Tag: ಆಯುಷ್ಮಾನ್ ಖುರಾನ್

  • ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್‌- ಆಯುಷ್ಮಾನ್‌ಗೆ ರಶ್ಮಿಕಾ ಮಂದಣ್ಣ ಹೀರೋಯಿನ್

    ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್‌- ಆಯುಷ್ಮಾನ್‌ಗೆ ರಶ್ಮಿಕಾ ಮಂದಣ್ಣ ಹೀರೋಯಿನ್

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅದೃಷ್ಟ ಖುಲಾಯಿಸಿದೆ. ‘ಅನಿಮಲ್’ (Animal) ಸಿನಿಮಾ ಸಕ್ಸಸ್ ಆದ್ಮೇಲೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ‘ಸಿಖಂದರ್’ ಬಳಿಕ ಮತ್ತೊಂದು ಬಂಪರ್ ಅವಕಾಶ ರಶ್ಮಿಕಾಗೆ ಸಿಕ್ಕಿದೆ.

    ಬಾಲಿವುಡ್ ನಟ ಆಯುಷ್ಮಾನ್ ಖುರಾನಾಗೆ (Ayushmann Khurrana) ರಶ್ಮಿಕಾ ನಾಯಕಿಯಾಗಿ ಫೈನಲ್ ಆಗಿದ್ದಾರೆ. ‘ಮುಂಜ್ಯ’ ಚಿತ್ರದ ನಿರ್ದೇಶಕ ಆದಿತ್ಯಾ ಸತ್ಪೋದರ್ ಡೈರೆಕ್ಷನ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಇದನ್ನೂ ಓದಿ:ಲವ್‌, ಬ್ರೇಕಪ್‌ ಬಗ್ಗೆ ಸ್ಫೋಟಕ ವಿಚಾರ ಬಿಚ್ಚಿಟ್ಟ ‘ಕಿರಾತಕ’ ನಟಿ

    ಹಾರರ್ ಕಾಮಿಡಿಯಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ರಶ್ಮಿಕಾ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದೆಯಂತೆ. ನವೆಂಬರ್‌ನಿಂದ ಸಿನಿಮಾ ಶೂಟಿಂಗ್ ಶುರು ಆಗಲಿದೆ ಎನ್ನಲಾಗಿದೆ. ಮೊದಲ ಬಾರಿಗೆ ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಕಾರಣ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.


    ಅಂದಹಾಗೆ, ಪುಷ್ಪ 2, ಅನಿಮಲ್ 2, ಸಿಖಂದರ್, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರಶ್ಮಿಕಾ ಕೈಯಲ್ಲಿವೆ.

  • ಸದ್ಯದಲ್ಲೇ ಗಂಗೂಲಿ ಬಯೋಪಿಕ್ : ಗಂಗೂಲಿ ಪಾತ್ರದಲ್ಲಿ ಆಯುಷ್ಮಾನ್

    ಸದ್ಯದಲ್ಲೇ ಗಂಗೂಲಿ ಬಯೋಪಿಕ್ : ಗಂಗೂಲಿ ಪಾತ್ರದಲ್ಲಿ ಆಯುಷ್ಮಾನ್

    ಸಿನಿಮಾ ಮತ್ತು ಕ್ರಿಕೆಟ್ (Cricket) ಪ್ರೇಮಿಗಳಿಗೆ ಸಿಹಿಸುದ್ದಿಯೊಂದು ದೊರೆತಿದ್ದು, ಅತೀ ಶೀಘ್ರದಲ್ಲೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರ ಬಯೋಪಿಕ್ ಮೂಡಿ ಬರಲಿದೆ. ಗಂಗೂಲಿ ಬಯೋಪಿಕ್ (Biopic) ತಯಾರಾಗಲಿದೆ ಎಂದು ಹಲವು ತಿಂಗಳುಗಳಿಂದ ಸುದ್ದಿ ಹರಿದಾಡುತ್ತಿತ್ತು. ರಣಬೀರ್ ಕಪೂರ್ ಅವರು ಗಂಗೂಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು.

    ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಗಂಗೂಲಿ ಪಾತ್ರವನ್ನು ರಣಬೀರ್ ಬದಲು ಆಯುಷ್ಮಾನ್ ಖುರಾನಾ (Ayushmann Koran) ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಈಗಾಗಲೇ ಚಿತ್ರದ ಕೆಲಸದಲ್ಲಿ ಐಶ್ವರ್ಯ ಬ್ಯುಸಿಯಾಗಿದ್ದಾರಂತೆ. ಆಯುಷ್ಮಾನ್ ಜೊತೆ ಮಾತುಕತೆಯೂ ಆಗಿದೆ. ಇದನ್ನೂ ಓದಿ: 69th National Film Award 2023: ಅತ್ಯುತ್ತಮ ಸಿನಿಮಾ, ರಾಕೆಟ್ರಿ ದಿ ನಂಬಿ ಎಫೆಕ್ಟ್

    ಅಂದುಕೊಂಡಂತೆ ನಡೆದರೆ ಡಿಸೆಂಬರ್ ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಹಲವು ಭಾಷೆಗಳಲ್ಲಿ ಇದು ನಿರ್ಮಾಣವಾಗಲಿದೆ. ಈಗಾಗಲೇ ಆಯುಷ್ಮಾನ್ ಖುರಾನ್ ಕ್ರಿಕೆಟ್ ಕುರಿತಾಗಿ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಗಂಗೂಲಿ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಒಂದಷ್ಟು ಹೊತ್ತು ಸಮಯ ಕಳೆದಿದ್ದಾರೆ ಎನ್ನುವ ಮಾಹಿತಿಯೂ ಇದೆ.

    ಕ್ರಿಕೆಟ್ ಮತ್ತು ಕ್ರಿಕೆಟ್ ಆಟಗಾರರ ಕುರಿತಾಗಿ ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ಈ ಬಾರಿ ಗಂಗೂಲಿ ಕುರಿತಾದ ಸಿನಿಮಾವಾಗುತ್ತಿದೆ. ಲವ್ ರಂಜನ್ ಮತ್ತು ಅಂಕುರ್ ಗರ್ಗ್‍ ಈ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಗಂಗೂಲಿಯ ಸಾಧನೆಯನ್ನು ತೆರೆಗೆ ತರಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೌರವ್ ಗಂಗೂಲಿ ಬಯೋಪಿಕ್‌ಗೆ ರಣ್‌ಬೀರ್ ಬದಲು ಮತ್ತೊಬ್ಬ ನಟನ ಎಂಟ್ರಿ

    ಸೌರವ್ ಗಂಗೂಲಿ ಬಯೋಪಿಕ್‌ಗೆ ರಣ್‌ಬೀರ್ ಬದಲು ಮತ್ತೊಬ್ಬ ನಟನ ಎಂಟ್ರಿ

    ಬಾಲಿವುಡ್ (Bollywood)  ಅಂಗಳದಲ್ಲಿ ಸೌರವ್ ಗಂಗೂಲಿ (Sourav Ganguly) ಬರುವ ಬಗ್ಗೆ ಈ ಹಿಂದೆಯೇ ಬಿಗ್ ಅಪ್‌ಡೇಟ್ ನೀಡಿದ್ದರು. ಸೌರವ್ ಗಂಗೂಲಿ ರೋಲ್‌ನಲ್ಲಿ ರಣಬೀರ್ ಕಪೂರ್ ನಟಿಸಬೇಕಿತ್ತು, ಆದರೆ ಸೌರವ್ ಪಾತ್ರಕ್ಕೆ ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ಕಾಣಿಸಿಕೊಳ್ಳುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ.

    ಚಿತ್ರರಂಗದಲ್ಲಿ ಬಯೋಪಿಕ್‌ಗಳ ಹಾವಳಿ ಜಾಸ್ತಿಯಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಜೀವನವನ್ನು ಈಗಾಗಲೇ ಬೆಳ್ಳಿಪರದೆ ತೋರಿಸುವ ಟ್ರೆಂಡ್ ಶುರುವಾಗಿದೆ. ಕೆಲ ವರ್ಷಗಳ ಹಿಂದೆ ಕ್ರಿಕೆಟಿಗ ಎಂ.ಎಸ್ ಧೋನಿ (M.s Dhoni) ಬಯೋಪಿಕ್ ಸಿನಿಮಾ ಬಂದಿತ್ತು. ಚಿತ್ರಮಂದಿರದಲ್ಲಿ ಸಿನಿಮಾ ಕಮಾಲ್ ಮಾಡಿತ್ತು. ಈಗ ಮತ್ತೊಬ್ಬ ಕ್ರಿಕೆಟಿಗ ಸೌರವ್ ಗಂಗೂಲಿ ಜೀವನದ ಬಗ್ಗೆ ಬಯೋಪಿಕ್ ಬರುವ ಈ ಹಿಂದೆಯೇ ತಿಳಿಸಲಾಗಿತ್ತು. ಸೌರವ್ ಪಾತ್ರ ರಣಬೀರ್ ಕಪೂರ್ ನಟಿಸೋದು ಫೈನಲ್ ಆಗಿತ್ತು. ಆದರೆ ಈಗ ಹೀರೋ ಚೇಂಜ್ ಆಗಿದ್ದಾರೆ.

    ಈಗಾಗಲೇ ಸಂಜಯ್ ದತ್ ಬಯೋಪಿಕ್ ಮಾಡಿ ನಟಿಸಿ ಸೈ ಎನಿಸಿಕೊಂಡಿರುವ ರಣ್‌ಬೀರ್ ಕಪೂರ್ (Ranbir Kapoor) ಅವರು ಸೌರವ್ ಬಯೋಪಿಕ್‌ಗೆ ಸೆಲೆಕ್ಟ್ ಆಗಿದ್ದರು. ಆದರೆ ಈಗ ಸಿನಿಮಾದಲ್ಲಿ ಕೊಂಚ ಬದಲಾವಣೆ ಆಗಿದೆ. ರಣಬೀರ್ ಬದಲು ಆಯುಷ್ಮಾನ್ ಖುರಾನ್ ನಟಿಸಲಿದ್ದಾರೆ. ಸೌರವ್ ಗಂಗೂಲಿ ರೋಲ್‌ಗೆ ನಟ ಆಯುಷ್ಮಾನ್ ಕಾಣಿಸಿಕೊಳ್ಳಲಿದ್ದಾರಂತೆ. ಇದನ್ನೂ ಓದಿ:27 ವರ್ಷಗಳ ಬಳಿಕ ಮಲಯಾಳಂ ಸಿನಿಮಾ ರಂಗಕ್ಕೆ ಕೀರವಾಣಿ ಎಂಟ್ರಿ

    ಒಂದ್ ಕಡೆ ರಣ್‌ಬೀರ್- ಆಯುಷ್ಮಾನ್ ಹೆಸರು ಚಾಲ್ತಿಯಲ್ಲಿದ್ರೆ, ಮತ್ತೊಂದು ಕಡೆ ಈ ಚಿತ್ರಕ್ಕೆ ರಜನಿಕಾಂತ್ ಪುತ್ರಿ ಐಶ್ವರ್ಯ (Aishwarya Rajanikanth) ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ.? ಈ ಬಗ್ಗೆ ಚಿತ್ರತಂಡ ಹೇಳುವವರೆಗೂ ಕಾದುನೋಡಬೇಕಿದೆ.

  • ಬಾಲಿವುಡ್ ಖ್ಯಾತ ನಟ ಆಯುಷ್ಮಾನ್ ಖುರಾನಾ ತಂದೆ ನಿಧನ

    ಬಾಲಿವುಡ್ ಖ್ಯಾತ ನಟ ಆಯುಷ್ಮಾನ್ ಖುರಾನಾ ತಂದೆ ನಿಧನ

    ಬಾಲಿವುಡ್ ಖ್ಯಾತ ನಟ ಆಯುಷ್ಮಾನ್ ಖುರಾನಾ (Ayushmann Khurran) ಅವರ ತಂದೆ ಪಿ. ಖುರಾನಾ (P. Khurran) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಪಂಜಾಬ್ (Punjab) ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳಿಂದ ಅವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಪಿ.ಖುರಾನಾ ಮೃತಪಟ್ಟಿದ್ದಾರೆ

    ಆಯುಷ್ಮಾನ್ ಮತ್ತು ಅಪರಶಕ್ತಿ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅವರು ಅಗಲಿದ್ದಾರೆ. ನಿಧನದ (Passed Away) ಸುದ್ದಿಯನ್ನು ಅಪರಶಕ್ತಿ ಅವರ ವಕ್ತಾರರು ಖಚಿತ ಪಡಿಸಿದ್ದು, ಖುರಾನಾ ಕುಟುಂಬ ದುಃಖದಲ್ಲಿದೆ. ಅವರ ಅಗಲಿಕೆಯ ನೋವನ್ನು ಭರಿಸುವಂತಹ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದಿದ್ದಾರೆ. ಇದನ್ನೂ ಓದಿ:ಕಾಲೆಳೆದ ನಟಿಗೆ ಸ್ನೇಹದ ಹಸ್ತಚಾಚಿದ ರಶ್ಮಿಕಾ ಮಂದಣ್ಣ

    ಪಿ. ಖುರಾನಾ ಪ್ರಸಿದ್ಧ ಜ್ಯೋತಿಷಿಯಾಗಿದ್ದು, ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದರು. ಈ ಕುರಿತಾಗಿ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಮಗನು ಸಿನಿಮಾ ರಂಗದಲ್ಲಿ ತೊಡಗಿಕೊಳ್ಳಲು ಇವರೇ ಕಾರಣ. ತಂದೆಯ ಆಸೆಯಂತೆಯೇ ಆಯುಷ್ಮಾನ್ ಬಾಲಿವುಡ್ ಗೆ ಎಂಟ್ರಿ ಕೊಟ್ಟು ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ.