Tag: ಆರ್ಟ್ ಗ್ಯಾಲರಿ

  • ಆರ್ಟ್ ಗ್ಯಾಲರಿಗೆ ವಿದ್ಯುತ್ ನೀಡದೆ ವಂಚನೆ – ಉರುಳು ಸೇವೆ ಮಾಡಲು ಮುಂದಾದ ಚಿತ್ರ ಕಲಾವಿದ

    ಆರ್ಟ್ ಗ್ಯಾಲರಿಗೆ ವಿದ್ಯುತ್ ನೀಡದೆ ವಂಚನೆ – ಉರುಳು ಸೇವೆ ಮಾಡಲು ಮುಂದಾದ ಚಿತ್ರ ಕಲಾವಿದ

    ಮಡಿಕೇರಿ: ಆರ್ಟ್ ಗ್ಯಾಲರಿಗೆ ವಿದ್ಯುತ್ ನೀಡದೆ ನಗರಸಭೆಯ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಮಡಿಕೇರಿ ನಗರದ ಚಿತ್ರ ಕಲಾವಿದ ಸಂದೀಪ್ ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ.

    ಚಿತ್ರ ಕಲಾವಿದರನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ನಗರದಲ್ಲಿ ಆರ್ಟ್ ಗ್ಯಾಲರಿ ಸ್ಥಾಪಿಸಬೇಕೆಂದು ಸಂದೀಪ್ ಕಳೆದ ಕೆಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಸೂಕ್ತ ಸ್ಪಂದನೆ ಸಿಗದ ಕಾರಣ ತಾವೇ ಆಸಕ್ತಿ ವಹಿಸಿ ತಮ್ಮ ಮನೆಯ ಸಣ್ಣದೊಂದು ಕೋಣೆಯಲ್ಲಿ ಆರ್ಟ್ ಗ್ಯಾಲರಿಯನ್ನು ಆರಂಭಿಸಿದರು. ಆದರೆ ಈ ಆರ್ಟ್ ಗ್ಯಾಲರಿಗೆ ವಿದ್ಯುತ್ ಸಂಪರ್ಕ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಇಂದು ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಉರುಳು ಸೇವೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರದ ಒತ್ತಡದಿಂದ ಬಂದಿರುವ ತೀರ್ಪು: ಉಡುಪಿ ವಿದ್ಯಾರ್ಥಿನಿಯರು

    ಇಂದು ಜನರಲ್ ತಿಮ್ಮಯ್ಯ ವೃತ್ತದಿಂದ ಉರುಳು ಸೇವೆ ಆರಂಭಿಸುತ್ತಿದ್ದಂತೆ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಮತ್ತು ಸಾರ್ವಜನಿಕರ ಹಿತಾಸಕ್ತಿಯಿಂದ ಮಡಿಕೇರಿ ಪೊಲೀಸರು ಸಂದೀಪ್‍ರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಹೈಕೋರ್ಟ್ ತೀರ್ಪನ್ನು ಪ್ರಶ್ನಿಸದಿದ್ದರೆ ಎಲ್ಲಾ ಧರ್ಮಗಳ ಆಚರಣೆಗೂ ಕುತ್ತು: ಅಮಿನ್ ಮೊಹಿನ್ಸಿನ್

     

  • ಅರುಣ್ ಸಾಗರ್ ಶೂಟಿಂಗ್ ಶೆಡ್‍ಗೆ ಬೆಂಕಿ – ಧಗಧಗನೆ ಹೊತ್ತಿ ಉರಿದ ಆರ್ಟ್ ಗ್ಯಾಲರಿ

    ಅರುಣ್ ಸಾಗರ್ ಶೂಟಿಂಗ್ ಶೆಡ್‍ಗೆ ಬೆಂಕಿ – ಧಗಧಗನೆ ಹೊತ್ತಿ ಉರಿದ ಆರ್ಟ್ ಗ್ಯಾಲರಿ

    ಬೆಂಗಳೂರು: ನಟ ಅರುಣ್ ಸಾಗರ್ ಅವರಿಗೆ ಸೇರಿದ ಶೂಟಿಂಗ್ ಶೆಡ್ ಬೆಂಕಿಗಾಹುತಿಯಾದ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಅರುಣ್ ಸಾಗರ್ ಅವರಿಗೆ ಸೇರಿದ ಶೂಟಿಂಗ್ ಶೆಡ್ ಹೌಸ್ ಇತ್ತು. ಅದರ ಪಕ್ಕದಲ್ಲೆ ಪ್ಲಾಸ್ಟಿಕ್ ಗೋದಾಮು ಕೂಡಾ ಇತ್ತು. ಆಕಸ್ಮಿಕವಾಗಿ ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಬೆಂಕಿಯ ತೀವ್ರತೆ ಪಕ್ಕದಲ್ಲಿದ್ದ ಶೂಟಿಂಗ್ ಶೆಡ್‍ಗೂ ಆವರಿಸಿದೆ. ಇದರಿಂದಾಗಿ ಶೂಟಿಂಗ್ ಶೆಡ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ.

    ಸುದ್ದಿ ತಿಳಿದು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸುವ ವೇಳೆಗೆ ಶೂಟಿಂಗ್ ಶೆಡ್ ಸಂಪೂರ್ಣವಾಗಿ ಕರಕಲಾಗಿ ಹೋಗಿತ್ತು. ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.