Tag: ಆರಕ್ಷತೆ

  • ಉಕ್ರೇನ್ ವಧು ಜೊತೆ ಹೈದರಾಬಾದ್ ವರನ ಮದುವೆ- ಆರಕ್ಷತೆಯಲ್ಲಿ ಉಕ್ರೇನ್ ರಕ್ಷಣೆಗೆ ಪ್ರಾರ್ಥಿಸಿದ ನವದಂಪತಿ

    ಉಕ್ರೇನ್ ವಧು ಜೊತೆ ಹೈದರಾಬಾದ್ ವರನ ಮದುವೆ- ಆರಕ್ಷತೆಯಲ್ಲಿ ಉಕ್ರೇನ್ ರಕ್ಷಣೆಗೆ ಪ್ರಾರ್ಥಿಸಿದ ನವದಂಪತಿ

    ಹೈದರಾಬಾದ್: ಉಕ್ರೇನ್ ವಧು ಜೊತೆ ಹೈದರಾಬಾದ್ ವರ ಮದುವೆಯಾಗಿದ್ದಾರೆ. ಆರಕ್ಷತೆ ಸಮಾರಂಭದ ವೇಳೆ ಅರ್ಚಕರು ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲಿ ಹರಿದಾಡುತ್ತಿದೆ.

    ಪ್ರತೀಕ್ ಮತ್ತು ಲ್ಯುಬೊವ್ ಉಕ್ರೇನ್‍ನಲ್ಲಿ ಮದುವೆಯಾಗಿದ್ದರು. ಆರಕ್ಷತೆಗಾಗಿ ಹೈದರಾಬಾದ್‍ಗೆ ಬಂದ ಮರುದಿನವೇ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿತ್ತು. ಹೀಗಾಗಿ ವಧುವಿನ ಆತ್ಮಸ್ಥೈರ್ಯ ಕುಂದದಂತೆ ನೋಡಿಕೊಂಡ ಪ್ರತೀಕ್ ಪೋಷಕರು, ಆಕೆಗೆ ಮಾನಸಿಕವಾಗಿ ಬೆಂಬಲ ನೀಡಿದರು.

    ಇತ್ತೀಚೆಗೆ ಹೈದರಾಬಾದ್‍ನಲ್ಲಿ ಉಕ್ರೇನಿಯನ್ ವಧು ಲ್ಯುಬೊವ್ ಮತ್ತು ಹೈದರಬಾದ್‍ನ ವರ ಪ್ರತೀಕ್ಷ್ ಮದುವೆ ಆರತಕ್ಷತೆ ಸಮಾರಂಭದಲ್ಲಿ, ಅರ್ಚಕ ರಂಗರಾಜನ್ ಭಾಗವಹಿಸಿದ್ದರು. ದೇವರ ವಿಶೇಷ ವಸ್ತ್ರಗಳನ್ನ ಮತ್ತು ಸ್ಮರಣಿಕೆಗಳನ್ನು ವಧು ವರರಿಗೆ ನೀಡಿ ಅವರಿಗೆ ದೀರ್ಘಾಯುಷ್ಯ ಮತ್ತು ಸಂತಾನಫಲ ಸಿಗಲಿ ಎಂದು ನವವಿವಾಹಿತರನ್ನು ಆಶೀರ್ವದಿಸಿದರು. ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಅಂತ್ಯವಾಗಿ, ಕೂಡಲೇ ಶಾಂತಿ ನೆಲೆಸುವಂತಾಗಲಿ ಎಂದು ಚಿಲುಕೂರಿನ ಬಾಲಾಜಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು ಎಂದು ಹೇಳಿದ್ದಾರೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಶೀಘ್ರ ಅಂತ್ಯಗೊಳ್ಳಲಿ ಎಂದು ಚಿಲುಕೂರು ವೆಂಕಟೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇವೆ. ಯುದ್ಧವು ಪ್ರಪಂಚದಾದ್ಯಂತ ರಕ್ತಪಾತ ಮತ್ತು ದುರಂತಕ್ಕೆ ಕಾರಣವಾಯಿತು. ಕೋವಿಡ್‍ನ ದುರತದಿಂದ ಚೇತರಿಕೊಳ್ಳುವುದಕ್ಕೂ ಮುಂಚೆಯೇ ರಷ್ಯಾ ಉಕ್ರೇನ್ ಮೇಲೆ ದಾಳಿ ಆತಂಕವನ್ನ ಸೃಷ್ಟಿಸಿದೆ ಆದಷ್ಟು ಬೇಗ ಯುದ್ದ ಕೊನೆಯಾಗಲಿ ಎಂದು ಹೇಳಿದ್ದಾರೆ.