Tag: ಆಮ್‌ಆದ್ಮಿ ಪಕ್ಷ

  • ಮೋದಿ ತುಂಬಾ ಪವರ್‌ಫುಲ್, ಆದರೆ ದೇವರಲ್ಲ: ಮಾಜಿ ಸಿಎಂ ಕೇಜ್ರಿವಾಲ್ ವ್ಯಂಗ್ಯ

    ಮೋದಿ ತುಂಬಾ ಪವರ್‌ಫುಲ್, ಆದರೆ ದೇವರಲ್ಲ: ಮಾಜಿ ಸಿಎಂ ಕೇಜ್ರಿವಾಲ್ ವ್ಯಂಗ್ಯ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ತುಂಬಾ ಪವರ್‌ಫುಲ್, ಆದರೆ ದೇವರಲ್ಲ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದರು.

    ಗುರುವಾರ ದೆಹಲಿ ವಿಧಾನಸಭೆಯಲ್ಲಿ ಎಎಪಿ (AAP) ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 41ನೇ ಸ್ಥಾನವನ್ನು ನೀಡಲಾಯಿತು. ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಗುರುವಾರ ದೆಹಲಿ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ವಿರೋಧ ಪಕ್ಷದಲ್ಲಿರುವ ನನ್ನ ಸಹೋದ್ಯೋಗಿಗಳು ಮನೀಷ್ ಸಿಸೋಡಿಯಾ (Manish Sisodia) ಮತ್ತು ನನ್ನನ್ನು ನೋಡಿ ದುಃಖಿತರಾಗಬೇಕು. ಪ್ರಧಾನಿ ಮೋದಿ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಹಾಗೂ ಸಂಪನ್ಮೂಲ ವ್ಯಕ್ತಿ. ಆದರೆ ಮೋದಿ ದೇವರಲ್ಲ. ಇರುವ ದೇವರು ನಮ್ಮೊಂದಿಗಿದ್ದಾನೆ. ಇದರಿಂದ ನಾನು ಸುಪ್ರೀಂ ಕೋರ್ಟ್‌ಗೆ (Supreme Court) ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ: ನಟ ದರ್ಶನ್‌ಗೆ ಐಟಿ ವಿಚಾರಣೆ ಬಿಸಿ – ಜೈಲಿನಲ್ಲೇ 7 ಗಂಟೆ ಡ್ರಿಲ್‌

    ಎಎಪಿಗೆ ಸಹಾಯ ಮಾಡಿದ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ದೆಹಲಿಯಲ್ಲಿ ಆಡಳಿತವನ್ನು ಅಡ್ಡಿಪಡಿಸುವುದು ಬಿಜೆಪಿಯ (BJP) ಲೆಕ್ಕಾಚಾರವಾಗಿತ್ತು. ರಾಜಕೀಯ ನಡೆಯ ಭಾಗವಾಗಿ ಅವರ ಬಂಧನವಾಗಿದೆ. ರಾಜಕೀಯ ಸೇಡಿನ ಮೇಲೆ ಬಿಜೆಪಿ ಹೆಚ್ಚು ಗಮನಹರಿಸಿದೆ ಎಂದು ಕಿಡಿಕಾರಿದರು.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ದೆಹಲಿಯ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದೆ ಮತ್ತು ಎಎಪಿ ನಾಯಕರನ್ನು ಸುಳ್ಳು ಆರೋಪಗಳೊಂದಿಗೆ ಗುರಿಯಾಗಿಸುವುದು ಅವರು ಉದ್ದೇಶ ಎಂದು ಆರೋಪಿಸಿದರು.

    ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ದೆಹಲಿಯ ಪರಿಸ್ಥಿತಿಯನ್ನು ಹದೆಗಡುವಂತೆ ಮಾಡುವುದು ಬಿಜೆಪಿ ಸರ್ಕಾರ ಉದ್ದೇಶವಾಗಿತ್ತು. ನನ್ನನ್ನು ಜೈಲಿಗೆ ಕಳುಹಿಸಿದ ಬಳಿಕ ದೆಹಲಿಯ ಕೆಲಸವನ್ನು ನಿಲ್ಲಿಸಿದ್ದಾರೆ. ಇದೀಗ ರಸ್ತೆಗಳು ಹಾಳಾಗಿವೆ. ಇಂದು ನಾನು ದೆಹಲಿ ವಿಶ್ವವಿದ್ಯಾಲಯದ ಮುಖ್ಯಮಂತ್ರಿ ಅತಿಶಿ ಅವರೊಂದಿಗೆ ದುರಸ್ತಿಯಾಗಬೇಕಿರುವ ರಸ್ತೆಯನ್ನು ಪರಿಶೀಲಿಸಿದ್ದೇನೆ. ಈ ರಸ್ತೆಯನ್ನು ಶೀಘ್ರದಲ್ಲೇ ದುರಸ್ತಿ ಮಾಡಲಾಗುವುದು, ಉಳಿದ ದೆಹಲಿಯ ರಸ್ತೆಗಳು ಕೂಡ ಶೀಘ್ರದಲ್ಲೇ ರಿಪೇರಿಯಾಗಲಿವೆ, ದೆಹಲಿಯ ಜನರು ಚಿಂತಿಸಬೇಕಾಗಿಲ್ಲ, ದೆಹಲಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ.

    ಮುಖ್ಯಮಂತ್ರಿಯಾಗಿ ಮೊದಲ ಕುರ್ಚಿಯನ್ನು ಹೊಂದಿದ್ದ ಕೇಜ್ರಿವಾಲ್‌ಗೆ ಅವರಿಗೆ ಗುರುವಾರ ನಡೆದ ವಿಧಾನಸಭೆಯಲ್ಲಿ 41ನೇ ಸ್ಥಾನವನ್ನು ನೀಡಲಾಗಿತ್ತು. ಜೊತೆಗೆ ಅವರ ಪಕ್ಕದ 40ನೇ ಸ್ಥಾನವನ್ನು ಮನೀಶ್ ಸಿಸೋಡಿಯಾ ಅವರಿಗೆ ನೀಡಲಾಗಿತ್ತು.ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ- ಸಾವಿನ ಸುತ್ತ ಅನುಮಾನದ ಹುತ್ತ

    ಹೊಸ ಅಬಕಾರಿ ನೀತಿ ಪ್ರಕರಣ ಆರೋಪದ ಮೇಲೆ ಜೈಲಿನಲ್ಲಿದ್ದ ಅರವಿಂದ್ ಕೇಜ್ರಿವಾಲ್ ಒತ್ತಡದಿಂದಾಗಿ ರಾಜೀನಾಮೆ ನೀಡಿದರು. ಇದೇ ಪ್ರಕರಣ ಸಂಬಂಧ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಎಎಪಿ ನಾಯಕರನ್ನು ತಿಂಗಳುಗಟ್ಟಲೇ ವಿಚಾರಣೆ ನಡೆಸಲಾಗಿತ್ತು.

  • ಅಧಿಕಾರ ವಹಿಸಿಕೊಂಡ ಬಳಿಕ ಕೇಜ್ರಿವಾಲ್ ಕುರ್ಚಿಯಲ್ಲಿ ಕೂರದ ಅತಿಶಿ

    ಅಧಿಕಾರ ವಹಿಸಿಕೊಂಡ ಬಳಿಕ ಕೇಜ್ರಿವಾಲ್ ಕುರ್ಚಿಯಲ್ಲಿ ಕೂರದ ಅತಿಶಿ

    – ಕೇಜ್ರಿವಾಲರನ್ನು ಮತ್ತೆ ಈ ಸ್ಥಾನಕ್ಕೆ ತರಲು 4 ತಿಂಗಳು ಶ್ರಮಿಸುತ್ತೇನೆ

    ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಅತಿಶಿ ಸಿಂಗ್ (Atishi Singh) ಇಂದು (ಸೆ.23) ಸಚಿವಾಲಯಕ್ಕೆ ತೆರಳಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿ ಸ್ಥಾನದ ಕುರ್ಚಿಯಲ್ಲಿ ಕೂರದೇ ಪಕ್ಕದಲ್ಲಿ ಮತ್ತೊಂದು ಕುರ್ಚಿ ಹಾಕಿಕೊಂಡು ಕೂತು ಕಡತಗಳಿಗೆ ಸಹಿ ಹಾಕುವ ಮೂಲಕ ಸಿಎಂ (CM) ಆಗಿ ಕೆಲಸ ಆರಂಭಿಸಿದ್ದಾರೆ.

    ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಮಾಯಣ (Ramayana) ಮಹಾಕಾವ್ಯವನ್ನು ಉದಾಹರಣೆಯಾಗಿ ನೀಡಿ ಶ್ರೀರಾಮ ವನವಾಸಕ್ಕೆ ಹೋದಾಗ ಸಹೋದರ ಭರತ ರಾಮನ ಪಾದುಕೆಯನ್ನು ಸಿಂಹಾಸನದ ಮೇಲಿಟ್ಟು ಆಡಳಿತವನ್ನು ನಡೆಸಿದರು. ಅದೇ ರೀತಿ ನಾನು ಕೇಜ್ರಿವಾಲ್ ಸ್ಥಾನದಲ್ಲಿ ಕೂರುವುದಿಲ್ಲ. ಅವರನ್ನು ಮತ್ತೆ ಈ ಸ್ಥಾನಕ್ಕೆ ತರಲು ನಾಲ್ಕು ತಿಂಗಳು ಶ್ರಮಿಸುತ್ತೇನೆ ಎಂದರು.ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೂ ರಾಜ್ಯಪಾಲರು ರಿಪೋರ್ಟ್ ಕೇಳೋದು ಸರಿಯಲ್ಲ: ಸಿದ್ದರಾಮಯ್ಯ

    ಈ ಕುರ್ಚಿ ಅರವಿಂದ್ ಕೇಜ್ರಿವಾಲ್ (Arvind Kejrival) ಅವರಿಗೆ ಸೇರಿದ್ದು, ಫೆಬ್ರವರಿ ಚುನಾವಣೆಯಲ್ಲಿ ದೆಹಲಿಯ ಜನರು ಮತ್ತೊಮ್ಮೆ ಅವರನ್ನು ತಮ್ಮ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಅಲ್ಲಿಯವರೆಗೆ ಈ ಕುರ್ಚಿ ಈ ಕಚೇರಿಯಲ್ಲಿ ಉಳಿಯುತ್ತದೆ. ಅವರು ಹಿಂದಿರುಗುವವರೆಗೆ ಕಾಯುತ್ತದೆ ಎಂದು ಹೇಳಿದರು.

    ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ನಂತರ ಅತಿಶಿ ದೆಹಲಿಯ ಎಂಟನೇ ಮತ್ತು ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಅಕ್ರಮ ಅಬಕಾರಿ ನೀತಿಯಲ್ಲಿ ಬಂಧನವಾದ ಬಳಿಕ ಜಾಮೀನಿನ ಮೇಲೆ ಹೊರಬಂದ ಅರವಿಂದ್ ಕೇಜ್ರಿವಾಲ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ (Virendra Sachdeva) ಅವರು ಅರವಿಂದ್ ಕೇಜ್ರಿವಾಲ್‌ಗೆ ಮೀಸಲಾದ ಖಾಲಿ ಕುರ್ಚಿಯನ್ನು ಪಕ್ಕದಲ್ಲಿ ಇರಿಸಿರುವ ಅತಿಶಿಯ ಇಂಗಿತವನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಚ್‌ದೇವ ಅವರು ಈ ಕೃತ್ಯವನ್ನು ಸಾಂವಿಧಾನಿಕ ನಿಯಮಗಳ ಉಲ್ಲಂಘನೆ ಮತ್ತು ಮುಖ್ಯಮಂತ್ರಿ ಕಚೇರಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದಾರೆ.ಇದನ್ನೂ ಓದಿ: ಅಪಘಾತಕ್ಕೀಡಾದವರ ರಕ್ಷಣೆಗೆ “ಆಪತ್ಕಾಲಯಾನ”: 65 ನೂತನ ಅಂಬುಲೆನ್ಸ್ ಚಾಲನೆ ನೀಡಿದ ಸಿಎಂ

