Tag: ಆರೋಗ್ಯ ಸಚಿವರು

  • ಪ್ರತಿ ಬುಧವಾರ 10 ಲಕ್ಷ ಲಸಿಕೆ ಗುರಿ: ಸುಧಾಕರ್

    ಪ್ರತಿ ಬುಧವಾರ 10 ಲಕ್ಷ ಲಸಿಕೆ ಗುರಿ: ಸುಧಾಕರ್

    – ಸೆಪ್ಟೆಂಬರ್‍ ನಲ್ಲಿ 1.50 ಕೋಟಿ ಲಸಿಕೆ ನೀಡುವ ಗುರಿ

    ಕೋಲಾರ: ರಾಜ್ಯದಲ್ಲಿ ಪ್ರತಿ ಬುಧವಾರ ಕೋವಿಡ್ ಲಸಿಕಾ ಉತ್ಸವ ನಡೆಸುತ್ತಿದ್ದು, ಒಂದೇ ದಿನ 10 ಲಕ್ಷ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

    ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾಮಾನ್ಯ ದಿನಗಳಲ್ಲಿ 5 ಲಕ್ಷ ಲಸಿಕೆ ನೀಡುವ ಗುರಿ ಇದೆ. ಒಂದು ತಿಂಗಳಲ್ಲಿ ಕನಿಷ್ಠ 1.50 ಕೋಟಿ ಡೋಸ್ ಲಸಿಕೆ ನೀಡುವ ಗುರಿ ಇದೆ. ಡಿಸೆಂಬರ್ ವೇಳೆಗೆ ಎಲ್ಲಾ ವಯಸ್ಕರಿಗೆ ಲಸಿಕೆ ನೀಡಬೇಕು ಎಂಬ ಉದ್ದೇಶವಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಗಡಿಭಾಗದ ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಈ ಬಗ್ಗೆ ಕೇಂದ್ರದ ಆರೋಗ್ಯ ಸಚಿವರು ಕೂಡ ಸಲಹೆ ನೀಡಿದ್ದಾರೆ. ಗಡಿಭಾಗಗಳ ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಲಸಿಕೆ ಪಡೆಯಬೇಕು ಎಂದು ಕೋರಿದರು. ಇದನ್ನೂ ಓದಿ: ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಕ್ಷಯ ರೋಗ ಪತ್ತೆ

    ಆಗಸ್ಟ್ ನಲ್ಲಿ ರಾಜ್ಯಕ್ಕೆ 1.12 ಕೋಟಿ ಲಸಿಕೆ ಬಂದಿದೆ. ಒಂದೇ ತಿಂಗಳಲ್ಲಿ 1.10 ಕೋಟಿ ಲಸಿಕೆ ನೀಡಲಾಗಿದೆ. ಜನವರಿಯಿಂದ ಈವರೆಗೆ ಆಗಸ್ಟ್ ತಿಂಗಳಲ್ಲೇ ಅತ್ಯಧಿಕ ಲಸಿಕೆ ನೀಡಲಾಗಿದೆ. ಸೆಪ್ಟೆಂಬರ್ ನಲ್ಲಿ ಕನಿಷ್ಠ 1.50 ಕೋಟಿ ಲಸಿಕೆ ನೀಡುವ ಗುರಿ ಇದೆ. ಕೇರಳದಿಂದ ಬರುವವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ನಿಯಮ ತರಲಾಗಿದೆ. ಆದರೆ ಪ್ರತಿ ದಿನ ಬರುವ ವಿದ್ಯಾರ್ಥಿಗಳು ಸೇರಿದಂತೆ ಕೆಲವರಿಗೆ ಮಾರ್ಗಸೂಚಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದರು.

    ಲಸಿಕೆ ಪಡೆಯದವರಿಗೆ ರೇಷನ್, ಪಿಂಚಣಿ ತಡೆಹಿಡಿಯುವುದನ್ನು ಸರ್ಕಾರ ಒಪ್ಪುವುದಿಲ್ಲ. ಈ ರೀತಿ ನಿರ್ಧಾರವನ್ನು ಸರ್ಕಾರ ಎಲ್ಲೂ ಮಾಡಿಲ್ಲ. ಬೀದರ್, ಯಾದಗಿರಿ, ಕಲಬುರಗಿ ಮೊದಲಾದ ಜಿಲ್ಲೆಗಳಲ್ಲಿ ಜನರು ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕೆಲವೆಡೆ ಚುನಾಯಿತ ಪ್ರತಿನಿಧಿ, ಸಂಘ, ಸಂಸ್ಥೆಗಳು ಲಸಿಕೆ ಪಡೆಯುವವರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡುತ್ತಿವೆ. ಜನರು ಲಸಿಕೆ ಹಾಕಿಸಿಕೊಳ್ಳಬೇಕೆಂಬುದು ಇದರ ಉದ್ದೇಶ. ಜಾಗೃತಿ ಮೂಡಿಸುವ ಭರದಲ್ಲಿ ಏನಾದರೂ ಆಗಿರಬಹುದು. ಈ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಸಂಪುಟದಲ್ಲಿರುವ ಸಚಿವರು ಪ್ರತಿಭಾವಂತರು – ಸಹೋದ್ಯೋಗಿಗಳಿಗೆ ಸಿಎಂ ಮೆಚ್ಚುಗೆ

    ಆಸ್ಪತ್ರೆ ಉದ್ಘಾಟನೆ ಆಗಿಲ್ಲ
    ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅಧಿಕೃತವಾಗಿ ಇಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ಆಗಿದೆ. ಆದರೆ ಲಸಿಕೆಗೆ ಬೇಡಿಕೆ ಇಡಲು ಮುಖ್ಯಮಂತ್ರಿಗಳೊಂದಿಗೆ ದೆಹಲಿಗೆ ತೆರಳಿದ್ದರಿಂದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಆಗಸ್ಟ್ 26 ರ ಬದಲು ಸೆಪ್ಟೆಂಬರ್ 1 ಕ್ಕೆ ಮುಂದೂಡಲಾಗಿದೆ ಎಂದು ಎಲ್ಲರಿಗೂ ತಿಳಿಸಲಾಗಿತ್ತು. ಆದರೆ ಆಗಸ್ಟ್ 26 ರಂದು ಕೆಲವರು ಕಾರ್ಯಕರ್ತರೊಂದಿಗೆ ಹೋಗಿ ಕೇಂದ್ರದಲ್ಲಿ ಟೇಪ್ ಕಟ್ ಮಾಡಿದ್ದಾರೆ. ಇದಕ್ಕೆ ಯಾವುದೇ ಅಧಿಕಾರಿಗಳು ಹೋಗಿಲ್ಲ. ಈ ರೀತಿ ರಾಜ್ಯದಲ್ಲಿ ಎಲ್ಲೂ ಆಗಿಲ್ಲ. ರಾಜ್ಯದ ಜನರು ನಮ್ಮ ನಡೆ, ನುಡಿ ನೋಡುತ್ತಿರುತ್ತಾರೆ. ಕೆಲವರು ಭಾಷಣ ಮಾಡುತ್ತಾರೆ, ಮೌಲ್ಯಗಳ ಕಥೆ ಹೇಳುತ್ತಾರೆ. ಆದರೆ ಅವರ ಮಾತು ಒಂದು, ಕೃತಿ ಇನ್ನೊಂದಾಗಿರುತ್ತದೆ. ಸರ್ಕಾರ ಏನಾದರೂ ತೀರ್ಮಾನ ಕೈಗೊಂಡಾಗ ಅದನ್ನು ಪಾಲಿಸಬೇಕು. ನನಗೆ ಅವರೊಂದಿಗೆ ವೈಯಕ್ತಿಕ ಸಮಸ್ಯೆ ಇಲ್ಲ. ವಿಚಾರಧಾರೆಗಳಲ್ಲಿ ಮಾತ್ರ ಭಿನ್ನಾಭಿಪ್ರಾಯವಿರಬಹುದು ಎಂದು ಸ್ಪಷ್ಟಪಡಿಸಿದರು.

  • ಸಚಿವರ ಆಸ್ಪತ್ರೆ ಭೇಟಿ, ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ ಆರೋಗ್ಯ ಸಚಿವರು

    ಸಚಿವರ ಆಸ್ಪತ್ರೆ ಭೇಟಿ, ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ ಆರೋಗ್ಯ ಸಚಿವರು

    ಕಲಬುರಗಿ: ಜಿಲ್ಲಾಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರಗೆ ಆರೋಗ್ಯ ಸಚಿವ ಶಿವಾನಂದ್ ಪಾಟೀಲ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ವೇಳೆ ಆಸ್ಪತ್ರೆಯಲ್ಲಿನ ಮೂಲಭೂತ ಸೌಲಭ್ಯಗಳು ಹಾಗೂ ಪ್ರತಿ ವಾರ್ಡ್ ನಲ್ಲಿಯೂ ಸ್ವಚ್ಛತೆ ಜೊತೆಗೆ ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ತರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಸ್ಪತ್ರೆಯ ಸರ್ಜನ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಶಿವಾನಂದ್ ಪಾಟೀಲ್ ಸೂಚನೆ ನೀಡಿದರು.

    ಇದೇ ವೇಳೆ ಮಾತನಾಡಿದ ಅವರು, ಕಲಬುರಗಿ ಜಿಲ್ಲಾಸ್ಪತ್ರೆ ಅಲ್ಲದೇ ರಾಜ್ಯ ಸೇರಿದಂತೆ ದೇಶಾದ್ಯಂತ ರೇಬಿಸ್ ಔಷಧ ಕೊರತೆಯಿದೆ. ರೇಬಿಸ್ ಔಷಧ ಕೊರತೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ವಿವರಣೆ ಕೇಳಿದೆ. ಅಲ್ಲದೇ ಅಗತ್ಯಕ್ಕೆ ತಕ್ಕಂತೆ ರೇಬಿಸ್ ಔಷಧ ಪೂರೈಕೆ ಮಾಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದ್ದಾರೆ.

  • ಆರೋಗ್ಯ ಸಚಿವರನ್ನು ಮೊದ್ಲು ನಿಮಾನ್ಸ್‌ಗೆ ಸೇರಿಸ್ಬೇಕು: ವಾಟಾಳ್ ನಾಗರಾಜ್

    ಆರೋಗ್ಯ ಸಚಿವರನ್ನು ಮೊದ್ಲು ನಿಮಾನ್ಸ್‌ಗೆ ಸೇರಿಸ್ಬೇಕು: ವಾಟಾಳ್ ನಾಗರಾಜ್

    ಮೈಸೂರು: ಆರೋಗ್ಯ ಸಚಿವರಾದ ಶಿವಾನಂದ ಪಾಟೀಲರ ಆರೋಗ್ಯವೇ ಸರಿಯಿಲ್ಲ. ಅವರಿಗೆ ತಲೆ ಕೆಟ್ಟು ಅರೆ ಹುಚ್ಚರಾಗಿರಬೇಕು. ಹೀಗಾಗಿ ಮೊದಲು ಅವರನ್ನೇ ನಿಮಾನ್ಸ್ ಆಸ್ಪತ್ರೆಗೆ ಸೇರಿಸಬೇಕೆಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ವ್ಯಂಗ್ಯವಾಡಿದ್ದಾರೆ.

    ಸುಳ್ವಾಡಿ ಗ್ರಾಮಕ್ಕೆ ಬಂದು ನಾನು ಏನು ಮಾಡಬೇಕಿತ್ತು ಎಂಬ ಆರೋಗ್ಯ ಸಚಿವರ ಉಡಾಫೆಯ ಹೇಳಿಕೆಗೆ ಕಿಡಿಕಾರಿದ ವಾಟಾಳ್, ಆರೋಗ್ಯ ಸಚಿವರಿಗೆ ಆರೋಗ್ಯ ಸರಿಯಿಲ್ಲ. ಅವರಿಗೆ ತಲೆ ಕೆಟ್ಟು ಅರೆಹುಚ್ಚರಾಗಿ ಆ ರೀತಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಮೊದಲು ಅವರನ್ನು ನಿಮಾನ್ಸ್ ಆಸ್ಪತ್ರೆಗೆ ಸೇರಿಸಬೇಕಿತ್ತು. ಸುಳ್ವಾಡಿ ಮಾರಮ್ಮ ದೇವಾಲಯದ ಪ್ರಸಾದ ತಿಂದು ಭಕ್ತರು ಸಾವನ್ನಪ್ಪಿದ್ದ ವಿಚಾರ ತಿಳಿದು ಕೂಡಲೇ ಅವರು ಹೆಲಿಕಾಪ್ಟರ್ ನಲ್ಲಿ ಬರಬೇಕಿತ್ತು. ಯಾಕೆ ಅವರಿಗೆ ಹೆಲಿಕಾಪ್ಟರ್ ನಲ್ಲಿ ಬರಲು ಸಾಧ್ಯವಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ನಮ್ಮಲ್ಲಿ ತುಂಬಾ ಜನ ನಿಮಾನ್ಸ್ ನಲ್ಲಿ ಇರಬೇಕಾದವರು, ಇಂದು ಸಚಿವರಾಗಿದ್ದಾರೆ. ಆ ಬಗ್ಗೆ ಮಾತನಾಡೋದು ಬೇಡ. ಬೇಜವಾಬ್ದಾರಿಯುತ ಹೇಳಿಕೆ ನೀಡಿರುವ ಆರೋಗ್ಯ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 44 ಗಂಟೆ ತಡವಾಗಿ ಬಂದ್ರು ? ನಾ ಬಂದು ಏನ್ಮಾಡಬೇಕಿತ್ತೆಂದು ಆರೋಗ್ಯ ಸಚಿವರ ಉಡಾಫೆ

    ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆ ಆಗಬೇಕು. ಈ ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡಲು ನಾನು ಪ್ರತಿಭಟನೆ ನಡೆಸುತ್ತೇನೆ. ಅಲ್ಲದೇ ಸುವರ್ಣಸೌಧದ ಮುಂದೆ ಉನ್ನತ ಮಟ್ಟದ ತನಿಖೆಗಾಗಿ ಪ್ರತಿಭಟನೆ ಮಾಡುತ್ತೇನೆ. ಇದು ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಆಗಬೇಕು. ಪ್ರಕರಣ ಸಂಬಂಧ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳ್ಳ ಹಿಡಿದ ಸುವರ್ಣ ಆರೋಗ್ಯ ಕರ್ನಾಟಕ ಸ್ಕೀಂ: ಪಬ್ಲಿಕ್ ಸ್ಟಿಂಗ್‍ನಲ್ಲಿ ಬಯಲಾಯ್ತು ಆಸ್ಪತ್ರೆಗಳ ಬಂಡವಾಳ!- ವಿಡಿಯೋ ನೋಡಿ

    ಹಳ್ಳ ಹಿಡಿದ ಸುವರ್ಣ ಆರೋಗ್ಯ ಕರ್ನಾಟಕ ಸ್ಕೀಂ: ಪಬ್ಲಿಕ್ ಸ್ಟಿಂಗ್‍ನಲ್ಲಿ ಬಯಲಾಯ್ತು ಆಸ್ಪತ್ರೆಗಳ ಬಂಡವಾಳ!- ವಿಡಿಯೋ ನೋಡಿ

    ಪವಿತ್ರ ಕಡ್ತಲ
    ಬೆಂಗಳೂರು: ಇತ್ತೀಚೆಗೆ ಸಮ್ಮಿಶ್ರ ಸರ್ಕಾರ ಬಡವರಿಗಾಗಿಯೇ ಜಾರಿಗೊಳಿಸಿದ್ದ ಸುವರ್ಣ ಆರೋಗ್ಯ ಕರ್ನಾಟಕ ಯೋಜನೆಯು ಹಳ್ಳ ಹಿಡಿದಿದ್ದು, ಬಡವರಿಗೆ ನೀಡಬೇಕಾಗಿದ್ದ ಉಚಿತ ಸೇವೆಗಳು ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹೇಳ ಹೆಸರಿಲ್ಲದೇ ಕಣ್ಮರೆಯಾಗಿದೆ.

    ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜಾರಿಗೆ ತಂದಿದ್ದ ಸುವರ್ಣ ಆರೋಗ್ಯ ಕರ್ನಾಟಕ ಯೋಜನೆಯು ಹೇಗೆ ಜನರ ಆರೋಗ್ಯವನ್ನು ಕಸಿದುಕೊಂಡಿದೆ ಎನ್ನುವುದು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ಹೌದು, ಕಾಯಿಲೆಗಳು ಬಡತನ ಸಿರಿತನ ನೋಡದೇ ಎಲ್ಲರಿಗೂ ಬರುತ್ತವೆ. ಈ ಹಿಂದೆ ಕರ್ನಾಟಕದಲ್ಲಿ ಬಡಜನರಿಗೆ ಖಾಸಗಿ ಆಸ್ಪತ್ರೆಯಲ್ಲಿಯೂ ಉಚಿತವಾಗಿ ವೈದ್ಯಕೀಯ ಸೌಲಭ್ಯ ಪಡೆಯುವುದಕ್ಕೆ ಏಳು ಯೋಜನೆಗಳು ಜಾರಿಯಲ್ಲಿತ್ತು. ಆದರೆ ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವು ನಾಲ್ಕು ತಿಂಗಳ ಹಿಂದೆ ಎಲ್ಲವನ್ನು ವಿಲೀನ ಮಾಡಿ ಸುವರ್ಣ ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ಜಾರಿತಂದಿತ್ತು.

    ಈ ಯೋಜನೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೇ ಇದ್ದಾಗ, ಖಾಸಗಿ ಆಸ್ಪತ್ರೆಗೆ ಹೋಗಬಹುದಾಗಿತ್ತು. ಅಲ್ಲದೇ ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ನೇರವಾಗಿ ಹೋಗಬಹುದೆಂದು ನಿಯಾಮಳಿಯನ್ನು ಸಿದ್ದಪಡಿಸಿತ್ತು. ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಸಂಪೂರ್ಣ ಉಚಿತ ಹಾಗೂ ಎಪಿಎಲ್ ಕಾರ್ಡುದಾರರು ಆಸ್ಪತ್ರೆಯ ಶುಲ್ಕದ 30%ರಷ್ಟು ಮಾತ್ರ ಪಾವತಿಸಬೇಕು ಎಂದು ಯೋಜನೆ ತಿಳಿಸಿತ್ತು.

    ಇಂತಹ ಯೋಜನೆಗಳನ್ನು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಭಾಷಣಗಳಲ್ಲಿ ಕೇಳಲು ಚಂದವೆನಿಸುತ್ತಿದೆ. ಆದರೆ ಈ ಯೋಜನೆಯ ಕುರಿತು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸಿದಾಗ ಇದರ ಅಸಲಿ ಮುಖ ಹೊರಬಿದ್ದಿದೆ. ಸಮ್ಮಿಶ್ರ ಸರ್ಕಾರವು ಜನರಿಗೆ ಕೊಟ್ಟ ಹಸಿ ಹಸಿ ಭರವಸೆಯು ಕಾರ್ಯಾಚರಣೆಯಲ್ಲಿ ಹುಸಿಯಾಗಿದೆ. ಇಂತಹ ಆರೋಗ್ಯ ಯೋಜನೆಗಳನ್ನು ನಂಬಿಕೊಂಡು ಆಸ್ಪತ್ರೆಗಳಿಗೆ ಬಡವರು ಹೋದರೆ ಅವರಿಗೆ ಕಷ್ಟ ಗ್ಯಾರಂಟಿ.

    ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಆಸ್ಪತ್ರೆಗಳು ಯೋಜನೆಯ ಬಗ್ಗೆ ಏನು ಹೇಳಿದವು ಎಂಬುದನ್ನು ನೋಡಿ:

    ಸ್ಟಿಂಗ್ ಆಪರೇಷನ್ – 1
    ಸ್ಥಳ : ಪ್ರಸಿದ್ಧ ಖಾಸಗಿ ಆಸ್ಪತ್ರೆ, ಹೆಬ್ಬಾಳ.

    ಪ್ರತಿನಿಧಿ : ಸುವರ್ಣ ಆರೋಗ್ಯ ಕರ್ನಾಟಕ ಸ್ಕಿಂ ಇದ್ಯಾ?
    ಆಸ್ಪತ್ರೆಯವರು: ಕಾರ್ಡ್ ಇದ್ಯಾ?
    ಪ್ರತಿನಿಧಿ : ಇಲ್ಲಿ ಅಪ್ಲೈ ಆಗುತ್ತಾ?
    ಆಸ್ಪತ್ರೆಯವರು: ನಮ್ಮಲ್ಲಿ ಅಪ್ಲೈ ಆಗಲ್ಲ, ಈಗ ಯಾವ ಸರ್ಕಾರಿ ಸ್ಕೀಂ ಇಲ್ಲ. ಕಾರ್ಡ್ ಇದ್ರೆ 20 ಪರ್ಸೆಂಟ್ ಡಿಸ್ಕೌಂಟ್ ಸಿಗುತ್ತೆ ಅಷ್ಟೇ.
    ಪ್ರತಿನಿಧಿ : ಎಮರ್‌ಜೆನ್ಸಿನಲ್ಲಿ ಫ್ರೀಯಾಗಿ ಸಿಗುತ್ತಲ್ಲ, ಆರೋಗ್ಯ ಕರ್ನಾಟಕ ಸ್ಕಿಂ!
    ಆಸ್ಪತ್ರೆಯವರು: ಆ ಥರ ಯಾವುದು ಇಲ್ಲ. ರಾಷ್ಟ್ರೀಯ ಸುರಕ್ಷಾ ಭೀಮಾ ಯೋಜನೆ, ಯಶಸ್ವಿನಿ ಕಾರ್ಡ್ ಇರುತ್ತಲ್ಲ ಆ ಕಾರ್ಡ್ ಇರಬೇಕು, ಆದ್ರೇ ಆ ಸ್ಕೀಂ ನಮ್ಮಲ್ಲಿ ಇಲ್ಲ. ಒನ್ಲಿ 20 ಪರ್ಸೆಂಟ್ ಅಷ್ಟೇ ಡಿಸ್ಕೌಂಟ್ ಸಿಗೋದು.
    ಪ್ರತಿನಿಧಿ : ಓ….. ಫುಲ್ ಫ್ರೀ ಇರಲ್ವಾ?
    ಆಸ್ಪತ್ರೆಯವರು: ಅಷ್ಟೆಲ್ಲಾ ಇಲ್ಲ, ನಮ್ಮಲ್ಲಿ ಯಾವ ಸರ್ಕಾರಿ ಸ್ಕಿಂ ಇಲ್ಲ, ನಾವು ಸರ್ಕಾರದ ಜೊತೆ ಎಂಒಯು(ಸರ್ಕಾರದ ಜೊತೆ ಒಡಂಬಡಿಕೆ) ಸಹಿ ಹಾಕಿಲ್ಲ, ಸಹಿ ಹಾಕಿದ ಆಸ್ಪತ್ರೆಯಲ್ಲಿ ಮಾತ್ರ ನಿಮ್ಗೆ ಈ ಬೆನಿಫಿಟ್ ಸಿಗುತ್ತೆ.

    ಸ್ಟಿಂಗ್ ಆಪರೇಷನ್ – 2
    ಸ್ಥಳ – ಖಾಸಗಿ ಆಸ್ಪತ್ರೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ.

    ಪ್ರತಿನಿಧಿ : ಸುವರ್ಣ ಆರೋಗ್ಯ ಕರ್ನಾಟಕ ಇದ್ಯಾ?
    ಆಸ್ಪತ್ರೆಯವರು: ಹಾ….ಯಾವುದು?
    ಪ್ರತಿನಿಧಿ : ಸುವರ್ಣ ಆರೋಗ್ಯ ಕರ್ನಾಟಕ, ಗೌವರ್ನಮೆಂಟ್ ಹೆಲ್ತ್ ಸ್ಕೀಂ?
    ಆಸ್ಪತ್ರೆಯವರು: ಇಲ್ಲಿ ಯಾವುದೇ ಸರ್ಕಾರಿ ಸ್ಕೀಂ ಇಲ್ಲ. ಆರೋಗ್ಯ ಕರ್ನಾಟಕ ಇಲ್ಲ. ಅನೌನ್ಸ್ ಆಗಿಲ್ಲ ನಮ್ಮಲ್ಲಿ ಇನ್ನು.
    ಪ್ರತಿನಿಧಿ : ಎಮರ್‌ಜೆನ್ಸಿಗೂ ಸಿಗಲ್ವಾ?
    ಆಸ್ಪತ್ರೆಯವರು: ಇಲ್ಲ.

    ಸ್ಟಿಂಗ್ ಆಪರೇಷನ್ – 3
    ಸ್ಥಳ: ಖಾಸಗಿ ಆಸ್ಪತ್ರೆ, ಮಲ್ಲೇಶ್ವರಂ.

    ಪ್ರತಿನಿಧಿ : ಮೇಡಂ ಆರೋಗ್ಯ ಕರ್ನಾಟಕ ಸ್ಕೀಂ ಇದ್ಯಯಲ್ಲ ಇಲ್ಲಿ?
    ಸಿಬ್ಬಂದಿ : ಇಲ್ಲ. ಸರ್ಕಾರಿ ಸ್ಕೀಂ ಯಾವುದೂ ಇಲ್ಲ.
    ಪ್ರತಿನಿಧಿ : ಎಮರ್‌ಜೆನ್ಸಿನಲ್ಲೂ ಸರ್ಕಾರಿ ಹೆಲ್ತ್ ಸ್ಕೀಂ ಅಪ್ಲಿಕೇಬಲ್ ಆಗಲ್ವಾ?
    ಸಿಬ್ಬಂದಿ : ಇಲ್ಲಿ ಹೆಲ್ತ್ ಸ್ಕೀಂ ಇಲ್ವೇ ಇಲ್ಲ.

    ಸಾಕಷ್ಟು ಬ್ರಾಂಚ್ ಹೊಂದಿರುವ ಈ ಖಾಸಗಿ ಆಸ್ಪತ್ರೆಗಳ ಜೊತೆ ಸರ್ಕಾರ ಆರೋಗ್ಯ ಕರ್ನಾಟಕ ಸೇವೆ ನೀಡೋದಕ್ಕೆ ಇನ್ನು ಒಪ್ಪಂದಕ್ಕೆ ಮುಂದಾಗಿಲ್ಲ, ಅಥವಾ ಮನವೊಲಿಸುವ ಕೆಲಸವನ್ನು ಮಾಡಿಲ್ಲ. ಇನ್ನು ಆರೋಗ್ಯ ಕರ್ನಾಟಕದ ವೆಬ್‍ಸೈಟ್‍ನಲ್ಲಿ ಸೇವೆ ಲಭ್ಯವಿರುವ ಮಾರ್ಗೋಸಾ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ವಿಚಾರಿಸಿದರೆ ಅಲ್ಲಿನ ಸಿಬ್ಬಂದಿ ನೀಡಿದ ಉತ್ತರ ನಮ್ಮನ್ನೆ ದಂಗಾಗಿಸಿತ್ತು.

    ಸ್ಟಿಂಗ್ ಆಪರೇಷನ್ – 4
    ಸ್ಥಳ : ಖಾಸಗಿ ಆಸ್ಪತ್ರೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ

    ಪ್ರತಿನಿಧಿ : ಆರೋಗ್ಯ ಕರ್ನಾಟಕ ಸ್ಕೀಂ ಇದ್ಯಾ ಇಲ್ಲಿ?
    ಸಿಬ್ಬಂದಿ : ಇಲ್ಲ…ಇಲ್ಲಿ.
    ಪ್ರತಿನಿಧಿ : ಆದ್ರೇ ಲಿಸ್ಟ್ ನಲ್ಲಿ ತೋರಿಸ್ತಾ ಇದೆ ನಿಮ್ಮ ಆಸ್ಪತ್ರೆ.
    ಸಿಬ್ಬಂದಿ : ಹಾ…ಇದೆ, ಆದ್ರೆ ಸದ್ಯಕ್ಕೆ ಸಿಗ್ತಿಲ್ಲ, ಹೊಸದು ಆರೋಗ್ಯ ಕರ್ನಾಟಕ ಅಲ್ವಾ? ಅದು ಪೋರ್ಟಲ್‍ನಲ್ಲಿ ಏನೋ ಪ್ರಾಬ್ಲಂ ಆಗ್ತಿದೆ. ಅದಕ್ಕೆ ಈ ಸ್ಕೀಂ ನಿಲ್ಲಿಸಿದ್ವಿ. ಯಾವುದು ತಗೋತಾ ಇಲ್ಲ, ಇಲ್ಲಿ ಪ್ರೈವೇಟ್ ಇನ್ಶೂರೆನ್ಸ್ ಇದೆ ನೋಡಿ ನಮ್ಮದೇ.
    ಪ್ರತಿನಿಧಿ : ಅದು ನಿಮ್ಮ ಆಸ್ಪತ್ರೆದು ಅಲ್ವಾ
    ಸಿಬ್ಬಂದಿ : ಹಾ ಹೌದು, ಆರೋಗ್ಯ ಕರ್ನಾಟಕ ಪ್ರಾಬ್ಲಂ ಆಗಿದೆ ತಗೋತಾ ಇಲ್ಲ
    ಪ್ರತಿನಿಧಿ : ಯಾವಾಗ ಆಗಬಹುದು?
    ಸಿಬ್ಬಂದಿ : ಗೊತ್ತಿಲ್ಲ ಜೂನ್‍ನಿಂದಲೇ ಪ್ರಾಬ್ಲಂ ಆಗಿದೆ.


    ಸ್ಟಿಂಗ್ ಆಪರೇಷನ್ – 5
    ಸ್ಥಳ : ಆರೋಗ್ಯ ಕರ್ನಾಟಕ ಕಾರ್ಡ್ ವಿತರಣಾ ಕೇಂದ್ರ, ಸಂಪಿಗೆ ರೋಡ್, ಮಲ್ಲೇಶ್ವರಂ

    ಪ್ರತಿನಿಧಿ : ಆರೋಗ್ಯ ಕರ್ನಾಟಕ ಕಾರ್ಡ್ ಇಷ್ಯೂ ಇಲ್ಲೇ ಅಲ್ವಾ ಮಾಡೋದು?
    ಸಿಬ್ಬಂದಿ : ಹಾ ಹೌದು, ಆದ್ರೇ ಈಗ ಕ್ಲೋಸ್ ಆಗಿದೆ.
    ಪ್ರತಿನಿಧಿ : ಕ್ಲೋಸ್ ಆಗಿದ್ಯಾ? ಅಷ್ಟು ಬೇಗ?
    ಸಿಬ್ಬಂದಿ : ಮುಗಿದಿದೆ, ಬೆಳಗ್ಗೆ ಬನ್ನಿ ಟೋಕನ್ ಇಷ್ಯೂ ಮಾಡ್ತಾರೆ. ನೂರು ಜನ್ರಿಗೆ ಅಷ್ಟೇ ಮಾಡಿಕೊಡೋದು.
    ಪ್ರತಿನಿಧಿ : ಆಗಿದ್ಯಾ ಈಗ ನೂರು ಕಾರ್ಡ್.
    ಸಿಬ್ಬಂದಿ : ಹಾ ಆಗಿದೆ, ಬೇರೆ ದಿನ ಇನ್ನೂರು ಮಾಡ್ತೀವಿ, ಇವತ್ತು ನೂರು ಕಾರ್ಡ್ ಅಷ್ಟೇ ನಾಳೆ ಬನ್ನಿ

    ಸೆಂಟರ್ ತೆರೆದು ಎರಡು ಗಂಟೆ ಕೂಡ ಆಗಿಲ್ಲ, ಆಗಲೇ ನೂರು ಕಾರ್ಡ್ ವಿತರಿಸಿದ್ದೇವೆ ಎಂದು ಬಂಡಲ್ ಬಿಟ್ಟ ಅಲ್ಲಿನ ಸಿಬ್ಬಂದಿ ಕಿವಿಗೆ ಇಯರ್ ಫೋನ್ ಸಿಗಿಸಿಕೊಂಡು ಸಾಂಗ್ ಕೇಳೋದ್ರಲ್ಲಿ ಬ್ಯೂಸಿಯಾಗಿದ್ದ. ನಮ್ಮ ಮುಂದಿನ ಮಾತನ್ನು ಕೇಳುವಷ್ಟು ತಾಳ್ಮೆ ಆತನಿಗೆ ಇರಲಿಲ್ಲ.

    ನೋಡಿ ಇದು ಆರೋಗ್ಯ ಕರ್ನಾಟಕದ ಅಸಲಿ ಹಣೆಬರಹ. ರಾಜ್ಯದ ಜನರಿಗೆ ಕೇಂದ್ರದ ಆಯುಷ್ಮಾನ್ ಭಾರತವನ್ನು ರಾಜ್ಯ ಸರ್ಕಾರ ತಪ್ಪಿಸಿದೆ. ಇತ್ತ ಆರೋಗ್ಯ ಕರ್ನಾಟಕವೂ ರಾಜ್ಯದ ಜನರ ಪಾಲಿಗೆ ದಕ್ಕುತ್ತಿಲ್ಲ. ವಿಧಾನಸೌಧದಲ್ಲಿ ಕೂತು ಎಲ್ಲ ಸರಿಯಿದೆ ಅಂತಾ ಬಡಾಯಿ ಕೊಚ್ಚಿಕೊಳ್ಳುವ ಆರೋಗ್ಯ ಸಚಿವರು ಕೂಡಲೇ ಫೀಲ್ಡಿಗಿಳಿದು ಪರಿಶೀಲನೆಗೆ ಬರಬೇಕು. ಆಗಲೇ ನಿಮಗೆ ಅಸಲಿ ಸತ್ಯ ಗೊತ್ತಾಗುತ್ತೆ. ಇಲ್ಲದೇ ಹೋದರೆ ಬಡವರ ಆರೋಗ್ಯ ಭಾಗ್ಯ ಕಸಿದುಕೊಳ್ಳುವ ಶಾಪ ನಿಮಗೆ ತಟ್ಟುತ್ತದೆ. ದಯವಿಟ್ಟು ಆರೋಗ್ಯ ವಿಚಾರದಲ್ಲಿ ಚೆಲ್ಲಾಟವಾಡಬೇಡಿ ಇದು ಪಬ್ಲಿಕ್ ಟಿವಿ ಕಳಕಳಿ. ಇದನ್ನೂ ಓದಿ: ಆಯುಷ್ಮಾನ್ ಭಾರತ್ ಯೋಜನೆ ಸದ್ಯಕ್ಕೆ ಕರ್ನಾಟಕಕ್ಕೆ ಒಳಪಡಲ್ಲ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=H6_XYSZLZu8

  • ಕೇರಳದಲ್ಲಿ ನಿಪಾ ನಿಯಂತ್ರಣದಲ್ಲಿದೆ: ಆರೋಗ್ಯ ಸಚಿವೆ ಶೈಲಜಾ

    ಕೇರಳದಲ್ಲಿ ನಿಪಾ ನಿಯಂತ್ರಣದಲ್ಲಿದೆ: ಆರೋಗ್ಯ ಸಚಿವೆ ಶೈಲಜಾ

    ತಿರುವನಂತಪುರಂ: ರಾಜ್ಯದಲ್ಲಿ ನಿಪಾ ವೈರಸ್ ನಿಯಂತ್ರಣದಲ್ಲಿದ್ದು, ಜುಲೈ 30ರಂದು ಫಲಿತಾಂಶ ತಿಳಿಯಲಿದೆ ಎಂದು ಬುಧವಾರ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಹೇಳಿದ್ದಾರೆ.

    ವೈರಸ್ ಹರಡುವಿಕೆ ನಿಯಂತ್ರಣದಲ್ಲಿದ್ದು, ಕಳೆದ 2-3 ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ಮೇ 31 ರಂದು ಹೊಸ ಪ್ರಕರಣ ಪತ್ತೆಯಾಗಿದ್ದು, ಮುಂದಿನ 42 ದಿನ (ಜುಲೈ 30)ರ ವರೆಗೆ ಕಾದು ನೋಡಬೇಕಿದೆ ಎಂದು ಅವರು ತಿಳಿಸಿದರು.

    ನಿಪಾ ವೈರಸ್ ನಿಯಂತ್ರಣಕ್ಕೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಶ್ರಮಿಸಿವೆ. ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರು ಹಾಗೂ ಕಾರ್ಯದರ್ಶಿಗಳು ಶ್ರಮಕ್ಕೆ ಸಚಿವೆ ಶೈಲಜಾ ಧನ್ಯವಾದ ಸಲ್ಲಿಸಿದ್ದಾರೆ.

    ಸದ್ಯ 18 ವೈರಸ್ ಹೊಂದಿರುವ ಪ್ರಕರಣಗಳು ಕೋಜಿಕ್ಕೋಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅದರಲ್ಲಿ 16 ಜನರು ಮೃತಪಟ್ಟಿದ್ದಾರೆ. ಇನ್ನು 2 ಜನರು ಗುಣಮುಖರಾಗಿದ್ದಾರೆ. ಮೇ ತಿಂಗಳಿನಲ್ಲಿ ಸುಮಾರು 2,000 ಜನರು ನಿಪಾ ವೈರಸ್‍ಗೆ ಒಳಗಾಗಿದ್ದರು.

    ಮೇ ತಿಂಗಳಿನಲ್ಲಿ ಸುಮಾರು 16 ಜನರು ನಿಪಾ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ. ಜೂನ್ 11 ರವರೆಗೆ ಕೋಜಿಕ್ಕೋಡ್ ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡ ಹೇಳಿದರು.