಡಲು ಒಪ್ಪಿದಾಗ ಹಲವು ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ಪ್ರಮುಖವಾಗಿ ಆದಾಯದ ಮೇಲಿನ ತೆರಿಗೆ ದುಪ್ಪಟ್ಟು ಮಾಡುವುದಾಗಿದೆ. ಮೂಲಗಳ ಪ್ರಕಾರ, ಕೃಷಿ ಆದಾಯದ ಮೇಲಿನ ತೆರಿಗೆಯನ್ನು 15% ನಿಂದ 45%ಗೆ ಹೆಚ್ಚಿಸುವುದಾಗಿ ಷರತ್ತು ವಿಧಿಸಿದೆ. ಜೊತೆಗೆ ವಿದ್ಯುತ್‌ ಮೇಲಿನ ಸಬ್ಸಿಡಿಗಳನ್ನು ಕೊನೆಗೊಳಿಸುವ ಷರತ್ತು ವಿಧಿಸಿದೆ. ಆದಾಗ್ಯೂ ಐಎಂಎಫ್‌ನ ಎಲ್ಲಾ ಷರತ್ತುಗಳಿಗೆ ಪಾಕ್‌ ಸಿದ್ಧ ಎಂದು ಹೇಳಿದೆ. ಖುದ್ದು ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌ (shehbaz sharif) ಐಎಂಎಫ್‌ನ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

    ಪಾಕ್‌ ಸರ್ಕಾರದಲ್ಲೇ ಐಎಂಎಫ್‌ ವಿರುದ್ಧ ಭಿನ್ನಮತ:

    ಪಾಕಿಸ್ತಾನಕ್ಕೆ ಐಎಂಎಫ್‌ ಸಾಲ ನೀಡಲು ಒಪ್ಪಿದ ಬಳಿಕ 2 ತಿಂಗಳಾದರೂ ಈ ವರೆಗೆ ಕಾರ್ಯಕಾರಿ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಪಾಕ್‌ ಸರ್ಕಾರದಲ್ಲೇ ಐಎಂಎಫ್‌ ವಿರುದ್ಧ ಭಿನ್ನಮತ ಸ್ಫೋಟಗೊಂಡಿದೆ. ಉಪ ಪ್ರಧಾನಿ ಇಶಾಕ್‌ ದಾರ್‌, ಐಎಂಎಫ್ ಉದ್ದೇಶಪೂರ್ವಕವಾಗಿಯೇ ಪಾಕಿಸ್ತಾನವನ್ನು ಹಾಳು ಮಾಡಿದೆ. ಪಾಕಿಸ್ತಾನ ದಿವಾಳಿಯಾಗಬೇಕೆಂದು ಐಎಂಎಫ್ ಬಯಸಿದೆ. ಅದಕ್ಕಾಗಿಯೇ ತೆರಿಗೆ ಹೆಚ್ಚಿಸುವ, ಸಬ್ಸಿಡಿಗಳನ್ನು ನಿಲ್ಲಿಸುವ ಷರತ್ತುಗಳನ್ನು ವಿಧಿಸಿದೆ. ಇದನ್ನು ನಮ್ಮ ರಾಜಕಾರಣಿಗಳು ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.

    ಸಾಲ ನೀಡಲು ಐಎಂಎಫ್‌ ವಿಳಂಬ ಮಾಡುತ್ತಿರುವುದು ಏಕೆ?

    ಅಂತಾರಾಷ್ಟ್ರೀಯ ಹಣಕಾಸು ನಿಧಿ ಉದ್ದೇಶಪೂರ್ವಕವಾಗಿಯೇ ಪಾಕಿಸ್ತಾನಕ್ಕೆ ಸಾಲ ನೀಡಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಆದ್ರೆ ವಾಸ್ತವಾಂಶ ಬೇರೆಯೇ ಇದೆ. ಈಗಾಗಲೇ ಮುಂದಿನ ಸಾಲಕ್ಕೆ ಪಾಕ್‌ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡಿದೆ. ಆದ್ರೆ ಸಾಲ ಪಡೆಯುವ ಪೂರ್ವದಲ್ಲಿ ಮಾಡಬೇಕಾದ ಪ್ರಮುಖ ಷರತ್ತುಗಳನ್ನು ಪಾಕ್‌ ಪೂರೈಸುವಲ್ಲಿ ವಿಫಲವಾಗಿದೆ.

    ಏನದು ಷರತ್ತು?: ಐಎಂಎಫ್‌ನಿಂದ ಸಾಲ ಪಡೆಯುವುದಕ್ಕೂ ಮುನ್ನ ಪಾಕ್‌ ತನ್ನ ಮೇಲಿರುವ 12 ಶತಕೋಟಿ ಡಾಲರ್‌ ಸಾಲವನ್ನು ತೀರಿಸಬೇಕು ಎಂಬುದು ಷರತ್ತಾಗಿದೆ. ಸೌದಿ ಅರೇಬಿಯಾಕ್ಕೆ 5 ಶತಕೋಟಿ ಡಾಲರ್‌ ಮತ್ತು ಚೀನಾಕ್ಕೆ 4 ಶತಕೋಟಿ ಡಾಲರ್‌ ಮತ್ತು ಯುಎಇಗೆ 3 ಶತಕೋಟಿ ಡಾಲರ್‌ ಸಾಲವನ್ನು ಪಾಕ್‌ ಮರುಪಾವತಿ ಮಾಡಬೇಕಾಗಿದೆ. 2ನೇ ಷರತ್ತು 2 ಶತಕೋಟಿ ಡಾಲರ್‌ನಷ್ಟು ಪಾಕಿಸ್ತಾನ ಡೆಪಾಸಿಟ್‌ ಹೊಂದಿರಬೇಕು. ಆದ್ರೆ ಪಾಕ್‌ ಈ ಷರತ್ತು ಪಾಲಿಸುವಲ್ಲಿ ವಿಫಲವಾದ ಕಾರಣ ಪಾಕ್‌ ಸಾಲ ಪಡೆದಿಲ್ಲ. ಈ ನಡುವೆ ಪಾಕ್‌ಗೆ ಚೀನಾ ಸೌದಿಗೆ ಶಹಬಾಜ್‌ ಷರೀಫ್‌ ವಿಶೇಷ ಧನ್ಯವಾದ ಅರ್ಪಿಸಿದ್ದು, ಸಾಲ ಮುಕ್ತವಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ 2 ಶತಕೋಟಿ ಡಾಲರ್‌ ಹೊಂದಿಸಲು ಪಾಕ್‌ ಮಧ್ಯಪ್ರಾಚ್ಯ ದೇಶಗಳೊಂದಿಗೆ ಸಂಪರ್ಕದಲ್ಲಿದೆ. ಆದಾಗ್ಯೂ ಇದುವರೆಗೆ ಯಾವುದೇ ಒಪ್ಪಂದಗಳು ನಡೆದಿರುವುದು ಬೆಳಕಿಗೆ ಬಂದಿಲ್ಲ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

    ಪಾಕಿಸ್ತಾನಕ್ಕೆ ಸಾಲ ಏಕೆ ಬೇಕು?

    * ಹೆಚ್ಚುತ್ತಿರುವ ಸಾಲದ ಹೊರೆ:
    ಪಾಕಿಸ್ತಾನವು ಸದ್ಯ ಸಾಲದ ಬಲೆಯಲ್ಲಿ ಸಿಲುಕಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಪ್ರಕಾರ, ಜೂನ್ 2024ರ ವೇಳೆಗೆ ದೇಶವು ಪಾಕಿಸ್ತಾನಿ ರೂಪಾಯಿ 71,245 ಶತಕೋಟಿಗಿಂತ ಹೆಚ್ಚಿನ ಸಾಲವನ್ನು ಹೊಂದಿದೆ. ಇದು ನುಂಗಲಾರದ ತುತ್ತಾಗಿದೆ.

    * ವಿದೇಶಿ ವಿನಿಮಯ ಮೀಸಲು ಖಾಲಿ:
    ಪಾಕಿಸ್ತಾನದ ವಿದೇಶಿ ವಿನಿಮಯಕ್ಕೆ ಮೀಸಲಿರಿಸಿದ್ದ ಖಜಾನೆ ಸಹ ಖಾಲಿಯಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಇತ್ತೀಚಿನ ವರದಿಯ ಅನುಸಾರ, 2020-21ರಲ್ಲಿ 17.2 ಶತಕೋಟಿ ಡಾಲರ್‌ ವಿದೇಶಿ ವಿನಿಮಯವಷ್ಟೇ ಮೀಸಲು ಹೊಂದಿತ್ತು. ಆದರೆ, 2023-24ರ ವೇಳೆಗೆ ಇದು 9.3 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ.

