Tag: ಆಯಧ ಪೂಜೆ

  • ಅಯುಧಕ್ಕೆ ಪೂಜೆ ಸಲ್ಲಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಶಾಸಕ

    ಅಯುಧಕ್ಕೆ ಪೂಜೆ ಸಲ್ಲಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಶಾಸಕ

    ಕೋಲಾರ: ವಿಜಯದಶಮಿ ಅಂಗವಾಗಿ ಆಯುಧಗಳಿಗೆ ಪೂಜೆ ಸಲ್ಲಿಸಿದ ಬಳಿಕ ನಾಡ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಮಾಲೂರು ಶಾಸಕ ಕೆ.ವೈ ನಂಜೇಗೌಡ ವಿವಾದಕ್ಕೆ ಕಾರಣರಾಗಿದ್ದಾರೆ.

    ನಂಜೇಗೌಡ ಸ್ವಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲೂಕು ಕೊಮ್ಮನಹಳ್ಳಿಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ನಾಡ ಬಂದೂಕಿನಿಂದ ಗಾಳಿಯಲ್ಲಿ 4 ಸುತ್ತು ಗುಂಡು ಹಾರಿಸಿ ಗ್ರಾಮಸ್ಥರೊಂದಿಗೆ ಹಬ್ಬ ಆಚರಣೆ ಮಾಡಿದ್ದರು. ಮೊದಲು ಬನ್ನಿಮರ, ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ಶಾಸಕರ ಕುಟುಂಬ, ನಂತರ ಪೂಜೆಗೆ ಇಡಲಾಗಿದ್ದ ನಾಡ ಬಂದೂಕಿನಿಂದ ನಂಜೇಗೌಡರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪ್ರತೀ ವರ್ಷದ ಸಂಪ್ರದಾಯದಂತೆ ಗ್ರಾಮದಲ್ಲಿ ದಸರಾ ಆಚರಣೆ ಮಾಡುವಂತೆ ನಂಜೇಗೌಡ, ಪೂಜೆ ಮಾಡಿ ಬಂದೂಕಿನಿಂದ ಗುಂಡು ಹಾರಿಸಿ ಇದೀಗ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನೂ ಓದಿ: ದುರ್ಗಾದೇವಿ ಮೆರವಣಿಗೆ ವೇಳೆ ಹರಿದ ಕಾರು 1 ಸಾವು 20 ಜನರಿಗೆ ಗಾಯ

    ಘಟನೆ ಸಂಬಂಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಲೈಸನ್ಸ್ ಪಡೆದವರು ಮಾತ್ರ ಉಪಯೋಗಿಸ ಬೇಕಿರುವ ಬಂದೂಕನ್ನು ಶಾಸಕರು ಉಪಯೋಗಿಸಿದ್ದು ಮತ್ತು ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿದ್ದು ಅಪರಾಧ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಶಾಸಕ ನಂಜೇಗೌಡ ತಮ್ಮ ಈರೇಗೌಡ ಹೆಸರಿನಲ್ಲಿ ಬಂದೂಕಿನ ಪರವಾನಿಗೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: 4 ವರ್ಷದ ಬಳಿಕ ಪಾಲಾರ್‌ ಜಲಾಶಯ ಭರ್ತಿ- ಬರದ ನಾಡು ಕೋಲಾರದಲ್ಲಿ ಭಾರೀ ಮಳೆ

  • ಸ್ಯಾಂಡಲ್‍ವುಡ್‍ನವರಿಂದಲೇ ಕೋಟಿಗೊಬ್ಬನ ಓಟಕ್ಕೆ ತಡೆ – ಜಾಕ್ ಮಂಜು ಆರೋಪ

    ಸ್ಯಾಂಡಲ್‍ವುಡ್‍ನವರಿಂದಲೇ ಕೋಟಿಗೊಬ್ಬನ ಓಟಕ್ಕೆ ತಡೆ – ಜಾಕ್ ಮಂಜು ಆರೋಪ

    – ಕೋಟಿಗೊಬ್ಬನಿಗೆ ಅಡ್ಡಗಾಲಾಗಿದ್ದೇ ಇಂಡಸ್ಟ್ರೀಯವರು
    – ಸಿ. ಪುಟ್ಟಣ್ಣ ವಿರುದ್ಧ ಗರಂ ಆದ ಜಾಕ್ ಮಂಜು

    ಬೆಂಗಳೂರು: ಆಯುಧ ಪೂಜೆ ದಿನ ತೆರೆಗೆ ಬರಲು ಸಿದ್ಧವಾಗಿದ್ದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ ಸಿನಿಮಾ ವಿತರಕರ ತೊಂದರೆಯಿಂದಾಗಿ ತೆರೆಗೆ ಬಂದಿರಲಿಲ್ಲ. ಇದಕ್ಕೆ ಕಾರಣ ಕನ್ನಡ ಸಿನಿಮಾ ಇಂಡಸ್ಟ್ರಿಯವರು. ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದವರು ಸುದೀಪ್ ಸಿನಿಮಾಗೆ ಸಮಸ್ಯೆ ಮಾಡಿದ್ದಾರೆ ಎಂದು ಸುದೀಪ್ ಆಪ್ತ ಜಾಕ್ ಮಂಜು ಆರೋಪಿಸಿದ್ದಾರೆ.

    ಸಿನಿಮಾ ನಿನ್ನೆ ರಿಲೀಸ್ ಆಗ ಬೇಕಿತ್ತು ಆದರೆ ಆಗಿರಲಿಲ್ಲ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೋಟಿಗೊಬ್ಬ ಸಿನಿಮಾ ನಿಲ್ಲಿಸಿದವರು ಸ್ಯಾಂಡಲ್‍ವುಡ್‍ನವರೇ. ಕೆಲವು ರಾಜಕಾರಣಿಗಳು ಎಲೆಕ್ಷನ್ ಪ್ರಾಚಾರಕ್ಕೆ ಕರೆಯುತ್ತಾರೆ. ಕೆಲವರು ಸುದೀಪ್ ಅವರ ಮನೆಗೆ ಬಂದು ಅಣ್ಣಾ ಅಂತ ಫೋಟೋ ತೆಗೆಸಿಕೊಳ್ತಾರೆ. ಅವರೇ ಸುದೀಪ್ ಸಿನಿಮಾಗೆ ಥೇಟರ್ ಕೊಡ್ಬೇಡಿ ಅಂತ ಫೋನ್ ಮಾಡ್ತಾರೆ. ಕೋಟಿಗೊಬ್ಬ ಸಿನಿಮಾದ ವಿತರಕರಿಗೆ ಹಣ ಸಿಗದಂತೆ ಕಡೆಗಳಿಕೆಯಲ್ಲಿ ಕೆಲಸ ಮಾಡಿದ್ದಾರೆ ಸಿನಿಮಾ ರಿಲೀಸ್ ತಡವಾಗಿದ್ದರಿಂದ ಸುಮಾರು 10-12 ಕೋಟಿ ರೂ. ನಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇಂದಿನಿಂದ ಕೋಟಿಗೊಬ್ಬ 3 ಅಬ್ಬರ – 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್

    ಕೆಲವು ನಿರ್ಮಾಪರು, ಸುದೀಪ್ ಅವರ ಸಿನಿಮಾ ಬಿಡುಗಡೆಗೆ ಸಮಸ್ಯೆ ಮಾಡಿದ್ದಾರೆ. ಜೊತೆಗೆ ಪೈರಸಿ ಮಾಡಿ ಸಿಕ್ಕಿಹಾಕಿಕೊಂಡಿದ್ದ ಆರೋಪಿಗಳ ಪರವಾಗಿ ಪೊಲೀಸರಿಗೆ ಫೋನ್ ಮಾಡಿ ಬಿಡಿಸುವ ಕೆಲಸ ಎಂಎಲ್‍ಸಿ ಪುಟ್ಟಣ್ಣ ಅವರು ಮಾಡಿದ್ದಾರೆ. ಇದು ತಪ್ಪು. ಗಂಡಸಾಗಿದ್ರೆ ಒಳ್ಳೆ ರೀತಿಯಲ್ಲಿ ಬದುಕಿ, ಬದುಕಲು ಬಿಡಿ. ಈ ರೀತಿಯಲ್ಲಿ ಬದುಕಬೇಡಿ ಎಂದು ಜಾಕ್ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

    ಸುದೀಪ್ ಅವರು ಭೂಗತಪಾತಕಿಗಳ ಜೊತೆ ಸೇರಲ್ಲ. ಅವರಿಗೋಸ್ಕರ ಸಿನಿಮಾ ಮಾಡಲ್ಲ. ಕೆಲವು ರಾಜಕಾರಣಿಗಳ ಜೊತೆ ಸೇರಲ್ಲ. ಅವರೆಲ್ಲಾ ಒಟ್ಟಾಗಿ ಸೇರಿ ಈ ಷ್ಯಂಡ್ಯಂತ್ರ ಮಾಡಿದ್ದಾರೆ ಎಂದು ಜಾಕ್ ಮಂಜು ಗಂಭೀರ ಆರೋಪಮಾಡಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

  • ಸರ್ಕಾರಿ ಬಸ್ ಪೂಜೆಗೆ 100 ರೂಪಾಯಿ ನೀಡಿದ ಸಾರಿಗೆ ಇಲಾಖೆ

    ಸರ್ಕಾರಿ ಬಸ್ ಪೂಜೆಗೆ 100 ರೂಪಾಯಿ ನೀಡಿದ ಸಾರಿಗೆ ಇಲಾಖೆ

    -ಕಾರ್, ಜೀಪ್ ಪೂಜೆಗೆ 40 ರೂಪಾಯಿ

    ಬೆಂಗಳೂರು: ಸರ್ಕಾರಿ ಬಸ್ ಆಯುಧ ಪೂಜೆಗಾಗಿ ಸಾರಿಗೆ ಇಲಾಖೆ ನೌಕರರಿಗೆ 100 ರೂಪಾಯಿ ನೀಡಿರುವುದು ಸುದ್ದಿಯಾಗಿದೆ.