    ಮುಖ್ಯಮಂತ್ರಿಗಳ ಟೇಬಲ್‌ನಲ್ಲಿ ಎರಡು ಕುರ್ಚಿಗಳನ್ನು ಇಡುವುದು ಸಂವಿಧಾನ, ನಿಯಮಗಳು ಮತ್ತು ಮುಖ್ಯಮಂತ್ರಿ ಕಚೇರಿಗೆ ಅಗೌರವವಾಗಿದೆ. ಇದು ಅತಿಶಿ ಹೇಳುವಂತೆ ಇದು ಆದರ್ಶವಾದ ಕ್ರಿಯೆಯಲ್ಲ, ಆದರೆ ಇದು ಸ್ಪಷ್ಟವಾದ ಅಸ್ಪಷ್ಟತೆಯಾಗಿದೆ. ಅತಿಶಿ ಅವರು ಮುಖ್ಯಮಂತ್ರಿ ಕಚೇರಿಯ ಘನತೆಗೆ ಅಗೌರವ ತೋರಿದ್ದಾರೆ ಮತ್ತು ಈ ವರ್ತನೆಯಿಂದ ದೆಹಲಿಯ ನಾಗರಿಕರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಸಚ್‌ದೇವ ಟೀಕಿಸಿದ್ದಾರೆ.

  • ದೆಹಲಿ ನೂತನ ಸಿಎಂ ಆಗಿ ಅತಿಶಿ ಇಂದು ಪ್ರಮಾಣ ವಚನ ಸ್ವೀಕಾರ

    ದೆಹಲಿ ನೂತನ ಸಿಎಂ ಆಗಿ ಅತಿಶಿ ಇಂದು ಪ್ರಮಾಣ ವಚನ ಸ್ವೀಕಾರ

    ನವದೆಹಲಿ: ದೆಹಲಿ ನೂತನ ಸಿಎಂ ಆಗಿ ಆಮ್ ಆದ್ಮಿ ಪಕ್ಷದ (Aam Aadmi Party) ಅತಿಶಿ ಸಿಂಗ್ ((Atishi Singh) ಇಂದು (ಸೆ.21) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಸೆ.21ರಂದು ಶನಿವಾರ ಸಂಜೆ 4:30ಕ್ಕೆ ಲೆಫ್ಟಿನೆಂಟ್ ಗವರ್ನರ್ ನಿವಾಸವಾದ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ (Oath Taking Ceremony) ನಡೆಯಲಿದ್ದು, ಅತಿಶಿಯವರೊಂದಿಗೆ ಆಮ್ ಆದ್ಮಿ ಪಕ್ಷದ ಐವರು ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಇದನ್ನೂ ಓದಿ: ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ – ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

    ಈ ಮೊದಲು ಸೆ.26-27ರ ವಿಶೇಷ ಅಧಿವೇಶನ ವೇಳೆ ಪ್ರಮಾಣ ವಚನ ಸ್ವೀಕರಿಸಲು ಚಿಂತಿಸಿತ್ತು. ಆದರೆ ಲೆಫ್ಟಿನೆಂಟ್ ಗವರ್ನರ್ ಸಲಹೆ ಮೇರೆಗೆ ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಬಿಜೆಪಿಯ ಸುಷ್ಮಾ ಸ್ವರಾಜ್ (Sushma Swaraj), ಕಾಂಗ್ರೆಸ್‌ನ ಶೈಲಾ ದೀಕ್ಷಿತ್ (Sheila Dikshit) ಬಳಿಕ ಎಎಪಿಯ (AAP) ಅತಿಶಿ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿ (Woman Chief Minister) ಹಾಗೂ ದೆಹಲಿಯ ಅತಿ ಕಿರಿಯ ಮುಖ್ಯಮಂತ್ರಿಯಾಗಲಿದ್ದಾರೆ (Youngest Chief Minister).

