Tag: ಆರೋಪಿ

  • ಬಿಕ್ಲು ಶಿವ ಕೊಲೆ ಕೇಸ್‌ – ಮತ್ತೊಂದು ರಹಸ್ಯ ಸ್ಫೋಟ, ಕೊಲೆಯಾದ 15 ನಿಮಿಷಕ್ಕೆ ಎ1 ಜಗ್ಗ ಎಸ್ಕೇಪ್‌

    ಬಿಕ್ಲು ಶಿವ ಕೊಲೆ ಕೇಸ್‌ – ಮತ್ತೊಂದು ರಹಸ್ಯ ಸ್ಫೋಟ, ಕೊಲೆಯಾದ 15 ನಿಮಿಷಕ್ಕೆ ಎ1 ಜಗ್ಗ ಎಸ್ಕೇಪ್‌

    – ಹತ್ಯೆಗೆ ಹೋಟೆಲ್‌ನಲ್ಲೇ ನಡೆದಿತ್ತು ಪ್ಲ್ಯಾನ್‌; 2 ಗಂಟೆ 38 ನಿಮಿಷ ಮಾತುಕತೆ
    – ಹತ್ಯೆಗೂ ಮುನ್ನ ಭರ್ಜರಿ ಬಾಡೂಟ

    ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ (Biklu shiva) ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆ ಎ1 ಆರೋಪಿ ಜಗ್ಗ @ ಜಗದೀಶ್‌ (Jagga) ಕುರಿತು ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

    ಹೌದು. ಬಿಕ್ಲು ಶಿವನ ಹತ್ಯೆಯಾದ ಕೇವಲ ಹದಿನೈದೇ ನಿಮಿಷಕ್ಕೆ ಜಗ್ಗ ಮನೆಯಿಂದ ಎಸ್ಕೇಪ್‌ ಆಗಿದ್ದಾನೆ ಅನ್ನೋದು ಸಿಸಿಟಿವಿ ದೃಶ್ಯವಾಳಿಯಿಂದ ಬೆಳಕಿಗೆ ಬಂದಿದೆ. ಅಂದು ರಾತ್ರಿ 8 ಗಂಟೆಗೆ ಶಿವಪ್ರಕಾಶ್‌ನ ಕೊಲೆಯಾಗಿದೆ. ರಾತ್ರಿ 8:15 ಗಂಟೆಗೆ ಜಗ್ಗ ಮನೆಯಿಂದ ಎಸ್ಕೇಪ್‌ ಆಗಿದ್ದಾನೆ. ತನ್ನ ಆಡಿ ಕಾರ್‌ ಮೂಲಕ ಹೆಣ್ಣೂರಿನ ಕ್ಯಾನೋಪಿ ಅಪಾರ್ಟ್ಮೆಂಟ್ ನಿಂದ ನೇರ ಚೆನೈಗೆ ಎಸ್ಕೇಪ್ ಆಗಿದ್ದಾನೆ. ಜಗ್ಗ ಮನೆಯಿಂದ ಎಸ್ಕೇಪ್‌ ಆಗುತ್ತಿರುವ ಎಕ್ಸ್‌ಕ್ಲೂಸಿವ್‌ ಸಿಸಿಟಿವಿ ದೃಶ್ಯಾವಳಿ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ.

    ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿರುವ ಜಗ್ಗನನ್ನ ಪತ್ತೆಹಚ್ಚಲು ತನಿಖಾ ತಂಡ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ಇದನ್ನೂ ಓದಿ: Digital Arrest | ಸಿಬಿಐ ಅಧಿಕಾರಿ ಸೋಗಿನಲ್ಲಿ ಕರೆ – ಬ್ಯಾಂಕ್‌ ಅಧಿಕಾರಿಗೆ 56 ಲಕ್ಷಕ್ಕೂ ಅಧಿಕ ಹಣ ವಂಚನೆ

    2 ಗಂಟೆ 38 ನಿಮಿಷ – ಹೋಟೆಲ್‌ನಲ್ಲಿ ನಡೆದಿತ್ತು ಪ್ಲ್ಯಾನ್‌
    ಇನ್ನೂ ಬಿಕ್ಲು ಶಿವ ಹತ್ಯೆಗೂ ಮುನ್ನ ಹಂತಕರು ಹೋಟೆಲ್‌ನಲ್ಲಿ ಮಾಸ್ಟರ್‌ ಪ್ಲಾನ್‌ ರೂಪಿಸಿದ್ದರು ಅನ್ನೋದು ಸಿಸಿಟಿವಿ ದೃಶ್ಯಗಳಿಂದ ಗೊತ್ತಾಗಿದೆ. ಕಿರಣ್‌ ಸಾರಥ್ಯದಲ್ಲಿ ಹೋಟೆಲ್‌ಗೆ ಬಂದಿದ್ದ ಹಂತಕರು ಸುಮಾರು 2 ಗಂಟೆ 38 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಇಲ್ಲಿಯೇ ಶಿವನ ಹತ್ಯೆಗೆ ಪ್ಲ್ಯಾನ್‌ ನಡೆದಿತ್ತು. ಹತ್ಯೆ ಬಳಿಕ ಹೇಗೆ ಎಸ್ಕೇಪ್‌ ಆಗಬೇಕು? ಅನ್ನೋ ಮಾತುಕತೆಯೂ ಆಗಿತ್ತು ಅನ್ನೋದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದೆಲ್ಲದರ ಎಕ್ಸ್‌ಕ್ಲೂಸಿವ್‌ ದೃಶ್ಯಾವಳಿಗಳು ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ.

    ಬಂಧಿತ ಹಂತಕರಲ್ಲಿ ಕಿರಣ್, ಮದನ್ ಪ್ರದೀಪ್, ವಿಮಲ್, ಸೇರಿ ಒಟ್ಟು 9 ಮಂದಿ ಒಂದೇ ಟೇಬಲ್‌ನಲ್ಲಿ ಕೂತು ಪ್ಲ್ಯಾನ್‌ ಮಾಡಿದ್ದರು. ಸಂಜೆ 4 ಗಂಟೆಗೆ ಹೋಟೆಲ್‌ಗೆ ಎಂಟ್ರಿ ಆಗಿದ್ದ ಹಂತಕರು 2 ಗಂಟೆಗೂ ಹೆಚ್ಚುಕಾಲ ಒಂದೇ ಟೇಬಲ್‌ನಲ್ಲಿ ಕೂತು ಸ್ಕೆಚ್‌ ಹಾಕಿದ್ದರು. ಮೆನು ತರಿಸಿಕೊಂಡು ಭರ್ಜರಿ ಊಟ ಕೂಟ ಮಾಡಿದ್ದರು ಅನ್ನೋ ತನಿಖಾಧಿಕಾರಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಉಡುಪಿಯಲ್ಲಿ ಭಾರೀ ಮಳೆ – ಬೈಂದೂರು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ 

  • ಬಿಕ್ಲು ಶಿವ ಕೊಲೆ ಕೇಸ್‌ಗೆ ಟ್ವಿಸ್ಟ್‌ – ಪ್ರಮುಖ ಆರೋಪಿಯಿಂದ ನಟಿ ರಚಿತಾ ರಾಮ್‌ಗೆ ಭರ್ಜರಿ ಗಿಫ್ಟ್

    ಬಿಕ್ಲು ಶಿವ ಕೊಲೆ ಕೇಸ್‌ಗೆ ಟ್ವಿಸ್ಟ್‌ – ಪ್ರಮುಖ ಆರೋಪಿಯಿಂದ ನಟಿ ರಚಿತಾ ರಾಮ್‌ಗೆ ಭರ್ಜರಿ ಗಿಫ್ಟ್

    ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ (Biklu Shiva Murder Case) ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಸ್ಫೋಟಕ ರಹಸ್ಯಗಳು ಬಯಲಾಗುತ್ತಿವೆ. ಕೊಲೆ ಪ್ರಕರಣದ ಎ1 ಆರೋಪಿ ಜಗ್ಗ ಅಲಿಯಾಸ್‌ ಜಗದೀಶ್ ನಟಿ ರಚಿತಾ ರಾಮ್‌ಗೆ (Rachita ram) ಭರ್ಜರಿ ಗಿಫ್ಟ್‌ ಕೊಟ್ಟಿರುವುದು ಬೆಳಕಿಗೆ ಬಂದಿದೆ.

    ಪ್ರಕರಣದ ಪ್ರಮುಖ ಆರೋಪಿ ಜಗ್ಗ ಡಿಂಪಲ್‌ ಕ್ವೀನ್‌ಗೆ ಸೀರೆ ಹಾಗೂ ಗೋಲ್ಡ್ ಗಿಫ್ಟ್ ನೀಡಿರುವ ಫೋಟೋ ವೈರಲ್‌ ಆಗಿದೆ. ರವಿ ಬೋಪಣ್ಣ ಸಿನಿಮಾ ಶೂಟಿಂಗ್‌ ವೇಳೆ ಜಗ್ಗ ನಟಿಗೆ ಈ ಉಡುಗೊರೆಯನ್ನ ನೀಡಿದ್ದಾನೆ. ಈ ಫೋಟೋದಲ್ಲಿ ಹಿರಿಯ ನಟ ರವಿಚಂದ್ರನ್‌ (Ravichandran) ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕೊಲೆ ಆರೋಪಿಗೆ ಸಿನಿ ನಂಟಿರುವುದು ಗೊತ್ತಾಗಿದೆ. ಇದನ್ನೂ ಓದಿ: ಕಲಬುರಗಿ | ಜೂಜಾಡುತ್ತಿದ್ದ ಕಾಂಗ್ರೆಸ್, ಬಿಜೆಪಿ ಮುಂಖಂಡರ ಸಹಿತ 7 ಮಂದಿ ಅರೆಸ್ಟ್

    ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಬೈರತಿ ಬಸವರಾಜ್ ಹೆಸರು ಕೇಳಿಬಂದಿತ್ತು. ಪೊಲೀಸರು ಅವರನ್ನ ವಿಚಾರಣೆಗೂ ಒಳಪಡಿಸಿದ್ದರು. ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆಯೂ ತನಿಖಾಧಿಕಾರಿ ಸೂಚಿಸಿದ್ದಾರೆ. ಅಲ್ಲದೇ ಎ1 ಜಗ್ಗದೀಶ್‌ ಸಹಚರರಾದ ಅನಿಲ್, ಅರುಣ್ ಹಾಗೂ ನವೀನ್‌ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಬಳಿಕ ಅರುಣ್ ಹಾಗೂ ನವೀನ್ ತಲೆಮರೆಸಿಕೊಂಡಿದ್ದರು. ಸದ್ಯ ಮೂವರನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಒಡಿಶಾ ಹೋಟೆಲ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ – ಕಾಂಗ್ರೆಸ್ ಸ್ಟೂಡೆಂಟ್ ಲೀಡರ್ ಅರೆಸ್ಟ್

    ಏನಿದು ಪ್ರಕರಣ?
    ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಶಿವಪ್ರಕಾಶ್‌ನನ್ನು (ಬಿಕ್ಲು ಶಿವ) ಹಲಸೂರು ಮನೆಯ ಎದುರು ಜುಲೈ 15ರಂದು ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣದ ಆರೋಪಿಗಳಾದ ಕಿರಣ್, ವಿಮಲ್, ಪ್ರದೀಪ್, ಮದನ್ ಹಾಗೂ ಸ್ಯಾಮ್ಯುವೆಲ್‌ನನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಪ್ರಕರಣದ ಎ5 ಆರೋಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಶನಿವಾರ ವಿಚಾರಣೆ ಮಾಡಲಾಗಿತ್ತು. ಇದನ್ನೂ ಓದಿ: ನಮ್ಮ ಹುಡ್ಗಿ ತಂಟೆಗೆ ಬಂದ್ರೆ ಮುಗ್ಸಿ ಬಿಡ್ತೀನಿ – ಲಾಂಗ್ ಹಿಡಿದು ರೌಡಿಶೀಟರ್ ಪುಂಡಾಟ

  • ಕೋಲಾರ | 1998ರಲ್ಲಿ ಕೇಸ್‌ – 27 ವರ್ಷದ ಬಳಿಕ ಆರೋಪಿ ಅರೆಸ್ಟ್‌

    ಕೋಲಾರ | 1998ರಲ್ಲಿ ಕೇಸ್‌ – 27 ವರ್ಷದ ಬಳಿಕ ಆರೋಪಿ ಅರೆಸ್ಟ್‌

    ಕೋಲಾರ: 1998ರಲ್ಲಿ ದಾಖಲಾಗಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷಗಳ ಬಳಿಕ ಕೋಲಾರದ ಗಲ್ ಪೇಟೆ ಪೊಲೀಸರು ಆರೋಪಿಯನ್ನ (Accused) ಬಂಧಿಸಿದ್ದಾರೆ. ಇದನ್ನೂ ಓದಿ: KRIDLನಲ್ಲಿ ಬಹುಕೋಟಿ ಹಗರಣ – ಬಿಜೆಪಿ ಮಾಜಿ ಶಾಸಕನ ವಿರುದ್ಧ ಅಕ್ರಮ ಆರೋಪ

    ನಗರದ ಕೋಟೆ ಬಡಾವಣೆಯ ನಿವಾಸಿ ಪ್ಯಾರೇಜಾನ್ ಬಂಧಿತ ಆರೋಪಿ. ಈತ 1998ರಲ್ಲಿ ಜಗಳ ಮಾಡಿಕೊಂಡಿದ್ದ. ಈತನ ವಿರುದ್ಧ ಗಲ್‌ ಪೇಟೆ ಪೊಲೀಸರು ಹಲ್ಲೆ, ಪ್ರಾಣ ಬೆದರಿಕೆ, ನಷ್ಟ ಉಂಟು ಮಾಡಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರದಿಂದ ರೂಲ್ಸ್ – ಪೋಷಕರ ಸಂದರ್ಶನ, ಮನಸೋ ಇಚ್ಛೆ ಫೀಸ್‌ಗೆ ಬ್ರೇಕ್

    ಇದೀಗ ಸೂಕ್ತ ಮಾಹಿತಿ ಆಧರಿಸಿ ಆರೋಪಿಯನ್ನ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ಆರೋಪಿ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೇದೆ ಮಂಜುನಾಥ್ ಅವರಿಗೆ ಪೊಲೀಸ್‌ ಇಲಾಖೆ (Kolara Police Department) ಅಭಿನಂದನೆ ಸಲ್ಲಿಸಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಎಫೆಕ್ಟ್‌; ಕಾರಿನ ಮೇಲೆ ಬಿದ್ದ ಮರದ ಕೊಂಬೆ – ಬೈಕ್‌ ಸವಾರ ಜಸ್ಟ್‌ ಮಿಸ್‌

  • ರೇಣುಕಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?

    ರೇಣುಕಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?

    – ಪ್ರಕರಣದ ಕಿಂಗ್‌ಪಿನ್‌ ಪವಿತ್ರಾಗೌಡ ಅನ್ನೋದು ಬಟಾಬಯಲಾಗಿದ್ದೇಗೆ?

    ಬೆಂಗಳೂರು: ದರ್ಶನ್ ಮತ್ತು ಗ್ಯಾಂಗ್‌ನಿಂದ ರೇಣುಕಸ್ವಾಮಿ ಹತ್ಯೆ ಪ್ರಕರಣದ ಕಿಂಗ್ ಪಿನ್ ಪವಿತ್ರಾಗೌಡ ಅನ್ನೋದು ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ.

    ಎ1 ಆರೋಪಿಯಾಗಿರುವ ಪವಿತ್ರಾಗೌಡಗೆ ಸದ್ಯ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರದ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ಪವಿತ್ರಾಗೌಡಗೆ ಸೇರಿ ಉಳಿದ ಆರೋಪಿಗಳು ಜುಲೈ 10ರ ವರೆಗೆ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಲಿದ್ದಾರೆ. ಈ ಬೆನ್ನಲ್ಲೇ ಪವಿತ್ರಾಗೌಡ ಅವರೇ ಕೃತ್ಯಕ್ಕೆ ಪ್ರಮುಖ ಕಾರಣ ಎಂಬುದನ್ನು ಪೊಲೀಸರು ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಗಣಿ ನಾಡಿನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಸಿಎಂ ಯೋಗ – ನಟಿ ಶ್ರೀಲೀಲಾ ಸಾಥ್‌

    ಪೊಲೀಸರ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?
    ಪ್ರಕರಣದ ಎ1, ಎ3 ರಿಂದ ಎ7, ಎ11, ಎ12, ಎ13, ಹಾಗೂ ಎ16 ಆರೋಪಿಗಳು ಕೊಲೆಯಂತ ಒಂದು ಗಂಭೀರ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿ ಕೃತ್ಯ ಎಸಗಿದ್ದು, ಇವರಿಗೆ ಕಾನೂನಿನ ಮೇಲೆ ಕಿಂಚಿತ್‌ ಗೌರವ ಇಲ್ಲದೇ ಇರೋದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ. ಇದನ್ನೂ ಓದಿ: ವಿಧಾನಸೌಧದ ಎದುರು ಡಿಕೆಶಿ ಯೋಗ – ನಟಿ ಅನು ಪ್ರಭಾಕರ್‌, ಕ್ರಿಕೆಟಿಗ ಮನಿಷ್‌ ಪಾಂಡೆ ಸಾಥ್‌

    ಎ1 ಆರೋಪಿಯೇ ಕೃತ್ಯಕ್ಕೆ ಪ್ರಮುಖ ಕಾರಣ ಕರ್ತೆಯಾಗಿದ್ದು ಈಕೆಯು ಪ್ರಚೋದನೆ ನೀಡಿ ಇತರೆ ಆರೋಪಿಗಳೊಂದಿಗೆ ಸೇರಿ ಕೊಲೆಗೆ ಒಳಸಂಚು ರೂಪಿಸಿರುವುದು ಮತ್ತು ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿರುತ್ತದೆ. ಎ2 ಆರೋಪಿಯು ತನ್ನ ಹಣ ಹಾಗೂ ಇತರೆ ಆರೋಪಿಗಳನ್ನು ಒಳಗೊಂಡ ತನ್ನ ಅಭಿಮಾನಿ ಬಳಗವನ್ನು ಬಳಸಿಕೊಂಡು ಕೃತ್ಯದಲ್ಲಿ ಭಾಗಿಯಾಗಿ ಹಾಗೂ ಭಾಗಿಯಾಗಿಸಿ ನೆಲದ ಕಾನೂನನ್ನು ದುರುಪಯೊಗ ಪಡಿಸಿಕೊಂಡಿರುವುದು ಸಾಕ್ಷ್ಯಾಧಾರಗಳಿಂದ ಕಂಡು ಬಂದಿರುತ್ತದೆ.

    ಎ2 ಆರೋಪಿಯು ತನ್ನ ಹಣಬಲ ಮತ್ತು ಪ್ರಭಾವಿ ಅಭಿಮಾನಿ ಬಳಗವನ್ನು ಬಳಿಸಿಕೊಂಡು ಅಮಾಯಕ ಮೃತ ರೇಣುಕಾಸ್ವಾಮಿಯನ್ನು ಚಿತ್ರದುರ್ಗದ ಎ4 ಮತ್ತು ಎ6 ರಿಂದ ಎ8 ರ ವರೆಗಿನ ಆರೋಪಿಗಳಿಂದ ಆತನನ್ನು ಅಪಹರಣ ಮಾಡಿಸಿದ್ದಾರೆ. ಮೃತನ ಬಳಿಯಿಂದ ಚಿನ್ನಾಭರಣಗಳನ್ನು ಬಿಚ್ಚಿಸಿಕೊಂಡು ಪಟ್ಟಣಗೆರೆಯ ಎ10 ಆರೋಪಿ ವಿನಯ್ ಸಂಬಂಧಿಯಾದ ಜಯಣ್ಣ ಅವರಿಗೆ ಸೇರಿದ್ದ ಶೆಡ್‌ಗೆ ಕರೆತಂದು ಅಲ್ಲಿ ಎ1 ಆರೋಪಿಯು ಸೇರಿದಂತೆ ಇತರೆ ಆರೋಪಿಗಳೊಂದಿಗೆ ಸಮಾನ ಉದ್ದೇಶದಿಂದ ಎಲ್ಲರೂ ಸೇರಿ ಮೃತನ ಮೇಲೆ ಅಮಾನುಷವಾಗಿ ಮತ್ತು ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇದೆಲ್ಲವೂ ಇದೆಲ್ಲವೂ ಈವರೆಗಿನ ತನಿಖೆಯಲ್ಲಿ ಸಂಗ್ರಹಿಸಿರುವ ಭೌತಿಕ, ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳಿಂದ ದೃಢಪಟ್ಟಿರುತ್ತದೆ.

    ಆರೋಪಿಗಳು ಕೃತ್ಯದ ನಂತರ ಮತ್ತೆ ಒಳಸಂಚು ರೂಪಿಸಿ ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದ ಶವವನ್ನು ಸಾಗಿಸಲು ತಮ್ಮ ಹಣದ ಪ್ರಭಾವ ಬಳಸಿ ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಹಣದ ಆಮಿಷ ತೋರಿಸಿ ಅವರ ಮೂಲಕ ಶವವನ್ನು ಕೃತ್ಯ ನಡೆದ ಸ್ಥಳದಿಂದ ಬೇರೆ ಕಡೆ ಸಾಗಿಸಿ ಸಾಕ್ಷಿ ನಾಶ ಪಡಿಸಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ. ಇದನ್ನೂ ಓದಿ: ಅಫ್ಘಾನ್‌ ವಿರುದ್ಧ ಭಾರತಕ್ಕೆ 47 ರನ್‌ಗಳ ಸೂಪರ್‌ ಜಯ – ಹಿಟ್‌ಮ್ಯಾನ್‌ ವಿಶೇಷ ಸಾಧನೆ!

    ಪ್ರಕರಣದ ಎ2, ಎ4, ಎ15, ಎ16 ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿರುತ್ತಾರೆ. ಮುಂದುವರಿದು ಆರೋಪಿಗಳು ಮೃತನನ್ನು ಕೊಲೆ ಮಾಡಿ, ನಂತರ ತನ್ನ ಹಣದ ಪ್ರಭಾವದಿಂದ ಬೇರೆ ವ್ಯಕ್ತಿಗಳನ್ನು ಕೊಲೆಯಲ್ಲಿ ಭಾಗಿಯಾರುವುದಾಗಿ ಬಿಂಬಿಸಿ ಪ್ರಕರಣದಿಂದ ತಾವುಗಳು ನುಣುಚಿಕೊಳ್ಳಲು ಪ್ರಯತ್ನಿಸಿರುವುದು ತನಿಖೆಯಲ್ಲಿ ಕಂಡು ಬಂದಿರುತ್ತದೆ ಎಂದು ಎಂದು ಪೊಲೀಸರು ರಿಮ್ಯಾಂಡ್‌ ಕಾಪಿಯಲ್ಲಿ ಉಲ್ಲೇಖಿಸಿದ್ದಾರೆ.

    ಪ್ರಕರಣದ ತನಿಖಾ ಕಾಲದಲ್ಲಿ ಅಮಾನತು ಪಡಿಸಿಕೊಂಡು ಪರಿಶೀಲಿಸಲಾದ ತಾಂತ್ರಿಕ ಸಾಕ್ಷ್ಯಾಧಾರಗಳಲ್ಲಿ ಆರೋಪಿಗಳು ನೇರವಾಗಿ ಭಾಗಿಯಾಗಿರುವುದು ಕಂಡು ಬಂದಿದ್ದು ಇನ್ನೂ ಹಲವಾರು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಪರಿಶೀಲನೆಗೆ ಕಳುಹಿಸಿದ್ದು ವರದಿ ಸಂಗ್ರಹಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಬೇಕಾಗಿರುತ್ತದೆ.

  • ಪೊಲೀಸರ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟ ‘ದಾಸ’ – 30 ಲಕ್ಷ ಹಣ ನೀಡಿರೋದಾಗಿ ಸ್ವ-ಇಚ್ಛಾ ಹೇಳಿಕೆ!

    ಪೊಲೀಸರ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟ ‘ದಾಸ’ – 30 ಲಕ್ಷ ಹಣ ನೀಡಿರೋದಾಗಿ ಸ್ವ-ಇಚ್ಛಾ ಹೇಳಿಕೆ!

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ (Darshan) ಕೊನೆಗೂ ಖಾಕಿ ಎದುರು ಸತ್ಯ ಬಾಯ್ಬಿಟ್ಟಿದ್ದಾರೆ.

    ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ನೋಡಿಕೊಳ್ಳಲು 30 ಲಕ್ಷ ರೂ. ನೀಡಿರುವು ದರ್ಶನ್ ಹೇಳಿರುವ ಸ್ವ-ಇಚ್ಛಾ ಹೇಳಿಕೆಯನ್ನು ಪೊಲೀಸರು (Bengaluru Police) ರಿಮ್ಯಾಂಡ್ ಕಾಪಿಯಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: ಆರ್ಡರ್‌ ಮಾಡಿದ್ದು ಎಕ್ಸ್‌ಬಾಕ್ಸ್‌ ಕಂಟ್ರೋಲರ್‌, ಆದ್ರೆ ಬಂದಿದ್ದು ವಿಷಕಾರಿ ಹಾವು – ಬಾಕ್ಸ್‌ ಓಪನ್‌ ಮಾಡಿದ ಯುವತಿ ಜಸ್ಟ್‌ ಮಿಸ್‌!

    ಸತ್ಯ ಕಕ್ಕಿಸಿದ ಖಾಕಿ:
    ಪ್ರಕರಣದ ವಿಚಾರಣೆ ವೇಳೆ ದರ್ಶನ್, ಕೊಲೆಯಾದ ರೇಣುಕಾಸ್ವಾಮಿ (Renukaswamy) ಮೃತದೇಹವನ್ನ ವಿಲೇವಾರಿ ಮಾಡಿ, ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಲು ಡೀಲ್ ಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸ್, ಲಾಯರ್ ಮತ್ತು ಶವ ಸಾಗಿಸೋ ವ್ಯಕ್ತಿಗಳಿಗೆ ತಗುಲುವ ವೆಚ್ಚವನ್ನ ಬರಿಸಲು ಪ್ರದೋಶ್‌ಗೆ 30 ಲಕ್ಷ ರೂ. ಹಣ ನೀಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಅವಧಿ ಮೀರಿದ ಪದಾರ್ಥಗಳ ಮಾರಾಟ – ಸಿಎಂ ಸೂಚನೆ ಬೆನ್ನಲ್ಲೇ ಅಧಿಕಾರಿಗಳಿಂದ ಕ್ಷಿಪ್ರ ಕ್ರಮ!

    ತನಿಖೆ ಇನ್ನಷ್ಟು ತೀವ್ರ:
    ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಬೆಂಗಳೂರಿನ ಜಯಣ್ಣ ಶೆಡ್, ಮೈಸೂರಿನ ಹೋಟೆಲ್ ಮತ್ತು ಫಾರ್ಮ್ಹೌಸ್‌ನಲ್ಲಿ ಪೊಲೀಸರು ಮಹಜರು ನಡೆಸಿದ್ದಾರೆ. ಮೂರು ಬೈಕ್ ಸೀಜ್ ಮಾಡಿದ್ದಾರೆ. ಸರಿಯಾಗಿ ಊಟ ಮಾಡದ ಕಾರಣ ಅಸ್ವಸ್ಥರಾಗಿದ್ದ ನಟಿ ಪವಿತ್ರಾಗೌಡಗೆ (Pavitra Gowda) ಮಲ್ಲತ್ತಹಳ್ಳಿ ಬಿಬಿಎಂಪಿ ಆಸ್ಪತ್ರೆಯಲ್ಲಿ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಕಾರು ಹರಿಸಿ ಹತ್ಯೆ – ರಾಜ್ಯಸಭಾ ಸಂಸದರ ಪುತ್ರಿಗೆ ಜಾಮೀನು!

    ಇನ್ನು, ಕ್ರೈಂ ಸೀನ್‌ನಲ್ಲಿಯೇ ಇಲ್ಲದ ಕೇಶವಮೂರ್ತಿ, ನಿಖಿಲ್ ಮತ್ತು ಕಾರ್ತಿಕ್ 30 ಲಕ್ಷ ರೂ. ಆಸೆಗಾಗಿ ಕೊಲೆ ಆರೋಪ ಹೊತ್ತು ಪೊಲೀಸರ ಮುಂದೆ ಶರಣಾಗಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಈ ಮಧ್ಯೆ, ಪ್ರಕರಣದಲ್ಲಿ ಯಾವುದೇ ಒತ್ತಡ ಇಲ್ಲ. ಪೊಲೀಸರು ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದ್ದಾರೆ ಎಂದು ಪೊಲೀಸ್ ಕಮೀಷನರ್ ದಯಾನಂದ್ ಸ್ಪಷ್ಟಪಡಿಸಿದ್ದಾರೆ. ಅತ್ತ, ಚಿತ್ರದುರ್ಗದಲ್ಲಿ ಮೃತ ರೇಣುಕಾಸ್ವಾಮಿ ನಿವಾಸಕ್ಕೆ ಸಚಿವರಾದ ಪರಮೇಶ್ವರ್, ಡಿ ಸುಧಾಕರ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

  • ದರ್ಶನ್ ಅರೆಸ್ಟ್ ಮಾಡಿದ್ದೇ ರಣ ರೋಚಕ – ಆ ಒಂದು ಕ್ಷಣ ಮಿಸ್ ಆಗಿದ್ರೆ ಏನಾಗ್ತಿತ್ತು?

    ದರ್ಶನ್ ಅರೆಸ್ಟ್ ಮಾಡಿದ್ದೇ ರಣ ರೋಚಕ – ಆ ಒಂದು ಕ್ಷಣ ಮಿಸ್ ಆಗಿದ್ರೆ ಏನಾಗ್ತಿತ್ತು?

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Case) ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದಕ್ಕೆ ಪೂರಕವಾಗಿ ದರ್ಶನ್ ವಿರುದ್ಧ ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಆದ್ರೆ ಈ ಹತ್ಯೆ ಪ್ರಕರಣದಲ್ಲಿ ದರ್ಶನ್ (Darshan) ಅವರು ಸಿಕ್ಕಿಬಿದ್ದದ್ದು ಹೇಗೆ? ದರ್ಶನ್ ಅವರನ್ನ ಬಂಧಿಸಿದ್ದರೂ ಪೊಲೀಸರಿಗೆ ಕರೆದುಕೊಂಡು ಹೋಗೋದು ಸುಲಭವೂ ಆಗಿರಲಿಲ್ಲ, ಏಕೆ? ಆ ಒಂದು ಕ್ಷಣ ಮಿಸ್ ಆಗಿದ್ದರೆ ಏನಾಗ್ತಿತ್ತು? ಅನ್ನೋ ಸ್ಫೋಟಕ ರಹಸ್ಯಗಳನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.

    ದರ್ಶನ್ ಸಿಕ್ಕಿಬಿದ್ದದ್ದೇ ರಣ ರೋಚಕ:
    ಜೂನ್ 10ರ ಮಂಗಳವಾರ ಬೆಳಗ್ಗೆ 8 ಗಂಟೆಗೆ ದರ್ಶನ್ ಅವರನ್ನು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ (Mysuru Private Hotel) ಬಂಧಿಸಲಾಗಿತ್ತು. ಅಂದು ಬೆಳಗ್ಗೆ 8 ಗಂಟೆ ಸಮಯ ಮೀರಿದ್ದರೆ ದರ್ಶನ್ ಅವರನ್ನ ಹಿಡಿಯೋದು ಅಸಾಧ್ಯವಾಗ್ತಿತ್ತಂತೆ. ಪೊಲೀಸರಿ ಬೆನ್ನತ್ತಿದ್ದಾರೆ ಎಂಬ ಸಣ್ಣ ಸುಳಿವು ಸಿಕ್ಕಿದ್ದರೂ ದರ್ಶನ್ ಅವರು ತಲೆ ಮರೆಸಿಕೊಳ್ಳುವ ಸಾಧ್ಯತೆಯಿತ್ತು ಎಂದು ತನಿಖಾಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದರ್ಶನ್ ಹೆಸ್ರು ಹೇಳದಂತೆ 30 ಲಕ್ಷಕ್ಕೆ ನಡೆದಿತ್ತಾ ಡೀಲ್? – ಇಂಚಿಂಚು ಮಾಹಿತಿ ಬಾಬ್ಬಿಟ್ಟ ಆರೋಪಿ ಪ್ರದೋಶ್‌

    ಪೊಲೀಸರು (Bengaluru Police) ದರ್ಶನ್‌ರನ್ನ ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗಿದ್ದರೆ, ತಲೆ ಮರೆಸಿಕೊಳ್ಳುತ್ತಿದ್ದರು. ಆಗ ದರ್ಶನ್ ಹುಡುಕೋದು ಅಷ್ಟು ಸುಲಭವಾಗಿರುತ್ತಿರಲಿಲ್ಲ. ಭೂಗತವಾಗಿಬಿಟ್ಟಿದ್ದರೆ ಕೇಸ್ ಹಳ್ಳ ಹಿಡಿದು ಹೋಗ್ತಿತ್ತು. ಹೀಗಾಗಿ ಬೆಳಗ್ಗೆ 8 ಗಂಟೆ ಒಳಗೆ ದರ್ಶನ್‌ನ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ದರ್ಶನ್‌ನನ್ನ ಪೊಲೀಸರು ಲಾಕ್ ಮಾಡಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಡಿಕೆಸು‌ ಸ್ಪರ್ಧೆ ಫಿಕ್ಸಾ?- ಬುಧವಾರ ಇಡೀ ದಿನ ಚನ್ನಪಟ್ಟಣದಲ್ಲಿ ಡಿಕೆಶಿ ದೇಗುಲಗಳ ದರ್ಶನ

    ದರ್ಶನ್ ಅವರನ್ನ ಬಂಧಿಸಿದ ನಂತರವೂ ಅವರನ್ನ ಬೆಂಗಳೂರಿಗೆ ಕರೆತರುವುದು ಅಷ್ಟು ಸುಲಭವಾಗಿರಲಿಲ್ಲ. ಮೈಸೂರಿಂದ ಮಂಡ್ಯ ಬಾರ್ಡರ್ ದಾಟುವವರೆಗೂ ಪೊಲೀಸರು ಫುಲ್ ಅಲರ್ಟ್ ಆಗಿದ್ದರು. ವಿಚಾರ ಲೀಕ್ ಆದ್ರೆ ಅಭಿಮಾನಿಗಳು ಮುತ್ತಿಗೆ ಹಾಕುವ ಆತಂಕದಲ್ಲೇ ಪೊಲೀಸರು ಕರೆತರುತ್ತಿದ್ದರು. ಹೀಗಾಗಿ ಪ್ರತೀ ಅರ್ಧ ಗಂಟೆಗೆ ಹಿರಿಯ ಅಧಿಕಾರಿಗಳು ಕರೆತರುತ್ತಿದ್ದ ಪೊಲೀಸರಿಗೆ ಫೋನ್ ಕಾಲ್ ಮಾಡಿ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಹೆದ್ದಾರಿ ಸವಾರರಿಗೂ ಸಹ ದರ್ಶನ್ ಜೀಪ್‌ನಲ್ಲಿರೋದು ಗೊತ್ತಾಗದಂತೆ ಕರೆತಂದಿದ್ದರು ಎಂದು ತಂಡದಲ್ಲಿದ್ದ ಪೊಲೀಸರೊಬ್ಬರು ಹೇಳಿಕೊಂಡಿದ್ದಾರೆ.

    ತನಿಖೆ ಇನ್ನಷ್ಟು ತೀವ್ರ:
    ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಬೆಂಗಳೂರಿನ ಜಯಣ್ಣ ಶೆಡ್, ಮೈಸೂರಿನ ಹೋಟೆಲ್ ಮತ್ತು ಫಾರ್ಮ್‌ಹೌಸ್‌ನಲ್ಲಿ ಪೊಲೀಸರು ಮಹಜರು ನಡೆಸಿದ್ದಾರೆ. ಮೂರು ಬೈಕ್ ಸೀಜ್ ಮಾಡಿದ್ದಾರೆ. ಸರಿಯಾಗಿ ಊಟ ಮಾಡದ ಕಾರಣ ಅಸ್ವಸ್ಥರಾಗಿದ್ದ ನಟಿ ಪವಿತ್ರಾಗೌಡಗೆ ಮಲ್ಲತ್ತಹಳ್ಳಿ ಬಿಬಿಎಂಪಿ ಆಸ್ಪತ್ರೆಯಲ್ಲಿ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿಯನ್ನು ‘ಡಿ’ ಗ್ಯಾಂಗ್ ಪತ್ತೆ ಮಾಡಿದ್ದು ಹೇಗೆ? – ಪವಿತ್ರಾ ಗೌಡ ಜೊತೆ ಸ್ವಾಮಿ ಚಾಟ್ ಲಿಸ್ಟ್ ಲಭ್ಯ

    ಇನ್ನು, ಕ್ರೈಂ ಸೀನ್‌ನಲ್ಲಿಯೇ ಇಲ್ಲದ ಕೇಶವಮೂರ್ತಿ, ನಿಖಿಲ್ ಮತ್ತು ಕಾರ್ತಿಕ್ 30 ಲಕ್ಷ ರೂ. ಆಸೆಗಾಗಿ ಕೊಲೆ ಆರೋಪ ಹೊತ್ತು ಪೊಲೀಸರ ಮುಂದೆ ಶರಣಾಗಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಈ ಮಧ್ಯೆ, ಪ್ರಕರಣದಲ್ಲಿ ಯಾವುದೇ ಒತ್ತಡ ಇಲ್ಲ. ಪೊಲೀಸರು ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದ್ದಾರೆ ಎಂದು ಪೊಲೀಸ್ ಕಮೀಷನರ್ ದಯಾನಂದ್ ಸ್ಪಷ್ಟಪಡಿಸಿದ್ದಾರೆ. ಅತ್ತ, ಚಿತ್ರದುರ್ಗದಲ್ಲಿ ಮೃತ ರೇಣುಕಾಸ್ವಾಮಿ ನಿವಾಸಕ್ಕೆ ಸಚಿವರಾದ ಪರಮೇಶ್ವರ್, ಡಿ ಸುಧಾಕರ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

  • ರೇಣುಕಾಸ್ವಾಮಿ ಹತ್ಯೆ ಕೇಸ್‌: ಕಣ್ಣೆದುರೇ ಮಗ ಅರೆಸ್ಟ್‌ – ಮನನೊಂದ ತಂದೆ ಹೃದಯಾಘಾತದಿಂದ ಸಾವು!

    ರೇಣುಕಾಸ್ವಾಮಿ ಹತ್ಯೆ ಕೇಸ್‌: ಕಣ್ಣೆದುರೇ ಮಗ ಅರೆಸ್ಟ್‌ – ಮನನೊಂದ ತಂದೆ ಹೃದಯಾಘಾತದಿಂದ ಸಾವು!

    ಚಿತ್ರದುರ್ಗ: ದರ್ಶನ್‌ ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ A6, A7 ಆರೋಪಿಗಳನ್ನು ಚಿತ್ರದುರ್ಗ ಡಿವೈಎಸ್ಪಿ (Chitradurga DYSP), ಕಾಮಾಕ್ಷಿಪಾಳ್ಯ ಪೊಲೀಸರ ನೇತೃತ್ವದಲ್ಲಿ ಶುಕ್ರವಾರ ಬಂಧಿಸಲಾಯಿತು. A7 ಆರೋಪಿ ಬಂಧನದ ಬೆನ್ನಲ್ಲೇ ಆತನ ತಂದೆ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಹೃದಯ ವಿದ್ರಾವಕ ಘಟನೆ ನಡೆದಿದೆ.

    ಚಿತ್ರದುರ್ಗ ಡಿವೈಎಸ್ಪಿ ದಿನಕರ್, ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಸಂಜಯ್ ಗೌಡ್ ನೇತೃತ್ವದಲ್ಲಿ ಎ6 ಆರೋಪಿ (Accused) ಜಗ್ಗ ಅಲಿಯಾಸ್ ಜಗಧೀಶ್, ಎ7 ಆರೋಪಿ ಅನಿ ಅಲಿಯಾಸ್ ಅನುಕುಮಾರ್ ಇಬ್ಬರನ್ನೂ ಬಂಧಿಸಿ ಬೆಂಗಳೂರಿಗೆ ಕರೆದೊಯ್ದರು. ಇದನ್ನೂ ಓದಿ: ಪೋಕ್ಸೊ ಕೇಸಲ್ಲಿ ಬಿಎಸ್‌ವೈಗೆ ರಿಲೀಫ್‌; ಒತ್ತಾಯದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್‌ ಸೂಚನೆ

    ಬಂಧನದ ಬೆನ್ನಲ್ಲೇ ಆರೋಪಿ ಅನುಕುಮಾರ್‌ ತಂದೆ ಚಂದ್ರಣ್ಣ (60) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಗನ ಬಂಧನದಿಂದ ಮನನೊಂದ ತಂದೆ ಚಿತ್ರದುರ್ಗದ ಸಿಹಿ ನೀರು ಹೊಂಡ ಬಳಿಯ ಮನೆಯಲ್ಲಿ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ದೆಹಲಿಯ ಯಮುನಾ ಬಳಿಯ ಪ್ರಾಚೀನ ಶಿವಮಂದಿರ ಕೆಡವಲು ನೀಡಿದ ಆದೇಶ ಎತ್ತಿಹಿಡಿದ ಸುಪ್ರೀಂ

  • ಅಸ್ವಸ್ಥಗೊಂಡಿದ್ದ ಕೈದಿ ಸಾವು- ಮರ್ಮಾಂಗಕ್ಕೆ ಖಾರದ ಪುಡಿ ಹಾಕಿದ್ರಾ ಪೊಲೀಸ್ರು?

    ಅಸ್ವಸ್ಥಗೊಂಡಿದ್ದ ಕೈದಿ ಸಾವು- ಮರ್ಮಾಂಗಕ್ಕೆ ಖಾರದ ಪುಡಿ ಹಾಕಿದ್ರಾ ಪೊಲೀಸ್ರು?

    ಆನೇಕಲ್: ಡಕಾಯಿತಿ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿ ನಿಗೂಢ ಸಾವನ್ನಪ್ಪಿರೋ ಘಟನೆ ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್  ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಮಡಿವಾಳದ ತಾವರೆಕೆರೆ ಮೂಲದ ಆರೋಪಿ ಗಣೇಶ್‍ನನ್ನ ದರೋಡೆ ಪ್ರಕರಣದಲ್ಲಿ (Robbery case) 2023ರ ಡಿಸೆಂಬರ್ 22ರಂದು ಬಂಧಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಗಣೇಶ್ ತೀವ್ರ ನೋವಿನಿಂದ ಒದ್ದಾಡಿದ್ದ. ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

    ಆರೋಪಿಯನ್ನ ಠಾಣೆಯಲ್ಲಿ ಹಲವು ದಿನ ಇಟ್ಟುಕೊಂಡಿದ್ದ ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದ್ರು. ವಿಚಾರಣೆ ಮಾಡುವ ವೇಳೆ ಮರ್ಮಾಂಗಕ್ಕೆ ಗಾಯ ಆಗಿತ್ತು. ಮರ್ಮಾಂಗಕ್ಕೆ ಖಾರದಪುಡಿ ಹಾಕಿರೋದಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರು ಹೆಚ್‍ಎಸ್‍ಆರ್ ಠಾಣೆ ಪೊಲೀಸರ (HSR Police Station) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಬಟ್ಟೆ ಕಳ್ಳಿ ಅನಿಸಿಕೊಂಡ ಬಿಗ್ ಬಾಸ್ ಸ್ಪರ್ಧಿ: ದೂರು ದಾಖಲು

  • ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿಯ ತಂದೆ ಅನುಮಾನಾಸ್ಪದ ಸಾವು

    ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿಯ ತಂದೆ ಅನುಮಾನಾಸ್ಪದ ಸಾವು

    ರಾಯ್ಪುರ: ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದಲ್ಲಿ (Mahadev Betting App Scam) ಆರೋಪಿಯಾಗಿರುವ ವ್ಯಕ್ತಿಯ ತಂದೆ ಮಂಗಳವಾರ ಛತ್ತೀಸ್‍ಗಢದ ದುರ್ಗ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮೃತರನ್ನು ಸುಶೀಲ್ ದಾಸ್ (62) ಎಂದು ಗುರುತಿಸಲಾಗಿದೆ. ಮೃತರು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಪ್ರಕರಣದಲ್ಲಿ ನಗದು ಕೊರಿಯರ್ ಆಗಿದ್ದ ಆಸಿಮ್ ದಾಸ್ ತಂದೆ. ಇದನ್ನೂ ಓದಿ: ತುಮಕೂರಲ್ಲಿಂದು ವಿ. ಸೋಮಣ್ಣ ಶಕ್ತಿಪ್ರದರ್ಶನ- ಕಾಂಗ್ರೆಸ್ ಸೇರುತ್ತಾರಾ ಮಾಜಿ ಸಚಿವ?

    ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸುಶೀಲ್ ದಾಸ್ ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದರು. ಇದೀಗ ಅವರ ಶವ ಅಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಅಚ್ಚೋಟಿ ಗ್ರಾಮದ ಬಾವಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದು ಆತ್ಮಹತ್ಯೆ ಎಂದು ತೋರುತ್ತದೆ. ಆದರೆ ಸಾವಿನ ಹಿಂದಿನ ನಿಖರ ಕಾರಣ ಏನೆಂದು ತನಿಖೆಯ ಬಳಿಕವಷ್ಟೇ ಗೊತ್ತಾಗಬೇಕೆಂದು ದುರ್ಗದ ಹಿರಿಯ ಪೊಲೀಸ್ ಅಧೀಕ್ಷಕ ರಾಮ್ ಗೋಪಾಲ್ ಗಾರ್ಗ್ ತಿಳಿಸಿದ್ದಾರೆ.

    ದಾಸ್, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರಜಪೂತ್‌ ಕರ್ಣಿ ಸೇನಾ ಮುಖ್ಯಸ್ಥನ ಹಣೆಗೆ ಗುಂಡಿಟ್ಟು ಹತ್ಯೆ – ರೊಚ್ಚಿಗೆದ್ದ ಬೆಂಬಲಿಗರಿಂದ ರಾಜಸ್ಥಾನ ಬಂದ್‌ಗೆ ಕರೆ

    ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ಅಸೀಮ್ ದಾಸ್ ಮತ್ತು ಮತ್ತೊಬ್ಬ ಆರೋಪಿ, ಕಾನ್‍ಸ್ಟೆಬಲ್ ಭೀಮ್ ಸಿಂಗ್ ಯಾದವ್ ಅವರನ್ನು ನವೆಂಬರ್ 3 ರಂದು ಇಡಿ ಬಂಧಿಸಿತ್ತು.

  • ಸಚಿವ ಬೋಸರಾಜ್ ಆಪ್ತಸಹಾಯಕನೆಂದು ಹೇಳಿ 20 ಸಾವಿರ ಪಡೆದ ಆರೋಪಿಗಳ ಬಂಧನ

    ಸಚಿವ ಬೋಸರಾಜ್ ಆಪ್ತಸಹಾಯಕನೆಂದು ಹೇಳಿ 20 ಸಾವಿರ ಪಡೆದ ಆರೋಪಿಗಳ ಬಂಧನ

    ಮಡಿಕೇರಿ: ಕಂದಾಯ ಇಲಾಖೆಯ ನಿರೀಕ್ಷಕರ ಬಳಿ ಖದಿಮರಿಬ್ಬರು, ನಾವು ಸಚಿವ ಬೋಸರಾಜ್ (S Bosaraju) ಅವರ ಕಚೇರಿಯಿಂದ ಕರೆ ಮಾಡುತ್ತಾ ಇದ್ದೇವೆ. ನಾವು ಅವರ ಆಪ್ತಸಹಾಯಕರು. ತುರ್ತಾಗಿ 20 ಸಾವಿರ ಹಣವನ್ನು ಗೂಗಲ್ ಪೇ (Google Pay) ಮಾಡಿ ನಂತರ ನಿಮ್ಮ ಹಣವನ್ನು ಸ್ವಲ್ಪ ಸಮಯದ ನಂತರ ವಾಪಸ್ ಮಾಡುವುದಾಗಿ ತಿಳಿಸಿದ್ದಾರೆ. ಬಳಿಕ ಹಣವನ್ನು ವಾಪಸ್ ಮಾಡದೇ ಇದೀಗ ಇಬ್ಬರು ವ್ಯಕ್ತಿಗಳು ಪೊಲೀಸರ ಅಥಿತಿಯಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸಂತೋಷ್.ಹೆಚ್.ಎನ್ ಕುಶಾಲನಗರ (Kushalanagar) ತಾಲೂಕಿನ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನವಂಬರ್ 19 ರಂದು ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಸಂತೋಷ್ ಮೊಬೈಲ್‍ಗೆ ಕರೆ ಮಾಡಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ತಾನು ಎಂದು ಹೇಳಿ ತುರ್ತಾಗಿ ರೂ. 20,000ಗಳ ಹಣದ ಅವಶ್ಯಕತೆಯಿದ್ದು, ಗೂಗಲ್ ಪೇ ಮೂಲಕ ಕಳುಹಿಸುವಂತೆ ಹಾಗೂ ಹಣವನ್ನು ಆದಷ್ಟು ಬೇಗ ಹಿಂದಿರುಗಿಸುವುದಾಗಿ ಹೇಳಿದ್ದಾರೆ.

    ಈ ಹಿನ್ನೆಲೆಯಲ್ಲಿ ತುರ್ತು ಸಂದರ್ಭ ಇರಬಹುದು ಎಂದು ತಿಳಿದ ಸಂತೋಷ್, ಅಪರಿಚಿತ ವ್ಯಕ್ತಿಗೆ ರೂ.20 ಸಾವಿರ ಹಣವನ್ನು ಗೂಗಲ್ ಪೇ ಮೂಲಕ ಕಳುಹಿಸಿದ್ದಾರೆ. ಹಣ ಬೆಳಗ್ಗೆ ಆದರೂ ಬರದೇ ಇರುವಾಗ ಅನುಮಾನಗೊಂಡು ನಂತರ ಕಂದಾಯಾಧಿಕಾರಿ ಸಂತೋಷ್ ಈ ಕುರಿತು ನ.20ರಂದು ಸಚಿವರ ಕಛೇರಿಯಲ್ಲಿ ವಿಚಾರಿಸಿದಾಗ ಹಣ ಕೇಳಿದ ವ್ಯಕ್ತಿ ಹಾಗೂ ಮೊಬೈಲ್ ಸಂಖ್ಯೆಗೆ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಸಚಿವರ ಕಛೇರಿ ಮೂಲಗಳು ಸ್ಪಷ್ಟಪಡಿಸಿದವು. ಕೂಡಲೇ ಸಂತೋಷ್ ಅವರು ಕುಶಾಲನಗರ ಪೊಲೀಸರಿಗೆ ದೂರು ನೀಡಲು ಮುಂದಾದರು ದೂರು ಸ್ವೀಕರಿಸಿದ ಆರ್.ವಿ ಗಂಗಾಧರಪ್ಪ, ಡಿಎಸ್ಪಿ, ಸೋಮವಾರಪೇಟೆ ಉಪವಿಭಾಗ, ಪ್ರಕಾಶ್.ಬಿ.ಜಿ, ಪಿಐ ಹಾಗೂ ಗೀತಾ, ಪಿಎಸ್‍ಐ ಕುಶಾಲನಗರ ನಗರ ಪೊಲೀಸ್ ಠಾಣೆ, ಕಾಶಿನಾಥ ಬಗಲಿ, ಪಿಎಸ್‍ಐ, ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಅವರುಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ.

    ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಾಕ್ಷ್ಯಾಧರಗಳನ್ನು ಕಲೆಹಾಕಿ ತನಿಖೆ ಕೈಗೊಂಡು, ವಿಳಂಬರಹಿತವಾಗಿ ನವಂಬರ್ 22 ರಂದು ಆರೋಪಿಗಳಾದ ಮೈಸೂರು ನಿವಾಸಿ ರಘುನಾಥ, 34 ವರ್ಷ ಮತ್ತು ಶಿವಮೂರ್ತಿ, 35 ವರ್ಷ ಎಂಬವರನ್ನು ವಿಚಾರಣೆಯನ್ನು ನಡೆಸುತ್ತಿದ್ದಾರೆ.