Tag: ಆರೋಗ್ಯ ಅಧಿಕಾರಿ

  • ವೈದ್ಯರ ನಿರ್ಲಕ್ಷ್ಯ, ಹೊಟ್ಟೆಯಲ್ಲೇ ಮಗು ಸಾವು – ಗ್ರಾಮಸ್ಥರಿಂದ ವೈದ್ಯರ ತರಾಟೆ

    ವೈದ್ಯರ ನಿರ್ಲಕ್ಷ್ಯ, ಹೊಟ್ಟೆಯಲ್ಲೇ ಮಗು ಸಾವು – ಗ್ರಾಮಸ್ಥರಿಂದ ವೈದ್ಯರ ತರಾಟೆ

    ಯಾದಗಿರಿ: ಯಾದಗಿರಿ (Yadgiri) ತಾಲೂಕಿನ ಹೊನಗೇರಾದಲ್ಲಿನ ಪ್ರಾಥಮಿಕ ಆಸ್ಪತ್ರೆಗೆ ಹೆರಿಗೆಗೆಂದು ತೆರಳಿದ್ದ ಗರ್ಭಿಣಿಗೆ (Pregnant) ಸೂಕ್ತ ಚಿಕಿತ್ಸೆ ದೊರೆಯದ ಹಿನ್ನೆಲೆ ಹೊಟ್ಟೆಯಲ್ಲಿಯೇ ಶಿಶು (Infant) ಮೃತಪಟ್ಟಿರುವ ಘಟನೆ ನಡೆದಿದೆ.

    ಆಶನಾಳ ಗ್ರಾಮದ ಗರ್ಭಿಣಿ ಲಕ್ಷ್ಮಿ ಎಂಬುವವರಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ವೈದ್ಯರ (Doctor) ನಿರ್ಲಕ್ಷ್ಯದಿಂದಲೇ ಹೀಗೆ ಆಗಿದೆ ಎಂದು ಆರೋಪ ಮಾಡಲಾಗಿದೆ. ಮೊದಲಿಗೆ ಆಶಾ ಕಾರ್ಯಕರ್ತೆಯು ಇವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (Primary Health Centre) ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಇರದ ಹಿನ್ನೆಲೆಯಲ್ಲಿ ಯಾದಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸೋಮವಾರ ರಾತ್ರಿ ಗರ್ಭಿಣಿ ಲಕ್ಷ್ಮಿಯ ಸ್ಕ್ಯಾನಿಂಗ್ (Scanning) ಮಾಡಿಸಿದಾಗ ಹೊಟ್ಟೆಯಲ್ಲಿ ಶಿಶು ಮೃತಪಟ್ಟಿದ್ದ ಬಗ್ಗೆ ತಿಳಿದುಬಂದಿದೆ. ಕೊನೆಗೆ ಮೃತ ಶಿಶುವನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೊರ ತೆಗೆದಿದ್ದಾರೆ. ಬಳಿಕ ಬಾಣಂತಿ ಲಕ್ಷ್ಮಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ: ಸ್ಲೀಪರ್ ಕೋಚ್ ಬಸ್‍ನಲ್ಲಿ ವಿಷ ಕುಡಿದು ಮಲಗಿದ ಪ್ರೇಮಿಗಳು- ಯುವತಿ ಸಾವು

    ವೈದ್ಯರ ನಿರ್ಲಕ್ಷ್ಯತನದಿಂದ ಶಿಶು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬಾರದೆ ನಿರ್ಲಕ್ಷ್ಯ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆರೋಗ್ಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಕುಟುಂಬಸ್ಥರು, ಸೂಕ್ತ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ತಪ್ಪಿತಸ್ಥ ವೈದ್ಯರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು (Villagers) ಯಾದಗಿರಿ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ (Protest) ನಡೆಸಿ, ಸೂಕ್ತ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರಿಯಕರನಿಂದ ಪ್ರಿಯತಮೆ ಮರ್ಡರ್!

    ವಿಷಯ ತಿಳಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು (Channareddy Patil Tunnur) ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಶಾಸಕರ ಮುಂದೆ ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ. ಇದನ್ನೂ ಓದಿ: ಮೈ-ಬೆಂ. ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ- ಇಬ್ಬರು ಗಂಭೀರ

  • ಸೋಂಕಿತರೊಂದಿಗೆ ಬರ್ತ್ ಡೇ ಆಚರಿಸಿಕೊಂಡ ಆರೋಗ್ಯಾಧಿಕಾರಿ

    ಸೋಂಕಿತರೊಂದಿಗೆ ಬರ್ತ್ ಡೇ ಆಚರಿಸಿಕೊಂಡ ಆರೋಗ್ಯಾಧಿಕಾರಿ

    ಹಾವೇರಿ: ಕೊರೊನಾ ಸೋಂಕು ಅಂದರೆ ಎಲ್ಲರಿಗೂ ಭಯ. ಸೊಂಕಿತರ ಹತ್ತಿರ ಹೋಗಲು ಭಯ ಪಡುತ್ತಾರೆ. ಹೀಗಿರುವಾಗ ಕೋವಿಡ್ ಕೇರ್ ಸೆಂಟರ್‌ನಲ್ಲಿಯೇ ಬರ್ತ್ ಡೇಯನ್ನು ಸಮುದಾಯ ಆರೋಗ್ಯಾಧಿಕಾರಿ ಆಚರಿಸಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಲಕೇರಿ ಕೋವಿಡ್ ಕೇರ್  ಸೆಂಟರ್‌ನಲ್ಲಿ ನಡೆದಿದೆ. ಇದನ್ನೂ ಓದಿ: ಈ ದಿನ ಮಾಡಿ ಮಾವಿನ ಹಣ್ಣಿನ ಕೇಸರಿ ಬಾತ್

    ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಸೋಂಕಿತರೊಂದಿಗೆ ಆರೋಗ್ಯ ಅಧಿಕಾರಿ ಸಂಜೀವ ಗಾಜೀಗೌಡ್ರ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. 2 ಕೆ.ಜಿ ಕೇಕ್ ತೆಗೆದುಕೊಂಡು ಬಂದು ಸೋಂಕಿತರ ಜೊತೆ 33ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ: ಫೇಸ್‍ಬುಕ್ ಲೈವ್ ವೇಳೆ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟ

    ಕೋವಿಡ್ ಕೇರ್ ಸೆಂಟರ್ ನಲ್ಲೇ ನೈಟ್ ಡ್ಯೂಟಿ ಇದ್ದಿದ್ದರಿಂದ ಪಿಪಿಇ ಕಿಟ್ ಧರಿಸಿಕೊಂಡು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಅನ್ನೋ ಹಾಡಿಗೆ ಸೋಂಕಿತರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು ಮತ್ತು ತಂದೆ ತಾಯಿ ಇದ್ದರು ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಲು ಕೋವಿಡ್ ಕೇರ್ ಸೆಂಟರ್ ನಲ್ಲಿ ಬರ್ತ್ ಡೇ ಆಚರಣೆ ಮಾಡಿದ್ದು ವಿಶೇಷವಾಗಿತ್ತು.

  • ದಾರಿ ಮಧ್ಯೆ ಕೆಟ್ಟು ನಿಂತ ಆಕ್ಸಿಜನ್ ಟ್ಯಾಂಕರ್ – ಬೀದರ್ ಜಿಲ್ಲಾಡಳಿತಕ್ಕೆ ಫುಲ್ ಟೆನ್ಷನ್

    ದಾರಿ ಮಧ್ಯೆ ಕೆಟ್ಟು ನಿಂತ ಆಕ್ಸಿಜನ್ ಟ್ಯಾಂಕರ್ – ಬೀದರ್ ಜಿಲ್ಲಾಡಳಿತಕ್ಕೆ ಫುಲ್ ಟೆನ್ಷನ್

    ಬೀದರ್: ಆಕ್ಸಿಜನ್ ಬರುವುದು 3 ಗಂಟೆ ತಡವಾದ ಕಾರಣ ಆಕ್ಸಿಜನ್ ಕೊರತೆ ಎದುರಾಗುವ ಪರಿಸ್ಥಿತಿ ಬೀದರ್‌ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ನಿರ್ಮಾಣವಾಗಿತ್ತು.

    ಪ್ರತಿದಿನ ಸರಿಯಾದ ಸಮಯಕ್ಕೆ ಬಳ್ಳಾರಿಯಿಂದ ಬೀದರ್‍ಗೆ ಬರುತ್ತಿದ್ದ ಪ್ರಾಣ ವಾಯು ಇಂದು ಮೂರು ಗಂಟೆ ತಡವಾಗಿ ಬಂದಿದೆ. ಪ್ರಾಣ ವಾಯು ಬರುವುದು ತಡವಾದ ಕಾರಣ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಆತಂಕದಿಂದ ಬ್ರೀಮ್ಸ್ ಆಸ್ಪತ್ರೆಗೆ ದೌಡಾಯಿಸಿದ್ದರು.

    ಸಮಯ ಕಳೆದಂತೆ ಬ್ರೀಮ್ಸ್ ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಟ್ಯಾಂಕ್ ಖಾಲಿಯಾಗುತ್ತಿದ್ದಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹರಸಾಹಸ ಪಟ್ಟು ಖಾಸಗಿ ಆಸ್ಪತ್ರೆ ಹಾಗೂ ಗ್ಯಾಸ್ ಏಜೆನ್ಸಿಗಳಿಂದ 250 ಜಂಬೂ ಸಂಗ್ರಹ ಮಾಡಿ ಕೋವಿಡ್ ಸೋಂಕಿತರಿಗೆ ಸರಬರಾಜು ಮಾಡಿದರು.

    ಜಂಬೂ ಸಿಲಿಂಡರ್ 3 ಗಂಟೆ ಬರುವುದು ತಡವಾದ್ದರಿಂದ 350 ಸೋಂಕಿತನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಮಾಧಾನ ಪಡಿಸಲು ಹರಸಾಹಸ ಪಟ್ಟರು. 3 ಗಂಟೆ ಬಳಿಕ ಆಕ್ಸಿಜನ್ ಹೊತ್ತ ಗಾಡಿ ಬೀದರ್‍ಗೆ ಬಂದು ಬ್ರೀಮ್ಸ್ ಆಕ್ಸಿಜನ್ ಟ್ಯಾಂಕ್‍ಗೆ ಡಂಪ್ ಮಾಡಿದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟರು. ಆಕ್ಸಿಜನ್ ಟ್ಯಾಂಕ್ ಗಾಡಿ ಕೆಟ್ಟು ಹೋಗಿದ್ದರಿಂದ ಈ ಸಮಸ್ಯೆಯಾಗಿದ್ದು, ಈಗಾಗಲೇ 14 ಕೆಎಲ್ ಆಕ್ಸಿಜನ್ ಟ್ಯಾಂಕ್ ಹೊತ್ತ ಗಾಡಿ ಬ್ರೀಮ್ಸ್‍ಗೆ ಬಂದಿದೆ.

    ಖಾಸಗಿ ಆಸ್ಪತ್ರೆ, ಗ್ಯಾಸ್ ಏಜೆನ್ಸಿಗಳಿಂದ ಸುಮಾರು 250 ಜಂಬೂ ಸಿಲಿಂಡರ್ ಸಂಗ್ರಹ ಮಾಡಿ ಎಲ್ಲಾ ಸೋಂಕಿತರಿಗೆ ಆಕ್ಸಿಜನ್ ನೀಡಿದ್ದೇವೆ. ಆಕ್ಸಿಜನ್ ಸಮಸ್ಯೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಹೀಗಾಗಿ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲಾ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಿ ರೆಡ್ಡಿ ತಿಳಿದ್ದಾರೆ.