ಹಾಸನ: ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಈ ಷಡ್ಯಂತ್ರ ಎಷ್ಟು ದಿನದಿಂದ ನಡೆಯುತ್ತಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ (Dr Suraj Revanna) ಹೇಳಿದ್ದಾರೆ.
ಹೊಳೆನರಸೀಪುರ ತಾಲೂಕಿನ ಗನ್ನಕಡ ಫಾರ್ಮ್‌ಹೌಸ್‌ನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಆರೋಪವನ್ನು ಖಡಾಖಂಡಿತವಾಗಿ ತಿರಸ್ಕಾರ ಮಾಡುತ್ತೇನೆ. ಕಾನೂನು ವ್ಯವಸ್ಥೆಯಲ್ಲಿ ಏನು ತೀರ್ಮಾನ ಆಗಬೇಕು ಆಗುತ್ತೆ. ಅವನ ಮೇಲೆಯೂ ಎಫ್‌ಐಆರ್ ಆಗಿದೆ ಎಂದರು.
ಕಾನೂನಿನಲ್ಲಿ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಗೆ ಬರಲಿ. ಸತ್ಯ ಏನಿದೆ ಅದು ಹೊರಗೆ ಬಂದೇ ಬರುತ್ತೆ. ನಾಡಿನ ಕಾನೂನಿನ ಮೇಲೆ ನನಗೆ ವಿಶ್ವಾಸವಿದೆ. ಇದು ಸಂಪೂರ್ಣ ರಾಜಕೀಯ ಷಡ್ಯಂತ್ರ. ಅದರ ಬಗ್ಗೆ ನಾನು ಇಂದು ಏನೂ ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿದರು. ಇದನ್ನೂ ಓದಿ: ಡಾ.ಸೂರಜ್ ರೇವಣ್ಣ ವಿರುದ್ದ ಎಫ್ಐಆರ್ ದಾಖಲು
ಇಂತಹವರು, ಅಂತಹವರು, ಅವರು, ಇವರು ಮಾಡಿದ್ರು ಅಂತ ನಾನು ಚರ್ಚೆ ಮಾಡಲು ಹೋಗಲ್ಲ. ತನಿಖೆ ಪ್ರಗತಿಯಲ್ಲಿದೆ, ಸತ್ಯಾಸತ್ಯತೆ ಹೊರಗೆ ಬರುತ್ತೆ. ಇಡೀ ರಾಜ್ಯದ ಜನತೆ ಅದನ್ನು ನೋಡುತ್ತಾರೆ ಎಂದು ಸೂರಜ್ ರೇವಣ್ಣ ತಿಳಿಸಿದ್ದಾರೆ.
ಕರ್ನಾಟಕ ಟೆಲಿವಿಷನ್ ಕ್ಲಬ್ ನಲ್ಲಿ ರವಿಕಿರಣ್ ಅವ್ಯವಹಾರ ಮಾಡಿದ್ದಾರೆ ಎಂದು ಈ ಹಿಂದೆ ಕೆಲವು ಸದಸ್ಯರು ಆರೋಪಿಸಿದ್ದರು. ಈ ಕುರಿತಂತೆ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು. ಈ ಪ್ರಕರಣದ ಕುರಿತಂತೆ ಸ್ವತಃ ರವಿಕಿರಣ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಯಾವುದೇ ಕಾರಣಕ್ಕೂ ಅವ್ಯವಹಾರ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರವಿಕಿರಣ್, ‘ಕಳೆದ ಡಿಸೆಂಬರ್ ಗೆ ನನ್ನ ಅವಧಿ ಮುಕ್ತಾಯವಾಗಿದೆ. ಮತ್ತೆ ಎಲೆಕ್ಷನ್ ನಡೆದಿಲ್ಲ, ಹೊಸ ಸದಸ್ಯರು ಸೇರ್ಕೊಂಡು ಕಮಿಟಿ ಮಾಡ್ಕೊಂಡಿದ್ದಾರೆ. ಆ ಮೂಲಕ ನನ್ನ ಕ್ಲಬ್ ನ ನಿಂದ ವಜಾ ಮಾಡಿದ್ದಾರೆ, ಇದು ಕಾನೂನು ಬಾಹಿರ. ನಂತರ ಕ್ಲಬ್ ನ ಹಣವನ್ನು ದುರ್ಬಳಕೆ ಮಾಡ್ಕೊಂಡಿದ್ದಾರೆ. 2003 ರಲ್ಲಿ ಕ್ಲಬ್ ಶುರುಮಾಡಿದ್ದು ನಾನು. ಕ್ಲಬ್ ನ ಸಿಬ್ಬಂದಿ ಗಳು, ಇತರೆ ಖರ್ಚು ಸೇರಿ 60 ಲಕ್ಷ ಸಾಲ ಮಾಡಿದ್ದೀನಿ. ಆ ಹಣ ವಾಪಸ್ ಕೊಡಲಿ, ಈ ಕ್ಷಣ ಕ್ಲಬ್ ಗೆ ರಾಜಿನಾಮೆ ನೀಡಿ ಹೊರ ಹೋಗ್ತಿನಿ. ಕರೋನ ಇದ್ದ ಕಾರಣ ಕಳೆದ ನಾಲ್ಕು ವರ್ಷ ದಿಂದ ಟ್ಯಾಕ್ಸ್ ಕಟ್ಟಿಲ್ಲ. ಇದು ಕ್ಲಬ್ ನ ಖಜಾಂಚಿ ಜವಾಬ್ದಾರಿ , ಅವರು ಕಟ್ಟಬೇಕು. ಕಳೆದ ಒಂದುವರೇ ವರ್ಷ ದಿಂದ ಕ್ಲಬ್ ಸಂಪೂರ್ಣ ನಿಂತು ಹೋಗಿದೆ ಎಂದಿದ್ದಾರೆ.
ಹಣ ಕಳುವಿನ ಆರೋಪದ ಬಗ್ಗೆಯೂ ಮಾತನಾಡಿದ ಅವರು, ‘6.70 ಸಾವಿರ ರೂಪಾಯಿ ನನ್ನ ಹಣ, ನಾನು ತಗೊಂಡಿದ್ದೀನಿ, ನಾನು ಕಳ್ಳ ಅಲ್ಲ. ಕ್ಲಬ್ ನ ಎಲ್ಲ ಕಡೆಗೆ ಹೊಸದಾಗಿ ಬೀಗ ಹಾಕ್ಕೊಂಡಿದ್ದಾರೆ. ನನ್ನ ಕ್ಲಬ್ ನಲ್ಲಿ ನಾನು ಕಳ್ಳತನ ಮಾಡ್ತಿನಾ? ನನ್ನ ಸಹೋದರ ಕಮಿಟಿ ಮೆಂಬರ್ ಆಗಿದ್ದವನು. ನಮ್ ಹತ್ರ ದುಡ್ಡಿರಲಿಲ್ಲ, ಹಾಗಾಗಿ ಅವನ ನಿಂತ್ಕೊಂಡು ಕಡಿಮೆ ಬೆಲೆ ಕೆಲಸ ಮಾಡಿಕೊಟ್ಟ. ನಾವು ಯಾರಿಗೂ ಕಂಟ್ರಾಕ್ಟ್ ಕೊಟ್ಟಿರಲಿಲ್ಲ. ಸದ್ಯ ಕ್ಲಬ್ ನ ಸಾಲ 4,5 ಕೋಟಿ ಸಾಲ ಇದೆ ಎಂದೂ ಅವರು ಎಲ್ಲದಕ್ಕೂ ಉತ್ತರ ನೀಡಿದ್ದಾರೆ.
ನಿರ್ಮಾಪಕ ಹಾಗೂ ನಟ ರವಿಕಿರಣ್ (Ravikiran) ಮೇಲೆ ಗಂಭೀರ ಆರೋಪ ಕೇಳಿ ಬಂದಿತ್ತು. ಕರ್ನಾಟಕ ಟೆಲಿವಿಷ್ ಕ್ಲಬ್ (Television Club) ನಲ್ಲಿ ಹಣ ದುರುಪಯೋಗ ಮತ್ತು ಅಕ್ರಮ ಸೇರಿದಂತೆ ನಾನಾ ಆರೋಪಗಳನ್ನು ಸಂಘದ ಸದಸ್ಯರು ಮತ್ತು ಕಲಾವಿದರು ಮಾಡಿದ್ದರು. ಜೊತೆಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು. ಕಳೆದ 20 ವರ್ಷದಿಂದ ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರಿಗಾಗಿ ಕ್ಲಬ್ ಇದೆ. ಆನಂತರ ಅದು ಉತ್ತರ ಹಳ್ಳಿ ಬಳಿ ಕರ್ನಾಟಕ ಟೆಲಿವಿಷನ್ ಕ್ಲಬ್ ಸರ್ಕಾರದ ಅನುದಾನದಲ್ಲಿ ಕೊಟ್ಟ ಜಾಗದಲ್ಲಿ ನಿರ್ಮಾಣಗೊಂಡಿದೆ. ಜೊತೆಗೆ ಸರ್ಕಾರವೇ 3 ಕೋಟಿಗೂ ಅಧಿಕ ಹಣ ಸಹ ಕ್ಲಬ್ ಗಾಗಿ ನೀಡಿದೆ. ಈ ಕ್ಲಬ್ ನಲ್ಲಿ ಸಾವಿರಾರು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ. ಕ್ಲಬ್ ಆರಂಭದಿಂದ ಈವರೆಗೂ ರವಿಕಿರಣ್ ಕಾರ್ಯದರ್ಶಿಯಾಗಿದ್ದಾರೆ. ಕ್ಲಬ್ ನಿರ್ಮಾಣವನ್ನು ಕಾಂಟ್ರಾಕ್ಟ್ ನೀಡದೆ ಸಹೋದರನಿಗೆ ನೀಡಿ ಅವ್ಯವಹಾರ ಮಾಡಿದ್ದಾರೆಂದು ಆರೋಪ ಮಾಡಲಾಗುತ್ತಿದೆ. ಜೊತೆಗೆ ಕ್ಲಬ್ ಗೆ ಸಂಬಂಧಿಸಿದ ಜಿಎಸ್ ಟಿ, ಬಿಬಿಎಂಪಿ ಟ್ಯಾಕ್ಸ್ ಸೇರಿದಂತೆ ಹಲವು ತೆರಿಗೆಗಳ ಪಾವತಿ ಮಾಡಿಲ್ಲ ಎನ್ನುವ ಗಂಭೀರ ಆರೋಪವೂ ಅವರ ಮೇಲಿದೆ. ಹಣವನ್ನು ಪಾವತಿ ಮಾಡದೇ ಅದರ ಹೆಸರಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಈ ವಿಚಾರದ ಚರ್ಚೆ ಹೆಚ್ಚಾದಾಗ ರವಿಕಿರಣ್ ಅವರ ಸದಸ್ಯತ್ವವನ್ನು ಸಸ್ಪೆಂಡ್ ಮಾಡಲಾಗಿತ್ತು. ಕ್ಲಬ್ ಗೆ ಬರದಂತೆ ಆದೇಶ ಇದ್ದರೂ ಸಹ ಬಂದು ಕ್ಲಬ್ ನಲ್ಲಿದ್ದ 6 ಲಕ್ಷ ಹಣ ರವಿಕಿರಣ್ ತೆಗೆದುಕೊಂಡು ಹೋಗಿದ್ದಾರೆಂದು ಗಂಭೀರ ಆರೋಪ ಮಾಡಲಾಗಿತ್ತು. ಜೊತೆಗೆ ಕ್ಲಬ್ ನಲ್ಲಿ ಅನುಮತಿ ಇಲ್ಲದಿದ್ದರೂ ಬಂದಿದ್ದಾರೆ ಎಂದು ಪ್ರಶ್ನೆ ಮಾಡಿದಾಗ ಗಲಾಟೆಯಾಗಿ ಠಾಣೆಗೆ ಬಂದು ದೂರು ನೀಡಿದ್ದರು ಕೆಲ ಕಲಾವಿದರು.
ಡ್ರೋನ್ ಪ್ರತಾಪ್ (Drone Pratap) ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ರೀತಿಯಲ್ಲಿ ಅವರ ಮೇಲೆ ಆರೋಪ ಮಾಡಲಾಗಿತ್ತು. ಡಾ.ಪ್ರಯಾಗ್ ಮಾನನಷ್ಟ ದಾವೆ ಹೂಡಿದ್ದರೆ, ಸಾರಂಗ ಎನ್ನುವವರು ಹಣಕಾಸಿನ ವಿಷಯದಲ್ಲಿ ತಮಗೆ ಮೋಸವಾಗಿದೆ ಎಂದು ಆರೋಪ (Allegation) ಮಾಡಿದ್ದರು. ಈಗ ಎಲ್ಲದಕ್ಕೂ ಪ್ರತಾಪ್ ಉತ್ತರ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರತಾಪ್, ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು. ಸಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡೋಣ. ಸಾರಂಗ ಅವರ ಆರೋಪದ ಬಗ್ಗೆ ಶೀಘ್ರದಲ್ಲೇ ನಾವು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ ಪ್ರಾತಪ್.
ಏನದು ಆರೋಪ?
ಬಿಗ್ ಬಾಸ್ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆಯೇ ಡಾ.ಪ್ರಯಾಗ್ ಎನ್ನುವವರು ಡ್ರೋನ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದಾದ ಕೆಲವು ದಿನಗಳ ನಂತರ ತಮಗೆ ಡ್ರೋನ್ ಪ್ರತಾಪ್ ಲಕ್ಷ ಲಕ್ಷ ದೋಖಾ ಮಾಡಿದ್ದಾರೆ ಎಂದು ಸಾರಂಗ ಎನ್ನುವವರು ಆರೋಪ ಮಾಡಿದ್ದರು.
ಪೂಣಾ ಮೂಲದ ಸಾರಂಗ್ ಮಾನೆ (Sarang Mane) ಎನ್ನುವವರು ಡ್ರೋಣ್ ಪ್ರತಾಪ್ ಗೆ ಬರೋಬ್ಬರಿ 83 ಲಕ್ಷ ರೂಪಾಯಿ ನೀಡಿದ್ದಾರಂತೆ. ಈ ಹಣದಲ್ಲಿ 8 ಡ್ರೋಣ್ ನೀಡುವುದಾಗಿ ಪ್ರತಾಪ್ ಹೇಳಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ಪ್ರತಾಪ್ ನಡೆದುಕೊಂಡಿಲ್ಲ ಎನ್ನುವುದು ಮಾನೆ ಆರೋಪ.
ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ. ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ ಡ್ರೋಣ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು.
ಬಿಗ್‌ಬಾಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಷೋ ಮೇಲೆ ಒಂದು ಆರೋಪ ಬಂದಿದೆ. ಏನದು ಆರೋಪ? ಅದು ಎಷ್ಟರಮಟ್ಟಿಗೆ ಸತ್ಯ? ಈ ಪ್ರಶ್ನೆಯ ಕುರಿತೇ ಈ ವಾರದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಚರ್ಚೆ ನಡೆಯಲಿದೆ. ಈ ಬಗ್ಗೆ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ದೊರೆತಿದೆ. ಬಿಗ್‌ಬಾಸ್ ಷೋ ಆರಂಭದಿಂದಲೂ ನಿಷ್ಪಕ್ಷಪಾತ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಂಡೇ ಬಂದಿದೆ. ಆದರೆ ಸೀಸನ್ ಹತ್ತರ ಕಳೆದ ವಾರದ ಕೆಲವು ಸಂಗತಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚರ್ಚೆ ನಡೆಯುತ್ತಿದೆ. ಅದನ್ನು ಗಮನಿಸಿದ ಕಿಚ್ಚ ವಾರಾಂತ್ಯದ ಎಪಿಸೋಡ್‌ನಲ್ಲಿ ಈ ಬಗ್ಗೆಯೇ ಚರ್ಚೆ ನಡೆಸುತ್ತಿದ್ದಾರೆ.
‘ವಾರಪೂರ್ತಿ ಟಾಸ್ಕ್ ಆಡಿ ಲೀಡ್‌ನಲ್ಲಿದ್ದೊರನ್ನು ಬಿಟ್ಟು ವೋಟಿಂಗ್ ಆಧಾರದ ಮೇಲೆ ಫಿನಾಲೆ ಟಿಕೆಟ್ ಕೊಟ್ಟಿದ್ದು ತಪ್ಪಾ? ಹಾಗಾದರೆ ಎಲ್ಲರೂ ನ್ಯಾಯ ಎಂದು ಯಾವುದನ್ನು ಅಂದುಕೊಂಡಿದ್ದಾರೋ, ಅದು ಸಿಗಬೇಕಾಗಿದ್ದು ಯಾರಿಗೆ? ಈ ಎಲ್ಲದರ ಬಗ್ಗೆ ಈ ವಾರಾಂತ್ಯದ ಸಂಚಿಕೆಯಲ್ಲಿ ಚರ್ಚೆ ಮಾಡೋಣ’ ಎಂದು ಕಿಚ್ಚ ಹೇಳಿರುವುದು ಪ್ರೋಮೊದಲ್ಲಿ ಕಾಣಿಸಿದೆ.
ಕಳೆದ ವಾರದ ಆರಂಭದಲ್ಲಿ, ಎಲ್ಲರಿಗೂ ವೈಯಕ್ತಿಕ ಟಾಸ್ಕ್ ನೀಡುತ್ತಾರೆ. ಅದರಲ್ಲಿ ಅತ್ಯುತ್ತಮವಾಗಿ ಆಡಿ ಅತಿ ಹೆಚ್ಚು ಪಾಯಿಂಟ್ಸ್ ಪಡೆದುಕೊಂಡವರಲ್ಲಿ ಒಬ್ಬರು ಫಿನಾಲೆಗೆ ನೇರವಾಗಿ ಆಯ್ಕೆಯಾಗುತ್ತಾರೆ ಎಂದು ಬಿಗ್‌ಬಾಸ್ ಹೇಳಿದ್ದರು.
ಅದೇ ಪ್ರಕಾರ ಟಾಸ್ಕ್‌ಗಳನ್ನು ನೀಡಲಾಗಿತ್ತು. ವಾರಾಂತ್ಯದ ಹೊತ್ತಿಗೆ ಪ್ರತಾಪ್ 420 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರು. 300 ಅಂಕಗಳನ್ನು ಪಡೆದ ಸಂಗೀತಾ ಎರಡನೇ ಸ್ಥಾನದಲ್ಲಿದ್ದರು ಮತ್ತು 210 ಅಂಕಗಳನ್ನು ಪಡೆದ ನಮ್ರತಾ ಮೂರನೇ ಸ್ಥಾನದಲ್ಲಿದ್ದರು. ಕೊನೆಯಲ್ಲಿ ಬಿಗ್‌ಬಾಸ್ ಅತಿ ಹೆಚ್ಚು ಅಂಕಗಳನ್ನು ಪಡೆದ ಮೂವರು ಸದಸ್ಯರ ಪೈಕಿ ಯಾರು ಫಿನಾಲೆಗೆ ಹೋಗಲು ಅರ್ಹರು ಎಂಬ ನಿರ್ಧಾರವನ್ನು ಬಹುಮತದ ಆಧಾರದ ಮೇಲೆ ಕೈಗೊಳ್ಳಲು ಮನೆಯ ಉಳಿದೆಲ್ಲ ಸದಸ್ಯರಿಗೆ ಸೂಚಿಸಿದ್ದರು. ಅದರಲ್ಲಿ ತುಕಾಲಿ ಸಂತೋಷ್, ಕಾರ್ತಿಕ್ ಮತ್ತು ತನಿಷಾ ಮೂವರೂ ಸಂಗೀತಾ ಅವರಿಗೆ ಓಟ್ ಮಾಡಿದ್ದರಿಂದ ಅತಿ ಹೆಚ್ಚು ವೋಟ್ ಪಡೆದ ಸಂಗೀತಾ ಫಿನಾಲೆಗೆ ನೇರ ಟಿಕೆಟ್ ಪಡೆದುಕೊಂಡಿದ್ದರು.
ವಾರವಿಡೀ ಅತ್ಯುತ್ತಮವಾಗಿ ಆಡಿ ಅತಿ ಹೆಚ್ಚು ಅಂಕ ಪಡೆದಿರುವ ಪ್ರತಾಪ್ ಬಿಟ್ಟು ಸಂಗೀತಾ ಅವರಿಗೆ ಫಿನಾಲೆ ಟಿಕೆಟ್ ಕೊಟ್ಟಿದ್ದು ಸರಿಯೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸುದೀಪ್, ವಾರಾಂತ್ಯದ ಎಪಿಸೋಡ್‌ನಲ್ಲಿ ಈ ಕುರಿತಾದ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧರಿಸಿದ್ದಾರೆ.
ಹಾಗಾದರೆ ಸುದೀಪ್ ಈ ವಿಷಯವನ್ನು ಹೇಗೆ ಬಗೆಹರಿಸುತ್ತಾರೆ? ಯಾವುದು ಸರಿ? ಯಾವುದು ತಪ್ಪು? ಈ ಎಲ್ಲ ಪ್ರಶ್ನೆಗಳಿಗೆ ಈ ಸಂಜೆಯ ಕಿಚ್ಚನ ಪಂಚಾಯ್ತಿಯಲ್ಲಿ ಉತ್ತರ ಸಿಗಲಿದೆ.
ಬಾಲಿವುಡ್ ನಟಿ ರಾಖಿ ಸಾವಂತ್ ವಿರುದ್ಧ ಮತ್ತಷ್ಟು ಆರೋಪಗಳನ್ನು ಮಾಡಿದ್ದಾನೆ ರಾಖಿ ಪತಿ, ಮೈಸೂರು ಹುಡುಗ ಆದಿಲ್. ಜೈಲಿನಿಂದ ಆಚೆ ಬಂದ ನಂತರ ನಿರಂತರವಾಗಿ ಆದಿಲ್ ಮಾಧ್ಯಮ ಗೋಷ್ಠಿ ಕರೆಯುತ್ತಾ, ರಾಖಿ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಇದೀಗ ರಾಖಿ ಗೆಳತಿ ರಾಜಶ್ರೀ ಜೊತೆ ಒಟ್ಟಾಗಿ ಮಾಧ್ಯಮಗೋಷ್ಠಿ ನಡೆಸಿದ ಆದಿಲ್, ‘ತಾನು ರಾಖಿ ಜೀವನದಲ್ಲಿ ಬಂದ ಆರನೇ ಗಂಡಸು. ಏಳನೇ ಗಂಡಸಿಗಾಗಿ ಆಕೆ ಹುಡುಕುತ್ತಿದ್ದಾಳೆ’ ಎಂದು ಆರೋಪ ಮಾಡಿದ್ದಾರೆ.
ರಾಖಿ ಜೊತೆ ಸದಾ ಗುರುತಿಸಿಕೊಳ್ಳುತ್ತಿದ್ದ ಗೆಳತಿ ರಾಜಶ್ರೀ (Rajshree) ಕೂಡ ರಾಖಿ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದ್ದಾರೆ. ತಾನು ಮೀಟೂ ಪ್ರಕರಣದಲ್ಲಿ ಸಂಕಟ ಪಡುತ್ತಿದ್ದಾಗ, ತನ್ನ ವಿಡಿಯೋ ಇಟ್ಟುಕೊಂಡು ರಾಖಿ ಮಾನಹಾನಿ ಮಾಡಿದರು ಎಂದಿದ್ದಾರೆ. ದುಡ್ಡಿಗಾಗಿ ರಾಖಿ ಸಾವಂತ್ ಎಂತಹ ಕೆಲಸಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ ರಾಜಶ್ರೀ. ಇದನ್ನೂ ಓದಿ:‘ಜಲಂಧರ’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಪ್ರಮೋದ್ ಶೆಟ್ಟಿ
ಆದಿಲ್ ನಿಂದ ಬೇಸತ್ತು ಮೆಕ್ಕಾಗೆ ಹೋಗಿದ್ದ ರಾಖಿ
ರಾಖಿ ಸಾವಂತ್ (Rakhi Sawant) ಮೆಕ್ಕಾದಿಂದ ವಾಪಸ್ಸಾದ ನಂತರ ಚಿತ್ರ ವಿಚಿತ್ರವಾಗಿ ಆಡುತ್ತಿದ್ದಾರೆ. ಮೆಕ್ಕಾಗೆ ಹೋಗಿ ಬಂದ ನಂತರ ತಾವು ಪವಿತ್ರರಾಗಿರುವುದಾಗಿ ಹೇಳಿಕೊಂಡಿರುವ ಅವರು, ತಮ್ಮನ್ನು ಯಾವುದೇ ಗಂಡಸು ಮುಟ್ಟುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ತಮ್ಮ ಹತ್ತಿರಕ್ಕೆ ಗಂಡಸರು ಬರುತ್ತಿದ್ದಂತೆಯೆ ‘ದೂರ ಇರಿ’ ಎಂದು ಎಚ್ಚರಿಕೆಯನ್ನೂ ರಾಖಿ ಕೊಡುತ್ತಿದ್ದಾರೆ.
ಆದಿಲ್ (Adil) ನನ್ನು ಮದುವೆಯಾದ ನಂತರ ತಾನು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು ನಟಿ ರಾಖಿ ಸಾವಂತ್ (Rakhi Sawant). ಮುಸ್ಲಿಂ ನಿಯಮದಂತೆಯೇ ಮದುವೆ ಆಗಿರುವುದಾಗಿಯೂ ತಿಳಿಸಿದ್ದರು. ಆಮೇಲೆ ಆದಿಲ್ ಮೇಲೆ ಗುರುತರ ಆರೋಪಗಳನ್ನು ಮಾಡಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯೂ ಆಗಿದ್ದರು. ಇದೀಗ ಆದಿಲ್ ಜೈಲಿನಿಂದ ಆಚೆ ಬಂದಿದ್ದಾರೆ. ಸರಣಿಯವಾಗಿ ರಾಖಿ ಮೇಲೆ ಆರೋಪ ಮಾಡುತ್ತಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ರಾಖಿ ಬಗ್ಗೆ ದಿನಕ್ಕೊಂದು ಆರೋಪ ಮಾಡುತ್ತಿರುವ ಆದಿಲ್, ಪತ್ನಿ ರಾಖಿ ಸಾವಂತ್ ಗೆಳತಿಯರನ್ನೂ ತನ್ನತ್ತ ಒಲಿಸಿಕೊಂಡು ರಾಖಿ ವಿರುದ್ಧ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಇದರಿಂದ ಬೇಸತ್ತ ರಾಖಿ ಮೆಕ್ಕಾಗೆ ತೆರಳಿದ್ದರು. ಅಲ್ಲಿ ಅಳುತ್ತಲೇ ಪ್ರಾರ್ಥನೆ ಮಾಡಿದ್ದ ವಿಡಿಯೋವನ್ನೂ ಶೇರ್ ಮಾಡಿದ್ದರು. ಇದೀಗ ರಾಖಿ ಮೆಕ್ಕಾದಿಂದ ವಾಪಸ್ಸಾಗಿದ್ದಾರೆ.
ಮೆಕ್ಕಾದಿಂದ (Mecca) ಭಾರತಕ್ಕೆ ಬಂದಿಳಿದ ರಾಖಿಗೆ ಕೆಲವರು ‘ರಾಖಿ ರಾಖಿ..’ ಎಂದು ಕರೆಯುತ್ತಾರೆ. ಸಿಡುಕಿನಿಂದಲೇ ‘ನನ್ನನ್ನು ರಾಖಿ ಎಂದು ಕರೆಯಬೇಡಿ. ನಾನು ಫಾತಿಮಾ (Fatima). ಇನ್ಮುಂದೆ ನನ್ನನ್ನು ಫಾತಿಮಾ ಅಂತಾನೇ ಕರೆಯಬೇಕು’ ಎಂದು ತಾಕೀತು ಮಾಡುತ್ತಾರೆ. ಮದುವೆಯ ನಂತರ ಫಾತಿಮಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿಯೂ ಅವರು ತಿಳಿಸಿದ್ದರು.
ಖ್ಯಾತ ನಟಿ ಅರ್ಥನಾ ಬಿನು ಸ್ವತಃ ತಂದೆಯ ವಿರುದ್ಧವೇ ಕೊಲೆ ಆರೋಪ ಮಾಡಿದ್ದಾರೆ. ಅಲ್ಲದೇ, ತಮ್ಮ ಮನೆಗೆ ಅಕ್ರಮವಾಗಿ ನುಗ್ಗಿ ತೊಂದರೆ ಮಾಡುತ್ತಾರೆ ಎಂದು ಅವರು ಸುದೀರ್ಘವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮಲಯಾಳಂ ತಾರೆಯಾಗಿರುವ ಅರ್ಥನಾ ಬಿನು ಅದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ನಟಿ ಅರ್ಥನಾ ಬಿನು ಆರೋಪ ಮಾಡಿದ್ದು ಬೇರೆ ಯಾರೂ ಅಲ್ಲ, ಮಲಯಾಳಂನಲ್ಲಿ ನಟರೂ ಆಗಿರುವ ವಿಜಯಕುಮಾರ್ ಮೇಲೆ. ವಿಜಯ್ ಕುಮಾರ್ ಮತ್ತು ಅರ್ಥನಾ ಬಿನು ತಾಯಿ ಡಿವೋರ್ಸ್ ಆಗಿ ಹಲವು ವರ್ಷಗಳೇ ಕಳೆದಿವೆ. ಇದೀಗ ಅರ್ಥನಾ ತನ್ನ ತಾಯಿಯೊಂದಿಗೆ ಅಜ್ಜಿ ಮನೆಯಲ್ಲಿ ಇದ್ದಾರೆ. ತಂದೆಯಿಂದ ದೂರವಾಗಿ ನೆಮ್ಮದಿಯ ದಿನಗಳನ್ನು ಕಳೆಯುತ್ತಿರುವ ಈ ಕುಟುಂಬಕ್ಕೆ ತಂದೆಯೇ ವಿಲನ್ ಆಗಿದ್ದಾರೆ ಎನ್ನುವುದು ಅರ್ಥನಾ ಆರೋಪ. ಇದನ್ನೂಓದಿ:ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್
ವಿಜಯಕುಮಾರ್ ಮನೆಯ ಕಾಂಪೌಂಡ್ ಹಾರಿ, ಅನಧಿಕೃತವಾಗಿ ಮನೆಯೊಳಗೆ ಪ್ರವೇಶ ಮಾಡುವುದು ಮತ್ತು ಕಿಟಕಿಯಾಚೆ ನಿಂತು ಮಾತನಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ನಟಿ, ‘ಸಿನಿಮಾಗಳಲ್ಲಿ ಮುಂದುವರೆಯದಂತೆ ನನ್ನ ತಂದೆ ಬೆದರಿಕೆ ಹಾಕುತ್ತಿದ್ದಾರೆ. ಸಿನಿಮಾದಲ್ಲಿ ಮುಂದುವರೆದರೆ ಕೊಲ್ಲುವುದಾಗಿ ಹೇಳುತ್ತಿದ್ದಾರೆ. ನಾನು ನಟಿಸುತ್ತಿರುವ ಚಿತ್ರತಂಡದ ವಿರುದ್ಧವೂ ನಿಂದನೆ ಮಾಡಿದ್ದಾರೆ. ಅವರು ಅಕ್ರಮವಾಗಿ ಮನೆ ಪ್ರವೇಶ ಮಾಡುತ್ತಾರೆ. ನಿಂದಿಸುತ್ತಾರೆ’ ಎಂದೆಲ್ಲ ಬರೆದುಕೊಂಡಿದ್ದಾರೆ.
ಅವರು ಮನೆಗೆ ಬಂದಾಗ ಪೊಲೀಸ್ ಠಾಣೆಗೆ ಕಾಲ್ ಮಾಡಿದರೆ, ಪೊಲೀಸ್ ನವರು ಸರಿಯಾದ ರೀತಿಯಲ್ಲಿ ಸ್ಪಂದಿಸಲ್ಲ ಎನ್ನುವ ಆರೋಪವನ್ನೂ ಈ ನಟಿ ಮಾಡಿದ್ದಾರೆ. ತಮಗೆ ಜೀವ ಬೆದರಿಕೆಯಿದ್ದು, ಪೊಲೀಸರು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎನ್ನುವುದು ನಟಿಯ ಆಗ್ರಹ. ಅಲ್ಲದೇ, ತಮ್ಮ ತಂದೆಯ ಮೇಲೆ ಹಲವಾರು ಪ್ರಕರಣಗಳೂ ಇದ್ದು, ಭಯ ಕಾಡುತ್ತಿದೆ ಎಂದಿದ್ದಾರೆ ಅರ್ಥನಾ ಬಿನು.
ಮೀಟೂ ಆರೋಪದ ಮೂಲಕ ಬಾಲಿವುಡ್ (Bollywood) ಗೆ ಬೆಂಕಿ ಹಚ್ಚಿದ್ದ ನಟಿ ಪಾಯಲ್ ಘೋಷ್ (Payal Ghosh) ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈ ಹಿಂದೆ ಮೀಟೂ (Metoo) ಅಭಿಯಾನದಲ್ಲಿ ಪಾಲ್ಗೊಂಡಿದ್ದ ಪಾಯಲ್, ‘ಬಾಲಿವುಡ್ ಟಾಪ್ ನಿರ್ದೇಶಕರೊಬ್ಬರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ’ ಎಂದು ಅವರು ಆರೋಪ (Allegation) ಮಾಡಿದ್ದರು.
ಇದೀಗ ಪಾಯಲ್ ಘೋಷ್ 11ನೇ ಸಿನಿಮಾವನ್ನು ಮುಗಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಈ ಖುಷಿಯ ಜೊತೆಗೆ ಕಹಿ ಮಾತುಗಳನ್ನೂ ಆಡಿದ್ದಾರೆ. ಕೇಳಿದವರೊಟ್ಟಿಗೆ ನಾನು ಮಲಗಿದ್ದರೆ, ನನ್ನ ದೇಹವನ್ನು ಅವರೊಂದಿಗೆ ಹಂಚಿಕೊಂಡಿದ್ದರೆ, ಇಷ್ಟೊತ್ತಿಗೆ 30 ಚಿತ್ರಗಳನ್ನು ಮಾಡಿರುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್ ಸಿನಿಮಾ ರಂಗದ ಕರಾಳ ಮುಖವನ್ನು ಆಗಾಗ್ಗೆ ಬಿಚ್ಚಿಡುವ ಪಾಯಲ್, ಈ ಹಿಂದೆ ಅನೇಕ ನಿರ್ದೇಶಕರ ಮತ್ತು ನಿರ್ಮಾಪಕರ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲ, ಕೆಲವು ನಟಿಯರ ಬಗ್ಗೆಯೂ ಕಾಮೆಂಟ್ ಮಾಡಿದ್ದರು. ದೇಹ ಹಂಚಿಕೊಂಡೆ ಪಾತ್ರಗಳನ್ನು ಪಡೆಯುವ ನಟಿಯರೂ ಇದ್ದಾರೆ ಎಂದು ನೇರವಾಗಿಯೇ ಮಾತನಾಡಿದ್ದರು. ಆಗಲೂ ಕೂಡ ಇವರ ಮಾತು ಅಷ್ಟೇ ಸದ್ದು ಮಾಡಿತ್ತು. ಇದನ್ನೂಓದಿ:ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್
ಈ ಬಾರಿಯ ಕಾಮೆಂಟ್ ಗೂ ಅಷ್ಟೇ ತೀವ್ರತರಹದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಾರೆಲ್ಲ ನಟಿಯರು ಹೀಗೆ ಅವಕಾಶ ಪಡೆದಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿ ಎಂದು ಕೆಲವರು ಕೇಳಿದ್ದಾರೆ. ಅಲ್ಲದೇ, ನಿಮ್ಮನ್ನು ಯಾರೆಲ್ಲ ಮಲಗಲು ಕರೆದಿದ್ದಾರೆ ಎನ್ನುವುದನ್ನು ತಿಳಿಸಿರಿ ಎಂದು ಕಾಮೆಂಟ್ ಮಾಡಿದ್ದಾರೆ.
ಪಾಯಲ್ ಘೋಷ್ ಸಿನಿಮಾ ರಂಗದ ಬಗ್ಗೆ ಆಗಾಗ್ಗೆ ಈ ರೀತಿಯ ಬಾಂಬ್ ಗಳನ್ನು ಸಿಡಿಸುತ್ತಲೇ ಇರುತ್ತಾರೆ. ಒಂದಷ್ಟು ಬಾರಿ ಅವರ ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡರೆ, ಮತ್ತಷ್ಟು ಬಾರಿ ನೆಗ್ಲೆಟ್ ಮಾಡಲಾಗುತ್ತದೆ. ಆದರೂ, ಅವರು ಹೇಳುವುದನ್ನು ನಿಲ್ಲಿಸುವುದಿಲ್ಲ. ಸಿನಿಮಾ ರಂಗ ಮತ್ತು ಕಿರುತೆರೆ ಎರಡರಲ್ಲೂ ಕೆಲಸ ಮಾಡಿರುವ ಪಾಯಲ್, ಬೋಲ್ಡ್ ಫೋಟೋ ಶೂಟ್ ಮೂಲಕವೂ ಸುದ್ದಿಯಲ್ಲಿರುತ್ತಾರೆ.
ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ (Vijay Devarakonda) ಮೇಲೆ ನಟಿ, ನಿರೂಪಕಿ ಅನಸೂಯಾ ಭಾರದ್ವಾಜ್ ಗುರುತರ ಆರೋಪ ಮಾಡಿದ್ದಾರೆ. ಹಲವು ವರ್ಷಗಳಿಂದಲೂ ಈ ಇಬ್ಬರ ಮಧ್ಯ ಮುಸುಕಿನ ಗುದ್ದಾಟವಿದ್ದು, ಆಗಾಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅದನ್ನು ಹೊರಹಾಕುತ್ತಾರೆ. ಈ ಬಾರಿಯೂ ಒಂದು ಆರೋಪದೊಂದಿಗೆ ವಿಜಯ್ ಮೇಲೆ ಮುಗಿಬಿದ್ದಿದ್ದಾರೆ ಅನಸೂಯಾ.
ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಸಖತ್ ಟ್ರೋಲ್ (troll) ಆಗುತ್ತಿರುವ ನಟಿ ಅನಸೂಯಾ. ಸಲ್ಲದ ಕಾರಣಕ್ಕಾಗಿ ಇವರು ಟ್ರೋಲ್ ಆಗುತ್ತಿದ್ದಾರೆ. ಅಲ್ಲದೇ, ಬೋಲ್ಡ್ ಫೋಟೋಗಳನ್ನು ಸಾಕಷ್ಟು ಹರಿದಾಡುತ್ತಿವೆ. ಇದಕ್ಕೆ ಕಾರಣ ವಿಜಯ್ ದೇವರಕೊಂಡ ಕಡೆಯವರು ಎನ್ನುವ ಆರೋಪ ಅವರದ್ದು. ವಿಜಯ್ ಆತ್ಮೀಯರೇ ದುಡ್ಡುಕೊಟ್ಟು ಟ್ರೋಲ್ ಮಾಡಿಸುತ್ತಿದ್ದಾರೆ ಎನ್ನುವುದು ಅವರ ಆರೋಪ.
ಸದ್ಯ ಅನಸೂಯಾ ಭಾರದ್ವಾಜ್ (Anasuya Bharadwaj) ಪತಿ ಜೊತೆ ಥೈಲ್ಯಾಂಡ್‌ನಲ್ಲಿದ್ದಾರೆ. ಪತಿಗೆ ಲಿಪ್‌ಕಿಸ್ ಮಾಡಿರುವ ರೊಮ್ಯಾಂಟಿಕ್ ಫೋಟೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ನಟಿಯ ಮೋಜು- ಮಸ್ತಿಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಕೇಸರಿ ಸೀರೆಯುಟ್ಟ ರಮ್ಯಾ ಫೋಟೋ ವೈರಲ್
‘ಪುಷ್ಪ’ ನಟಿ ಅನಸೂಯಾ ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಸಿನಿಮಾ ಶೂಟಿಂಗ್, ನಿರೂಪಣೆಗೆ ಬ್ರೇಕ್ ಹಾಕಿ ಥೈಲ್ಯಾಂಡ್‌ಗೆ ಹಾರಿದ್ದಾರೆ. ತಮ್ಮ 13ನೇ ವೆಡ್ಡಿಂಗ್ ಆನಿವರ್ಸರಿಗೆ ದೂರ ದೇಶಕ್ಕೆ ಹೋಗಿದ್ದಾರೆ. ಅಲ್ಲಿ ಪತಿ ಸುಸಾಂಕ್ ಜೊತೆ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ಪ್ರವಾಸದ ಫೋಟೋಗಳನ್ನು ಶೇರ್ ಮಾಡುವ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ನಟಿ, ನಿರೂಪಕಿ ಅನಸೂಯಾ ಲಿಪ್‌ಕಿಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಒಟ್ನಲ್ಲಿ ಅನಸೂಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದೆ.
ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ (Pushpa) ಚಿತ್ರದಲ್ಲಿ ಅನಸೂಯಾ ಖಡಕ್ ಆಗಿ ನಟಿಸಿದ್ದರು. ಪುಷ್ಪ ಪಾರ್ಟ್ 2ನಲ್ಲಿ ಅವರು ನಟಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಇದು ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.
ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್ ತನ್ನ ಪತಿ ಆದಿಲ್ (Adil) ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರು (Mysore) ಜೈಲಿನಿಂದಲೇ ತನ್ನನ್ನು ಕೊಲ್ಲಲು ಆದಿಲ್ ಸ್ಕೆಚ್ ಹಾಕಿದ್ದಾನೆ ಎಂದು ತಿಳಿಸಿದ್ದಾರೆ. ‘ಅವನು ನನ್ನನ್ನು ಕೊಲ್ಲಲು ಯಾಕೆ ಪ್ಲ್ಯಾನ್ ಮಾಡಿದ್ದಾನೋ ಗೊತ್ತಿಲ್ಲ. ಹಣಕ್ಕಾಗಿಯಾ ಅಥವಾ ದ್ವೇಷಕ್ಕಾಗಿಯಾ’ ಎಂದು ರಾಖಿ (Rakhi Sawant) ಪ್ರಶ್ನೆ ಮಾಡಿದ್ದಾರೆ. ಅವನು ಏನೇ ಪ್ಲ್ಯಾನ್ ಮಾಡಿದರೂ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.
ಕೊಲ್ಲುವ (Murder)ವಿಚಾರ ಒಂದು ಕಡೆಯಾದರೆ, ಮತ್ತೊಂದು ಕಡೆ ತನಗೆ ಆದಿಲ್ ಕರೆ ಮಾಡಿ ‘ಐ ಲವ್ ಯೂ’ ಅಂತ ಹೇಳುತ್ತಿರುವ ವಿಚಾರವನ್ನೂ ಹೇಳಿಕೊಂಡಿದ್ದಾರೆ ರಾಖಿ. ಆಗಾಗ್ಗೆ ಆದಿಲ್ ಕರೆ ಮಾಡುತ್ತಾನೆ. ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಮತ್ತೆ ಜೊತೆಯಾಗಿ ಬದುಕೋಣ ಎಂದು ಹೇಳುತ್ತಾನೆ. ಆದರೆ, ಅವನನ್ನು ನಾನು ಕ್ಷಮಿಸಬಹುದು. ಮತ್ತೆ ಅವನೊಂದಿಗೆ ಬದುಕಲು ಸಾಧ್ಯವಿಲ್ಲ’ ಎಂದಿದ್ದಾರೆ. ಇದನ್ನೂ ಓದಿ:‘ಏಜೆಂಟ್’ ಸಿನಿಮಾ ಸೋಲಿನ ಬೆನ್ನಲ್ಲೇ ಪತ್ರ ಬರೆದ ಅಖಿಲ್ ಅಕ್ಕಿನೇನಿ
ಫೆಬ್ರವರಿ 7 ರಂದು ಪತಿ ಆದಿಲ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು ರಾಖಿ ಸಾವಂತ್. ಮದುವೆಯಾಗಿ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಆ ದೂರನ್ನು ಆಧರಿಸಿ ಮುಂಬೈನಲ್ಲಿ ಆದಿಲ್ ನನ್ನು ಅರೆಸ್ಟ್ ಮಾಡಲಾಗಿತ್ತು. ನಂತರ ಮೈಸೂರಿನಲ್ಲೂ ಆದಿಲ್ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಗಿದ್ದರಿಂದ ಆತನನ್ನು ಮೈಸೂರು ಜೈಲಿನಲ್ಲಿ ಇರಿಸಲಾಗಿದೆ. ಸ್ವತಃ ರಾಖಿ ಕೂಡ ಮೈಸೂರಿಗೆ ಬಂದು ಕೋರ್ಟಿನಲ್ಲಿ ಸಾಕ್ಷ್ಯ ನುಡಿದಿದ್ದರು.
ಹಲವು ದಿನಗಳಿಂದ ಆದಿಲ್ ಬಗ್ಗೆ ಮೌನವಹಿಸಿದ್ದ ರಾಖಿ, ಇದೀಗ ಮತ್ತೆ ಅವನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಆದಿಲ್ ಆದಷ್ಟು ಬೇಗ ಜೈಲಿನಿಂದ (jail) ಆಚೆ ಬರಲಿ ಎಂದು ಪ್ರಾರ್ಥನೆ ಮಾಡಿದ್ದ ಇದೇ ರಾಖಿ, ಇದೀಗ ಕೊಲ್ಲುವ ಮಾತುಗಳನ್ನು ಆಡುತ್ತಿದ್ದಾರೆ. ಈ ಕುರಿತು ಅವರು ದೂರು ನೀಡಿದರೆ ಆದಿಲ್ ಭವಿಷ್ಯ ಇನ್ನೂ ಕತ್ತಲಲ್ಲೇ ಇರಲಿದೆ.
ಮಣಿರತ್ನಂ (Mani Ratnam) ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಪೊನ್ನಿಯಿನ್ ಸೆಲ್ವನ್ 2’ (Ponniyin Selvan) ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು, ತುಂಬಿದ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ಚಿತ್ರಕ್ಕೆ ಅತ್ಯದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮಣಿರತ್ನಂ ಅವರ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಒಂದು ಎಂದು ಬಣ್ಣಿಸಲಾಗುತ್ತಿದೆ. ಆದರೆ, ತಮಿಳಿನ ಖ್ಯಾತ ಲೇಖಕ ಮುರುಗವೇಲು (Murugavelu) ನಿರ್ದೇಶಕ ಮಣಿರತ್ನಂ ವಿರುದ್ಧ ಕಿಡಿಕಾರಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಸುಳ್ಳು ಕಥೆಯನ್ನು ಹೇಳುವ ಸಿನಿಮಾ. ಇತಿಹಾಸವನ್ನು ತಿರುಚಲಾಗಿದೆ. ಅಲ್ಲದೇ ಮಣಿರತ್ನಂ ಈ ಸಿನಿಮಾದಲ್ಲಿ ಹಿಂದುತ್ವವನ್ನು (Hindutva) ಹೇರಿಕೆ ಮಾಡಿದ್ದಾರೆ. ಪೊನ್ನಿಯಿನ್ ಸೆಲ್ವನ್ ಕಾದಂಬರಿಯಲ್ಲಿ ಕಲ್ಕಿ ಬರೆದಿದ್ದೇ ಬೇರೆ, ಸಿನಿಮಾದಲ್ಲಿ ತೋರಿಸಿದ್ದೇ ಬೇರೆ. ಮಂದಾಕಿನಿ ಸ್ವಾತಂತ್ರ್ಯವನ್ನು ನಿರ್ದೇಶಕರಿಗೆ ಸಹಿಸಿಕೊಳ್ಳಲು ಆಗಿಲ್ಲ. ಮಹಿಳೆಯರು ಬೇರೆ ಪುರುಷನ ಬಗ್ಗೆ ಯೋಚಿಸಬಾರದು ಎನ್ನುವ ಕೆಟ್ಟ ಸಂದೇಶವನ್ನು ಸಾರಿದ್ದಾರೆ ಎಂದಿದ್ದಾರೆ ಲೇಖಕ ಮುರುಗವೇಲು.
ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಸ್ಟಾರ್ ತಾರಾಬಳಗವಿರುವ ಸಿನಿಮಾ ‘ಪೊನ್ನಿಯಿನ್ ಸೆಲ್ವನ್ -2’. ಕಾರ್ತಿ (Karthi), ಐಶ್ವರ್ಯಾ ರೈ (Aishwarya Rai), ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಚಿತ್ರದಲ್ಲಿದೆ. ಇದನ್ನೂ ಓದಿ:ಹೊಸ ಪ್ರಾಜೆಕ್ಟ್‌ನಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಸಮಂತಾ- ಅನುಷ್ಕಾ ಶರ್ಮಾ
ಮಣಿರತ್ನಂ ನಿರ್ದೇಶನ ಒಂದು ಶಕ್ತಿಯಾದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್, ಸ್ಟಾರ್ ಹಾಗೂ ಅನುಭವಿ ಕಲಾವಿದರ ನಟನೆ, ಅದ್ದೂರಿ ಮೇಕಿಂಗ್ ಎಲ್ಲವೂ ಸೀಕ್ವೆಲ್ 2 ಮೇಲೆ ನಿರೀಕ್ಷೆ ಹೆಚ್ಚಿಸಿತ್ತು. ನಿರೀಕ್ಷೆಯನ್ನು ನಿರ್ದೇಶಕರು ತುಂಬಿಕೊಟ್ಟಿದ್ದಾರೆ.