Tag: ಆರೂರು ಜಗದೀಶ

  • ‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ

    ‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ

    ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ ಅವರೇ ಮುಂದುವರೆಯಬೇಕು ಎನ್ನುವ ಒತ್ತಡ ಈವರೆಗೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ವ್ಯಕ್ತವಾಗಿತ್ತು. ಇದೀಗ ಅನಿರುದ್ದ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಮಾಧ್ಯಮ ಗೋಷ್ಠಿ ಮಾಡುವ ಮೂಲಕ ವಾಹಿನಿಗೆ ಮತ್ತು ನಿರ್ಮಾಪಕರ ಮೇಲೆ ಒತ್ತಡ ತರುತ್ತಿದ್ದಾರೆ.

    ನಿನ್ನೆಯಷ್ಟೇ ಬೆಂಗಳೂರಿನ ಪ್ರಸ್ ಕ್ಲಬ್ ನಲ್ಲಿ ಅನಿರುದ್ಧ ಅವರ ಮಹಿಳಾ ಅಭಿಮಾನಿಗಳು ಮಾಧ್ಯಮಗೋಷ್ಠಿ ಮಾಡಿ, ಅನಿರುದ್ದ ಅವರಿಗೆ ಬೆಂಬಲ ಸೂಚಿಸಿದ್ದರು. ಏಕಾಏಕಿ ಹೀಗೆ ಬ್ಯಾನ್ ಮಾಡುವುದನ್ನು ಸಹಿಸಲ್ಲ ಎಂದು ಹೇಳಿಕೊಂಡಿದ್ದರು. ಅವರ ಜನಪ್ರಿಯತೆಯನ್ನು ಬಳಸಿಕೊಂಡು, ಸೀರಿಯಲ್ ನಿರ್ಮಾಪಕರು ಅನಿರುದ್ಧ ಅವರನ್ನು ದೂರ ಮಾಡಿದ್ದಾರೆ ಎಂದೂ ಆರೋಪಿಸಿದ್ದರು. ಇದೀಗ ಧಾರವಾಡದ ಗೆಳೆಯರು ಕೂಡ ಇಂಥದ್ದೊಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

    ಅನಿರುದ್ಧ ಮೂಲತಃ ಧಾರವಾಡದವರು. ಅಲ್ಲಿಯೇ ಎಜ್ಯುಕೇಷನ್ ಕೂಡ ಮುಗಿಸಿದ್ದು. ಧಾರವಾಡದ ರಂಗಭೂಮಿಯಿಂದ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟವರು. ಹಾಗಾಗಿ ಧಾರವಾಡದ ಗೆಳೆಯರು ಇಂದು ಒಟ್ಟಾಗಿ ಅನಿರುದ್ಧ ಪರ ಬ್ಯಾಟ್ ಬೀಸಿದ್ದಾರೆ. ನಲವತ್ತು ವರ್ಷಗಳಿಂದ ಸ್ನೇಹಿತರಾಗಿದ್ದವರು, ಯಾವತ್ತೂ ಅವರು ದುರಹಂಕಾರ ತೋರಿಸಿಲ್ಲ. ಹಾಗಾಗಿ ಅನಿರುದ್ಧ ಅವರನ್ನು ವಾಪಸ್ಸು ಧಾರಾವಾಹಿಗೆ ಸೇರಿಸಿಕೊಳ್ಳಿ ಎಂದು ಹೇಳಿದ್ದಾರೆ.

    ಅನಿರುದ್ಧ ಅವರನ್ನು ಸೀರಿಯಲ್ ನಿಂದ ಕೈಬಿಟ್ಟ ವಿಚಾರ ಮತ್ತು ಬ್ಯಾನ್ ಮಾಡಿರುವ ವಿಷಯ ನಮ್ಮ ಎಲ್ಲ ಗೆಳೆಯರಿಗೆ ಬೇಸರವಾಗಿದೆ. ದೊಡ್ಡವರು ಯಾರಾದ್ರು ಈ‌ ವಿಷಯವನ್ನು ಅಲ್ಲೇ‌ ಮುಗಿಸಬೇಕಿತ್ತು. ಅನಿರುದ್ಧ ಅಷ್ಟು ದೊಡ್ಡ ಮಟ್ಟದಲ್ಲಿ ಬೆಳೆದ್ರು ಸಿಂಪಲ್‌ ಆಗಿಯೇ ಇದ್ದಾರೆ. ಹುಬ್ಬಳ್ಳಿ ಧಾರವಾಡ ಪಾಲಿಕೆಯ ರಾಯಭಾರಿ ಆಗಿಯೂ ಅವರು ಧಾರವಾಡಕ್ಕೆ ಬಂದಿದ್ದರು. ಅಂತಹ ವ್ಯಕ್ತಿಗೆ ಅವಮಾನ ಮಾಡಬೇಡಿ ಎಂದು ಗೆಳೆಯರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]