Tag: ಆಮ್ ಆದ್ಮಿ ಪಾರ್ಟಿ

  • ಆಪ್ ಅಧಿಕಾರಕ್ಕೆ ಬಂದ್ರೆ ಮನೀಶ್ ಸಿಸೋಡಿಯಾ ಮತ್ತೊಮ್ಮೆ ಡಿಸಿಎಂ: ಕೇಜ್ರಿವಾಲ್

    ಆಪ್ ಅಧಿಕಾರಕ್ಕೆ ಬಂದ್ರೆ ಮನೀಶ್ ಸಿಸೋಡಿಯಾ ಮತ್ತೊಮ್ಮೆ ಡಿಸಿಎಂ: ಕೇಜ್ರಿವಾಲ್

    ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವೂ (AAP) ಅಧಿಕಾರ ಉಳಿಸಿಕೊಂಡಿರೆ ಮನೀಶ್ ಸಿಸೋಡಿಯಾ (Manish Sisodia) ಮತ್ತೆ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಘೋಷಿಸಿದ್ದಾರೆ.

    ಜಂಗ್‌ಪುರ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಈ ಘೋಷಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಸೋಡಿಯಾ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗುತ್ತಾರೆ ಮತ್ತು ಅವರೊಂದಿಗೆ ನೀವೆಲ್ಲರೂ ಉಪಮುಖ್ಯಮಂತ್ರಿಗಳಾಗುತ್ತೀರಿ. ಹೀಗಾಗಿ ನೀವು ಮನೀಶ್ ಸಿಸೋಡಿಯಾ ಅವರನ್ನು ಆಯ್ಕೆ ಮಾಡಬೇಕು ಎಂದು ಮತದಾರರಿಗೆ ಮನವಿ ಮಾಡಿದರು. ಇದನ್ನೂ ಓದಿ: MUDA Scam| ಸಿಎಂಗೆ ಸಂಕಷ್ಟ – ವಿಚಾರಣೆಗೆ ಹಾಜರಾಗುವಂತೆ ಪತ್ನಿಗೆ ಇಡಿ ಸಮನ್ಸ್‌

    ಹಾಲಿ ಎಎಪಿ ಸರ್ಕಾರದ ಬಹುಪಾಲು ಅವಧಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಉಪನಾಯಕರಾಗಿ ಸೇವೆ ಸಲ್ಲಿಸಿದ ಮನೀಶ್ ಸಿಸೋಡಿಯಾ ಅವರನ್ನು ಮಾರ್ಚ್ 2023ರಲ್ಲಿ ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ನಂತರ ಅವರು ರಾಜೀನಾಮೆ ನೀಡಿದರು. ಸಿಸೋಡಿಯಾ ಪ್ರಸುತ್ತ ಪತ್ಪರ್‌ಗಂಜ್‌ನಿಂದ ಶಾಸಕರಾಗಿದ್ದಾರೆ. ಆದರೆ ಈ ವಿಧಾನಸಭಾ ಚುನಾವಣೆಯಲ್ಲಿ ಜಂಗ್‌ಪುರದಿಂದ ಸ್ಪರ್ಧಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಮದುವೆ, ವಿಚ್ಛೇದನ, ಆಸ್ತಿ.. ಎಲ್ಲಾ ಧರ್ಮಿಯರಿಗೆ ಒಂದೇ ಕಾನೂನು: ಇಂದಿನಿಂದ ಉತ್ತರಾಖಂಡದಲ್ಲಿ UCC ಜಾರಿ

    ಈ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಕಳೆದ ಬಾರಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದರು. ಅವರವರ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ನಡೆಯಲು ಬಿಡಲಿಲ್ಲ. ಎಂಟು ಮಂದಿಯೂ ತಮ್ಮ ವಿಧಾನಸಭೆಯನ್ನು ನರಕವನ್ನಾಗಿಸಿದ್ದಾರೆ. ನೀವು ಇಂತಹ ತಪ್ಪು ಮಾಡಬೇಡಿ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದ ಹೆಸರಿನಲ್ಲಿ ವಂಚಕರ ಜಾಲ – ನಕಲಿ ಯುಪಿಐ ಐಡಿಗಳ ಮೂಲಕ ಭಕ್ತರಿಗೆ ವಂಚನೆ

    ಮನೀಶ್ ಸಿಸೋಡಿಯಾ ಅವರ ಕೊಡುಗೆ ಬಗ್ಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಮತ್ತು ನಾನು ಒಟ್ಟಾಗಿ ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಗಳನ್ನು ಅತ್ಯುತ್ತಮವಾಗಿ ಮಾಡಿದ್ದೇವೆ. ಈಗ ತಮ್ಮ ಸರ್ಕಾರ ರಚನೆಯಾದರೆ ಇಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಇದನ್ನೂ ಓದಿ: ಮೈಸೂರು| ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ!

    ಎಎಪಿ ಸರ್ಕಾರಿ ಶಾಲೆಗಳನ್ನು ನಿರ್ಮಿಸುತ್ತದೆ. ಬಿಜೆಪಿ ‘ಅವುಗಳನ್ನು ಮುಚ್ಚುವ’ ನಿರ್ಧಾರ ಮಾಡಿದೆ. ಯಾರನ್ನು ಆಯ್ಕೆ ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ಜಂಗ್‌ಪುರದಲ್ಲಿ ಆಪ್ ಗೆದ್ದರೆ ಇಲ್ಲಿನ ಪ್ರತಿಯೊಬ್ಬ ಸಹೋದರ ಸಹೋದರಿಯರೂ ಉಪಮುಖ್ಯಮಂತ್ರಿಯಾಗುತ್ತಾರೆ. ಇಲ್ಲಿನ ಜನರ ಕೆಲಸವನ್ನು ತಡೆಯುವ ಧೈರ್ಯ ಯಾರಿಗೂ ಬರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ನಡೆಯುವ ಅಮೃತ ಸ್ನಾನದ ವಿಶೇಷತೆ, ಹಿನ್ನೆಲೆ ಏನು?

  • ದೆಹಲಿ ಚುನಾವಣೆಗೆ ಆಪ್‌ಗೆ ಟಿಎಂಸಿ ಬೆಂಬಲ – ಧನ್ಯವಾದ ಎಂದ ಕೇಜ್ರಿವಾಲ್

    ದೆಹಲಿ ಚುನಾವಣೆಗೆ ಆಪ್‌ಗೆ ಟಿಎಂಸಿ ಬೆಂಬಲ – ಧನ್ಯವಾದ ಎಂದ ಕೇಜ್ರಿವಾಲ್

    ನವದೆಹಲಿ: ಮುಂಬರುವ ದೆಹಲಿ ಚುನಾವಣೆ ಹಿನ್ನೆಲೆ ಆಪ್‌ಗೆ ಟಿಎಂಸಿ ಬೆಂಬಲ ನೀಡಿದ್ದು, ಅರವಿಂದ್ ಕೇಜ್ರಿವಾಲ್ (Arvind Kejriwal) ಧನ್ಯವಾದ ತಿಳಿಸಿದ್ದಾರೆ.

    ಫೆ.5 ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ (Delhi Assembly Election) ಇಂದು (ಜ.08) ಆಮ್ ಆದ್ಮಿ ಪಕ್ಷಕ್ಕೆ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ (Trinamool Congress) ಪಕ್ಷ ಬೆಂಬಲ ನೀಡಿದೆ.ಇದನ್ನೂ ಓದಿ: ಡಿನ್ನರ್ ಹೊಸತೇನು ಅಲ್ಲ, ಮುಸುಕಿನ ಗುದ್ದಾಟ ಏನಿಲ್ಲ: ಸಚಿವ ಸತೀಶ್ ಜಾರಕಿಹೊಳಿ

    ಇದಕ್ಕೆ ಪ್ರತಿಕ್ರಿಯಿಸಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರವಾಲ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ವೈಯಕ್ತಿಕವಾಗಿ ಕೃತಜ್ಞರಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ದೆಹಲಿ ಚುನಾವಣೆಯಲ್ಲಿ ಎಎಪಿ ಪಕ್ಷಕ್ಕೆ ಟಿಎಂಸಿ ಬೆಂಬಲ ಘೋಷಿಸಿದೆ. ಮಮತಾ ದೀದಿ ಅವರಿಗೆ ಧನ್ಯವಾದಗಳು. ನಾನು ನಿಮಗೆ ವೈಯಕ್ತಿಕವಾಗಿ ಆಭಾರಿಯಾಗಿದ್ದೇನೆ. ನಮ್ಮ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನೀವು ಯಾವಾಗಲೂ ನಮ್ಮನ್ನು ಬೆಂಬಲಿಸಿದ್ದೀರಿ ಮತ್ತು ಆಶೀರ್ವದಿಸಿದ್ದೀರಿ ಎಂದು ಉಲ್ಲೇಖಿಸಿದ್ದಾರೆ.

    ಆಡಳಿತಾರೂಢ ಎಎಪಿ 2015 ಹಾಗೂ 2020ರಲ್ಲಿ ಕ್ರಮವಾಗಿ 67 ಹಾಗೂ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್, ಆಪ್ ಹಾಗೂ ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಎಎಪಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸುವ ಗುರಿಯನ್ನು ಹೊಂದಿದೆ. 2025ರ ದೆಹಲಿ ವಿಧಾನಸಭಾ ಚುನಾವಣೆಯು ಫೆ.05 ರಂದು ನಡೆಯಲಿದ್ದು, ಫೆ.08 ರಂದು ಮತ ಎಣಿಕೆ ನಡೆಯಲಿದೆ.ಇದನ್ನೂ ಓದಿ: Naxal Surrender | ಶಸ್ತ್ರ ತ್ಯಜಿಸಿ ಶರಣಾದ ನಕ್ಸಲರ ಬದುಕು ರೋಚಕ – ಇಲ್ಲಿದೆ ಕಂಪ್ಲೀಟ್‌ ವಿವರ!

  • ಪ್ರಚಾರದ ವೇಳೆ ಆಪ್ ಕಾರ್ಯಕರ್ತನ ಮೇಲೆ ಬಿಜೆಪಿ ಬೆಂಬಲಿಗನ ಕ್ರೌರ್ಯ

    ಪ್ರಚಾರದ ವೇಳೆ ಆಪ್ ಕಾರ್ಯಕರ್ತನ ಮೇಲೆ ಬಿಜೆಪಿ ಬೆಂಬಲಿಗನ ಕ್ರೌರ್ಯ

    ಯಾದಗಿರಿ: ಚುನಾವಣಾ (Election) ಪ್ರಚಾರದ ವೇಳೆ ಆಮ್ ಆದ್ಮಿ ಪಾರ್ಟಿಯ (AAP) ಕಾರ್ಯಕರ್ತನ ಮೇಲೆ ಬಿಜೆಪಿ (BJP) ಕಾರ್ಯಕರ್ತನಿಂದ ಹಲ್ಲೆ ನಡೆದಿರುವ ಘಟನೆ ಸುರಪುರ ವಿಧಾನಸಭಾ ಕ್ಷೇತ್ರದ ತೋಳದಿನ್ನಿ ಗ್ರಾಮದಲ್ಲಿ ನಡೆದಿದೆ.

    ಆಮ್ ಆದ್ಮಿ ಅಭ್ಯರ್ಥಿ ಮಂಜುನಾಥ ನಾಯಕ್ ಪರ ಮತಯಾಚನೆ ಮಾಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತನೋರ್ವ ಏಕಾಏಕಿ ನುಗ್ಗಿ ಗಲಾಟೆ ಆರಂಭಿಸಿದ್ದಾನೆ. ಕಟ್ಟೆಯ ಮೇಲಿದ್ದ ಕಾರ್ಯಕರ್ತನನ್ನು ಕೊರಳಪಟ್ಟಿ ಹಿಡಿದು ಕಟ್ಟೆಯ ಮೇಲಿನಿಂದ ಕೆಳಗೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: 60 ವರ್ಷದಲ್ಲಿ ಪರಿಶಿಷ್ಟರಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ: ಸುಧಾಕರ್ ಕಿಡಿ

    ಇದೇ ತಿಂಗಳ 6ರಂದು ಸುರಪುರ ವಿಧಾನಸಭಾ ಕ್ಷೇತ್ರದ ಕೊಡೇಕಲ್ ಗ್ರಾಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ (Congress) ಕಾರ್ಯಕರ್ತರ ನಡುವೆ ಕಲ್ಲು ತೂರಾಟ ನಡೆದಿತ್ತು. ಘಟನೆಯಲ್ಲಿ ಐದಾರು ಜನರಿಗೆ ಗಾಯಗಳಾಗಿತ್ತು. 15ಕ್ಕೂ ಹೆಚ್ಚು ವಾಹನಗಳು ಜಖಂ ಆಗಿದ್ದವು. ಆ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಘಟನೆ ನಡೆದಿದೆ. ಇದನ್ನೂ ಓದಿ: 12ನೇ ತರಗತಿ ಪಾಸ್‌ ಮಾಡಿದ ಇಬ್ಬರು ಮಾಜಿ ಶಾಸಕರು

  • ಆಪ್ ನಾಯಕನ ಜೊತೆ ನಟಿ ಪರಿಣೀತಿ ಚೋಪ್ರಾ ಡೇಟಿಂಗ್ : ವೈರಲ್ ಆದ ಫೋಟೋ

    ಆಪ್ ನಾಯಕನ ಜೊತೆ ನಟಿ ಪರಿಣೀತಿ ಚೋಪ್ರಾ ಡೇಟಿಂಗ್ : ವೈರಲ್ ಆದ ಫೋಟೋ

    ಸಾಮಾನ್ಯವಾಗಿ ಬಾಲಿವುಡ್ ನಾಯಕಿಯರು ಕ್ರಿಕೆಟ್ ಆಟಗಾರರ ಜೊತೆಗಿನ ಡೇಟಿಂಗ್ (Dating) ವಿಚಾರಕ್ಕಾಗಿ ಸುದ್ದಿಯಲ್ಲಿರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಜೊತೆಗಿನ ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ನಟಿ ಸ್ವರ ಭಾಸ್ಕರ್ ರಾಜಕಾರಣಿಯನ್ನು ಮದುವೆಯಾದರು. ಇದೀಗ ಪರಿಣೀತ ಚೋಪ್ರಾ (Parineeti Chopra) ಆಪ್ (Aam Aadmi Party) ನಾಯಕನ ಹಿಂದೆ ಬಿದ್ದಿದ್ದಾರೆ. ಪದೇ ಪದೇ ಹೋಟೆಲ್ ಗಳಲ್ಲಿ ಭೇಟಿ ಆಗುತ್ತಿದ್ದಾರೆ.

    ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ (Raghav Chadha) ಮತ್ತು ಪರಿಣೀತಿ ಬುಧವಾರ ಮತ್ತು ಗುರುವಾರ ಬೇರೆ ಬೇರೆ ಹೋಟೆಲ್ ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಲ್ಲದೇ, ಇಬ್ಬರೂ ಒಂದೇ ಬಣ್ಣದ ಬಟ್ಟೆಗಳನ್ನು ಧರಿಸಿದ್ದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಪದೇ ಪದೇ ಹೋಟೆಲ್ ಗಳಲ್ಲೇ ಕಾಣಿಸಿಕೊಂಡಿದ್ದರಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರಾ ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

    ಮೂಲಗಳ ಪ್ರಕಾರ ರಾಘವ್ ಚಡ್ಡಾ ಹಾಗೂ ಪರಿಣೀತಿ ಒಂದೇ ಕಾಲೇಜಿನಲ್ಲಿ ಓದಿದವರಂತೆ. ಅಲ್ಲದೇ, ಹಲವು ದಿನಗಳಿಂದಲೂ ಅವರು ಸ್ನೇಹಿತರು. ಆಗಾಗ್ಗೆ ಇಬ್ಬರೂ ಹೀಗೆ ಸಿಗುತ್ತಲೇ ಇರುತ್ತಾರಂತೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎನ್ನುವವರು ಇದ್ದಾರೆ. ಜೊತೆಗೆ ಪರಿಣೀತಿ ಮತ್ತು ಚಡ್ಡಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುವವರು ಇದ್ದಾರೆ.

    ಬುಧವಾರ ಗುರುಗ್ರಾಮ ಹೋಟೆಲ್ ನಲ್ಲಿ ಈ ಜೋಡಿ ರಾತ್ರಿ ಊಟ ಮಾಡಿದ್ದರೆ, ಗುರುವಾರ ಮಧ್ಯಾಹ್ನ ಮುಂಬೈನ ಬಾಂದ್ರಾದ ಹೋಟೆಲ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅನುಮಾನಕ್ಕೆ ಕಾರಣರಾಗಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ಈ ಜೋಡಿ ಡಿನ್ನರ್ ಮಾಡಿದ್ದಕ್ಕೆ ನಾನಾ ಕಾರಣಗಳನ್ನು ಹುಡುಕುತ್ತಿರುವುದಂತೂ ಸತ್ಯ.

  • ಆಮ್ ಆದ್ಮಿ ಪಕ್ಷದಿಂದ ಯುವ ನಿರ್ದೇಶಕ, ನಟನಿಗೆ ಟಿಕೆಟ್ ಘೋಷಣೆ

    ಆಮ್ ಆದ್ಮಿ ಪಕ್ಷದಿಂದ ಯುವ ನಿರ್ದೇಶಕ, ನಟನಿಗೆ ಟಿಕೆಟ್ ಘೋಷಣೆ

    ರ್ನಾಟಕ ವಿಧಾನಸಭಾ ಚುನಾವಣೆ (Election) ಎದುರಿಸಲು ಆಮ್ ಆದ್ಮಿ ಪಕ್ಷ (Aam Aadmi Party) ಹಲವು ತಿಂಗಳಿನಿಂದ ಸಿದ್ಧತೆ ನಡೆಸಿತ್ತು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡುವುದಕ್ಕಾಗಿಯೇ ಹಲವು ರೀತಿಯಲ್ಲಿ ಕಸರತ್ತು ಕೂಡ ನಡೆಸಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗಿಂತ ಮುಂದೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಇಬ್ಬರು ಸಿನಿಮಾ ರಂಗದವರು ಇದ್ದಾರೆ ಎನ್ನುವುದು ವಿಶೇಷ.

    ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಚುನಾವಣಾ ತಯಾರಿ ಆರಂಭಿಸಿದ್ದರು. ಕೆಲವರಿಗೆ ಆಗಲೇ ಟಿಕೆಟ್ ಕನ್ಫರ್ಮ್ ಕೂಡ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ 80 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ರಿಲೀಸ್ ಮಾಡಿದೆ.

    ಪಕ್ಷ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಏಳು ಜನ ರೈತ ಹೋರಾಟಗಾರರು. ಏಳು ಜನ ಮಹಿಳೆಯರು, 5 ಮಂದಿ ಸಮಾಜಸೇವಕರು, ಮೂರು ಜನ ಡಾಕ್ಟರೇಟ್, 15 ಜನ ಮಾಸ್ಟರ್ಸ್ ಮುಗಿಸಿರುವವರು , 3 ಜನ ಎಂಬಿಬಿಎಸ್ ಮುಗಿಸಿರುವವರು, 13 ಜನ ಲಾಯರ್ಸ್,  ಪತ್ರಕರ್ತರು ಇದ್ದಾರೆ ಹಾಗೂ ಕಲಾವಿದರು ಇದ್ದಾರೆ.

    ಹಲವು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ, ನೂರಾರು ಚಿತ್ರಗಳನ್ನು ಮಾಡಿರುವ ಟೆನ್ನಿಸ್ ಕೃಷ್ಣಗೆ (Tennis Krishna) ಆಮ್ ಆದ್ಮಿ ಪಾರ್ಟಿ ಟಿಕೆಟ್ ಘೋಷಣೆ ಮಾಡಿದ್ದು, ಇವರು ತುರುವೇಕರೆ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಹಾಸ್ಯ ಪಾತ್ರದ ಮೂಲಕ ಗುರುತಿಸಿಕೊಂಡಿರುವ ಟೆನ್ನಿಸ್ ಕೃಷ್ಣ, ಕನ್ನಡದ ಅನೇಕ ಹೆಸರಾಂತ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ.

    ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟರಾಗಿ ಹಲವಾರು ಚಿತ್ರಗಳನ್ನು ಮಾಡಿರುವ ಸ್ಮೈಲ್ ಶ್ರೀನು (Smile Srinu)  (ಶ್ರೀನಿವಾಸ್ ಎನ್) (Srinivas N) ಅವರಿಗೆ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಈಗಾಗಲೇ ಹಲವು ತಿಂಗಳಿಂದ ಕೂಡ್ಲಿಗಿ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಚಾರವನ್ನೂ ಆರಂಭಿಸಿದ್ದರು. ಹಲವಾರು ಜನಪರ ಹಾಗೂ ಸಮಾಜಮುಖಿ ಕೆಲಸಗಳಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ನಟ ಶಶಿಕುಮಾರ್ ಪುತ್ರನನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ಕೀರ್ತಿ ಶ್ರೀನಿವಾಸ್ ಇವರದ್ದು.

  • ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯದ ಕಡೆಗಣನೆ: ಎಎಪಿ

    ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯದ ಕಡೆಗಣನೆ: ಎಎಪಿ

    ಬೆಂಗಳೂರು: ಲಿಂಗಾಯತ (Lingayat) ಸಮುದಾಯವನ್ನು ಬಿಜೆಪಿ (BJP), ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಪಕ್ಷಗಳು ಕಡೆಗಣಿಸಿವೆ. ಚುನಾವಣೆ ಸಮಯದಲ್ಲಿ ಮಾತ್ರ ಲಿಂಗಾಯತರ ಓಲೈಕೆಯ ನಾಟಕವಾಡುತ್ತಿರುವುದು ಖಂಡನೀಯ ಎಂದು ಆಮ್ ಆದ್ಮಿ ಪಾರ್ಟಿಯ (AAP) ರಾಜ್ಯ ಕಾರ್ಯಾಧ್ಯಕ್ಷ ರವಿಚಂದ್ರ ನೆರಬೆಂಚಿ ಹೇಳಿದ್ದಾರೆ.

    ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ನಾಡಿನ ಶಿಕ್ಷಣ ಕ್ಷೇತ್ರಕ್ಕೆ ಲಿಂಗಾಯತ ಮಠಗಳು ಹಾಗೂ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ. ಇವುಗಳು ಇಲ್ಲದಿದ್ದರೆ ರಾಜ್ಯವು ಶಿಕ್ಷಣದಲ್ಲಿ ಹಿಂದುಳಿದು ಬಿಹಾರ ಹಾಗೂ ಉತ್ತರ ಪ್ರದೇಶದಂತೆ ಆಗುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತ ; ಕಾರು, ಟಿಪ್ಪರ್‌ ಡಿಕ್ಕಿ

    ರಾಜಕೀಯ ಕಾರಣಗಳಿಗಾಗಿ ಲಿಂಗಾಯತ ಸಮುದಾಯವನ್ನು ಅವಹೇಳನ ಮಾಡುವಂತಹ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಬಿಜೆಪಿಯು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S.Yediyurappa) ಅವರನ್ನು ದಿಢೀರ್ ಸಿಎಂ ಸ್ಥಾನದಿಂದ ಕೆಳಗಿಳಿಸಿ ಕೇವಲವಾಗಿ ನಡೆಸಿಕೊಂಡಿದ್ದಾರೆ. ನಂತರ ಲಿಂಗಾಯತರ ಓಲೈಕೆಗಾಗಿ ಬಿಜೆಪಿಯ ಕೇಂದ್ರ ಸಮಿತಿಯಲ್ಲಿ ಸ್ಥಾನ ನೀಡಲಾಯಿತು. ವೀರೇಂದ್ರ ಪಾಟೀಲ್ ಅವರನ್ನು ಸರಿಯಾಗಿ ನಡೆಸಿಕೊಳ್ಳದೆ ಕಾಂಗ್ರೆಸ್ ಅನುಭವಿಸಿದ ಸೋಲನ್ನು ಬಿಜೆಪಿ ಕೂಡ ಅನುಭವಿಸಲಿದೆ ಎಂದು ಅವರು ಕಿಡಿಕಾರಿದ್ದಾರೆ.

    ಆಮ್ ಆದ್ಮಿ ಪಾರ್ಟಿಯ ನೀತಿಗಳು ಹಾಗೂ ಬಸವಣ್ಣನವರ ತತ್ವಗಳು ಒಂದೇ ಆಗಿವೆ. ಸಮಾನತೆ, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕೆಂದು ಬಸವಣ್ಣನವರು 12ನೇ ಶತಮಾನದಲ್ಲೇ ಪ್ರತಿಪಾದಿಸಿದ್ದರು. ಆಮ್ ಆದ್ಮಿ ಪಾರ್ಟಿಯು ದೆಹಲಿಯಲ್ಲಿ ಅವುಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದೆ. ಬಸವಣ್ಣನವರ ನಾಡಿನಲ್ಲೂ ಅದೇ ಮಾದರಿಯ ಆಡಳಿತ ನೀಡಲು ಈ ಚುನಾವಣೆಯಲ್ಲಿ ಅವಕಾಶ ದೊರೆಯುವ ವಿಶ್ವಾಸವಿದೆ. ರಾಜ್ಯದ ಅನೇಕ ಲಿಂಗಾಯತ ಯುವಕರು ಹಾಗೂ ಮುಖಂಡರು ಆಮ್ ಆದ್ಮಿ ಪಾರ್ಟಿ ಸೇರುತ್ತಿರುವುದು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (Basavaraj Bommai) 2ಎ ಮೀಸಲಾತಿ ನೀಡುವುದಾಗಿ ತಾಯಿಯ ಮೇಲೆ ಆಣೆ ಮಾಡಿದ್ದರು. ಈಗ ಆ ವಿಚಾರವನ್ನು ಕಡೆಗಣಿಸಿರುವುದು ಇಡೀ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ. ಶಿಕ್ಷಣ ಹಾಗೂ ನೌಕರಿಯಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇ ಟೋಲ್ ಖಂಡಿಸಿ ಬಿಜೆಪಿ ಎಂಎಲ್‍ಸಿ ಪ್ರತಿಭಟನೆ

  • ಫೆಬ್ರವರಿಯಲ್ಲಿ ರಾಜ್ಯಕ್ಕೆ ದೆಹಲಿ ಸಿಎಂ – ಚುನಾವಣೆಗೆ ಮೊದಲು ಹಲವು ಜಿಲ್ಲೆಗೆ ಕೇಜ್ರಿವಾಲ್ ಭೇಟಿ

    ಫೆಬ್ರವರಿಯಲ್ಲಿ ರಾಜ್ಯಕ್ಕೆ ದೆಹಲಿ ಸಿಎಂ – ಚುನಾವಣೆಗೆ ಮೊದಲು ಹಲವು ಜಿಲ್ಲೆಗೆ ಕೇಜ್ರಿವಾಲ್ ಭೇಟಿ

    ಧಾರವಾಡ: ಫೆಬ್ರವರಿಯಲ್ಲಿ ಕರ್ನಾಟಕಕ್ಕೆ ದೆಹಲಿ ಸಿಎಂ (Delhi CM) ಅರವಿಂದ್ ಕೇಜ್ರಿವಾಲ್ (Arvind Kejriwal) ಆಗಮಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (AAP) ರಾಜ್ಯ ಕಾರ್ಯದರ್ಶಿ ಎಂ ಅರವಿಂದ್ (M Aravind) ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಫೆಬ್ರವರಿ 26 ರಂದು ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ಬ್ಲಾಕ್ ಪದಾಧಿಕಾರಿಗಳ ಶಪಥ ಕಾರ್ಯಕ್ರಮ ಇದೆ. ಅದಕ್ಕೆ ಕೇಜ್ರಿವಾಲ್ ಬರುತ್ತಿದ್ದಾರೆ ಎಂದು ತಿಳಿಸಿದರು.

    ಫೆಬ್ರವರಿ ಬಳಿಕ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಿಗೆ ಕೂಡಾ ಅವರು ಬರಲಿದ್ದಾರೆ. ಫೆಬ್ರವರಿ 26ರ ನಂತರ ಕೇಜ್ರಿವಾಲ್ ಅವರ ಟೂರ್ ಪ್ರೋಗ್ರಾಮ್ ಮಾಡುತ್ತಿದ್ದೇವೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಕೇಜ್ರಿವಾಲ್ ಅವರ ಕಾರ್ಯಕ್ರಮಗಳು ಇರಲಿದೆ. ಚುನಾವಣೆಗೆ ಮೊದಲೇ ಈ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಇದನ್ನೂ ಓದಿ: ಮತ್ತೆ ಬಿಜೆಪಿ ಜೊತೆ ಕೈ ಜೋಡಿಸುವುದಕ್ಕಿಂತ ಸಾಯುತ್ತೇನೆ: ನಿತೀಶ್ ಕುಮಾರ್

    ನಾನು ಕೂಡಾ 2 ದಿನಗಳಲ್ಲಿ ದೆಹಲಿಗೆ ಹೋಗುತ್ತಿದ್ದೇನೆ. ಸದ್ಯ ಕೇಜ್ರಿವಾಲ್ ಅವರ ತಾತ್ಕಾಲಿಕ ಭೇಟಿಯ ಪಟ್ಟಿ ಮಾಡಿದ್ದೇವೆ. ಅವರು ಯಾವ ದಿನಾಂಕಕ್ಕೆ ಸಿಗುತ್ತಾರೆ ಎಂಬುದನ್ನು ನೋಡಿಕೊಂಡು ಫೈನಲ್ ಪಟ್ಟಿ ಮಾಡುತ್ತೇವೆ ಎಂದು ಆಪ್ ರಾಜ್ಯ ಕಾರ್ಯದರ್ಶಿ ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಬಾವ ಎಎಪಿಗೆ ಸೇರ್ಪಡೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪುನಾರಚನೆಗೆ ರಾಜ್ಯ, ಜಿಲ್ಲಾ ಘಟಕಗಳನ್ನು ವಿಸರ್ಜಿಸಿದ ಆಪ್ – ಸದ್ಯದಲ್ಲೇ ಹೊಸ ಸಂಘಟನಾ ತಂಡದ ಘೋಷಣೆ

    ಪುನಾರಚನೆಗೆ ರಾಜ್ಯ, ಜಿಲ್ಲಾ ಘಟಕಗಳನ್ನು ವಿಸರ್ಜಿಸಿದ ಆಪ್ – ಸದ್ಯದಲ್ಲೇ ಹೊಸ ಸಂಘಟನಾ ತಂಡದ ಘೋಷಣೆ

    ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜುಗೊಳ್ಳಲು ಆಮ್ ಆದ್ಮಿ ಪಾರ್ಟಿಯ (AAP) ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕಗಳನ್ನು ವಿಸರ್ಜಿಸಲಾಗಿದ್ದು, ಸದ್ಯದಲ್ಲೇ ಕ್ರಿಯಾಶೀಲ ತಂಡವನ್ನು ರಚಿಸಲಾಗುತ್ತದೆ ಎಂದು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ದೆಹಲಿ ಶಾಸಕ ದಿಲೀಪ್ ಪಾಂಡೆ (Dilip Pandey) ತಿಳಿಸಿದ್ದಾರೆ.

    ಬೆಂಗಳೂರಿನ (Bengaluru) ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದಿಲೀಪ್ ಪಾಂಡೆ, ಆಮ್ ಆದ್ಮಿ ಪಾರ್ಟಿಯು ಕರ್ನಾಟಕ ವಿಧಾನಸಭಾ ಚುನಾವಣೆಗೆ (ಸಮರೋಪಾದಿಯಲ್ಲಿ ಸಿದ್ಧಗೊಳ್ಳಲಿದೆ. ಈವರೆಗಿದ್ದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ತಂಡವನ್ನು ವಿಸರ್ಜನೆ ಮಾಡಲಾಗಿದೆ. ಗ್ರಾಮ ಸಂಪರ್ಕ ಎಂಬ ರಾಜ್ಯಾವ್ಯಾಪಿ ಅಭಿಯಾನದ ಮೂಲಕ ಆಪ್ ಕಳೆದ 5 ತಿಂಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಿಕೊಂಡಿದೆ. ಈ ಅಭಿಯಾನದಲ್ಲಿ ಕರ್ನಾಟಕದ ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರ ಸಂಪರ್ಕವನ್ನು ಆಪ್ ಸಾಧಿಸಿದೆ. ಈಗ ಬದಲಾವಣೆ ತರುವಂತಹ ಹೊಸ ತಂಡವನ್ನು ರೂಪಿಸಲಾಗುತ್ತಿದೆ. ಬದಲಾವಣೆ ತರಬಲ್ಲ ಈ ಸಾಮಾನ್ಯ ಪುರುಷರು ಹಾಗೂ ಮಹಿಳೆಯರೊಂದಿಗೆ ಕೈಜೋಡಿಸುವುದರಿಂದ ಪಕ್ಷವು ಚುನಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲಿದೆ ಎಂದು ದೃಢವಾಗಿ ನಂಬಿದ್ದೇವೆ. ಬಿಜೆಪಿಯ ಭ್ರಷ್ಟ ಹಾಗೂ ಅಸಮರ್ಥ ಸರ್ಕಾರವನ್ನು ನಾವು ಮಣಿಸಲಿದ್ದೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

    ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ತಂಡವು ಮುಂಬರುವ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ. ಇದಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಸಂದೀಪ್ ಪಾಠಕ್‌ರವರ ಸಮರ್ಥ ಮಾರ್ಗದರ್ಶನ ಇರಲಿದೆ. ಆಪ್ ರಾಷ್ಟ್ರೀಯ ಪಕ್ಷವಾದ ಬಳಿಕ, ರಾಜ್ಯವನ್ನು ಅಭಿವೃದ್ಧಿಯಲ್ಲಿ ನಂಬರ್ ಒನ್ ಮಾಡಲು ಜನರು ಪಕ್ಷವನ್ನು ಭರವಸೆಯಿಂದ ನೋಡುತ್ತಿದ್ದಾರೆ. ಆದ್ದರಿಂದ ಒಳ್ಳೆಯ ಉದ್ದೇಶ ಹೊಂದಿದ ವ್ಯಕ್ತಿಗಳು, ಹೋರಾಟಗಾರರು, ರಾಜಕಾರಣಿಗಳು ಪಕ್ಷಕ್ಕೆ ಸೇರ್ಪಡೆಯಾಗಿ ಈ ಕನಸನ್ನು ನನಸಾಗಿಸುವುದಾದರೆ ನಾವು ಸ್ವಾಗತಿಸುತ್ತೇವೆ ಎಂದು ಪಾಂಡೆ ಹೇಳಿದರು. ಇದನ್ನೂ ಓದಿ: ಈ ಚುನಾವಣೆಯಲ್ಲಿ ಮಹಿಳೆಯರಿಗೇ ಹೆಚ್ಚು ಟಿಕೆಟ್ ಕೊಡ್ಬೇಕು – ಕಾಂಗ್ರೆಸ್ ಹೈಕಮಾಂಡ್‌ಗೆ ಉಮಾಶ್ರೀ ಮನವಿ

    ದಶಕಗಳಿಂದ ಸಾಂಪ್ರದಾಯಿಕ ಪಕ್ಷಗಳು ಕರ್ನಾಟಕದ ಜನತೆಯ ಅರ್ಹತೆಗೆ ತಕ್ಕಂತಹದ್ದು ಸಿಗದಂತೆ ಮಾಡಿದೆ. ಕಳೆದ 5 ತಿಂಗಳಲ್ಲಿ ನಡೆದ ಸಂಘಟನೆ ಬಲಪಡಿಸುವ ಪ್ರಕ್ರಿಯೆಯಿಂದಾಗಿ ಆಪ್ ಎಲ್ಲಾ ಜಿಲ್ಲೆಗಳು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಭದ್ರವಾದ ಅಸ್ತಿತ್ವ ಪಡೆದುಕೊಂಡಿದೆ. ಮುಂದಿನ 2 ವಾರಗಳಲ್ಲಿ ನಾವಿದನ್ನು ಗ್ರಾಮೀಣ ಭಾಗಕ್ಕೆ ತೆಗೆದುಕೊಂಡು ಹೋಗುತ್ತೇವೆ. ಬುಧವಾರ ಬೆಂಗಳೂರಿನಲ್ಲಿ ನಡೆದ ವಿಧಾನಸಭಾ ಸ್ಪರ್ಧಾಕಾಂಕ್ಷಿಗಳ ಸಭೆಯಲ್ಲಿ 224 ಕ್ಷೇತ್ರಗಳಿಗೆ ಸಾವಿರ ಆಕಾಂಕ್ಷಿಗಳು ಚರ್ಚೆ ಹಾಗೂ ತರಬೇತಿಯಲ್ಲಿ ಭಾಗವಹಿಸಿದ್ದರು. ಅಮೂಲಾಗ್ರ ಬದಲಾವಣೆಗೆ ಕರ್ನಾಟಕ ಸಿದ್ಧವಾಗುತ್ತಿದೆ ಎಂಬುದರ ಸಂಕೇತವಿದು ಎಂದು ದಿಲೀಪ್ ಪಾಂಡೆ ಹೇಳಿದರು. ಇದನ್ನೂ ಓದಿ: ರನ್‌ವೇ ಸಿದ್ದವಾಗಿದೆ, ಕೌಶಲ್ಯಗಳನ್ನು ಕಲಿತು ಟೇಕಾಫ್‌ ಆಗಿ – ಯುವ ಜನತೆಗೆ ಮೋದಿ ಕರೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೋಲಾರದ JDS ಮುಖಂಡ ಸುಹೆಲ್ ದಿಲ್ ನವಾಜ್ AAP ಸೇರ್ಪಡೆ

    ಕೋಲಾರದ JDS ಮುಖಂಡ ಸುಹೆಲ್ ದಿಲ್ ನವಾಜ್ AAP ಸೇರ್ಪಡೆ

    ನವದೆಹಲಿ: ಕೋಲಾರದ (Kolar) ಜೆಡಿಎಸ್ (JDS) ಮುಖಂಡ ಸುಹೆಲ್ ದಿಲ್ ನವಾಜ್ (Suhel Dil Nawaz) ಆಮ್ ಆದ್ಮಿ ಪಾರ್ಟಿಯ (AAP) ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆಯವರ ಸಮ್ಮುಖದಲ್ಲಿ ದೆಹಲಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

    ಸುಹೆಲ್ ದಿಲ್ ನವಾಜ್ ಅವರ ಕುರಿತು ಮಾತನಾಡಿದ ದಿಲೀಪ್ ಪಾಂಡೆ, ಸುಹೆಲ್ ಅವರು ಸ್ವಾತಂತ್ರ‍್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಕೋಲಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಬ್ದುಲ್ ಲತೀಫ್ ಕರ್ನಾಟಕದ ರೇಷ್ಮೆ ಉದ್ಯಮದ ಪಿತಾಮಹ ಎಂದೇ ಪ್ರಸಿದ್ಧರಾಗಿದ್ದರು ಎಂದು ತಿಳಿಸಿದರು.

    ಸುಹೆಲ್ ಅವರು ಇಂಗ್ಲೆಂಡ್‌ನಲ್ಲಿ ಎಂಎ, ಎಲ್‌ಎಲ್‌ಬಿ, ಐಎಲ್‌ಟಿ ಶಿಕ್ಷಣ ಪಡೆದಿದ್ದಾರೆ. ಕಿರಿಯ ವಯಸ್ಸಿನಿಂದಲೂ ರಾಜಕೀಯ ಹೋರಾಟಗಳಲ್ಲಿ ಆಸಕ್ತಿ ಹೊಂದಿದ್ದಾರೆ. ವಿದ್ಯಾರ್ಥಿ ನಾಯಕರಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ ಅನುಭವ ಹೊಂದಿದ್ದಾರೆ ಎಂದು ಪರಿಚಯಿಸಿದರು. ಇದನ್ನೂ ಓದಿ: ಮೆಡಿಕಲ್ ಶಿಕ್ಷಣ ಲಾಭಗಳಿಸುವ ವ್ಯವಹಾರವಲ್ಲ – ಬೋಧನಾ ಶುಲ್ಕ ಕೈಗೆಟುಕುವಂತಿರಬೇಕು ಎಂದ ಸುಪ್ರೀಂ

    ಸುಹೆಲ್ ದಿಲ್ ನವಾಜ್ ಮಾತನಾಡಿ, ಜನಾನುರಾಗಿ ಆಡಳಿತ ಹೇಗಿರುತ್ತದೆ ಎಂಬುದನ್ನು ಆಮ್ ಆದ್ಮಿ ಪಾರ್ಟಿಯು ತೋರಿಸಿಕೊಡುತ್ತಿದೆ. ಆರೋಗ್ಯ, ಶಿಕ್ಷಣ, ಸಾರಿಗೆ ಮುಂತಾದ ಕ್ಷೇತ್ರದಲ್ಲಿ ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ಎಎಪಿ ಸರ್ಕಾರಗಳು ಮಾಡಿರುವ ಸಾಧನೆ ಪ್ರಶಂಸನೀಯ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೆ ಮೂಲಭೂತ ಸೌಲಭ್ಯಗಳನ್ನು ಉಚಿತವಾಗಿ ನೀಡಲು ಸಾಧ್ಯವಿದೆ ಎಂಬುದನ್ನು ಪಕ್ಷವು ಸಾಧಿಸಿ ತೋರಿಸಿದೆ. ಕರ್ನಾಟಕದ ಶೇ.40 ಸರ್ಕಾರವನ್ನು ಕಿತ್ತೊಗೆದು, ಪಾರದರ್ಶಕ ಆಡಳಿತ ನೀಡುವ ಆಮ್ ಆದ್ಮಿ ಪಾರ್ಟಿಯನ್ನು ಅಧಿಕಾರಕ್ಕೆ ತರಲು ಜನರು ಪಣ ತೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ವೋಟಿಗಾಗಿ ಕಾಂಗ್ರೆಸ್‌ನವರು ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ : ಆರಗ ಜ್ಞಾನೇಂದ್ರ

    Live Tv
    [brid partner=56869869 player=32851 video=960834 autoplay=true]

  • ‘ಓ ಮೈ ಲವ್’ ಖ್ಯಾತಿಯ ನಿರ್ದೇಶಕ ಸ್ಮೈಲ್ ಶ್ರೀನು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ

    ‘ಓ ಮೈ ಲವ್’ ಖ್ಯಾತಿಯ ನಿರ್ದೇಶಕ ಸ್ಮೈಲ್ ಶ್ರೀನು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ

    ಸ್ಯಾಂಡಲ್ ವುಡ್ ಅನೇಕ ಕಲಾವಿದರು ಈಗಾಗಲೇ ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕರೊಬ್ಬರು ಎಪಿಪಿ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಳ್ಳಾರಿ ದರ್ಬಾರ್, 18 ಟು 25 ಲವ್ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಹಾಗೂ ಕೆಲ ಸಿನಿಮಾಗಳಿಗೆ ಬಣ್ಣ ಹಚ್ಚಿರುವ ನಿರ್ದೇಶಕ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) (Smile Srinu) ಅವರು ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ಸೇರ್ಪಡೆಯಾಗಿದ್ದಾರೆ. ಅವರ ನಿರ್ದೇಶನದ ಓ ಮೈ ಲವ್ ಸಿನಿಮಾ ಇದೀಗ 50 ದಿನಗಳನ್ನು ಪೂರೈಸಿದ್ದು, ಈ ಸಂದರ್ಭದಲ್ಲಿ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ.

    ಬೆಂಗಳೂರಿನ (Bangalore) ಪಕ್ಷದ ಕಛೇರಿಯಲ್ಲಿ ನಡೆದ ಸರಳ  ಕಾರ್ಯಕ್ರಮದಲ್ಲಿ ನಿವೃತ್ತ ಪೋಲೀಸ್ ಅಧಿಕಾರಿ ಹಾಗೂ ಎಎಪಿ  ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ (Bhaskar Rao) ಅವರು ಪಕ್ಷದ ಧ್ವಜವನ್ನು ನಾರಿ ಶ್ರೀನಿವಾಸ್ ಅವರಿಗೆ  ನೀಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಜಗದೀಶ್ ಅವರ ಸಮ್ಮುಖದಲ್ಲಿ ನಡೆದ ಈ ಕಾಯ್ರಕ್ರಮದಲ್ಲಿ ಮಾತನಾಡಿದ ಶ್ರೀನಿವಾಸ್‌ ನಾನು ಹಣ ಹೆಸರು ಮಾಡಲು, ನಾಯಕನಾಗಲು ಬಂದಿಲ್ಲ, ನಮ್ಮ ಜನ ತಮ್ಮ ದುಖಗಳನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ  ನುಂಗಿಕೊಳ್ಳುತ್ತಿದ್ದಾರೆ. ಜನರಿಗೆ ಉತ್ತಮ ಆರೋಗ್ಯ ಶಿಕ್ಷಣ ಇದ್ದರೆ ಎಲ್ಲವನ್ನೂ ಗೆಲ್ಲಬಹುದು. ಕಟ್ಟಕಡೆಯ ವ್ಯಕ್ತಿಗೂ ಸಹ ಮೂಲಭೂತ ಸೌಕರ್ಯಗಳು ದೊರೆಯಬೇಕು ಎನ್ನುವುದೇ ನನ್ನ ಉದ್ದೇಶ. ಸಂಘ ಸಂಸ್ಥೆಗಳ ಮೂಲಕ ಜನರಿಗೆ ಸಹಾಯ ಮಾಡಬಹುದು. ಒಬ್ಬನೇ ಮಾಡಲು ಸಾಧ್ಯವಿಲ್ಲ. ನಾನು ಜನರ ಸೇವೆ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ:ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್

    ನಂತರ ಭಾಸ್ಕರ ರಾವ್ ಮಾತನಾಡಿ ಕೇಜ್ರಿವಾಲರ ಪ್ರಾಮಾಣಿಕತೆಗೆ ಬೆಲೆ ಕೊಟ್ಟು ಹೆಚ್ಚಿನ ಸಂಖ್ಯೆಯ  ಯುವಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಒಂದು ಪಕ್ಷ ಹತ್ತು ವರ್ಷಗಳಲ್ಲಿ ೨  ರಾಜ್ಯಗಳಲ್ಲಿ‌ ಅಧಿಕಾರಕ್ಕೆ ಬರುವುದು ಸಾಮಾನ್ಯದ ಮಾತಲ್ಲ. ನಾವು ಮಾಡುವ ಕೆಲಸ ಜನರಿಗೆ ಇಷ್ಟವಾಗಿದೆ. ನಮಗೆ ಅನುಭವಿ ರಾಜಕಾರಣಿಗಳು ಬೇಕಿಲ್ಲ, ಇಂಥ ಯುವಕರೇ ಬೇಕಾಗಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]