    * ನಿರಂತರವಾಗಿ ಕುಸಿಯುತ್ತಿರುವ ಕರೆನ್ಸಿ ಮೌಲ್ಯ:
    ಪಾಕಿಸ್ತಾನಿ ರೂಪಾಯಿಯ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. 2022ರ ಮೇ ತಿಂಗಳಲ್ಲಿ 1 ಡಾಲರ್‌ಗೆ 185 ಪಾಕಿಸ್ತಾನಿ ರೂಪಾಯಿ ಇತ್ತು. ಆದರೀಗ 1 ಅಮೆರಿಕನ್‌ ಡಾಲರ್‌ಗೆ 278 ಪಾಕಿಸ್ತಾನಿ ರೂ.ನಷ್ಟು ಹೆಚ್ಚಾಗಿದೆ.

    * ಹುಚ್ಚುಚ್ಚಾಗಿ ಹೆಚ್ಚುತ್ತಿರುವ ಹಣದುಬ್ಬರ:
    ಪಾಕಿಸ್ತಾನದಲ್ಲಿ ಹಣದುಬ್ಬರ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಕಳೆದ ಕೆಲ ದಿನಗಳಲ್ಲಿ ಹಣದುಬ್ಬರ 10% ಹೆಚ್ಚಾಗಿದೆ. ಉದಾಹರಣೆಗೆ ಒಂದು ಕೆಜಿ ಗೋದಿ ಹಿಟ್ಟು 800 ರೂ.ಗಿಂತಲೂ ಹೆಚ್ಚಾಗಿದೆ.

    ಪಾಕ್‌ ವಿಶ್ವದ 5ನೇ ಅತಿದೊಡ್ಡ ಸಾಲಗಾರನಾಗಿರೋದು ಏಕೆ?

    ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾದಾಗಿನಿಂದ 23 ಬಾರಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆದುಕೊಂಡಿದೆ. ಪಾಕಿಸ್ತಾನ ಐಎಂಎಫ್‌ಗೆ ವಿಶ್ವದ 5ನೇ ಅತಿದೊಡ್ಡ ಸಾಲಗಾರ ರಾಷ್ಟ್ರವಾಗಿದೆ. ಐಎಂಎಫ್‌ ವರದಿ ಪ್ರಕಾರ ಪಾಕಿಸ್ತಾನ 2024ರ ಸೆಪ್ಟೆಂಬರ್‌ 12ರ ವೇಳೆಗೆ ಪಾಕ್‌ 6.15 ಶತಕೋಟಿ ಡಾಲರ್‌ ಸಾಲವನ್ನು ಹೊಂದಿತ್ತು ಎನ್ನಲಾಗಿದೆ.

    ಐಎಂಎಫ್‌ನಿಂದ 31 ಶತಕೋಟಿ ಡಾಲರ್‌ ಸಾಲ ಪಡೆದ ಅರ್ಜೆಂಟೀನಾ ಮೊದಲ ಸ್ಥಾನದಲ್ಲಿತ್ತು. 10.3 ಶತಕೋಟಿ ಡಾಲರ್‌ ಸಾಲ ಪಡೆದ ಈಜಿಪ್ಟ್‌ 2ನೇ ಸ್ಥಾನ, 10.2 ಶತಕೋಟಿ ಡಾಲರ್ ಸಾಲ ಪಡೆದಿರುವ ಉಕ್ರೇನ್ 3ನೇ ಸ್ಥಾನ, 6.4 ಶತಕೋಟಿ ಡಾಲರ್ ಸಾಲ ಪಡೆದುಕೊಂಡಿರುವ ಈಕ್ವೆಡಾರ್‌ 4ನೇ ಸ್ಥಾನದಲ್ಲಿದ್ದರೆ, 1.15 ಶತಕೋಟಿ ಡಾಲರ್‌ ಹೊಂದಿರುವ ಪಾಕ್‌ 5ನೇ ರಾಷ್ಟ್ರವಾಗಿದೆ. ಇದೀಗ ಮುಂದಿನ 37 ತಿಂಗಳಲ್ಲಿ ಹಂತ ಹಂತವಾಗಿ 7 ಶತಕೋಟಿ ಡಾಲರ್‌ ಸಾಲ ಪಡೆದುಕೊಂಡರೆ, ಒಟ್ಟು 13 ಶತಕೋಟಿ ಡಾಲರ್‌ಗಿಂತ ಹೆಚ್ಚು ಸಾಲ ಪಡೆದುಕೊಂಡಂತೆ ಆಗುತ್ತದೆ. ಈ ಮೂಲಕ ಏಷ್ಯಾದಲ್ಲೇ ಪಾಕ್‌ ಅತಿದೊಡ್ಡ ಸಾಲಗಾರ ರಾಷ್ಟ್ರ ಎಂಬ ಕುಖ್ಯಾತಿಗೆ ಗುರಿಯಾಗಲಿದೆ. ‌

    ಸದ್ಯ ಭಾರತದ ಜೊತೆಗೆ ಸಂಬಂಧ ಹೊಂದಲು ಹಾತೊರೆಯುತ್ತಿರುವ ಪಾಕ್‌ ಮುಂದೆ ಯಾವ ರೀತಿ ತನ್ನ ದೇಶವನ್ನು ದಿವಾಳಿತನದಿಂದ ಕಾಪಾಡಿಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

  • ಗ್ಯಾರಂಟಿ ಹೊಡೆತಕ್ಕೆ ಹಿಮಾಚಲ ತತ್ತರ – ಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ಸಂಬಳ ಕಟ್‌

    ಗ್ಯಾರಂಟಿ ಹೊಡೆತಕ್ಕೆ ಹಿಮಾಚಲ ತತ್ತರ – ಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ಸಂಬಳ ಕಟ್‌

    – 86,589 ಕೋಟಿ ರೂ. ಸಾಲದ ಹೊರೆ

    ಶಿಮ್ಲಾ: ರಾಜ್ಯವು (ಹಿಮಾಚಲ ಪ್ರದೇಶ) ಆರ್ಥಿಕ ಬಿಕ್ಕಟ್ಟಿಗೆ (Himachal faces financial crisis) ಒಳಗಾಗಿರುವ ಕಾರಣ ಎಲ್ಲಾ ರಾಜ್ಯ ಸಚಿವರು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು (CPS) ಮತ್ತು ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ವರೆಗೆ ಯಾವುದೇ ವೇತನ ಹಾಗೂ ಭತ್ಯೆ ನೀಡಲಾಗುವುದಿಲ್ಲ ಎಂದು ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್‌ ಸಿಂಗ್ ಸುಖು (Sukhvinder Singh Sukhu) ಗುರುವಾರ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ.

    ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರ, ಮುಂದಿನ ದಿನಗಳಲ್ಲಿ ರಾಜ್ಯವು ಉತ್ತಮ ಸುಧಾರಣೆ ಕಾಣಬೇಕಿದೆ. ಆದ್ದರಿಂದ ಮುಂದಿನ 2 ತಿಂಗಳು ಯಾವುದೇ ಸಂಬಳ, ಟಿಎ, ಡಿಎ ತೆಗೆದುಕೊಳ್ಳುವುದಿಲ್ಲ ಅಂತ ಸಂಪುಟದ ಎಲ್ಲಾ ಸದಸ್ಯರು ನಿರ್ಧಸಿರುವುದಾಗಿ ಸಿಎಂ ತಿಳಿಸಿದ್ದಾರೆ. ಅಲ್ಲದೇ ವೇತನ ಉಳಿತಾಯವು ಒಂದು ಸಣ್ಣ ಮೊತ್ತವಾಗಿದೆ. ಇದರ ಹೊರತಾಗಿ ಎಲ್ಲಾ ಶಾಸಕರು ಸಹ ಕೊಡುಗೆ ನೀಡಬೇಕೆಂದು ನಾನು ವಿನಂತಿಸುತ್ತೇನೆ ಎಂದೂ ಸಹ ಅವರು ಮನವಿ ಮಾಡಿದ್ದಾರೆ.

    ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದು ಏಕೆ?
    ಹಿಮಾಚಲ ಪ್ರದೇಶದಲ್ಲಿ ಸರ್ಕಾರದ ಅಸಮರ್ಪಕ ಆಡಳಿತವೇ ಕಾರಣ ಎಂದು ಹೇಳಲಾಗಿದೆ. ಹಳೆಯ ಪಿಂಚಣಿ ಯೋಜನೆ (OPS), ಮಹಿಳೆಯರಿಗೆ 1,500 ರೂ. ಪಾವತಿಸುವ ಗ್ಯಾರಂಟಿ ಯೋಜನೆ, ಉಚಿತ ವಿದ್ಯುತ್ ಈ ಯೋಜನೆಗಳಿಂದಾಗಿ 86,589 ಕೋಟಿ ರೂ. ಸಾಲದ ಹೊರೆಯಾಗಿದೆ ಎಂದು ವರದಿಯಾಗಿದೆ.

    ಹೌದು. ರಾಜ್ಯ ಸರ್ಕಾರವು ಮಹಿಳೆಯರಿಗೆ 1,500 ರೂ. ಪಾವತಿಸುವ ಗ್ಯಾರಂಟಿ ಘೋಷಣೆ ಮಾಡಿದೆ. 5 ಲಕ್ಷಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳಿದ್ದು, ಈ ಯೋಜನೆಗೆ ವಾರ್ಷಿಕ 800 ಕೋಟಿ ರೂ. ವೆಚ್ಚ ತಗುಲಲಿದೆ. ಇನ್ನೂ ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆಯಿಂದ ಪ್ರತಿವರ್ಷ ಸರ್ಕಾರಕ್ಕೆ 1,000 ಕೋಟಿ ರೂ., ರಾಜ್ಯ ಸರ್ಕಾರ ನೌಕರರ ವೇತನಕ್ಕೆ 20,639 ಕೋಟಿ ಹೊಡೆಯಾಲಿದೆ. ಇನ್ನೂ ರಾಜ್ಯದಲ್ಲಿ 1,89,466 ಪಿಂಚಣಿದಾರರಿದ್ದು, 2030-31ರ ವೇಳೆಗೆ ಇದು 2,38,827ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಇದರಿಂದ ವಾರ್ಷಿಕ ಪಿಂಚಣಿ ಹೊರೆ ಸುಮಾರು 20,000 ಕೋಟಿ ರೂ. ಹೆಚ್ಚಾಗಲಿದೆ ಎನ್ನಲಾಗಿದೆ.

    ಇದರೊಂದಿಗೆ 680 ಕೋಟಿ ರೂ.ಗಳ ರಾಜೀವ್ ಗಾಂಧಿ ಸ್ವಯಂ ಉದ್ಯೋಗ ಪ್ರಾರಂಭ ಯೋಜನೆಯಡಿ ಇ-ಟ್ಯಾಕ್ಸಿ ಯೋಜನೆ ಆರಂಭಿಸಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಬೊಕ್ಕಸ ಖಾಲಿಯಾಗುತ್ತಿದ್ದು, ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜನಪ್ರತಿನಿಧಿಗಳೇ ಒತ್ತಾಯಿಸಿದೆ. ಹಾಗಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

    ಈ ವರ್ಷ ಜುಲೈನಲ್ಲಿ ರಾಜ್ಯ ಸರ್ಕಾರ ತೆರಿಗೆದಾರರಿಗೆ ವಿದ್ಯುತ್ ಸಬ್ಸಿಡಿಯನ್ನು ಹಿಂಪಡೆದು, ಬಿಪಿಎಲ್, ಐಆರ್‌ಡಿಪಿ ಮತ್ತು ದುರ್ಬಲ ವರ್ಗದ ಜನರಿಗೆ ಮಾತ್ರ ಈ ಸಬ್ಸಿಡಿ ನಿಗದಿಪಡಿಸಿತು. 2023-24ರಲ್ಲಿ ವಿದ್ಯುತ್‌ ಹಣ ಪಾವತಿ ದುಬಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಈಗಾಗಲೇ 86,589 ಕೋಟಿ ರೂ. ಸಾಲದ ಹೊರೆಯಲ್ಲಿ ಸಿಲುಕಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಸಾಲದ ಪ್ರಮಾಣ 1 ಲಕ್ಷ ಕೋಟಿ ತಲುಪುವ ನಿರೀಕ್ಷೆಯಿದೆ ಎಂದು ಆರ್ಥಿಕ ತಜ್ಞರು ಉಲ್ಲೇಖಿಸಿದ್ದಾರೆ.

    ಇನ್ನೂ ಮಂತ್ರಿಗಳಿಗೆ ವೇತನ ಕಡಿತಗೊಳಿಸುವ ಸರ್ಕಾರದ ನಿರ್ಧಾರವನ್ನು ವಿಪಕ್ಷಗಳು ಟೀಕಿಸಿವೆ.

  • 6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?

    6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?

    ಪಾಕಿಸ್ತಾನದಲ್ಲಿ (Pakistan) ಇತ್ತೀಚೆಗೆ ದಾಖಲೆಯ ಸಂಖ್ಯೆಯಲ್ಲಿ ಜನರು ಪಲಾಯನಗೈಯುತ್ತಿದ್ದಾರೆ. ಕೇವಲ ಕಳೆದ 6 ತಿಂಗಳಲ್ಲಿ ಬರೋಬ್ಬರಿ 8 ಲಕ್ಷ ಜನ ದೇಶ ತೊರೆದಿದ್ದಾರೆ. ಅದರಲ್ಲೂ ಹೆಚ್ಚಾಗಿ ವೈದ್ಯರು, ಎಂಜಿನಿಯರ್‌ಗಳು, ಮಾಹಿತಿ ತಂತ್ರಜ್ಞಾನ ತಜ್ಞರು ಸೇರಿದಂತೆ ಬಹುತೇಕ ವಿದ್ಯಾವಂತರೇ ಇತರ ದೇಶಗಳಿಗೆ ಪರಾರಿಯಾಗುತ್ತಿದ್ದಾರೆ.

    ಕಳೆದ ಹಲವು ತಿಂಗಳುಗಳಿಂದ ಪಾಕಿಸ್ತಾನದ ಆರ್ಥಿಕತೆ ಭಾರೀ ಕುಸಿತ (Economic Crisis) ಕಂಡಿದೆ. ಹಣದುಬ್ಬರ, ನಿರುದ್ಯೋಗ, ಅನಿಶ್ಚಿತ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಚಿಂತಿತರಾಗಿರೋ ಲಕ್ಷಾಂತರ ಜನರು ಉದ್ಯೋಗ ಹುಡುಕಲು ಇತರ ದೇಶಗಳಿಗೆ ತೆರಳುತ್ತಿದ್ದಾರೆ. ಆದರೂ ಅಂಕಿ ಅಂಶಗಳು ಒಂದು ಲೆಕ್ಕ ತೋರಿಸಿದರೆ ಅದರ ಅರ್ಧದಷ್ಟು ಜನರು ಅಕ್ರಮವಾಗಿಯೇ ಇತರ ದೇಶಗಳಿಗೆ ಪಲಾಯನಗೈಯುತ್ತಿದ್ದಾರೆ ಎಂದು ವರದಿಯಾಗಿದೆ.

    ಪಾಕ್ ತೊರೆದಿರೋರು ಎಷ್ಟು ಜನ?
    ಪಾಕಿಸ್ತಾನ ಸ್ಟ್ಯಾಟಿಸ್ಟಿಕ್ಸ್ ಬ್ಯೂರೋ ಅಂಕಿಅಂಶದ ಪ್ರಕಾರ ಈ ವರ್ಷದ ಜೂನ್‍ವರೆಗೆ 8.32 ಲಕ್ಷ ಪಾಕಿಸ್ತಾನಿಯರು ತಮ್ಮ ದೇಶವನ್ನು ತೊರೆದಿದ್ದಾರೆ. ಅದರಲ್ಲಿ ಸುಮಾರು 4 ಲಕ್ಷ ಜನ ವಿದ್ಯಾವಂತರು ಹಾಗೂ ಉನ್ನತ ಹುದ್ದೆ ಹೊಂದಿದವರೇ ಆಗಿದ್ದಾರೆ. ಕಳೆದ ವರ್ಷ ಸುಮಾರು 7.65 ಲಕ್ಷ ಮಂದಿ ಪಾಕಿಸ್ತಾನ ತೊರೆದಿದ್ದರು. ಅವರಲ್ಲಿ ಸುಮಾರು ಒಂದು ಲಕ್ಷ ಜನ ನುರಿತ ವೃತ್ತಿಪರರೇ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನವು ದೊಡ್ಡ ಪ್ರಮಾಣದ ವಲಸೆಗೆ (Immigration) ಸಾಕ್ಷಿಯಾಗಿದ್ದರೂ, ವಿದ್ಯಾವಂತರು ಹಾಗೂ ವೃತ್ತಿಪರರರೇ ದೇಶ ತೊರೆಯುತ್ತಿರುವುದು ಕಾಳಜಿಯ ವಿಷಯವಾಗಿದೆ.

    2021ರಲ್ಲಿ 2.25 ಲಕ್ಷ ಪಾಕಿಸ್ತಾನಿಗಳು ವಿದೇಶ ತೆರಳಿದ್ದಾರೆ. ಇದು 2022ಕ್ಕೆ ಹೋಲಿಸಿದರೆ ವಲಸೆ ಹೋದವರ ಸಂಖ್ಯೆ 3 ಪಟ್ಟು ಹೆಚ್ಚಾಗುತ್ತದೆ. 2020ರಲ್ಲಿ 2.8 ಲಕ್ಷ ಜನ ದೇಶ ತೊರೆದಿದ್ದಾರೆ. ಗಮನಾರ್ಹ ವಿಚಾರ ಏನೆಂದರೆ 2020-21ರಲ್ಲಿ ಪ್ರಪಂಚ ಕೊರೊನಾದ ಸಂಕಷ್ಟ ಎದುರಿಸುತ್ತಿತ್ತು ಮಾತ್ರವಲ್ಲದೇ ಬಹುತೇಕ ದೇಶಗಳಲ್ಲಿ ಪ್ರಯಾಣದ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು.

    ಯಾವ ಪ್ರದೇಶದಲ್ಲಿ ಪಲಾಯನ ಹೆಚ್ಚು?
    ಇಡೀ ಪಾಕಿಸ್ತಾನದಲ್ಲಿ ಭಾರತದ ಜೊತೆ ಗಡಿಯಾಗಿರುವ ಪಂಜಾಬ್ ಪ್ರಾಂತ್ಯದಿಂದಲೇ ಅರ್ಧಕ್ಕಿಂತಲೂ ಹೆಚ್ಚು ಜನರು ದೇಶವನ್ನು ತೊರೆಯುತ್ತಿದ್ದಾರೆ ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯೂನ್ ವರದಿ ತಿಳಿಸಿದೆ. ಸುಮಾರು 27,000 ಜನ ಪಾಕ್ ಆಕ್ರಮಿತ ಕಾಶ್ಮೀರದಿಂದ (POK) ಬಂದವರು ಎನ್ನಲಾಗಿದೆ.

    ಯಾವ ದೇಶಗಳಿಗೆ ಪಲಾಯನ?
    2022ರ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್ ವರದಿಯ ಪ್ರಕಾರ, ಅಧಿಕೃತವಾಗಿ ಹೆಚ್ಚಿನ ಪಾಕಿಸ್ತಾನಿಗಳು ಪಶ್ಚಿಮ ಏಷ್ಯಾದ ದೇಶಗಳಿಗೆ, ಪ್ರಮುಖವಾಗಿ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (UAE) ವಲಸೆ ಹೋಗಿದ್ದಾರೆ. ಯುರೋಪ್‍ನಲ್ಲಿ ಹೆಚ್ಚಿನ ಪಾಕಿಸ್ತಾನಿಗಳು ರೋಮೇನಿಯಾಗೆ ತೆರಳಲು ಹೆಚ್ಚು ಆದ್ಯತೆ ನೀಡಿದ್ದಾರೆ.

    ಇಷ್ಟಕ್ಕೂ ಸುಲಭದ ಸ್ಥಳಾಂತರ ಹೇಗೆ ಸಾಧ್ಯ?
    ಪಾಕಿಸ್ತಾನಿಗಳು ಅಧಿಕೃತವಾಗಿ ಇತರ ದೇಶಗಳಿಗೆ ಸುಲಭವಾಗಿ ಸ್ಥಳಾಂತರವಾಗಲು ಒಂದು ಮುಖ್ಯ ಅನುಕೂಲವೇ ಉಭಯ ಪೌರತ್ವ. ಇತರ ದೇಶಗಳಿಗೆ ವಲಸೆ ಹೋಗುವ ಪಾಕಿಸ್ತಾನಿಯರು ತಮ್ಮ ಪಾಕಿಸ್ತಾನಿ ಪಾಸ್‍ಪೋರ್ಟ್‍ಗಳನ್ನು ಉಳಿಸಿಕೊಂಡು ಅದನ್ನು ಪ್ರಯಾಣಕ್ಕೂ ಬಳಸಬಹುದು. ಈ ಒಂದು ಅನುಕೂಲದಿಂದಾಗಿ ಭ್ರಷ್ಟಾಚಾರ ಎಸಗಿದವರು ಸುಲಭವಾಗಿ ಇತರ ದೇಶಗಳಲ್ಲಿ ಹಣ ಕೂಡಿಟ್ಟು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಪಾಕ್ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಕ್ಯಾಬಿನೆಟ್‍ನಲ್ಲಿದ್ದ 7ಕ್ಕೂ ಹೆಚ್ಚು ಸಚಿವರು ದ್ವಿಪೌರತ್ವ ಅನುಕೂಲದಿಂದ ಬೇರೆ ದೇಶಗಳಲ್ಲಿ ಶಾಶ್ವತ ಮನೆಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ಐಫೆಲ್ ಟವರ್‌ನ ರೋಚಕ ಇತಿಹಾಸ

    ಸಾಲದ ಕೂಪದಲ್ಲಿ ಪಾಕ್:
    ಇದೀಗ ಭ್ರಷ್ಟಾಚಾರ, ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಹಾನಿಗೊಳಗಾಗಿರುವ ಪಾಕಿಸ್ತಾನ ಇತರ ಮೂಲಗಳಿಂದ ಎರವಲು ಪಡೆದ ಹಣದಿಂದ ಆರ್ಥಿಕತೆಯನ್ನು ಸರಿದೂಗಿಸಲು ಶ್ರಮವಹಿಸುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಜುಲೈ 12 ರಂದು ಪಾಕಿಸ್ತಾನಕ್ಕೆ 3 ಬಿಲಿಯನ್ ಡಾಲರ್ ಬೇಲ್‍ಔಟ್ ಪ್ಯಾಕೇಜ್ ಅನ್ನು ನೀಡಿದೆ. ಈ ಮೂಲಕ ಅದರ ಸಾಲ ಮರುಪಾವತಿಯಲ್ಲಿ ಸಹಾಯ ಮಾಡಿದೆ. ಈಗ ಬಾಹ್ಯ ಸಾಲಗಳನ್ನು ತೀರಿಸಲು ಪಾಕ್ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಇದು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗಗಳ ಮೇಲೆಯೂ ಪರಿಣಾಮ ಬೀರುತ್ತಿದೆ.

    ಪಾಕಿಸ್ತಾನ ತನ್ನ ಪ್ರಜೆಗಳನ್ನು ಇತರ ದೇಶಗಳಿಂದ ವಾಪಸ್ ಕರೆತರುವುದು ಅದರ ಆರ್ಥಿಕತೆಯ ಪ್ರಮುಖ ಗುರಿಯಾಗಿದೆ. ಆದರೆ ಇದರಿಂದ ದೇಶದ ವ್ಯಾಪಾರದ ಅಸಮತೋಲನವನ್ನು ಸುಧಾರಿಸಲು ಸಾಧ್ಯವಿಲ್ಲ. ಪಾಕಿಸ್ತಾನ ತನ್ನ ರಫ್ತಿಗಿಂತಲೂ ಆಮದನ್ನು ಹೆಚ್ಚು ಮಾಡುತ್ತಿದೆ. ಅದು ಭಾರತದ ಮೇಲೆ ಕಣ್ಣಿಟ್ಟುಕೊಂಡು ಮಿಲಿಟರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ವ್ಯಯಿಸುತ್ತಿದೆ.

    ಭಯೋತ್ಪಾದನೆ:
    ಇಸ್ಲಾಮಿಕ್ ಮೂಲಭೂತವಾದದ ಕಡೆ ಹೆಚ್ಚು ಗಮನಕೊಡುತ್ತಿರೋ ಪಾಕಿಸ್ತಾನ ಹಿಂದಿನಿಂದಲೂ ಭಾರತದಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಆದರೆ ಇದೇ ಹೆಚ್ಚುತ್ತಿರುವ ಮೂಲಭೂತವಾದದ ಕಾರಣದಿಂದ ಅದರ ಪ್ರವಾಸೋದ್ಯಮ ಕ್ಷೇತ್ರವನ್ನು ಬಹುತೇಕ ಹದಗೆಡಿಸಿಕೊಂಡಿದೆ. ಹತ್ತಿಯನ್ನು ಉತ್ಪಾದಿಸೋ ದೇಶವಾಗಿದ್ದರೂ ಪಾಕಿಸ್ತಾನ ತನ್ನ ಜವಳಿ ಉದ್ಯಮವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ. ಇದನ್ನೂ ಓದಿ: ಕ್ಯಾನ್ಸರ್‌ ಭಯ ಬೇಡ – ಕಿಮೋಥೆರಪಿ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ?

    ಪಾಕಿಸ್ತಾನಿಯರಲ್ಲಿ ಹತಾಶೆ:
    ಇದೆಲ್ಲದರ ನಡುವೆ ಪಾಕಿಸ್ತಾನದ ರಾಜಕೀಯ ಅಸ್ಥಿರತೆ ದೇಶದಲ್ಲಿ ಉದ್ಯಮ ಹಾಗೂ ಕೈಗಾರಿಕೆಗಳನ್ನು ಬದುಕಲು ಬುಡುವುದಿಲ್ಲ, ಅಭಿವೃದ್ಧಿ ಇನ್ನು ದೂರದ ಮಾತು ಎಂದು ವಿದ್ಯಾವಂತರು ದೇಶದ ಕರಾಳ ಭವಿಷ್ಯವನ್ನು ಈಗಾಗಲೇ ಕಂಡಿದ್ದಾರೆ. ಈ ಹಿನ್ನೆಲೆ ಗುಂಪು ಗುಂಪಾಗಿ ಪಾಕಿಸ್ತಾನದಿಂದ ವಲಸೆ ಹೋಗುತ್ತಿದ್ದಾರೆ. ಪಾಕಿಸ್ತಾನವು ಈಗ ಪೂರ್ಣ ಪ್ರಮಾಣದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈಗಾಗಲೇ ಜನರಲ್ಲಿ ಹತಾಶೆ ಮೂಡಿದ್ದು ಲಕ್ಷಾಂತರ ಜನರನ್ನು ದೇಶ ತೊರೆಯುವಂತೆ ಮಾಡುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • UKನಲ್ಲಿ ಆರ್ಥಿಕ ಬಿಕ್ಕಟ್ಟು – ಕಳ್ಳತನಕ್ಕಿಳಿದ ಯುವಜನ

    UKನಲ್ಲಿ ಆರ್ಥಿಕ ಬಿಕ್ಕಟ್ಟು – ಕಳ್ಳತನಕ್ಕಿಳಿದ ಯುವಜನ

    ಲಂಡನ್‌: ಕಳೆದ ಎರಡು ವರ್ಷಗಳಿಂದಲೂ ಬ್ರಿಟಿಷ್‌ ಪ್ರಜೆಗಳು ಸ್ಥಿರವಾದ ಜೀವನ ನಡೆಸಲು ಆರ್ಥಿಕ ಬಿಕ್ಕಟ್ಟಿನ (UK Living Crisis) ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಕುಟುಂಬದ ಅಗತ್ಯತೆಗಳನ್ನ ಪೂರೈಸಲು ಪರದಾಡುವಂತಾಗಿದ್ದು, ಯುವಜನರು ಕಳ್ಳತನಕ್ಕಿಳಿದಿದ್ದಾರೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    2021 ಮತ್ತು 2022ರ ನಡುವೆ ಬ್ರಿಟನ್‌ನಲ್ಲಿ ಜೀವನ ವೆಚ್ಚವೂ ಅತ್ಯಂತ ದುಬಾರಿಯಾಗಿದೆ. ಜೀವನ ನಿರ್ವಹಣೆಗಾಗಿ ಶೇ.10 ರಷ್ಟು ಯುವಜನರು ಕಳ್ಳತನಕ್ಕಿಳಿದಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ನಲ್ಲಿ ಆರ್ಥಿಕ ಬಿಕ್ಕಟ್ಟು – ತೆರಿಗೆ ಹೆಚ್ಚಿಸಿ ವೆಚ್ಚ ಕಡಿತಕ್ಕೆ ಮುಂದಾದ ಸರ್ಕಾರ

    ಸೂಪರ್‌ ಮಾರ್ಕೆಟ್‌ಗಳಲ್ಲಿ ಕೆಲವರು ಆಹಾರ ಸಾಮಗ್ರಿಗಳು, ಮಕ್ಕಳ ಔಷಧಿ, ಹಾಲು ಚೀಸ್‌ನಂತಹ ವಸ್ತುಗಳನ್ನ (Retail Consortium) ಕದ್ದಿರುವುದಾಗಿಯೂ ಒಪ್ಪಿಕೊಂಡಿದ್ದಾರೆ. ಆಹಾರ ಮತ್ತು ಇಂಧನ ವೆಚ್ಚ ದುಬಾರಿಯಾಗಿರುವುದರಿಂದ ಈ ಕೆಲಸಕ್ಕೆ ಯುವಜನರು ಮುಂದಾಗಿರುವುದು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್ – ಸೇನಾ ಕಚೇರಿ ಮೇಲೆ ಬೆಂಕಿ, ದೇಶಾದ್ಯಂತ ಇಂಟರ್‌ನೆಟ್ ಬಂದ್

    ಆಲ್ಕೋಹಾಲ್‌ ಅಲ್ಲದ ಪಾನೀಯಾಗಳ ಬೆಲೆಯೇ ಶೇ.19.1 ರಷ್ಟು ಏರಿಕೆಯಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಈ ಬೆಲೆ ಸಾಕಷ್ಟು ಹೆಚ್ಚಾಗಿದ್ದು, ಆಹಾರ ಪದಾರ್ಥಗಳ ಆಮದು ಪ್ರಮಾಣವೂ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.

  • ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನಂತೆ ಅಮೆರಿಕದ 186 ಬ್ಯಾಂಕ್‌ಗಳು ಅಪಾಯದಲ್ಲಿ – ಅಧ್ಯಯನ

    ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನಂತೆ ಅಮೆರಿಕದ 186 ಬ್ಯಾಂಕ್‌ಗಳು ಅಪಾಯದಲ್ಲಿ – ಅಧ್ಯಯನ

    ನ್ಯೂಯಾರ್ಕ್: ಅಮೆರಿಕದ (America) ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ (Silicon Valley Bank) ನಷ್ಟದಿಂದಾಗಿ ಬಾಗಿಲು ಮುಚ್ಚಿದೆ. ಅದೇ ರೀತಿ ದೇಶದ 186 ಬ್ಯಾಂಕ್‌ಗಳು ಅಪಾಯದಲ್ಲಿವೆ ಎಂದು ಅಧ್ಯಯನವೊಂದು ತಿಳಿಸಿದೆ. ವಿಮೆ ಮಾಡಿಸದೇ ಇರುವ ಠೇವಣಿಗಳು ಹಾಗೂ ಹೆಚ್ಚುತ್ತಿರುವ ಬಡ್ಡಿದರಗಳೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

    ಸಾಮಾಜಿಕ ವಿಜ್ಞಾನ ಸಂಶೋಧನಾ ನೆಟ್‌ವರ್ಕ್ (Social Science Research Network) ಅಧ್ಯಯನವು ಈ ಮಾಹಿತಿಯನ್ನು ಬಹಿರಂಗಪಡಿಸಿದೆ. 186 ಬ್ಯಾಂಕ್‌ಗಳು ವಿಮೆ ಮಾಡದ ಠೇವಣಿದಾರರಲ್ಲಿ ಅರ್ಧದಷ್ಟು ಹಣವನ್ನು ಹಿಂಪಡೆದರೆ ವಿಫಲವಾಗಬಹುದು ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ನನ್ನನ್ನು ಕೋರ್ಟ್‌ನಲ್ಲೂ ಕೊಲ್ಬೋದು – ಪಾಕ್ ನ್ಯಾಯಮೂರ್ತಿಗೆ ಪತ್ರ ಬರೆದ ಇಮ್ರಾನ್ ಖಾನ್

    ಗ್ರಾಹಕರ ಠೇವಣಿ ಹಣವನ್ನು ಬಾಂಡ್‌ ಖರೀದಿಗೆ ಬ್ಯಾಂಕ್‌ ಬಳಸಿತು. ಬಾಂಡ್‌ಗಳಿಂದ ಬರಬೇಕಿದ್ದ ಆದಾಯ ಕುಸಿದಿದ್ದರಿಂದ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಅಲ್ಲದೇ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್ ರಿಸರ್ವ್, ಬಡ್ಡಿದರಗಳಲ್ಲಿ ಏರಿಕೆ ಮಾಡಿದೆ. ಇದರಿಂದ ನವೋದ್ಯಮಗಳು ಸಹ ಬಂದ್‌ ಆಗುತ್ತಿವೆ. ಪರಿಣಾಮವಾಗಿ ಬ್ಯಾಂಕ್‌ಗಳು ಸಂಕಷ್ಟದ ಸುಳಿಗೆ ಸಿಲುಕಿವೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಿದೆ.

