Tag: ಆರಾಧ್ಯ

  • ಮಂಗಳೂರಿಗೆ ಆಗಮಿಸಿದ ಐಶ್ವರ್ಯಾ ರೈ ದಂಪತಿ!

    ಮಂಗಳೂರಿಗೆ ಆಗಮಿಸಿದ ಐಶ್ವರ್ಯಾ ರೈ ದಂಪತಿ!

    ಮಂಗಳೂರು: ಪುತ್ರಿ ಆರಾಧ್ಯ ಜೊತೆಗೂಡಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಇಂದು ಮಂಗಳೂರಿಗೆ ಆಗಮಿಸಿದ್ದಾರೆ.

    ಮುಂಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ದಂಪತಿ ಐಶ್ವರ್ಯ ಸಂಬಂಧಿ ಮನೆಗೆ ತೆರಳಿದರು. ಮೂಲತ: ಮಂಗಳೂರಿನ ಬೆಡಗಿಯಾಗಿರುವ ಐಶ್ವರ್ಯ ರೈ ಆಗಾಗ ತಮ್ಮ ಮಂಗಳೂರಿನ ನಿವಾಸಕ್ಕೆ ಬರುತ್ತಿರುತ್ತಾರೆ. ಈ ಬಾರಿ ಅವರ ಚಿಕ್ಕಪ್ಪನ ಶ್ರಾದ್ಧ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ಬಂದಿದ್ದಾರೆ.

    ಬಹುದಿನಗಳ ಮೇಲೆ ಮಂಗಳೂರಿಗೆ ಆಗಮಿಸಿರುವ ಐಶ್ವರ್ಯ ದಂಪತಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು ಸ್ವಾಗತಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಶ್ವರ್ಯಾ ರೈ ಮಗಳು ಆರಾಧ್ಯ ಪ್ರಧಾನಿಯಾಗ್ತಾಳೆ!

    ಐಶ್ವರ್ಯಾ ರೈ ಮಗಳು ಆರಾಧ್ಯ ಪ್ರಧಾನಿಯಾಗ್ತಾಳೆ!

    ಹೈದರಾಬಾದ್: ಬಾಲಿವುಡ್‍ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್ ಅವರ ಏಕೈಕ ಪುತ್ರಿ ಆರಾಧ್ಯ ಮುಂದೊಂದು ದಿನ ಪ್ರಧಾನಿಯಾಗ್ತಾಳೆ ಅಂತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

    ಡಿ. ಜ್ಞಾನೇಶ್ವರ್ ಅವರು ಭವಿಷ್ಯ ನುಡಿದ ಜ್ಯೋತಿಷಿಯಾಗಿದ್ದು, ಆರಾಧ್ಯಾ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಅಂತ ಹೇಳಿದ್ದಾರೆ. ಮುನ್ನೋಟ 2018 ಎನ್ನುವ ವಿಚಾರದ ಬಗ್ಗೆ ಸುದ್ದಿಗೋಷ್ಠಿಯನ್ನು ನಡೆಸಿ ಜ್ಯೋತಿಷಿ ಡಿ. ಜ್ಞಾನೇಶ್ವರ್ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಆರಾಧ್ಯ ತನ್ನ ಹೆಸರನ್ನು ರೋಹಿಣಿ ಎಂದು ಬದಲಿಸಿಕೊಂಡರೆ ಅವಳು ದೇಶದ ಪ್ರಧಾನ ಮಂತ್ರಿ ಆಗಬಹುದು ಎಂದು ಸಲಹೆ ನೀಡಿದ್ರು.

    ನಟರಾದ ಚಿರಂಜೀವಿ ಮತ್ತು ರಜನಿಕಾಂತ್ ಅವರು ರಾಜಕೀಯಕ್ಕೆ ಬರುತ್ತಾರೆ. 2009ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದರು.

    ಅಷ್ಟೆ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧಿಕಾರವನ್ನು ಏರಲಿದ್ದಾರೆ. ಮುಂದೆ ತಮಿಳುನಾಡಿನಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ರಜನಿಕಾಂತ್ ಪಕ್ಷ ವಿಜಯ ಸಾಧಿಸುವುದರೊಂದಿಗೆ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

    2024 ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯ ಯುದ್ಧ ನಡೆಯಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಮಾಲೀಕ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮದುವೆ 2019ರಲ್ಲಿ ನಡೆದರೆ ಉತ್ತಮ ಎನ್ನುವ ಸಲಹೆಯನ್ನು ನೀಡಿದ್ದಾರೆ.

