Tag: ಆರಪರೇನ್ ಕಮಲ

  • ಸದನಕ್ಕೆ ಹಾಜರಾಗುವಂತೆ ಬಿಜೆಪಿ ಶಾಸಕರಿಗೆ ವಿಪ್ ಜಾರಿ

    ಸದನಕ್ಕೆ ಹಾಜರಾಗುವಂತೆ ಬಿಜೆಪಿ ಶಾಸಕರಿಗೆ ವಿಪ್ ಜಾರಿ

    ಬೆಂಗಳೂರು: ಪಕ್ಷದ ಎಲ್ಲಾ ಶಾಸಕರು ಫೆಬ್ರವರಿ 13 ಹಾಗೂ 14ರಂದು ಕಡ್ಡಾಯವಾಗಿ ವಿಧಾನಸಭಾ ಕಲಾಪಕ್ಕೆ ಹಾಜರಾಗಬೇಕು ಎಂದು ಬಿಜೆಪಿ ವಿಪ್ ಜಾರಿ ಮಾಡಿದೆ.

    ಸ್ಪೀಕರ್ ರಮೇಶ್ ಕುಮಾರ್ ಅವರು ಸದನವನ್ನು ಮುಂದೂಡುವವರೆಗೂ ಬಿಜೆಪಿ ಶಾಸಕರು ಕಲಾಪದಲ್ಲಿ ಹಾಜರು ಇರಲೆಬೇಕು ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್ ಅವರು ವಿಪ್‍ನಲ್ಲಿ ಜಾರಿಗೊಳಿಸಿದ್ದಾರೆ.

    ಈ ಮೂಲಕ ಹಣಕಾಸು ವಿಧೇಯಕ ಮಂಡನೆ ವೇಳೆ ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಪ್ಲಾನ್ ಮಾಡಲಾಗಿದೆ. ಇತ್ತ ಕಾಂಗ್ರೆಸ್ ಅತೃಪ್ತ ಶಾಸಕರು ಕಲಾಪಕ್ಕೆ ಹಾಜರಾಗದೇ ದೂರ ಉಳಿಯುತ್ತಿದ್ದಾರೆ. ಇದನ್ನೆ ಅಸ್ತ್ರವಾಗಿ ಪ್ರಯೋಗಿಸಿ ಹಣಕಾಸು ವಿಧೇಯಕಕ್ಕೆ ಬೆಂಬಲ ಸಿಗದಂತೆ ನೋಡಿಕೊಳ್ಳಲು ಬಿಜೆಪಿಯಿಂದ ಸಿದ್ಧತೆ ನಡೆದಿದೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

     

    ಆಪರೇಷನ್ ಕಮಲ ಆಡಿಯೋ ಪ್ರಕರಣ ವಿಚಾರಣೆಯ ಕುರಿತು ಕಲಾಪದಲ್ಲಿ ಇಂದು ಆಡಳಿತ ಪಕ್ಷ ಹಾಗೂ ವಿಪಕ್ಷದ ಶಾಸಕರ ಮಧ್ಯೆ ವಾಗ್ದಾಳಿಯೇ ನಡೆಯಿತು. ಹೀಗಾಗಿ ಸದನವು ಸಂಜೆ 6.45ರವರೆಗೆ ನಡೆಯಬೇಕಾಯಿತು. ಆದರೂ ತನಿಖೆಯನ್ನು ಎಸ್‍ಐಟಿಗೆ ಒಪ್ಪಿಸಬೇಕೋ? ಅಥವಾ ಸದನ ಸಮಿತಿಗೆ ನೀಡಬೇಕು ಎನ್ನುವುದು ನಿರ್ಧಾರವಾಗಲಿಲ್ಲ. ಇದರಿಂದಾಗಿ ಕಲಾಪವನ್ನು ಬುಧವಾರ ಬೆಳಗ್ಗೆ 10.30ಕ್ಕೆ ಮುಂದೂಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv