Tag: ಆರೆಂಜ್

  • ಎಲ್ಲರನ್ನೂ ಸಂತೃಪ್ತಗೊಳಿಸೋ ಫ್ರೆಶ್ ಆರೆಂಜ್!

    ಎಲ್ಲರನ್ನೂ ಸಂತೃಪ್ತಗೊಳಿಸೋ ಫ್ರೆಶ್ ಆರೆಂಜ್!

    ಬೆಂಗಳೂರು: ನಿರ್ದೇಶಕ ಪ್ರಶಾಂತ್ ರಾಜ್ ಚಿತ್ರದಿಂದ ಚಿತ್ರಕ್ಕೆ ಭಿನ್ನ ಆಲೋಚನೆಗಳಿಂದಲೇ ಪ್ರೇಕ್ಷಕರಿಗೆ ಹತ್ತಿರಾಗಿರುವವರು. ಆ ಕಾರಣದಿಂದಲೇ ಅವರು ನಿರ್ದೇಶಿಸಿ ಗಣೇಶ್ ನಟಿಸಿದ್ದ ಝೂಮ್ ಪ್ರೇಕ್ಷಕರನ್ನು ಮುದಗೊಳಿಸಿತ್ತು. ಅದೇ ಜೋಡಿ ಇದೀಗ ಆರೆಂಜ್ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಮುದಗೊಳಿಸಿದೆ.

    ಪ್ರಶಾಂತ್ ರಾಜ್ ಫ್ಯಾಮಿಲಿ ಸಮೇತ ಕೂತು ನೋಡುವಂಥಾ ಫ್ರೆಶ್ ಆರೆಂಜನ್ನು ಸಿದ್ಧಗೊಳಿಸಿ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಗಣೇಶ್ ಅವರದ್ದಿಲ್ಲಿ ಸಂತೋಷ್ ಎಂಬ ಕಳ್ಳತನವನ್ನೇ ಬಂಡವಾಳ ಮಾಡಿಕೊಂಡ ಹುಡುಗನ ಪಾತ್ರ.

    ಕಳ್ಳತನವೊಂದರಲ್ಲಿ ಜೈಲುಪಾಲಾಗಿದ್ದ ನಾಯಕ ಬಿಡುಗಡೆಯಾಗಿ ಟ್ರೈನಿನಲ್ಲಿ ಹೋಗುತ್ತಿರುವಾಗಲೇ ಆರೆಂಜು ಬಣ್ಣದ ಸೀರೆಯುಟ್ಟ ನಾಯಕಿ ಎದುರಾಗ್ತಾಳೆ. ಆಕೆ ಆರೆಂಜ್ ಕೊಡೋ ಮೂಲಕ ಸಂತೋಷ್ ಗೆ ಪರಿಚಿತಳಾಗುತ್ತಾಳೆ. ಇದೆಲ್ಲ ಆಗೋ ಹೊತ್ತಿಗೆ ಟ್ವಿಸ್ಟು ಸಂಭವಿಸಿ ಟ್ರೈನ್ ಮಿಸ್ ಆಗಿ ನಾಯಕಿಯ ವಸ್ತುವೊಂದು ನಾಯಕನ ಬಳಿಯೇ ಉಳಿದು ಬಿಡುತ್ತೆ. ಅದನ್ನು ತಲುಪಿಸಲೆಂದು ನಾಯಕಿಯ ಮನೆಗೆ ಹೋದಾಗ ಅಲ್ಲೊಂದು ಸುಂದರ ಸಂಸಾರ ತೆರೆದುಕೊಳ್ಳುತ್ತೆ. ನಾಯಕನೂ ಕೂಡಾ ಆ ಸುಂದರ ಕುಟುಂಬದಲ್ಲಿ ಒಬ್ಬನಾಗಿ ಸೇರಿಕೊಳ್ಳುತ್ತಾನೆ.

    ಆದರೆ ನಾಯಕಿಯ ಕುಟುಂಬಕ್ಕೆ ಈತನ ಕಳ್ಳತನದ ಹಿಸ್ಟರಿ ಗೊತ್ತಾಗದಿರುತ್ತಾ? ಮುಂದೇನಾಗುತ್ತೆ ಎಂಬುದರ ಸುತ್ತಾ ಮಜವಾಗಿ ಕಥೆಯನ್ನು ಕೊಂಡೊಯ್ಯಲಾಗಿದೆ. ದೊಡ್ಡ ಕ್ಯಾನ್ವಾಸಿನ ತುಂಬಾ ಸಾಕಷ್ಟು ಪಾತ್ರಗಳು ಹರಡಿಕೊಂಡಿದ್ದರೂ ಕೂಡಾ ಅದೆಲ್ಲವನ್ನು ಮ್ಯಾನೇಜು ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಗಣೇಶ್ ಅವರೂ ಚೆಂದಗೆ ನಟಿಸಿದ್ದಾರೆ. ಪ್ರಿಯಾ ಆನಂದ್ ನಟನೆಯೂ ಮನ ಸೆಳೆಯುವಂತಿದೆ. ಸಂತೋಷ್ ಪಾತಾಜೆ ಛಾಯಾಗ್ರಹಣ ಆರೆಂಜಿಗೆ ಹೊಸಾ ಸ್ವಾದವನ್ನೇ ತುಂಬಿದೆ. ಸಂಗೀತವೂ ಒಟ್ಟಾರೆ ಕಥೆಗೆ ಸಾಥ್ ಕೊಟ್ಟಿದೆ. ಒಟ್ಟಾರೆಯಾಗಿ ಈ ಆರೆಂಜ್ ಫ್ರೆಶ್ ಆದ ಸ್ವಾದದಿಂದಲೇ ಎಲ್ಲರನ್ನೂ ತೃಪ್ತವಾಗಿಸುತ್ತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆರೆಂಜ್: ಗಣೇಶ್ ಬಗ್ಗೆ ಪ್ರಿಯಾ ಆನಂದ್ ಹೇಳಿದ್ದೇನು?

    ಆರೆಂಜ್: ಗಣೇಶ್ ಬಗ್ಗೆ ಪ್ರಿಯಾ ಆನಂದ್ ಹೇಳಿದ್ದೇನು?

    ಪ್ರಶಾಂತ್ ರಾಜ್ ನಿರ್ದೇಶನದ ಆರೆಂಜ್ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲ್ಲುವ ಸೂಚನೆ ದಟ್ಟವಾಗಿಯೇ ಕಾಣಿಸುತ್ತಿದೆ. ಇದಕ್ಕೆ ಇದರ ನಾಯಕಿ ಪ್ರಿಯಾ ಆನಂದ್ ಆಡಿರೋ ಮಾತುಗಳೇ ಮತ್ತಷ್ಟು ಪುಷ್ಟಿ ನೀಡುವಂತಿವೆ!

    ಪ್ರಿಯಾ ಆನಂದ್ ಕನ್ನಡ ಪ್ರೇಕ್ಷಕರಿಗೆ ಅಪರಿಚಿತರೇನಲ್ಲ. ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿರೋ ರಾಜಕುಮಾರ ಚಿತ್ರಕ್ಕೆ ನಾಯಕಿಯಾಗಿದ್ದವರು ಪ್ರಿಯಾ. ಈ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಪ್ರಿಯಾ ಪಾಲಿಗೆ ಆರೆಂಜ್ ಎರಡನೇ ಕನ್ನಡ ಚಿತ್ರ.

    ಒಂದು ದೊಡ್ಡ ಫ್ಯಾಮಿಲಿ ಸುತ್ತಾ ಸುತ್ತೋ ಈ ಕಥೆಯನ್ನು ಖುಷಿಯಿಂದಲೇ ಪ್ರಿಯಾ ಒಪ್ಪಿಕೊಂಡಿದ್ದರಂತೆ. ಆ ಬಳಿಕ ಪ್ರಶಾಂತ್ ರಾಜ್ ಮತ್ತು ಗಣೇಶ್ ಅವರ ಸಾಂಗತ್ಯದಲ್ಲಿ ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಿಲ್ಲ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸಿದ್ದ ತನ್ನ ಪಾಲಿಗೆ ಗಣೇಶ್ ಜೊತೆ ನಟಿಸಿದ್ದೇನೆ ಎಂಬುದೂ ಹೆಮ್ಮೆಯ ವಿಚಾರವೇ ಅಂದಿದ್ದಾರೆ ಪ್ರಿಯಾ.

    ರಾಜಕುಮಾರ್ ಚಿತ್ರದಂತೆಯೇ ಫ್ಯಾಮಿಲಿ ಡ್ರಾಮ ಹೊಂದಿರೋ ಆರೆಂಜ್ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿರೋ ಪ್ರಿಯಾ ಪಾಲಿಗೆ ಈ ಚಿತ್ರೀಕರಣಂದ ಅನುಭವ ಕನ್ನಡದಲ್ಲಿಯೇ ನೆಲೆಗೊಳ್ಳಲು ಆಸಕ್ತಿ ಮೂಡುವಂತೆ ಮಾಡಿದೆಯಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೋಲ್ಡನ್ ಸ್ಟಾರ್ ಆರೆಂಜ್‍ನಲ್ಲಿ ಇದ್ದಾನೊಬ್ಬ ಗೋಲ್ಡ್‌ಮ್ಯಾನ್‌!

    ಗೋಲ್ಡನ್ ಸ್ಟಾರ್ ಆರೆಂಜ್‍ನಲ್ಲಿ ಇದ್ದಾನೊಬ್ಬ ಗೋಲ್ಡ್‌ಮ್ಯಾನ್‌!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಚಿತ್ರ ಬಿಡುಗಡೆಯಾಗಲು ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಅದಾಗಲೇ ಪ್ರಶಾಂತ್ ರಾಜ್ ನಿರ್ದೇಶನದ ಈ ಚಿತ್ರ ನಾನಾ ಥರದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟೇ ತರದಲ್ಲಿ ಆಕರ್ಷಣೆಗಳನ್ನೂ ಹೊಂದಿರೋ ಆರೆಂಜ್‍ನಲ್ಲಿ ರವಿಶಂಕರ್ ಗೌಡ ಡಿಫರೆಂಟಾದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ!

    ರವಿಶಂಕರ್ ಗೌಡ ಮತ್ತು ಗಣೇಶ್ ನಿಜ ಜೀವನದಲ್ಲಿಯೂ ಸ್ನೇಹಿತರು. ಈ ಹಿಂದೆಯೂ ಒಂದಷ್ಟು ಚಿತ್ರಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದಾರೆ. ಆರೆಂಜ್ ಚಿತ್ರದಲ್ಲಿಯೂ ಅದು ಮುಂದುವರೆದಿದೆ.

    ಈ ಚಿತ್ರದಲ್ಲಿಯೂ ಗಣೇಶ್ ಸ್ನೇಹಿತನಾಗಿ ನಟಿಸಿರೋ ರವಿಶಂಕರ್ ನಿಜವಾದ ಗೋಲ್ಡನ್ ಸ್ಟಾರ್ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಿರುದಿನ ಗಣೇಶ್ ಪಕ್ಕದಲ್ಲಿಯೇ ಇರುವಾಗ ರವಿಶಂಕರ್ ಹೇಗೆ ಗೋಲ್ಡನ್ ಸ್ಟಾರ್ ಆಗಲು ಸಾಧ್ಯ ಎಂಬ ಪ್ರಶ್ನೆ ಇದ್ದರೆ ಅದಕ್ಕೆ ಆರೆಂಜ್‍ನಲ್ಲಿ ಮಜವಾದ ಉತ್ತರ ಸಿಗಲಿದೆಯಂತೆ.

    ಒಂದರ್ಥದಲ್ಲಿ ಆರೆಂಜ್ ಚಿತ್ರದಲ್ಲಿ ರವಿಶಂಕರ್ ಅವರದ್ದು ಗೋಲ್ಡನ್ ಮ್ಯಾನ್ ಗೆಟಪ್ಪು. ಅದರ ಅಸಲಿ ಅಂದವನ್ನು ಆಸ್ವಾದಿಸಲು ಇನ್ನೊಂದು ವಾರ ಕಾಯಬೇಕಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವ್ ಗಿಲ್ ಜೊತೆ ಗಣೇಶ್ ಫೈಟ್

    ದೇವ್ ಗಿಲ್ ಜೊತೆ ಗಣೇಶ್ ಫೈಟ್

    ತೆಲುಗಿನ ಮಗಧೀರ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ದೇವ್ ಗಿಲ್ ಈಗ ಕನ್ನಡದ ಗೋಲ್ಡನ್ ಸ್ಟಾರ್ ಜೊತೆ ಭರ್ಜರಿಯಾಗಿ ಫೈಟ್ ಮಾಡಿದ್ದಾರೆ. ಸದಾ ನಗುತ್ತಿರೋ ಗಣೇಶ್ ಅದ್ಯಾಕೆ ಫೈಟ್ ಮಾಡಿದ್ದಾರೆ ಎಂದು ಕೇಳಬೇಡಿ. ಯಾಕೆಂದರೆ ಇದು ರಿಯಲ್ ಲೈಫ್ ಫೈಟ್ ಅಲ್ಲ, ರೀಲ್ ಲೈಫ್.

    ಹೌದು, ಸಾಗರ್ ಸೇರಿದಂತೆ ಹಲವು ಕನ್ನಡ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿರುವ ದೇವಗಿಲ್ ಅವರು ಗಣೇಶ್ ನಾಯಕ ನಟರಾಗಿರುವ ಆರೆಂಜ್ ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸನ್ನಿವೇಶಕ್ಕೆ ಬೇಕಾಗಿ ಗಣೇಶ್ ಹಾಗೂ ದೇವಗಿಲ್ ಅವರು ಅಬ್ಬರದ ಫೈಟಿಂಗ್ ಗೆ ಸಾಕ್ಷಿಯಾಗಿದ್ದಾರೆ.

    ಕುಂಕುಮ ಅರಿಶಿಣ ಬಣ್ಣಗಳ ಧೂಳಿನ ನಡುವೆಯೇ ಈ ಕಲರ್ ಫುಲ್ ಫೈಟ್ ಸಿದ್ಧವಾಗಿದ್ದು, ಬಣ್ಣದಲ್ಲಿ ಮುಳುಗೇಳುವ ಮಟ್ಟಕ್ಕೆ ಈ ಬಿಗ್ ಫೈಟಿಂಗ್ ಸೀನ್ ಚಿತ್ರದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಲಿದೆ. ಗಣೇಶ್ ಹಾಗೂ ಪ್ರಶಾಂತ್ ರಾಜ್ ಕಾಂಬಿನೇಶನ್ ನಲ್ಲಿ ಮೂಡಿಬರಲಿರುವ ಎರಡನೇ ಚಿತ್ರ ಇದಾಗಿದ್ದು, ಬಣ್ಣಗಳ ನಡುವೆ ನಡೆದ ಫೈಟಿಂಗ್ ‘ಆರೆಂಜ್’ ಎಂಬ ಶೀರ್ಷಿಕೆಯ ಸಿನಿಮಾದಲ್ಲಿ ಶೋಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv