Tag: ಆರಾಧ್ಯ ಬಚ್ಚನ್

  • ಡಿವೋರ್ಸ್ ವದಂತಿ ನಡುವೆ ಮಗಳ ಜೊತೆ ನ್ಯೂಯಾರ್ಕ್ ವೆಕೇಷನ್ ಮುಗಿಸಿ ಬಂದ ಐಶ್ವರ್ಯಾ ರೈ

    ಡಿವೋರ್ಸ್ ವದಂತಿ ನಡುವೆ ಮಗಳ ಜೊತೆ ನ್ಯೂಯಾರ್ಕ್ ವೆಕೇಷನ್ ಮುಗಿಸಿ ಬಂದ ಐಶ್ವರ್ಯಾ ರೈ

    ಬಾಲಿವುಡ್ ನಟಿ ಐಶ್ವರ್ಯಾ ರೈ(Aishwarya Rai) ಆಗಾಗ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಡಿವೋರ್ಸ್ (Divorce) ವದಂತಿ ನಡುವೆ ಮಗಳ ಜೊತೆ ನಟಿ ನ್ಯೂಯಾರ್ಕ್ ವೆಕೇಷನ್ ಮುಗಿಸಿ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪುತ್ರಿ ಆರಾಧ್ಯಾ ಜೊತೆ ನಟಿ ಎಂಟ್ರಿ ಕೊಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ನ್ಯೂಯಾರ್ಕ್ ವೆಕೇಷನ್‌ಗೆ ಮಗಳ ಜೊತೆ ಐಶ್ವರ್ಯಾ ರೈ ತೆರಳಿದ್ದರು. ಇಂದು (ಆ.1) ಪುತ್ರಿಯೊಂದಿಗೆ ಭಾರತಕ್ಕೆ ಮರಳಿದ್ದಾರೆ. ನಟಿ ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಆರಾಧ್ಯಾ ನೇರಳೆ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಇಬ್ಬರೂ ನಗು ನಗುತ್ತಲೇ ಕ್ಯಾಮೆರಾಗೆ ಸ್ಮೈಲ್ ಮಾಡಿದ್ದಾರೆ. ಈ ವೇಳೆ, ಇವರ ಜೊತೆ ಅಭಿಷೇಕ್ ಬಚ್ಚನ್ (Abhishek Bachchan) ಇಲ್ಲದೇ ಇರೋದು ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.

    ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಯಲ್ಲಿ ಅಭಿಷೇಕ್ ಬಚ್ಚನ್ ಕುಟುಂಬದ ಜೊತೆ ನಟಿ ಕಾಣಿಸಿಕೊಳ್ಳದೆ ಮಗಳ ಜೊತೆ ಬಂದು ಕ್ಯಾಮೆರಾ ಪೋಸ್ ನೀಡಿದ್ದರು. ಅಂದಿನಿಂದಲೇ ಇಬ್ಬರ ಡಿವೋರ್ಸ್ ಬಗ್ಗೆ ಗುಸು ಗುಸು ಶುರುವಾಗಿತ್ತು. ಇದುವರೆಗೂ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಇದನ್ನೂ ಓದಿ:ಬೆಡ್‌ರೂಮ್ ಫೋಟೋ ಹಂಚಿಕೊಂಡ ನಮ್ರತಾ ಗೌಡ

    ಅಂದಹಾಗೆ, ಕಡೆಯದಾಗಿ ನಟಿ, ಪೊನ್ನಿಯನ್ ಸೆಲ್ವನ್ 1, ಪೊನ್ನಿಯನ್ ಸೆಲ್ವನ್ 2 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಈ ಎರಡು ಪಾರ್ಟ್ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಹೊಸ ಕಥೆಗಳನ್ನು ನಟಿ ಕೇಳ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಐಶ್ವರ್ಯಾ ಅಪ್‌ಡೇಟ್ ಕೊಡ್ತಾರಾ ಕಾದುನೋಡಬೇಕಿದೆ.

  • ಕೋರ್ಟ್ ಮೆಟ್ಟಿಲು ಏರಿದ್ದ ಅಮಿತಾಭ್ ಮೊಮ್ಮಗಳಿಗೆ ಗೆಲುವು

    ಕೋರ್ಟ್ ಮೆಟ್ಟಿಲು ಏರಿದ್ದ ಅಮಿತಾಭ್ ಮೊಮ್ಮಗಳಿಗೆ ಗೆಲುವು

    ಮ್ಮ ಆರೋಗ್ಯದ ಕುರಿತಾಗಿ ಹಲವಾರು ಯೂಟ್ಯೂಬ್ ಚಾನೆಲ್ ಗಳು ತಪ್ಪಾದ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಆರಾಧ್ಯ ಅಸ್ವಸ್ಥ, ಆರಾಧ್ಯ (Aaradhya Bachchan) ಇನ್ನಿಲ್ಲ ರೀತಿಯ ವರದಿಗಳನ್ನು ಪ್ರಸಾರ ಮಾಡುವ ಮೂಲಕ ತಪ್ಪಾದ ಮಾಹಿತಿಯನ್ನು ನೀಡುತ್ತಿವೆ. ಇಂತಹ ಯೂಟ್ಯೂಬ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೆಹಲಿ (Delhi) ಹೈಕೋರ್ಟಿಗೆ (Court) ಆರಾಧ್ಯ ಬಚ್ಚನ್ ಮೊರೆ ಹೋಗಿದ್ದರು. ಈ ಪ್ರಕರಣವನ್ನು ಕೋರ್ಟ್ ಗಂಭೀರವಾಗಿ ತಗೆದುಕೊಂಡಿದೆ.

    ಅಮಿತಾಭ್ (Amitabh) ಮೊಮ್ಮಗಳು ನೀಡಿದ್ದ ದೂರಿನನ್ವಯ ದೆಹಲಿ ಹೈಕೋರ್ಟ್ ಹಲವಾರು ಯೂಟ್ಯೂಬ್ ಚಾಲನೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಆರಾಧ್ಯ ಕುರಿತಾಗಿ ತಪ್ಪಾದ ಮಾಹಿತಿ ಹಂಚಿಕೊಂಡ ಯೂಟ್ಯೂಬ್ ವರದಿಗಳನ್ನು ಗೂಗಲ್ ನಿಂದ ತೆಗೆದು ಹಾಕಬೇಕು ಎಂದು ಗೂಗಲ್ ಗೆ ನಿರ್ದೇಶಿಸಿದೆ. ಪ್ರತಿಯೊಂದು ಮಗುವಿನ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ನಟ ಅಭಿಷೇಕ್- ಐಶ್ವರ್ಯ ರೈ (Aishwarya Rai) ಪುತ್ರಿ ಆರಾಧ್ಯಗೆ (Aradhya) ಈಗಿನ್ನೂ 11 ವರ್ಷ. ಬಚ್ಚನ್ ಕುಟುಂಬದ ಕುಡಿ ಎನ್ನುವ ಕಾರಣಕ್ಕೆ ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ಆರಾಧ್ಯ ಹೆಸರಲ್ಲಿ ಅನೇಕ ಫ್ಯಾನ್‌ಪೇಜ್‌ಗಳು ಸಿದ್ಧಗೊಂಡಿವೆ. ಇದರ ಜೊತೆ ಕೆಲವು ಯೂಟ್ಯೂಬ್ ಚಾನೆಲ್‌ಗಳು ವೀವ್ಸ್ ಗಿಟ್ಟಿಸಿಕೊಳ್ಳಲು ಆರಾಧ್ಯ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದವು. ಅವುಗಳ ವಿರುದ್ಧ ಆರಾಧ್ಯ ಕ್ರಮಕ್ಕೆ ಮುಂದಾಗಿದ್ದರು.

    ದೆಹಲಿ ಹೈಕೋರ್ಟ್‌ನಲ್ಲಿ ತಮ್ಮ ಬಗ್ಗೆ ಈ ರೀತಿ ಸುದ್ದಿ ಪ್ರಕಟ ಆಗದಂತೆ ತಡೆ ನೀಡಬೇಕು ಎಂದು ಆರಾಧ್ಯ ಮನವಿ ಮಾಡಿದ್ದಳು. ಈ ಪ್ರಕರಣದ ವಿಚಾರಣೆ ಇಂದು  ನಡೆಯಿತು. ಸೆಲೆಬ್ರಿಟಿಗಳ ಬಗ್ಗೆ ಅನೇಕ ವದಂತಿಗಳ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ, ಅವರ ಮಕ್ಕಳ ಬಗ್ಗೆ ಈ ರೀತಿ ಸುಳ್ಳು ಸುದ್ದಿ ಹುಟ್ಟಿಕೊಂಡಾಗ ಅದನ್ನು ಒಪ್ಪಿಕೊಳ್ಳೋಕೆ ಬಚ್ಚನ್ ಕುಟುಂಬಕ್ಕೆ ಹಾಗೂ ಆರಾಧ್ಯಗೆ ಸಾಧ್ಯವಾಗಿಲ್ಲ. ಇಲ್ಲಸಲ್ಲದ ಸುಳ್ಳು ಸುದ್ದಿ ಬಿತ್ತರಿಸುವ ಖಾಸಗಿ ಯೂಟ್ಯೂಬರ್‌ಗಳಿಗೆ ಇದು ಎಚ್ಚರಿಕೆಯ ಗಂಟೆಯಾಗಲಿ ಎನ್ನುವ ಕಾರಣಕ್ಕೆ ಕೋರ್ಟ್ ಮೆಟ್ಟಿಲು ಏರಿದ್ದರು.

  • ಪುತ್ರಿ ಆರಾಧ್ಯಗೆ ಲಿಪ್ ಕಿಸ್ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ ಐಶ್ವರ್ಯಾ ರೈ: ನೆಟ್ಟಿಗರ ಟ್ರೋಲ್

    ಪುತ್ರಿ ಆರಾಧ್ಯಗೆ ಲಿಪ್ ಕಿಸ್ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ ಐಶ್ವರ್ಯಾ ರೈ: ನೆಟ್ಟಿಗರ ಟ್ರೋಲ್

    ಬಿಗ್ ಬಿ ಸೊಸೆ, ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್(Aishwarya Rai Bachchan) ಮತ್ತು ನಟ ಅಭಿಷೇಕ್ ಬಚ್ಚನ್ ಏಕೈಕ ಪುತ್ರಿ ಆರಾಧ್ಯಾ ಬಚ್ಚನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 11ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಆರಾಧ್ಯಾಳಿಗೆ ಅಮ್ಮ ಐಶ್ವರ್ಯಾ ರೈ ಪ್ರೀತಿಯಿಂದ ಸಿಹಿ ಮುತ್ತು ನೀಡಿ ವಿಶ್ ಮಾಡಿದ್ದಾರೆ. ಮಗಳಿಗೆ ಲಿಪ್‌ಕಿಸ್ ಮಾಡಿರುವ ಐಶ್ವರ್ಯಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಶ್ವರ್ಯಾ ಮಗಳಿಗೆ ಕಿಸ್ ಮಾಡಿರುವುದಕ್ಕೆ ಕೆಲವರು ತಕರಾರು ಮಾಡಿದ್ದಾರೆ.

    `ಪೊನ್ನಿಯನ್ ಸೆಲ್ವನ್'(Ponniyan Selvan) ಚಿತ್ರದ ಸಕ್ಸಸ್ ನಂತರ ಮತ್ತೆ ಸಿನಿಮಾಗಳಲ್ಲಿ ಐಶ್ವರ್ಯಾ ಆಕ್ಟೀವ್ ಆಗಿದ್ದಾರೆ. ಇನ್ನೂ ಇಂದು ಐಶ್ವರ್ಯಾ ಮಗಳು ಆರಾಧ್ಯ ಹುಟ್ಟುಹಬ್ಬವಾಗಿದ್ದು, ವಿಶೇಷವಾಗಿ ನಟಿ ಶುಭಕೋರಿದ್ದಾರೆ. ಈಗ ನಟಿ ಶುಭಕೋರಿರುವ ರೀತಿಗೆ ನೆಟ್ಟಿಗರಿಂದ ತರಾಟೆ ಶುರುವಾಗಿದೆ. ಮಗಳು ಆರಾಧ್ಯಳಿಗೆ ಮುತ್ತು ನೀಡುತ್ತಿರುವ ಫೋಟೋ ಶೇರ್ ಮಾಡಿ, ನನ್ನ ಪ್ರೀತಿ, ನನ್ನ ಜೀವ, ತುಂಬಾ ಪ್ರೀತಿಸುತ್ತೀನಿ, ನನ್ನ ಆರಾಧ್ಯ ಎಂದು ಬರೆದುಕೊಂಡಿದ್ದಾರೆ. ತಾಯಿ-ಮಗಳ ಮುದ್ದಾದ ಫೋಟೋಗೆ ಅಭಿಮಾನಿಗಳು ಲೈಕ್ಸ್ ಮತ್ತು ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಅತಿಯಾಯಿತು, ತುಟಿಗೆ ಕಿಸ್ ಮಾಡುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಬಿಗ್‌ ಬಾಸ್‌ ಮನೆಯಲ್ಲಿ ಮತ್ತೆ ರೂಪೇಶ್ ರಾಜಣ್ಣ ಕಿರಿಕ್

    ಅನೇಕರು ಹುಟ್ಟುಹಬ್ಬ ಶುಭಾಶಯಗಳು ಮಿನಿ ಐಶ್ ಎಂದು ಹೇಳಿದ್ದಾರೆ. ಮತ್ತೋರ್ವ ಆಭಿಮಾನಿ ಕಾಮೆಂಟ್ ಮಾಡಿ ಸುಂದರವಾದ ಕ್ಷಣವನ್ನು ಕ್ಯಾಪ್ಚರ್ ಮಾಡಲಾಗಿದೆ ಎಂದು ಹೇಳಿದ್ದಾರೆ. ತಾಯಿ-ಮಗಳ ಅದ್ಭುತವಾದ ಫೋಟೋ ಎಂದು ವ್ಯಕ್ತಿಯೊಬ್ಬ ಪ್ರೀತಿ ವ್ಯಕ್ತಪಡಿಸಿದ್ದಾರೆ.

    ನಟಿ ಐಶ್ವರ್ಯಾ ಸದಾ ಮಗಳ ಜೊತೆಯೇ ಇರುತ್ತಾರೆ. ಕೈ ಹಿಡಿದುಕೊಂಡೆ ಕರೆದುಕೊಂಡು ಹೋಗುತ್ತಾರೆ. ಈ ಎಲ್ಲಾ ವಿಚಾರಗಳು ಟ್ರೋಲಿಗರ ಬಾಯಿಗೆ ಆಹಾರವಾಗಿತ್ತು. ಈಗ ಮಗಳಿಗೆ ಲಿಪ್ ಕಿಸ್ ಮಾಡಿರೋದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?

    ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?

    ಮುಂಬೈ: ಸ್ಟಾರ್ ಕಪಲ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಬಚ್ಚನ್ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಅದ್ಧೂರಿಯಾಗಿ ಆಚರಿಸುತ್ತಿದ್ದು, ಒಂದು ದಿನಕ್ಕೆ ಈ ವಿಲ್ಲಾದ ಬೆಲೆ 10 ಲಕ್ಷ ರೂ. ಆಗಿದೆ.

     

    View this post on Instagram

     

    A post shared by Amilla Maldives (@amillafushi)

    ಅಭಿ ಮತ್ತು ಐಶು ಆರಾಧ್ಯ 10ನೇ ವರ್ಷದ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಲು ಮಾಲ್ಡೀವ್ಸ್ ಗೆ ತೆರಳಿದ್ದು, ಈ ದಂಪತಿ ಐಷಾರಾಮಿ ರೆಸಾರ್ಟ್‍ನ ಅದ್ಧೂರಿ ವಿಲ್ಲಾದಲ್ಲಿ ತಂಗಿದ್ದಾರೆ. ಈ ವಿಲ್ಲಾದಲ್ಲಿ ಒಂದು ದಿನ ವಾಸವಿರಬೇಕು ಎಂದರೆ 76,000 ರೂ. ಕಟ್ಟಬೇಕು. ಅದರಲ್ಲಿಯೂ ಈ ಜೋಡಿ ವಾಸಿಸುತ್ತಿರುವ ಅದ್ಧೂರಿ ರೂಂಗೆ ದಿನಕ್ಕೆ 10 ಲಕ್ಷ ರೂ. ಆಗುತ್ತೆ. ಇದನ್ನೂ ಓದಿ: ಇಡಿ, ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷ ವಿಸ್ತರಿಸಿದ ಕೇಂದ್ರ

