Tag: ಆರ್ಥಿಕ ಕುಸಿತ

  • ಮಹಿಳೆಯರು, ಮಕ್ಕಳು ಭವಿಷ್ಯದ ಆತಂಕದಲ್ಲಿ ಬದುಕುತ್ತಿದ್ದಾರೆ: ವತ್ಸಲಾ ವರತ್ತನ

    ಮಹಿಳೆಯರು, ಮಕ್ಕಳು ಭವಿಷ್ಯದ ಆತಂಕದಲ್ಲಿ ಬದುಕುತ್ತಿದ್ದಾರೆ: ವತ್ಸಲಾ ವರತ್ತನ

    ಕೊಲಂಬೋ: ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿನ ಈಗಾಗಲೇ ಆರ್ಥಿಕ ಅರಾಜಕತೆ ಉಂಟಾಗಿದೆ. ವಿದ್ಯುತ್ ಪೂರೈಕೆ ಇಲ್ಲ, ತೈಲ ಲಭಿಸುತ್ತಿಲ್ಲ. ಕೈಗೆಟುವ ಬೆಲೆಯಲ್ಲಿ ಆಹಾರ ಪದಾರ್ಥಗಳು ಸಿಗುತ್ತಿಲ್ಲ. ಪರಿಸ್ಥಿತಿ ಎದುರಿಸಲು ಸಾಧ್ಯವಾಗದೇ ಅನೇಕ ಜನರು ವಲಸೆ ಹೋಗಿದ್ದಾರೆ ಎನ್ನುವ ಮಾಹಿತಿ ಈಗಾಗಲೇ ತಿಳಿದು ಬಂದಿದೆ. ಈ ನಡುವೆ ಪ್ರಸ್ತುತ ಶ್ರೀಲಂಕಾ ಸ್ಥಿತಿಗತಿಯ ಕುರಿತು ಶ್ರೀಲಂಕಾ ರಕ್ಷಣಾ ಸಚಿವಾಲಯದ ಅಭಿವೃದ್ಧಿ ಅಧಿಕಾರಿ ವತ್ಸಲಾ ವರತ್ತನ ಅವರು ಅಲ್ಲಿನ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.

    ಪಬ್ಲಿಕ್ ಟಿವಿ ಡಿಜಿಟಲ್‌ಗೆ ಪ್ರತಿಕ್ರಿಯಿಸಿದ ಅವರು, ಶ್ರೀಲಂಕಾ ಪ್ರಸ್ತುತ ದೊಡ್ಡ ಮಟ್ಟದ ಆರ್ಥಿಕ ಹಿಂಜರಿತ ಎದುರಿಸುತ್ತಿದೆ. ದಿನದಿಂದ ದಿನಕ್ಕೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂಧನ ಕೊರತೆಯಿಂದಾಗಿ ಸಾರ್ವಜನಿಕ ಸಾರಿಗೆ ದರಗಳು ಹೆಚ್ಚಾಗಿವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮುಸ್ಲಿಮರ ಮೇಲಿನ ಹಿಂಸಾಚಾರ ನೋಡಿ ಬೇಸರವಾಗಿದೆ: ಸೂಪರ್‌ ಮಾಡೆಲ್‌ ಪದ್ಮಾ ಲಕ್ಷ್ಮೀ

    srilanka

    ಮಹಿಳೆಯರು, ಮಕ್ಕಳು ಸೇರಿದಂತೆ ಇಡೀ ಶ್ರೀಲಂಕಾ ಜನತೆ ಭವಿಷ್ಯದ ಆತಂಕದಲ್ಲಿ ಬದುಕುತ್ತಿದ್ದಾರೆ. ಸಿಗುವ ಕೂಲಿಯಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಬಡವರು ಆಹಾರ ಕೊಳ್ಳಲು ಕಷ್ಟಪಡುತ್ತಿದ್ದರೆ, ಇತರರು ಹೆಚ್ಚಿನ ಹಣ ವ್ಯಯಿಸಿ ಆಹಾರ ಕೊಂಡುಕೊಳ್ಳುತ್ತಿದ್ದಾರೆ. ಅನೇಕ ಜನರು ದೇಶವನ್ನೇ ತೊರೆಯುತ್ತಿದ್ದಾರೆ. ನಮ್ಮ ಸುಂದರ ದೇಶಕ್ಕೆ ಏನಾಯಿತು ಎಂಬ ಪ್ರಶ್ನೆಗೆ ಉತ್ತರವೂ ನಮಗೆ ತಿಳಿದಿಲ್ಲ. ಇದು ತುಂಬಾ ದುಃಖವಾಗಿದೆ. ಸದ್ಯಕ್ಕೆ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಆಂದೋಲನ ನಡೆಯುತ್ತಿದೆ. ಮುಂದೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ.. ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಕಲಿ ಶಸ್ತ್ರಾಸ್ತ್ರ ಪರವಾನಗಿ ದಂಧೆ – ನಾಲ್ವರು ಅರೆಸ್ಟ್

  • ಆರ್ಥಿಕವಾಗಿ ಕುಸಿದ ಬಿಡಿಎ- ಬಿಲ್ ಪಾವತಿಸದ್ದಕ್ಕೆ ಇಂಟರ್ನೆಟ್‌ ಕಡಿತ

    ಆರ್ಥಿಕವಾಗಿ ಕುಸಿದ ಬಿಡಿಎ- ಬಿಲ್ ಪಾವತಿಸದ್ದಕ್ಕೆ ಇಂಟರ್ನೆಟ್‌ ಕಡಿತ

    ಬೆಂಗಳೂರು: ಬಿಡಿಎ ಆರ್ಥಿಕವಾಗಿ ಕುಸಿದಿದ್ದು, ಕಂಪ್ಯೂಟರ್ ಗಳಿಗೆ ಇಂಟರ್ ನೆಟ್ ಸಂಪರ್ಕ ಸಹ ಇಲ್ಲದೆ ಇ-ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.

    ಬಿಡಿಎ ಆರ್ಥಿಕ ಕುಸಿತ ಕಂಡಿದೆ ಎಂದು ಈ ಹಿಂದಿನಿಂದಲೂ ಹೇಳಲಾಗುತ್ತಿತ್ತು. ಆದರೆ ಅದಕ್ಕೆ ಸೂಕ್ತ ಪುರಾವೆ ಸಿಕ್ಕಿರಲಿಲ್ಲ. ಇದೀಗ ಆರ್ಥಿಕ ಕುಸಿತ ಕಂಡಿರುವುದು ಜಗಜ್ಜಾಹೀರಾಗಿದ್ದು, ಇದಕ್ಕೆ ತಾಜಾ ನಿದರ್ಶನ ಎಂಬಂತೆ ಬಿಡಿಎ ಕಚೇರಿಯಲ್ಲಿನ ಕಂಪ್ಯೂಟರ್ ಗಳು ಇಂಟರ್‍ನೆಟ್ ಸಂಪರ್ಕ ಕಳೆದುಕೊಂಡಿವೆ.

    ಬಿಡಿಎ ಈ ವರ್ಷದ ಏಪ್ರಿಲ್ ತಿಂಗಳಿನಿಂದ ಇ-ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಆದರೆ ಕಳೆದ 4 ದಿನಗಳಿಂದ ಇ-ಆಡಳಿತ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಾರಣ 2019-20ನೇ ಸಾಲಿನ ಮುಂಗಡ ಬಿಲ್ ಕಟ್ಟಿಲ್ಲ ಎಂದು ಬಿಎಸ್‍ಎನ್‍ಎಲ್ ಸಂಸ್ಥೆ ಕಳೆದ ನಾಲ್ಕು ದಿನಗಳಿಂದ ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಿದೆ.

    ಮಾರ್ಚ್ ನಲ್ಲೇ ಬಿಡಿಎ 13 ಲಕ್ಷ ರೂಪಾಯಿಯಷ್ಟು ಇಂಟರ್‍ನೆಟ್ ಶುಲ್ಕವನ್ನು ಬಿಎಸ್‍ಎನ್‍ಎಲ್‍ಗೆ ಕಟ್ಟಬೇಕಿತ್ತು. ಸೆಪ್ಟೆಂಬರ್ ತಿಂಗಳಾಂತ್ಯ ಬಂದರೂ ಬಿಲ್ ಪಾವತಿಸದ ಕಾರಣ ಬಿಎಸ್‍ಎನ್‍ಎಲ್ ಇಂಟರ್ ನೆಟ್ ಸೇವೆಯನ್ನು ಕಡಿತಗೊಳಿಸಿದೆ. ಇದರಿಂದ ಬಿಡಿಎ ಕಚೇರಿಯಲ್ಲಿ ದೈನಂದಿನ ಕೆಲಸ ಕಾರ್ಯಗಳು ಹಳಿ ತಪ್ಪಿದಂತಾಗಿವೆ.

    ಈ ಬಗ್ಗೆ ಬಿಡಿಎ ಕಾರ್ಯದರ್ಶಿ ಡಾ.ವಾಸಂತಿ ಅಮರ್ ಪ್ರತಿಕ್ರಿಯಿಸಿ, ಬಿಎಸ್‍ಎನ್‍ಎಲ್ ಸದ್ಯ 30 ಎಂಬಿಪಿಎಸ್ (ಮೆಗಾಬೈಟ್ ಪರ್ ಸೆಕೆಂಡ್) ಸ್ಪೀಡ್‍ನಲ್ಲಿ ಇಂಟರ್ ನೆಟ್ ಒದಗಿಸುತ್ತಿದೆ. ಆದರೆ ಆಕ್ಟ್ ಫೈಬರ್ ನೆಟ್ 100 ಎಂಬಿಪಿಎಸ್ ಸ್ಪೀಡ್‍ನಲ್ಲಿ ವರ್ಷಕ್ಕೆ ಕೇವಲ 2.75 ಲಕ್ಷದಲ್ಲಿ ಸೇವೆ ಕೊಡುತ್ತಿದೆ. ಈ ಸೇವೆ ಪಡೆಯಲು ಬಿಡಿಎ ಚಿಂತನೆ ನಡೆಸಿದೆ. ಬಿಎಸ್‍ಎನ್‍ಎಲ್ ಸೇವೆ ಸುರಕ್ಷತೆ ಎಂಬ ಕಾರಣಕ್ಕೆ ಮುಂದುವರಿಸುತ್ತೇವೆ. ಅವರಿಗೂ ಇದೇ ಸ್ಪೀಡ್‍ನಲ್ಲಿ ಇಂಟರ್ ನೆಟ್ ಸೇವೆ ನೀಡಲು ಕೋರಿದ್ದೇವೆ. ಇಂದಿನಿಂದ ಎಲ್ಲ ಸೇವೆಗಳು ಯಥಾಪ್ರಕಾರ ಮುಂದುವರಿಯುತ್ತಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.