Tag: ಆರೋಗ್ಯ ವಿಮೆ

  • ಮಾದಪ್ಪನ ಕ್ಷೇತ್ರದ ಆನೆ ಉಮಾಮಹೇಶ್ವರಿಗೆ 5 ಲಕ್ಷ ರೂ. ಆರೋಗ್ಯ ವಿಮೆ

    ಮಾದಪ್ಪನ ಕ್ಷೇತ್ರದ ಆನೆ ಉಮಾಮಹೇಶ್ವರಿಗೆ 5 ಲಕ್ಷ ರೂ. ಆರೋಗ್ಯ ವಿಮೆ

    ಚಾಮರಾಜನಗರ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಲೆ ಮಹದೇಶ್ವರಸ್ವಾಮಿ ದೇವಾಲಯದ (Male Mahadeshwara Temple) ಆನೆ ಉಮಾಮಹೇಶ್ವರಿಗೆ (Umamaheshwari) ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಆರೋಗ್ಯ ವಿಮೆ (Health Insuranace)ಮಾಡಿಸಿದೆ.

    ಉಮಾಮಹೇಶ್ವರಿಗೆ 5 ಲಕ್ಷ ರೂ. ಮೌಲ್ಯದ ವಿಮೆ ಮಾಡಿಸಲಾಗಿದ್ದು, ವರ್ಷಕ್ಕೆ 11 ಸಾವಿರ ರೂ. ಅನ್ನು ಪ್ರಾಧಿಕಾರ ಪಾವತಿಸಲಿದೆ. ವಿಮೆ ಮಾಡಿಸುವ ಉದ್ದೇಶದಿಂದ ಗುರುವಾರ ಅಧಿಕಾರಿಗಳು 48 ವರ್ಷದ ಹೆಣ್ಣಾನೆಯ ಆರೋಗ್ಯ ತಪಾಸಣೆ ಮಾಡಿಸಿದರು. ಪಶುವೈದ್ಯರು ತಪಾಸಣೆ ಮಾಡಿದ್ದು, ಆನೆ (Elephant) ಆರೋಗ್ಯದಿಂದ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ಇಂದು ಚಾಲನೆ

    ಅರಣ್ಯ ಇಲಾಖೆಯ ನಿಯಮದ ಪ್ರಕಾರ ಸಾಕಾನೆಗೆ ವಿಮೆ ಮಾಡಿಸಬೇಕು. ಎರಡೂವರೆ ವರ್ಷಗಳಿಂದ ಈ ಆನೆಗೆ ವಿಮೆ ಮಾಡಿರಲಿಲ್ಲ. ಈಗ ಆರೋಗ್ಯ ತಪಾಸಣೆ ಮಾಡಿಸಿ, ವಿಮೆ ಮಾಡಿದ್ದೇವೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು

    ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಹಲವಾರು ವರ್ಷಗಳಿಂದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಉಮಾಮಹೇಶ್ವರಿ ಆನೆ ಭಕ್ತರಿಗೂ ಅಚ್ಚುಮೆಚ್ಚಾಗಿದೆ. ಇದನ್ನೂ ಓದಿ: Odisha Train Tragedy; ಪುಣ್ಯಕ್ಷೇತ್ರಕ್ಕೆ ಹೊರಟಿದ್ದ ಚಿಕ್ಕಮಗಳೂರಿನ 110 ಮಂದಿ ಯಾತ್ರಾರ್ಥಿಗಳು ಸೇಫ್

     

  • ಕರ್ನಾಟಕದ ನೆಲದಲ್ಲಿ ಆರೋಗ್ಯ ವಿಮೆ ಜಾರಿಯ ಹಿಂದೆ ಮಹಾರಾಷ್ಟ್ರ ಕುತಂತ್ರ

    ಕರ್ನಾಟಕದ ನೆಲದಲ್ಲಿ ಆರೋಗ್ಯ ವಿಮೆ ಜಾರಿಯ ಹಿಂದೆ ಮಹಾರಾಷ್ಟ್ರ ಕುತಂತ್ರ

    ಬೆಳಗಾವಿ: ಕರ್ನಾಟಕದ (Karnataka) ನೆಲದಲ್ಲಿ ಆರೋಗ್ಯ ವಿಮೆ (Health Insurance) ಜಾರಿಯ ಹಿಂದೆ ಮಹಾರಾಷ್ಟ್ರದ (Maharashtra) ಕುತಂತ್ರ ಅಡಗಿದೆಯಾ ಎಂಬ ಪ್ರಶ್ನೆ ಮೂಡಿದೆ. ಮಹಾರಾಷ್ಟ್ರ ಆರೋಗ್ಯ ವಿಮೆಯ ಲಾಭ ಪಡೆಯಬೇಕೆಂದರೆ ‘ನಾನು ಮರಾಠಾ ಭಾಷಿಕ’ ಎಂದು ಸ್ವಯಂ ಘೋಷಣಾ ಪತ್ರ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

    ಕಳೆದ ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಗಡಿ ಭಾಗದಲ್ಲಿರುವ 865 ಗ್ರಾಮಗಳ ಜನರಿಗೆ 54 ಕೋಟಿ ವೆಚ್ಚದ ಆರೋಗ್ಯ ವಿಮೆ ಘೋಷಿಸಿದೆ. ಬೆಳಗಾವಿ, ಬೀದರ್, ಕಲಬುರಗಿ, ಉತ್ತರ ಕನ್ನಡ ಜಿಲ್ಲೆಯ 865 ಹಳ್ಳಿ, ಪಟ್ಟಣಗಳ ಜನರಿಗಾಗಿ ಯೋಜನೆ ಜಾರಿ ಮಾಡಿದ್ದು, ನಾನು ಮರಾಠಾ ಭಾಷಿಕ ಎಂದು ಘೋಷಣಾ ಪತ್ರ ಸಲ್ಲಿಸಿದವರಿಗೆ ಮಾತ್ರ ಆರೋಗ್ಯ ವಿಮೆ ನೀಡಲು ಮಹಾರಾಷ್ಟ್ರ ನಿರ್ಧಾರ ಮಾಡಿದೆ. ಈಗಾಗಲೇ ಏಕನಾಥ ಶಿಂಧೆ (Eknath Shinde) ಸರ್ಕಾರ ಘೋಷಣಾ ಪತ್ರದ ಅರ್ಜಿಯನ್ನು ಬಿಡುಗಡೆ ಮಾಡಿದ್ದು, ಅರ್ಜಿ ಭರ್ತಿ ಮಾಡಿದವರಿಗೆ ಮಾತ್ರ ಮಹಾತ್ಮಾ ಜ್ಯೋತಿರಾವ್ ಫುಲೆ ಜನಾರೋಗ್ಯ ವಿಮೆಯ ಲಾಭ ಸಿಗಲಿದೆ. ಇದನ್ನೂ ಓದಿ: ಅಮಿತ್ ಶಾ ಸೂಚನೆಯನ್ನೇ ಧಿಕ್ಕರಿಸಿದ ಏಕನಾಥ ಶಿಂಧೆ  

    ಏಕನಾಥ ಶಿಂಧೆ ನಿರ್ಧಾರದ ಹಿಂದೆ ಜನರನ್ನು ಭಾವನಾತ್ಮಕವಾಗಿ ಮಹಾರಾಷ್ಟ್ರದತ್ತ ಸೆಳೆಯುವ ಹುನ್ನಾರ ಅಡಗಿದ್ದು, ಕೇವಲ ಮರಾಠಾ ಭಾಷಿಕರಷ್ಟೇ ಅಲ್ಲದೇ ಯಾವುದೇ ಭಾಷಿಕರೂ ‘ನಾನು ಮರಾಠಾ’ ಎಂಬ ಘೋಷಣಾ ಪತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಘೋಷಣಾ ಪತ್ರ ಸಂಗ್ರಹಿಸಿ ಮಹಾರಾಷ್ಟ್ರ ಪರ ದಾಖಲೆಗಳನ್ನು ಸೃಷ್ಟಿಸುವ ಒಳಸಂಚನ್ನು ಮಹಾರಾಷ್ಟ್ರ ಸರ್ಕಾರ ಮಾಡುತ್ತಿದೆ. ಕರ್ನಾಟದಲ್ಲಿ ನೆಲೆಸಿರುವ ಇತರ ಭಾಷಿಕರನ್ನು ಮರಾಠಾ ಭಾಷಿಕರೆಂದು ಪರಿವರ್ತಿಸುವ ಹುನ್ನಾರ ಮಾಡುತ್ತಿದ್ದು, ಈ ಎಲ್ಲ ಸ್ವಯಂ ಘೋಷಣಾ ಪತ್ರಗಳನ್ನು ಸುಪ್ರೀಂಕೋರ್ಟ್ ಗೆ (Supreme Court) ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ಹುನ್ನಾರ ನಡೆಸಿದೆ. ನಮ್ಮ ಯೋಜನೆ ಕರ್ನಾಟಕದ ಮರಾಠಾ ಭಾಷಿಕರು ಪಡೆಯುತ್ತಿದ್ದಾರೆ. ಕರ್ನಾಟಕ ಸರ್ಕಾರ ಮರಾಠಾ ಭಾಷಿಕರನ್ನು ಕಡೆಗಣಿಸುತ್ತಿದೆ ಎಂದು ಬಿಂಬಿಸುವ ಕುತಂತ್ರವನ್ನು ಮಹಾರಾಷ್ಟ್ರ ಸರ್ಕಾರ ಮಾಡುತ್ತಿದೆ. ಇದನ್ನೂ ಓದಿ: ಸುದೀಪ್ ಬಿಜೆಪಿಗೆ ಬೆಂಬಲ – ಕಾಂಗ್ರೆಸ್‌ನವರಿಗೆ ಸಹಿಸೋಕಾಗ್ತಿಲ್ಲ: ಬಿಎಸ್‌ವೈ

  • ಗಡಿ ಕನ್ನಡಿಗರಿಗೆ ಮಹಾರಾಷ್ಟ್ರದ ಆರೋಗ್ಯ ವಿಮೆ – ಬೊಮ್ಮಾಯಿ ತೀವ್ರ ಖಂಡನೆ

    ಗಡಿ ಕನ್ನಡಿಗರಿಗೆ ಮಹಾರಾಷ್ಟ್ರದ ಆರೋಗ್ಯ ವಿಮೆ – ಬೊಮ್ಮಾಯಿ ತೀವ್ರ ಖಂಡನೆ

    ಬೆಂಗಳೂರು: ಗಡಿ ಕನ್ನಡಿಗರಿಗೆ (Kannadaigas) ಮಹಾರಾಷ್ಟ್ರಾ (Maharashtra) ಸರ್ಕಾರ ಆರೋಗ್ಯ ವಿಮೆ (Health Insurance) ಯೋಜನೆ ನೀಡಿರುವುದನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ತೀವ್ರವಾಗಿ ಖಂಡಿಸಿದ್ದಾರೆ.

    ಬೆಂಗಳೂರಿನಲ್ಲಿ ತಮ್ಮ ನಿವಾಸದ ಮುಂಭಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಗಡಿ ಭಾಗದ ಜನರಿಗೆ ಆರೋಗ್ಯ ವಿಮೆ ಯೋಜನೆಯನ್ನು ಮಹಾರಾಷ್ಟ್ರದ ಸಂಪುಟ ನಿರ್ಣಯ ಘೋಷಿಸಿರುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದಾಗ ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಕಾಯಬೇಕು. ಯಾವುದೇ ಪ್ರಚೋದನೆ ಆಗಬಾರದೆಂದು ಒಪ್ಪಲಾಗಿತ್ತು. ಈಗ ಅದರ ಉಲ್ಲಂಘನೆಯಾಗಿದೆ. ಕೂಡಲೇ ಈ ನಿರ್ಧಾರವನ್ನು ಹಿಂದೆಗೆದುಕೊಳ್ಳಬೇಕು. ಈ ವಿಚಾರವನ್ನು ಗೃಹ ಸಚಿವರ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: KPTCL ನೌಕರರಿಗೆ ಶೇ. 20ರಷ್ಟು ವೇತನ ಪರಿಷ್ಕರಣೆ

    ಈ ರೀತಿಯ ಯೋಜನೆಗಳನ್ನು ನಾವು ಕೂಡಾ ಪ್ರಕಟಿಸಬಹುದು. ಹಲವಾರು ತಾಲೂಕುಗಳು, ಗ್ರಾಮ ಪಂಚಾಯಿತಿಗಳು ಮಹಾರಾಷ್ಟ್ರದಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ, ಕರ್ನಾಟಕಕ್ಕೆ ಸೇರಬೇಕು ಎಂದು ಈಗಾಗಲೇ ನಿರ್ಣಯ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಇದ್ದಾಗ ಮಹಾರಾಷ್ಟ್ರದ ಸರ್ಕಾರ ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಬಿಜೆಪಿ ನಾಯಕರ ವಿರುದ್ಧ ಸೋಮಣ್ಣ ಚಾರ್ಜ್‌ಶೀಟ್‌- ಇತ್ಯರ್ಥ ಮಾಡ್ತೀವಿ ಎಂದ ಶಾ

  • ದಿವ್ಯಾಂಗ ಮಕ್ಕಳಿಗೆ 5 ಲಕ್ಷ ರೂ.ಗಳ ವಿಶೇಷ ಆರೋಗ್ಯ ವಿಮೆ ಘೋಷಿಸಿದ ಬೊಮ್ಮಾಯಿ

    ದಿವ್ಯಾಂಗ ಮಕ್ಕಳಿಗೆ 5 ಲಕ್ಷ ರೂ.ಗಳ ವಿಶೇಷ ಆರೋಗ್ಯ ವಿಮೆ ಘೋಷಿಸಿದ ಬೊಮ್ಮಾಯಿ

    ಬೆಂಗಳೂರು: ವಿಕಲಚೇತನರ ದಿನಾಚರಣೆ (Disabled Persons Day) ಕಾರ್ಯಕ್ರಮದಲ್ಲಿ ದಿವ್ಯಾಂಗ ಮಕ್ಕಳಿಗೆ 5 ಲಕ್ಷ ರೂ.ಗಳ ವಿಶೇಷ ಆರೋಗ್ಯ ವಿಮೆಯನ್ನು (Special Health Insurance) ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದ್ದಾರೆ.

    2022ರ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯವತಿಯಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, ನನ್ನೆಲ್ಲ ದೇವರ ಮಕ್ಕಳಿಗೆ ನಮಸ್ಕಾರ. ಸರ್ಕಾರ ನೀಡುವ ಮನೆಗಳಲ್ಲಿ ದಿವ್ಯಾಂಗರಿಗೆ 3% ಮೀಸಲಿಡುತ್ತೇವೆ. ವಿಕಲಚೇತನ ಮಕ್ಕಳಿಗೆ ನೀಡುವ ಟ್ರೈಸೈಕಲ್‍ಗೆ ಹೆಚ್ಚುವರಿಯಾಗಿ 28 ಕೋಟಿ ರೂ. ಬಿಡುಗಡೆ ಮಾಡಿ, 2,000 ಸೈಕಲ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ನೆರೆ ರಾಜ್ಯ ಮಹಾರಾಷ್ಟ್ರದ ಪುಣೆ ವ್ಯಕ್ತಿಯಲ್ಲಿ ಝಿಕಾ ವೈರಸ್‌ ಸೋಂಕು ಪತ್ತೆ

    ದೇವರು ಸೃಷ್ಟಿಸುವಾಗ ಹಲವಾರು ಸವಾಲುಗಳನ್ನು ಮನುಷ್ಯರಲ್ಲಿ ಹುಟ್ಟಿಹಾಕ್ತಾನೆ. ಎಲ್ಲಾ ಅಂಗಾಂಗಳು ಇದ್ದರೂ ಹಲವು  ಕೊರತೆಗಳು ಇರುತ್ತವೆ. ನಿಮ್ಮಲ್ಲಿ ಯಾರಿಗೂ ಕಡಿಮೆ ಇದ್ದೇವೆ ಎಂಬ ಕೊರಗು ಬೇಡ. ನೀವು ದೇವರ ಮಕ್ಕಳು. ವಿಶೇಷ ಶಕ್ತಿ ಹೊಂದಿರುವ ಮಕ್ಕಳು ನೀವು. ನಮ್ಮೆಲ್ಲರಿಗಿಂತಲೂ ಶಕ್ತಿಶಾಲಿ ಮಕ್ಕಳು ನೀವು. ಬದುಕಿ ತೋರಿಸೋ ಛಲ ನಿಮ್ಮಲ್ಲಿ ಇರಲಿ. ಮಾನವೀಯ ಧರ್ಮವನ್ನು ಪ್ರತಿಯೊಬ್ಬ ಮನುಷ್ಯನಿಗೂ ದೇವರು ಕೊಟ್ಟಿರ್ತಾನೆ. ಅದನ್ನು ಕೆಲವರು ಮರೆಯುತ್ತಾರೆ, ಕೆಲವರು ಅಳವಡಿಸಿಕೊಳ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಚಿರತೆ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

    ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನ:
    ವಸತಿ ಶಾಲೆಗಳಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ನೀಡಲಾಗುತ್ತಿದ್ದ 6,800 ರೂ.ಗಳನ್ನು 10,200 ರೂ.ಗಳಿಗೆ ಹೆಚ್ಚಿಸಲಾಗಿದೆ. ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆಗಳಲ್ಲಿ ನೀಡಲಾಗುತ್ತಿದ್ದ 6,000 ರೂ.ಗಳನ್ನು 9,000 ರೂ.ಹೆಚ್ಚಿಸಿ ನೀಡಲಾಗುತ್ತಿದೆ. ಅಂಧ,ಕಿವುಡ ಮಕ್ಕಳ ವಸತಿ ಶಾಲೆಗಳಲ್ಲಿರುವವರಿಗೆ 9,300 ರೂ.ಗಳನ್ನು, ವಸತಿರಹಿತ ಶಾಲೆಗಳ ಅಂಧ,ಕಿವುಡ ಮಕ್ಕಳಿಗೆ 7,800 ರೂ.ಗಳನ್ನು, ಹಗಲುಸೇವೆ ಯೋಗಕ್ಷೇಮ ಕೇಂದ್ರಗಳಿಗೆ 15,000 ರೂ.ಗಳನ್ನು, ವೃದ್ಧಾಶ್ರಮ ಕೇಂದ್ರಗಳ ನಿರ್ವಹಣೆಗೆ 12 ಲಕ್ಷ ರೂ. ನೀಡಲಾಗುತ್ತಿದೆ. ಮುಖ್ಯಮಂತ್ರಿಯಾದ ತಕ್ಷಣ ವಿಕಲಚೇತನರ ಮಾಸಾಶನವನ್ನು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸವಲತ್ತುಗಳನ್ನು ಹೆಚ್ಚಿಸಲಾಗುವುದು. ಆಸಿಡ್ ದಾಳಿಯಿಂದ ಬಳಲುವ ಹೆಣ್ಣು ಮಕ್ಕಳಿಗೆ 3,000 ರೂ. ದಿಂದ 10,000 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ವಿಕಲಚೇತನರ ವಿದ್ಯಾಭ್ಯಾಸಕ್ಕಾಗಿ ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಮೀಸಲಿರಿಸಲಾಗುವುದು ಎಂದು ನುಡಿದಿದ್ದಾರೆ.

    ಇಡೀ ಸಮಾಜ ಅವಲೋಕನ ಮಾಡಬೇಕು. ದೇವರ ಮಕ್ಕಳಿಗೆ ಸಹಾಯ ಮಾಡಬೇಕು. ನಿಮ್ಮ ಬದುಕಿನಲ್ಲಿ ಇದನ್ನು ಅಳವಡಿಸಿಕೊಳ್ಳಿ. ಅವರ ಬದುಕಿಗೆ ಸಹಾಯ ಮಾಡಿ. ಇಲ್ಲಿ ಯಾವುದು ಅಸಾಧ್ಯ ಇಲ್ಲ ಮಾಡುವ ಮನಸ್ಸಿರಬೇಕು ಅಷ್ಟೇ ಎಂದು ತಿಳಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್, ಸಂಸದ ಪಿ.ಸಿ ಮೋಹನ್, ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್

    ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್

    ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವೇತನವನ್ನು ಹೆಚ್ಚಳ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಆರೋಗ್ಯ ವಿಮೆ ವಿಸ್ತರಿಸಲು ಕೂಡ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ನಡೆಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಭೇಟಿಯಾಗಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಸುಧಾಕರ್, ಸರ್ಕಾರದ ಇತಿಮಿತಿಯೊಳಗೆ ಎಲ್ಲಾ ಬೇಡಿಕೆಗಳನ್ನು ಆದಷ್ಟು ಶೀಘ್ರದಲ್ಲಿ ಈಡೇರಿಸಲಾಗುವುದು. ಶ್ರೀನಿವಾಸಾಚಾರಿಯವರ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಭ್ರಷ್ಟಾಚಾರದ ಇನ್ನೊಂದು ಮುಖವೇ ಕಾಂಗ್ರೆಸ್: ರೇಣುಕಾಚಾರ್ಯ

    ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಖಾಯಂ ನೌಕರರಿಗೆ ಕೊಡುವಷ್ಟೇ ವೇತನವನ್ನು ನಮಗೂ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ 49 ಕಾರ್ಯಕ್ರಮಗಳನ್ನು ನಿರ್ದಿಷ್ಟ ಸಮಯದ ತನಕ ಮಾಡಲಿದೆ. ಹೀಗಾಗಿ ಅವರನ್ನು ಖಾಯಂ ನೌಕರರನ್ನಾಗಿ ಮಾಡಿಕೊಳ್ಳಲು ಅಡಚಣೆಗಳಿವೆ. ಅಷ್ಟೇ ಅಲ್ಲದೆ, ಖಾಯಂ ನೌಕರರಂತೆ ಸಮಾನ ವೇತನ ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ ಈಗಿರುವ ವೇತನವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

    ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಆರೋಗ್ಯ ವಿಮೆ ವಿಸ್ತರಣೆ, 10 ದಿನಗಳ ವೇತನ ಸಹಿತ ರಜೆಯ ಬೇಡಿಕೆಗಳನ್ನು ಇಟ್ಟಿದ್ದಾರೆ. ಇದಕ್ಕೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ. ಪ್ರತಿಭಟನಾ ನಿರತ ನೌಕಕರು ಕೇಳಿರುವ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಪ್ರಮಾಣಿಕ ಪ್ರಯತ್ನ ಮಾಡಲಿದ್ದೇವೆ. ಸರ್ಕಾರ ಅವರ ಪರವಾಗಿ ಕೆಲಸ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಚಿರತೆ ದಾಳಿಗೆ ಬಲಿಯಾದ ತನ್ನ ಕರುವನ್ನು ಪತ್ತೆಹಚ್ಚಿದ ತಾಯಿ!

    ಸರ್ಕಾರಿ ಆರೋಗ್ಯ ವ್ಯವಸ್ಥೆಯ ಬಗ್ಗೆ ಜನರು ಬಹಳ ವಿಶ್ವಾಸ ಇಟ್ಟಿದ್ದಾರೆ. ಕೇವಲ ಮೂಲಭೂತ ಸೌಲಭ್ಯಗಳಿಂದ ಮಾತ್ರ ಜನರಿಗೆ ವಿಶ್ವಾಸ ಬರುವುದಿಲ್ಲ. ಬದಲಾಗಿ ಇಂತಹ ನೌಕರರಿಂದ ಆರೋಗ್ಯ ಸೇವೆಗೆ ಉತ್ತಮ ಹೆಸರು ಬಂದಿದೆ. ಅವರಿಗೆ ನೋವು ಕೊಟ್ಟು ನಾವು ಮುಂದುವರಿಯುವುದು ಅಸಾಧ್ಯ. ಕೆಲವು ಬೇಡಿಕೆ ಈಡೇರಿಸಲು ಕಾನೂನಾತ್ಮಕ, ತಾಂತ್ರಿಕ ತೊಡಕುಗಳಿವೆ. ಇವೆಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿ, ಸಾಧ್ಯವಿರುವ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ. ದೇಶದಲ್ಲೇ ಆರೋಗ್ಯ ಸೇವೆ ನೀಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅದಕ್ಕೆ ಪೂರಕವಾಗಿ ಕೆಲಸ ನಡೆಯಬೇಕು. ನೌಕರರು ಮುಷ್ಕರ ಕೈ ಬಿಟ್ಟು ಶೀಘ್ರದಲ್ಲೇ ಸೇವೆಗೆ ಹಿಂದಿರುಗಬೇಕು ಎಂದು ಸಚಿವರು ಮನವಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಬಾಡಿಗೆ ತಾಯಂದಿರ ಹೆಸರಲ್ಲಿ 3 ವರ್ಷಕ್ಕೆ ವಿಮೆ ಖರೀದಿಸುವಂತೆ ಕೇಂದ್ರ ಸೂಚನೆ

    ಬಾಡಿಗೆ ತಾಯಂದಿರ ಹೆಸರಲ್ಲಿ 3 ವರ್ಷಕ್ಕೆ ವಿಮೆ ಖರೀದಿಸುವಂತೆ ಕೇಂದ್ರ ಸೂಚನೆ

    ನವದೆಹಲಿ: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಹೊಂದಲು ಬಯಸುವ ದಂಪತಿ, ಮಗುವನ್ನು ಪಡೆದ ಬಾಡಿಗೆ ತಾಯಿಯ ಹೆಸರಿನಲ್ಲಿ 3 ವರ್ಷಗಳ ಅವಧಿಯ ಆರೋಗ್ಯ ವಿಮೆ ಖರೀದಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

    2021ರಲ್ಲಿ ಜಾರಿಗೆ ತರಲಾದ 1971ರ ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯ ಕಾಯ್ದೆಯ ಪ್ರಕಾರ ಬಾಡಿಗೆ ತಾಯ್ತನದ ಪ್ರಕ್ರಿಯೆಗೆ ಅನುಮತಿಸಬಹುದು. ಹಾಗಾಗಿ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆಯ ನಿಯಮಗಳಿಗೆ ಸಂಬಂಧಿಸಿ ಸಚಿವಾಲಯ ಜೂನ್ 21ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಅಂಶವನ್ನು ವಿವರಿಸಲಾಗಿದೆ. ಇದನ್ನೂ ಓದಿ: ಮೊದಲ ದಲಿತ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ- ಟ್ವೀಟ್ ಮಾಡಿ ಮುಜುಗರಕ್ಕೀಡಾದ ಕೋಟಾ

    ಗರ್ಭ ಧರಿಸಿದ ಅವಧಿ ಹಾಗೂ ಹೆರಿಗೆ ನಂತರ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಈ ಪಾಲಿಸಿಯ ವಿಮಾ ಮೊತ್ತ ಸರಿದೂಗಿಸುವಂತಿರಬೇಕು ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಪ್ರಕರಣ 858ಕ್ಕೆ ಏರಿಕೆ- ಓರ್ವ ಸಾವು

    ಬಾಡಿಗೆ ತಾಯಿಯಾಗಲು ಒಪ್ಪಿಕೊಂಡವರು ಗರಿಷ್ಠ 3 ಬಾರಿ ಬಾಡಿಗೆ ತಾಯ್ತನ ವಿಧಾನಕ್ಕೆ ಒಳಗಾಗಬಹುದು. ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ, ಗರ್ಭಪಾತ ಮಾಡಿಸಿಕೊಳ್ಳಲು ಅವರಿಗೆ ಅನುಮತಿ ನೀಡಬೇಕು ಎಂದೂ ನಿಯಮದಲ್ಲಿ ಹೇಳಲಾಗಿದೆ.

    Live Tv