Tag: ಆರೋಗ್ಯ ಶಿಬಿರ

  • 1987ರ ಆಗಸ್ಟ್ 27 ರಂದು ಸಿಗರೇಟ್ ಬಿಟ್ಟೆ: ಸಿದ್ದರಾಮಯ್ಯ

    1987ರ ಆಗಸ್ಟ್ 27 ರಂದು ಸಿಗರೇಟ್ ಬಿಟ್ಟೆ: ಸಿದ್ದರಾಮಯ್ಯ

    ಬೆಂಗಳೂರು: 1987ರ ಆಗಸ್ಟ್‌ 27 ರಂದು ನಾನು ಸಿಗರೇಟ್‌ ಸೇದುವುದನ್ನು ಬಿಟ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಹವಾಸ ದೋಷದಿಂದಲೂ ಅನಾರೋಗ್ಯ ತರುವ ಚಟಗಳು ಅಂಟಿಕೊಳ್ಳುತ್ತವೆ. ಆದರೆ ಸದಾ ಎಚ್ಚರದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು ಎಂದರು.

    ನಾನೂ ಮೊದಲು ಸಿಗರೇಟ್ ಸೇದುತ್ತಿದ್ದೆ. ಒಮ್ಮೆ ವಿದೇಶಕ್ಕೆ ಹೋದಾಗ ಸ್ನೇಹಿತರು ಸಿಗರೇಟ್ ಪ್ಯಾಕ್ (Cigarette Pack) ತಂದು ಕೊಟ್ಟಿದ್ದರು. ನಾನು ಕಡಿಮೆ ಅವಧಿಯಲ್ಲಿ ಹೆಚ್ಚು ಸಿಗರೇಟ್ ಸೇದಿಬಿಟ್ಟೆ. ಅವತ್ತೇ ನನಗೆ ಮನವರಿಕೆ ಆಯ್ತು. ಮನವರಿಕೆ ಆಗಿದ್ದು ಆಗಸ್ಟ್ 27 ನೇ ತಾರೀಕಿನಂದು. ಅದೇ ದಿನ ಸಿಗರೇಟ್ ಸೇದುವುದನ್ನು ಸಂಪೂರ್ಣ ನಿಲ್ಲಿಸಿದೆ ಎಂದು ನೆನಪಿಸಿಕೊಂಡರು.

    ಆರೋಗ್ಯ ಸಮಸ್ಯೆಗಳು ಬಾರದಂತೆ ಪ್ರಯತ್ನಿಸಿ: ದೈಹಿಕವಾಗಿ ಚಟುವಟಿಕೆ ಇಲ್ಲದೆ ಕುಳಿತವರಿಗೆ ಅನಾರೋಗ್ಯ ಹೆಚ್ಚು. ಆದ್ದರಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆ ಅಗತ್ಯ. ಜೀವನಶೈಲಿ ಮತ್ತು ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರಾಜ್ಯ ಸರ್ಕಾರ ಎಲ್ಲಾ ಜನ ವರ್ಗಕ್ಕೆ ಆರೋಗ್ಯ ಮತ್ತು ಅಗತ್ಯ ಚಿಕಿತ್ಸೆಗೆ ಒದಗಿಸಲು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಿ, ಜಾರಿ ಮಾಡುತ್ತಿದೆ ಎಂದರು.

    ಕ್ಯಾನ್ಸರ್ ನಂತಹ ಮಾರಕ ರೋಗವನ್ನೂ ಗುಣಪಡಿಸುವುದು ಸಾಧ್ಯವಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ದೀರ್ಘಕಾಲ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯವಿದೆ. ಹಿಂದಿನವರ ಆರೋಗ್ಯ ಪದ್ಧತಿ ಮತ್ತು ಶ್ರಮಾಧಾರಿತ ಜೀವನ ಶೈಲಿ ಅವರನ್ನು ಗಟ್ಟಿಮುಟ್ಟಾಗಿ ಸದೃಢವಾಗಿ ಇಟ್ಟಿತ್ತು ಎಂದರು. ಅಲ್ಲದೇ ಇದೇ ವೇಳೆ ತುಂಬಾ ವಯಸ್ಸಾದ ಮೇಲೆ ಬರುವ ಆರೋಗ್ಯ ಸಮಸ್ಯೆಗಳು ಬರದಂತೆ ವಯಸ್ಸಿದ್ದಾಗಲೇ ಪ್ರಯತ್ನಿಸಿ ಎಂದು ಕರೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್‌ ಪತನ – ನಾಗೇಂದ್ರ ರಾಜೀನಾಮೆ ನೀಡ್ತಾರೆ ಎಂದ ಡಿಕೆಶಿ

    ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ಮೇಲಿಂದ ಮೇಲೆ ಆಗಬೇಕು. ರಾಜ್ಯದ ಮೂಲೆ ಮೂಲೆಗಳಲ್ಲೂ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.

  • ಪಬ್ಲಿಕ್‌ ಟಿವಿ ಕಚೇರಿಯಲ್ಲಿ ಪೀಪಲ್‌ ಟ್ರೀ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಪಬ್ಲಿಕ್‌ ಟಿವಿ ಕಚೇರಿಯಲ್ಲಿ ಪೀಪಲ್‌ ಟ್ರೀ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಬೆಂಗಳೂರು: ನಗರದ ಪೀಪಲ್‌ ಟ್ರೀ ಆಸ್ಪತ್ರೆ ವತಿಯಿಂದ ಪಬ್ಲಿಕ್‌ ಟಿವಿ ಕಚೇರಿಯಲ್ಲಿ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.

    ಗುರುವಾರ ಮತ್ತು ಶುಕ್ರವಾರ ಈ ತಪಾಸಣೆ ಶಿಬಿರ ನಡೆಯಲಿದ್ದು, ECG, Echo, BP, RBS ಪರೀಕ್ಷೆ ನಡೆಸಿ ತಪಾಸಣೆ ನಡೆಯಿತು. ಇದನ್ನೂ ಓದಿ: ಹುಮ್ನಾಬಾದ್‍ನಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡಬೇಕಾದ್ರೆ ಎರಡು ಡೋಸ್ ಲಸಿಕೆ ಕಡ್ಡಾಯ

    ಸಿಇಒ ಡಾ. ಜ್ಯೋತಿ ನೀರಜ, ಡಾ.ದಿವಾಕರ್‌ ಮತ್ತು ಡಾ.ಕಾರ್ತಿಕ್‌ ನೇತೃತ್ವದಲ್ಲಿ ಪೀಪಲ್‌ ಟ್ರೀ ಆಸ್ಪತ್ರೆಯ ಸಿಬ್ಬಂದಿ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಿಕೊಟ್ಟರು. ಇದನ್ನೂ ಓದಿ: ಮುಂದಿನ ವರ್ಷ ಕೆಲ ಶಾಲೆಗಳಲ್ಲಿ NEP ಜಾರಿ: ಬಿ.ಸಿ.ನಾಗೇಶ್

     

  • ಹೆಚ್.ರವೀಂದ್ರ ಹುಟ್ಟುಹಬ್ಬ- 3ಸಾವಿರ ಮಹಿಳೆಯರಿಗೆ ಸೀರೆ ವಿತರಣೆ

    ಹೆಚ್.ರವೀಂದ್ರ ಹುಟ್ಟುಹಬ್ಬ- 3ಸಾವಿರ ಮಹಿಳೆಯರಿಗೆ ಸೀರೆ ವಿತರಣೆ

    ಬೆಂಗಳೂರು: ವಿಜಯನಗರ ವಿಧಾನಸಭಾ ಕ್ಷೇತ್ರದ ನಾಯಕರು,ಮಾಜಿ ಆಡಳಿತ ಪಕ್ಷದ ನಾಯಕರಾದ ಹೆಚ್.ರವೀಂದ್ರರವರ ಹುಟ್ಟುಹಬ್ಬ ಆಚರಣೆಯ ಪ್ರಯುಕ್ತವಾಗಿ 3ಸಾವಿರ ಮಹಿಳೆಯರಿಗೆ ಸೀರೆ ವಿತರಣೆ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ.

    ಹೆಚ್.ರವೀಂದ್ರ ಅಭಿಮಾನಿಗಳ ಬಳಗ ವತಿಯಿಂದ ಕಾರ್ಯಕ್ರಮವನ್ನು ವಿಜಯನಗರದಲ್ಲಿ ಆಯೋಜಿಸಲಾಗಿತ್ತು. 3ಸಾವಿರ ಮಹಿಳೆಯರಿಗೆ ಸೀರೆ ವಿತರಣೆ ಮತ್ತು ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಹೆಚ್.ರವೀಂದ್ರರವರು ಕೇಕ್ ಕತ್ತರಿಸಿ ಸಿಹಿ ತಿಂಡಿ ವಿತರಿಸಿದರು. ಕಂದಾಯ ಸಚಿವರಾದ ಆರ್.ಅಶೋಕ್ ರವರು ಮತ್ತು ಉನ್ನತ ಶಿಕ್ಷಣ ಸಚಿವ ಸಿ.ಎನ್.ಆಶ್ವಥ್ ನಾರಾಯಣ್ ರವರು ಮತ್ತು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹಾಗೂ ಕ್ಷೇತ್ರದ ಕಾರ್ಯಕರ್ತರು, ಸ್ಥಳೀಯ ನಾಗರಿಕರು ಹೆಚ್.ರವೀಂದ್ರರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಇದನ್ನೂ ಓದಿ:  ಜಗಳವಾಡಿ ಕ್ಷಮೆ ಕೇಳುವುದರೊಳಗೆ ತಂದೆ ಹೆಣವಾಗಿದ್ದರು: ಅಭಿನವ್

    ಹೆಚ್.ರವೀಂದ್ರರವರು, ಮಾತನಾಡಿ ವಿಜಯನಗರ ವಿಧಾನಸಭಾ ಕ್ಷೇತ್ರದ ಜನರು ಮತ್ತು ಬಿ.ಜೆ.ಪಿ.ಪಕ್ಷವು ನನ್ನ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಸದಾ ಸಹಕಾರ ನೀಡುತ್ತಾ ಬಂದಿದೆ. ಮೂರು ಬಾರಿ ಪಾಲಿಕೆ ಸದಸ್ಯನಾಗಿ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿಮ್ಮ ಸಹಕಾರ ಬೆಂಬಲದಿಂದ ಸಾಧ್ಯವಾಯಿತು.ಜನರ ಸಮಸ್ಯೆ ನಿವಾರಣೆಯಾಗಬೇಕು. ಎಲ್ಲರು ನೆಮ್ಮದ್ದಿ ಇಂದ ಜೀವನ ಸಾಗಿಸಬೇಕು ಎಂಬ ಆಶಯ ನನ್ನದು ಎಂದು ಹೇಳಿದರು.

  • ಆರೋಗ್ಯ ತಪಾಸಣೆ ಆಯೋಜಿಸಿದ್ದ ನಕಲಿ ಡಾಕ್ಟರ್ ಆರೋಗ್ಯಾಧಿಕಾರಿ ಬರುತ್ತಿದ್ದಂತೆ ಪರಾರಿ!

    ಆರೋಗ್ಯ ತಪಾಸಣೆ ಆಯೋಜಿಸಿದ್ದ ನಕಲಿ ಡಾಕ್ಟರ್ ಆರೋಗ್ಯಾಧಿಕಾರಿ ಬರುತ್ತಿದ್ದಂತೆ ಪರಾರಿ!

    ಕಾರವಾರ: ಕಡಿಮೆ ವೆಚ್ಚದಲ್ಲಿ ಆರೋಗ್ಯ ತಪಾಸಣೆ ಮಾಡುತ್ತೇವೆ ಎಂದು ಶಿರಸಿ ಸಮೀಪದ ಕಾನಗೋಡಿನಲ್ಲಿ ಶಿಬಿರ ಆಯೋಜಿಸಿ ಮೋಸ ಮಾಡುತ್ತಿದ್ದ ನಕಲಿ ವೈದ್ಯನೊಬ್ಬ ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಬರುತ್ತಿದ್ದಂತೆ ಪರಾರಿಯಾಗಿದ್ದಾನೆ.

    ಹುಬ್ಬಳ್ಳಿ ಮೂಲದ ಮುಕೇಶ್ ತಿವಾರಿ ಎನ್ನುವ ನಕಲಿ ವೈದ್ಯ ಜನರನ್ನು ವಂಚಿಸಿ ದುಡ್ಡು ದೋಚುತಿದ್ದ. ಮುಕೇಶ್ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಕಾನಗೋಡಿನಲ್ಲಿ ಆರೋಗ್ಯ ಶಿಬಿರ ನಡೆಸಿ, ಸ್ಥಳೀಯರಿಂದ ದುಡ್ಡು ದೋಚುತ್ತಿದ್ದ. ಖಚಿತ ಮಾಹಿತಿ ಪಡೆದು ಶಿಬಿರದ ಜಾಗಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ್ ಬರುತ್ತಿದ್ದಂತೆ ಸತೀಶ್ ಸ್ಥಳದಿಂದ ಓಡಿ ಹೋಗಿದ್ದಾನೆ.

    ಮುಕೇಶ್ ಈ ಹಿಂದೆಯೂ ಶಿರಸಿಯ ಬಿಸಲಕೊಪ್ಪದಲ್ಲಿ ‘ಹ್ಯೂಮನ್ ಕೇರ್ ವಿಷನ್’ ಎಂಬ ಹೆಸರಿನಲ್ಲಿ ಶಿಬಿರ ಆಯೋಜಿಸಿದ್ದನು. 36 ವಿವಿಧ ಆರೋಗ್ಯ ತಪಾಸಣೆಗಳನ್ನು ಶಿಬಿರದಲ್ಲಿ ಮಾಡಲಾಗುತ್ತದೆ. 10 ಸಾವಿರ ರೂ. ತಪಾಸಣೆಯನ್ನು ಕೇವಲ ಒಂದು ಸಾವಿರ ರೂ. ನಲ್ಲಿ ಮಾಡಲಾಗುತ್ತದೆ ಹಾಗೂ 100 ರೂ.ಗೆ ದೇಹ ತಪಾಸಣೆ ಮಾಡಲಾಗುತ್ತದೆ ಎಂದು ವಂಚಿಸಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಶಿಬಿರ ಆಯೋಜಿಸಿ, ಅದನ್ನು ಸ್ಥಳೀಯ ಮುಖಂಡರಿಂದ ಉದ್ಘಾಟನೆ ಮಾಡಿಸಿ, ಯಾರಿಗೂ ಅನುಮಾನ ಬಾರದಂತೆ ನಟಿಸುತ್ತಿದ್ದ. ಕಾನಗೋಡಿನಲ್ಲಿ “ವೀ ಫಾರ್ ಯು” ಎಂಬ ಸಂಸ್ಥೆಯ ಹೆಸರಿನಲ್ಲಿ ಮುಕೇಶ್ ಶಿಬಿರ ಪ್ರಾರಂಭಿಸಿದ್ದ. ಆತನ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಸ್ಥಳೀಯರು ಕಾರವಾರ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಸ್ಥಳಕ್ಕೆ ಬರುತ್ತಿದ್ದಾರೆ ಎಂದು ಅರಿತ ಮುಕೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಕೆಲವು ಮಾತ್ರ ಸಿಬ್ಬಂದಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಚಿಕಿತ್ಸೆಗಾಗಿ ಶಿಬಿರಕ್ಕೆ ಬಂದಿದ್ದ ಸಾರ್ವಜನಿಕರು ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews