Tag: ಆಮ್ಲೆಟ್

  • ಮೊಟ್ಟೆಯಿಲ್ಲದೆ ಮಾಡಿ ರುಚಿ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್

    ಮೊಟ್ಟೆಯಿಲ್ಲದೆ ಮಾಡಿ ರುಚಿ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್

    ಮ್ಲೆಟ್ ಅನ್ನು ಮೊಟ್ಟೆಯಿಂದಲೇ ಮಾಡಲಾಗುತ್ತದೆ. ಆದರೆ ನಾವಿಂದು ಹೇಳಿಕೊಡುತ್ತಿರುವ ಬ್ರೆಡ್ ಆಮ್ಲೆಟ್‌ಗೆ ಮೊಟ್ಟೆಯ ಅಗತ್ಯವೇ ಇಲ್ಲ. ನೀವು ಆಮ್ಲೆಟ್‌ನ ಸ್ವಾದವನ್ನು ವೆಜ್‌ನಲ್ಲಿ ಹುಡುಕುತ್ತಿದ್ದೀರಿ ಎಂದಾದರೆ ನೀವು ಇದನ್ನು ಒಮ್ಮೆ ಟ್ರೈ ಮಾಡಲೇ ಬೇಕು. ಮೊಟ್ಟೆಯಿಲ್ಲದೇ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್ (Veg Bread Omelette) ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಹಿಟ್ಟು ತಯಾರಿಸಲು:
    ಕಡಲೆ ಹಿಟ್ಟು – 1 ಕಪ್
    ಮೈದಾ – ಕಾಲು ಕಪ್
    ಬೇಕಿಂಗ್ ಪೌಡರ್ – ಮುಕ್ಕಾಲು ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ನೀರು – ಒಂದು ಕಾಲು ಕಪ್

    ಸಣ್ಣಗೆ ಹೆಚ್ಚಿದ ಈರುಳ್ಳಿ – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 1
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
    ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
    ಹುರಿಯಲು:
    ಬೆಣ್ಣೆ
    ಕೊತ್ತಂಬರಿ
    ಬ್ರೆಡ್ ಸ್ಲೈಸ್ – 5 ಇದನ್ನೂ ಓದಿ: ಚಹಾದೊಂದಿಗೆ ಸವಿಯಿರಿ ಗೋಡಂಬಿ ಬಿಸ್ಕತ್ತು

    ಮಾಡುವ ವಿಧಾನ:
    * ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ ಕಡಲೆ ಹಿಟ್ಟು, ಮೈದಾ, ಬೇಕಿಂಗ್ ಪೌಡರ್, ಅರಿಶಿನ ಮತ್ತು ಉಪ್ಪು ಹಾಕಿ, ಅದಕ್ಕೆ ಒಂದು ಕಾಲು ಕಪ್ ನೀರು ಹಾಕಿ ಮಿಶ್ರಣ ಮಾಡಿ.
    * ಹಿಟ್ಟು ರೂಪುಗೊಂಡ ಬಳಿಕ ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ, ಕೆಂಪು ಮೆಣಸಿನ ಪುಡಿ ಮತ್ತು ಕರಿಮೆಣಸಿನ ಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
    * ಈಗ ಪ್ಯಾನ್ ಅನ್ನು ಬಿಸಿ ಮಾಡಿ, ಒಂದು ಟೀಸ್ಪೂನ್ ಬೆಣ್ಣೆ ಮತ್ತು 1 ಟೀಸ್ಪೂನ್ ಕೊತ್ತಂಬರಿ ಹಾಕಿ ಏಕರೂಪದಲ್ಲಿ ಹರಡಿ.
    * ಈಗ ಅದರ ಮೇಲೆ 1 ಸೌಟು ತಯಾರಿಸಿಟ್ಟ ಹಿಟ್ಟನ್ನು ಸುರಿದು, ಏಕರೂಪವಾಗಿ ಹರಡಿ.
    * ಒಂದು ನಿಮಿಷ ಆಮ್ಲೆಟ್ ಕಾದ ಬಳಿಕ ಅದರ ಮೇಲೆ ಬ್ರೆಡ್ ಸ್ಲೈಸ್ ಇರಿಸಿ ಬೇಯಿಸುವುದನ್ನು ಮುಂದುವರಿಸಿ.
    * ಈಗ ಆಮ್ಲೆಟ್ ಅನ್ನು ಮಗುಚಿ ಹಾಕಿ, ಬ್ರೆಡ್ ಗರಿಗರಿಯಾಗುವವರೆಗೆ ಹುರಿಯಿರಿ.
    * ಈಗ ವೆಜ್ ಬ್ರೆಡ್ ಆಮ್ಲೆಟ್ ಅನ್ನು ನಿಮಗೆ ಬೇಕಾದ ರೀತಿಯಲ್ಲಿ ಮಡಚಿ, ಕತ್ತರಿಸಿಕೊಳ್ಳಿ.
    * ವೆಜ್ ಬ್ರೆಡ್ ಆಮ್ಲೆಟ್ ಇದೀಗ ತಯಾರಾಗಿದ್ದು, ಟೊಮೆಟೊ ಸಾಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿಯೇ ಮಾಡಿ ರುಚಿಕರವಾದ ಆಮ್ಲೆಟ್

    ಮನೆಯಲ್ಲಿಯೇ ಮಾಡಿ ರುಚಿಕರವಾದ ಆಮ್ಲೆಟ್

    ನಿಮ್ಮ ದಿನದ ಆರೋಗ್ಯಕರ ಮತ್ತು ಸಂತೋಷದ ಆರಂಭಕ್ಕಾಗಿ ಆಮ್ಲೆಟ್ ಮಾಡಿ ಸವಿಯಿರಿ. ಇದನ್ನು ತಯಾರಿಸಲು ತುಂಬಾ ಸುಲಭ.  ಇಲ್ಲಿ ನಿಮಗೆ ಇಷ್ಟವಾದ ತರಕಾರಿ ಬಳಸಿ ಆಮ್ಲೆಟ್ ಸುಲಭವಾಗಿ ಮಾಡಬಹುದು.

    ಬೇಕಾಗಿರುವ ಪದಾರ್ಥಗಳು:
    * ಮೊಟ್ಟೆಗಳು – 2
    * ಕೆಂಪು ಮೆಣಸು – 1 ಟೀಸ್ಪೂನ್
    * ಚೀಸ್ – 2 ಟೀಸ್ಪೂನ್
    * ಪಾಲಕ್ ಎಲೆ – 1 ಕಪ್


    * ಕಟ್ ಮಾಡಿದ ಟೊಮಾಟೊ – 1 ಕಪ್
    * ಮೆಣಸು – 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು ಮತ್ತು
    * ಬೆಣ್ಣೆ – ಅರ್ಧ ಟೀಸ್ಪೂನ್
    * ಈರುಳ್ಳಿ – 1 ಕಪ್

    ಮಾಡುವ ವಿಧಾನಗಳು:
    * ಟೊಮಾಟೊ, ಈರುಳ್ಳಿ ಮತ್ತು ಪಾಲಕ್ ಎಲೆಗಳನ್ನು ಕಟ್ ಮಾಡಿ.
    * ಒಂದು ಬಟ್ಟಲಿಗೆ ಮೊಟ್ಟೆಯನ್ನು ಹಾಕಿ ಇದಕ್ಕೆ ಉಪ್ಪು, ಮೆಣಸಿನಕಾಯಿ ಮತ್ತು ಕಟ್ ಮಾಡಿದ ಟೊಮಾಟೊ, ಈರುಳ್ಳಿ ಮತ್ತು ಪಾಲಕ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.


    * ಈ ಮಿಶ್ರಣವನ್ನು ಪ್ಯಾನ್‍ಗೆ ಹಾಕಿ ಸಮವಾಗಿ ಹರಡಿ. ಅದು ಗಟ್ಟಿಯಾಗಲು ಪ್ರಾರಂಭಿಸಿದಾಗ, ಆದರೆ ಇನ್ನೂ ಮೇಲೆ ಸ್ವಲ್ಪ ತುರಿದ ಚೀಸ್, ಕೆಂಪು ಮೆಣಸು ಸೇರಿಸಿ.
    * ಬಳಿಕ ಚಾಕುವಿನಿಂದ ಪ್ಯಾನ್ ಅಂಚುಗಳನ್ನು ಸರಾಗಗೊಳಿಸಿ ಮತ್ತು ಅದನ್ನು ಇನ್ನೊಂದು ಬದಿಗೆ ತಿರುಗಿಸಿ. ಇದನ್ನು 1-2 ನಿಮಿಷಗಳ ಕಾಲ ಬೇಯಿಸಿ.
    * ವೆಜಿಟೇರಿಯನ್ ಆಮ್ಲೆಟ್ ಸವಿಯಲು ಸಿದ್ಧವಾಗಿದ್ದು, ಬಿಸಿ ಇರುವಾಗಲೇ ಸವಿಯಿರಿ.

  • ಆಮ್ಲೆಟ್ ಮಾಡೋ ವಿಧಾನ ಹೇಳಿಕೊಟ್ಟ ಗಣೇಶ್ ಮಗಳ ವೀಡಿಯೋ ವೈರಲ್

    ಆಮ್ಲೆಟ್ ಮಾಡೋ ವಿಧಾನ ಹೇಳಿಕೊಟ್ಟ ಗಣೇಶ್ ಮಗಳ ವೀಡಿಯೋ ವೈರಲ್

    – ಚರಿತ್ರಿಯಾ ಮುದ್ದು ಮಾತಿಗೆ ನೆಟ್ಟಿಗರು ಫಿದಾ

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ತನ್ನ ಮಗಳು ಮುದ್ದು ಮುದ್ದಾಗಿ ಮಾತನಾಡಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋ ಸದ್ಯ ವೈರಲ್ ಆಗಿದೆ.

    ಗಣೇಶ್ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುತ್ತಾರೆ. ತಮ್ಮ ಸಿನಿಮಾ ವಿಚಾರಗಳ ಜೊತೆ ತಮ್ಮ ಮಕ್ಕಳ ವಿಡಿಯೋ ಮತ್ತು ಫೋಟೋಗಳನ್ನು ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಮಿನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗ ಮಗಳು ಆಮ್ಲೆಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದು, ಗಣೇಶ್ ಮಗಳ ಮುದ್ದು ಮಾತಿಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

    ವಿಡಿಯೋದಲ್ಲಿ ಏನಿದೆ
    ಗಣೇಶ್ ಹಂಚಿಕೊಂಡಿರುವ ವಿಡಿಯೋದಲ್ಲಿ ಮಗಳು ಚರಿತ್ರಿಯಾ ಗಣೇಶ್ ಅವರು ಆಮ್ಲೆಟ್ ಮಾಡುತ್ತಿದ್ದಾರೆ. ಈ ವೇಳೆ ವಿಡಿಯೋ ಮಾಡುತ್ತಾ ಅಲ್ಲಿಗೆ ಬಂದ ಗಣೇಶ್ ಅವರು ಮಗಳೇ ಏನ್ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಚರಿತ್ರಿಯಾ ಇಂಗ್ಲಿಷಿನಲ್ಲಿ ಆಮ್ಲೆಟ್ ಮಾಡುವ ವಿಧಾವನ್ನು ವಿವರಿಸುತ್ತಾರೆ. ಈ ವೇಳೆ ಹತ್ತಿರ ಬಂದ ಗಣೇಶ್ ಮಗಳೇ ಏನ್ ಮಾಡುತ್ತಿದ್ದೀಯಾ ಸರಿಯಾಗಿ ಹೇಳು ಅಂದಾಗ ಕನ್ನಡದಲ್ಲಿ ಆಮ್ಲೆಟ್ ಮಾಡುವ ವಿಧಾನವನ್ನು ಹೇಳಿಕೊಡುತ್ತಾರೆ.

    ಈ ವಿಡಿಯೋದಲ್ಲಿ ಚಿರಿತ್ರಿಯಾ ಮುದ್ದು ಮುದ್ದಾಗಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಮಾತನಾಡಿರುವುದು ಗಣೇಶ್ ಅಭಿಮಾನಿಗಳ ಹೃದಯ ಕದ್ದಿದೆ. ಜೊತೆಗೆ ಕೆಲ ನಟ ನಟಿಯರು ಕೂಡ ಈ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ. ಮೊದಲಿಗೆ ಕಮೆಂಟ್ ಮಾಡಿರುವ ನಟಿ ಅಮೂಲ್ಯ ಅವರು ಚೆರ್ರಿ ಎಂದು ಬರೆದುಕೊಂಡರೆ, ಪ್ರಜ್ವಲ್ ದೇವರಾಜ್ ಅವರು ಕಮೆಂಟ್ ಮಾಡಿ ಸೋ ಕ್ಯೂಟ್ ಎಂದಿದ್ದಾರೆ. ಜೊತೆಗೆ ಆರ್.ಜೆ ನೇತ್ರಾ ಮತ್ತು ರ್ಯಾಪಿಡ್ ರಶ್ಮಿ ಕೂಡ ಕಮೆಂಟ್ ಮಾಡಿದ್ದಾರೆ.

    ಇದಕ್ಕೂ ಮುನ್ನ ಮಗ ಸೇಬು ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿದ್ದ ಗಣೇಶ್ ಅವರು, ಟಿವಿ ಪೇಪರ್ ನೋಡಿ. ಏನೋ ಪ್ಲ್ಯಾನು ಮಾಡಿ. ಕೇಳಿದ ಒಂದು ಸೇಬು, ತಿನೋಕೆ ಅನ್ಕೊಂಡ್ರೆ ಕೊಟ್ಟ ಕೊರೊನಾ ಜವಾಬು. ಎಲ್ಲರೂ ಕೊರೊನಾದಿಂದ ಓಡಿದರೆ, ವಿಹಾನ್ ಕೊರೊನಾವನ್ನೆ ಸೃಷ್ಠಿಸುತ್ತಿದ್ದಾನೆ. ನನಗೆ ನಿಜವಾಗಲೂ ಆಶ್ಚರ್ಯವಾಯಿತು ಎಂದು ಬರೆದುಕೊಂಡಿದ್ದರು. ಸದ್ಯ ಗಣೇಶ್ ಅವರ ಗಾಳಿಪಟ-2 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದ ಶೂಟಿಂಗ್ ಆರಂಭವಾಗಿದೆ.

  • ‘ಆಮ್ಲೆಟ್’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

    ‘ಆಮ್ಲೆಟ್’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

    ಬೆಂಗಳೂರು: ಶೇಖರ್ ಜಯರಾಂ ಅರ್ಪಿಸುವ, ನೈಂತ್ ಎಲಿವೇಷನ್ ಲಾಂಛನದಲ್ಲಿ ಓಂಪ್ರಕಾಶ್ ಮತ್ತು ಪ್ರಸನ್ನ ಅವರು ನಿರ್ಮಿಸುತ್ತಿರುವ ‘ಆಮ್ಲೆಟ್’ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

    ‘ಡೇ ಇನ್ ದಿ ಸಿಟಿ’, ‘ಕೆಂಪಿರ್ವೆ’, ‘ಬಬ್ಲೂಷ’ ಹಾಗೂ ತಮಿಳಿನ ‘ಉನರ್ವು’ ಚಿತ್ರಗಳನ್ನು ನಿರ್ದೇಶಿಸಿರುವ ವೆಂಕಟ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಕಾಮಿಡಿ ಕಥಾ ಹಂದರ ಹೊಂದಿದೆ. ವಿಶಾಖ್ ರಾಮಪ್ರಸಾದ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ರಾಕೇಶ್ ಅಡಿಗ, ವಿರಾಜ್ ಹಾಗೂ ಮಹೇಶ್ ಹಾಡುಗಳನ್ನು ಬರೆದಿದ್ದಾರೆ. ಸಿ.ಜಿ ಜೈದೇವನ್ ಛಾಯಾಗ್ರಹಣ ಹಾಗೂ ಚಂದನ್ ಅವರ ಸಂಕಲನ ಈ ಚಿತ್ರಕ್ಕಿದೆ. ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ಲಾರೆನ್ಸ್ ಪ್ರೀತಂ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

    ಸಂಯುಕ್ತ ಹೊರನಾಡು, ನವೀನ್, ನಿರಂಜನ್ ದೇಶಪಾಂಡೆ, ಬಿ.ಡಿ ಸತೀಶ್ ಚಂದ್ರ, ಶೋಭ್‍ರಾಜ್, ಶರ್ಮಿತ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.