Tag: ಆಯಾ

  • ಪೋಷಕರಿಲ್ಲದ ಸಮಯದಲ್ಲಿ ಬಾಲಕನನ್ನು ಥಳಿಸಿ ಚಿತ್ರಹಿಂಸೆ ನೀಡಿದ ಆಯಾ

    ಪೋಷಕರಿಲ್ಲದ ಸಮಯದಲ್ಲಿ ಬಾಲಕನನ್ನು ಥಳಿಸಿ ಚಿತ್ರಹಿಂಸೆ ನೀಡಿದ ಆಯಾ

    ಭೋಪಾಲ್: ಪೋಷಕರು ಕೆಲಸಕ್ಕೆ ಹೋದ ಸಮಯದಲ್ಲಿ ಆಯಾ 2 ವರ್ಷದ ಮಗುವಿಗೆ ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಮಧ್ಯಪ್ರದೇಶದ ಜಬಲ್ಪುರದ ರಜಿನಿ ಚೌಧರಿ ಆರೋಪಿ. ಈಕೆಗೆ ಮಗುವನ್ನು ನೋಡಿಕೊಳ್ಳಲು ಪೋಷಕರು ಆಹಾರದ ಜೊತೆಗೆ ಮಾಸಿಕ 5,000 ರೂ. ನೀಡುತ್ತಿದ್ದರು. ಪೋಷಕರಿಬ್ಬರು ಕೆಲಸಕ್ಕೆ ಹೋಗುತ್ತಿದ್ದರಿಂದ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಈಕೆಗೆ ವಹಿಸಲಾಗಿತ್ತು.

    ದಿನ ಕಳೆದಂತೆ ಎರಡು ವರ್ಷದ ಬಾಲಕ ಮಂಕಾಗಿ ಹಾಗೂ ದುರ್ಬಲನಾಗಿರುವುದನ್ನು ನೋಡಿದ್ದ ಪೋಷಕರು ಕಳವಳಗೊಂಡಿದ್ದರು. ಇದರಿಂದಾಗಿ ಆತನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಗುವಿನ ಅಂಗಾಂಗಗಳು ಊದಿಕೊಂಡಿರುವುದು ಕಂಡು ಬಂದಿತ್ತು. ಇದರಿಂದಾಗಿ ಪೋಷಕರು ತಾವು ಇಲ್ಲದಿರುವಾಗ ಏನೋ ತೊಂದರೆ ಆಗಿದೆ ಎಂದು ಶಂಕಿಸಿ ಮನೆಯಲ್ಲಿ ಸಿಸಿ ಕ್ಯಾಮೆರಾ ಹಾಕಿದ್ದರು. ಇದನ್ನೂ ಓದಿ: ಕಾರಹುಣ್ಣಿವೆ ಕರಿ ಹರಿಯುವ ವೇಳೆ ಭೀಮಾನದಿಗೆ ಹಾರಿ ಪ್ರಾಣಬಿಟ್ಟ ಎತ್ತು

    POLICE JEEP

    ಇದಾದ ಬಳಿಕ ಸಿಸಿಟಿವಿಯ ದೃಶ್ಯಾವಳಿಗಳನ್ನು ನೋಡಿದ ಪೋಷಕರು ಭಯಭೀತರಾಗಿದ್ದಾರೆ. ದೃಶ್ಯದಲ್ಲಿ ರಜನಿ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೇ ರಜನಿ ಮಗುವನ್ನು ಥಳಿಸುವುದು, ಕೂದಲಿಡಿದು ಎಳೆದುಕೊಂಡು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೆರೆಡು ದಿನ ಮಳೆ: ಹವಾಮಾನ ಇಲಾಖೆ

  • ಅಮ್ಮ ಬೇಕು ಅಂತ ಹಠಹಿಡಿದಿದ್ದ 4ರ ಕಂದಮ್ಮನ ಬೆನ್ನಿಗೆ ಬರೆ ಎಳೆದ ಶಿಕ್ಷಕ, ಆಯಾ!

    ಅಮ್ಮ ಬೇಕು ಅಂತ ಹಠಹಿಡಿದಿದ್ದ 4ರ ಕಂದಮ್ಮನ ಬೆನ್ನಿಗೆ ಬರೆ ಎಳೆದ ಶಿಕ್ಷಕ, ಆಯಾ!

    ಹುಬ್ಬಳ್ಳಿ: ಅಮ್ಮ ಬೇಕು ಅಮ್ಮ ಎಂದು ಹಠಹಿಡಿದಿದ್ದ 4 ವರ್ಷದ ಮಗುವಿನ ಬೆನ್ನಿಗೆ ನರ್ಸರಿ ಶಾಲೆಯ ಶಿಕ್ಷಕ ಹಾಗೂ ಆಯಾ ಬರೆ ಎಳೆದ ಅಮಾನವೀಯ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಹೆಗ್ಗೇರಿ ಪ್ರದೇಶದ ಬಾಲಾಜಿ ನರ್ಸರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನನಗೆ ಅಮ್ಮ ಬೇಕು ಎಂದು ಹಠ ಮಾಡಿದ್ದಕ್ಕೆ ಶಾಲೆಯ ಶಿಕ್ಷಕ ಹಾಗೂ ಆಯಾ ನನ್ನ ಮಗನ ಬೆನ್ನ ಮೇಲೆ ಬರೆ ಎಳೆದಿದ್ದಾರೆ ಎಂದು ಮಗುವಿನ ತಾಯಿ ಕಾವೇರಿ ಆರೋಪಿಸಿದ್ದಾರೆ.

    ಹೆಗ್ಗೇರಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಸತೀಶ್ ನಾಯ್ಡು ಈ ನರ್ಸರಿ ಶಾಲೆಯನ್ನು ಆರಂಭಿಸಿದ್ದು, 35ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅಲ್ಲದೇ ಕಾವೇರಿ ಅವರು ಈಗಷ್ಟೇ ಒಂದು ವಾರದ ಹಿಂದೆ ತನ್ನ ಮಗನನ್ನು ಶಾಲೆಗೆ ಸೇರಿಸಿದ್ದಾರೆ. ಶಾಲೆಗೆ ಪ್ರತಿನಿತ್ಯ ಆಗಮಿಸುವ ಬಾಲಕ ಪ್ರತಿದಿನ ಅಮ್ಮ ಬೇಕು ಅಮ್ಮ ಬೇಕು ಅಂತ ಹಠ ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಶಾಲೆಯ ಆಯಾ ಬಾಲಕನ ಬೆನ್ನಿಗೆ ಬರೆ ಎಳೆದು ಗಾಯಗೊಳಿಸಿದ್ದಾಳೆ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಬಂದಿರುವ ಆರೋಪವನ್ನು ಶಿಕ್ಷಕ ಸತೀಶ್ ನಾಯ್ಡು ಅಲ್ಲಗಳೆದಿದ್ದು, ಆ ರೀತಿ ನಡೆದುಕೊಂಡಿಲ್ಲ ಎಂದಿದ್ದಾರೆ. ಆದರೆ ಈ ಕುರಿತಂತೆ ಮಗುವಿನ ತಾಯಿ ಕಾವೇರಿ, ಶಿಕ್ಷಕ ಸತೀಶ ಹಾಗೂ ಆಯಾ ಮೇಲೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv