Tag: ಆರ್‌ಎಸ್‌ಎಸ್‌ ಪಥ ಸಂಚಲನ

  • RSS ಪಥಸಂಚಲನಕ್ಕೆ ನಿರ್ಬಂಧ; ಸರ್ಕಾರದ ಆದೇಶಕ್ಕೆ ಧಾರವಾಡ ವಿಭಾಗೀಯ ಪೀಠ ತಡೆ

    RSS ಪಥಸಂಚಲನಕ್ಕೆ ನಿರ್ಬಂಧ; ಸರ್ಕಾರದ ಆದೇಶಕ್ಕೆ ಧಾರವಾಡ ವಿಭಾಗೀಯ ಪೀಠ ತಡೆ

    ಧಾರವಾಡ: ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ (RSS March) ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದ ಸರ್ಕಾರಕ್ಕೆ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಸರ್ಕಾರದ ಆದೇಶಕ್ಕೆ ಧಾರವಾಡ ವಿಭಾಗೀಯ ಪೀಠ ತಡೆ ನೀಡಿದೆ.

    ಸರ್ಕಾರಿ ಆವರಣದಲ್ಲಿ ಖಾಸಗಿ ಸಂಘಟನೆಗಳು ಅನುಮತಿ ಪಡೆಯಬೇಕೆಂಬ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಧಾರವಾಡ ವಿಭಾಗೀಯ ಪೀಠಕ್ಕೆ ಪುನಶ್ಚೇತನ ಸೇವಾ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಪೀಠವು ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ನ.17ಕ್ಕೆ ವಿಚಾರಣೆಯನ್ನು ಮುಂದೂಡಿ ಪೀಠ ಆದೇಶ ಹೊರಡಿಸಿದೆ. ಸರ್ಕಾರದ ಪರ ವಕೀಲರಿಗೆ ನಾಳೆ ತಕರಾರು ಸಲ್ಲಿಸಲು ಸೂಚನೆ ನೀಡಿದೆ. ಇದನ್ನೂ ಓದಿ: ಕೋಲಾರದ ಮಾಲೂರಿನಲ್ಲಿ ಯಶಸ್ವಿ RSS ಶತಾಬ್ದಿ ಪಥಸಂಚಲನ – ಮಹಿಳೆಯರಿಂದ ಗಣ ವೇಷಧಾರಿಗಳ ಮೇಲೆ ಪುಷ್ಪಾರ್ಚನೆ

    ವಿಚಾರಣೆ ವೇಳೆ ಪುನಶ್ಚೇತನ ಸಂಸ್ಥೆಯ ವಕೀಲರಿಂದ ವಾದ ಮಂಡಿಸಿ, ಯಾವುದೇ ಪಾರ್ಕ್ ಮತ್ತು ಸರ್ಕಾರದ ಆಸ್ತಿಯಲ್ಲಿ ಯಾವುದೇ ಸಂಘ ಸಂಸ್ಥೆ ಕಾರ್ಯಕ್ರಮ ನಡೆಸುವಂತಿಲ್ಲ. ಇದಕ್ಕೆ ಅಧಿಕಾರಿಗಳ ಅನುಮತಿ ಪಡೆಯಬೇಕು ಎಂದು ಇದೆ. ಸರ್ಕಾರದ ಆಸ್ತಿ ಎಂದರೆ ರೋಡ್ ಅಂತಾನಾ? 10 ಕ್ಕೂ ಹೆಚ್ಚು ಜನರು ಸೇರಿದರೆ ಅದು ತಪ್ಪಾ ಎಂದು ಕರ್ನಾಟಕ ಪೊಲೀಸ್ ಕಾಯ್ದೆಯ ಬಗ್ಗೆ ಪ್ರಶ್ನಿಸಿದರು.

    ಸ್ಥಳೀಯ ಸಂಸ್ಥೆ ಇದನ್ನ ನೋಡಬೇಕು, ಸರ್ಕಾರ ಅಲ್ಲ. ಯಾರು ಇದನ್ನ ಆದೇಶ ಮಾಡಿದ್ದು ಎಂದ ನ್ಯಾಯಮೂರ್ತಿ ಕೇಳಿದರು. ‘ಕ್ಯಾಬಿನೆಟ್ ಆದೇಶ ಮಾಡಿದೆ. ಸರ್ಕಾರ ಶಾಲಾ-ಕಾಲೇಜು, ಉದ್ಯಾನ ಮತ್ತು ಇತರ ಕಡೆ ಸಾರ್ವಜನಿಕರು ಬಳಸಲು ಇದೆ. ರಾಜ್ಯದ ಹಲವು ಸಂಸ್ಥೆ ಪ್ರಚಾರ ತರಬೇತಿ ಉದ್ದೇಶದಿಂದ ಸರ್ಕಾರದ ಆಸ್ತಿ ಅನುಮತಿ ಪಡೆಯದೇ ಮಾಡೋದು ಅಕ್ರಮ ಎಂದು ಹೇಳ್ತಾರೆ’ ಎಂದು ವಕೀಲರು ವಾದಿಸಿದರು. ಇದನ್ನೂ ಓದಿ: ಚಿತ್ತಾಪುರದಲ್ಲಿ RSS ಪಥಸಂಚಲನ ವಿವಾದ – ಅ.28ಕ್ಕೆ ಶಾಂತಿ ಸಭೆ ನಡೆಸಲು ಕೋರ್ಟ್ ಸೂಚನೆ

  • ಚಿತ್ತಾಪುರ RSS ಪಥ ಸಂಚಲನ – ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ತೀರ್ಮಾನ: ಪರಮೇಶ್ವರ್

    ಚಿತ್ತಾಪುರ RSS ಪಥ ಸಂಚಲನ – ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ತೀರ್ಮಾನ: ಪರಮೇಶ್ವರ್

    – ಕಡ್ಡಾಯ ಅನುಮತಿ ಆದೇಶ RSS ದೃಷ್ಟಿಯಿಂದ ಮಾಡಿದ್ದಲ್ಲ ಎಂದ ಸಚಿವ

    ಬೆಂಗಳೂರು: ಚಿತ್ತಾಪುರದಲ್ಲಿ (Chittapur) ಪಥ ಸಂಚಲನ ನಡೆಸಲು ಆರ್‌ಎಸ್‌ಎಸ್ ಹಾಗೂ ಭೀಮ್ ಆರ್ಮಿ ಒಟ್ಟಿಗೆ ಅನುಮತಿ ಕೇಳಿದ್ದಾರೆ. ಸರ್ಕಾರದ ಮಾರ್ಗಸೂಚಿಯನ್ವಯ ಜಿಲ್ಲಾಡಳಿತ ಅದರ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ತಿಳಿಸಿದರು.

    ಬೆಂಗಳೂರಿನಲ್ಲಿ ಮಾತಾಡಿದ ಪರಮೇಶ್ವರ್, ಸರ್ಕಾರದ ಮಾರ್ಗಸೂಚಿ ಪ್ರಕಾರ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ಸಾರ್ವಜನಿಕ, ಸರ್ಕಾರಿ ಸ್ಥಳಗಳ ಬಳಕೆ ಅನುಮತಿ ಪಡೆಯುವ ಆದೇಶ ಆರ್‌ಎಸ್‌ಎಸ್‌ಗೆ ಮಾತ್ರ ಸೀಮಿತ ಅಲ್ಲ. ಈಗ ಹೊರಡಿಸಿರುವ ತುರ್ತು ಆದೇಶದಲ್ಲಿ ಕ್ಲಾರಿಟಿ ಇದೆ. ಅದರಲ್ಲಿ ಎಲ್ಲಾದರೂ ಆರ್‌ಎಸ್‌ಎಸ್ ಪದ ಬಳಕೆ ಆಗಿದೆಯಾ? ಸುಮ್ಮನೆ ಅನವಶ್ಯಕವಾಗಿ RSSಗೆ ಮಾಡಿದ್ದಾರೆ ಅಂತ ಹೇಳೋದು ಸರಿಯಲ್ಲ. ನಾವು ಆರ್‌ಎಸ್ಎಸ್‌ ಒಬ್ಬರಿಗೆ ಮಾಡಲಿಲ್ಲ. ನಾವು ಎಲ್ಲರಿಗೂ ಅನ್ವಯ ಆಗುವಂತೆ ಮಾಡಿದ್ದೇವೆ. ಸಂಘರ್ಷ ಆಗಬಾರದು ಶಾಂತಿಯುತವಾಗಿ ನಡೆಯಬೇಕು ಎನ್ನುವ ಕಾರಣಕ್ಕಾಗಿ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸೇಡಂ ಆರ್‌ಎಸ್ಎಸ್ ಪಥಸಂಚಲನದಲ್ಲಿ ಸರ್ಕಾರಿ ವೈದ್ಯ ಭಾಗಿ

    ಸಾಂದರ್ಭಿಕ ಚಿತ್ರ

    ಸರ್ಕಾರಿ ಶಾಲಾ ಕಾಲೇಜಿನಲ್ಲಿ ಯಾರಿಗೂ ಕೊಡಬಾರದು ಅಂತಲೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಈಗ ಸಮಸ್ಯೆ ಬಂತು ಆರ್‌ಎಸ್‌ಎಸ್ ದೃಷ್ಟಿಯಿಂದಲೇ ಈ ನಿರ್ಧಾರ ಬಂತು ಅಂತ ಇಟ್ಟುಕೊಳ್ಳೋಣ. ಆ ಸಮಸ್ಯೆ ಬಂದಾಗ ಸಂಘರ್ಷಕ್ಕೆ ಅವಕಾಶ ಮಾಡಿಕೊಡದೆ ಶಾಂತಿಯುತವಾಗಿ ಆಗಲಿ ಅಂತ ನಾವು ಮಾಡಿದ್ದೇವೆ ಎಂದು ಸ್ಪಷ್ಟನೆ ಕೊಟ್ಟರು.

    ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಬರ್ತಾ ಇತ್ತು. ಅದಕ್ಕಾಗಿ ಅವರಿಗೆ ಬೆಂಗಾವಲು ಪಡೆ ಹೆಚ್ಚಿಸಲಾಗಿದೆ. ಕ್ಯಾಬಿನೆಟ್ ದರ್ಜೆ ಸಚಿವರು ಅವರಿಗೆ ರಕ್ಷಣೆ ಕೊಡಬೇಕಾದ ಜವಾಬ್ದಾರಿ ಸರ್ಕಾರದ್ದು ಅಂತ ಪರಮೇಶ್ವರ್ ತಿಳಿಸಿದರು. ಇದನ್ನೂ ಓದಿ: ಚಿತ್ತಾಪುರ ಆಯ್ತು ಈಗ ಸೇಡಂ – ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಬ್ರೇಕ್‌

  • ನ.2 ರಂದು ಚಿತ್ತಾಪುರದಲ್ಲಿ RSS ಪಥ ಸಂಚಲನ ನಡದೇ ನಡೆಯುತ್ತೆ: ವಿಜಯೇಂದ್ರ

    ನ.2 ರಂದು ಚಿತ್ತಾಪುರದಲ್ಲಿ RSS ಪಥ ಸಂಚಲನ ನಡದೇ ನಡೆಯುತ್ತೆ: ವಿಜಯೇಂದ್ರ

    ಬೆಂಗಳೂರು: ನವೆಂಬರ್ 2 ರಂದು ಚಿತ್ತಾಪುರದಲ್ಲಿ RSS ಪಥ ಸಂಚಲನ (RSS March Past) ನಡದೇ ನಡೆಯುತ್ತದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ‌ಮಾತನಾಡಿದ ಅವರು ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಿಯಾಂಕ್ ಖರ್ಗೆಗೆ RSS ಟೀಕೆ ಮಾಡೋ ದುರ್ಬುದ್ಧಿ ಯಾಕೆ ಬಂದಿದೆಯೋ ಗೊತ್ತಿಲ್ಲ. RSS ಟೀಕೆ ಮಾಡ್ತಿರೋದು ಪ್ರಚಾರಕ್ಕೋ ಅಥವಾ ಸಿಎಂ ಕುರ್ಚಿಗೆ ಟವಲ್ ಹಾಕೋಕೆ ಗೊತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೇಳಿದ ಹಾಗೆ ಪ್ರಿಯಾಂಕ್ ಖರ್ಗೆ ಏಕಾಂಗಿ ಆಗಿದ್ದಾರೆ. ಗಾಂಧಿ ಕುಟುಂಬದಿಂದಲೇ RSS ಮಣಿಸೋಕೆ ಆಗಲಿಲ್ಲ. ಇಂತಹ ಹೇಳಿಕೆ ನಿತ್ಯ ಕೊಡೋ ಮೂಲಕ ವಾಸ್ತವಿಕ ಸತ್ಯ ಮರೆ ಮಾಚೋ ಕೆಲಸ ಕಾಂಗ್ರೆಸ್ ಮಾಡ್ತಿದೆ. ಆಡಳಿತ ಪಕ್ಷದ ವೈಫಲ್ಯ ಮುಚ್ಚಿಕೊಳ್ಳೋಕೆ RSS ಟೀಕೆ ಮಾಡ್ತಿದ್ದಾರೆ ಅಂತ ಕಿಡಿಕಾರಿದರು. ಇದನ್ನೂ ಓದಿ: ಡಿಕೆಶಿಯನ್ನು ಭೇಟಿಯಾದ ಕಿರಣ್ ಮಜುಂದಾರ್ ಶಾ – ಉತ್ತಮ ಚರ್ಚೆಯಾಗಿದೆ ಎಂದ ಡಿಸಿಎಂ

    ಚಿತ್ತಾಪುರದಲ್ಲಿ 2ನೇ ತಾರೀಖು RSS ‌ಪಥ ಸಂಚಲನ ನಡೆದೇ ನಡೆಯುತ್ತೆ. ಹೈಕೋರ್ಟ್ ಕೂಡ ಹೇಳಿದೆ. ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಪಥ ಸಂಚಲನ ಆಗ್ತಿದೆ. ಹಾಗೇ ಚಿತ್ತಾಪುರದಲ್ಲಿ ನಡೆಯುತ್ತದೆ. ಪ್ರಿಯಾಂಗ್‌ ಖರ್ಗೆ ಹೀಗೆ‌ ಟೀಕೆ ಮಾಡಿ RSS ಅವಹೇಳನ ಮಾಡೋದು ಸರಿಯಲ್ಲ. RSS ಇಂತಹ ಅನೇಕ ಅಗ್ನಿ ಪರೀಕ್ಷೆ ಎದುರಿಸಿದೆ. RSS ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ನೀಡದೇ ಸಮಾಜ ಸೇವೆ ಕೆಲಸ ಮುಂದುವರೆಸಿಕೊಂಡು ಹೋಗ್ತಿದೆ ಅಂತ ತಿಳಿಸಿದರು. ಇದನ್ನೂ ಓದಿ: Maharashtra | ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – ನಾಲ್ವರು ಸಾವು, 10 ಮಂದಿಗೆ ಗಾಯ

    ಬಿಜೆಪಿ ಅವರು ಸೀಳು ನಾಯಿಗಳು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಅಪ್ರಬುದ್ಧ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಪ್ರಿಯಾಂಕ್ ಖರ್ಗೆ ಅವರೇ ಕೆಲಸಕ್ಕೆ ಬಾರದ್ದನ್ನ ಮಾತಾಡೋದು ಬಿಡಿ. ನಿಮ್ಮ ಕುಟುಂಬ 40-50 ವರ್ಷಗಳ ಕಾಲ ರಾಜಕೀಯದಲ್ಲಿ ಹಿಡಿತ ಇಟ್ಟುಕೊಂಡು ಬಂದಿದೆ. ನಿಮ್ಮ ಅಧಿಕಾರದಲ್ಲಿ ಕಲಬುರಗಿ ಏನಾಗಿದೆ ಮೊದಲು ಹೇಳಿ? ಶಿಕ್ಷಣದಲ್ಲಿ ಎಷ್ಟನೇ ಸ್ಥಾನದಲ್ಲಿ ‌ಇದೆ ಮೊದಲು ಹೇಳಿ? ಅವರ ಜಿಲ್ಲೆ ಏನ್ ಅಭಿವೃದ್ಧಿ ಆಗಿದೆ ಮೊದಲು ಪ್ರಿಯಾಂಕ್ ಖರ್ಗೆ ನೋಡಲಿ. ಬಿಜೆಪಿ ಅವಧಿಯಲ್ಲಿ ಕಲಬುರ್ಗಿಗೆ ಎಷ್ಟು ಹಣ ಬಿಡುಗಡೆ ಆಗಿತ್ತು. ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ಹಣ ಕೊಟ್ಟಿದ್ದಾರೆ? ಮೊದಲು ಪ್ರಿಯಾಂಕ್ ಖರ್ಗೆ ಹೇಳಲಿ ಅಂತ ಪ್ರಿಯಾಂಕ್ ವಿರುದ್ಧ ವಿಜಯೇಂದ್ರ ಕಿಡಿಕಾರಿದರು.