Tag: ಆರಾಧನಾ ರಾಮ್

  • ಜೊತೆಯಾಗಿ ಕಾಣಿಸಿಕೊಂಡ್ರು ಉಪೇಂದ್ರ, ಶಿಲ್ಪಾ ಶೆಟ್ಟಿ, ಧ್ರುವ, ಮಾಲಾಶ್ರೀ- ಏನು ಸಮಾಚಾರ?

    ಜೊತೆಯಾಗಿ ಕಾಣಿಸಿಕೊಂಡ್ರು ಉಪೇಂದ್ರ, ಶಿಲ್ಪಾ ಶೆಟ್ಟಿ, ಧ್ರುವ, ಮಾಲಾಶ್ರೀ- ಏನು ಸಮಾಚಾರ?

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಅವರ ವಿಶೇಷ ಫೋಟೋವೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಧ್ರುವ, ರಿಯಲ್ ಸ್ಟಾರ್ ಉಪೇಂದ್ರ, ಶಿಲ್ಪಾ ಶೆಟ್ಟಿ, ಮಾಲಾಶ್ರೀ (Malashree) ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಈ ತಾರೆಯರ ಸಮಾಗಮದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

    ಧ್ರುವ ಸರ್ಜಾ ನಟನೆಯ ‘ಕೆಡಿ’ (KD Film) ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ನಟಿಸುತ್ತಿದ್ದಾರೆ. ಇದು ಹಳೆಯ ಸಮಾಚಾರ ಆದರೆ ಇವರ ಜೊತೆ ಉಪೇಂದ್ರ ದಂಪತಿ, ಮಾಲಾಶ್ರೀ ಮತ್ತು ‘ಕಾಟೇರ’ ಸುಂದರಿ ಆರಾಧನಾ ಕೂಡ ಕಾಣಿಸಿಕೊಂಡಿದ್ದಾರೆ. ಕೆಡಿ ಚಿತ್ರದ ನಿರ್ಮಾಪಕರು ಕೂಡ ಈ ವೇಳೆ ಹಾಜರಿ ಹಾಕಿದ್ದಾರೆ. ಹಾಗಾಗಿ ಯಾವ ವಿಚಾರವಾಗಿ ಎಲ್ಲರೂ ಒಟ್ಟಾಗಿದ್ದಾರೆ ಎಂದು ಈಗ ಚರ್ಚೆ ಶುರುವಾಗಿದೆ.

    ಎಲ್ಲರೂ ಜೊತೆಯಾಗಿ ಹೊಸ ಸಿನಿಮಾ ಮಾಡ್ತಿದ್ದಾರಾ? ಅಥವಾ ಕೆಡಿ ಚಿತ್ರದ ಪಾರ್ಟಿಯಲ್ಲಿ ಜೊತೆಯಾದ್ರಾ ಎಂಬುದರ ಬಗ್ಗೆ ಕ್ಲ್ಯಾರಿಟಿ ಇಲ್ಲ. ಇದರ ಜೊತೆಗೆ ಧ್ರುವ ಸರ್ಜಾ ಪತ್ನಿ ಪ್ರೇರಣಾ ಕೂಡ ಶಿಲ್ಪಾ ಶೆಟ್ಟಿ ಜೊತೆಗಿನ ವಿಶೇಷ ಫೋಟೋ ಶೇರ್ ಮಾಡಿದ್ದಾರೆ. ಇದೀಗ ಸ್ಟಾರ್ ಕಲಾವಿದರು ಒಟ್ಟಾಗಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:ತಮಿಳಿನತ್ತ ರೂಪೇಶ್ ಶೆಟ್ಟಿ- ಯೋಗಿ ಬಾಬು ಜೊತೆ ‘ಬಿಗ್ ಬಾಸ್’ ವಿನ್ನರ್


    ಅಂದಹಾಗೆ, ‘ಕೆಡಿ’ ಚಿತ್ರಕ್ಕೆ ಡೈರೆಕ್ಟರ್ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ರೀಷ್ಮಾ ನಾಣಯ್ಯ, ರಮೇಶ್ ಅರವಿಂದ್, ರವಿಚಂದ್ರನ್, ಶಿಲ್ಪಾ ಶೆಟ್ಟಿ, ಸಂಜಯ್ ದತ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯದಲ್ಲೇ ರಿಲೀಸ್ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

  • Katera: ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು, ಕನ್ನಡ ಭಾಷೆಗೆ ಧಕ್ಕೆ ಬರಬಾರದು- ದರ್ಶನ್

    Katera: ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು, ಕನ್ನಡ ಭಾಷೆಗೆ ಧಕ್ಕೆ ಬರಬಾರದು- ದರ್ಶನ್

    ಡಿಬಾಸ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಕೂಡ ಸಕ್ಸಸ್ ಮೀಟ್ ಸಂಭ್ರಮವನ್ನು ಆಚರಿಸಿದೆ. ಈ ವೇಳೆ, ಮಾಧ್ಯಮಕ್ಕೆ ದರ್ಶನ್ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಸಿನಿಮಾ ಸಕ್ಸಸ್ ಕಂಡಿರೋ ಬೆನ್ನಲ್ಲೇ ಮಾಧ್ಯಮದ ಜೊತೆ ದರ್ಶನ್ ಮಾತನಾಡಿದ್ದಾರೆ. ಜಾತಿ ಒಳಗೊಂಡಂತೆ ಸಿನಿಮಾದ ಒಳಗೆ ಮತ್ತಷ್ಟು ಭಿನ್ನ ಕಥೆ ಇದೆ. ಕಥೆ ಸೆಲೆಕ್ಷನ್ ಹೇಗೆ ಮಾಡಿದ್ರಿ ಎಂದು ದರ್ಶನ್‌ಗೆ (Darshan) ಕೇಳಲಾಯಿತು.

    ‘ಕಾಟೇರ’ (Katera Film) ಕಥೆ ಕೇಳುವಾಗ ಚಂದಮಾಮನ ಕಥೆ ಕೇಳಿದಂತೆ ಕೇಳಿದ್ದೀನಿ. ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಇದೆ. ಇವತ್ತು ಜನ ಮಾತನಾಡೋದೇನು? ಗಂಡಸು ಬೆವರು ಸುರಿಸಬೇಕು. ಜೊಲ್ಲು ಸುರಿಸಬಾರದು ಅಂತಾರೆ. ಇದರಲ್ಲಿ ಅದೆಷ್ಟು ಅರ್ಥ ಇದೆ. ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಕಥೆನೇ ಇದು ಎಂದು ದರ್ಶನ್ ಮಾತನಾಡಿದ್ದಾರೆ.

    ಕಥೆ ಕೇಳುವಾಗ ನಟನೆಗೆ ಜಾಗ ಇದೆ ಅನಿಸ್ತು. ಖುಷಿ ಆಗುತ್ತದೆ. ನಾನು ಸಿನಿಮಾ ಕಥೆ ಆಯ್ಕೆ ಮಾಡುವಾಗ ಮೂರು ರೀತಿ ಯೋಚನೆ ಮಾಡುತ್ತೇನೆ. ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು. ಕನ್ನಡ ಭಾಷೆಗೆ ಅವಮಾನವಾಗುವಂತೆ ಇರಬಾರದು. ಅನ್ನದಾತರಿಗೆ ನಷ್ಟ ಆಗಬಾರದು ಎಂದು ದರ್ಶನ್ ಮಾತನಾಡಿದ್ದಾರೆ.

    ಬಳಿಕ ನಾನು ಯಾವತ್ತಿಗೂ ರಾಷ್ಟ್ರ ಪ್ರಶಸ್ತಿ ಬರೋಕೆ ಅಂತ ಸಿನಿಮಾ ಮಾಡಲ್ಲ. ಹಾಗಿದ್ರೆ ಆರ್ಟ್ ಮೂವಿನೇ ಮಾಡುತ್ತಿದ್ದೆ ಎಂದು ಡಿಬಾಸ್ ‘ಕಾಟೇರ’ ಸಕ್ಸಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ:ನಟ ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ ಸಿದ್ಧತೆ

    ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ (Katera Film) ಸಿನಿಮಾದಲ್ಲಿ ಮಾಲಾಶ್ರೀ (Malashree) ಪುತ್ರಿ ಆರಾಧನಾ ರಾಮ್ (Aradhana Ram) ದರ್ಶನ್‌ಗೆ ನಾಯಕಿಯಾಗಿ ನಟಿಸಿದ್ದಾರೆ.

  • ‘ಕಾಟೇರ’ ವೀಕ್ಷಿಸಿ ಮಗಳಿಗೆ ಮುತ್ತಿಟ್ಟು ಮಾಲಾಶ್ರೀ ಕಣ್ಣೀರು

    ‘ಕಾಟೇರ’ ವೀಕ್ಷಿಸಿ ಮಗಳಿಗೆ ಮುತ್ತಿಟ್ಟು ಮಾಲಾಶ್ರೀ ಕಣ್ಣೀರು

    ನ್ನಡ ಚಿತ್ರರಂಗದ ಹಿರಿಯ ನಟಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ (Aradhanaa Ram) ನಟಿಸಿರೋ ‘ಕಾಟೇರ’ (Katera) ಸಿನಿಮಾ ಇಂದು (ಡಿ.29) ಬಿಡುಗಡೆಯಾಗಿದೆ. ದರ್ಶನ್‌ಗೆ (Darshan) ಜೋಡಿಯಾಗಿ ಪ್ರಭಾ ಪಾತ್ರಕ್ಕೆ ಜೀವ ತುಂಬಿರೋ ಮಗಳ ನಟನೆ ನೋಡಿ ಮಾಲಾಶ್ರೀ ಕಣ್ಣೀರಿಟ್ಟಿದ್ದಾರೆ.

    ‘ಕಾಟೇರ’ ಸಿನಿಮಾವನ್ನು ಮಗಳ ಜೊತೆಯೇ ಮಾಲಾಶ್ರೀ (Malashree) ವೀಕ್ಷಿಸಿ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತುಂಬಾ ಖುಷಿ ಆಗಿದೆ ಮಗಳ ಆ್ಯಕ್ಟಿಂಗ್ ನೋಡಿ, ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಒಂದೇ ಸಿನಿಮಾದಲ್ಲಿ ಎಲ್ಲಾ ತರಹ ನಟಿಸಿ ತೋರಿದ್ದಾಳೆ. ತುಂಬಾ ಖುಷಿ ಆಗ್ತಿದೆ. ಅವಳಿಗೆ ಸಿನಿಮಾರಂಗದಲ್ಲಿ ಫ್ಯೂಚರ್ ಇದೆ ಎಂದು ಮಾಲಾಶ್ರೀ ಭಾವುಕರಾಗಿದ್ದಾರೆ.

    ಅಮ್ಮನ ಹೊರತಾಗಿ ಪ್ರೇಕ್ಷಕಿಯಾಗಿ ಹೇಳಬೇಕು ಅಂದರೆ ಮಗಳ ನಟನೆಗೆ ನೂರಕ್ಕೆ ನೂರು ಮಾರ್ಕ್ಸ್ ಕೊಡುತ್ತೀನಿ. ಎಲ್ಲಾ ದೃಶ್ಯಕ್ಕೂ ಜೀವ ತುಂಬಿದ್ದಾಳೆ ಆರಾಧನಾ. ಹೆಮ್ಮೆ ಆಗುತ್ತಿದೆ ಎಂದು ಮಗಳಿಗೆ ಮಾಲಾಶ್ರೀ ಮುತ್ತಿಟ್ಟಿದ್ದಾರೆ.

    ಅಮ್ಮಾ ಅಳೋದು ನೋಡಿ ನನಗೂ ಅಳು ಬರುತ್ತಿದೆ. ಕಾಟೇರ ಬಿಗ್ ಪ್ರಾಜೆಕ್ಟ್‌ನಲ್ಲಿ ನನಗೆ ಅವಕಾಶ ಕೊಟ್ಟಿದ್ದಕ್ಕೆ ಇಡೀ ತಂಡಕ್ಕೆ ಧನ್ಯವಾದಗಳು. ಮೊದಲ ಸಿನಿಮಾದಲ್ಲಿಯೇ ಇಷ್ಟು ಒಳ್ಳೆಯ ಪಾತ್ರ ಸಿಕ್ಕಿದೆ ಇದರ ಬಗ್ಗೆ ಖುಷಿಯಿದೆ ಎಂದು ಕಾಟೇರ ನಟಿ ಆರಾಧನಾ ಭಾವುಕರಾಗಿದ್ದಾರೆ. ಇದನ್ನೂ ಓದಿ:ನಟ ವಿಜಯಕಾಂತ್ ದರ್ಶನಕ್ಕೆ ಬಂದಿದ್ದ ವಿಜಯ್ ಮೇಲೆ ಚಪ್ಪಲಿ ಎಸೆತ

    ದರ್ಶನ್ ನಟನೆಯ ‘ಕಾಟೇರ’ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದರ್ಶನ್-ಆರಾಧನಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡುತ್ತಿದೆ. ಸಿನಿಮಾ ಈ ವರ್ಷದ ಹಿಟ್ ಲಿಸ್ಟ್‌ಗೆ ಸೇರೋದು ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು.

  • ‘ಕಾಟೇರ ಕ್ವೀನ್’ ಬೋಲ್ಡ್ ಅವತಾರಕ್ಕೆ ಪಸಂದಾಗವ್ಳೆ ಎಂದ ಫ್ಯಾನ್ಸ್

    ‘ಕಾಟೇರ ಕ್ವೀನ್’ ಬೋಲ್ಡ್ ಅವತಾರಕ್ಕೆ ಪಸಂದಾಗವ್ಳೆ ಎಂದ ಫ್ಯಾನ್ಸ್

    ಡಿಬಾಸ್ ಹೀರೋಯಿನ್ ಆರಾಧನಾ ರಾಮ್ (Aradhanaa Ram) ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಆರಾಧನಾ ನಯಾ ಲುಕ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:2ನೇ ಮದುವೆ ಬಗ್ಗೆ ಮಾತಾಡಿದ ನಟಿ ಸಮಂತಾ

    ಮಾಲಾಶ್ರೀ (Malashree) ಪುತ್ರಿ ಆರಾಧನಾ ರಾಮ್ ಅವರು ಕೆಂಪು ಬಣ್ಣದ ಮಾಡ್ರನ್ ಡ್ರೆಸ್‌ನಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಆರಾಧನಾ ಮಾದಕ ನೋಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಡಿಬಾಸ್ (Darshan) ನಾಯಕಿ ಪಸಂದಾಗವ್ಳೆ ಎಂದು ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.

    ನಿರ್ಮಾಪಕ ರಾಮು- ಮಾಲಾಶ್ರೀ ದಂಪತಿ ಪುತ್ರಿ ಆರಾಧನಾ ರಾಮ್ ಅವರು ದರ್ಶನ್‌ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಸದ್ಯ ಕಾಟೇರ (Katera Film) ಚಿತ್ರದ ‘ಪಸಂದಾಗವ್ನೆ’ ಎಂಬ ಸಾಂಗ್‌ನಲ್ಲಿ ಆರಾಧನಾ ಸಖತ್ ಆಗಿ ಡಿಬಾಸ್ ಜೊತೆ ಹೆಜ್ಜೆ ಹಾಕಿದ್ದಾರೆ. ಚಿತ್ರದ ಟ್ರೈಲರ್ ಕೂಡ ಫ್ಯಾನ್ಸ್ ಮೆಚ್ಚುಗೆಗೆ ಪಾತ್ರವಾಗಿದೆ.

    ‘ಟಗರು ಪಲ್ಯ’ ಚಿತ್ರದ ಮೂಲಕ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ನಟಿಸಿ ಗೆದ್ದರು. ಈಗ ಆರಾಧನಾ ರಾಮ್ ಕಾಟೇರ ಚಿತ್ರದ ಮೂಲಕ ನಾಯಕಿಯಾಗಿ ಗೆಲ್ಲುತ್ತಾರಾ? ಡಿ.29ಕ್ಕೆ ‘ಕಾಟೇರ’ ಸಿನಿಮಾ ರಿಲೀಸ್ ಆಗ್ತಿದೆ. ಅಂದು ಆರಾಧನಾ ಸಿನಿಮಾ ಭವಿಷ್ಯಕ್ಕೆ ಉತ್ತರ ಸಿಗಲಿದೆ.

  • ಪುತ್ರಿಯ ಜೊತೆ ಸಿದ್ಧಿವಿನಾಯಕನ ದರ್ಶನ ಪಡೆದ ಮಾಲಾಶ್ರೀ

    ಪುತ್ರಿಯ ಜೊತೆ ಸಿದ್ಧಿವಿನಾಯಕನ ದರ್ಶನ ಪಡೆದ ಮಾಲಾಶ್ರೀ

    ನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ (Malashree) ಅವರು ಪುತ್ರಿಯ ಜೊತೆ ಸಿದ್ಧಿವಿನಾಯಕ ದೇವರ ದರ್ಶನ ಪಡೆದಿದ್ದಾರೆ. ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

    ನಟಿ ಮಾಲಾಶ್ರೀ ಪಡ್ಡೆಹುಡುಗರ ಕನಸಿನ ರಾಣಿಯಾಗಿ ಮರೆದವರು. ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತಾ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಜ್ಯೂ.ಮಾಲಾಶ್ರೀ ಆರಾಧಾನಾ (Aradhana Ram) ಕೂಡ ಸಿನಿಮಾಗೆ ಎಂಟ್ರಿ ಕೊಡ್ತಿದ್ದಾರೆ. ಈ ಬೆನ್ನಲ್ಲೇ ದೇವರ ಸನ್ನಿಧಿಗೆ ಮಾಲಾಶ್ರೀ-ಆರಾಧಾನಾ ಭೇಟಿ ನೀಡಿದ್ದಾರೆ. 5ಕ್ಕೂ ಹೆಚ್ಚು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.

    ಮಹಾರಾಷ್ಟ್ರದಲ್ಲಿರುವ ಸಿದ್ಧಿ ವಿನಾಯಕನ ದೇವಸ್ಥಾನಕ್ಕೆ ಮಾಲಾಶ್ರೀ ಕುಟುಂಬವು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಜೊತೆ ತೆರೆಹಂಚಿಕೊಳ್ತಾರಂತೆ ತೃಪ್ತಿ ದಿಮ್ರಿ

    ಮಾಲಾಶ್ರೀ- ರಾಮು ಅವರ ಪುತ್ರಿ ಆರಾಧಾನಾ ‘ಕಾಟೇರ’ (Katera Film) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಲಗ್ಗೆ ಇಟ್ಟಿದ್ದಾರೆ.

  • ದರ್ಶನ್‌ ಜೊತೆ ಆಕ್ಟ್‌ ಮಾಡಿದ್ದಕ್ಕೆ ತುಂಬಾ ಖುಷಿಯಿದೆ- ‘ಕಾಟೇರ’ ನಟಿ

    ದರ್ಶನ್‌ ಜೊತೆ ಆಕ್ಟ್‌ ಮಾಡಿದ್ದಕ್ಕೆ ತುಂಬಾ ಖುಷಿಯಿದೆ- ‘ಕಾಟೇರ’ ನಟಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ (Katera Film) ಸಿನಿಮಾ ಇಂದು ಕೊನೆಯ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಚಿತ್ರತಂಡದ ಕಡೆಯಿಂದ ಇಂದು (ಸೆ.11) ಸುದ್ದಿಗೋಷ್ಠಿ ಆಯೋಜಿಸಿದೆ. ಈ ಚಿತ್ರದ ಮೂಲಕ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ವೇಳೆ ನಟ ದರ್ಶನ್ ಜೊತೆ ತೆರೆಹಂಚಿಕೊಂಡಿದ್ದರ ಬಗ್ಗೆ ಯುವನಟಿ ಆರಾಧನಾ ರಾಮ್ ಸಂತಸ ವ್ಯಕ್ತಪಡಿಸಿದ್ದರು. ತೆರೆಹಿಂದಿನ ಅನುಭವ ಬಿಚ್ಚಿಟ್ಟರು.

    ದರ್ಶನ್ ಸರ್ ಅವರ ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಕ್ಕಿದ್ದಕ್ಕೆ ತುಂಬಾ ಖುಷಿಯಿದೆ. ಪೋಸ್ಟರ್‌ನಲ್ಲಿ ನನ್ನ ನೋಡಿದ್ರೆ, ಅದು ನಾನೇ ನಾ ಅಂತಾ ಅನಿಸುತ್ತಾಯಿದೆ. ದರ್ಶನ್ ಅವರ ಜೊತೆ ಫಸ್ಟ್ ಟೈಮ್ ವರ್ಕ್ ಮಾಡುತ್ತಾ ಇದ್ದೀನಿ ಎಂದು ಒಂದು ದಿನನೂ ಅನಿಸಲಿಲ್ಲ. ನಟಿಸೋದಕ್ಕೆ  ಸರ್ಪೋಟ್ ಮಾಡಿದ್ದರು. ನನಗೆ ಸೆಟ್‌ನಲ್ಲಿ ದರ್ಶನ್‌ ಸರ್ ಚಾಕಲೇಟ್‌ ತಂದು ಕೊಡುತ್ತಾ ಇದ್ದರು. ನಮ್ಮ ಡಿ ಬಾಸ್ ಹೀರೋ ಬಗ್ಗೆ ಎಷ್ಟು ಮಾತನಾಡಿದ್ದರು ಅದು ಸಾಕಾಗೋಲ್ಲ. ಇದನ್ನೂ ಓದಿ:‘ಮ್ಯಾಟ್ನಿ’ ಚಿತ್ರದ ಎಣ್ಣೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನೀನಾಸಂ ಸತೀಶ್

    ತರುಣ್ (Tarun) ಅವರಂತಹ ನಿರ್ದೇಶಕರ ನಿರ್ದೇಶನದಲ್ಲಿ ಮೊದಲ ಬಾರಿ ನಟಿಸುತ್ತಿದ್ದೇನೆ ಅಂದರೆ ಅದು ನನ್ನ ಅದೃಷ್ಟ. ದಿನ ಹೊಸ ತರಹದ ಚಾಲೆಂಜ್ ಕೊಡುತ್ತಿದ್ದರು. ಈ ತರಹ ನೀನು ಮಾಡಬಹುದು ಅಂತಿದ್ರು. ಈ ಅವಕಾಶಕ್ಕೆ ನಾನು ಅಭಾರಿಯಾಗಿದ್ದೇನೆ. ನಿಮ್ಮ ಸಿನಿಮಾ ಕಲ್ಪನೆಯನ್ನ ನಾನು ಸ್ವಲ್ಪ ಆದರೂ ಟಚ್ ಮಾಡಿದ್ದೇನೆ ಎಂದು ಭಾವಿಸುತ್ತೇನೆ ಎಂದು ಡೈರೆಕ್ಟರ್ ಬಗ್ಗೆ ನಟಿ ಮಾತನಾಡಿದ್ದಾರೆ.

    ‘ಕಾಟೇರ’ (Katera) ಸಿನಿಮಾದಿಂದ ಕಲಿತ್ತಿದ್ದೇನೆ. ಪ್ರತಿದಿನವೂ ಕಲಿಯೋದು ಇತ್ತು. ನನಗೆ ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ರಾಕ್‌ಲೈನ್ ವೆಂಕಟೇಶ್‌ಗೆ ಮೆಚ್ಚುಗೆ ಸೂಚಿಸಿದ್ದರು ಆರಾಧನಾ ರಾಮ್.

    ಚಾಲೆಂಜಿಂಗ್ ಸ್ಟಾರ್ ದರ್ಶನ್-ಆರಾಧನಾ ರಾಮ್ (Aradhana Ram) ನಟನೆಯ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದರ್ಶನ್- ನಿರ್ದೇಶಕ ತರುಣ್ ನನ್ನ ಮಗಳಿಗೆ ನಟನೆ ಹೇಳಿ ಕೊಟ್ಟರು- ಮಾಲಾಶ್ರೀ

    ದರ್ಶನ್- ನಿರ್ದೇಶಕ ತರುಣ್ ನನ್ನ ಮಗಳಿಗೆ ನಟನೆ ಹೇಳಿ ಕೊಟ್ಟರು- ಮಾಲಾಶ್ರೀ

    ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ‘ಕಾಟೇರ’ (Katera) ಸಿನಿಮಾ ಇಂದು ಕೊನೆಯ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಚಿತ್ರತಂಡದ ಕಡೆಯಿಂದ ಇಂದು (ಸೆ.11) ಸುದ್ದಿಗೋಷ್ಠಿ ಆಯೋಜಿಸಿದೆ. ಈ ಚಿತ್ರದ ಮೂಲಕ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ವೇಳೆ ದರ್ಶನ್ ಜೊತೆ ಪುತ್ರಿ ಆರಾಧನಾ (Aradhana Ram) ನಟಿಸಿದ್ದರ ಬಗ್ಗೆ ಕನಸಿನ ರಾಣಿ ಮಾಲಾಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾಲಾಶ್ರೀ ಮಾತನಾಡಿ, ನನ್ನ ಮಗಳು ಫಸ್ಟ್ ಟೈಮ್ ಕಾಟೇರ ಸಿನಿಮಾದಲ್ಲಿ ಆಕ್ಟ್ ಮಾಡಿ ಪ್ರೆಸ್‌ಮೀಟ್‌ನಲ್ಲಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ನಾನು ಇದ್ದೀನಿ ಅನ್ನೋದಕ್ಕೆ ಖುಷಿಯಾಗುತ್ತಿದೆ. ಈ ಚಿತ್ರದ ಓಪನಿಂಗ್ ಸಮಯದಲ್ಲಿ ರಾಧನಾ ರಾಮ್ ಆಗಿ ಪರಿಚಯ ಆಗಿದ್ದರು. ಆದರೆ ಈಗ ಆರಾಧನಾ ರಾಮ್ ಪರಿಚಯ ಆಗುತ್ತಿದ್ದಾರೆ, ಇನ್ಮುಂದೆ ಕೂಡ. ಅವಳ ಮೇಲೆ ನಿಮ್ಮೆಲ್ಲರ ಹಾರೈಕೆ ಹೀಗೆ ಇರಲಿ ಅಂತಾ ಕೇಳಿಕೊಳ್ಳುತ್ತಿದ್ದೀನಿ.

    ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ನನ್ನ ಮಗಳು ಲಾಂಚ್ ಆಗುತ್ತಿರೋದು ಖುಷಿ ಕೊಟ್ಟಿದೆ. ಮೊದಲ ಸಿನಿಮಾನೇ ನನ್ನ ಮಗಳು ಈಸಿ ಆಗಿ ಆಕ್ಟ್ ಮಾಡಿದ್ದಳು. ಅದಕ್ಕೆ ಕಾರಣ ದರ್ಶನ್ ಅವರು, ನಟಿಸಲು ಆರಾಧನಾಗೆ ಕಂಫರ್ಟ್ ಜೋನ್ ಕೊಟ್ಟರು. ದರ್ಶನ್- ಡೃರೆಕ್ಟರ್ ತರುಣ್ ಸುಧೀರ್ ನನ್ನ ಮಗಳಿಗೆ ನಟನೆ ಹೇಳಿ ಕೊಟ್ಟರು. ಇಂತಹ ಒಳ್ಳೆಯ ಕಲಾವಿದರು ಇರುವ ಸಿನಿಮಾದಲ್ಲಿ ನನ್ನ ಮಗಳಿಗೆ ನಟಿಸಲು ಚಾನ್ಸ್ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ನಟಿ ಮಾತನಾಡಿದ್ದಾರೆ. ಸ್ಕ್ರೀನ್‌ ಮೇಲೆ ನನ್ನ ಮಗಳನ್ನು ಇನ್ನೂ ಮುದ್ದಾಗಿ ತೋರಿಸಿದ್ದಾರೆ ಎಂದು ಮಾಲಾಶ್ರೀ (Malashree) ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ:ರಕ್ಷಿತಾರಂತೆಯೇ ಆರಾಧನಾ ಒನ್ ಟೇಕ್ ಆರ್ಟಿಸ್ಟ್ ಎಂದು ಹೊಗಳಿದ ದರ್ಶನ್

    ಚಾಲೆಂಜಿಂಗ್ ಸ್ಟಾರ್ ದರ್ಶನ್-ಆರಾಧನಾ ರಾಮ್ ನಟನೆಯ ‘ಕಾಟೇರ’ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಕ್ಷಿತಾರಂತೆಯೇ ಆರಾಧನಾ ಒನ್ ಟೇಕ್ ಆರ್ಟಿಸ್ಟ್ ಎಂದು ಹೊಗಳಿದ ದರ್ಶನ್

    ರಕ್ಷಿತಾರಂತೆಯೇ ಆರಾಧನಾ ಒನ್ ಟೇಕ್ ಆರ್ಟಿಸ್ಟ್ ಎಂದು ಹೊಗಳಿದ ದರ್ಶನ್

    ಸ್ಯಾಂಡಲ್‌ವುಡ್ (Sandalwood) ಡಿಬಾಸ್ ದರ್ಶನ್ (Darshan) ನಟನೆಯ ‘ಕಾಟೇರ’ (Katera) ಸಿನಿಮಾ ಕೊನೆಯ ಹಂತದ ಚಿತ್ರೀಕರಣ ಮುಗಿಸಿದೆ. ಇದೇ ಖುಷಿಯಲ್ಲಿ ಸಿನಿಮಾ ಬಗ್ಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಈ ವೇಳೆ ಮಾಲಾಶ್ರೀ ಪುತ್ರಿ, ಸಿನಿಮಾದ ನಾಯಕಿ ಆರಾಧನಾ(Aradhana Ram) ಬಗ್ಗೆ ದರ್ಶನ್ ಹಾಡಿ ಹೊಗಳಿದ್ದಾರೆ.

    ದೊಡ್ಡ ಪ್ರೋಡಕ್ಷನ್ ಅನ್ನೋದಕ್ಕಿಂತ, ನನಗೆ ಸಿನಿಮಾ ದೊಡ್ಡದು. ಇಡೀ ಸಿನಿಮಾ ಎಲ್ಲರನ್ನೂ ಕರೆದುಕೊಂಡು ಹೋಗುತ್ತದೆ. ಇವತ್ತು ಕ್ಲೈಮ್ಯಾಕ್ಸ್ ಶೂಟ್ ನಡೆದಿದೆ. ಇನ್ನೂ 3 ಸಾಂಗ್ ಶೂಟ್ ಬಾಕಿಯಿದೆ. ಸಿನಿಮಾ ಶೂಟಿಂಗ್‌ಗೆ ಇಂದು 100ನೇ ದಿನ, ಆದರೆ ನನ್ನ ಡೇಟ್ಸ್ 85 ದಿನ ಅಷ್ಟೇ. ನನಗೆ ಇಂದು 71ನೇ ದಿನದ ಶೂಟಿಂಗ್‌ ದಿನ ಎಂದು ಚಿತ್ರದ ನಟ ದರ್ಶನ್ ಮಾಹಿತಿ ನೀಡಿದ್ದರು.‌ ಇದನ್ನೂ ಓದಿ:‘ಮ್ಯಾಟ್ನಿ’ ಚಿತ್ರದ ಎಣ್ಣೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನೀನಾಸಂ ಸತೀಶ್

    ಮೋಹನ್ ಆಳ್ವಾ ಜೊತೆ ನನಗೆ ನಟಿಸಲು ಮೊದಲ ಸಿನಿಮಾ ಆಗಿದ್ದು, ಈ ಹಿಂದೆ ಅವರ ಸಿನಿಮಾದಲ್ಲಿ ನಾನು ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದೆ ಎಂದು ಹಳೆಯ ದಿನಗಳನ್ನ ನಟ ಬಿಚ್ಚಿಟ್ಟರು. ಇನ್ನೂ ನಟ ಜಗಪತಿ ಬಾಬು ಅವರು ರಾಬರ್ಟ್ ಆಗಲಿ, ಈ ಸಿನಿಮಾ ಆಗಲಿ ಅವರು ಮನೆಯಿಂದಲೇ ಅಡುಗೆ ಮಾಡಿಸಿ ತರುತ್ತಿದ್ದರು. ಕ್ಯಾರ್‌ವ್ಯಾನ್‌ಗೆ ಹೋಗದೇ ಅಲ್ಲೇ ಚೇರ್ ಹಾಕಿ ಕೂತಿದ್ವಿ. ಎಲ್ಲರ ಮಧ್ಯೆ ಒಳ್ಳೆಯ ಭಾವನೆ ಇತ್ತು ಎಂದು ದರ್ಶನ್ ಮುಕ್ತವಾಗಿ ಮಾತನಾಡಿದ್ದರು.

    ರಕ್ಷಿತಾ (Rakshitha) ಅವರ ಸಾಲಿಗೆ ಆರಾಧನಾ ನಿಲ್ಲುತ್ತಾರೆ. ಅವರು ಒನ್ ಟೇಕ್ ಆರ್ಟಿಸ್ಟ್ ಎಂದು ಸಹನಟಿ ಬಗ್ಗೆ ದರ್ಶನ್ ಮೆಚ್ಚುಗೆ ಸೂಚಿಸಿದ್ದರು. ಮಾಲಾಶ್ರೀ ಅವರ ಬಗ್ಗೆ ನಾವು ಮಾತನಾಡೋಕೆ ಆಗುತ್ತಾ? ಅವರ ಮುಂದೆ ಯಾರೇ ನಿಂತರೂ ಬಡಿದು ಬಾಯಿಗೆ ಹಾಕಿ ಕೊಳ್ಳುತ್ತಾ ಇದ್ರು. ಇದನ್ನೂ ಓದಿ:Gadar 2 ಸಕ್ಸಸ್, ರಾಜಕೀಯಕ್ಕೆ ವಿದಾಯ ಹೇಳ್ತಾರಾ ಸನ್ನಿ ಡಿಯೋಲ್?

    ‘ಕಾಟೇರ’ ಸಿನಿಮಾದಲ್ಲಿ ಮೊದಲಿನಿಂದ ಕಡೆ ತನಕ ಅಶ್ಲೀಲತೆ ಇಲ್ಲ. ಸಭ್ಯವಾದ ಸಂಭಾಷನೆ ಇದೆ. ಚಿತ್ರಕ್ಕೆ ಏನೂ ಬೇಕೋ ನಿರ್ಮಾಪಕರು ಒದಗಿಸಿದ್ದಾರೆ. ಇದು ಒಬ್ಬರ ಸಿನಿಮಾ ಅಲ್ಲ, ಪ್ಲೇಟ್ ತೊಳೆಯೋನಿಂದ ಹಿಡಿದು ಎಲ್ಲರಿಗೂ ಈ ಸಿನಿಮಾ ಸೇರಲಿದೆ ಎಂದು ನಟ ಮಾತನಾಡಿದ್ದರು.

    ಚಾಲೆಂಜಿಂಗ್ ಸ್ಟಾರ್ ದರ್ಶನ್-ಆರಾಧನಾ ರಾಮ್ ನಟನೆಯ ‘ಕಾಟೇರ’ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್‌ಲೈನ್ ವೆಂಕಟೇಶ್ (Rockline Venkatesh) ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರಮಹಾಲಕ್ಷ್ಮಿ ಹಬ್ಬದಂದು ದರ್ಶನ್ ನಟನೆಯ ‘ಕಾಟೇರ’ ಪೋಸ್ಟರ್ ರಿಲೀಸ್

    ವರಮಹಾಲಕ್ಷ್ಮಿ ಹಬ್ಬದಂದು ದರ್ಶನ್ ನಟನೆಯ ‘ಕಾಟೇರ’ ಪೋಸ್ಟರ್ ರಿಲೀಸ್

    ಡಿ ಬಾಸ್(D Boss) ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದು ಬಹುನಿರೀಕ್ಷಿತ ‘ಕಾಟೇರ’ (Kaatera) ಸಿನಿಮಾದ ಪೋಸ್ಟರ್ ರಿಲೀಸ್ ರಿವೀಲ್ ಮಾಡಿದ್ದಾರೆ. ದರ್ಶನ್- ಆರಾಧನಾ ಜೊತೆಯಾಗಿರುವ ಫೋಟೋ ರಿವೀಲ್ ಮಾಡಲಾಗಿದೆ. ಡಿ ಬಾಸ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಕುಟುಂಬದೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್

    ರಾಕ್‌ಲೈನ್ ವೆಂಕಟೇಶ್ (Rockline Venkatesh) ನಿರ್ಮಾಣದ ‘ಕಾಟೇರ’ ಸಿನಿಮಾದ ಪೋಸ್ಟರ್ ಲುಕ್‌ನಿಂದಲೇ ಕುತೂಹಲ ಮೂಡಿಸುತ್ತಿದೆ. ಕಾಟೇರ ಸೈಕಲ್ ಏರಿ ಪ್ರಭಾವತಿಯನ್ನು ಮುಂದೆ ಕೂರಿಸಿಕೊಂಡಿದ್ದಾನೆ. ಆಕೆಯ ಕೈಯಲ್ಲಿ ಲೇಖನಿ ಪುಸ್ತಕ ಇದೆ. ಮತ್ತೊಂದು ಕಡೆ ಸೈಕಲ್ ಹ್ಯಾಂಡಲ್‌ನಲ್ಲಿ ರಕ್ತ ಸುರಿಸುತ್ತಿರುವ ಮಚ್ಚು ತೂಗಾಡುತ್ತಿದೆ. ಈ ಪೋಸ್ಟರ್ ಮೂಲಕ ಒಂದೊಳ್ಳೆ ಸಂಗತಿಯನ್ನು ತಂಡ ತೋರಿಸಲು ಹೊರಟಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ.

    ಕೆಂಪು ಬಣ್ಣದ ಚೂಟಿದಾರ್ ತೊಟ್ಟು ಎರಡು ಜಡೆ ಹಾಕಿಕೊಂಡು ಪ್ರಭಾವತಿಯಾಗಿ ಆರಾಧನಾ ಮಿಂಚಿದ್ದಾರೆ. ಇನ್ನು ಗೀಟು ಶರ್ಟ್, ಪ್ಯಾಂಟ್ ತೊಟ್ಟು ಹಣೆಗೆ ಕುಂಕುಮ ಇಟ್ಟುಕೊಂಡು ಕಾಟೇರನಾಗಿ ದರ್ಶನ್ (Darshan) ಕಾಣಿಸಿಕೊಂಡಿದ್ದಾರೆ. 70ರ ದಶಕದ ಕಥೆ ಚಿತ್ರದಲ್ಲಿದೆ. ಉಳುವವನೆ ಭೂಮಿಯ ಒಡೆಯ ಕಾಯ್ದೆ ಜಾರಿಯಾದಾಗ ಹಳ್ಳಿಗಳಲ್ಲಿ ನಡೆದ ಸಂಘರ್ಷಗಳನ್ನು ಸೇರಿಸಿ ಸಿನಿಮಾ ಕಟ್ಟಿಕೊಡಲಾಗ್ತಿದೆ. ಅನ್ಯಾಯದ ವಿರುದ್ಧ ತನ್ನದೇ ಹಾದಿಯಲ್ಲಿ ಹೋರಾಡುವ ನಾಯಕ ಕಾಟೇರನ ನೋವು ನಲಿವಿನ ಕಥೆ ಚಿತ್ರದಲ್ಲಿದೆ. ರಾಬರ್ಟ್‌ ಬಳಿಕ ಮತ್ತೆ ಕಾಟೇರಗೆ ತರುಣ್‌ ಸುಧೀರ್‌ (Tharun Sudhir) ನಿರ್ದೇಶನ ಮಾಡ್ತಿದ್ದಾರೆ.

    ನಾಯಕಿ ಪ್ರಭಾವತಿ ಓದಿಕೊಂಡ ಹುಡುಗಿ. ಮಚ್ಚು ಗಿಚ್ಚು ಬೇಡ, ಅದರಿಂದ ಸಾಧಿಸುವುದು ಏನು ಇಲ್ಲ ಎನ್ನುವುದು ಆಕೆಯ ಅನಿಸಿಕೆ. ಕಾಟೇರ ಕೂಡ ಅದನ್ನು ಒಪ್ಪುತ್ತಾನೆ. ಖಡ್ಗಕ್ಕಿಂತ ಹರಿತವಾದ ಆಯುಧ ಲೇಖನಿ ಅನ್ನೋದು ನಿಜವೇ. ಆದರೂ ಕೂಡ ಪೆನ್ನಿನ ಜೊತೆಗೆ ಮಚ್ಚೂ ಇರಲಿ ಬೇಕಾಗುತ್ತದೆ. ಎಲ್ಲವನ್ನು ಓದಿನಿಂದಲೇ ಸಾಧಿಸಲು ಸಾಧ್ಯವಿಲ್ಲ, ಕೆಲವೊಮ್ಮೆ ದಂಡಂ ದಶಗುಣಂ ಮಾತನ್ನು ಪಾಲಿಸಬೇಕು ಅನ್ನೋದು ಕಾಟೇರ ಮಾರ್ಗವಾಗಿರುತ್ತದೆ.

    ಈ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ (Malashree) ಪುತ್ರಿ ಆರಾಧನಾ ರಾಮ್ (Aaradhan Ram) ಸ್ಯಾಂಡಲ್‌ವುಡ್‌ಗೆ ಪರಿಚಿತರಾಗುತ್ತಿದ್ದಾರೆ. ದರ್ಶನ್‌ಗೆ ನಾಯಕಿಯಾಗಿ ಚಂದನವನಕ್ಕೆ ನವನಟಿ ಪರಿಚಯವಾಗುತ್ತಿದ್ದಾರೆ. ಕ್ರಾಂತಿ ಬಳಿಕ ‘ಕಾಟೇರ’ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]