Tag: ಆರ್‌ಟಿ ನಗರ

  • ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಡೆಲಿವರಿ ಬಾಯ್ ಅರೆಸ್ಟ್

    ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಡೆಲಿವರಿ ಬಾಯ್ ಅರೆಸ್ಟ್

    ಬೆಂಗಳೂರು: ಬ್ರೆಜಿಲ್ (Brazil) ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಮೇಲೆ ಡೆಲಿವರಿ ಬಾಯ್‌ನನ್ನು (Delivery Boy) ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಬಂಧಿತ ಆರೋಪಿಯನ್ನು ಕುಮಾರ್ ರಾವ್ ಎಂದು ಗುರುತಿಸಲಾಗಿದ್ದು, ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡ್ತಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ:ಪಶ್ಚಿಮ ಟರ್ಕಿಯಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ: ಕಟ್ಟಡಗಳು ನೆಲಸಮ

    ಈ ಸಂಬಂಧ ಸಂತ್ರಸ್ತೆ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ನಂತರ ಡೆಲಿವರಿ ಬಾಯ್ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿ, ಅನುಚಿತವಾಗಿ ಮುಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.

    ಅ.17ರಂದು ಬ್ರೆಜಿಲ್ ಮೂಲದ ಮಾಡೆಲ್ ಆ್ಯಪ್ ಒಂದರಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಈ ವೇಳೆ ದಿನಸಿ ತಂದ ಡೆಲಿವರಿ ಬಾಯ್ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ಮಾಡೆಲ್ ಜೊತೆ ಅನುಚಿತ ವರ್ತನೆ ತೋರಿದ್ದಾನೆ. ಆಕೆಯನ್ನು ಮಾತಿಗೆಳೆದು ಆಕೆಯ ಮೈ ಮುಟ್ಟಲು ಯತ್ನಿಸಿದ್ದಾನೆ. ಇದರಿಂದ ಆತಂಕಕ್ಕೀಡಾದ ಮಾಡೆಲ್ ಕಿರುಚಿಕೊಂಡು ಬಾಗಿಲು ಲಾಕ್ ಮಾಡಿದ್ದಾರೆ. ಕೂಡಲೇ ಡೆಲಿವರಿ ಬಾಯ್ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಮಾಡೆಲ್ ತಾನು ಕೆಲಸ ಮಾಡುವ ಕಂಪನಿಗೆ ಮಾಹಿತಿ ನೀಡಿದ್ದು, ಅವರ ಸಹಾಯದಿಂದ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತ ಕೆಲಸ ಮಾಡುತ್ತಿದ್ದ ಕಂಪನಿ ಕೂಡ ಆತನನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ಹೇಳಿದ್ದು, ತನಿಖೆಗೆ ಸಹಕರಿಸುವುದಾಗಿ ಹೇಳಿದೆ ಎನ್ನಲಾಗಿದೆ.ಇದನ್ನೂ ಓದಿ:ಗೋವಾ-ಮಾಜಾಳಿ ಗಡಿಯಲ್ಲಿ ತಪಾಸಣೆ ವೇಳೆ ಸಿಕ್ಕಿಬಿತ್ತು ಕೋಟಿ ಹಣ; ಇಬ್ಬರು ಪೊಲೀಸರ ವಶಕ್ಕೆ

  • ಸಿಗರೇಟ್ ವಿಚಾರಕ್ಕೆ ಗಲಾಟೆ – ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ, ಇಬ್ಬರು ಅರೆಸ್ಟ್

    ಸಿಗರೇಟ್ ವಿಚಾರಕ್ಕೆ ಗಲಾಟೆ – ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ, ಇಬ್ಬರು ಅರೆಸ್ಟ್

    ಬೆಂಗಳೂರು: ಸಿಗರೇಟ್ ವಿಚಾರಕ್ಕೆ ಗಲಾಟೆಯಾಗಿ ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸದಾಶಿವನಗರದಲ್ಲಿ (Sadashiva Nagar) ನಡೆದಿದೆ. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಶಂಕರ್ ಮತ್ತು ಅರವಿಂದ್ ಎಂದು ಗುರುತಿಸಲಾಗಿದ್ದು, ಸಿಗರೇಟ್ ಖರೀದಿಸುವ ವಿಚಾರಕ್ಕಾಗಿ ಗಲಾಟೆ ಮಾಡಿಕೊಂಡು ಬಳಿಕ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್

    ಆರ್‌ಟಿ ನಗರದ (RT Nagar) ಬಾರ್ ಬಳಿಯಿರುವ ಪಾನ್‌ಶಾಪ್‌ವೊಂದಕ್ಕೆ ಇಬ್ಬರು ತೆರಳಿದ್ದರು. ಈ ವೇಳೆ ಅಂಗಡಿಯವನಿಗೆ ಇಬ್ಬರು ಒಟ್ಟಿಗೆ ಸಿಗರೇಟ್ ಕೊಡುವಂತೆ ಕೇಳಿದ್ದರು. ಅಂಗಡಿಯವ ಇಬ್ಬರ ಪೈಕಿ ಒಬ್ಬನಿಗೆ ಸಿಗರೇಟ್ ನೀಡಿದ್ದ. ಆಗ ಇನ್ನೋರ್ವ ನಾನು ಮೊದಲು ಸಿಗರೇಟ್ ಕೇಳಿದ್ದು, ಹೀಗಾಗಿ ನಾನೇ ಮೊದಲು ಸಿಗರೇಟ್ ತೆಗೆದುಕೊಳ್ಳಬೇಕು ಎಂದು ಕಿರಿಕ್ ಮಾಡಿದ. ಅಲ್ಲಿಂದ ಇಬ್ಬರ ನಡುವೆ ಜಗಳ ಶುರುವಾಯಿತು.

    ಆರ್‌ಟಿ ನಗರದಿಂದ ಇಬ್ಬರು ಆರೋಪಿಗಳು ಸದಾಶಿವ ನಗರದ (Sadashiva Nagar) ಕಡೆಗೆ ಬಂದಿದ್ದಾರೆ. ಈ ವೇಳೆ ಓರ್ವ ರಿಪೀಸ್‌ ಪಟ್ಟಿಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾನೆ.

    ಘಟನೆ ಬಳಿಕ ಸದಾಶಿವ ನಗರ ಪೊಲೀಸರು (Sadashiva Nagar Police) ಕೊಲೆಯತ್ನ ಕೇಸ್ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