    ನವೋದ್ಯಮಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದ ಅಮೆರಿಕದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ದಿವಾಳಿಯಾಗಿ ಕೆಲ ದಿನಗಳ ಹಿಂದೆಯಷ್ಟೇ ಬಾಗಿಲು ಮುಚ್ಚಿತು. ಇದರ ಬೆನ್ನಲ್ಲೇ ಸಿಗ್ನೇಚರ್‌ ಬ್ಯಾಂಕ್‌ ಸಹ ಆರ್ಥಿಕ ಸಂಕಷ್ಟದಿಂದ ಬಂದ್‌ ಆಯಿತು. ಹೀಗಾಗಿ ಅಮೆರಿಕದ ಹಲವು ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ಕುರಿತು ಸಂಶೋಧನೆ ನಡೆಸಲಾಗಿದೆ. ಇದನ್ನೂ ಓದಿ: 92ನೇ ವಯಸ್ಸಿನಲ್ಲಿ 5ನೇ ಮದುವೆ – ಇದು ಕೊನೆಯದ್ದು ಎಂದ ಮುರ್ಡೋಕ್‌

  • ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ರೆ ನೀವು ಕ್ರಿಕೆಟ್‌ ನೋಡಿ ಎಂಜಾಯ್‌ ಮಾಡ್ತಿದ್ದೀರಾ – ಪಾಕ್‌ ಪ್ರಧಾನಿಗೆ ಜನ ಕ್ಲಾಸ್‌

    ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ರೆ ನೀವು ಕ್ರಿಕೆಟ್‌ ನೋಡಿ ಎಂಜಾಯ್‌ ಮಾಡ್ತಿದ್ದೀರಾ – ಪಾಕ್‌ ಪ್ರಧಾನಿಗೆ ಜನ ಕ್ಲಾಸ್‌

    ಇಸ್ಲಾಮಾಬಾದ್: ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ತಲೆದೂರಿರುವ ಸಂದರ್ಭದಲ್ಲಿ ಪಾಕಿಸ್ತಾನ (Pakistan) ಪ್ರಧಾನಿ ಶೆಹಬಾಜ್‌ ಶರೀಫ್‌ (Shehbaz Sharif) ಅವರ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

    ಇಡೀ ದೇಶವೇ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಆಹಾರ ಪದಾರ್ಥಗಳಿಗೆ ಹಾಹಾಕಾರ ಶುರುವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಲ್ಲದೇ ರಾಜಕೀಯ ಬಿಕ್ಕಟ್ಟು ಕೂಡ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಪಾಕ್‌ ಪ್ರಧಾನಿ ಕ್ರಿಕೆಟ್‌ ವೀಕ್ಷಿಸಿ ಎಂಜಾಯ್‌ ಮಾಡುತ್ತಿದ್ದಾರೆಂದು ದೇಶದ ಜನತೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮತ್ತೆ ಇಂಧನ ಬೆಲೆ ಏರಿಕೆ – 1 ಲೀಟರ್ ಪೆಟ್ರೋಲ್‌ಗೆ 272 ರೂ.

    ʼಪವರ್‌ ಹಿಟ್ಟಿಂಗ್‌ ಮಾಡಿದ ಮತ್ತೊಬ್ಬ ಅಫ್ರಿದಿʼ ಎಂದು ಪಾಕಿಸ್ತಾನ ಸೂಪರ್‌ ಲೀಗ್‌ಗೆ ಸಂಬಂಧಿಸಿದಂತೆ ಶಾಹೀನ್ ಅಫ್ರಿದಿಯನ್ನು ಹಾಡಿಹೊಗಳಿ ಪಾಕ್‌ ಪ್ರಧಾನಿ ಟ್ವೀಟ್‌ ಮಾಡಿದ್ದರು. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

    ಮತ್ತೊಂದು ಟ್ವೀಟ್‌ನಲ್ಲಿ, ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಸ್ಥಳೀಯ ಸರ್ಕಾರ ಮತ್ತು ನಿರ್ವಾಹಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಪಾಕ್‌ ಪ್ರಧಾನಿ ಟ್ವೀಟ್‌ಗೆ ದೇಶದ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲು ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸುವ ಕಡೆ ಗಮನಕೊಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೋರ್ಟ್‌ನತ್ತ ತೆರಳಿದ ಪಾಕ್ ಮಾಜಿ ಪ್ರಧಾನಿ – ಇಮ್ರಾನ್ ಮನೆಗೆ ನುಗ್ಗಿದ ಪೊಲೀಸರು

    ಪ್ರಧಾನಿ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಮಿಸ್ಟರ್ ಪ್ರಧಾನ ಮಂತ್ರಿಗಳು ಕ್ರಿಕೆಟ್ ನೋಡುವುದರಲ್ಲಿ ನಿರತರಾಗಿದ್ದಾರೆ. ಏಕೆಂದರೆ ಪಾಕಿಸ್ತಾನವು ಅತ್ಯಧಿಕ ಹಣದುಬ್ಬರ ದರವನ್ನು ದಾಖಲಿಸಿದೆ. ಇದುವರೆಗೆ IMFನೊಂದಿಗೆ ಯಾವುದೇ ಒಪ್ಪಂದ ಸಾಧ್ಯವಾಗಿಲ್ಲ. ತಾಯ್ನಾಡಿಗಾಗಿ ಕಳೆದ 11 ತಿಂಗಳಲ್ಲಿ ನಿಮ್ಮ ಉತ್ತಮ ಸೇವೆಗಳಿಗೆ ತುಂಬಾ ಧನ್ಯವಾದಗಳು ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.

  • ಈ ವರ್ಷದಲ್ಲೇ ಮೋದಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡ್ತಾರೆ – RAW ಮಾಜಿ ನಿರ್ದೇಶಕ

    ಈ ವರ್ಷದಲ್ಲೇ ಮೋದಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡ್ತಾರೆ – RAW ಮಾಜಿ ನಿರ್ದೇಶಕ

    ಇಸ್ಲಾಮಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ವರ್ಷದಲ್ಲಿ ಪಾಕಿಸ್ತಾನವನ್ನು ಸಂಕಷ್ಟದಿಂದ ಪಾರು ಮಾಡ್ತಾರೆ ಎಂದು ಪಾಕ್ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (RAW) ಮಾಜಿ ನಿರ್ದೇಶಕ ಅಮರ್ಜಿತ್ ಸಿಂಗ್ ದುಲಾತ್ (Amarjit Singh Dulat) ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನ ಕೆಲ ತಿಂಗಳಿನಿಂದ ಹಣಕಾಸಿನ ಸವಾಲುಗಳನ್ನು ಎದುರಿಸುತ್ತಿದ್ದು, ಆರ್ಥಿಕ ನೆರವಿನ ಅವಶ್ಯಕತೆಯಿದೆ. ಇಂತಹ ಆರ್ಥಿಕ ಬಿಕ್ಕಟ್ಟಿನಿಂದ ನರೇಂದ್ರ ಮೋದಿ ಅವರು ದೇಶವನ್ನು ಪಾರುಮಾಡಬಹುದೆಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

    Pakistan wheat flour

    ಮುಂದುವರಿದು, ಪಾಕಿಸ್ತಾನದೊಂದಿಗೆ (Pakistan) ಮಾತುಕತೆ ನಡೆಸಲು ಪ್ರತಿ ಸಮಯವೂ ಉತ್ತಮ ಸಮಯವಾಗಿದೆ. ಅದಕ್ಕಾಗಿ ನಾವು ನೆರೆಹೊರೆಯವರನ್ನೂ ತೊಡಗಿಸಿಕೊಳ್ಳಬೇಕು. ಒಟ್ಟಿನಲ್ಲಿ ಮೋದಿ ಈ ವರ್ಷದಲ್ಲಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡುತ್ತಾರೆ ಅನ್ನೋದು ನನ್ನ ಊಹೆ. ಆದ್ರೆ ಈ ಬಗ್ಗೆ ಆಂತರಿಕ ಮಾಹಿತಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ರಾತ್ರೋ ರಾತ್ರಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ!

    Pakistan

    ಈ ಕುರಿತು ದೆಹಲಿಯಲ್ಲಿ ಆಯೋಜಿಸಿದ್ದ ಏಷ್ಯಾ ಆರ್ಥಿಕ ಸಂವಾದದಲ್ಲಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಾಲ ನೀಡಿದ ಚೀನಾ – ಅಮೆರಿಕ ಕಳವಳ

    ಭಾರತ ಯಾವುದೇ ನೆರೆಯ ದೇಶಕ್ಕೆ ಸಹಾಯ ಮಾಡುವ ಮುನ್ನ ಸಾರ್ವಜನಿಕರ ಭಾವನೆಗಳನ್ನೂ ಎದುರುನೋಡುತ್ತದೆ. ಕಳೆದ ಕೆಲ ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತೀರಾ ಹದಗೆಟ್ಟಿದೆ. ಹಾಗಾಗಿ ನಾನು ಸಹ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಸಾರ್ವಜನಿಕ ಭಾವನೆಯನ್ನ ಎದುರು ನೋಡುತ್ತೇನೆ. ನನಗೆ ನನ್ನ ಜನರ ಮಿಡಿತ ಗೊತ್ತಿದೆ. ನಿಮಗೆ ಉತ್ತರ ತಿಳಿದಿದೆ ಎಂದು ಭಾವಿಸುತ್ತೇನೆ ಎಂದು ಪರೋಕ್ಷವಾಗಿ ಆರ್ಥಿಕ ಸಹಾಯಕ್ಕೆ ನಿರಾಕರಿಸಿದ್ದಾರೆ.

  • ಪಾಕಿಸ್ತಾನಕ್ಕೆ ಸಾಲ ನೀಡಿದ ಚೀನಾ – ಅಮೆರಿಕ ಕಳವಳ

    ಪಾಕಿಸ್ತಾನಕ್ಕೆ ಸಾಲ ನೀಡಿದ ಚೀನಾ – ಅಮೆರಿಕ ಕಳವಳ

    ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ (Pakistan) ಆಪತ್ಭಾಂದವ, ಮಿತ್ರನೇ ಆಗಿರುವ ಚೀನಾ (China) 5,804 ಕೋಟಿ ರೂ. (700 ಮಿಲಿಯನ್‌ ಡಾಲರ್‌) ಸಾಲ ನೀಡಿದೆ.

    ಈ ವಾರದ ಆರಂಭದಲ್ಲಿ ಪಾಕಿಸ್ತಾನವು ಚೀನಾದಿಂದ ಸಹಾಯ ಪಡೆಯಲಿದೆ ಎಂದು ಹಣಕಾಸು ಸಚಿವ ಇಶಾಕ್ ದಾರ್ ಎಂದು ಹೇಳಿದ್ದರು. ಅದರಂತೆ ಹಣವನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಹಣ್ಣು-ತರಕಾರಿಗಳಿಗೆ ಹಾಹಾಕಾರ ಸಾಧ್ಯತೆ

    “ಚೀನಾ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (SBP) 700 ಮಿಲಿಯನ್ ಡಾಲರ್‌ ಹಣವನ್ನು ಸ್ವೀಕರಿಸಿದೆ” ಎಂದು ಟ್ವೀಟ್‌ ಮಾಡಿ ತಿಳಿಸಿದ್ದಾರೆ.

    ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (IMF) ನೆರವು ಕೇಳಿತ್ತು. ಇದೇ ಸಂದರ್ಭದಲ್ಲಿ ಚೀನಾ ಆರ್ಥಿಕ ಸಹಾಯ ನೀಡಿದೆ. ಚೀನಾದ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಪಾಕ್‌ ಸರ್ಕಾರ ಕೃತಜ್ಞತೆ ಸಲ್ಲಿಸಿದೆ. ಇದನ್ನೂ ಓದಿ: ಸಚಿವರು ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವಂತಿಲ್ಲ, 5 ಸ್ಟಾರ್‌ ಹೋಟೆಲ್‌ನಲ್ಲಿ ಉಳಿಯುವಂತಿಲ್ಲ – ಪಾಕ್‌ ಸರ್ಕಾರ

    ಹಣಕಾಸು ನೆರವಿನ ವಿಚಾರವಾಗಿ ಐಎಂಎಫ್‌ನೊಂದಿಗೆ ಪಾಕಿಸ್ತಾನ ಸರ್ಕಾರ ನಿರಂತರ ಮಾತುಕತೆ ನಡೆಸುತ್ತಿದೆ. ಆದರೆ ಇದುವರೆಗೂ ನೆರವು ಸಿಕ್ಕಿಲ್ಲ. ಇಂತಹ ಸನ್ನಿವೇಶದಲ್ಲಿ ಚೀನಾ ಸಾಲ ನೀಡಿರುವುದು ಅಮೆರಿಕ ಆತಂಕಕ್ಕೆ ಕಾರಣವಾಗಿದೆ.

    “ಭಾರತದ (India) ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ಹಾಗೂ ನೇಪಾಳಕ್ಕೆ ಚೀನಾ ನೀಡಿದೆ. ಇದು ನಿಜಕ್ಕೂ ಕಳವಳಕಾರಿಯಾದದ್ದು. ಸಾಲ ನೀಡುವ ಮೂಲಕ ಈ ರಾಷ್ಟ್ರಗಳನ್ನು ಬಲವಂತವಾಗಿ ಹತೋಟಿಗೆ ತರುವ ಸಾಧ್ಯತೆ ಇದೆ” ಎಂದು ದಕ್ಷಿಣ ಹಾಗೂ ಮಧ್ಯ ಏಷ್ಯಾಗೆ ಸಹ ಕಾರ್ಯದರ್ಶಿಯಾಗಿರುವ ಡೊನಾಲ್ಡ್‌ ಲು ಹೇಳಿದ್ದಾರೆ.

  • ಸಚಿವರು ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವಂತಿಲ್ಲ, 5 ಸ್ಟಾರ್‌ ಹೋಟೆಲ್‌ನಲ್ಲಿ ಉಳಿಯುವಂತಿಲ್ಲ – ಪಾಕ್‌ ಸರ್ಕಾರ

    ಸಚಿವರು ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವಂತಿಲ್ಲ, 5 ಸ್ಟಾರ್‌ ಹೋಟೆಲ್‌ನಲ್ಲಿ ಉಳಿಯುವಂತಿಲ್ಲ – ಪಾಕ್‌ ಸರ್ಕಾರ

    ಇಸ್ಲಾಮಾಬಾದ್: ಸಚಿವರು ಇನ್ಮುಂದೆ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣ ಮಾಡುವಂತಿಲ್ಲ. ಅಷ್ಟೇ ಅಲ್ಲದೇ ಪಂಚತಾರಾ ಹೋಟೆಲ್‌ಗಳಲ್ಲಿ ಉಳಿಯುವಂತಿಲ್ಲ ಎಂದು ಪಾಕಿಸ್ತಾನ ಸರ್ಕಾರ (Pakistan Government) ಸೂಚನೆ ನೀಡಿದೆ.

    ತಮ್ಮ ಸಂಬಳವನ್ನು ಕಡಿತ ಮಾಡಲು ಒಪ್ಪಿಕೊಂಡಿದ್ದಕ್ಕೆ ಸಚಿವರಿಗೆ ಧನ್ಯವಾದಗಳು ಎಂದು ಸರ್ಕಾರ ಹೇಳಿದೆ. ಹಣದುಬ್ಬರ, ಸಾಲದ ಹೊರೆ ತಪ್ಪಿಸಲು ವೆಚ್ಚ ಕಡಿತದ ಕ್ರಮಗಳನ್ನು ಸರ್ಕಾರ ಅನಾವರಣಗೊಳಿಸಿದೆ. ಜುಲೈನಲ್ಲಿ ಮುಂದಿನ ಬಜೆಟ್‌ನಲ್ಲಿ ಸರ್ಕಾರವು ಮತ್ತಷ್ಟು ಕಠಿಣ ಕ್ರಮಗಳನ್ನು ಅನುಸರಿಸಲಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧಕ್ಕೆ 1 ವರ್ಷ – ಮತದಾನದಿಂದ ದೂರ ಉಳಿದ ಭಾರತ

