Tag: ಆಯುಷ್ ಇಲಾಖೆ

  • ಕೊರೊನಾ ನಿಯಂತ್ರಣಕ್ಕೆ ಮುಲಾಮು – ಕನ್ನಡಿಗನಿಂದ ಸಂಶೋಧನೆ

    ಕೊರೊನಾ ನಿಯಂತ್ರಣಕ್ಕೆ ಮುಲಾಮು – ಕನ್ನಡಿಗನಿಂದ ಸಂಶೋಧನೆ

    ಮುಲಾಮು ದರ ಎಷ್ಟು?

    ಬೆಂಗಳೂರು: ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಹೊಸ ಮುಲಾಮು ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹೆಮ್ಮೆಯ ವಿಷಯ ಅಂದ್ರೆ ಈ ಮುಲಾಮುನ್ನು ಕನ್ನಡಿಗರೊಬ್ಬರು ಸಂಶೋಧನೆ ಮಾಡಿದ್ದಾರೆ.

    ಚಿಕ್ಕಮಗಳೂರಿನ ಅಜ್ಜಂಪುರ ಮೂಲದ ನೂತನ್ ಹೆಚ್.ಎಸ್ ಅವರು ಕೊರೊನಾಗೆ ಮುಲಾಮು ಸಂಶೋಧನೆ ಮಾಡಿದ್ದಾರೆ. ಕೋವಿರಕ್ಷಾ ಹೆಸರಿನ ಮುಲಾಮೂನ್ನು ಹಚ್ಚಿಕೊಂಡವರು ಮೂರು ತಾಸು ಕೊರೊನಾ ವೈರಾಣುವಿನಿಂದ ಸುರಕ್ಷಿತವಾಗಿರಬಹುದು ಎಂದು ಸಂಶೋಧನೆಯಲ್ಲಿ ಗೊತ್ತಾಗಿದೆ. ಇದನ್ನೂ ಓದಿ: ಹೊಸ ಅಪಾಯ- ನೀರಿನಲ್ಲಿಯೂ ಪತ್ತೆಯಾದ ಕೊರೊನಾ ವೈರಸ್

    ಬೆಂಗಳೂರು ಮೂಲದ ನ್ಯಾನೋ ತಂತ್ರಜ್ಞಾನದ ಸ್ಟಾಟ್ 9 ಆಪ್ ನೂತನ್ ಲ್ಯಾಬ್ಸ್, ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದೊಂದಿಗೆ ಈ ಮುಲಾಮನ್ನು ಸಂಶೋಧನೆ ಮಾಡಲಾಗಿದೆ. ರಾಜ್ಯ ಆಯುಷ್ ಇಲಾಖೆಯಿಂದ ಮುಲಾಮು ಬಳಕೆಗೆ ಅನುಮೋದನೆ ಸಿಕ್ಕಿದ್ದು, ಬೆಳ್ಳಿ ಬಳಸಿಕೊಂಡು, ನ್ಯಾನೋ ಟೆಕ್ನಾಲಜಿ ಮೂಲಕ ಕೋವಿರಕ್ಷಾ ಮುಲಾಮನ್ನು ತಯಾರು ಮಾಡಲಾಗಿದೆ.

    ಕಳೆದ ಮೂರು ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಪ್ರಯೋಗಮಾಡಿ ಯಶಸ್ವಿಯಾಗಿದೆ. ಒಂದು ವಯಲ್ ನ್ನು 200ಕ್ಕೂ ಹೆಚ್ಚು ಬಾರಿ ಬಳಸಬಹುದು. ಮುಖ್ಯವಾಗಿ ಮನೆಯಿಂದ ಹೊರ ಬರುವಾಗ, ಗಂಟಲು, ಮೂಗು, ಕೈ, ಮಾಸ್ಕ್ ಗೆ ಕೋವಿರಕ್ಷಾ ಹಚ್ಚಿಕೊಂಡರೆ, ಮೂರು ಗಂಟೆಗಳ ಕಾಲ ವೈರಾಣುವಿನಿಂದ ರಕ್ಷಣೆ ಪಡೆಯಬಹುದಾಗಿದೆ. ಇದರ ಬೆಲೆ ೩೦೦ ರೂಪಾಯಿಯಾಗಿದ್ದು, ೧೦ ಎಂಎಲ್ ಇರುತ್ತದೆ. ಲಿಕ್ವಿಡ್ ತರಹದ ಮುಲಾಮು ಇದಾಗಿದ್ದು, ಇದರ ರಿಕವರಿ ರೇಟ್ ಕೂಡ ಸ್ಪೀಡಾಗಿದೆ. ಪಾಸಿಟಿವ್ ಬಂದವರು ಇದನ್ನು ಬಳಕೆ ಮಾಡಿದ್ರೆ ೧೪ ದಿನದೊಳಗಡೆಯೇ ನೆಗಟಿವ್ ಬರುತ್ತದೆ ಎಂದು ಪ್ರಾಯೋಗಿಕ ಪರೀಕ್ಷೆಯಲ್ಲಿ ಪ್ರೂವ್ ಆಗಿದೆ.

  • ಅಂಕೋಲಾ ಬಳಿ ಕೇಂದ್ರ ಸಚಿವ ಶ್ರೀಪಾದ್‌ ನಾಯಕ್‌ ಕಾರು ಪಲ್ಟಿ, ಪತ್ನಿ ದುರ್ಮರಣ

    ಅಂಕೋಲಾ ಬಳಿ ಕೇಂದ್ರ ಸಚಿವ ಶ್ರೀಪಾದ್‌ ನಾಯಕ್‌ ಕಾರು ಪಲ್ಟಿ, ಪತ್ನಿ ದುರ್ಮರಣ

    ಕಾರವಾರ: ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಪಲ್ಟಿಯಾಗಿದ್ದು ಪತ್ನಿ ಮೃತಪಟ್ಟಿದ್ದಾರೆ.

    ಕೇಂದ್ರ ಆಯುಷ್ ಇಲಾಖೆ ಸಚಿವರಾದ ಶ್ರೀಪಾದ್ ನಾಯಕ್ ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುವಾಗ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಸಚಿವರು ಸೇರಿ ನಾಲ್ವರು ಗಾಯಗೊಂಡಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ ಎಲ್ಲರನ್ನೂ ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ  ಸಚಿವರ ಪತ್ನಿ ವಿಜಯ  ಅವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

    ಸಚಿವ ಶ್ರೀಪಾದ ನಾಯಕ್‌ ಗಂಭೀರವಾಗಿಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.  ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊರೊನಾದಿಂದ ಚಾಮರಾಜನಗರ ಜಿಲ್ಲಾ ಆಯುಷ್ ಅಧಿಕಾರಿ ನಿಧನ

    ಕೊರೊನಾದಿಂದ ಚಾಮರಾಜನಗರ ಜಿಲ್ಲಾ ಆಯುಷ್ ಅಧಿಕಾರಿ ನಿಧನ

    ಚಾಮರಾಜನಗರ: ಜಿಲ್ಲಾ ಅಯುಷ್ ವೈದ್ಯಾಧಿಕಾರಿ ಡಾ.ರಾಚಯ್ಯ ಕೋವಿಡ್-19 ಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕು ದೃಢಪಟ್ಟ ನಂತರ ಜುಲೈ 26ರಿಂದ ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಡಾ.ರಾಚಯ್ಯ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಮೈಸೂರಿನ ಉದಯಗಿರಿ ನಿವಾಸಿಯಾಗಿದ್ದ ರಾಚಯ್ಯ ಅವರು ಕಳೆದ 22 ವರ್ಷಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜುಲೈ 31 ರಂದು ಇವರು ನಿವೃತ್ತರಾಗಿದ್ದರೂ ಸಹ ಆಸ್ಪತ್ರೆಯಲ್ಲಿ ಇದ್ದುದ್ದರಿಂದು ಇನ್ನು ಅಧಿಕಾರಿ ಹಸ್ತಾಂತರ ಮಾಡಿರಲಿಲ್ಲ. ಅಷ್ಟರೊಳಗೆ ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ.

    ಡಾ.ರಾಚಯ್ಯ ಅವರಿಗೆ ಮಧುಮೇಹ ಹಾಗು ರಕ್ತದೊತ್ತಡ ಇತ್ತು ಎಂದು ಹೇಳಲಾಗಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಆಯುಷ್ ಇಲಾಖೆಯ ಇಬ್ಬರು ಸಿಬ್ಬಂದಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ.

  • ಆಯುಷ್ ವೈದ್ಯರ, ಸ್ಟಾಫ್ ನರ್ಸ್ ಗಳ ವೇತನ ಹೆಚ್ಚಳ ಮಾಡಿ: ಆಯನೂರು ಮಂಜುನಾಥ್

    ಆಯುಷ್ ವೈದ್ಯರ, ಸ್ಟಾಫ್ ನರ್ಸ್ ಗಳ ವೇತನ ಹೆಚ್ಚಳ ಮಾಡಿ: ಆಯನೂರು ಮಂಜುನಾಥ್

    -ಹೊರಗುತ್ತಿಗೆ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳ ಸ್ವಾಗತ
    -ಈ ರೀತಿ ತಾರತಮ್ಯ ನೀತಿ ಏಕೆ?

    ಶಿವಮೊಗ್ಗ : ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಮ್ಮದೇ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.

    ನಗರದಲ್ಲಿ ಇಂದು ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೊರೊನಾ ಸೋಂಕಿನ ವಿರುದ್ಧ ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಜೀವವನ್ನು ಒತ್ತೆ ಇಟ್ಟು ಶ್ರಮದಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಸರ್ಕಾರ ಕೇವಲ ಎಂಬಿಬಿಎಸ್ ವೈದ್ಯರ ವೇತನವನ್ನು ಹೆಚ್ಚಳ ಮಾಡಿದೆ, ಅದನ್ನು ನಾನು ಸ್ವಾಗತ ಮಾಡುತ್ತೇನೆ. ಆದರೆ ಇವರಷ್ಟೇ ಕೆಲಸ ನಿರ್ವಹಿಸುವ ಆಯುಷ್ ವೈದ್ಯರಿಗೆ, ಸ್ಟಾಫ್ ನರ್ಸ್ ಗಳಿಗೆ ಮಾತ್ರ ಹೆಚ್ಚಳ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.

    ಸರ್ಕಾರವೇ ಈ ರೀತಿ ತಾರತಮ್ಯ ಮಾಡಿದರೇ ಇವರು ಯಾರ ಬಳಿ ನ್ಯಾಯ ಕೇಳಬೇಕು ಎಂದು ಎಂಎಲ್ ಸಿ ಆಯನೂರು ಮಂಜುನಾಥ್ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳ ಮಾಡಿದಂತೆ ಆಯುಷ್ ವೈದ್ಯರು ಹಾಗೂ ಸ್ಟಾಪ್ ನರ್ಸ್ ಗಳ ವೇತನವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದಾರೆ.

  • ಎಚ್.ವೈ ಮೇಟಿ ರಾಸಲೀಲೆ ಕೇಸ್: ಪ್ರಕರಣದ ಸಂತ್ರಸ್ತೆಯಿಂದ ಹೊಸ ಬಾಂಬ್

    ಎಚ್.ವೈ ಮೇಟಿ ರಾಸಲೀಲೆ ಕೇಸ್: ಪ್ರಕರಣದ ಸಂತ್ರಸ್ತೆಯಿಂದ ಹೊಸ ಬಾಂಬ್

    ಬಾಗಲಕೋಟೆ: ಮಾಜಿ ಸಚಿವ ಎಚ್.ವೈ ಮೇಟಿ ರಾಸಲೀಲೆ ಕೇಸ್‍ನಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಹೊತ್ತಿದ್ದ ವಿಜಯಲಕ್ಷ್ಮಿ ಆಯುಷ್ ಇಲಾಖೆಯ ಕರ್ಮಕಾಂಡದ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಾಗಲಕೋಟೆ ಆಯುಷ್ ಆಸ್ಪತ್ರೆಯಲ್ಲಿ ಸ್ತ್ರೀರೋಗ ಸಹಾಯಕಿಯಾಗಿದ್ದ ವಿಜಯಲಕ್ಷ್ಮಿ, ರಾಸಲೀಲೆ ಪ್ರಕರಣದ ನಂತ್ರ ಏಳು ತಿಂಗಳುಗಳ ಕಾಲ ನಾಪತ್ತೆಯಾಗಿದ್ರು. ಸದ್ಯ ದಿಢೀರ್ ಪ್ರತ್ಯಕ್ಷವಾಗಿ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಿ ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಮಹೇಶ್ವರ್‍ಗೆ ಅರ್ಜಿ ಸಲ್ಲಿಸಿದ್ರು.

    ಇದನ್ನೂ ಓದಿ: ಎಚ್.ವೈ.ಮೇಟಿ ರಾಸಲೀಲೆ ಪ್ರಕರಣದ ಸಂತ್ರಸ್ತೆ ಈ ಕಾರಣಕ್ಕೆ ಗೈರಾಗಿದ್ದಂತೆ!

    ಆಯುಷ್ ಅಧಿಕಾರಿ ವಿಜಯಲಕ್ಷ್ಮಿಯರನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಈಗ ಹೊಸ ಬಾಂಬ್ ಸಿಡಿಸಿದ್ದು, ನನ್ನನ್ನ ಕೆಲಸಕ್ಕೆ ಮರು ನೇಮಕಾತಿ ಮಾಡಿಕೊಳ್ಳದೇ ಇದ್ದರೆ, ಇಲಾಖೆಯ ಅವ್ಯವಹಾರಗಳನ್ನು ಬಯಲಿಗೆಳಿವೆ ಎಂದು ಗುಡುಗಿದ್ದಾರೆ. ನನ್ನ ಬಳಿ ಇಲಾಖೆಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ದಾಖಲೆಗಳಿವೆ. ನಾಳೆವರೆಗೂ ಕಾದು ನೋಡುತ್ತೇನೆ ಒಂದು ವೇಳೆ ನೇಮಕವಾಗದೇ ಇದ್ದರೆ ದಾಖಲೆಯನ್ನು ಬಿಡುಗಡೆಗೊಳಿಸುತ್ತೇನೆ. ಜಿಲ್ಲಾ ಆಯುಷ್ ವೈದ್ಯಾಧಿಕಾರಿಯಿಂದ ನನಗೆ ಮೋಸವಾಗಿದೆ ಎಂದು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಆಯುಷ್ ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ್ವರ್ ಗುಗ್ಗರಿ, ವಿಜಯಲಕ್ಷ್ಮಿ ಮಾಡುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ತಮ್ಮ ಬಳಿಯಿದೆ ಎಂದು ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಸವಾಲ್ ಹಾಕಿದ್ದಾರೆ.