    ಅಭಿ ಮತ್ತು ಐಶು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೆರಗುಗೊಳಿಸುವ ವಿಲ್ಲಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಫುಲ್ ಎಕ್ಸೈಟಿಂಗ್ ಆಗಿದ್ದಾರೆ. ಅಮಿತಾಭ್ ಬಚ್ಚನ್ ‘ಏ ಗೇಮ್ ಶೋ ಕೌನ್ ಬನೇಗಾ ಕರೋಡ್ ಪತಿ-13’ರ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವುದರಿಂದ, ತಮ್ಮ ಅಜ್ಜನನ್ನು ಬಿಟ್ಟು ಈ ಬಾರಿ ಆರಾಧ್ಯ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ.

    ಈ ವಿಶೇಷ ರೆಸಾರ್ಟ್‍ನಲ್ಲಿ ವಿಲ್ಲಾಗಳನ್ನು ರೀಫ್ ವಾಟರ್ ಪೂಲ್ ವಿಲ್ಲಾ, ಸನ್‍ಸೆಟ್ ವಾಟರ್ ಪೂಲ್ ವಿಲ್ಲಾ, ಲಗೂನ್ ವಾಟರ್ ಪೂಲ್ ವಿಲ್ಲಾ ಮತ್ತು ಮಲ್ಟಿ-ಬೆಡ್‍ರೂಂ ರೆಸಿಡೆನ್ಸಸ್ ಎಂದು ವರ್ಗೀಕರಿಸಲಾಗಿದೆ. ಈ ವಿಲ್ಲಾಗಳಲ್ಲಿ ಪ್ರತಿಯೊಬ್ಬರಿಗೂ ಖಾಸಗಿ ಪೂಲ್‍ಗಳಿವೆ. ಇದನ್ನೂ ಓದಿ: ಬೃಂದಾವನದಲ್ಲಿ ಅನುಮತಿ ಇಲ್ಲದೇ ರಾತ್ರಿ ಶೂಟಿಂಗ್ – ಯುಟ್ಯೂಬ್ ಅಡ್ಮಿನ್ ಅರೆಸ್ಟ್

  • ಐಶ್ವರ್ಯಾ ರೈ, ಪುತ್ರಿ ಆರಾಧ್ಯ ಬಚ್ಚನ್‌ಗೆ ಕೊರೊನಾ, ಆಸ್ಪತ್ರೆಗೆ ದಾಖಲು

    ಐಶ್ವರ್ಯಾ ರೈ, ಪುತ್ರಿ ಆರಾಧ್ಯ ಬಚ್ಚನ್‌ಗೆ ಕೊರೊನಾ, ಆಸ್ಪತ್ರೆಗೆ ದಾಖಲು

    ಮುಂಬೈ: ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಪುತ್ರಿ ಆರಾಧ್ಯ ಬಚ್ಚನ್ ಅವರಿಗೆ ಕೊರೊನಾ ಸೋಂಕು ತಗಲಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕಳೆದ ಆರು ದಿನಗಳ ಹಿಂದೆ ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್‍ಗೆ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದಾದ ನಂತರ ನಟಿ ಐಶ್ವರ್ಯಾ ರೈ ಅವರಿಗೂ ಮತ್ತು ಪುತ್ರಿ ಆರಾಧ್ಯ ಬಚ್ಚನ್ ಅವರಿಗೂ ಅಲ್ಪ ಮಟ್ಟದ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡಿದ್ದವು. ಆದರೆ ಜಯಾ ಬಚ್ಚನ್ ಅವರಿಗೆ ಕೊರೊನಾ ವರದಿ ನೆಗೆಟಿವ್ ಬಂದಿತ್ತು.

    ಕೊರೊನಾ ವೈರಸ್ ಗುಣಲಕ್ಷಣ ಕಾಣಿಸಿಕೊಂಡ ತಕ್ಷಣ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಪ ಮಟ್ಟದ ಗುಣಲಕ್ಷಣಗಳು ಕಂಡು ಬಂದಿದ್ದ ಐಶ್ವರ್ಯಾ ಮತ್ತು ಆರಾಧ್ಯ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಅವರು ಕೂಡ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಶ್ಚರ್ಯಾ ಮತ್ತು ಆರಾಧ್ಯ ಆಸ್ಪತ್ರೆಗೆ ದಾಖಲಾಗಿದ್ದು, ನಾವು ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಖಚಿತ ಪಡಿಸಿದೆ.

    ಜುಲೈ 11ರಂದು ಅಮಿತಾಬ್ ಬಚ್ಚನ್ ಅವರಿಗೆ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಕುರಿತು ಅಂದು ಟ್ವೀಟ್ ಮಾಡಿದ್ದ ಬಿಗ್‍ಬಿ, ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದೇನೆ. ನಮ್ಮ ಕುಟುಂಬದವರು ಹಾಗೂ ಸಿಬ್ಬಂದಿಯನ್ನು ಸಹ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದರು.

  • ಐಶ್ವರ್ಯಾ ಪುತ್ರಿಯ ಡ್ಯಾನ್ಸ್-ವೈರಲ್ ಆಯ್ತು ವಿಡಿಯೋ

    ಐಶ್ವರ್ಯಾ ಪುತ್ರಿಯ ಡ್ಯಾನ್ಸ್-ವೈರಲ್ ಆಯ್ತು ವಿಡಿಯೋ

    ಮುಂಬೈ: ಬಾಲಿವುಡ್ ಕ್ಯೂಟ್ ಜೋಡಿ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯಳ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಶನಿವಾರ ಕಾರ್ಯಕ್ರಮದಲ್ಲಿ ಆರಾಧ್ಯ ವೃತ್ತಿಪರ ಡ್ಯಾನ್ಸರ್ ರೀತಿಯಲ್ಲಿ ಹೆಜ್ಜೆ ಹಾಕುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾಳೆ. 7 ವರ್ಷದ ಆರಾಧ್ಯ ಸಮ್ಮರ್ ಫಂಕ್-2019 ಕಾರ್ಯಕ್ರಮದಲ್ಲಿ ಜೋಯಾ ಆಖ್ತರ್ ಅವರ ಗಲ್ಲಿ ಬಾಯ್ ಚಿತ್ರದ ಹಾಡಿಗೆ ಗಲೀ ಮೇ ಹಾಡಿಹೆ ಸಖತ್ ಸ್ಟೆಪ್ಸ್ ಹಾಕಿದ್ದಾಳೆ.

    ಜಯಾ ಬಚ್ಚನ್, ವೃಂದಾ ರೈ ಮತ್ತು ಐಶ್ವರ್ಯಾ ರೈ ಕಾರ್ಯಕ್ರಮಕ್ಕೆ ಆಗಮಿಸಿ ಆರಾಧ್ಯಳ ಡ್ಯಾನ್ಸ್ ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು, 1 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, 9 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.

    https://www.instagram.com/p/BxnmhXoHrx8/

  • ಕ್ಯಾಮೆರಾಗೆ ಪೋಸ್ ಕೊಟ್ಟು ‘ಸಾಕು ಮಾಡಿ’ ಎಂದ ಆರಾಧ್ಯ: ವಿಡಿಯೋ ವೈರಲ್

    ಕ್ಯಾಮೆರಾಗೆ ಪೋಸ್ ಕೊಟ್ಟು ‘ಸಾಕು ಮಾಡಿ’ ಎಂದ ಆರಾಧ್ಯ: ವಿಡಿಯೋ ವೈರಲ್

    ಮುಂಬೈ: ಆರಾಧ್ಯ ಬಚ್ಚನ್ ತನ್ನ ತಂದೆ ಅಭಿಷೇಕ್ ಬಚ್ಚನ್ ಹಾಗೂ ತಾಯಿ ಐಶ್ವರ್ಯ ರೈ ಬಚ್ಚನ್ ಜೊತೆ ಭಾನುವಾರ ಉದ್ಯಮಿ ಮುಕೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಆರಾಧ್ಯ ಕ್ಯಾಮೆರಾಗೆ ಪೋಸ್ ಕೊಟ್ಟು ಸಾಕು ಮಾಡಿ ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ.

    ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಮದುವೆಗೆ ಕಾರ್ಯಕ್ರಮಕ್ಕೆ ಹಲವಾರು ಬಾಲಿವುಡ್ ಕಲಾವಿದರು ಆಗಮಿಸಿದ್ದರು. ಆರಾಧ್ಯ ಕೂಡ ತನ್ನ ತಂದೆ – ತಾಯಿ ಜೊತೆ ಆಗಮಿಸಿದ್ದಾಗ ಕ್ಯಾಮೆರಾಗಳಿಗೆ ಪೋಸ್ ನೀಡಲು ಅಲ್ಲಿದ ಛಾಯಾಗ್ರಾಹಕರು ಹೇಳಿದ್ದಾರೆ.

    ಆರಾಧ್ಯ ತನ್ನ ತಂದೆ-ತಾಯಿ ಜೊತೆ ಫೋಟೋಗೆ ಪೋಸ್ ಕೊಡುವಾಗ ತನ್ನ ಕಣ್ಣನ್ನು ತಿರುಗಿಸುತ್ತಿದ್ದಳು. ಅಲ್ಲದೇ ಕ್ಯಾಮೆರಾಮೆನ್‍ಗಳು ತನ್ನತ್ತ ನೋಡಲು ಆಕೆಗೆ ಹೇಳಿದ್ದಾಗ ಆರಾಧ್ಯ ಒಂದೇ ಸಮ್ಮನೇ ಎಡಗಡೆ ಹಾಗೂ ಬಲಗಡೆ ತಿರುಗುತ್ತಾ ತುಂಟಾಟ ಮಾಡುತ್ತಾ ಫೋಟೋಗೆ ಪೋಸ್ ನೀಡಿದ್ದಾಳೆ.

    ಫೋಟೋ ಪೋಸ್ ನೀಡಿದ ಬಳಿಕ ಆರಾಧ್ಯ ಅಭಿಷೇಕ್ ಹಾಗೂ ಐಶ್ವರ್ಯ ರೈ ಬಚ್ಚನ್ ಜೊತೆ ಹೋಗುವಾಗ ಸಾಕು ಮಾಡಿ ಎಂದು ಜೋರಾಗಿ ಕ್ಯಾಮೆರಾಮೆನ್‍ಗಳಿಗೆ ಹೇಳಿದ್ದಾಳೆ. ಈ ವೇಳೆ ಅಭಿಷೇಕ್, ಐಶ್ವರ್ಯ ಹಾಗೂ ಅಲ್ಲಿದ್ದ ಛಾಯಾಗ್ರಾಹಕರು ಜೋರಾಗಿ ನಕ್ಕಿದ್ದಾರೆ. ಆರಾಧ್ಯ ಸಾಕು ಮಾಡಿ ಎಂದು ಹೇಳಿದ ವಿಡಿಯೋ ಈಗ ವೈರಲ್ ಆಗಿದೆ.

    ಆಕಾಶ್ ಅಂಬಾನಿ ಹಾಗೂ ಶ್ಲೋಕ ಮೆಹ್ತಾ ಭಾನುವಾರ ಮುಂಬೈನ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಗೆ ಬಾಲಿವುಡ್ ಕಲಾವಿದರು ಸೇರಿದಂತೆ ಉದ್ಯಮಿಗಳು, ರಾಜಕೀಯ ವ್ಯಕ್ತಿಗಳು ಹಾಗೂ ಕ್ರೀಡಾ ಆಟಗಾರರು ಆಗಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv