Tag: ಆರೀಫ್ ಮೊಹಮ್ಮದ್ ಖಾನ್

  • ಮುಸ್ಲಿಂ ಕಾನೂನುಗಳು ಕುರಾನ್‌ಗೆ ವಿರುದ್ಧವಾಗಿವೆ – ರಶ್ದಿ ಮೇಲಿನ ದಾಳಿ ಬಗ್ಗೆ ಕೇರಳ ರಾಜ್ಯಪಾಲ ಹೇಳಿದ್ದಿಷ್ಟು

    ಮುಸ್ಲಿಂ ಕಾನೂನುಗಳು ಕುರಾನ್‌ಗೆ ವಿರುದ್ಧವಾಗಿವೆ – ರಶ್ದಿ ಮೇಲಿನ ದಾಳಿ ಬಗ್ಗೆ ಕೇರಳ ರಾಜ್ಯಪಾಲ ಹೇಳಿದ್ದಿಷ್ಟು

    ತಿರುವನಂತಪುರಂ: ಲೇಖಕ, ಖ್ಯಾತ ಕಾದಂಬರಿಕಾರರೂ ಆಗಿರುವ ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿಯ ಬಗ್ಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದು, ಈ ಕೃತ್ಯಗಳಿಗೆ ಇಸ್ಲಾಮಿಕ್ ಹಣೆಪಟ್ಟಿ ಕಟ್ಟುವುದು ಸೂಕ್ತವಲ್ಲ. ಏಕೆಂದರೆ ಮುಸ್ಲಿಂ ಬಹುತೇಕ ಕಾನೂನುಗಳು ಕುರಾನ್ ಆಧರಿತವಾಗಿಲ್ಲ, ವಿರುದ್ಧವಾಗಿಯೇ ಇವೆ ಎಂದು ಹೇಳಿದ್ದಾರೆ.

    ಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಮೇಲಿನ ಮಾರಣಾಂತಿಕ ದಾಳಿ ಕುರಾನ್‌ನ ಬೋಧನೆಗಳಿಗೆ ವಿರುದ್ಧವಾಗಿದೆ. ಆದರೆ ಇಂತಹ ದಾಳಿಗಳಿಗೆ ಅವಕಾಶ ನೀಡುವ ಕಾನೂನುಗಳಿಗೆ ಮುಸ್ಲಿಂ ಕಾನೂನಿನ ಹಣೆಪಟ್ಟಿ ಕಟ್ಟಲಾಗಿದೆ. ದಿಯೋಬಂದ್ ಹಾಗೂ ನದ್ವಾತುಲ್ ಉಲೇಮಾದಂತಹ ಪ್ರಮುಖ ಮದರಸಾಗಳಲ್ಲಿನ ಪಠ್ಯ ಕ್ರಮದ ಭಾಗವಾಗಿವೆ ಎಂದು ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಇದನ್ನೂ ಓದಿ: ರಶ್ದಿ ಆರೋಗ್ಯದಲ್ಲಿ ಚೇತರಿಕೆ – ವೆಂಟಿಲೇಟರ್‌ನಿಂದ ಬಿಡುಗಡೆ

    ಇಸ್ಲಾಂ ಹೆಸರಿನಲ್ಲಿ ಏನೇ ನಡೆದರೂ ಅದಕ್ಕೆ ಪುಸ್ತಕದ ಅನುಮೋದನೆ ಇರಬೇಕು. ಆದ್ರೆ ಈಗ ಮುಸ್ಲಿಂ ಸಾಮ್ರಾಜ್ಯದ ಅವಧಿಯಲ್ಲಿ ಬಂದಂತಹ ಕಾನೂನಿಗೆ ಅನುಗುಣವಾಗಿ ನಡೆಯುತ್ತಿದೆ. ಇವೆಲ್ಲಾ ದೇವ ವಿಶ್ವಾಸಿಗಳಿಗೆ ವ್ಯರ್ಥ ಹಾಗೂ ನೋಯಿಸುವ ಅಂಶಗಳಿಂದ ದೂರ ಇರುವಂತೆ ಹೇಳುವ ಕುರಾನ್ ಬೋಧನೆಗಳಿಗೆ ವಿರುದ್ಧವಾಗಿಯೇ ಇದೆ. ಇಂತಹ ಕೃತ್ಯಗಳನ್ನು ಇಸ್ಲಾಮಿಕ್ ಎಂದು ಹೇಳುವುದು ಸೂಕ್ತವಲ್ಲ ಎಂಬುದು ನನ್ನ ಭಾವನೆ ಎಂದಿದ್ದಾರೆ. ಇದನ್ನೂ ಓದಿ: ಟಾಯ್ಲೆಟ್‍ನಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಕೂಡಿ ಹಾಕಿ ಕೆಜಿಗಟ್ಟಲೆ ಚಿನ್ನ ಹೊತ್ತೊಯ್ದರು

    ರಶ್ದಿ ಮೇಲಿನ ದಾಳಿಯಂತಹ ಕೃತ್ಯಗಳಿಗೆ ಅನುಮೋದನೆ ನೀಡುವ ಕಾನೂನನ್ನು ಮುಸ್ಲಿಂ ಕಾನೂನು ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಸಮಸ್ಯೆ ಏನಾಗಿದೆ ಎಂದರೆ ಮುಸ್ಲಿಂ ಕಾನೂನು ಎಂದು ಹೇಳುತ್ತಿರುವುದು ಬಹುತೇಕ ಕುರಾನ್ ಆಧರಿತವಾಗಿಲ್ಲ. ಅಂದಿನ ಸರ್ಕಾರಗಳಲ್ಲಿದ್ದ ವ್ಯಕ್ತಿಗಳು ನಿರ್ಮಿಸಿರುವಂತಹ ನಿಬಂಧನೆಗಳಾಗಿವೆ ಎಂದು ರಾಜ್ಯಪಾಲರು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದರಸಾಗಳಲ್ಲಿನ ಬೋಧನೆಯ ಬಗ್ಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಕಳವಳ

    ಮದರಸಾಗಳಲ್ಲಿನ ಬೋಧನೆಯ ಬಗ್ಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಕಳವಳ

    – ಧರ್ಮದ ಹೆಸರಲ್ಲಿ ಸಮುದಾಯ ಭಯಪಡಿಸುವವರು ಜಿಹಾದಿಗಳಲ್ಲ
    – ಮನುಷ್ಯನನ್ನು ಕೊಲ್ಲುವ ಹಕ್ಕಿದೆ ಎಂದು ಮದರಸಾಗಳಲ್ಲಿನ ಪಠ್ಯಕ್ರಮಗಳ ಬೋಧನೆ

    ತಿರುವನಂತಪುರಂ: ಧರ್ಮದ ಹೆಸರಲ್ಲಿ ಸಮುದಾಯ ಭಯಪಡಿಸುವವರು ಜಿಹಾದಿಗಳಲ್ಲ, ಫಸಾದಿಗಳು( ಸಮಾಜಕ್ಕೆ ಉಪದ್ರವ ನೀಡುವವರು) ಎಂದು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

    ಜನರು ಪ್ರಜಾಸತ್ತಾತ್ಮಕ ಸ್ವರೂಪದ ಆಡಳಿತವನ್ನು ಒಪ್ಪಿಕೊಂಡಿದ್ದಾರೆ. ಭಯೋತ್ಪಾದನೆ ಒಂದು ಸಮುದಾಯದ ಮೇಲೆ ಅಧಿಪತ್ಯ ಸಾಧಿಸುವವರಿಗೆ ಧರ್ಮದ ಹೆಸರಲ್ಲಿ ಜನರನ್ನು ಭಯಭೀತಗೊಳಿಸುತ್ತಿರುತ್ತಾರೆ. ಅವರು ಜಿಹಾದಿಗಳಲ್ಲ, ಫಸಾದಿಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ:   ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕೇರಳದ ಖ್ಯಾತ ಸಿನಿಮಾ ನಿರ್ದೇಶಕ ಅಲಿ ಅಕ್ಬರ್

    PAK

    ಮದರಸಾದಲ್ಲಿನ ಬೋಧನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರೀಫ್ ಮೊಹಮದ್ ಖಾನ್, ಇಂಥಹ ಪಠ್ಯಕ್ರಮವು ಯುವ ಮನಸ್ಸುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮದರಸಾಗಳಲ್ಲಿನ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ದೇವರನ್ನು ನಿರಾಕರಿಸುವಂತಿದ್ದರೆ, ಆತನನ್ನು ಕೊಲ್ಲು ಎಂದು ಕಲಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

    ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ದೇವರ ಮೇಲೆ ನಂಬಿಕೆ ಇಲ್ಲದ ಮನುಷ್ಯನನ್ನು ಕೊಲ್ಲುವ ಹಕ್ಕಿದೆ ಎಂದು ಮದರಸಾಗಳಲ್ಲಿನ ಪಠ್ಯಕ್ರಮಗಳು ಬೋಧನೆ ಮಾಡುತ್ತವೆ. ನಾನು ಇವುಗಳ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದೇನೆ ಮತ್ತು ಪತ್ರಗಳನ್ನು ಬರೆದಿದ್ದೇನೆ. ಜೊತೆಗೆ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಆರೀಫ್ ಖಾನ್, ತಾಲಿಬಾನ್ ಅಫ್ಘಾನಿಸ್ತಾನದ ಸ್ವಾತಂತ್ರ್ಯವನ್ನು ಕೊನೆಗೊಳಿಸಿದೆ ಮತ್ತು ಅಲ್ಲಿನ ಜನರಿಗೆ ಇದ್ದ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಎಂದು ತಿಳಿಸಿದ್ದಾರೆ.