Tag: ಆರೋಪಿ ಬಂಧನ

  • ಖಾಸಗಿ ಶಾಲೆ ಮಾಲೀಕರಿಂದ 17 ಬಾಲಕಿಯರಿಗೆ ಲೈಂಗಿಕ ಕಿರುಕುಳ

    ಖಾಸಗಿ ಶಾಲೆ ಮಾಲೀಕರಿಂದ 17 ಬಾಲಕಿಯರಿಗೆ ಲೈಂಗಿಕ ಕಿರುಕುಳ

    ಲಕ್ನೋ: ಪ್ರಾಯೋಗಿಕ ಪರೀಕ್ಷೆ ನೆಪದಲ್ಲಿ 17 ಬಾಲಕಿಯರಿಗೆ ಖಾಸಗಿ ಶಾಲೆ ಮಾಲೀಕರು ಲೈಂಗಿಕ ಕಿರುಕುಳ ನೀಡಿದ ಘಟನೆ ಉತ್ತರಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಮುಜಾಫರ್‌ನಗರ ಜಿಲ್ಲೆಯ ಪುರ್ಕಾಜಿ ಪ್ರದೇಶದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸೂರ್ಯ ದೇವ್ ಪಬ್ಲಿಕ್ ಸ್ಕೂಲ್‌ನ ನಿರ್ದೇಶಕ ಯೋಗೇಶ್ ಕುಮಾರ್ ಚೌಹಾಣ್ ಮತ್ತು ಪುರ್ಕಾಜಿ ಪ್ರದೇಶದ ಜಿಜಿಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅರ್ಜುನ್ ಸಿಂಗ್ ಆರೋಪಿಗಳು. ಇವರು ಸಂತ್ರಸ್ತ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದರು. ಸಂತ್ರಸ್ತರೆಲ್ಲರೂ ಬಡಕುಟುಂಬದವರಾಗಿದ್ದಾರೆ.

    ಏನಿದು ಪ್ರಕರಣ?
    ಪ್ರಾಯೋಗಿಕ ಪರೀಕ್ಷೆಗೆಂದು ಬಾಲಕಿಯರನ್ನು ಮ್ಯಾನೇಜರ್ ಬೇರೆ ಶಾಲೆಗೆ ಕರೆದೊಯ್ದಿದ್ದರು. ಯೋಗೇಶ್ ಸೂರ್ಯ ದೇವ್ ಅವರು ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ 17 ಬಾಲಕಿಯರನ್ನು ಪ್ರಾಯೋಗಿಕ ಪರೀಕ್ಷೆಗೆಂದು ಜಿಜಿಎಸ್ ಶಾಲೆಗೆ ಕರೆದೊಯ್ದು ರಾತ್ರಿ ಅಲ್ಲಿಯೇ ಇರುವಂತೆ ಹೇಳಿದ್ದಾರೆ. ಆಗ ಇಬ್ಬರು ಆರೋಪಿಗಳು ಅಪ್ರಾಪ್ತ ಬಾಲಕಿಯರಿಗೆ ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಬಗ್ಗೆ ಪೋಷಕರೂ ಎಷ್ಟೇ ಪ್ರಯತ್ನಿಸಿದರೂ ದೂರು ದಾಖಲಿಸಲು ಸಾಧ್ಯವಾಗಿರಲಿಲ್ಲ. ನಂತರ ಇಬ್ಬರು ಸಂತ್ರಸ್ತರ ಪೋಷಕರು ಸ್ಥಳೀಯ ಶಾಸಕನ ಗಮನಕ್ಕೆ ತಂದಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ಸ್ಥಳೀಯ ಶಾಸಕ ಅಲ್ಲಿನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿದ್ದಾರೆ. ಇದರಿಂದಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಡಿಕೆಶಿ ಅಕ್ರಮ ಆಸ್ತಿ ಗಳಿಸಿದ್ದಾರೆಂದು ಒಪ್ಪಿಕೊಂಡಿದ್ದಾರೆ: ಸಿಟಿ ರವಿ

    ಶಾಲೆಯ ಮಾಲೀಕರಿಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ. ಈಗಾಗಲೇ ಒಬ್ಬರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಪುರಕಾಜಿ ಠಾಣಾಧಿಕಾರಿ ವಿನೋದ್ ಕುಮಾರ್ ಸಿಂಗ್ ವಿರುದ್ಧ ಪೊಲೀಸ್ ಇಲಾಖೆ ವಿಚಾರಣೆಯನ್ನೂ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮರಳು ದಂಧೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ

  • 15ರ ಬಾಲಕಿ ಗರ್ಭಿಣಿ – ಅತ್ಯಾಚಾರಗೈದ ಹಳಿಯಾಳ ಪುರಸಭೆ ಸಿಬ್ಬಂದಿ ಅರೆಸ್ಟ್

    15ರ ಬಾಲಕಿ ಗರ್ಭಿಣಿ – ಅತ್ಯಾಚಾರಗೈದ ಹಳಿಯಾಳ ಪುರಸಭೆ ಸಿಬ್ಬಂದಿ ಅರೆಸ್ಟ್

    ಕಾರವಾರ: 15 ವರ್ಷದ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿಯಾಗಿಸಿದ ಪುರಸಭೆಯ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಕನ್ನಡದ ಹಳಿಯಾಳ ತಾಲೂಕಿನಲ್ಲಿ ನಡೆದಿದೆ.

    ಹಳಿಯಾಳದ ಮುರ್ಕವಾಡ ಗ್ರಾಮದ ನಿವಾಸಿ ಸಚಿನ್ ಹೊಳೆಪ್ಪನವರ್(24) ಬಂಧಿತ ಆರೋಪಿಯಾಗಿದ್ದಾನೆ. ಸಚಿನ್ ಹಳಿಯಾಳ ಪುರಸಭೆಯಲ್ಲಿ ಜೆಸಿಬಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದನು.

    ಸಚಿನ್ ತನ್ನ ಊರಿನ ಬಾಲಕಿಯೊಬ್ಬಳ ಮೇಲೆ ಅತ್ಯಚಾರ ನಡೆಸಿದ್ದನು. ಆದರೆ ಈ ಬಗ್ಗೆ ಬಾಲಕಿ ಯಾರಿಗೂ ತಿಳಿಸಿರಲಿಲ್ಲ. ಕೆಲವು ದಿನಗಳ ಬಳಿಕ ಆರೋಗ್ಯ ಸಮಸ್ಯೆ ಕಂಡುಬಂದ ಕಾರಣಕ್ಕೆ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಪಾಸಣೆ ವೇಳೆ ಆಕೆ ಗರ್ಭಿಣಿಯಾಗಿರುವುದು ಬಹಿರಂಗವಾಗಿದೆ.

    ವಿಷಯ ತಿಳಿದ ತಕ್ಷಣ ಬಾಲಕಿಯನ್ನು ವಿಚಾರಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ನಂತರ ಪಾಲಕರು ಹಳಿಯಾಳದ ಜೀಜಾಮಾತಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದಾರೆ. ಸದ್ಯ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

  • ಅಪಹರಿಸಿ, ಕೊಲೆಗೈದು ಅಪ್ರಾಪ್ತೆಯ ಶವದ ಮೇಲೆಯೇ ಅತ್ಯಾಚಾರ ಮಾಡ್ದ!

    ಅಪಹರಿಸಿ, ಕೊಲೆಗೈದು ಅಪ್ರಾಪ್ತೆಯ ಶವದ ಮೇಲೆಯೇ ಅತ್ಯಾಚಾರ ಮಾಡ್ದ!

    ಡೆಹ್ರಾಡೂನ್: ಆರು ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಕೊಲೆಗೈದು, ಆಕೆಯ ಶವದ ಮೇಲೆಯೇ ಕಾಮುಕನೊಬ್ಬ ಅತ್ಯಾಚಾರವೆಸಗುವ ಮೂಲಕ ಮೃಗೀಯ ವರ್ತನೆ ತೋರಿದ ಘಟನೆ ಉತ್ತರಾಖಂಡ್ ನಲ್ಲಿ ನಡೆದಿದೆ.

    ಬಾಲಕಿ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಶುಕ್ರವಾರದಂದು ಅವರು ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಈ ವೇಳೆ ತನ್ನ ಗೆಳೆಯರ ಜೊತೆ ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಕಾಣೆಯಾಗಿದ್ದಳು. ಸಂಜೆ ಮನೆಗೆ ಬಂದ ಪೋಷಕರು ಮಗಳು ಕಾಣೆಯಾಗಿರುವ ವಿಷಯ ತಿಳಿದು ಹುಡುಕಾಟ ನಡೆಸಿದ್ದಾರೆ. ಆದ್ರೆ ಶನಿವಾರದಂದು ಕಾಡಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.

    ಬಾಲಕಿಯ ಮನೆ ಬಳಿ ಇದ್ದ ಪೌಲ್ಟ್ರಿ ಫಾರಂ ಸೆಕ್ಯುರಿಟಿ ಗಾರ್ಡ್ ಈ ಕೃತ್ಯವೆಸಗಿದ್ದಾನೆ. ಆಟವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿದ ಆರೋಪಿ, ಆಕೆಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಬಾಲಕಿ ಕಿರುಚಾಡಿದ್ದಕ್ಕೆ ಕೋಪಗೊಂಡು ಆಕೆಯನ್ನ ಕೊಲೆ ಮಾಡಿದ್ದಾನೆ. ಬಳಿಕ ಬಾಲಕಿಯ ಶವದ ಮೇಲೆಯೇ ಅತ್ಯಾಚಾರವೆಸಗಿ ತನ್ನ ಕಾಮತೃಷೆ ತೀರಿಸಿಕೊಳ್ಳುವ ಮೂಲಕ ವಿಕೃತಿ ಮೆರೆದಿದ್ದಾನೆ.

    ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಅಲ್ಲದೆ ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಹುಡುಗಿಯರ ಹೆಸರಲ್ಲಿ ಫೇಕ್ ಖಾತೆ- ಖಾಸಗಿ ಪೋಟೋ, ಮಾಹಿತಿ ಪಡೆದು ಲಕ್ಷ ಲಕ್ಷ ದೋಚಿದ ಯುವಕ!

    ಹುಡುಗಿಯರ ಹೆಸರಲ್ಲಿ ಫೇಕ್ ಖಾತೆ- ಖಾಸಗಿ ಪೋಟೋ, ಮಾಹಿತಿ ಪಡೆದು ಲಕ್ಷ ಲಕ್ಷ ದೋಚಿದ ಯುವಕ!

    ಬೆಂಗಳೂರು: ಹುಡುಗಿಯರ ಹೆಸರಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದು, ಚಂದದ ಬೆಡಗಿಯರ ಬಣ್ಣಬಣ್ಣದ ಫೋಟೋ ಹಾಕಿ ಲಕ್ಷಾಂತರ ರೂ. ಹಣವನ್ನು ವಂಚಿಸಿದ ಯುವಕ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

    ಪ್ರಖ್ಯಾತ್ ವಿನಯ್ ಬಂಧಿತ ಆರೋಪಿ. ಮೂಲತಃ ತುಮಕೂರಿನ ಶಿರಾ ಗೇಟ್ ಕೆ.ಹೆಚ್.ಬಿ ಕಾಲೋನಿ ವಾಸಿಯಾಗಿರುವ ಪ್ರಖ್ಯಾತ್ ಫೇಸ್‍ಬುಕ್‍ನಲ್ಲಿ ಫೇಕ್ ಖಾತೆ ತೆರೆದು, ಹುಡುಗಿ ಅಂತ ನಂಬಿಸಿ ವಂಚಿಸುತ್ತಿದ್ದನು. ವಿನುತ ಹಾಗೂ ವಿಜೇತ ಎಂಬ ಹುಡುಗಿಯರ ಹೆಸರಲ್ಲಿ ಖಾತೆ ತೆರೆದಿದ್ದ ಆರೋಪಿ, ಬೆಂಗಳೂರಿನ ಖಾಸಗಿ ಕಾಲೇಜ್ ವಿದ್ಯಾರ್ಥಿನಿ ಎಂದು ಪೋಸ್ಟ್ ಗಳನ್ನು ಹಾಕುತ್ತಿದ್ದ.

    ಕೆಲವು ಹುಡುಗಿಯರ ಖಾಸಗಿ ಪೋಟೋ ಮತ್ತು ಮಾಹಿತಿ ಪಡೆದು ಲಕ್ಷ ಲಕ್ಷ ರೂ. ಹಣಕ್ಕೆ ಆರೋಪಿ ಬೇಡಿಕೆ ಇಡುತ್ತಿದ್ದನು. ಅಲ್ಲದೆ ಆನ್‍ಲೈನ್ ಮೂಲಕ ಹಣ ಪಡೆದು ಜನರಿಗೆ ವಂಚಿಸುತ್ತಿದ್ದನು. ಈತನಿಂದ ವಂಚನೆಗೊಳಗಾದವರು ಪೊಲೀಸರ ಮೊರೆ ಹೋಗಿದ್ದಾರೆ. ಸೈಬರ್ ಪೊಲೀಸರಿಗೆ ವಂಚನೆ ಕುರಿತು ದೂರು ಸಲ್ಲಿಸಿದ್ದು, ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸದ್ಯ ಈ ದೂರಿನ ಆಧಾರದ ಮೇರೆಗೆ ಪ್ರಖ್ಯಾತ್‍ನನ್ನು ಸೈಬರ್ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವತಿಯರನ್ನ ವಿದೇಶಕ್ಕೆ ಸಾಗಾಣೆ ಮಾಡುತ್ತಿದ್ದ ಖದೀಮ- 32 ಯುವತಿಯರ ರಕ್ಷಣೆ

    ಯುವತಿಯರನ್ನ ವಿದೇಶಕ್ಕೆ ಸಾಗಾಣೆ ಮಾಡುತ್ತಿದ್ದ ಖದೀಮ- 32 ಯುವತಿಯರ ರಕ್ಷಣೆ

    ಬೆಂಗಳೂರು: ವಿದ್ಯಾಭ್ಯಾಸದ ಹೆಸರಲ್ಲಿ 32 ಯುವತಿಯರನ್ನು ವಿದೇಶಕ್ಕೆ ಸಾಗಾಣೆ ಮಾಡುತ್ತಿದ್ದ ಖದೀಮನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಪೊಲೀಸರು ಬಂಧಿಸಿದ್ದಾರೆ.

    ಟೊಮಿ ಟಾಮ್ (36) ಬಂಧಿತ ಆರೋಪಿ. 32 ಯುವತಿಯರಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ಕೊಡಿಸುವುದಾಗಿ ನಂಬಿಸಿ ಟೊಮಿ ಟಾಮ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ತಂದಿದ್ದನು. ಏರ್ ಪೋರ್ಟ್‍ನಲ್ಲಿ ಇಮೀಗ್ರಿಶನ್ ಪ್ರಕಿಯೆಯ ಸಮಯದಲ್ಲಿ ಆರೋಪಿ ಯುವತಿಯರನ್ನು ವಿದೇಶಕ್ಕೆ ಅಕ್ರಮವಾಗಿ ಸಾಗಾಣೆ ಮಾಡುತ್ತಿರುವ ಸಂಗತಿ ಸಿಬ್ಬಂದಿಗೆ ತಿಳಿದಿದೆ. ತಕ್ಷಣ ಸಿಬ್ಬಂದಿಏರ್ ಪೋರ್ಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿ ಟೊಮಿ ಟಾಮ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರು 32 ಅಮಾಯಕ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಘಟನೆ ಕುರಿತು ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿಗೆ ಗುಂಡಿಕ್ಕಿದ ಉದ್ಯಮಿ ಪ್ರಕರಣ- ಬಂಧನವಾಗುವ ಮೊದ್ಲೇ ಮಕ್ಳನ್ನೂ ಮುಗಿಸಲು ಸ್ಕೆಚ್ ಹಾಕಿದ್ದ!

    ಪತ್ನಿಗೆ ಗುಂಡಿಕ್ಕಿದ ಉದ್ಯಮಿ ಪ್ರಕರಣ- ಬಂಧನವಾಗುವ ಮೊದ್ಲೇ ಮಕ್ಳನ್ನೂ ಮುಗಿಸಲು ಸ್ಕೆಚ್ ಹಾಕಿದ್ದ!

    ಬೆಂಗಳೂರು: ಜಯನಗರದಲ್ಲಿ ತನ್ನ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸಹನಾ(42) ಪತಿ ಗಣೇಶ್ ನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು, ಈ ಘಟನೆ ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿ ನಡೆದಿತ್ತು. ಆರೋಪಿ ಮಕ್ಕಳ ಮೇಲೂ ಶೂಟ್ ಮಾಡಿದ್ದು, ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆ ವಿವರ:
    ಉದ್ಯಮಿ ಗಣೇಶ್ ಮೂಲತಃ ಸಕಲೇಶಪುರದವನಾಗಿದ್ದಾನೆ. ಅಲ್ಲಿ ಕಾಫಿ ತೋಟ ಮಾರಿ ಬೆಂಗಳೂರಿಗೆ ಬಂದಿದ್ದು, ನಗರದಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದನು. ಕನಕಪುರ ರಸ್ತೆಯಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದನು. ಆದ್ರೆ ಕಳೆದ ಎರಡು ವರ್ಷದಿಂದ ರೆಸಾರ್ಟ್ ನಲ್ಲಿ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದನು. ಇತ್ತೀಚೆಗೆ ಸಾಲಗಾರರ ಕಾಟ ಜಾಸ್ತಿಯಾಗಿತ್ತು. ಹೀಗಾಗಿ ಗಣೇಶ್ ಹಾಗೂ ಪತ್ನಿ ಸಹಾನ ನಡುವೆ ಆಗಾಗ ಸಾಲದ ವಿಚಾರಕ್ಕೆ ಜಗಳವಾಗುತ್ತಿತ್ತು. ಗುರುವಾರ ರಾತ್ರಿಯೂ ಇದೇ ವಿಚಾರಕ್ಕೆ ಸಂಬಂಧಿಸಿ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಜಗಳ ತಾರಕಕ್ಕೇರಿದ್ದು ಗಣೇಶ್ ತನ್ನ ಲೈಸೆನ್ಸ್ ಗನ್ ನಿಂದ ಪತ್ನಿ ಸಹಾನಾಗೆ ಶೂಟ್ ಮಾಡಿದ್ದನು. ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಗಣೇಶ್ ತನ್ನ ಪತ್ನಿಗೆ ಶೂಟ್ ಮಾಡಿ ಮುಗಿಸಿದ್ದನು.

    ಅರೆಸ್ಟ್ ಆಗಿದ್ದು ಹೇಗೆ?:
    ಮನೆಯಲ್ಲೇ ಪತ್ನಿ ಸಹಾನ ಸಾವನ್ನಪ್ಪಿದ್ದ ಬಳಿಕ ಮೂರು ಮಕ್ಕಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಬಿಡದಿಯ ಫಾರ್ಮ್ ಹೌಸ್ ನಲ್ಲಿ ತಲೆಮರೆಸಿಕೊಂಡಿದ್ದನು. ಫಾರ್ಮ್ ಹೌಸ್ ನಲ್ಲಿ ಮಕ್ಕಳಿಗೆ ಶೂಟ್ ಮಾಡಿದ್ದಾನೆ. ಪರಿಣಾಮ ಹೆಣ್ಣು ಮಗಳ ಹೊಟ್ಟೆಗೆ ಹಾಗೂ ಮಗನ ಕೈ ಹಾಗೂ ತೊಡೆ ಭಾಗಕ್ಕೆ ಗಾಯಗಳಾಗಿವೆ. ಬಳಿಕ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗ್ತಿದ್ದನು.

    ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮಕ್ಕಳು, ಗಣೇಶ್ ಬಳಿ ನೀರು ಕೇಳಿದ್ದಾರೆ. ಹೀಗಾಗಿ ನೀರು ಕುಡಿಸಲೆಂದು ಆತ ಕಾರಿನಲ್ಲೇ ಮುಖ್ಯ ರಸ್ತೆಗೆ ಬಂದಿದ್ದಾನೆ. ಇತ್ತ ಗಣೇಶ್ ಗಾಗಿ ಹುಡುಕುತ್ತಿದ್ದ ಪೊಲೀಸರಿಗೆ ಆತನ ಕಾರ್ ನಂಬರ್ ಮಾಹಿತಿ ಸಿಕ್ಕಿದೆ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಗಣೇಶ್ ನನ್ನು ಬೆನ್ನಟ್ಟಿದ್ದು, ಅಂಚೆ ಪಾಳ್ಯದ ಬಳಿ ಬಂಧಿಸಿದ್ದಾರೆ. ಇನ್ನು ಗಾಯಗೊಂಡ ಮಕ್ಕಳಿಬ್ಬರನ್ನ ಕೋಣನಕುಂಟೆಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಕ್ಕಳಿಬ್ಬರ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಪೊಲೀಸರು ತನ್ನನ್ನು ಬಂಧಿಸೋ ಮುಂಚೆ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದೆ. ಅದಕ್ಕಾಗಿಯೇ ಮಕ್ಕಳ ಮೇಲೆ ಗುಂಡು ಹಾರಿಸಿದ್ದೆ. ನನಗೆ ತುಂಬಾ ಸಾಲ ಇತ್ತು. ಅದಕ್ಕಾಗಿ ಆಸ್ತಿ ಮಾರಾಟ ಮಾಡಲು ಪ್ರಯತ್ನ ಮಾಡ್ತಿದ್ದೆ. ಆಸ್ತಿ ಮಾರಾಟ ಮಾಡಲು ಪತ್ನಿ ಅನುಮತಿ ನೀಡುತ್ತಿರಲಿಲ್ಲ. ಆಸ್ತಿ ಮಾರಾಟ ಮಾಡಿದ್ದರೆ ಮಕ್ಕಳು ಬೀದಿಗೆ ಬರುತ್ತಾರೆ ಎಂದು ಹೇಳುತ್ತಿದ್ದಳು. ಮಕ್ಕಳಿಗಾಗಿ ನಾನು ಜೀವ ಕಳೆದುಕೊಳ್ಳುವ ರೀತಿ ಇರಲಿಲ್ಲ. ಅದಕ್ಕಾಗಿ ನಾನು ಈ ಕೃತ್ಯ ಮಾಡಿದೆ ಅಂತ ಗಣೇಶ್ ತಪ್ಪೊಪ್ಪಿಕೊಂಡಿದ್ದಾನೆ.

    https://www.youtube.com/watch?v=FtP56UNZo1w