Tag: ಆರೋಗ್ಯ ಅಧಿಕಾರಿಗಳು

  • ಅಮೆರಿಕದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ

    ಅಮೆರಿಕದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ

    ವಾಷಿಂಗ್ಟನ್: ಅಮೆರಿಕದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ.

    ಮೇ ತಿಂಗಳ ಆರಂಭದಿಂದಲೇ ಹಲವಾರು ಮಂದಿಯಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದೆ ಎಂದು ಉತ್ತರ ಅಮೆರಿಕ ಮತ್ತು ಯುರೋಪ್‍ನ ಆರೋಗ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆಫ್ರಿಕಾದ ಕೆಲವು ಭಾಗಗಳಲ್ಲಿ ವಾಸಿಸುವ ಸ್ಥಳೀಯರಿಂದ ಮಂಕಿಪಾಕ್ಸ್ ವೈರಸ್ ಹರಡುತ್ತಿದ್ದು, ಎಲ್ಲಡೆ ಆತಂಕ ಸೃಷ್ಟಿಸಿದೆ.

    MONKEY

    ಇತ್ತೀಚೆಗಷ್ಟೇ ಸ್ಪೇನ್ ಮತ್ತು  ಪೋರ್ಚುಗಲ್‍ನ 40ಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಸುಮಾರು 12ಕ್ಕೂ ಹೆಚ್ಚು ಜನರಲ್ಲಿ ಮಂಕಿಪಾಕ್ಸ್ ವೈರಸ್ ಕಾಣಿಸಿಕೊಂಡಿದೆ ಎಂದು ಕೆನಡಾ ತಿಳಿಸಿದೆ. ಇದನ್ನೂ ಓದಿ: ಮದುವೆ ಮೆರವಣಿಗೆಯಲ್ಲಿ ಮ್ಯೂಸಿಕ್ ಪ್ಲೇ ಮಾಡಿದ್ದಕ್ಕೆ ಕಲ್ಲುತೂರಾಟ

    ಮೇ 6 ರಿಂದ ಬ್ರಿಟನ್‍ನಲ್ಲಿ ಒಂಬತ್ತು ಪ್ರಕರಣಗಳು ಪತ್ತೆಯಾಗಿದ್ದು, ಬುಧವಾರ ಅಮೇರಿಕದಲ್ಲಿ ಮೊದಲ ಪ್ರಕರಣ ಕಂಡುಬಂದಿದೆ. ಪೂರ್ವ ರಾಜ್ಯವಾದ ಮ್ಯಾಸಚೂಸೆಟ್ಸ್‍ನ ವ್ಯಕ್ತಿಯೊಬ್ಬರು ಕೆನಾಡಕ್ಕೆ ಭೇಟಿ ನೀಡಿದ ಬಳಿಕ ವೈರಸ್ ದೃಢಪಟ್ಟಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ್ರೆ ತಾನೇ ಕೊಟ್ಟ ಭರವಸೆ ಈಡೇರಿಸುವುದು: ಬಿ.ಸಿ.ಪಾಟೀಲ್

    ಈ ಸೋಂಕನ್ನು ಅಪರೂಪ ಮತ್ತು ಅಸಾಮಾನ್ಯ ಎಂದು ಪರಿಗಣಿಸಲಾಗಿದ್ದು, ಇದರಿಂದ ಸಾವನ್ನಪ್ಪಿರುವವರ ಸಂಖ್ಯೆ ಬಹಳ ಕಡಿಮೆ ಇದೆ ಮತ್ತು ವೈರಸ್‍ನಿಂದ ಅನೇಕ ಮಂದಿ ಚೇತರಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಭಾಗಗಳಲ್ಲಿ ಸಾವಿರಾರು ಜನರಿಗೆ ಸೋಂಕು ತಗುಲಿದೆ. ಆದರೆ ಯುರೋಪ್ ಮತ್ತು ಉತ್ತರ ಆಫ್ರಿಕಾದಲ್ಲಿ ಈ ಸೋಂಕು ಅಪರೂಪವಾಗಿದೆ.

  • ಸೋಂಕಿತನ ಅಂತ್ಯಕ್ರಿಯೆ ಬಳಿಕ ಫೋನ್- ಆರಾಮಾಗಿದ್ದೀರಾ ಎಂದ ಆರೋಗ್ಯಾಧಿಕಾರಿಗಳು

    ಸೋಂಕಿತನ ಅಂತ್ಯಕ್ರಿಯೆ ಬಳಿಕ ಫೋನ್- ಆರಾಮಾಗಿದ್ದೀರಾ ಎಂದ ಆರೋಗ್ಯಾಧಿಕಾರಿಗಳು

    – ವ್ಯಕ್ತಿ ಸತ್ತು 8 ದಿನದ ಬಳಿಕ ಸೀಲ್‍ಡೌನ್‍ಗೆ ಮುಂದಾದ ಪಾಲಿಕೆ ಸಿಬ್ಬಂದಿ
    – ಅಧಿಕಾರಿ ಮಾತು ಕೇಳಿ ಕುಟುಂಬಸ್ಥರು ಕಂಗಾಲು

    ಧಾರವಾಡ: ಕೊರೊನಾದಿಂದ ವ್ಯಕ್ತಿ ಸತ್ತು ಅಂತ್ಯಸಂಸ್ಕಾರ ನಡೆದ ಬಳಿಕ ಆಸ್ಪತ್ರೆಯ ಸಿಬ್ಬಂದಿ ಕರೆ ಮಾಡಿ ಆರಾಮಾಗಿದ್ದೀರಾ ಎಂದು ಕೇಳಿದ್ದಾರೆ. ಇದರಿಂದಾಗಿ ಕುಟುಂಬಸ್ಥರು ಒಂದು ಕ್ಷಣ ದಂಗಾಗಿದ್ದಾರೆ.

    ನಗರದ ಮೃತ್ಯುಂಜಯ ನಗರ ಕೊಟ್ಟಣದ ಓಣಿಯ ವ್ಯಕ್ತಿಗೆ ಜುಲೈ 22 ರಂದು ಅನಾರೋಗ್ಯ ಕಾಡಿತ್ತು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರಗೆ ದಾಖಲಿಸಿದಾಗ ಕೊರೊನಾ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಇದಾದ ಎರರು ದಿನಕ್ಕೆ ಅಂದರೆ ಜುಲೈ 24ರಂದು ವ್ಯಕ್ತಿ ನಿಧನರಾಗಿದ್ದಾರೆ. ನಂತರ ಕಿಮ್ಸ್ ಸಿಬ್ಬಂದಿ ಮನೆಯವರಿಗೆ ಕರೆ ಮಾಡಿ ನಿಧನರಾದ ಸುದ್ದಿ ತಿಳಿಸಿದ ಬಳಿಕ ಅಂತ್ಯಸಂಸ್ಕಾರವೂ ನಡೆದಿದೆ.

    ಈ ಎಲ್ಲ ಪ್ರಕ್ರಿಯೆ ನಡೆದ ಬಳಿಕ ಕಿಮ್ಸ್ ಸಿಬ್ಬಂದಿ ಕರೆ ಮಾಡಿ ಆರಾಮಾಗಿದ್ದಾರಾ ಎಂದು ಕೇಳಿದ್ದಾರಂತೆ. ಆಗ ಮನೆ ಸದಸ್ಯರು ಅವರು ಆಗಲೇ ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಮತ್ತೊಮ್ಮೆ ಕರೆ ಮಾಡಿದ್ದು, ಆಗಲೂ ಮನೆಯವರು ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಇಷ್ಟೆಲ್ಲ ಹೇಳಿದ ಮೇಲೂ, ವ್ಯಕ್ತಿ ಸಾವನ್ನಪ್ಪಿ 8 ದಿನ ಕಳೆದರೂ ಪಾಲಿಕೆ ಸಿಬ್ಬಂದಿ ಈಗ ವ್ಯಕ್ತಿಯ ಮನೆ ಸೀಲ್‍ಡೌನ್ ಮಾಡಲು ಬಂದಿದ್ದಾರೆ. ಈ ವೇಳೆ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಳೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

  • ಮದ್ವೆ ಮನೆಗೆ ಇನ್ಮುಂದೆ ಹೆಲ್ತ್ ಆಫೀಸರ್ಸ್ ಬರ್ತಾರೆ ಹುಷಾರ್

    ಮದ್ವೆ ಮನೆಗೆ ಇನ್ಮುಂದೆ ಹೆಲ್ತ್ ಆಫೀಸರ್ಸ್ ಬರ್ತಾರೆ ಹುಷಾರ್

    – ಊರಿನ ಜಾತ್ರೆಗೂ ಬರ್ತಾರೆ

    ಬೆಂಗಳೂರು: ಮದುವೆ ಮನೆಗೆ ಅತಿಥಿಗಳು ಬರುವುದು ಸಾಮಾನ್ಯ. ಆದರೆ ಇನ್ಮುಂದೆ ಮದುವೆ ಮನೆಗೆ ಆರೋಗ್ಯಾಧಿಕಾರಿಗಳು ಬರುತ್ತಾರೆ. ಯಾಕೆಂದರೆ ಸಾಂಕ್ರಾಮಿಕ ರೋಗ ಹೆಚ್ಚಾಗಿರುವುದರಿಂದ ಸಮಾರಂಭಗಳಿಗೂ ಆರೋಗ್ಯಾಧಿಕಾರಿಗಳು ಕಡ್ಡಾಯವಾಗಿ ಭೇಟಿ  ಕೊಡುತ್ತಾರೆ.

    ಹೌದು..ಬೇಸಿಗೆ ಕಾಲ ಹತ್ತಿರ ಬರುತ್ತಿದೆ. ರಾಜ್ಯದಲ್ಲೀಗ ಸಾಂಕ್ರಾಮಿಕ ರೋಗದ ಹಾವಳಿ. ಇದಕ್ಕಾಗಿಯೇ ಈಗ ರಾಜ್ಯ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ. ಅದರಲ್ಲೂ ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ಹಾಗೂ ನೀರು ಶುದ್ಧವಾಗಿಲ್ಲದೆ ಇರುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಇದಕ್ಕಾಗಿಯೇ ಈಗ ಮದುವೆ ಮಂಟಪಗಳಿಗೆ ಆರೋಗ್ಯಾಧಿಕಾರಿಗಳು ಕಡ್ಡಾಯವಾಗಿ ವಿಸಿಟ್ ಮಾಡಬೇಕು.

    ಆಶಾ ಕಾರ್ಯಕರ್ತೆಯರು ಕೂಡ ಮದುವೆಯಲ್ಲಿ ಹಂಚುವ ಆಹಾರ ಹಾಗೂ ನೀರಿನ ಸ್ಯಾಂಪಲ್ ಕಲೆಕ್ಟ್ ಮಾಡಿ ಅದರ ಕ್ವಾಲಿಟಿ ಚೆಕ್ ಮಾಡಬೇಕು ಅಂತ ಆರೋಗ್ಯಾಧಿಕಾರಿಗಳು ಆದೇಶ ಕೊಟ್ಟಿದ್ದಾರೆ. ಮುಂದೆ ಊಟದಲ್ಲಿ ಸ್ವಚ್ಛತೆ ಕಾಪಾಡದೆ ಇದ್ದರೆ ಊಟ ಸಪ್ಲೈ ಮಾಡುವ ಕ್ಯಾಟರಿಂಗ್‍ನವರ ಮೇಲೆ ದೂರು ದಾಖಲಾಗುತ್ತೆ ಎಂದು ಆರೋಗ್ಯ ಇಲಾಖೆ ಉಪನಿರ್ದೇಶಕರಾದ ಶರೀಫ್ ಹೇಳಿದ್ದಾರೆ.

    ಕೇವಲ ಮದುವೆ ಮಾತ್ರವಲ್ಲದೇ ಊರಿನ ಜಾತ್ರೆಗೂ ಕೂಡ ಆರೋಗ್ಯಾಧಿಕಾರಿಗಳು ಭೇಟಿ ಕೊಡಲಿದ್ದಾರೆ. ಊರಿನ ಜಾತ್ರೆಯಲ್ಲಿ ವಿತರಿಸುವ ಪ್ರಸಾದ, ಅಲ್ಲಿನ ಆಹಾರದ ಶಾಪ್‍ಗಳ ಸ್ವಚ್ಛತೆಯ ಮೇಲೂ ಗಮನಹರಿಸಲಿದ್ದಾರೆ. ಏನಾದರೂ ತೊಂದರೆಯಾದರೆ ಊರಿನ ಜಾತ್ರೆಯ ಮುಖಂಡತ್ವ ವಹಿಸಿರುವವರೇ ನೇರ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಮದುವೆ, ಜಾತ್ರೆ ಇಂತಹ ಸಮಾರಂಭದಲ್ಲಿ ಜನ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಸಾಂಕ್ರಾಮಿಕ ರೋಗ ಹೆಚ್ಚಾಗಿರುವುದರಿಂದ ಈ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕಲು ನಾನಾ ಪ್ಲ್ಯಾನ್ ಮಾಡಿದೆ.