    ಸಾರಿಗೆ ಸಚಿವರೇನೋ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಬ್ಬ ಮಾಡುತ್ತಾರೆ. ಅವ್ರಿಗೇನು ಕಡಿಮೆ ಹೇಳಿ, ಸಾರಿಗೆ ಇಲಾಖೆ ನನಗೆ ಬೇಡ ಎನ್ನುತ್ತಿದ್ದ ಅವರು ಕೊನೆಗೆ ಅನಿವಾರ್ಯವಾಗಿ ಸಾರಿಗೆ ಸಚಿವರಾಗಿ ಮುಂದುವರೆಯುತ್ತಿದ್ದು, ಶ್ರೀರಾಮುಲು ಅವ್ರಿಗೆ ಸಾರಿಗೆ ನೌಕರರ ಕಷ್ಟವೇನು ಅನ್ನೋದು ತಿಳಿದಿಲ್ಲ. ಸಾರಿಗೆ ನೌಕರರ ಕಷ್ಟ ತಿಳಿದಿದ್ರೆ ಖಂಡಿತ ಹೀಗೆ ಬಸ್ ಪೂಜೆಗೆ ಅಂತಾ 100 ರೂ ನೀಡ್ತಿರಲಿಲ್ಲ. ಸಾರಿಗೆ ಇಲಾಖೆಯವರು ಆಯುಧ ಪೂಜೆ ಪ್ರಯುಕ್ತ ಬಸ್ ಪೂಜೆಗೆ 100 ರೂ ನೀಡಿದ್ದಾರೆ. ಇವತ್ತಿನ ದುಬಾರಿ ದುನಿಯಾದಲ್ಲಿ 100 ರೂಪಾಯಿಗೆ ಏನ್ ಬರುತ್ತೆ ಎಂದು ನೌಕರರು ಈ ಬಗ್ಗೆ ಇಲಾಖೆಯ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಇನ್ನೊಂದು ವಾರ ಶಾರೂಖ್ ಮಗನಿಗೆ ಜೈಲೇ ಗತಿ

    100 ರೂಪಾಯಿಯಲ್ಲಿ ಹೂ, ಹಣ್ಣು, ಬಾಳೆಕಂದು, ಪೂಜಾ ಸಾಮಗ್ರಿಗಳನ್ನು ತಂದು ಪೂಜೆ ಮಾಡೋದಕ್ಕೆ ಆಗುತ್ತಾ? ಕೋಟ್ಯಂತರ ರೂಪಾಯಿ ಸಂಪಾದನೆಗೆ ಕಾರಣವಾಗಿರೋ ಬಸ್ ಗಳ ಪೂಜೆಗೆ ಹಣ ಕೊಡಲು ಸಾರಿಗೆ ಇಲಾಖೆ ಹೀಗೆ ಯಾಕೆ ಮಾಡುತ್ತಿದೆ ಎನ್ನುವುದು ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಾರಿಗೆ ಇಲಾಖೆ ಸಿಬ್ಬಂದಿ ಸಮಸ್ಯೆ ಆಲಿಸಿದ ಶ್ರೀರಾಮುಲು

    100 ರೂಪಾಯಿ ಆಯುಧ ಪೂಜೆ ಮಾಡಬೇಕಾದ ದಾರುಣ ಪರಿಸ್ಥಿತಿ ಮಾತ್ರ ನಮ್ಮ ಸಾರಿಗೆ ನೌಕರರದ್ದು. ಅಷ್ಟೇ ಅಲ್ಲ ಸಾರಿಗೆ ಇಲಾಖೆಯಲ್ಲಿರುವ ಕಾರ್, ಜೀಪ್ ಪೂಜೆಗೂ ಸಾರಿಗೆ ಇಲಾಖೆ 40 ರೂಪಾಯಿ ನೀಡಿದೆ. 40 ರೂಪಾಯಿ ತಗೊಂಡು ಯಾವ ಮಾರ್ಕೆಟ್‍ಗೆ ಹೋಗಿ ಶಾಪಿಂಗ್ ಮಾಡಿ ಪೂಜೆ ಮಾಡಬೇಕೋ ಗೊತ್ತಿಲ್ಲ ಎನ್ನುತ್ತಿದ್ದಾರೆ ಸಾರಿಗೆ ನೌಕರರು.