Tag: ಆರೋಪಿ

  • 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗೆ ಕಾರಣವಾಯ್ತು 2 ಚಿನ್ನದ ಹಲ್ಲು!

    15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗೆ ಕಾರಣವಾಯ್ತು 2 ಚಿನ್ನದ ಹಲ್ಲು!

    ಮುಂಬೈ: ಜಾಮೀನು ಪಡೆದು ಪೊಲೀಸರ ಕಣ್ತಪ್ಪಿಸಿ 15 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು (Mumbai Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಚಿನ್ನದ ಹಲ್ಲುಗಳು (Gold Teeth) ಆತ ಪೊಲೀಸರಿಗೆ ಸಿಕ್ಕಿಬೀಳಲು ಕಾರಣವಾಯ್ತು.

    ಪ್ರವೀಣ್ ಅಶುಭ ಜಡೇಜಾ ಎಂಬಾತ ಬಂಧಿತ ಆರೋಪಿ (Accused). ಆರೋಪಿಯ ಇತರ ಸಹಚರರಿಂದ ಮಾಹಿತಿ ಪಡೆದ ಪೊಲೀಸರು, ಎಲ್‌ಐಸಿ (LIC) ಸಿಬ್ಬಂದಿ ಎಂದು ಹೇಳಿಕೊಂಡು ಪ್ರವೀಣ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಲ್ಲೇಶ್ವರಂನಲ್ಲಿ ಇನ್ನೂ 10 Language Lab ಸ್ಥಾಪನೆ – ಅಶ್ವತ್ಥ ನಾರಾಯಣ ಭರವಸೆ

    2007ರಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಜಡೇಜಾ, ಅಂಗಡಿ ಮಾಲೀಕನಿಗೆ 40 ಸಾವಿರ ರೂ.ಗಳನ್ನು ವಂಚಿಸಿ ತನ್ನ ಗುರುತನ್ನು ಮರೆಸಿಕೊಂಡು ಗುಜರಾತಿನ ಕಚ್‌ನಲ್ಲಿ ನೆಲೆಸಿದ್ದ. ಆರೋಪಿ ಹಾಕಿಸಿಕೊಂಡಿದ್ದ 2 ಬಂಗಾರದ ಹಲ್ಲುಗಳು ಆತನನ್ನು ಗುರುತಿಸಲು ಸಹಕಾರಿಯಾದವು ಎಂದು ಪೊಲೀಸರು ತಿಳಿಸಿದ್ದಾರೆ.

    ತಾನು ಕೆಲಸ ಮಾಡುತ್ತಿದ್ದ ಬಟ್ಟೆ ಅಂಗಡಿ ಮಾಲೀಕನಿಗೆ ವಂಚಿಸಿ, ಪೊಲೀಸರಿಗೆ ತಪ್ಪು ಮಾಹಿತಿ ನೀಡಿ ಬಂಧನಕ್ಕೊಳಗಾಗಿದ್ದ ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ. ಮರಳಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಕಾರಣ ಆತನನ್ನು ಬಂಧಿಸುವಂತೆ ನ್ಯಾಯಾಲಯ (Mumbai Court) ಆದೇಶಿಸಿತ್ತು. ಇದನ್ನೂ ಓದಿ: DGCA ನಿಮಯಗಳ ಉಲ್ಲಂಘನೆ – ಏರ್‌ಏಷ್ಯಾ ಇಂಡಿಯಾಗೆ 44 ಲಕ್ಷ ದಂಡ

    ವ್ಯಾಪಾರಿಯೊಬ್ಬರಿಂದ 40 ಸಾವಿರ ರೂ. ಹಣವನ್ನು ಪಡೆದು ಬರಲು ಬಟ್ಟೆ ಅಂಗಡಿ ಮಾಲೀಕರು, ಜಡೇಜನಿಗೆ ತಿಳಿಸಿದ್ದರು. ಮಾಲೀಕರ ಮಾತಿನಂತೆ ಹಣ ಪಡೆದ ಪ್ರವೀಣ್, ಅದನ್ನು ಕಳ್ಳರು ದೋಚಿಕೊಂಡು ಹೋದರೆಂದು ಕತೆ ಕಟ್ಟಿದ್ದ. ಈ ಸಂಬಂಧ ಮಾಲೀಕ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಪೊಲೀಸರು ಪ್ರವೀಣ್‌ನನ್ನು ಬಂಧಿಸಿದ್ದರು. ಅದಾದ ಬಳಿಕ ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ನಂತರ ಪ್ರವೀಣ್ ತಲೆಮರೆಸಿಕೊಂಡಿದ್ದ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಶೈಲಿಯಲ್ಲಿ ಪತ್ನಿ ಕೊಲೆ – ಆರೋಪಿ ಪತಿಯಿಂದ ರೋಚಕ ರಹಸ್ಯ ಬಯಲು

    `ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಶೈಲಿಯಲ್ಲಿ ಪತ್ನಿ ಕೊಲೆ – ಆರೋಪಿ ಪತಿಯಿಂದ ರೋಚಕ ರಹಸ್ಯ ಬಯಲು

    ಬೆಂಗಳೂರು: `ಬಾ ನಲ್ಲೆ ಮಧುಚಂದ್ರಕೆ’ (Baa Nalle Madhuchandrake) ಸಿನಿಮಾ ಶೈಲಿಯಲ್ಲಿ ಹೆಂಡತಿಯನ್ನ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನ ಪಶ್ಚಿಮ ಬಂಗಾಳದಲ್ಲಿ (West Bengal) ಬಂಧಿಸಿದ್ದ ಬೆಂಗಳೂರು ಪೊಲೀಸರು ಅನೇಕ ರೋಚಕ ಸಂಗತಿಗಳನ್ನ ಬಯಲಿಗೆಳೆದಿದ್ದಾರೆ.

    ಬೆಂಗಳೂರಿನ ಸುದ್ದಗುಂಟೆ ಪೊಲೀಸರು (Bengaluru Suddagunte Palya Police), ನಾಝ್ ಮಹಿಳೆಯ ಕೊಲೆ ಪ್ರಕರಣದ ತನಿಖೆ (Investigation) ನಡೆಸಿದಾಗ ಬೆಚ್ಚಿಬೀಳುವ ಮಾಹಿತಿಗಳು ಬೆಳಕಿಗೆ ಬಂದಿವೆ. ಇದನ್ನೂ ಓದಿ: ನೈಟ್‌ಕ್ಲಬ್‌ನಲ್ಲಿ ಡ್ರಗ್ಸ್‌ ಸೇವನೆ ಆರೋಪ – 300 ಮಂದಿ ಪೊಲೀಸರ ವಶಕ್ಕೆ

    ಬೆಂಗ್ಳೂರಲ್ಲಿ `ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ಶೈಲಿಯಲ್ಲಿ ಮರ್ಡರ್ - ಫ್ಲೈಟ್‌ ಟಿಕೆಟ್ ಬುಕ್ ಮಾಡಿ ಸಿಕ್ಕಿಬಿದ್ದ ಆರೋಪಿ!

    ಆರೋಪಿ ಪತಿ ನಾಸಿರ್ ಹೊಸೈನ್ ಇತಿಹಾಸ ಕೆದಕಿದಾಗ ಬಾಂಗ್ಲಾದೇಶದ ಮೂಲದವನು ಅನ್ನೋದು ಬೆಳಕಿಗೆ ಬಂದಿದೆ. ಈತ ಅಕ್ರಮವಾಗಿ ಬೆಂಗಳೂರಲ್ಲಿ ವಾಸವಿದ್ದ. ಅದಕ್ಕಾಗಿ ಇಲ್ಲಿನ ಆಧಾರ್ (Adhar Card), ಪಾನ್‌ಕಾರ್ಡ್ (Pan Card) ಹಾಗೂ ಮತದಾರರ ಗುರುತಿನ ಚೀಟಿ (Voter ID) ಸಹ ಪಡೆದಿದ್ದ. ದೆಹಲಿ ವಿಳಾಸದಲ್ಲಿ ನಕಲಿ ಆಧಾರ್, ಕೊಲ್ಕತ್ತಾ ವಿಳಾಸದಲ್ಲಿ ಪಾನ್‌ಕಾರ್ಡ್ ಹಾಗೂ ಬೆಂಗಳೂರು ವಿಳಾಸದಲ್ಲಿ ವೋಟರ್ ಐಡಿ ಹೊಂದಿದ್ದ. ತನ್ನ ಬಗ್ಗೆ ಯಾವುದೇ ಮಾಹಿತಿ ನೀಡದೇ ನಾಝ್ ಎಂಬಾಕೆಯನ್ನ ವಿವಾಹವಾಗಿದ್ದ. 6 ತಿಂಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಇದರಿಂದ ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ.

    ಪತ್ನಿ ನಾಝ್‌ಳನ್ನ ಕೊಲೆ ಮಾಡಿ ವಿಮಾನದಲ್ಲಿ ದೆಹಲಿಗೆ ಹೋಗಿದ್ದ ಹೊಸೈನ್, ಬಾಂಗ್ಲಾದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ. ದೆಹಲಿಯಿಂದ ಸಿಲಿಗುರಿಗೆ ಹೊರಟಿದ್ದ ಈ ವೇಳೆ ಪಶ್ಚಿಮ ಬಂಗಾಳ ಪೊಲೀಸರ ಸಹಾಯದಿಂದ ಬಾಂಗ್ಲಾದೇಶದ ಗಡಿಯಲ್ಲೇ ಖೆಡ್ಡಕ್ಕೆ ಕೆಡವಲಾಗಿದೆ. ಸಿಲಿಗುರಿ ಸಮೀದ ಇಸ್ಲಾಂಪುರ್ ಜಿಲ್ಲೆಯಲ್ಲಿ ಆರೋಪಿಯನ್ನ ಅರೆಸ್ಟ್ ಮಾಡಲಾಗಿದೆ.

    ಬೆಂಗ್ಳೂರಲ್ಲಿ `ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ಶೈಲಿಯಲ್ಲಿ ಮರ್ಡರ್ - ಫ್ಲೈಟ್‌ ಟಿಕೆಟ್ ಬುಕ್ ಮಾಡಿ ಸಿಕ್ಕಿಬಿದ್ದ ಆರೋಪಿ!

    ಢಾಕಾದಲ್ಲಿ ಎಂಜಿನಿಯರಿಂಗ್ ತರಬೇತಿ ಪಡೆದಿದ್ದ ಹೊಸೈನ್ ಹಾರ್ಡ್ವೇರ್ ಎಂಜಿನಿಯರ್ ಆಗಿ ಗುರುತಿಸಿಕೊಂಡಿದ್ದ. ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸದಿದ್ದರೂ ಲ್ಯಾಪ್‌ಟಾಪ್, ಮೊಬೈಲ್ ರಿಪೇರಿಯಲ್ಲಿ ಪರಿಣಿತಿ ಹೊಂದಿದ್ದ. ಆಪಲ್ ಕಂಪನಿಯ ಸಿಸ್ಟಂ, ಲ್ಯಾಪ್‌ಟಾಪ್ ರಿಪೇರಿ ಮಾಡೋದ್ರಲ್ಲಿ ನಿಸ್ಸೀಮನಾಗಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ಪೊಲೀಸರ ವೇಷದಲ್ಲಿ ಬಂದು 80 ಲಕ್ಷ ರೂ. ದೋಚಿಕೊಂಡು ಹೋಗಿದ್ದ ಆರೋಪಿಗಳ ಬಂಧನ

    ಆರೋಪಿ ಭಾರತಕ್ಕೆ ಕಾಲಿಟ್ಟಿದ್ದು ಹೇಗೆ?
    ಆರೋಪಿ ಸಿಲಿಗುರಿ ಮೂಲಕ ಕೊಲ್ಕತ್ತಾಗೆ ಪ್ರವೇಶ ಪಡೆದಿದ್ದ. ಸುಳ್ಳು ದಾಖಲಾತಿ ಸೃಷ್ಟಿಸಿಕೊಂಡು ಕೆಲಸ ಶುರು ಮಾಡಿದ್ದ. ನಂತರ ಮುಂಬೈ, ದೆಹಲಿ ಸೇರಿದಂತೆ ಗುರುಗ್ರಾಮದಲ್ಲಿ ತನ್ನದೇ ಮೊಬೈಲ್ ರಿಪೇರಿ ಅಂಗಡಿ ಹೊಂದಿದ್ದ. 2019 ರಂದು ಬೆಂಗಳೂರಿಗೆ ಬಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಹೊಸೈನ್ 75 ಸಾವಿರ ಸಂಬಳ ಪಡೆಯುತ್ತಿದ್ದ.

    ಆರೋಪಿ ತಾನು ವಾಸವಿದ್ದ ಮನೆ ಪಕ್ಕದಲ್ಲೇ ಇದ್ದ ನಾಝ್ ಜೊತೆಗೆ ಪರಿಚಯವಾಗಿ ಪ್ರೇಮಾಂಕುರವಾಗಿದೆ. ನಂತರ ತನ್ನ ಮಾಹಿತಿ ಬಚ್ಚಿಟ್ಟು ವಿವಾಹವಾಗಿದ್ದ. 6 ತಿಂಗಳ ನಂತರ ಪತ್ನಿ ಶೀಲ ಶಂಕಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಪೊಲೀಸರ ದಿಕ್ಕು ತಪ್ಪಿಸಲು ತನ್ನದೇ ಹೆಸರಿನಲ್ಲಿ ಎರಡೆರಡು ವಿಮಾನದ ಟಿಕೆಟ್ ಬುಕ್ ಮಾಡಿದ್ದ. ಎರಡೆರಡು ಓಯೋ ರೂಂ ಬುಕ್ ಮಾಡ್ತಿದ್ದ ಆರೋಪಿ ಹೊಸೈನ್, ಒಂದು ಕಡೆ ಚೆಕ್ ಇನ್ ಮಾಡಿ ಮತ್ತೊಂದು ಕಡೆ ವಾಸ್ತವ್ಯ ಹೂಡುತ್ತಿದ್ದ. ಆಗಾಗ ಮೊಬೈಲ್ ಆನ್ ಮಾಡಿ ಆಫ್ ಮಾಡ್ತಿದ್ದ. ಪೊಲೀಸರು ಬರೋದ್ರೊಳಗೆ ಮಿಂಚಿನಂತೆ ಮಾಯವಾಗ್ತಿದ್ದ.

    ಕೊನೆಗೂ ಪಶ್ಚಿಮ ಬಂಗಾಳದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಈಶಾನ್ಯ ವಿಭಾಗ ಡಿಸಿಪಿ ಸಿಕೆ ಬಾಬಾ, ಆರೋಪಿಯ ಹೆಡೆಮುರಿಕಟ್ಟಿದ್ದಾರೆ. ಆರೋಪಿ ಬಾಂಗ್ಲಾ ಪ್ರವೇಶ ಮಾಡಿದ್ದೇ ಆಗಿದ್ದಿದ್ದರೆ ಆತನ ಬಂಧನ ಕಷ್ಟವಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೀನು ಹಿಡಿಯಲು ಹೋಗಿದ್ದವರ ಮೇಲೆ ಫೈರಿಂಗ್ ಪ್ರಕರಣ- ಮರಳಿನ ವಿಚಾರವೇ ಕೊಲೆಗೆ ಕಾರಣ

    ಮೀನು ಹಿಡಿಯಲು ಹೋಗಿದ್ದವರ ಮೇಲೆ ಫೈರಿಂಗ್ ಪ್ರಕರಣ- ಮರಳಿನ ವಿಚಾರವೇ ಕೊಲೆಗೆ ಕಾರಣ

    ಹಾಸನ: ಮೀನು (Fishing) ಹಿಡಿಯಲು ಹೋಗಿದ್ದವರ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳನ್ನು ನಾಗರಾಜ್ ಹಾಗೂ ಅನಿಲ್ ಎಂದು ಗುರುತಿಸಲಾಗಿದೆ. ಪೆಲ್ಲೆಟ್ ಗನ್‍ನಿಂದ ಗುಂಡಿನ ದಾಳಿ ಮಾಡಿ ಕೊಲೆ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ.

    ಕೊಲೆಗೆ ಕಾರಣವೇನು..?: 2022ರ ನವೆಂಬರ್ 30 ರಂದು ನವೀನ್ ಅಕ್ರಮವಾಗಿ ಮರಳು (Sand Mafia) ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಟ್ರಾಕ್ಟರ್ ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದರು. ಅದೇ ಗ್ರಾಮದ ನಾಗರಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅನುಮಾನಗೊಂಡ ನವೀನ್, ಪದೇ ಪದೇ ನಾಗರಾಜ್ ಜೊತೆ ಜಗಳವಾಡುತ್ತಿದ್ದ. ಅಲ್ಲದೇ ನಾಗರಾಜ್ ವಿಶೇಷ ಚೇತನನಾಗಿದ್ದು ಇನ್ನೊಂದು ಕಾಲು ಮುರಿಯುತ್ತೇನೆ ಎಂದು ಧಮ್ಕಿ ಹಾಕಿದ್ದ. ಇದರಿಂದ ಕೆರಳಿದ ನಾಗರಾಜ್ ನವೀನ್ ಮರ್ಡರ್ ಮಾಡಲು ಸ್ಕೆಚ್ ಹಾಕಿದ್ದ.

    ಜ.10 ರಂದು ರಾತ್ರಿ 8.10 ರ ಸಮಯದಲ್ಲಿ ನವೀನ್‍ (Naveen) ಗೆ ಕರೆ ಮಾಡಿದ ನಾಗರಾಜ್ ಎಲ್ಲಿದ್ದಿಯಾ ಎಂದು ಕೇಳಿದ್ದಾನೆ. ಆಗ ಆತ, ಮೀನು ಹಿಡಿಯಲು ಬಂದಿದ್ದೇನೆ ಎಂದು ಹೇಳಿದಾಗ ನಾನು ಬರ್ತೀನಿ ಎಂದು ನಾಗರಾಜ್ ಹೇಳಿದ್ದಾನೆ. ಇತ್ತ ಕೂಲಿ ಕೆಲಸ ಮಾಡುವ ಅನಿಲ್ ಎಂಬಾತನನ್ನು ಒಂದು ಕೆಲಸವಿದೆ ಎಂದು ನಾಗರಾಜ್ (Nagaraj) ಗನ್ ಜೊತೆ ಕರೆದುಕೊಂಡು ಹೋಗಿದ್ದ.

    ಹಳ್ಳದ ದಡದಲ್ಲಿ ನವೀನ್, ದಯಾನಂದ್, ಪದ್ಮನಾಭ ಹಾಗೂ ರಾಜಾಚಾರಿ ಮೀನು ಹಿಡಿಯುತ್ತಿದ್ದರು. ಈ ವೇಳೆ ಫೋನ್‍ನಲ್ಲಿ ಮಾತನಾಡುತ್ತಿದ್ದ ನವೀನ್‍ನನ್ನು ಗುರುತು ಮಾಡಿ ಫೈರ್ ಮಾಡಿ ನಾಗರಾಜ್ ಹತ್ಯೆ ಮಾಡಿದ್ದಾನೆ. ನಂತರ ಎರಡೇ ನಿಮಿಷಗಳಲ್ಲಿ ಗ್ರಾಮದಲ್ಲಿ ವಾಹನ ಇಟ್ಟುಕೊಂಡಿದ್ದ ಚಾಲಕನಿಗೆ ಕರೆ ಮಾಡಿದ್ದ ನಾಗರಾಜ್, ಶೂಟೌಟ್‍ನಿಂದ ನವೀನ್ ಸಾವನ್ನಪ್ಪಿದ್ದಾನೆ. ಇಬ್ಬರಿಗೆ ಗಾಯವಾಗಿದೆ ಎಂದು ಹೇಳಿ ಹಾಸನದ ಆಸ್ಪತ್ರೆಗೆ ಇಬ್ಬರನ್ನು ತಂದು ದಾಖಲಿಸಿದ್ದಾನೆ.

    ಈ ಮೂಲಕ ನಾಗರಾಜ್, ಕೊಲೆ ಪ್ರಕರಣದ ದಿಕ್ಕು ತಪ್ಪಿಸಲು ಆಸ್ಪತ್ರೆಗೆ ಸೇರಿಸಿ ನಾಟವಾಡಿದ್ದ. ಸದ್ಯ ಮರಳಿನ ವಿಚಾರವೇ ಕೊಲೆಗೆ ಕಾರಣ ಎಂಬುದಾಗಿ ತಿಳಿದುಬಂದಿದೆ. ಪ್ರಕರಣ ಸಂಬಂಧ ಒಂದೇ ದಿನದಲ್ಲಿ ಪ್ರಕರಣ ಭೇದಿಸಿ ಯಸಳೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹೇಮಾವತಿ ದಡದಲ್ಲಿ ಮೀನು ಹಿಡಿಯಲು ಹೋಗಿದ್ದವರಿಗೆ ಗುಂಡೇಟು- ಓರ್ವ ಸಾವು, ಇಬ್ಬರು ಗಂಭೀರ

    ಆರೋಪಿ ನಾಗರಾಜ್, ಅನಿಲ್‍ನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಗನ್ ಅನ್ನು ವಶಕ್ಕೆ ಪಡೆದಿರುವುದಾಗಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 73 ಜನರ ಬಲಿ ತೆಗೆದುಕೊಂಡ ಬಿಹಾರ ಕಳ್ಳಭಟ್ಟಿ ಪ್ರಕರಣದ ಮಾಸ್ಟರ್ ಮೈಂಡ್ ಕೊನೆಗೂ ಪೊಲೀಸ್ ಬಲೆಗೆ

    73 ಜನರ ಬಲಿ ತೆಗೆದುಕೊಂಡ ಬಿಹಾರ ಕಳ್ಳಭಟ್ಟಿ ಪ್ರಕರಣದ ಮಾಸ್ಟರ್ ಮೈಂಡ್ ಕೊನೆಗೂ ಪೊಲೀಸ್ ಬಲೆಗೆ

    ಪಾಟ್ನಾ: ಬಿಹಾರದ (Bihar) ಸರನ್ (Saran) ಜಿಲ್ಲೆಯಲ್ಲಿ 73 ಜನರ ಸಾವಿಗೆ ಕಾರಣವಾದ ಕಳ್ಳಭಟ್ಟಿ ದುರಂತ (Bihar Hooch Tragedy) ಪ್ರಕರಣದ ಮಾಸ್ಟರ್ ಮೈಂಡ್ (Mastermind) ಮೋಸ್ಟ್ ವಾಂಟೆಡ್ ವ್ಯಕ್ತಿಯನ್ನು ದೆಹಲಿ ಪೊಲೀಸರ (Delhi Police) ತಂಡ ಕೊನೆಗೂ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿಯನ್ನು ಸರನ್ ಜಿಲ್ಲೆಯ ದೋಯಿಲಾ ಗ್ರಾಮದ ನಿವಾಸಿ ರಾಮ್ ಬಾಬು ಮಹತೋ ಎಂದು ಗುರುತಿಸಲಾಗಿದೆ. ಆತ ದೆಹಲಿಯಲ್ಲಿ ಅಡಗಿರುವ ಶಂಕೆಯ ಮೇರೆಗೆ ಅಪರಾಧ ವಿಭಾಗ ಅಂತರ್ ರಾಜ್ಯ ಸೆಲ್‌ಗೆ ಮಾಹಿತಿ ನೀಡಿತ್ತು ಎಂದು ವಿಶೇಷ ಪೊಲೀಸ್ ಕಮಿಷನರ್ ರವೀಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ.

    ತಾಂತ್ರಿಕ ಕಣ್ಗಾವಲು ಮತ್ತು ನಿರ್ದಿಷ್ಟ ಒಳಹರಿವಿನ ಆಧಾರದ ಮೇಲೆ ಬಿಹಾರ ಕಳ್ಳಭಟ್ಟಿ ದುರಂತ ಪ್ರಕರಣದ ಮಾಸ್ಟರ್ ಮೈಂಡ್‌ನನ್ನು ದ್ವಾರಕಾದಲ್ಲಿ ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಪಿಯ ಬಂಧನದ ಬಗ್ಗೆ ಮುಂದಿನ ಕ್ರಮಕ್ಕಾಗಿ ಬಿಹಾರ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಸಿಗಲ್ಲವೆಂದು ಸ್ಮಶಾನದಲ್ಲೇ ಬೆಂಕಿ ಹಚ್ಚಿಕೊಂಡ ಯುವಕ!

    spurious_liquor

    ಬಿಹಾರದಲ್ಲಿ ಮದ್ಯ ನಿಷೇಧವಿರುವ ಕಾರಣ ಆರೋಪಿಗಳು ಬೇಗನೆ ಹಾಗೂ ಸುಲಭವಾಗಿ ಹಣ ಗಳಿಸುವ ಆಸೆಯಿಂದ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕಗೆ ಹೋಗಬೇಕಿದ್ದ ಕೊರಿಯರ್‌ನಲ್ಲಿತ್ತು 4 ಮಾನವನ ತಲೆಬುರುಡೆ

    Live Tv
    [brid partner=56869869 player=32851 video=960834 autoplay=true]

  • ಅತ್ಯಾಚಾರದ ಆರೋಪದ ಮೇಲೆ ಬಂಧಿಯಾಗಿದ್ದ ಯುವಕ ಜೈಲಿನಲ್ಲೇ ನೇಣಿಗೆ ಶರಣು

    ಅತ್ಯಾಚಾರದ ಆರೋಪದ ಮೇಲೆ ಬಂಧಿಯಾಗಿದ್ದ ಯುವಕ ಜೈಲಿನಲ್ಲೇ ನೇಣಿಗೆ ಶರಣು

    ಮುಂಬೈ: ಅಪ್ರಾಪ್ತ ಬಾಲಕಿಯ (Girl) ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧಿತನಾಗಿದ್ದ (Arrest) ಯುವಕನೋರ್ವ ನವಿ ಮುಂಬೈನ ತಲೋಜಾ ಕೇಂದ್ರ ಕಾರಾಗೃಹದಲ್ಲಿ (Jail) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

    ಕರಣ್ ಪ್ರಮೋದ್ ಸೆರಿಯನ್ (19) ಮೃತ ಆರೋಪಿ. ಕರಣ್ ವಿರುದ್ಧ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಆತ ಸೆ. 26ರಿಂದ ಜೈಲಿನಲ್ಲಿದ್ದ. ಆದರೆ ಆತ ಬ್ಯಾರಕ್‍ನಲ್ಲಿ ತನ್ನ ಪ್ಯಾಂಟ್ ಬಳಸಿ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

    ಇದನ್ನು ಗಮನಿಸಿದ ಇತರ ಕೈದಿಗಳು ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಜೈಲು ಅಧಿಕಾರಿಗಳು ಕೂಡಲೇ ಕರಣ್‍ಪ್ರಮೋದ್‍ನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಕರಣ್ ಪ್ರಮೋದ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಘಟನೆಯೇನು?: ಕರಣ್ ಪ್ರಮೋದ್ ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾದ 16 ವರ್ಷದ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಇಬ್ಬರು ಓಡಿ ಹೋಗಿ ಥಾಣೆಯ ಮುಂಬ್ರಾದಲ್ಲಿ ಇಬ್ಬರು ವಾಸಿಸುತ್ತಿದ್ದರು. ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಕರಣ್ ಪ್ರಮೋದ್ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆಗೆ ಜಲ ಆಯೋಗ ಅನುಮತಿ: ಪ್ರಹ್ಲಾದ್ ಜೋಶಿ ಮಾಹಿತಿ

    ಆದರೆ ಬಾಲಕಿಯ ಪೋಷಕರು ಇದನ್ನು ವಿರೋಧಿಸಿ ಕರಣ್ ಪ್ರಮೋದ್ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ ಇದರಿಂದ ಮನನೊಂದು ಕರಣ್ ಪ್ರಮೋದ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ದಲಿತರಲ್ಲಿ ಒಗ್ಗಟ್ಟು ಮೂಡಬಾರದು ಅನ್ನೋ ಭಾವನೆ ಬಿಜೆಪಿಯದ್ದು: ಧರ್ಮಸೇನಾ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಪೆರೋಲ್ ಪಡೆದು ಪರಾರಿಯಾದಾತ ತನ್ನದೇ ಸಾವಿನ ಕತೆ ಕಟ್ಟಿದ – 15 ವರ್ಷಗಳ ಬಳಿಕ ಮತ್ತೆ ಅಂದರ್

    ಪೆರೋಲ್ ಪಡೆದು ಪರಾರಿಯಾದಾತ ತನ್ನದೇ ಸಾವಿನ ಕತೆ ಕಟ್ಟಿದ – 15 ವರ್ಷಗಳ ಬಳಿಕ ಮತ್ತೆ ಅಂದರ್

    ಬೆಂಗಳೂರು: ಆತ ಓದಿದ್ದು 8ನೇ ಕ್ಲಾಸ್, ಮಾಡಿದ್ದು ಮರ್ಡರ್, ಆದರೆ ಫೇಮಸ್ ಆಗಿದ್ದು ಮಾತ್ರ ಚೆಸ್ ಆಟದಲ್ಲಿ. ಇದನ್ನೇ ಅಡ್ವಾಂಟೇಜ್ ಮಾಡಿಕೊಂಡ ಆರೋಪಿ ಪೆರೋಲ್ (Parole) ಕೇಸ್‌ನಲ್ಲಿ ಪರಾರಿಯಾಗಿ ಬಳಿಕ ತನ್ನದೇ ಸಾವಿನ ಕತೆ ಕಟ್ಟಿ 15 ವರ್ಷಗಳ ಬಳಿಕ ಮತ್ತೆ ಸಿಕ್ಕಿಬಿದ್ದಿದ್ದಾನೆ.

    ಕಣ್ಮುಚ್ಕೊಂಡೇ ಚೆಸ್ ಗೇಮ್ ಗೆಲ್ಲುತ್ತಿದ್ದ ಈತನ ಕತೆ ಕೇಳಿದರೆ ಒಂದು ಸಿನಿಮಾನೇ ಮಾಡಬಹುದು. ಜೈಲಿಗೆ (Jail) ಬಂದು, ಚೆಸ್ (Chess) ಕಲಿತು, ಎಸ್ಕೇಪ್ ಆದಮೇಲೂ ಪ್ಲಾನ್ ಹಾಕಿದ್ದು ದೊಡ್ಡ ಬ್ಯುಸಿನೆಸ್‌ಗೆ. ತ್ರಿಬಲ್ ರೋಲ್‌ನಲ್ಲಿ ಲೈಫ್ ಹ್ಯಾಂಡಲ್ ಮಾಡುತ್ತಿದ್ದ ಆರೋಪಿಯ ಹೆಸರು ಸುಹೇಲ್.

    ಪೆರೋಲ್ ಕೇಸ್‌ನಲ್ಲಿ ಪರಾರಿಯಾಗಿದ್ದ ಮಲ್ಟಿ ಟ್ಯಾಲೆಂಟೆಡ್ ಆರೋಪಿ ಸುಹೇಲ್‌ನನ್ನು 15 ವರ್ಷಗಳ ಬಳಿಕ ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಆತ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಂತಹ ಕಷ್ಟದ ಲೆವೆಲ್ ಚೆಸ್ ಆಟವಾದರೂ ಗೆದ್ದುಬಿಡುತ್ತಿದ್ದ. ಚಾಲಾಕಿ ಸುಹೇಲ್ 2000ದಲ್ಲಿ ಮಡಿವಾಳ ಲಿಮಿಟ್ಸ್ನಲ್ಲಿ ಮಾಜಿ ಯೋಧರೊಬ್ಬರ ಲಾರಿ ಡ್ರೈವರ್ ಆಗಿದ್ದ. ಆ ಸಂದರ್ಭ ಕೊಲೆ ಮಾಡಿ, ಡಕಾಯತಿ ಮಾಡಿದ್ದ. ಈ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 396 ಅಡಿ ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದ್ದರು.

    ಆದರೆ ಸುಹೇಲ್ ಜೈಲಿನಲ್ಲಿ ಸುಮ್ಮನೆ ಇರುತ್ತಿರಲಿಲ್ಲ. ಯಾವಾಗಲೂ ತಲೆಗೆ ಕೆಲಸ ಕೊಡುತ್ತಿದ್ದ. 4 ಗೋಡೆಗಳ ಮಧ್ಯೆ ಇದ್ದು, 7 ವರ್ಷ ಚೆಸ್ ಆಟದಲ್ಲಿ ನಿಸ್ಸೀಮನಾಗಿದ್ದ. ಜೈಲಿಗೆ ತಳ್ಳಿದ್ದೇ ತಡ ಚೆಸ್ ಆಟದ ಕಲಿಕೆಗೆ ಮುಂದಾಗಿದ್ದ ಸುಹೇಲ್ ಪುಸ್ತಕ ಓದುವುದು, ಒಬ್ಬನೇ ಕೂತು ಚೆಸ್ ಆಡುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎದುರಾಳಿ ಇಲ್ಲದಿದ್ದರೂ ಎರಡೂ ಕಡೆ ಆಟವಾಡುತ್ತಿದ್ದ.

    2 ವರ್ಷದಲ್ಲಿ ಚೆಸ್ ಆಟ ಕಲಿತು ಪರ್ಫೆಕ್ಟ್ ಆಗಿದ್ದ ಸುಹೇಲ್, ಈತನ ಒಂಟಿ ಆಟ ನೋಡಿಯೇ ಜೈಲರ್‌ಗಳು ಬೆರಗಾಗಿದ್ದರು. ಈತನ ಟ್ಯಾಲೆಂಟ್ ನೋಡಿ ಜೈಲು ಎಸ್‌ಪಿ ಆತನನ್ನು ಚೆಸ್ ಟೂರ್ನಿಗಳಿಗೆ ಕಳಿಸೋಕೆ ಶುರು ಮಾಡಿದ್ದರು. ಅಂದಿನಿಂದ ಆಟ ಶುರು ಮಾಡಿದ್ದವ ಹಿಂದಿರುಗಿ ನೋಡೇ ಇಲ್ಲ. ಸತತ ದೊಡ್ಡ ದೊಡ್ಡ ಟೂರ್ನಮೆಂಟ್‌ಗಳಲ್ಲಿ ಸುಹೇಲ್ ಚೆಸ್ ಆಟ ಗೆದ್ದು ಬರುತ್ತಿದ್ದ. ಇದನ್ನೂ ಓದಿ: ರಾತ್ರಿ ಊಟ ಬಡಿಸಲು ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಂದ ಪತಿ

    ಸುಹೇಲ್ 2007ರ ವರೆಗೂ ಟೂರ್ನಮೆಂಟ್ ಗೆದ್ದು ತಂದಿದ್ದ. ಅದೇ ನಂಬಿಕೆಯಲ್ಲಿ ಹಿರಿಯ ಅಧಿಕಾರಿಗಳ ಬಳಿ ಪೆರೋಲ್ ಕೇಳಿದ್ದ. ನನ್ನ ಹೆಂಡತಿ, ಮಕ್ಕಳನ್ನು ನೋಡಬೇಕು ಎಂದುಕೊಂಡು ಪೆರೋಲ್ ಪಡೆದು ಹೋದಾತ ವಾಪಾಸ್ ಬರಲೇ ಇಲ್ಲ. ವಾಪಸ್ ಬರುತ್ತಾನೆ ಎಂದು ಪೊಲೀಸರಿಗೆ ಸುಹೇಲ್ ಕೈ ಕೊಟ್ಟಿದ್ದ. ಈ ವೇಳೆ ತನ್ನ ಸ್ನೇಹಿತನ ಸಹಾಯ ಪಡೆದು, ತಾನು ಸತ್ತಿರುವುದಾಗಿ ಸೀನ್ ಕ್ರಿಯೇಟ್ ಮಾಡಿದ್ದ.

    ಸುಹೇಲ್ ಎಸ್ಕೇಪ್ ಆದ ಕೆಲ ತಿಂಗಳುಗಳ ನಂತರ ಹೆಣ್ಣೂರು ಲಿಮಿಟ್ಸ್‌ನಲ್ಲಿ ಒಂದು ಶವ ಸಿಕ್ಕಿತ್ತು. ಸುಹೇಲ್‌ಗೆ ಹೋಲಿಕೆಯಾಗುವಂತೆಯೇ ಇದ್ದ ಶವವಾಗಿದ್ದರಿಂದ ಈ ಬಗ್ಗೆ ಪೊಲೀಸರು ಸುಹೇಲ್ ಸ್ನೇಹಿತನನ್ನು ಕೇಳಿದ್ದರು. ಈ ವೇಳೆ ಆತನೂ ಇದು ಸುಹೇಲ್ ಶವ ಎಂದಿದ್ದ. ಅಲ್ಲಿಗೆ ಸುಹೇಲ್ ಸತ್ತುಹೋಗಿದ್ದಾನೆ ಎಂದು ಪೊಲೀಸರು ಭಾವಿಸಿದ್ದರು.‌ ಇದನ್ನೂ ಓದಿ: ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

    ಇದೆಲ್ಲದರ ಬಳಿಕ ಕಳೆದ 15 ವರ್ಷಗಳಿಂದ ಸುಹೇಲ್ ಯಾರಿಗೂ ಗುರುತು ಸಿಗದಂತೆ ಜೀವನ ಸಾಗಿಸಿದ್ದ. ಆದರೆ ಇತ್ತೀಚೆಗೆ ಪೊಲೀಸರು ಚಿಕ್ಕಮಗಳೂರಿನ ಉಪ್ಪಿನಂಗಡಿ ಕಡೆ ಹೋಗಿದ್ದಾಗ ಕೊನೆಗೂ ಪತ್ತೆಯಾಗಿದ್ದಾನೆ. ಇದೀಗ ಚಾಲಾಕಿ ಸುಹೇಲ್‌ನನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಐಷಾರಾಮಿ ಕಾರು ಖರೀದಿ ನೆಪದಲ್ಲಿ ವಂಚಿಸಿದವ ಅರೆಸ್ಟ್- 10 ಕೋಟಿ ಮೌಲ್ಯದ 9 ಕಾರು ಜಪ್ತಿ

    ಐಷಾರಾಮಿ ಕಾರು ಖರೀದಿ ನೆಪದಲ್ಲಿ ವಂಚಿಸಿದವ ಅರೆಸ್ಟ್- 10 ಕೋಟಿ ಮೌಲ್ಯದ 9 ಕಾರು ಜಪ್ತಿ

    ಬೆಂಗಳೂರು: ಹೈ ಎಂಡ್ ಕಾರುಗಳನ್ನ ಖರೀದಿ ನೆಪದಲ್ಲಿ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಕಬ್ಬನ್ ಪಾರ್ಕ್ ಪೊಲೀಸ (Cubbon Park Police Station) ರು ಬಂಧಿಸಿದ್ದಾರೆ.

    ಬಂಧಿತನನ್ನು ಸೈಯಾದ್ ಜಿಮ್ರಾನ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 10 ಕೋಟಿ ಮೌಲ್ಯದ 9 ಹೈ ಎಂಡ್ ಕಾರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಕಾರುಗಳನ್ನ ಒಳ್ಳೆಯ ಬೆಲೆಗೆ ಮಾರಾಟ ಮಾಡುವುದಾಗಿ ಹೇಳುತ್ತಿದ್ದನು. ಉದ್ಯಮಿಗಳು, ವ್ಯಾಪಾರಸ್ಥರ ಬಳಿ ಕಾರುಗಳನ್ನು ಪಡೆದು ವಂಚನೆ ಮಾಡುತ್ತಿದ್ದನು. ಆಡಿ, ಬೆನ್ಜ್, ಮಹೀಂದ್ರ ಥಾರ್, ರೇಂಜ್ ರೋವರ್, ಇನೋವಾ ಸೇರಿ ದುಬಾರಿ ಬೆಲೆಯ ಕಾರುಗಳನ್ನ ಪಡೆದು ವಂಚಿಸುತ್ತಿದ್ದನು.  ಇದನ್ನೂ ಓದಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏಮ್ಸ್ ಆಸ್ಪತ್ರೆಗೆ ದಾಖಲು

    ಉದ್ಯಮಿ ರಾಜು ಎಂಬಾತನ ರೇಂಜ್ ರೋವರ್ (Range Rover) 18 ಲಕ್ಷಕ್ಕೆ ಖರೀದಿ ಮಾಡಿ ನಂತರ ಉಳಿದ ಹಣ ನೀಡದೆ ಆರೋಪಿ ಸತಾಯಿಸುತ್ತಿದ್ದ. ಅಲ್ಲದೆ ಹಣ (Money) ನೀಡುವಂತೆ ಕೇಳಿದಕ್ಕೆ ಜೀವ ಬೆದರಿಕೆ ಹಾಕಿದ್ದ. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಉದ್ಯಮಿ ರಾಜು ದೂರು ನೀಡಿದ್ದರು. ಇದೀಗ ಕಬ್ಬನ್ ಪಾರ್ಕ್ ಪೊಲೀಸರಿಂದ ಸೈಯ್ಯದ್ ಜಿಬ್ರಾನ್‍ನನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದರೋಡೆ, ದಂಪತಿ ಕೊಲೆಯ ಮಾಸ್ಟರ್ ಮೈಂಡ್ 12ರ ಬಾಲಕ ಅರೆಸ್ಟ್

    ದರೋಡೆ, ದಂಪತಿ ಕೊಲೆಯ ಮಾಸ್ಟರ್ ಮೈಂಡ್ 12ರ ಬಾಲಕ ಅರೆಸ್ಟ್

    ಲಕ್ನೋ: ದರೋಡೆ (Robbery) ಮಾತ್ರವಲ್ಲದೇ ವೃದ್ಧ ದಂಪತಿಯ ಕೊಲೆ (Murder) ಪ್ರಕರಣದ ಮಾಸ್ಟರ್ ಮೈಂಡ್ 12 ವರ್ಷದ ಬಾಲಕ (Boy) ಸೇರಿದಂತೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

    12 ವರ್ಷದ ಬಾಲಕನೊಬ್ಬ ವೃದ್ಧ ದಂಪತಿ ಕೊಲೆಯ ಮಾಸ್ಟರ್ ಮೈಂಡ್ ಆಗಿದ್ದು, ಆತನೊಂದಿಗೆ ಇನ್ನಿಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ ನವೆಂಬರ್ 22 ರಂದು ವೃದ್ಧ ದಂಪತಿಯಾದ ಇಬ್ರಾಹಿಂ ಹಾಗೂ ಪತ್ನಿ ಹಜ್ರಾ ಶವಗಳು ತಮ್ಮ ಮನೆಯಲ್ಲಿ ಪತ್ತೆಯಾಗಿತ್ತು. ಇಬ್ಬರ ಕುತ್ತಿಗೆಗೆ ಬಟ್ಟೆ ಬಿಗಿದು ಕೊಂದಿರುವುದು ಕಂಡುಬಂದಿತ್ತು. ಇದನ್ನೂ ಓದಿ: ಬಲವಂತದ ಮತಾಂತರ ಆರೋಪ – ಕ್ರಿಸ್ಮಸ್ ಆಚರಣೆ ವೇಳೆ ಗುಂಪು ದಾಳಿ

    ವರದಿಗಳ ಪ್ರಕಾರ ಬಾಲಕ ವೃದ್ಧ ದಂಪತಿಗೆ ಪರಿಚಿತನಾಗಿದ್ದ. ಬಾಲಕ ಇಬ್ರಾಹಿಂ ಅವರ ಬಳಿ ಹೆಚ್ಚು ಹಣವಿದೆ ಎಂದು ಭಾವಿಸಿ, ತನ್ನೊಂದಿಗೆ ಇನ್ನೂ ಮೂವರನ್ನು ಒಟ್ಟುಗೂಡಿಸಿ ಅವರ ಮನೆಯನ್ನು ಲೂಟಿಗೆ ಯತ್ನಿಸಿದ್ದ. ಆದರೆ ದರೋಡೆ ವೇಳೆ ದಂಪತಿಯ ಕೊಲೆ ನಡೆದಿದೆ.

    ಇದೀಗ ಪೊಲೀಸರು ಕೊಲೆ ಮಾಸ್ಟರ್ ಮೈಂಡ್ ಬಾಲಕನೊಂದಿಗೆ ಇನ್ನಿಬ್ಬರು ಆರೋಪಿಗಳಾದ ಮಂಜೇಶ್ ಹಾಗೂ ಶಿವಂನನ್ನು ಬಂಧಿಸಿದ್ದಾರೆ. 4ನೇ ಆರೋಪಿ ಸಂದೀಪ್ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಿಂದ 12 ಸಾವಿರ ರೂ. ನಗದು, 1 ಮೊಬೈಲ್ ಫೋನ್ ಹಾಗೂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಾಜಿಯಾಬಾದ್ ಇರಿಯ ಪೊಲೀಸ್ ಇರಾಜ್ ರಾಜಾ ತಿಳಿಸಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಸೆಟ್‌ನಲ್ಲಿ ತುನೀಶಾ ಆತ್ಮಹತ್ಯೆ – ಸಹ ನಟ ಶೀಜಾನ್ ಬಂಧನ

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದವನಿಂದ ಮಗುವಿನ ಮೇಲೆ ಅತ್ಯಾಚಾರ – ಆರೋಪಿ ಬಂಧನ

    ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದವನಿಂದ ಮಗುವಿನ ಮೇಲೆ ಅತ್ಯಾಚಾರ – ಆರೋಪಿ ಬಂಧನ

    ಬೆಂಗಳೂರು: ಕೆಲಸ ಅರಸಿ ಬೆಂಗಳೂರಿಗೆ (Bengaluru) ಬಂದಿದ್ದ ವ್ಯಕ್ತಿಯೊಬ್ಬ ಮಗುವಿನ ಮೇಲೆ ಅತ್ಯಾಚಾರ (Rape) ಎಸಗಿರುವ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.

    ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬ್ಯಾಲದಕೆರೆಯಲ್ಲಿ ಘಟನೆ ನಡೆದಿದೆ. ಪೈಂಟರ್‌ ಕೆಲಸ ಮಾಡಿಕೊಂಡಿರುವ ಉತ್ತರ ಪ್ರದೇಶ ಮೂಲದ ಮನೀಶ್‌ ಎಂಬಾತ ಈ ಕೃತ್ಯ ಎಸಗಿದ್ದಾನೆ. ಇದನ್ನೂ ಓದಿ: ಆನ್‌ಲೈನ್ ಕ್ಯಾಸಿನೋ ಹುಚ್ಚು – ಬ್ಯಾಂಕ್‌ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದ ಮ್ಯಾನೇಜರ್ ಜೈಲುಪಾಲು

    STOP RAPE

    ಚಿಪ್ಸ್‌, ಬಾಳೆಹಣ್ಣು ಕೊಟ್ಟು ಮಗುವನ್ನು ಪುಸಲಾಯಿಸಿ ನಂತರ ಅತ್ಯಾಚಾರ ಎಸಗಿದ್ದಾನೆ. ಮಗು ತೀವ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಾಡಹಗಲೇ ರಸ್ತೆಯಲ್ಲಿ ಯುವತಿಯನ್ನು ಕೊಂದು ತಾನೂ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಯುವಕ ಸಾವು

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನಲ್ಲಿ ಬಾಲಕಿಯೊಂದಿಗೆ ಅಸಭ್ಯ ವರ್ತನೆ – ಯುವಕನನ್ನ ಕಂಬಕ್ಕೆ ಕಟ್ಟಿ, ಹಿಗ್ಗಾಮುಗ್ಗ ಥಳಿತ

    ಮಂಗಳೂರಿನಲ್ಲಿ ಬಾಲಕಿಯೊಂದಿಗೆ ಅಸಭ್ಯ ವರ್ತನೆ – ಯುವಕನನ್ನ ಕಂಬಕ್ಕೆ ಕಟ್ಟಿ, ಹಿಗ್ಗಾಮುಗ್ಗ ಥಳಿತ

    ಮಂಗಳೂರು: ಅಪ್ರಾಪ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಆಕೆಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಪೋಷಕರು ಹಾಗೂ ಗ್ರಾಮಸ್ಥರೇ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಡಿಸೆಂಬರ್ 13 ರಂದು ಇಲ್ಲಿನ ಕರೆಕಾಡು ಪ್ರದೇಶದಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅದೇ ಊರಿನವನಾಗಿದ್ದ ಯುವಕ ದಿನವೂ ಬಾಲಕಿಯನ್ನು ಬೈಕ್‌ನಲ್ಲಿ (Bike) ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ, ಅಲ್ಲದೇ ಬಾಲಕಿಗೆ ಕಿರುಕುಳ ನೀಡುತ್ತಿದ್ದ. ಇದನ್ನೂ ಓದಿ: ಜಮಾಲಿ ಗುಡ್ಡ ಚಿತ್ರದ ಟ್ರೇಲರ್ ರಿಲೀಸ್ : ಡಿಸೆಂಬರ್ 30ರಂದು ತೆರೆಗೆ

    ಬಾಲಕಿಯಿಂದ ವಿಷಯ ತಿಳಿದ ಪೋಷಕರು ಮರುದಿನ ಹಿಂಬಾಲಿಸಿ, ಕಿರುಕುಳ ನೀಡುತ್ತಿದ್ದ ವೇಳೆ ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ಸ್ಥಳೀಯರೂ ಇದಕ್ಕೆ ಸಾಥ್ ನೀಡಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    ಸದ್ಯ ಆರೋಪಿ ಯುವಕನ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ (Mulki Police Station) ಪೋಕ್ಸೊ ಕೇಸ್ (POCSO Case) ದಾಖಲಾಗಿದೆ. ವಿಚಾರಣೆ ಬಳಿಕ ಆರೋಪಿಯ ಹೇಳಿಕೆ ಪಡೆದು ಹಲ್ಲೆ ನಡೆಸಿದವರ ಮೇಲೂ ದೂರು ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]