    ಇಸ್ಲಾಮಾಬಾದ್‌ನಲ್ಲಿ ನಡೆದ ಕ್ಯಾಬಿನೆಟ್ ಸಭೆಯ ನಂತರ ಮಾತನಾಡಿದ ಅವರು, ಇದು ಈ ಸಮಯದ ಅಗತ್ಯವಾಗಿದೆ. ಸಮಯವು ನಮ್ಮಿಂದ ಸಂಯಮ, ಸರಳತೆ ಮತ್ತು ತ್ಯಾಗವನ್ನು ಬಯಸಿದೆ ಎಂದು ಷರೀಫ್‌ ತಿಳಿಸಿದ್ದಾರೆ. ಇದನ್ನೂ ಓದಿ: Allah ಮೋದಿಯನ್ನು ನಮಗೆ ಕೊಡು, ಅವರೇ ನಮ್ಮ ದೇಶ ಆಳಲಿ: ದೇವರ ಮೊರೆಹೋದ ಪಾಕ್ ಪ್ರಜೆ

    ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 5ನೇ ರಾಷ್ಟ್ರವಾಗಿರುವ ಪಾಕಿಸ್ತಾನ ದೇಶವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ದೇಶದ ದುರ್ಬಲ ಪರಿಸ್ಥಿತಿ ವಿರುದ್ಧ ಜನಸಾಮಾನ್ಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಬಿಕಟ್ಟಿನ ಸನ್ನಿವೇಶ ನಿಭಾಯಿಸಲು ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಉನ್ನತ ಶ್ರೇಣಿಯ ಸರ್ಕಾರಿ ಅಧಿಕಾರಿಗಳಲ್ಲದೆ ಹಲವಾರು ಫೆಡರಲ್ ಮತ್ತು ರಾಜ್ಯ ಸಚಿವರು ತಮ್ಮ ಸಂಬಳ ಮತ್ತು ಸವಲತ್ತುಗಳನ್ನು ತ್ಯಜಿಸಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ ಎಂದು ಷರೀಫ್ ಹೇಳಿದರು. ಮುಂದಿನ ವರ್ಷದವರೆಗೆ ಐಷಾರಾಮಿ ವಸ್ತುಗಳು ಮತ್ತು ಕಾರುಗಳ ಖರೀದಿಯನ್ನು ಸರ್ಕಾರ ನಿಷೇಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.

    ಏತನ್ಮಧ್ಯೆ, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (SBP) 2022ರ ಆರಂಭದಿಂದ ಬೆಂಚ್‌ಮಾರ್ಕ್ ದರವನ್ನು 725 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ. SBP ತನ್ನ ಮುಂದಿನ ನೀತಿ ಪರಾಮರ್ಶೆಯನ್ನು ಮಾರ್ಚ್ 16 ರಂದು ನಡೆಸಲಿದೆ. ಇದನ್ನೂ ಓದಿ: ಯೋಧರಿಗೆ ಆಹಾರ ನೀಡಲು ಒದ್ದಾಡುತ್ತಿದೆ ಪಾಕ್!

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Allah ಮೋದಿಯನ್ನು ನಮಗೆ ಕೊಡು, ಅವರೇ ನಮ್ಮ ದೇಶ ಆಳಲಿ: ದೇವರ ಮೊರೆಹೋದ ಪಾಕ್ ಪ್ರಜೆ

    Allah ಮೋದಿಯನ್ನು ನಮಗೆ ಕೊಡು, ಅವರೇ ನಮ್ಮ ದೇಶ ಆಳಲಿ: ದೇವರ ಮೊರೆಹೋದ ಪಾಕ್ ಪ್ರಜೆ

    ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ (Economic Crisis) ಬೇಸತ್ತಿರುವ ಪಾಕಿಸ್ತಾನದ (Pakistan) ಪ್ರಜೆಯೊಬ್ಬರು ಇದೀಗ `ಅಲ್ಲಾ (Allah) ಮೋದಿಯನ್ನು (Narendra Modi) ನಮಗೆ ಕೊಡು, ಅವರೇ ನಮ್ಮ ದೇಶವನ್ನಾಳಲಿ’ ಎಂದು ದೇವರ ಮೊರೆ ಹೋಗಿರುವ ಪ್ರಸಂಗವೊಮದು ನಡೆದಿದೆ.

    Pakistan

    ಹೌದು. ವಿಶ್ವದಾದ್ಯಂತ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನಪ್ರಿಯತೆ ಹೆಚ್ಚಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದ ಪ್ರಜೆಯೊಬ್ಬ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಹಾಡಿಹೊಗಳಿದ ವೀಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು – ನಮ್ಮ ದೇಶ ದಿವಾಳಿಯಾಗಿದೆ ಎಂದ ರಕ್ಷಣಾ ಸಚಿವ

    ಸ್ವತಃ ತಮ್ಮ ದೇಶದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಮೋದಿ ಅವರೇ ಪಾಕಿಸ್ತಾನವನ್ನು ಆಳುತ್ತಿದ್ದರೆ ಚೆನ್ನಾಗಿರುತ್ತಿತ್ತು. ಮೋದಿ ಪಾಕ್‌ನಲ್ಲಿ ಇದ್ದಿದ್ದರೇ ಸಮಂಜಸವಾದ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಬಹುದಿತ್ತು ಎಂದು ಅಲವತ್ತುಕೊಂಡಿದ್ದಾರೆ. ಇದನ್ನೂ ಓದಿ: ಯೋಧರಿಗೆ ಆಹಾರ ನೀಡಲು ಒದ್ದಾಡುತ್ತಿದೆ ಪಾಕ್!

    ಪಾಕಿಸ್ತಾನವು ಭಾರತದಿಂದ ಬೇರ್ಪಟ್ಟಿಲ್ಲ ಎಂದು ನಾನು ಭಾವಿಸುತ್ತೇನೆ. ನಾವಿಲ್ಲಿ ಟೊಮೆಟೋವನ್ನ ಕೆ.ಜಿ 20 ರೂ., 1 ಕೆಜಿ ಕೋಳಿ 150 ರೂ. ಮತ್ತು ಪೆಟ್ರೋಲ್‌ಗೆ 1 ಲೀಟರ್ 50 ರೂ.ಗೆ (ಪಾಕಿಸ್ತಾನದ ರೂಪಾಯಿ ದರದಲ್ಲಿ) ಖರೀದಿಸುತ್ತೇವೆ ಎಂದಿದ್ದಾರೆ.

    Khawaja Asif

    ನಾವು ಇಸ್ಲಾಂ ರಾಷ್ಟ್ರವನ್ನು ಪಡೆದಿರುವುದು ದುರದೃಷ್ಟಕರ, ಇಲ್ಲಿ ಇಸ್ಲಾಂ ಅನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. `ಅಲ್ಲಾ ನಮಗೆ ಮೋದಿ ಸಿಕ್ಕರೇ ಸಾಕು ನವಾಜ್ ಷರೀಫ್, ಇಮ್ರಾನ್‌ಖಾನ್, ಬೆನಜೀರ್, ಜನರಲ್ ಮುಷರಫ್ ಯಾರೊಬ್ಬರೂ ಬೇಡ. ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರ ಆಡಳಿತದಲ್ಲಿ ಬದಕುಲು ನಾವು ಬಯಸುತ್ತೇವೆ. ಮೋದಿ ಎಲ್ಲ ರೀತಿಯ ಅಂಶಗಳನ್ನು ನಿಭಾಯಿಸುತ್ತಿದ್ದಾರೆ. ಆದ್ದರಿಂದಲೇ ಭಾರತ ಆರ್ಥಿಕತೆಯಲ್ಲಿ ವಿಶ್ವದ 5ನೇ ಅತಿದೊಡ್ಡ ರಾಷ್ಟ್ರವಾಗಿದೆ. ಅದಕ್ಕಾಗಿ `ಅಲ್ಲಾ ಮೋದಿಯನ್ನು ನಮಗೆ ನೀಡಿ, ಅವರೇ ನಮ್ಮ ದೇಶವನ್ನು ಆಳಲಿ’ ಎಂದು ನಾನು ಸರ್ವಶಕ್ತನನ್ನ ಪ್ರಾರ್ಥಿಸುವುದಾಗಿ ಭಾವುಕರಾಗಿದ್ದಾರೆ.

    Khawaja Asif Shehbaz Sharif

    ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಸ್ವತಃ ರಕ್ಷಣಾ ಸಚಿವರೇ ನಗದು ಕೊರತೆಯಿಂದ ನಮ್ಮ ದೇಶ ದಿವಾಳಿಯಾಗಿದೆ ಎಂಬುದಾಗಿ ಒಪ್ಪಿಕೊಂಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k