Tag: ಆಯುರ್ವೇದಿಕ್

  • ಸೋಂಕಿತರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ ರೇಣುಕಾ ವಿದ್ಯಾಪೀಠ

    ಸೋಂಕಿತರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ ರೇಣುಕಾ ವಿದ್ಯಾಪೀಠ

    ತುಮಕೂರು: ರೇಣುಕಾ ವಿದ್ಯಾಪೀಠ ಎಂಬ ವಿದ್ಯಾ ಸಂಸ್ಥೆ ವಿದ್ಯಾದಾನ ಜೊತೆ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

    ಇಡೀ ವಿದ್ಯಾಸಂಸ್ಥೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿ ಕೋವಿಡ್ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ. 150 ಬೇಡ್‍ಗಳನ್ನು ಮಾಡಿ ಅದರಲ್ಲಿ 40 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿವರೆಗೂ 550 ಸೋಂಕಿತರು ಗುಣಮುಖರಾಗಿ ಹೋಗಿದ್ದಾರೆ. ತಜ್ಞ ವೈದ್ಯರು ಸೇರಿದಂತೆ ದಾದಿಯರು 24 ಗಂಟೆ ಇಲ್ಲಿ ಇದ್ದು ಸೋಂಕಿತರ ಆರೋಗ್ಯ ನೋಡುತ್ತಿದ್ದಾರೆ. ಸೋಂಕಿತರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದು, ರೋಗನಿರೋಧಕ ಶಕ್ತಿ ಹೆಚ್ಚಾಗುವ ಆಹಾರವನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: ಬಿಎಸ್‍ವೈಗೆ ಆಡಳಿತ ನಡೆಸಲು ಆಗುತ್ತಿಲ್ಲ,ಅವರ ಪುತ್ರ ಆಡಳಿತ ನಡೆಸುತ್ತಿದ್ದಾರೆ: ಶಾಸಕ ಶರಣಬಸಪ್ಪ ದರ್ಶನಾಪುರ

    ಬೆಳಗ್ಗೆ ಎದ್ದ ತಕ್ಷಣ ಆಯುರ್ವೇದಿಕ್ ಕಷಾಯ, ಬಳಿಕ ಯೋಗಾಭ್ಯಾಸ. ಉಪಹಾರ, ಮಧ್ಯಾಹ್ನ ಊಟ, ಹಣ್ಣು ಹಂಪಲು, ಅರಿಶಿಣ ಮಿಶ್ರಿತ ಹಾಲು ಕೊಟ್ಟು ಸೋಂಕಿತರನ್ನು ಗುಣಮುಖರನ್ನಾಗಿ ಮಾಡಲಾಗುತ್ತಿದೆ. ಸೋಂಕಿತರ ಮಾನಸಿಕ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆಧ್ಯಾತ್ಮಿಕತೆಗೆ ಹೆಚ್ಚು ಒತ್ತುಕೊಟ್ಟು ಸಾಧು ಸಂತರಿಂದ ಪ್ರವಚನ ಮಾಡಿಸಲಾಗುತ್ತಿದೆ.

    ಸಿದ್ದಗಂಗಾ ಶ್ರೀಗಳು ಸೇರಿದಂತೆ ಹಲವು ಸ್ವಾಮಿಜಿಗಳು ಪ್ರವಚನ ಮಾಡಿ ಸೋಂಕಿತರ ಆತ್ಮಬಲ ಹೆಚ್ಚಿಸಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಬಡವರ ಸೇವೆ ಮಾಡುತ್ತಾ ಬಂದಿದೆ. ರೇಣುಕಾ ವಿದ್ಯಾಪೀಠ ಇವರ ಈ ಸೇವೆಗೆ ಶ್ಲಾಘನೆ ವ್ಯಕ್ತವಾಗಿದೆ.

  • ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಲೈಂಗಿಕ ಕಿರುಕುಳ!

    ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಲೈಂಗಿಕ ಕಿರುಕುಳ!

    ಗದಗ: ಜಿಲ್ಲೆಯ ಮುಂಡರಗಿ ಎಸ್‍ಬಿಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್‍ನಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಸ್ವತಃ ವಿದ್ಯಾರ್ಥಿನಿ ಹಾಗೂ ಪೋಷಕರು ಆರೋಪ ಮಾಡುತ್ತಿದ್ದಾರೆ.

    ವಿಜಯಪುರ ಮೂಲದ ವಿದ್ಯಾರ್ಥಿನಿ ಹೇಮಲತಾ(ಹೆಸರು ಬದಲಾಯಿಸಲಾಗಿದೆ) ಬಿಎಎಂಎಸ್ ಮೂರನೇ ವರ್ಷ ವ್ಯಾಸಂಗ ಮಾಡುತ್ತಿದ್ದಾಳೆ. ಹೇಮಲತಾ ಗೆಳತಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಅಲ್ಲದೇ ರೂಮಿನಲ್ಲಿ ಇದ್ದಾಗ ಆಕೆ ತನ್ನ ಬಾಯ್‍ಫ್ರೆಂಡ್ ಜೊತೆ ಯಾವಾಗಲೂ ಫೋನಿನಲ್ಲಿ ಮಾತನಾಡುತ್ತಿದ್ದಳು. ಇದ್ದರಿಂದ ಹೇಮಲತಾಗೆ ತೊಂದರೆಯಾಗಿ ಆಕೆ ತನ್ನ ಗೆಳತಿಗೆ ಬೈದಿದ್ದಾಳೆ. ಆ ಯುವತಿ ಹೇಮಲತಾ ತನಗೆ ಬೈದಿದ್ದನ್ನು ತನ್ನ ಬಾಯ್‍ಫ್ರೆಂಡ್‍ಗೆ ತಿಳಿಸಿದ್ದು, ಆತ ತನ್ನ ಸ್ನೇಹಿತರ ಜೊತೆ ಸೇರಿ ಹೇಮಲತಾಳಿಗೆ ಬೆದರಿಕೆ ಹಾಕಿದ್ದನು.

    ತನಗೆ ಬೆದರಿಕೆ ಹಾಕಿದ ವಿಷಯವನ್ನೂ ಹೇಮಲತಾ ಕಾಲೇಜಿನ ಮುಖ್ಯಸ್ಥ ಗುರುಮೂರ್ತಿ ಅವರಗೆ ತಿಳಿಸಿದ್ದರು. ಆದರೆ ಗುರುಮೂರ್ತಿ ಹೇಮಲತಾ ದೂರನ್ನು ಪರಿಗಣಿಸಲಿಲ್ಲ. ಅಲ್ಲದೇ ಆಕೆಗೆ ಎಲ್ಲರ ಮುಂದೆ ಅವಮಾನ ಮಾಡಿದ್ದಾರೆ. ಈ ಅವಮಾನದಿಂದ ಹೇಮಲತಾ ಆತ್ಮಹತ್ಯೆಗೂ ಮುಂದಾಗಿದ್ದಳು. ಆಗ ಆಕೆ ತಾಯಿ ಹೇಮಲತಾಳನ್ನು ಆಸ್ಪತ್ರೆಗೆ ಸೇರಿಸಿದ್ದರು. ಸದ್ಯ ಸಂಸ್ಥೆಯ ಮುಖ್ಯಸ್ಥನ ನಡವಳಿಕೆ ಪ್ರಶ್ನೆ ಮಾಡಿದಕ್ಕೆ ಈ ಎಲ್ಲಾ ಗಲಾಟೆಗೆ ಕಾರಣವಾಯಿತು. ಈ ಸಂಸ್ಥೆ ಮುಖ್ಯಸ್ಥ ಗುರುಮೂರ್ತಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಹೇಮಲತಾ ಆರೋಪಿಸಿದ್ದಾರೆ.

    ಗುರುಮೂರ್ತಿ ಹೇಳಿದಂತೆ ವಿದ್ಯಾರ್ಥಿನಿಯರು ಕೇಳದಿದ್ದರೆ ಇಂಟರ್‍ನಲ್ ಮಾಕ್ರ್ಸ್, ಅಟೆಂಡೆನ್ಸ್ ಯಾವುದು ಇಲ್ಲದೆ ಆ ವಿದ್ಯಾರ್ಥಿನಿಯರ ಕಷ್ಟಪಡುವಂತಾಗಿದೆ. ಹೀಗಾಗಿ ನೊಂದ ವಿದ್ಯಾರ್ಥಿನಿ ಹಾಗೂ ತಾಯಿ ಈಗ ತಹಶೀಲ್ದಾರ್ ಮುಂದೆ ಕಣ್ಣೀರಿಡುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಅಂತ ಅವಲತ್ತುಕೊಂಡಿದ್ದಾರೆ. ಮುಂಡರಗಿ ತಹಶೀಲ್ದಾರ್ ಭ್ರಮರಾಂಬ ಸಮ್ಮುಖದಲ್ಲೇ ಸಂಸ್ಥೆಯ ಮುಖ್ಯಸ್ಥನಿಗೆ ವಿದ್ಯಾರ್ಥಿನಿ ಚಪ್ಪಯಲ್ಲಿ ಹೊಡೆಯಲು ಮುಂದಾಗಿದ್ದಳು. ಆಗ ಸಭೆಯಲ್ಲಿದ್ದವರು ತಡೆದಿದ್ದಾರೆ.

    ಮುಂಡರಗಿ ಪರೀಕ್ಷಾ ಕೇಂದ್ರದಿಂದ ಏಕಾಏಕಿ ವಿದ್ಯಾರ್ಥಿನಿಯನ್ನು ಗದಗ ಡಿಜಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜ್‍ನ ಪರೀಕ್ಷೆ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ. ಇದನ್ನು ಕೇಳಲು ವಿದ್ಯಾರ್ಥಿನಿ ಹಾಗೂ ತಾಯಿ ಸಂಸ್ಥೆಯ ಪ್ರವೇಶ ಮಾಡುತ್ತಿದ್ದಂತೆ ಪೊಲೀಸರು ಅಡ್ಡಿ ಮಾಡಿದ್ದರು. ಆಗ ಪೊಲೀಸರ ಹಾಗೂ ವಿದ್ಯಾರ್ಥಿನಿ ತಾಯಿ ನಡುವೆ ಮಾತಿನ ಚಕಮಕಿ ನಡೆಯಿತು. ಮಗಳ ಸ್ಥಿತಿ ಕಂಡು ತಾಯಿ ಕಣ್ಣೀರಿಟ್ಟರು. ವಿದ್ಯಾರ್ಥಿನಿ ತಾಯಿ ಕಾಲೇಜ್ ಎಂಟ್ರಿ ವಿಷಯ ತಿಳಿದ ಗುರುಮೂರ್ತಿ ನಾಪತ್ತೆಯಾದರು. ಸದ್ಯ ಈ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv