Tag: ಆರೂರು ಜಗದೀಶ್

  • Breaking- ಕಲಾವಿದರ ಕಿರಿಕ್: ‘ಜೊತೆ ಜೊತೆಯಲಿ’ ಸೀರಿಯಲ್ ನಿಲ್ಲಿಸಲು ಮುಂದಾದ ಟೀಮ್?

    Breaking- ಕಲಾವಿದರ ಕಿರಿಕ್: ‘ಜೊತೆ ಜೊತೆಯಲಿ’ ಸೀರಿಯಲ್ ನಿಲ್ಲಿಸಲು ಮುಂದಾದ ಟೀಮ್?

    ರೂರು ಜಗದೀಶ್ (Aroor jagadish) ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಕನ್ನಡದ ಹೆಸರಾಂತ ಧಾರಾವಾಹಿ (Serial) ‘ಜೊತೆ ಜೊತೆಯಲಿ’ (Jothe Jotheyali) ಈ ತಿಂಗಳು ಹೊತ್ತಿಗೆ ನಿಲ್ಲುತ್ತಾ? ಇಂಥದ್ದೊಂದು ಆಘಾತಕಾರಿ ಸುದ್ದಿ ಕಿರುತೆರೆ ವಲಯದಿಂದ ಬಂದಿದೆ. ಅನಿರುದ್ಧ ಕಾರಣಕ್ಕಾಗಿ ಸಾಕಷ್ಟು ಸುದ್ದಿಯಾಗಿದ್ದ ಈ ಧಾರಾವಾಹಿ ಮತ್ತೆ ಕಲಾವಿದರ ಕಾರಣದಿಂದಾಗಿಯೇ ಆಟ ನಿಲ್ಲಿಸುತ್ತಿದೆ (Ending) ಎನ್ನುವುದು ವಿಷಾದಕರ. ಧಾರಾವಾಹಿಯ ಪ್ರಮುಖ ಪಾತ್ರಧಾರಿ ಡೇಟ್ ಕೊಡದೇ ಇರುವ ಕಾರಣದಿಂದಾಗಿಯೇ ಸೀರಿಯಲ್ ನಿಲ್ಲಿಸುತ್ತಿರುವುದಾಗಿ ತಂಡದ ಸದಸ್ಯರು ಬಾಯ್ಬಿಟ್ಟಿದ್ದಾರೆ.

    ಧಾರಾವಾಹಿಯ ಪ್ರಮುಖ ಮಹಿಳಾ ಪಾತ್ರಧಾರಿ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರಂತೆ. ಅವರು ಶೂಟಿಂಗ್ ಗೆ ಡೇಟ್ ಕೊಡಲು ಸಖತ್ ಕಿರಿಕ್ ಮಾಡುತ್ತಾರಂತೆ. ಈ ಧಾರಾವಾಹಿಯಿಂದಲೇ ಫೇಮಸ್ ಆಗಿರುವ ನಟಿ, ಅದೇ ಧಾರಾವಾಹಿಯನ್ನು ಮುಗಿಸುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಎನ್ನುತ್ತಾರೆ ಜೊತೆ ಜೊತೆಯಲಿ ಧಾರಾವಾಹಿ ತಂಡದ ಸದಸ್ಯರು. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ

    ಈ ಹಿಂದೆ ಅನಿರುದ್ಧ(Aniruddha)  ಕೂಡ ಜೊತೆ ಜೊತೆಯಲಿ ಟೀಮ್ ಜೊತೆ ಅಸಹಕಾರ ತೋರಿದ್ದರು ಎನ್ನುವ ಕಾರಣಕ್ಕಾಗಿ ಟೆಲಿವಿಷನ್ ಅಸೋಸಿಯೇಷನ್ ನ ನಿರ್ಮಾಪಕರ ವಿಭಾಗ, ಅನಿರುದ್ಧ ವಿರುದ್ದ ಕಠಿಣ ಕ್ರಮ ತಗೆದುಕೊಂಡಿತ್ತು. ಆನಂತರ ಅದು ಸುಖಾಂತ್ಯವಾಗಿತ್ತು. ಇದೀಗ ಪ್ರಧಾನ ಪಾತ್ರಧಾರಿ ಕೂಡ ಅದೇ ಹಾದಿಯನ್ನೇ ಹಿಡಿದಿದ್ದಾರೆ ಎನ್ನುವುದು ಕಿರುತೆರೆ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

    ಪಬ್ಲಿಕ್ ಟಿವಿ ಡಿಜಟಲ್ ಜೊತೆ ಮಾತನಾಡಿದ ಜೊತೆ ಜೊತೆಯಲಿ ಟೀಮ್ ಮತ್ತೋರ್ವ ಸದಸ್ಯರೊಬ್ಬರು ಧಾರಾವಾಹಿ ನಿಲ್ಲಿಸುತ್ತಿರುವುದು ನಿಜ ಎಂದು ಒಪ್ಪಿಕೊಂಡರು. ಆದರೆ, ಉಳಿದ ವಿಚಾರದ ಬಗ್ಗೆ ಮಾತನಾಡಲು ಇಷ್ಟಪಡಲಿಲ್ಲ. ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದರು, ಹೆಚ್ಚು ಪ್ರೇಕ್ಷಕರನ್ನು ಹೊಂದಿದ್ದರೂ ಕಲಾವಿದರ ಅಸಹಕಾರ ಜೊತೆ ಜೊತೆಯಲಿ ಧಾರಾವಾಹಿಯನ್ನೇ ಬಲಿ ತಗೆದುಕೊಂಡಿತು ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

    ಅಂದಹಾಗೆ ಈ ಧಾರಾವಾಹಿಯ ಪ್ರಧಾನ ಪಾತ್ರಗಳಲ್ಲಿ ಹರೀಶ್ ರಾಜ್ (Harish Raj) ಹಾಗೂ ಮೇಘಾ ಶೆಟ್ಟಿ (Megha Shetty) ನಟಿಸುತ್ತಿದ್ದಾರೆ. ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

  • ಮತ್ತೆ ಕಿರುತೆರೆ ಮರಳಿದ ʻಬಿಗ್‌ ಬಾಸ್‌ʼ ಖ್ಯಾತಿಯ ಕೃತ್ತಿಕಾ ರವೀಂದ್ರ

    ಮತ್ತೆ ಕಿರುತೆರೆ ಮರಳಿದ ʻಬಿಗ್‌ ಬಾಸ್‌ʼ ಖ್ಯಾತಿಯ ಕೃತ್ತಿಕಾ ರವೀಂದ್ರ

    ಕಿರುತೆರೆಯಲ್ಲಿ ರಾಧೆಯಾಗಿ ಗಮನ ಸೆಳೆದ ಕೃತ್ತಿಕಾ ರವೀಂದ್ರ (Kruttika Ravindra) ಮತ್ತೆ ಟಿವಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ರಾಧಾ ಕಲ್ಯಾಣದ (Radha Kalyana) ರಾಧೆ ಆಗಿ ಮಿಂಚಿದ್ದ ಪ್ರತಿಭಾನ್ವಿತ ನಟಿ ಕೃತ್ತಿಕಾ ಈಗ `ಭೂಮಿಗೆ ಬಂದ ಭಗವಂತ’ ಸೀರಿಯಲ್ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

    ಮಲೆನಾಡಿನ ಸುಂದರಿ ಕೃತ್ತಿಕಾ ರವಿಂದ್ರ `ಪಟ್ರೆ ಲವ್ಸ್ ಪದ್ಮಾ’ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಲಿಫ್ಟ್ ಕೊಡ್ಲಾ, ಕೆಂಗುಲಾಬಿ, ಯಾರಿಗೆ ಯಾರುಂಟು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನೂ ಕೃತ್ತಿಕಾ ಅಂದಾಕ್ಷಣ ಪ್ರೇಕ್ಷಕರಿಗೆ ನೆನಪಾಗೋದು `ರಾಧಾ ಕಲ್ಯಾಣ’ದ ರಾಧೆಯಾಗಿ ಕರ್ನಾಟಕ ಜನತೆಯ ಮನ ಗೆದ್ದಿದ್ದರು.

    ರಾಧಾ ಕಲ್ಯಾಣ, ಬಿಗ್ ಬಾಸ್ ರಿಯಾಲಿಟಿ ಶೋ ಬಳಿಕ ಇದೀಗ `ಭೂಮಿಗೆ ಬಂದ ಭಗವಂತ’ ಸೀರಿಯಲ್ ಮೂಲಕ ನಟಿ ಕಿರುತೆರೆಗೆ ಮರಳಿದ್ದಾರೆ. ಈ ಹಿಂದೆ ನಟಿಸಿದ್ದ ರಾಧೆ ಪಾತ್ರಕ್ಕೆ ವಿರುದ್ಧವಾಗಿರುವ ವಿಭಿನ್ನ ಪಾತ್ರದ ಮೂಲಕ ಬರಲಿದ್ದಾರೆ.

    `ಭೂಮಿಗೆ ಬಂದ ಭಗವಂತ’ (Bhoomige Banda Bhagawantha) ಸೀರಿಯಲ್‌ನಲ್ಲಿ ಅಪ್ಪಟ ಗೃಹಿಣಿಯಾಗಿ ನಟ ನವೀನ್ ಕೃಷ್ಣ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಕನಸು, ಆಸೆ ಹೊತ್ತಿರುವ ಗೃಹಿಣಿಯಾಗಿ, ದೈವ ಭಕ್ತೆಯ ಪಾತ್ರದಲ್ಲಿ ನಟಿ ಜೀವತುಂಬಲಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಿದ ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ- ಹರಿಪ್ರಿಯಾ

    ಅಶ್ವಿನಿ ನಕ್ಷತ್ರ, ಜೊತೆ ಜೊತೆಯಲಿ, ಪುಟ್ಟಕ್ಕನ ಮಕ್ಕಳು, ಜೋಡಿಹಕ್ಕಿ ಸೇರಿದಂತೆ ಹಲವು ಹಿಟ್ ಸೀರಿಯಲ್‌ಗಳನ್ನ ನೀಡಿರುವ ಆರೂರು ಜಗದೀಶ್ (Aroor Jagadeesh) ಅವರು ಇದೀಗ `ಭೂಮಿಗೆ ಬಂದ ಭಗವಂತʼ ಧಾರಾವಾಹಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಕೃತ್ತಿಕಾ ಮತ್ತು ನವೀನ್ ಕೃಷ್ಣ (Naveen Krishna) ಕಾಂಬಿನೇಷನ್ ಕಿರುತೆರೆಯಲ್ಲಿ ಆದ್ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

    ಇನ್ನೂ ನಟಿ ಕೃತ್ತಿಕಾ ಮತ್ತು ಶಿವಾನಿ ಸೇರಿ `ಸುಕೃಷಿ ಕ್ರಿಯೇಷನ್ಸ್’ ಎಂಬ ನಿರ್ಮಾಣ ಸಂಸ್ಥೆಯ ಅಡಿ `ಉತ್ತರಾಂಗ’ ಚಿತ್ರವನ್ನು ಕೂಡ ನಿರ್ಮಾಣ ಮಾಡ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಮತ್ತಷ್ಟು ಅಪ್‌ಡೇಟ್‌ ನೀಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅನಿರುದ್ಧಗೆ ಮತ್ತೆ ಅವಕಾಶ ಕೊಡಿ, ವಾಹಿನಿ ಮುಂದೆ ಅಭಿಮಾನಿಗಳು ಪ್ರತಿಭಟನೆ

    ಅನಿರುದ್ಧಗೆ ಮತ್ತೆ ಅವಕಾಶ ಕೊಡಿ, ವಾಹಿನಿ ಮುಂದೆ ಅಭಿಮಾನಿಗಳು ಪ್ರತಿಭಟನೆ

    ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ಅನಿರುದ್ಧ ಅವರಿಗೆ ಮತ್ತೆ ಅವಕಾಶ ನೀಡಬೇಕು ಎಂದು ಅನಿರುದ್ಧ ಅಭಿಮಾನಿಗಳು ಜೀ ಕನ್ನಡ ವಾಹಿನಿಯ ಮುಂದೆ ಪ್ರತಿಭಟನೆ ನಡೆಸಿದರು. ಏಕಾಏಕಿ ಒಬ್ಬ ನಟನಿಗೆ ಹೀಗೆ ಮಾಡುವುದು ಸರಿಯಲ್ಲ. ನಿರ್ಮಾಪಕರ ಮತ್ತು  ಅನಿರುದ್ಧ ನಡುವಿನ ಸಮರಕ್ಕೆ, ವಾಹಿನಿಯು ಮಧ್ಯಸ್ತಿಕೆ ವಹಿಸಿ ಸರಿ ಮಾಡಬೇಕು ಎಂದು ಅಭಿಮಾನಿಗಳು ಮನವಿ ಮಾಡಿದರು. ಆರ್ಯವರ್ಧನ್ ಪಾತ್ರಕ್ಕೆ ಇನ್ನೂ ಯಾರೂ ಆಯ್ಕೆ ಆಗದೇ ಇರುವ ಕಾರಣಕ್ಕಾಗಿ ಮತ್ತೆ ಅನಿರುದ್ಧ ಅವರನ್ನೇ ವಾಪಸ್ಸು ಕರೆಯಿಸಿಕೊಳ್ಳಿ ಎಂಬ ಬೇಡಿಕೆ ಇಟ್ಟರು.

    ಜೊತೆ ಜೊತೆಯಲಿ ಧಾರಾವಾಹಿಯ ನಿರ್ಮಾಪಕರಿಗೂ ಮತ್ತು ಅನಿರುದ್ಧ ಅವರಿಗೂ ವೈಮನಸ್ಸಿನ ಕಾರಣದಿಂದಾಗಿ ಅನಿರುದ್ಧ ಅವರನ್ನೂ ಸೀರಿಯಲ್ ನಿಂದ ಕೈ ಬಿಡಲಾಗಿದೆ. ಅನಿರುದ್ಧ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರವನ್ನು ಕಥೆಯಲ್ಲೇ ಹಾಗೆಯೇ ಜೀವಂತವಾಗಿಟ್ಟು, ಹೊಸ ಪಾತ್ರಗಳ ಮೂಲಕ ಕಥೆಯನ್ನು ಹೇಳಲಾಗುತ್ತಿದೆ. ಹೊಸ ಪಾತ್ರ ಬಂದರೂ, ಆರ್ಯವರ್ಧನ್ ಪಾತ್ರವೂ ಕಥೆಯಲ್ಲಿದೆ. ಹಾಗಾಗಿ ಮತ್ತೆ ಅನಿರುದ್ಧ ಧಾರಾವಾಹಿ ತಂಡ ಸೇರಿಕೊಳ್ಳಲಿ ಎನ್ನುವುದು ಅಭಿಮಾನಿಗಳ ಆಸೆ. ಇದನ್ನೂ ಓದಿ: ‘ಶ್ಯಾನುಭೋಗರ ಮಗಳಾ’ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

    ಅನಿರುದ್ಧ ಅವರನ್ನು ಕೇವಲ ಸೀರಿಯಲ್ ನಿಂದ ಮಾತ್ರ ಕೈ ಬಿಟ್ಟಿಲ್ಲ. ಮತ್ತೆ ಅವರೊಂದಿಗೆ ಯಾರೂ ಕೆಲಸ ಮಾಡದಂತೆ, ಟೆಲಿವಿಷನ್ ಅಸೋಷಿಯೇಷನ್ ನಿರ್ಮಾಪಕರ ಸಂಘವು ನಿರ್ಣಯ ತಗೆದುಕೊಂಡಿದೆ. ಒಂದು ರೀತಿಯಲ್ಲಿ ಅದು ಬ್ಯಾನ್ ಎನ್ನಲಾಗುತ್ತಿದೆ. ಹೀಗಾಗಿ ಮತ್ತೆ ಅನಿರುದ್ಧ ಅವರನ್ನು ಸೀರಿಯಲ್ ತಂಡದಲ್ಲಿ ಸೇರಿಸಿಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ. ಮತ್ತೆ ಪಾತ್ರ ಮಾಡಲು ಅನಿರುದ್ಧ ಅವರಿಗೆ ಆಸೆ ಇದ್ದರೂ, ನಿರ್ಮಾಪಕರು ಮಾತ್ರ ಮನಸ್ಸು ಬದಲಾಯಿಸುತ್ತಿಲ್ಲ.

    ಧಾರಾವಾಹಿ ಲೋಕದ ಬಹುತೇಕ ನಿರ್ಮಾಪಕರು ಸೇರಿ, ಮಾಧ್ಯಮಗೋಷ್ಠಿಯಲ್ಲೇ ಅನಿರುದ್ಧ ಅವರ ಜೊತೆ ತಾವ್ಯಾರೂ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಜೀ ಕನ್ನಡ ವಾಹಿನಿಯ ಪ್ರತಿನಿಧಿಯೇ ಮಾಧ್ಯಮ ಗೋಷ್ಠಿಯಲ್ಲಿ ಪಾಲ್ಗೊಂಡು ತಾವು ನಿರ್ಮಾಪಕರ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ಏನೇ ಹೋರಾಟ ನಡೆದರೂ, ಅನಿರುದ್ಧ ಅವರಿಗೆ ಮತ್ತೆ ಆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲು ಎಲ್ಲ ಬಾಗಿಲುಗಳು ಮುಚ್ಚಿವೆ.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಧಾರಾವಾಹಿ: ಆರ್ಯವರ್ಧನ್ ಅಲ್ಲ, ಅವನ ಸಹೋದರನ ಪಾತ್ರದಲ್ಲಿ ಹರೀಶ್ ರಾಜ್

    ‘ಜೊತೆ ಜೊತೆಯಲಿ’ ಧಾರಾವಾಹಿ: ಆರ್ಯವರ್ಧನ್ ಅಲ್ಲ, ಅವನ ಸಹೋದರನ ಪಾತ್ರದಲ್ಲಿ ಹರೀಶ್ ರಾಜ್

    ಜೊತೆ ಜೊತೆಯಲಿ ಧಾರಾವಾಹಿಗೆ ನಟ ಹರೀಶ್ ರಾಜ್ ಎಂಟ್ರಿ ಕೊಟ್ಟಿದ್ದಾರೆ. ಎರಡು ದಿನಗಳಿಂದ ಹರೀಶ್ ರಾಜ್ ದೃಶ್ಯಗಳು ಪ್ರಸಾರವಾಗುತ್ತಿವೆ. ಹರೀಶ್ ರಾಜ್ ಈ ಧಾರಾವಾಹಿಯಲ್ಲಿ ಅನಿರುದ್ಧ ಬಿಟ್ಟು ಹೋಗಿದ್ದ ಆರ್ಯವರ್ಧನ್ ಪಾತ್ರವನ್ನು ನಿರ್ವಹಿಸುತ್ತಾರೆ ಎನ್ನಲಾಗಿತ್ತು. ಆದರೆ, ಆರ್ಯವರ್ಧನ್ ತಮ್ಮನಾಗಿ ಹರೀಶ್ ರಾಜ್ ಧಾರಾವಾಹಿಗೆ ಪ್ರವೇಶ ಮಾಡಿದ್ದಾರೆ. ಅದೂ ವಿಶ್ವಾಸ್ ದೇಸಾಯಿ ಪಾತ್ರದಲ್ಲಿ ಎನ್ನುವುದು ವಿಶೇಷ.

    ಪ್ರಿಯದರ್ಶಿನಿಗೆ ಇಬ್ಬರು ಮಕ್ಕಳು. ಒಬ್ಬ ಆರ್ಯವರ್ಧನ್, ಮತ್ತೊಬ್ಬ ವಿಶ್ವಾಸ್ ದೇಸಾಯಿ. ವಿದೇಶದಲ್ಲಿ ಬ್ಯುಸಿನೆಟ್ ಮಾಡುತ್ತಿದ್ದ ವಿಶ್ವಾಸ ಇದೀಗ ಸ್ವದೇಶಕ್ಕೆ ಬಂದಿದ್ದಾನೆ. ಅದೂ 700 ಕೋಟಿ ಲಾಸ್ ಮಾಡಿಕೊಂಡು. ಈ ಲಾಸ್ ಕಟ್ಟಿಕೊಡಲು ಏನು ಮಾಡಬೇಕು ಎನ್ನುವ ಒದ್ದಾಟ ಅವನದ್ದು. ಕಿರಿ ಮಗನ ಸಂಕಟ ನೋಡಲಾಗಿದೆ. ಆರ್ಯವರ್ಧನ್ ಸಹಾಯ ಕೇಳುವುದಾಗಿ ಪ್ರಿಯದರ್ಶಿನಿ ಹೇಳಿದ್ದಾರೆ. ಇದರ ಮಧ್ಯೆ ಧಾರಾವಾಹಿ ತಂಡ ಮತ್ತೊಂದು ಟ್ವಿಸ್ಟ್ ಕೊಟ್ಟಿದೆ. ಅದು ಜೋಗತಿ ಮೂಲಕ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಮನೆಗೆ ಬರುವ ಜೋಗತಿ, ‘ನಿಮ್ಮಿಬ್ಬರ ಮಕ್ಕಳಲ್ಲಿ ಒಬ್ಬರಿಗೆ ಕಂಟಕ ಎದುರಾಗಲಿದೆ’ ಎಂದು ಪ್ರಿಯದರ್ಶಿನಿಗೆ ಹೇಳಿದ್ದಾಳೆ. ಜೋಗತಿ ಹೇಳಿದಂತೆ ಆಗುವುದರಿಂದ ಪ್ರಿಯದರ್ಶಿನಿಗೆ ಆತಂಕ ಶುರುವಾಗಿದೆ. ಯಾವ ಮಗನಿಗೆ ಏನು ಆಗಲಿದೆ ಎನ್ನುವುದು ಆಕೆಯ ಸಂಕಟ. ಇಂತಹ ಕುತೂಹಲದೊಂದಿಗೆ ಹರೀಶ್ ರಾಜ್ ಪಾತ್ರ ಆಗಮನವಾಗಿದೆ. ಆರ್ಯವರ್ಧನಿಗೆ ಸಂಕಟ ತಂದು ಮನೆಯಿಂದ ಕಳುಹಿಸುತ್ತಾರಾ? ಅಥವಾ ಆ ಪಾತ್ರಕ್ಕೆ ಬೇರೆಯವರನ್ನು ಆಯ್ಕೆ ಮಾಡಿಕೊಳ್ಳುತ್ತಾರಾ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಅನಿರುದ್ದಗೆ ಸವಾಲು ಹಾಕಿದ ಜೊತೆ ಜೊತೆಯಲಿ ಸೀರಿಯಲ್ ಟೀಮ್

    ಅನಿರುದ್ದಗೆ ಸವಾಲು ಹಾಕಿದ ಜೊತೆ ಜೊತೆಯಲಿ ಸೀರಿಯಲ್ ಟೀಮ್

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರ ಹಾಕಿದ ನಂತರ, ಆರ್ಯವರ್ಧನ್ ಪಾತ್ರವನ್ನು ಯಾರು ಮಾಡಲಿದ್ದಾರೆ? ಅನಿರುದ್ಧ ಇಲ್ಲದೇ ಸೀರಿಯಲ್ ಮುಂದುವರೆಯುತ್ತಾ? ಅವರಿಲ್ಲದೇ ಧಾರಾವಾಹಿಯನ್ನು ಜನ ನೋಡುತ್ತಾರೆ ಹೀಗೆ ಹತ್ತಾರು ಪ್ರಶ್ನೆಗಳು ಎದ್ದಿದ್ದವು. ಅನಿರುದ್ಧ ಇಲ್ಲದೇ ನಾವು ಧಾರಾವಾಹಿ ನೋಡುವುದಿಲ್ಲ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲೂ ಬರೆದುಕೊಂಡಿದ್ದಾರೆ. ಆದರೂ, ಅನಿರುದ್ಧ ಅವರಿಗೆ ಸವಾಲು ಹಾಕುವಂತಹ ಕೆಲಸ ನಡೆದಿದೆ.

    ಸೀರಿಯಲ್ ಗೆ ಅನಿರುದ್ಧ ಅವರಿಗಿಂತ ಕಂಟೆಂಟ್ ಮುಖ್ಯ ಎಂದು ಈ ಹಿಂದೆಯೇ ನಿರ್ಮಾಪಕ ಆರೂರು ಜಗದೀಶ್ ಹೇಳಿಕೆ ನೀಡಿದ್ದರು. ಕಥೆಯೇ ಧಾರಾವಾಹಿಯ ಹೀರೋ ಎಂದು ಮಾಧ್ಯಮಗಳ ಮುಂದೆಯೇ ಮಾತನಾಡಿದ್ದರು. ಈಗ ಆಡಿದಂತೆಯೇ ಮಾಡಿ ತೋರಿಸಿದ್ದಾರೆ. ಅನಿರುದ್ಧ ಅವರನ್ನು ಕೈ ಬಿಟ್ಟು ಧಾರಾವಾಹಿಯನ್ನು ಮುಂದುವರೆಸಿದ್ದಾರೆ. ಕೇವಲ ಅನಿರುದ್ಧ ಅವರನ್ನು ಮಾತ್ರವಲ್ಲ, ಆರ್ಯವರ್ಧನ್ ಪಾತ್ರವಿಲ್ಲದೇ ಧಾರಾವಾಹಿ ನಡೆಸುತ್ತೇವೆ ಎನ್ನುವ ಸೂಚನೆಯನ್ನೂ ಕೊಟ್ಟಿದ್ದಾರೆ. ಇದನ್ನೂ ಓದಿ:ದುಬಾರಿ ಸಂಭಾವನೆ ಕೇಳಿ, ಅವಕಾಶ ಕಳೆದುಕೊಂಡ `ವಜ್ರಕಾಯ’ ನಟಿ ನಭಾ ನಟೇಶ್

    ಆರ್ಯವರ್ಧನ್ ಪಾತ್ರಕ್ಕಾಗಿ ಹಲವು ಕಲಾವಿದರನ್ನು ಹುಡುಕಿದ್ದರು. ಕೊನೆಯ ಕ್ಷಣದಲ್ಲಿ ಆ ಪಾತ್ರವನ್ನು ಬಿಟ್ಟು, ಹೊಸದೊಂದು ಪಾತ್ರವನ್ನು ಸೃಷ್ಟಿ ಮಾಡಿದೆ ಧಾರಾವಾಹಿ ತಂಡ. ಆ ಹೊಸ ಪಾತ್ರವನ್ನು ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕಥೆಗೆ ಬೇರೊಂದು ತಿರುವು ದೊರೆತಿದೆ. ಈ ಹೊಸ ಕಥೆಯನ್ನು ನೋಡುಗ ಹೇಗೆ ತಗೆದುಕೊಳ್ಳುತ್ತಾನೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಪಾತ್ರವನ್ನು ಮತ್ತೆ ಅನಿರುದ್ಧ ಮಾಡ್ತಾರಾ? ಕುತೂಹಲ ಮೂಡಿಸಿದೆ ‘ಜೊತೆ ಜೊತೆಯಲಿ’ ಟೀಮ್ ನಡೆ

    ಆರ್ಯವರ್ಧನ್ ಪಾತ್ರವನ್ನು ಮತ್ತೆ ಅನಿರುದ್ಧ ಮಾಡ್ತಾರಾ? ಕುತೂಹಲ ಮೂಡಿಸಿದೆ ‘ಜೊತೆ ಜೊತೆಯಲಿ’ ಟೀಮ್ ನಡೆ

    ಜೊತೆ ಜೊತೆಯಲಿ ಟೀಮ್ ನಿಂದ ಹೊಸ ಹೊಸ ಸುದ್ದಿಗಳು ಬರುತ್ತಿವೆ. ಅನಿರುದ್ಧ ಅವರನ್ನು ಧಾರಾವಾಹಿಯಿಂದ ಕೈ ಬಿಟ್ಟಿದ್ದರಿಂದ, ಇವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಬೇರೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಯಿತು. ನಿರ್ದೇಶಕ ಅನೂಪ್ ಭಂಡಾರಿ, ನಟರಾದ ಸುನೀಲ್ ಪುರಾಣಿಕ್ ಮತ್ತು ಹರೀಶ್ ರಾಜ್ ಅವರನ್ನು ಪಾತ್ರ ನಿರ್ವಹಿಸಲು ಕೇಳಲಾಯಿತು. ಕೊನೆಗೆ ಹರೀಶ್ ರಾಜ್ ಪಕ್ಕಾ ಆಯ್ಕೆ ಎನ್ನುವ ಸುದ್ದಿಯೂ ಬಂತು. ಆದರೆ, ಇವೆಲ್ಲವೂ ಮತ್ತೆ ಉಲ್ಟಾ ಹೊಡೆಯುತ್ತಿವೆ.

    ಧಾರಾವಾಹಿ ಲೋಕದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಸದ್ಯಕ್ಕೆ ಆರ್ಯವರ್ಧನ್ ಪಾತ್ರಕ್ಕೆ ಯಾರನ್ನೂ ಆಯ್ಕೆ ಮಾಡಿಕೊಳ್ಳುವದಿಲ್ಲವಂತೆ. ಹರೀಶ್ ರಾಜ್ ಅವರು ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಟಿಸುತ್ತಿದ್ದರೂ, ಅವರ ಪಾತ್ರ ಬೇರೆಯದ್ದೇ ಆಗಿರಲಿದೆಯಂತೆ. ಆರ್ಯವರ್ಧನ್ ಪಾತ್ರ ಮನೆಬಿಟ್ಟು ಹೋಗಲಿದೆ ಎಂದು ಹೇಳಲಾಗುತ್ತಿದೆ. ಆರ್ಯವರ್ಧನ್ ಪಾತ್ರಕ್ಕೆ ಯಾರನ್ನೂ ಆಯ್ಕೆ ಮಾಡಿಕೊಂಡಿಲ್ಲ ಅಂತಾರೆ, ಮನೆ ಬಿಟ್ಟು ಹೋದ ಆರ್ಯವರ್ಧನ್ ಮುಂದಿನ ದಿನಗಳಲ್ಲಿ ಮತ್ತೆ ವಾಪಸ್ಸು ಮನೆಗೆ ಬಂದರೆ, ಆ ಪಾತ್ರವನ್ನು ಅನಿರುದ್ಧ ಅವರೇ ಮಾಡಲಿದ್ದಾರೆ ಎನ್ನುವ ಅನುಮಾನ ಎಲ್ಲರದ್ದು.

    ಆದರೆ, ಇಷ್ಟೊಂದು ರಾದ್ಧಾಂತ ಮಾಡಿಕೊಂಡು, ಒಬ್ಬರಿಗೊಬ್ಬರ ಮೇಲೆ ಕೆಸರಾಟವಾಡಿ ಮತ್ತೆ  ಅನಿರುದ್ಧ ಮತ್ತು ನಿರ್ಮಾಪಕ ಆರೂರು ಜಗದೀಶ್ ಒಟ್ಟಿಗೆ ಕೆಲಸ ಮಾಡುತ್ತಾರಾ ಎನ್ನುವ ಪ್ರಶ್ನೆ ಎಲ್ಲರದ್ದು. ಮಾಧ್ಯಮಗಳ ಮುಂದೆ ಆರೋಪ ಪ್ರತ್ಯಾರೋಪ ಮಾಡಿದ ನಂತರ, ವಾಹಿನಿಯ ಪ್ರತಿನಿಧಿಯೇ ಅನಿರುದ್ಧ ಅವರು ಧಾರಾವಾಹಿಯಲ್ಲಿ ಇರುವುದಿಲ್ಲ ಎಂದು ಘೋಷಿದ ಮೇಲೆ ಮತ್ತೆ ಒಂದಾಗಿ ಕೆಲಸ ಮಾಡುವುದು ಅನುಮಾನ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

    ಏನೇ  ಇರಲಿ, ಮತ್ತೆ ಅನಿರುದ್ಧ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ. ಹಾಗಾಗಿ ವಾಹಿನಿಯ ಮುಖ್ಯಸ್ಥರನ್ನೂ ಸೇರಿಸಿ, ಧಾರಾವಾಹಿಯ ತಂಡಕ್ಕೆ ಒತ್ತಡ ಹಾಕುವಂತಹ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಇಬ್ಬರೂ ರಾಜಿಯಾಗಿ ಮತ್ತೆ ಅನಿರುದ್ಧ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿ ಎನ್ನುವುದು ಹಲವು ಜನರ ಆಸೆ. ಮುಂದಿನ ದಿನಗಳಲ್ಲಿ ಏನಾಗತ್ತೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • Exclusive-‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹರೀಶ್ ರಾಜ್ ನಟಿಸೋದು ಪಕ್ಕಾ- ಆದ್ರೆ ಆರ್ಯವರ್ಧನ್ ಪಾತ್ರದಲ್ಲಿ ಅಲ್ಲ?

    Exclusive-‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹರೀಶ್ ರಾಜ್ ನಟಿಸೋದು ಪಕ್ಕಾ- ಆದ್ರೆ ಆರ್ಯವರ್ಧನ್ ಪಾತ್ರದಲ್ಲಿ ಅಲ್ಲ?

    ಸ್ಯಾಂಡಲ್ ವುಡ್ ನಟ ಹರೀಶ್ ರಾಜ್ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸುವುದು ಪಕ್ಕಾ ಆಗಿದೆ. ಈ ಧಾರಾವಾಹಿ ಟೀಮ್ ಕಡೆಯಿಂದ ತಮಗೆ ಕರೆ ಬಂದಿರುವ ವಿಚಾರವನ್ನೂ ಅವರು ಹಂಚಿಕೊಂಡಿದ್ದರು. ತಾವು ಕೂಡ ಸೀರಿಯಲ್ ತಂಡಕ್ಕೆ ಕೆಲವು ಷರತ್ತುಗಳನ್ನು ವಿಧಿಸಿರುವುದಾಗಿ, ಅದಕ್ಕೆ ಅವರು ಒಪ್ಪಿಕೊಂಡರೆ ಧಾರಾವಾಹಿಯಲ್ಲಿ ನಟಿಸುವುದಾಗಿ ತಿಳಿಸಿದ್ದರು. ಹರೀಶ್ ರಾಜ್ ಷರತ್ತುಗಳನ್ನು ವಾಹಿನಿ ಮತ್ತು ಧಾರಾವಾಹಿ ತಂಡ ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ.

    ಹರೀಶ್ ರಾಜ್ ಸಿನಿಮಾ ರಂಗದಲ್ಲೂ ಸಕ್ರೀರಾಗಿರುವ ಕಾರಣದಿಂದ ಹದಿನೈದು ದಿನ ಸೀರಿಯಲ್, ಹದಿನೈದು ದಿನ ಸಿನಿಮಾದಲ್ಲಿ ನಟಿಸುವುದಾಗಿ ಅವರು ವಾಹಿನಿಗೆ ತಿಳಿಸಿದ್ದರಂತೆ. ಈ ಮಾತಿಗೆ ವಾಹಿನಿ ಮತ್ತು ಧಾರಾವಾಹಿ ತಂಡ ಕೂಡ ಒಪ್ಪಿಗೆ ಸೂಚಿಸಿದೆ ಎನ್ನಲಾಗುತ್ತಿದ್ದು, ಅತೀ ಶೀಘ್ರದಲ್ಲೇ ಅವರು ಜೊತೆ ಜೊತೆಯಲಿ ಟೀಮ್ ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್

    ಈವರೆಗೂ ಅನಿರುದ್ಧ ಅವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಅವರು ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಆರ್ಯವರ್ಧನ್ ಪಾತ್ರವನ್ನು ಹರೀಶ್ ರಾಜ್ ಮುಂದುವರೆಸಿಕೊಂಡು ಹೋಗಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಹರೀಶ್ ರಾಜ್ ಬೇರೆ ಪಾತ್ರವನ್ನು ಮಾಡಲಿದ್ದಾರಂತೆ. ಆ ಪಾತ್ರ ಯಾವುದು? ಆರ್ಯವರ್ಧನ್ ಪಾತ್ರಕ್ಕೂ ಈ ಪಾತ್ರಕ್ಕೂ ಲಿಂಕ್ ಇದೆಯಾ? ಕಥೆಯಲ್ಲಿ ತಿರುವು ಎಂಥದ್ದು ಎನ್ನುವ ಕುತೂಹಲ ಇದೀಗ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • Exclusive-‘ಜೊತೆ ಜೊತೆಯಲಿ’ ಸೀರಿಯಲ್ ನಲ್ಲಿ ಅನಿರುದ್ದ ಅಷ್ಟೇ ಅಲ್ಲ, ಆರ್ಯವರ್ಧನ್ ಪಾತ್ರವೇ ಇರಲ್ಲ?

    Exclusive-‘ಜೊತೆ ಜೊತೆಯಲಿ’ ಸೀರಿಯಲ್ ನಲ್ಲಿ ಅನಿರುದ್ದ ಅಷ್ಟೇ ಅಲ್ಲ, ಆರ್ಯವರ್ಧನ್ ಪಾತ್ರವೇ ಇರಲ್ಲ?

    ಧಾರಾವಾಹಿ ಅಂದರೆ ಹಾಗೆನೇ. ತಿರುವುಗಳೇ ಧಾರಾವಾಹಿಯನ್ನು ನೋಡಿಸಿಕೊಂಡು ಹೋಗುತ್ತವೆ. ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರಗೆ ಕಳುಹಿಸಿದಾಗ, ಅನಿರುದ್ಧ ಇಲ್ಲದೇ ಆರ್ಯವರ್ಧನ್ ಪಾತ್ರ ಹೇಗೆ ಎಂಬ ಚರ್ಚೆ ಶುರುವಾಗಿತ್ತು. ಆರ್ಯವರ್ಧನ್ ಪಾತ್ರಕ್ಕೆ ಯಾರೆಲ್ಲ ನಟರು ಬರಬಹುದು ಎಂದು ಅಂದಾಜಿಸಲಾಗಿತ್ತು. ಈ ಅಂದಾಜೇ ಬುಡಮೇಲು ಆಗುವಂತಹ ಟ್ವಿಸ್ಟ್ ಅನ್ನು ಧಾರಾವಾಹಿ ತಂಡ ನೀಡಿದೆ.

    ಆರ್ಯವರ್ಧನ್ ಪಾತ್ರಕ್ಕಾಗಿ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಕೇಳಲಾಯಿತು. ಸಿನಿಮಾ ಕಾರಣದಿಂದಾಗಿ ಅವರು ಒಪ್ಪಿಕೊಳ್ಳಲಿಲ್ಲ. ಆನಂತರ ಸುನೀಲ್ ಪುರಾಣಿಕ್, ಹರೀಶ್ ರಾಜ್ ರೀತಿಯ ಹೆಸರುಗಳು ಹರಿದಾಡಿದವು. ಹರೀಶ್ ರಾಜ್ ಆ ಪಾತ್ರಕ್ಕೆ ನಿಕ್ಕಿ ಆಗಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಸುದ್ದಿಯೂ ಸುಳ್ಳಾಗಿದೆ. ಕಥೆಯಲ್ಲಿ ಸಖತ್ ಟ್ವಿಸ್ಟ್ ನೀಡುವ ಮೂಲಕ ಕಥೆಯನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋಗಿದೆ ಧಾರಾವಾಹಿ ತಂಡ. ಈ ಟ್ವಿಸ್ಟ್ ನೋಡುಗರಿಗೆ ಮತ್ತಷ್ಟು ಥ್ರಿಲ್ ನೀಡಲಿದೆ. ಇದನ್ನೂ ಓದಿ:ಜಯಶ್ರೀಗೆ ಎರಡು ಮದುವೆ ಆಗ್ತವೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

    ಈಗಾಗಲೇ ಕಥೆಯಲ್ಲಿ ಆರ್ಯವರ್ಧನ್ ಮನೆಬಿಟ್ಟು ಹೋಗಿದ್ದ. ಆನಂತರ ಅನು ಆತನನ್ನು ಹುಡುಕಾಡಿ ಕೊನೆಗೂ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಮನೆಗೆ ಬಂದ ಆರ್ಯವರ್ಧನ್ ಏನು ಮಾಡುತ್ತಾನೆ ಎನ್ನುವ ಕುತೂಹಲ ಎಲ್ಲರದ್ದು. ಮನೆಗೆ ಬಂದವನು ಏನಾದರೂ ಮಾಡಲಿ. ಆದರೆ, ಆರ್ಯವರ್ಧನ್ ಪಾತ್ರವೇ ಕಥೆಯಲ್ಲಿ ಇರುವುದಿಲ್ಲ ಎನ್ನುವ ಮಾಹಿತಿ ಹರಿದಾಡುತ್ತಿದೆ. ಆ ಪಾತ್ರವನ್ನು ಕೈ ಬಿಟ್ಟು, ಹೊಸ ಪಾತ್ರಕ್ಕೆ ಎಂಟ್ರಿ ಕೊಡುವ ಮೂಲಕ ಕಥೆಗೆ ಮಹಾಟ್ವಿಸ್ಟ್ ನೀಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.

    ಈ ರೀತಿಯ ಕಥೆಯನ್ನು ಮಾಡಲು ಏಳುಗುಂಡಿಗೆ ಬೇಕು. ಯಾಕೆಂದರೆ, ಕಥಾನಾಯಕನನ್ನೇ ಸ್ಕ್ರೀನ್ ಮೇಲೆ ತೋರಿಸದೇ ಕಥೆ ಹೇಳುವ ಕಲೆ ಅಷ್ಟು ಸುಲಭದ್ದಲ್ಲ. ಅಂತಹ ರಿಸ್ಕ್ ತಗೆದುಕೊಂಡು ಜೊತೆ ಜೊತೆಯಲಿ ಧಾರಾವಾಹಿ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಸಂಚಿಕೆಗಳು ಹೇಗೆ ಇರುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.

     

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಪಕ್ಕಾ ಎನ್ನುತ್ತಿವೆ ಮೂಲಗಳು

    ‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಪಕ್ಕಾ ಎನ್ನುತ್ತಿವೆ ಮೂಲಗಳು

    ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಇದೀಗ ಮತ್ತೊಬ್ಬ ಕಲಾವಿದನನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಅನಿರುದ್ಧ ಅವರಿಂದ ತೆರುವಾದ ಆರ್ಯವರ್ಧನ್ ಪಾತ್ರವನ್ನು ಕನ್ನಡದ ಪ್ರತಿಭಾವಂತ ನಟ ಹರೀಶ್ ರಾಜ್ ಮಾಡಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ವಾಹಿನಿಯಾಗಲಿ, ಧಾರಾವಾಹಿಯ ನಿರ್ಮಾಪಕರಾಗಿ ಈ ಸುದ್ದಿಯನ್ನು ಖಚಿತ ಪಡಿಸದೇ ಇದ್ದರೂ, ಹರೀಶ್ ರಾಜ್ ಅವರೇ ಈ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ.

    ಈ ಮೊದಲ ಆರ್ಯವರ್ಧನ್ ಪಾತ್ರವನ್ನು ಅನೂಪ್ ಭಂಡಾರಿ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಾರಣದಿಂದಾಗಿ ಒಪ್ಪಿಕೊಳ್ಳಲಿಲ್ಲ. ಆನಂತರ ಸುನೀಲ್ ಪುರಾಣಿಕ್ ಹೆಸರು ಓಡಾಡಿತು. ಕೆಲವರು ತಮಾಷೆಗೆ ಎನ್ನುವಂತೆ ಮಾಜಿ ಸಚಿವ ಸಿ. ಟಿ . ರವಿಯನ್ನು ಆಯ್ಕೆ ಮಾಡಿ ಎಂದು ಕಾಮೆಂಟ್ ಮಾಡಿದ್ದರು. ಆದರೆ, ವಾಹಿನಿಯು ಹಲವರಿಗೆ ಗಾಳಹಾಕಿತ್ತು. ಅದರಲ್ಲಿ ಹರೀಶ್ ರಾಜ್ ಹೆಸರು ಕೂಡ ಇತ್ತು. ಇದನ್ನೂ ಓದಿ:ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಯಜುವೇಂದ್ರ ಚಾಹಲ್ ದಂಪತಿ

    ಸುನೀಲ್ ಪುರಾಣಿಕ್ ಮತ್ತು ಹರೀಶ್ ರಾಜ್ ಹೆಸರು ಸದ್ಯ ವಾಹಿನಿಯ ಮುಂದೆ ಇದೆ. ಬಹುತೇಕ ಸುನೀಲ್ ಪುರಾಣಿಕ್ ಅವರೇ ಈ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಹರೀಶ್ ರಾಜ್ ಹೆಸರೂ ಕೇಳಿ ಬರುತ್ತಿದೆ. ನಿನ್ನೆಗೆ ಅನಿರುದ್ಧ ಮಾಡಿದ ದೃಶ್ಯಗಳು ಮುಗಿದಿರುವ ಕಾರಣದಿಂದಾಗಿ ಜರೂರಾಗಿ ಪಾತ್ರಧಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಪಕರ ಮುಂದಿದೆ. ಇವತ್ತು ಅಥವಾ ನಾಳೆ ಪಾತ್ರಧಾರಿಯ ಹೆಸರು ಪಕ್ಕಾ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಅನಿರುದ್ಧ ಅವರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ: ಗರಂ ಆದ ಮಹಿಳಾ ಅಭಿಮಾನಿಗಳು

    ಅನಿರುದ್ಧ ಅವರನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ: ಗರಂ ಆದ ಮಹಿಳಾ ಅಭಿಮಾನಿಗಳು

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಕೈ ಬಿಟ್ಟಿದ್ದನ್ನು ಅನಿರುದ್ಧ ಮಹಿಳಾ ಅಭಿಮಾನಿಗಳ ಸಂಘ ಖಂಡಿಸಿದೆ. ಮಂಗಳವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿ ಆಯೋಜನೆ ಮಾಡಿದ್ದ ತಂಡದ ಸದಸ್ಯರು. ಬೇಕು ಅಂತಾನೇ ಅನಿರುದ್ಧ ಅವರನ್ನು ಧಾರಾವಾಹಿ ತಂಡ ಕೈ ಬಿಟ್ಟಿದೆ ಎಂದು ಆರೋಪಿಸಿದರು. ಅನಿರುದ್ಧ ಅವರ ಜನಪ್ರಿಯತೆಯನ್ನು ಸಹಿಸಿಕೊಳ್ಳುವುದಕ್ಕೆ ಆಗದೇ ಈ ರೀತಿ ಮಾಡಲಾಗುತ್ತಿದೆ ಎನ್ನುವ ಮಾತುಗಳನ್ನೂ ಆಡಿದರು.

    ಅನಿರುದ್ಧ ಮತ್ತು ಜೊತೆ ಜೊತೆಯಲಿ ನಿರ್ಮಾಪಕ ಆರೂರು ಜಗದೀಶ್ ಅವರ ಮಧ್ಯೆ ಮುಸುಕಿನ ಗುದ್ದಾಟ ಇರುವುದಂತೂ ನಿಜ. ಆರೂರು ಜಗದೀಶ್ ಅವರೇ ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಂತೆ, ಹಲವಾರು ರೀತಿಯ ತೊಂದರೆಗಳನ್ನು ಅನಿರುದ್ಧ ಕೊಟ್ಟಿದ್ದಾರಂತೆ. ಆರೂರು ಜಗದೀಶ್ ಅವರ ಆರೋಪಕ್ಕೂ ಅನಿರುದ್ಧ ಉತ್ತರ ನೀಡಿದ್ದಾರೆ. ನಿರ್ಮಾಪಕರಿಗೆ ತೊಂದರೆ ಕೊಡುವಂತಹ ಯಾವುದೇ ಕೆಲಸ ಮಾಡಿಲ್ಲ. ಹಾಗಾಗಿ ಮಕ್ಕಳ ಮೇಲೆ ಆಣೆ ಪ್ರಮಾಣ ಮಾಡಿ ಎಂದು ಹೇಳಿದ್ದರು. ಇದನ್ನೂ ಓದಿ:ಬಿಗ್‌ ಬಾಸ್: ನಂದು ವಿರುದ್ಧ ಜಯಶ್ರೀ ಆರಾಧ್ಯ ಫುಲ್ ಗರಂ

    ಮಾಧ್ಯಮಗೋಷ್ಠಿ ನಂತರ ಅನಿರುದ್ಧ ಮತ್ತು ಆರೂರು ಜಗದೀಶ್ ಸುಮ್ಮನಾಗಿದ್ದರೂ, ಮಹಿಳಾ ಅಭಿಮಾನಿಗಳು ಮಾತ್ರ ಸುಮ್ಮನಾಗಿಲ್ಲ. ಮತ್ತೆ ಅನಿರುದ್ಧ ಅವರನ್ನೇ ಧಾರಾವಾಹಿಯಲ್ಲಿ ಮುಂದುವರೆಸಿ ಎಂದು ವಾಹಿನಿಗೆ ಕೇಳಿಕೊಂಡಿದ್ದಾರೆ. ಅನಿರುದ್ಧ ಅವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ವಾಹಿನಿಯು ಗಮನಿಸಬೇಕು ಎಂದು ಮಹಿಳಾ ಅಭಿಮಾನಿಗಳು ಮಧ್ಯಮ ಗೋಷ್ಠಿಯಲ್ಲಿ ಮನವಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]