  • ಮಗಳನ್ನು ಟ್ರೋಲ್ ಮಾಡಿದ್ದಕ್ಕೆ ಖಡಕ್ ಉತ್ತರ ನೀಡಿದ ಅಭಿಷೇಕ್ ಬಚ್ಚನ್!

    ಮಗಳನ್ನು ಟ್ರೋಲ್ ಮಾಡಿದ್ದಕ್ಕೆ ಖಡಕ್ ಉತ್ತರ ನೀಡಿದ ಅಭಿಷೇಕ್ ಬಚ್ಚನ್!

    ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಐಶ್ವರ್ಯ ರೈಗೆ ಒಳ್ಳೆಯ ಗಂಡ ಹಾಗೂ ಆರಾಧ್ಯಗೆ ಒಳ್ಳೆಯ ತಂದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ಆರಾಧ್ಯನನ್ನು ಟ್ರೋಲ್ ಮಾಡಿದ್ದಕ್ಕೆ ಅಭಿಷೇಕ್ ಬಚ್ಚನ್ ಖಡಕ್ ಉತ್ತರ ನೀಡಿದ್ದಾರೆ.

    ಇತ್ತೀಚಿಗೆ ನಟಿ ಐಶ್ವರ್ಯ ಪಾಲ್ಗೊಂಡ ಎಲ್ಲಾ ಕಾರ್ಯಕ್ರಮದಲ್ಲಿ ಆರಾಧ್ಯ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಆ ಕಾರ್ಯಕ್ರಮದ ಫೋಟೋಗಳನ್ನು ಐಶ್ವರ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಇದನ್ನು ನೋಡಿ ಶೆರಿನ್ ಬ್ಯಾಟ್ಡಿ ಎಂಬಾಕೆ, ಅಭಿಷೇಕ್ ನಿಮ್ಮ ಮಗಳು ಶಾಲೆಗೆ ಹೋಗುತ್ತಿದ್ದಾಳಾ ಎಂದು ಪ್ರಶ್ನಿಸಿ ಎಂದು ಟ್ವೀಟ್ ಮಾಡಿದ್ದಾರೆ.

    ಅಭಿಷೇಕ್ ನಿಮ್ಮ ಮಗಳು ಸ್ಕೂಲ್ ಗೆ ಹೋಗ್ತಿಲ್ವ? ತಾಯಿಯ ಜೊತೆ ಟ್ರೀಪ್ ಗೆ ಹೋಗಲು ಶಾಲೆ ಅವರು ಹೇಗೆ ಅನುಮತಿ ನೀಡುತ್ತಾರೆ ಎಂದು ನನಗೆ ಆಶ್ಚರ್ಯವಾಗುತ್ತಿದೆ, ಯಾವಾಗ ನೊಡಿದ್ದರು ತನ್ನ ಅಹಂಕಾರದ ತಾಯಿ ಜೊತೆ ಕೈ-ಕೈ ಹಿಡಿದು ತಿರುಗುತ್ತಿರುತ್ತಾಳೆ. ಆಕೆಯ ಬಾಲ್ಯ ಸಾಮಾನ್ಯವಾಗಿಲ್ಲ ಎಂದು ಶೆರಿನ್ ಬ್ಯಾಟ್ಡಿ ಟ್ವೀಟ್ ಮಾಡಿದ್ದರು.

    ಶೆರಿನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್ “ಮೇಡಂ, ನನಗೆ ತಿಳಿದ ಹಾಗೆ ವಾರಾಂತ್ಯದಲ್ಲಿ ಹಲವು ಶಾಲೆಗಳು ಮುಚ್ಚಿರುತ್ತದೆ. ಅವಳು ವಾರದ ದಿನಗಳಲ್ಲಿ ಮಾತ್ರ ಶಾಲೆಗೆ ಹೋಗುತ್ತಾಳೆ. ಬಹುಶಃ ನಿಮ್ಮ ಟ್ವೀಟ್ ನಲ್ಲಿ ನೀವು ನಿಮ್ಮ ಕಾಗುಣಿತವನ್ನು ಪರಿಗಣಿಸಬೇಕು” ಎಂದು ಟ್ವೀಟ್ ಮಾಡಿ ಉತ್ತರ ನೀಡಿದ್ದಾರೆ.

    ಅಭಿಷೇಕ್ ಆ ಟ್ವೀಟ್ ಗೆ ಪ್ರತಿಕ್ರಿಯೆ ನೀಡುತ್ತಿದ್ದಂತೆ ಶೆರಿನ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

  • ತವರೂರು ಮಂಗ್ಳೂರಲ್ಲಿ ಕಾಣಿಸಿಕೊಂಡ ನಟಿ ಐಶ್ವರ್ಯಾ ರೈ!

    ತವರೂರು ಮಂಗ್ಳೂರಲ್ಲಿ ಕಾಣಿಸಿಕೊಂಡ ನಟಿ ಐಶ್ವರ್ಯಾ ರೈ!

    ಮಂಗಳೂರು: ಬಾಲಿವುಡ್ ನಟಿ, ಕರಾವಳಿ ಬೆಡಗಿ ಐಶ್ವರ್ಯಾ ರೈ ಅವರು ತಮ್ಮ ತವರೂರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ.

    ಕೊಡಿಯಾಲ್ ಬೈಲಿನ ಟಿಎಂಎ ಪೈ ಹಾಲ್‍ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಮಗಳು ಆರಾಧ್ಯ, ತಾಯಿ ಬೃಂದಾ ರೈ ಜೊತೆ ಪಾಲ್ಗೊಂಡಿದ್ದರು. ಐಶ್ವರ್ಯಾ ರೈ ತಾಯಿ ಬೃಂದಾ ರೈ ಅವರ ಸೋದರನ ಮಗಳ ಮದುವೆ ಸಮಾರಂಭವಾಗಿತ್ತು.

    ಸಮಾರಂಭದಲ್ಲಿ ತುಳುನಾಡಿನ ಸಂಪ್ರದಾಯದಂತೆ ನಟಿ ಐಶ್ವರ್ಯಾ ಹಿರಿಯರ ಕಾಲಿಗೆರಗಿ ಆಶೀರ್ವಾದ ಪಡೆದ್ರು. ನಟಿ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ರೆ, ಮಗಳು ಆರಾಧ್ಯ ಕೂಡ ಅದೇ ಬಣ್ಣದ ಡ್ರೆಸ್ ನಲ್ಲಿ ಮಿಂಚುತ್ತಿದ್ದಳು.

    ಒಟ್ಟಿನಲ್ಲಿ ಸದ್ದಿಲ್ಲದೇ ತವರೂರಿಗೆ ಆಗಮಿಸಿದ ನಟಿ ಐಶ್ವರ್ಯಾ ಮದುವೆ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದರು.

  • ಮೊಮ್ಮಗಳು ಆರಾಧ್ಯಾ ಗೆ ವಿಶೇಷವಾಗಿ ಶುಭಾಶಯ ತಿಳಿಸಿದ ಬಿಗ್ ಬಿ

    ಮೊಮ್ಮಗಳು ಆರಾಧ್ಯಾ ಗೆ ವಿಶೇಷವಾಗಿ ಶುಭಾಶಯ ತಿಳಿಸಿದ ಬಿಗ್ ಬಿ

    ಮುಂಬೈ: ಅಭಿಷೇಕ್ ಬಚ್ಚನ್-ಐಶ್ವರ್ಯ ರೈ ದಂಪತಿಯ ಏಕೈಕ ಪುತ್ರಿ ಆರಾಧ್ಯ ಇಂದು 6ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾಳೆ. ಈ ಸಂದರ್ಭದಲ್ಲಿ ಅಜ್ಜ ಬಿಗ್ ಬಿ ಅಮಿತಾಬ್ ಬಚ್ಚನ್ ಟ್ವಿಟ್ಟರ್‍ನಲ್ಲಿ ಬಾಲ್ಯದ ಫೋಟೋವೊಂದನ್ನು ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಆರಾಧ್ಯ ಎಂದರೆ ಬಿಗ್ ಬಿ ಅಮಿತಾಬ್‍ಗೆ ತುಂಬಾ ಪ್ರೀತಿ. ಟ್ವಿಟರ್‍ನಲ್ಲಿ ಮೊಮ್ಮಗಳ ಮೇಲಿನ ಪ್ರೀತಿಯನ್ನು ಸುಂದರವಾಗಿ ವ್ಯಕ್ತಪಡಿಸುತ್ತಾ, ಅತ್ಯಂತ ಮಮತೆಯಿಂದ ಶುಭ ಕೋರಿದ್ದಾರೆ. ಅವರು ಟ್ವೀಟ್ ಮಾಡಿರುವ ಪೋಟೋದಲ್ಲಿ ಆರಾಧ್ಯ ತನ್ನ ಬಾಲ್ಯದ ಪೋಟೋವನ್ನು ಹಿಡಿದಿರುವುದು ಮುದ್ದಾಗಿ ಕಾಣುತ್ತಿದೆ. ಅಷ್ಟೇ ಅಲ್ಲದೆ ಪೋಟೋ ಜತೆಗೆ `ಇದು ಆಕೆಯ ಬೆಳವಣಿಗೆಯನ್ನು ನಮಗೆ ನೆನಪಿಸುತ್ತದೆ’ ಎಂದು ಬರೆದಿದ್ದಾರೆ.

    ಆರಾಧ್ಯಗೆ ಶುಭಾಶಯ ತಿಳಿಸಿದ ಎಲ್ಲಾರಿಗೂ ಧನ್ಯವಾದಗಳು. ನಿಮ್ಮ ಶುಭಾಶಯ, ಆಶೀರ್ವಾದ ಜೊತೆಗೆ ಪ್ರೀತಿ ಸದಾ ನಮ್ಮ ಜೊತೆ ಇರಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ  ಅಮ್ಮನ ಜೊತೆ ಇದ್ದ ಫೋಟೋಗಳನ್ನು ಫೋಸ್ಟ್ ಮಾಡಿ ಆನಂದವನ್ನು ಹಂಚಿಕೊಂಡಿದ್ದಾರೆ.

    ಐಶ್ವರ್ಯ ರೈ ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ನನ್ನ ಜಗತ್ತನ್ನು ಬದಲಾಯಿಸಿದ ದಿನವೆಂದರೇ ಅದು ಆರಾಧ್ಯ ಹುಟ್ಟಿದ ದಿನ. ನನ್ನ ಸುತ್ತಲೂ ಎಲ್ಲವೂ ಇದೆ. ಅವಳು ನನ್ನ ಜಗತ್ತನ್ನು ಬದಲಾಯಿಸಿದಳು. ಪ್ರಸ್ತುತ ವಾಸ್ತವದಲ್ಲಿ ನನ್ನ ಮಗಳೇ ಎಲ್ಲಾ ಉಳಿದೆಲ್ಲಾ ನಂತರ ಎಂದು ತಮ್ಮ ಮಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು.

    ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ 2011 ರಲ್ಲಿ ಆರಾಧ್ಯ ಹುಟ್ಟಿದ್ದಳು. ಇಂದಿಗೆ ಆಕೆಗೆ 6 ವರ್ಷ ತುಂಬಿದೆ. ಈ ಸಂದರ್ಭವನ್ನು ಬಚ್ಚನ್ ಕುಟುಂಬುದವರು ಸಂತಸ ಸಂಭ್ರಮದಿಂದ ಆಚರಿಸುತ್ತಿದ್ದಾರೆ.



  • ಇಂದು ನಟಿ ಐಶ್ವರ್ಯಾ ರೈಗೆ 44ರ ಸಂಭ್ರಮ- ಅಪ್ಪ, ಮಗಳಿಂದ ಸರ್ಪ್ರೈಸ್ ಪ್ಲಾನ್

    ಇಂದು ನಟಿ ಐಶ್ವರ್ಯಾ ರೈಗೆ 44ರ ಸಂಭ್ರಮ- ಅಪ್ಪ, ಮಗಳಿಂದ ಸರ್ಪ್ರೈಸ್ ಪ್ಲಾನ್

    ಮುಂಬೈ: ಮಾಜಿ ವಿಶ್ವಸುಂದರಿ, ಬಾಲಿವುಡ್ ತಾರೆಹಾಗೂ ನೀಲಿಕಣ್ಣಿನ ಚೆಲುವೆ ಐಶ್ವರ್ಯಾ ರೈಗೆ ಇಂದು 44ನೇ ಹುಟ್ಟು ಹಬ್ಬದ ಸಂಭ್ರಮ. ಆದ್ರೆ ಈ ಬಾರಿ ರೈಯವರು ತಮ್ಮ ಹುಟ್ಟುಹಬ್ಬವನ್ನು ಅಷ್ಟೊಂದು ಅದ್ಧೂರಿಯಾಗಿ ಆಚರಿಸುತ್ತಿಲ್ಲ.

    ಕಳೆದ ಮಾರ್ಚ್‍ನಲ್ಲಿ ಐಶ್ವರ್ಯಾ ರೈ ಅವರ ತಂದೆ ಕೃಷ್ಣ ರಾಜ್ ರೈ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐಶ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ಮೂಲಗಳ ಪ್ರಕಾರ ಐಶ್ವರ್ಯಾ ರೈ ಇಂದು ತಮ್ಮ ಇಡೀ ದಿನವನ್ನು ಕುಟುಂಬದೊಂದಿಗೆ ಕಳೆಯಲಿದ್ದಾರೆ. ಬೆಳಗ್ಗೆ ಮಗಳು ಆರಾಧ್ಯಳನ್ನು ಶಾಲೆಗೆ ಡ್ರಾಪ್ ಮಾಡಿ ಅಲ್ಲಿಂದ ನೇರವಾಗಿ ಮುಂಬೈನಲ್ಲಿರೋ ಬಾಂದ್ರಾ ಅಪಾರ್ಟ್‍ನಲ್ಲಿ ನೆಲೆಸಿರೋ ತನ್ನ ತಾಯಿಯ ಜೊತೆ ಅಮೂಲ್ಯ ಸಮಯ ಕಳೆಯಲಿದ್ದಾರೆ. ನಂತ್ರ ನಗರದಲ್ಲಿರೋ ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಲಿದ್ದಾರೆ ಅಂತ ಐಶ್ವರ್ಯಾ ಆಪ್ತ ಮೂಲಗಳು ತಿಳಿಸಿವೆ.

    ಇತ್ತ ಪತಿ ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಸೇರಿ ಐಶ್ವರ್ಯಾ ರೈ ನೆಚ್ಚಿನ ಕೇಕ್ ಆರ್ಡರ್ ಮಾಡಿದ್ದಾರೆ. ಇಂದು ಸಂಜೆ ಕುಟುಂಬದೊಂದಿಗೆ ಇದ್ದು ಐಶ್ವರ್ಯಾ ಈ ಕೇಕ್ ಕತ್ತರಿಸಿ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

    ಪ್ರತಿ ವರ್ಷ ಐಶ್ವರ್ಯಾ ರೈ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಕಳೆದ ವರ್ಷ ತಮ್ಮ ಬರ್ತ್ ಡೇ ದಿನದಂದು ಸುಮಾರು 100 ಸೀಳು ತುಟಿಯ ಮಕ್ಕಳ ಸರ್ಜರಿಗೆ ಧನಸಹಾಯ ಮಾಡಿದ್ದರು. ಈ ಬಾರಿ ಅನಾಥ ಮಕ್ಕಳಿಗೆ ಅನ್ನದಾನ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಕರ್ನಾಟಕದ ಮಂಗಳೂರಿನಲ್ಲಿ ತಂದೆ ಕೃಷ್ಣರಾಜ್ ರೈ ಮತ್ತು ತಾಯಿ ಬೃಂದಾ ರೈ ಮಗಳಾಗಿ 1973ರ ನವೆಂಬರ್ 1 ರಂದು ಐಶ್ವರ್ಯಾ ರೈ ಜನಿಸಿದ್ದಾರೆ. ಮುಂಬಯಿ ನಗರದಲ್ಲಿ ಡಿ ಜಿ ರೂಪಾರೆಲ್ ಕಾಲೇಜ್ ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ಓದಿದ ಐಶ್ವರ್ಯಾ ಒಂಬತ್ತನೆಯ ತರಗತಿಯಲ್ಲಿ ಇದ್ದ ಸಂದರ್ಭದಲ್ಲಿಯೇ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ ಆಗಿ ಕೆಲಸ ಮಾಡಿದ್ದರು. ನಂತರ ಅನೇಕ ಜಾಹೀರಾತುಗಳಲ್ಲಿ ನಟಿಸಿದ ಐಶ್ವರ್ಯಾ ಪ್ರಪಂಚಸುಂದರಿ ಪ್ರಶಸ್ತಿಯನ್ನು ಗೆದ್ದ ಮೇಲೆ ಪ್ರಸಿದ್ಧರಾದರು. ಇದರ ನಂತರ ಅನೇಕ ಚಿತ್ರಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದಾರೆ.

    2007ರಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹದ ನಟಿ ಐಶ್ವರ್ಯಾ ರೈ 2011ರ ನವೆಂಬರ್ 16ರಂದು ಆರಾಧ್ಯಳಿಗೆ ಜನ್ಮ ನೀಡಿದ್ದರು.

    https://www.instagram.com/p/Ba79sh6AJKA/?taken-by=manishmalhotra05

    https://www.instagram.com/p/Ba7E0mgAz0x/?taken-by=karanjohar