Tag: ಆರ್‌ಆರ್‌ಆರ್’

  • ರಾಮ್‌ ಚರಣ್‌ಗೆ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವಾಸೆಯಂತೆ

    ರಾಮ್‌ ಚರಣ್‌ಗೆ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವಾಸೆಯಂತೆ

    `RRR’ ಸಿನಿಮಾ ರಿಲೀಸ್ ಆದ ದಿನದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ದಾಖಲೆ ಮಾಡುತ್ತಲೇ ಬಂದಿದೆ. ಇತ್ತೀಚೆಗಷ್ಟೇ ಚಿತ್ರದ ʻನಾಟು ನಾಟುʼ ಹಾಡು ಆಸ್ಕರ್‌ ಪ್ರಶಸ್ತಿ ಗೆದ್ದುಕೊಂಡಿದೆ. ಆಸ್ಕರ್ (Oscar) ಪ್ರಶಸ್ತಿ ಸಮಾರಂಭ ಮತ್ತು ಪಾರ್ಟಿ ಮುಗಿಸಿ ಇದೀಗ ರಾಮ್ ಚರಣ್ (Ram Charan) ಭಾರತಕ್ಕೆ ಮರಳಿದ್ದಾರೆ.

    ಶುಕ್ರವಾರ ತವರಿಗೆ ಮರಳಿದ ಬಳಿಕ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ. ತಮ್ಮ ನೆಚ್ಚಿನ ಪಾತ್ರದ ಬಗ್ಗೆ ಕೇಳಿದಾಗ ವಿರಾಟ್‌ ಕೊಹ್ಲಿ (Virat Kohli) ಬಯೋಪಿಕ್‌ನಲ್ಲಿ ನಟಿಸುವಾಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಸ್ಟೆಪ್ ಹಾಕಿದ ಕಿಂಗ್ ಕೊಹ್ಲಿ – ವಿರಾಟ್ ಡಾನ್ಸ್‌ಗೆ ಅಭಿಮಾನಿಗಳು ಫಿದಾ

    ಮೊದಲಿಗೆ ನಿಮ್ಮ ನೆಚ್ಚಿನ ಪಾತ್ರ ಯಾವುದು ಎಂದು ಕೇಳಿದಾಗ ಚರಣ್‌, ಕ್ರೀಡೆ ಆಧಾರಿತ ಸಿನಿಮಾದಲ್ಲಿ ಅಭಿನಯಿಸಲು ಇಷ್ಟಪಡುತ್ತೇನೆ. ಅದರಲ್ಲೂ ಕ್ರಿಕೆಟಿಗನಾಗಿ ನಟಿಸಲು ಬಯಸುತ್ತೇನೆ ಎಂದಿದ್ದಾರೆ. ಈ ನಡುವೆ ಟೀಂ ಇಂಡಿಯಾ (Team India) ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಬಯೋಪಿಕ್‌ನಲ್ಲಿ ಏಕೆ ನಟಿಸಬಾರದು? ಎಂದು ಪ್ರಶ್ನಿಸಿದ್ದಕ್ಕೆ, ನಿಜಕ್ಕೂ ಅವರು ಸ್ಫೂರ್ತಿದಾಯಕ. ಒಂದೇ ಒಂದು ಅವಕಾಶ ನೀಡಿದ್ರೂ ಅದ್ಭುತವಾಗಿರುತ್ತೆ. ನಾನೂ ಅದೇ ರೀತಿ ಕಾಣಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: RCB ಪಂದ್ಯಗಳ ಟಿಕೆಟ್‌ ದರ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು – ಟಿಕೆಟ್‌ ಬುಕ್‌ ಮಾಡೋದು ಹೇಗೆ..?

    ಶುಕ್ರವಾರ  ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಆರಂಭದ ವೇಳೆ ವಿರಾಟ್‌ ಕೊಹ್ಲಿ ಮೈದಾನದಲ್ಲೇ ನಾಟು-ನಾಟು ಹಾಡಿಗೆ ಸ್ಟೆಪ್‌ ಹಾಕಿ ಅಭಿಮಾನಿಗಳನ್ನು ರಂಜಿಸಿದ್ದರು.

  • ಭಾರತದ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

    ಭಾರತದ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

    ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿರುವ ಹಾಗೂ ಗುನೀತ್ ಮೊಂಗಾ ನಿರ್ಮಾಣದ ಭಾರತದ ಕಿರುಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್‌ಗೆ (The Elephant Whisperers) ಬೆಸ್ಟ್ ಡಾಕ್ಯುಮೆಂಟ್ ಶಾರ್ಟ್ ಫಿಲಂ ಕೆಟಗರಿಯಲ್ಲಿ ಆಸ್ಕರ್ (Oscar) ಪ್ರಶಸ್ತಿ ಲಭಿಸಿದೆ. ಈ ಮೂಲಕ ಸಿನಿಮಾ ರಂಗದಲ್ಲಿ ಅತ್ಯುತ್ತಮ ಗೌರವಕ್ಕೆ ಈ ಕಿರುಚಿತ್ರ ಪಾತ್ರವಾಗಿದೆ.

    ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ಕಳೆದ ವರ್ಷ ಡಿಸೆಂಬರ್‌ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾ ಅನಾಥ ಆನೆ ಮರಿಯ ಕಥೆಯಾಗಿದೆ. ಸ್ಥಳೀಯ ದಂಪತಿ ಬೆಳ್ಳಿ ಹಾಗೂ ಬೊಮ್ಮನ್ ಆರೈಕೆಯಲ್ಲಿ ಆನೆ ಮರಿ ಬೆಳೆಯುವ, ಬಾಂಧವ್ಯವನ್ನು ಸೂಚಿಸುವ ಹಾಗೂ ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವ ವಿಷಯಗಳು ಸಿನಿಮಾದಲ್ಲಿದೆ. ಇದನ್ನೂ ಓದಿ: Breaking- ನಾಟು ನಾಟು ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ : ಸಂಭ್ರಮದಲ್ಲಿ ಭಾರತ

    ದಿ ಎಲಿಫೆಂಟ್ ವಿಸ್ಪರರ್ಸ್ ಸಿನಿಮಾದ ಜೊತೆಗೆ ಜಾಗತಿಕವಾಗಿ ವೈರ್ ಆಗಿರುವ ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಕೂಡಾ ಆಸ್ಕರ್‌ ಲಭಿಸಿದೆ. ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಹಾಡಿಗೆ ಕುಣಿಯಲಿರುವ ಈ ಯುವತಿ ಯಾರು?

  • Oscars 2023: ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ `ನಾಟು ನಾಟು’ ಸಾಂಗ್

    Oscars 2023: ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ `ನಾಟು ನಾಟು’ ಸಾಂಗ್

    ಖ್ಯಾತ ನಿರ್ದೇಶಕ ರಾಜಮೌಳಿ (Director Rajamouli) ನಿರ್ದೇಶನದ `RRR’ ಸಿನಿಮಾದ ಕೀರ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಚಿತ್ರದ `ನಾಟು ನಾಟು’ ಸಾಂಗ್‌ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿಕೊಂಡ ಬೆನ್ನಲ್ಲೇ ಇದೀಗ ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ (Naatu Naatu Song) ಹಾಡು ಪ್ರದರ್ಶನಗೊಳ್ಳುವುದರ ಬಗ್ಗೆ ಸಿಹಿಸುದ್ದಿ ಸಿಕ್ಕಿದೆ.

    ಆಸ್ಕರ್ (Oscars 2023) ಅಂಗಳಕ್ಕೆ ಹೋಗೋದು ಪ್ರತೀ ಫಿಲಂ ಮೇಕರ್‌ನ ಬಹುದೊಡ್ಡ ಕನಸು. ಆಸ್ಕರ್ ವೇದಿಕೆಯಲ್ಲಿ ಜಗತ್ತಿನ ವಿವಿಧ ಭಾಷೆಗಳ ವಿವಿಧ ದೇಶಗಳ ನಾನಾ ಮೈ ಬಣ್ಣದ ನಟ- ನಟಿಯರ ಮೇಳವೇ ನಡೆಯುತ್ತೆ. ಆದರೆ ಈ ಬಾರಿ ಆಸ್ಕರ್‌ನಲ್ಲಿ ಪ್ರಸಿದ್ಧ `ಆರ್‌ಆರ್‌ಆರ್’ ಸಿನಿಮಾದ್ದೇ ಸಮಾಚಾರ. ಈ ಚಿತ್ರ ಬಂದು ವರ್ಷ ಕಳೆದರೂ `ಆರ್‌ಆರ್‌ಆರ್’ ಚಿತ್ರದ `ನಾಟು ನಾಟು’ ಹಾಡು ಇಡೀ ಜಗತ್ತನ್ನೇ ಕುಣಿಸುತ್ತಿದೆ. ಹಾಗಾಗಿ ಮಾ.12ಕ್ಕೆ ಲಾಸ್ ಎಂಜಲೀಸ್‌ನಲ್ಲಿ 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ ವೇದಿಕೆ ಮೇಲೆ `ನಾಟು ನಾಟು’ ಲೈವ್ ಪರ್ಫಾರ್ಮೆನ್ಸ್‌ಗೆ ಅವಕಾಶ ಸಿಕ್ಕಿದೆ. ಈ ಹಿಂದೆಯೇ ಈ ಬಗ್ಗೆ ಸುಳಿವು ಸಿಕ್ಕಿತ್ತು. ಇದೀಗ ಅಧಿಕೃತವಾಗಿ ಈ ವಿಚಾರವನ್ನು ಅಕಾಡೆಮಿ ಸ್ಪಷ್ಟಪಡಿಸಿದೆ.

    ಚಂದ್ರಬೋಸ್ ಸಾಹಿತ್ಯ ಬರೆದಿರುವ `ನಾಟು ನಾಟು’ ಹಾಡನ್ನು ಗಾಯಕರಾದ ರಾಹುಲ್ ಸಿಪ್ಲಿಗಿಂಜ್ ಹಾಗೂ ಕಾಲ ಭೈರವ ಹಾಡಿದ್ದರು. ಇದೀಗ ಇವರಿಬ್ಬರಿಗೆ ಆಸ್ಕರ್ ವೇದಿಕೆಯ ಮೂಲಕ ಮತ್ತೊಮ್ಮೆ ಹಾಡಿನ ಲೈವ್ ಪರ್ಫಾರ್ಮೆನ್ಸ್ ನೀಡುವ ಅವಕಾಶ ದಕ್ಕಿದೆ. ಇದನ್ನು ಟ್ವೀಟ್ ಮಾಡಿ ಅಕಾಡೆಮಿ ಖಚಿತ ಪಡಿಸಿದೆ. ಜೇಮ್ಸ್ ಕ್ಯಾಮರೂನ್‌ನಂತ ಹಾಲಿವುಡ್ ಫಿಲ್ಮ್ ಮೇಕರ್ಸ್ ‘RRR’ ಸಿನಿಮಾ ನೋಡಿ ಮೆಚ್ಚಿ ಹೊಗಳಿದ್ದಾರೆ. ಈ ವಾರ ಸಿನಿಮಾ ಅಮೆರಿಕಾದಲ್ಲಿ ಮತ್ತೆ ರಿಲೀಸ್ ಆಗುತ್ತಿದೆ. ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ (M.M Keeravani) ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದವರು. ಅವರು ಆಸ್ಕರ್ ವೇದಿಕೆಯಲ್ಲಿ ಭಾಗಿ ಆಗುವುದು ಅನುಮಾನ ಎನ್ನಲಾಗ್ತಿದೆ. ಇತ್ತೀಚೆಗೆ ಆರೋಗ್ಯ ಕಾರಣಗಳಿಂದ ವೇದಿಕೆಯಲ್ಲಿ ಪರ್ಫಾರ್ಮೆನ್ಸ್ ಕಷ್ಟ ಎಂದು ಕೀರವಾಣಿ ಹೇಳಿದ್ದರು. ಅವರ ಬರುವಿಕೆಯ ಬಗ್ಗೆ ನಿರೀಕ್ಷೆಯಿದೆ. ಇದನ್ನೂ ಓದಿ ಸ್ವೀಟ್‌ ಹಾರ್ಟ್‌ಗೆ ವಿಶ್‌ ಮಾಡಿದ ರಿಷಬ್ ಶೆಟ್ಟಿ

    ಚಿತ್ರದ ನಾಟು ನಾಟು ಸಾಂಗ್ ಅನ್ನ ಉಕ್ರೇನ್‌ನಲ್ಲಿ ಶೂಟ್ ಮಾಡಲಾಗಿತ್ತು. ಪ್ರೇಮ್ ರಕ್ಷಿತ್ ಕೊರಿಯೋಗ್ರಾಫಿಯಲ್ಲಿ ತಾರಕ್- ಚರಣ್ ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ್ದರು. ಈ ಸಿನಿಮಾ ಗೆಲುವಿಗೆ ರಾಜಮೌಳಿ ಅವರ ನಿರ್ದೇಶನವಷ್ಟೇ ಸಾಥ್ ನೀಡಿರುವುದಲ್ಲ. ಚಿತ್ರಕಥೆಯ ಜೊತೆ ತಾರಕ್ ಮತ್ತು ರಾಮ್ ಚರಣ್ ಅಭಿನಯ ಕೂಡ ಗೆಲುವಿಗೆ ಕಾರಣವಾಗಿದೆ.

  • ಕನ್ನಡದಲ್ಲಿ ಚಿತ್ರ ರಿಲೀಸ್ ಮಾಡಲ್ಲ ಅಂದಿದ್ದಕ್ಕೆ ನಟ ನಾನಿಗೆ ನೆಟ್ಟಿಗರಿಂದ ಫುಲ್‌ ಕ್ಲಾಸ್

    ಕನ್ನಡದಲ್ಲಿ ಚಿತ್ರ ರಿಲೀಸ್ ಮಾಡಲ್ಲ ಅಂದಿದ್ದಕ್ಕೆ ನಟ ನಾನಿಗೆ ನೆಟ್ಟಿಗರಿಂದ ಫುಲ್‌ ಕ್ಲಾಸ್

    ಟಾಲಿವುಡ್ ಸ್ಟಾರ್ ನಟ ನಾನಿ `ಶ್ಯಾಮ್ ಸಿಂಗ್ ರಾಯ್’ ಚಿತ್ರದ ನಂತರ ಪ್ಯಾನ್ ಇಂಡಿಯಾ ಸಿನಿಮಾ `ಅಂತೇ ಸುಂದರಾನಿಕಿ’ ಚಿತ್ರದ ಮೂಲಕ ಬರುತ್ತಿದ್ದಾರೆ. ಇತ್ತೀಚಿಗಷ್ಟೇ ಚಿತ್ರದ ಟೀಸರ್ ರಿಲೀಸ್ ವೇಳೆಯಲ್ಲಿ ಚಿತ್ರವನ್ನ ಕನ್ನಡದಲ್ಲಿ ರಿಲೀಸ್ ಮಾಡಲ್ಲ ಅಂದಿರೋದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ನೆಟ್ಟಿಗರು ನಾನಿ ವಿರುದ್ಧ ಫುಲ್‌ ಗರಂ ಆಗಿದ್ದಾರೆ.

    ನಾನಿ ನಟನೆಯ ಮುಂದಿನ ಚಿತ್ರ `ಅಂತೇ ಸುಂದರಾನಿಕಿ’ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಆದರೆ ನಟ ನಾನಿ ಕನ್ನಡದಲ್ಲಿ ಸಿನಿಮಾ ರಿಲೀಸ್ ಮಾಡಲ್ಲ ಅಂದಿರೋದು ಸಿನಿಅಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಆದರೆ ಅದಕ್ಕೆ ಸೂಕ್ತ ಕಾರಣ ಕೂಡ ಕೊಟ್ಟಿದ್ದಾರೆ.

    ಇತ್ತೀಚಿಗೆ ತೆರೆಕಂಡ `ಆರ್‌ಆರ್‌ಆರ್’ ಚಿತ್ರ ಕೂಡ ಪ್ಯಾನ್ ಇಂಡಿಯಾ ಚಿತ್ರವಾಗಿ ರಿಲೀಸ್ ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆಯಲ್ಲೇ ರಿಲೀಸ್ ಆಗಿತ್ತು. ಕರ್ನಾಟಕದಲ್ಲೂ ಹೆಸರಿಗಷ್ಟೇ ಕೆಲವೊಂದು ಥಿಯೇಟರ್‌ನಲ್ಲಿ ಕನ್ನಡದಲ್ಲಿ ರಿಲೀಸ್ ಆಗಿದ್ರೆ ಬಹುತೇಕ ಚಿತ್ರಮಂದಿರದಲ್ಲಿ ತೆಲುಗಿನಲ್ಲೇ ರಿಲೀಸ್ ಆಗಿತ್ತು. ಇದೀಗ `ಅಂತೇ ಸುಂದರಾನಿಕಿ’ ಚಿತ್ರ ಪ್ಯಾನ್ ಇಂಡಿಯಾ ಚಿತ್ರ ಆಗಿರೋದರಿಂದ ಬೇರೆ ಭಾಷೆಗಳಲ್ಲಿ ಆಗ್ತಿರುವಾಗ ಕನ್ನಡದಲ್ಲಿ ರಿಲೀಸ್ ಮಾಡಲ್ಲ ಅಂದರೋದು ನೆಟ್ಟಿಗರನ್ನ ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನಟ ನಾನಿಗೆ ಕ್ಲಾಸ್ ತಗೆದುಕೊಂಡಿದ್ದಾರೆ.

    ಕರ್ನಾಟಕದಲ್ಲಿ `ಅಂತೇ ಸುಂದರಾನಿಕಿ’ ಚಿತ್ರವನ್ನ ಕನ್ನಡದಲ್ಲಿ ಯಾಕೆ ರಿಲೀಸ್ ಮಾಡಲ್ಲ ಎಂಬುದಕ್ಕೆ ನಾನಿ ಸೂಕ್ತ ಕಾರಣ ಕೊಟ್ಟಿದ್ದಾರೆ. ಕರ್ನಾಟಕದಲ್ಲೂ ಬಹುತೇಕ ಮಂದಿ ತೆಲುಗು ಬಲ್ಲವರೇ ಇದ್ದಾರೆ. ಅಲ್ಲಿ ಕನ್ನಡ ಡಬ್ಬಿಂಗ್ ಅವಶ್ಯಕತೆಯಿಲ್ಲ. ಇವರೆಗೂ ತೆಲುಗು ಭಾಷೆಯ ಚಿತ್ರವನ್ನ ನೋಡಿ ಬೆಂಬಲಿಸಿದ್ದಾರೆ ಹಾಗಾಗಿ ನಮ್ಮ ಸಿನಿಮಾವನ್ನ ಕನ್ನಡದಲ್ಲಿ ರಿಲೀಸ್ ಮಾಡಲ್ಲ ಅಂತಾ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಟೆನ್ನಿಸ್ ತಾರೆ ಮರಿಯಾ ಶರಪೋವಾರ ಬೇಬಿ ಬಂಪ್ ಫೋಟೋ ವೈರಲ್

    ನಾನಿ, ತಮ್ಮ ಸಿನಿಮಾವನ್ನ ಕನ್ನಡದಲ್ಲಿ ಡಬ್ ಮಾಡೋದಿಲ್ಲ ಅಂತಾ ಹೇಳಿರೋದಕ್ಕೆ ವಿರೋಧ ವ್ಯಕ್ತವಾಗಿದೆ. ಕನ್ನಡದಲ್ಲಿ ಡಬ್ ಮಾಡಿ ರಿಲೀಸ್ ಮಾಡೋವರೆಗೂ ನಾವು ಚಿತ್ರವನ್ನ ನೋಡೋದಿಲ್ಲ ಅಂತಾ ನಾನಿ ವಿರುದ್ಧ ಕಿಡಿಕಾರಿದ್ದಾರೆ. `ಅಂತೇ ಸುಂದರಾನಿಕಿ’ ಚಿತ್ರದಲ್ಲಿ ನಾನಿಗೆ ಜೋಡಿಯಾಗಿ ನಜ್ರಿಯಾ ನಟಿಸಿದ್ದಾರೆ. ಇದೇ ಜೂನ್ 10ಕ್ಕೆ ಚಿತ್ರ ತೆರೆಗೆ ಅಬ್ಬರಿಸಲಿದೆ. ಪ್ರೇಕ್ಷಕಪ್ರಭುಗಳು ಸಿನಿಮಾ ನೋಡಿ ಬೆಂಬಲ ಸೂಚಿಸ್ತಾರಾ ಎಂಬುದನ್ನ ಕಾದು ನೋಡಬೇಕಿದೆ.

  • ಕೆಜಿಎಫ್ ಮಾಸ್ಟರ್ ಮೈಂಡ್ ಜೊತೆ ಜ್ಯೂ.ಎನ್‌ಟಿಆರ್ ಹೊಸ ಸಿನಿಮಾ

    ಕೆಜಿಎಫ್ ಮಾಸ್ಟರ್ ಮೈಂಡ್ ಜೊತೆ ಜ್ಯೂ.ಎನ್‌ಟಿಆರ್ ಹೊಸ ಸಿನಿಮಾ

    ಜ್ಯೂ.ಎನ್‌ಟಿಆರ್ ದಕ್ಷಿಣ ಭಾರತದ ಪ್ರತಿಭಾನ್ವಿತ ಕಲಾವಿದ, ಯಾವುದೇ ಪಾತ್ರ ಕೊಟ್ಟರು ಅದನ್ನು ನಿಭಾಯಿಸುವ ಮತ್ತು ಆ ಪಾತ್ರವೇ ತಾವಾಗಿ ನಟಿಸುವ ಮಹಾನ್ ಕಲಾವಿದ. ಅದಕ್ಕೆ ತಾಜಾ ಉದಾಹರಣೆ ಅಂದರೆ ಇತ್ತೀಚಿನ ಜ್ಯೂ.ಎನ್‌ಟಿಆರ್ ನಟನೆಯ `ಆರ್‌ಆರ್‌ಆರ್’ ಸಿನಿಮಾದಲ್ಲಿನ ಭೀಮ್ ಪಾತ್ರ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಮೋಡಿ ಮಾಡಿದೆ.`ಆರ್‌ಆರ್‌ಆರ್’ ಚಿತ್ರ ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿದೆ. ʻಆರ್‌ಆರ್‌ಆರ್‌ʼ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ ಮುಂದಿನ ಚಿತ್ರ ಯಾವುದು ಅಂತಾ ಕ್ಲ್ಯಾರಿಟಿ ಸಿಕ್ಕಿದೆ.

    ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ನಂತರ ನೆಚ್ಚಿನ ನಟ ಜ್ಯೂ.ಎನ್‌ಟಿಆರ್ ಮುಂದೆ ಏನು ಮಾಡುತ್ತಾರೆ ಅನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. `ಆರ್‌ಆರ್‌ಆರ್’ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ ಎರಡು ದೊಡ್ಡ ಪ್ರಾಜೆಕ್ಟ್‌ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. `ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಜೊತೆ ಅವರು ತಮ್ಮ 31ನೇ ಸಿನಿಮಾ ಮಾಡಲಿದ್ದಾರೆ. ಅದಕ್ಕೂ ಮುಂಚೆ ಕೊರಟಾಲ ಶಿವ ಜೊತೆ ಸಿನಿಮಾ ಮಾಡಲಿದ್ದಾರೆ.

    ಈ ಹಿಂದೆನೇ ಜ್ಯೂ.ಎನ್‌ಟಿಆರ್ ಮತ್ತು ಕೊರಟಾಲ ಶಿವ ಕಾಂಬಿನೇಷನ್‌ನಲ್ಲಿ `ಜನತಾ ಗ್ಯಾರೇಜ್’ ಚಿತ್ರ ತೆರೆಕಂಡಿತ್ತು. ಇದೀಗ ತಾರಕ್ ನಟನೆಯ 30ನೇ ಚಿತ್ರಮ ಕೂಡ ಕೊರಟಾಲ ಶಿವ ಅವರೊಂದಿಗೆ ಮಾಡಲಿದ್ದಾರೆ. ಇನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಜ್ಯೂ.ಎನ್‌ಟಿಆರ್ ನಟನೆಯ 31ನೇ ಚಿತ್ರ ಮೂಡಿ ಬರಲಿದೆ. ಈ ಚಿತ್ರಕ್ಕೆ ಪ್ರಶಾಂತ್‌ನೀಲ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದನ್ನು ಓದಿ: ಬರ್ತ್‍ಡೇ ಸ್ಪೆಷಲ್: ಕಾಶ್ಮೀರಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

    ನಟ ತಾರಕ್‌ಗೆಂದೆ ನೀಲ್, ಭಿನ್ನ ಕಥೆಯನ್ನ ರೆಡಿ ಮಾಡಿದ್ದಾರೆ. ಇವರೆಗೂ ನಟಿಸಿರದ ಪಾತ್ರದಲ್ಲಿ ಜ್ಯೂ.ಎನ್‌ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ಒಟ್ನಲ್ಲಿ `ಆರ್‌ಆರ್‌ಆರ್’ ಸಿಕ್ಕಾಪಟ್ಟೆ ಡಿಮ್ಯಾಂಡ್‌ನಲ್ಲಿರೋ ಜ್ಯೂ.ಎನ್‌ಟಿಆರ್ ಭಿನ್ನ ಪಾತ್ರಗಳು ಅರಸಿ ಬರುತ್ತಿದೆ. ಪ್ರಶಾಂತ್‌ ನೀಲ್‌ ಮತ್ತು ಜ್ಯೂ.ಎನ್‌ಟಿಆರ್‌ ಸಿನಿಮಾ ನೋಡೋದಕ್ಕೆ ಫ್ಯಾನ್ಸ್‌ ಕಾಯ್ತಿದ್ದಾರೆ.

  • ಜಾನ್ ಒಂದು ಹೇಳಿಕೆಯಿಂದ ಬಿತ್ತು ಭಾರೀ ಪೆಟ್ಟು – ಮಕಾಡೆ ಮಲಗಿದ `ಅಟ್ಯಾಕ್’

    ಜಾನ್ ಒಂದು ಹೇಳಿಕೆಯಿಂದ ಬಿತ್ತು ಭಾರೀ ಪೆಟ್ಟು – ಮಕಾಡೆ ಮಲಗಿದ `ಅಟ್ಯಾಕ್’

    ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ಮಣೆ ಹಾಕ್ತಿರಲಿಲ್ಲ. ಸೌತ್ ಚಿತ್ರಗಳನ್ನ ಅಲ್ಲಿನ ಕಲಾವಿದರನ್ನ ಬಾಲಿವುಡ್ ಮಂದಿ ಅಸಡ್ಡೆಯಿಂದ ನೋಡ್ತಿದ್ರು. ಈಗ ಭಾರತೀಯ ಚಿತ್ರರಂಗದ ಸ್ವರೂಪವೇ ಬದಲಾಗಿದೆ.

    ದಕ್ಷಿಣದ ಸಿನಿಮಾಗಳನ್ನ ಬಿಟೌನ್‌ನಲ್ಲಿ ಅಪ್ಪಿ ಒಪ್ಪಿಕೊಳ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ `ಪುಷ್ಪ’ ಸಿನಿಮಾ, ಈಗೀಗ ದಕ್ಷಿಣ ಭಾರತದ ಸಿನಿಮಾಗಳಿಗೆ ಬಾಲಿವುಡ್ ಮನ್ನಣೆ ದೊರೆಯುತ್ತಿದೆ. ಸೌತ್ ಚಿತ್ರಗಳನ್ನ ಹಿಂದಿ ಸಿನಿಮಾ ರಸಿಕರು ಮುಗಿಬಿದ್ದು ನೋಡ್ತಿದ್ದಾರೆ. ಆದರೆ ಇತ್ತೀಚಿನ ಬಿಟೌನ್ ನಟ ಜಾನ್ ಅಬ್ರಹಾಂ ಕೊಟ್ಟಿರೋ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

    ಜಾನ್ ಅಬ್ರಾಹಾಂ ನಟನೆಯ ಅಟ್ಯಾಕ್ ಚಿತ್ರ ಏ.೧ರಂದು ತೆರೆಕಂಡಿತ್ತು. ಈ ಚಿತ್ರದ ಪ್ರಚಾರದ ವೇಳೆ ನಟ ಜಾನ್, ನಾನು ಎಂದೂ ತೆಲುಗು ಸಿನಿಮಾ ಮಾಡುವುದಿಲ್ಲ. ನಾನು ಬಾಲಿವುಡ್ ಹೀರೋ, ಬಿಸಿನೆಸ್ ಮಾಡುವ ಸಲುವಾಗಿ ತೆಲುಗು ಅಥವಾ ಪರಭಾಷಾ ಚಿತ್ರಗಳಲ್ಲಿ ನಟಿಸೋದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಜಾನ್ ನಟನೆಯ `ಅಟ್ಯಾಕ್’ ಸಿನಿಮಾ ಕಲೆಕ್ಷನ್‌ಗೆ ಪೆಟ್ಟು ಬಿದ್ದಿದೆ.

    ಜಾನ್ ಅಬ್ರಾಹಾಂ ನಟನೆಯ `ಅಟ್ಯಾಕ್’ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ. ಚಿತ್ರದ ಮೊದಲ ದಿನದ ಕಲೆಕ್ಷನ್ ೩.೫ ಕೋಟಿ ಗಳಿಸಿ ಚಿತ್ರ ಸೋಲುವ ಲಕ್ಷಣ ಕಾಣುತ್ತಿದೆ. `ಅಟ್ಯಾಕ್’ ಚಿತ್ರಕ್ಕೆ ಪೈಪೋಟಿ ನೀಡುತ್ತಿರುವ ಚಿತ್ರ `ಆರ್‌ಆರ್‌ಆರ್’ ಈ ಚಿತ್ರವನ್ನ ಅಭಿಮಾನಿಗಳು ಮುಗಿಬಿದ್ದು ನೋಡ್ತಿದ್ದಾರೆ. ಇದನ್ನು ಓದಿ:ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ

    `ಆರ್‌ಆರ್‌ಆರ್’ ಚಿತ್ರದ ಎದುರು ಹೀನಾಯವಾಗಿ ಅಟ್ಯಾಕ್ ಸೋಲ್ತಿರೋದಕ್ಕೆ ನೆಟ್ಟಿಗರು ನಟ ಜಾನ್‌ರನ್ನ ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ. ತೆಲುಗಿನಲ್ಲಿ ಬಿಗ್ ಬಜೆಟ್ ಚಿತ್ರ, ತಮಿಳಿನಲ್ಲಿ ಹೈ ಒಲ್ಟೇಜ್ ಆಕ್ಷನ್, ಮಲೆಯಾಳಂನಲ್ಲಿ ಸೂಪರ್ ಕಂಟೆAಟ್, ಕನ್ನಡದಲ್ಲಿ ಭಿನ್ನ ಕಾನ್ಸೆಪ್ಟ್ ಇರುತ್ತದೆ. ಇಂತಹ ಚಿತ್ರಗಳಲ್ಲಿ ನಟಿಸಬೇಕು ಅಂದ್ರು ನಿಮಗೆ ಯಾರು ಅವಕಾಶ ಕೊಡಲ್ಲ ಅಂತಾ ಜಾನ್‌ಗೆ ನೆಟ್ಟಿಗರು ಲೆಫ್ಟು ರೈಟು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.