    ಎಎಪಿ ಆರಂಭದಲ್ಲಿ ಅತಿಶಿ ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕೆಂದು ಯೋಜಿಸಿತ್ತು. ಬಳಿಕ ಮಂತ್ರಿಮಂಡಲದೊಂದಿಗೆ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಲಾಗಿದೆ. ಹಿಂದಿನ ಅರವಿಂದ್ ಕೇಜ್ರಿವಾಲ್ (Arvind Kejrival) ಸರ್ಕಾರದಲ್ಲಿ ಸಚಿವರಾಗಿದ್ದ ಎಎಪಿ ನಾಯಕರಾದ ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೇನ್ ಅವರು ಸಚಿವರಾಗಿ ಮುಂದುವರೆಯಲಿದ್ದು, ಪಕ್ಷದ ಇಬ್ಬರು ಶಾಸಕರನ್ನು ಸಹ ಹೊಸ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳಲಾಗುವುದು. ಶಾಸಕ ಮುಖೇಶ್ ಅಹ್ಲಾವತ್ ಅವರು ಹೊಸದಾಗಿ ಅತಿಶಿ ಅವರ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

    ಮಂಗಳವಾರ ಹುದ್ದೆಗೆ ರಾಜೀನಾಮೆ ನೀಡಿದ ಅರವಿಂದ್ ಕೇಜ್ರಿವಾಲ್ ಅವರಿಂದ ಅತಿಶಿ ಅಧಿಕಾರ ಸ್ವೀಕರಿಸಲಿದ್ದಾರೆ. ಅತಿಶಿ ದೆಹಲಿ ಅಸೆಂಬ್ಲಿಯಲ್ಲಿ ಕಲ್ಕಾಜಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ದೆಹಲಿ ಸರ್ಕಾರದಲ್ಲಿ ಅತಿ ಹೆಚ್ಚು ಖಾತೆಗಳನ್ನು ಹೊಂದಿದ್ದಾರೆ.ಇದನ್ನೂ ಓದಿ: ಗುಣಮಟ್ಟದಲ್ಲಿ ರಾಜಿಯಾಗೋ ಪ್ರಶ್ನೆಯೇ ಇಲ್ಲ, ದೇಶದ ಯಾವ ಲ್ಯಾಬ್‌ನಲ್ಲಾದ್ರೂ ನಂದಿನಿ ಪ್ರೊಡಕ್ಟ್ ಪರೀಕ್ಷೆ ಮಾಡಲಿ: KMF ಎಂಡಿ

  • ಬಿಜೆಪಿ ಪ್ರಮುಖರೊಂದಿಗೆ ಆರೋಪಿ ದಿವ್ಯಾ ಹಾಗರಗಿ ಫೋಟೋ ವೈರಲ್

    ಬಿಜೆಪಿ ಪ್ರಮುಖರೊಂದಿಗೆ ಆರೋಪಿ ದಿವ್ಯಾ ಹಾಗರಗಿ ಫೋಟೋ ವೈರಲ್

    ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಮಾಸ್ಟರ್ ಮೈಂಡ್ ಆರೋಪಿ ದಿವ್ಯಾ ಹಾಗರಗಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಕಾಣಿಸಿಕೊಂಡ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    BJP

    ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಪ್ರತಿ ಪಕ್ಷದ ನಾಯಕರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದು, ಟ್ವೀಟ್‌ನಲ್ಲೇ ತಕ್ಕ ಉತ್ತರ ಕೊಟ್ಟಿದ್ದಾರೆ. ದಿವ್ಯಾ ಹಾಗರಗಿ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಸುಧಾಕರ್ ಇನ್ನೂ ಅನೇಕ ಬಿಜೆಪಿ ಮುಖಂಡರೊಂದಿಗೆ ಕ್ಲಿಕ್ಕಿಸಿದ ಫೋಟೋಗಳನ್ನು ಟ್ವೀಟ್ ಮಾಡಿದ್ದು, ಇದಕ್ಕೇನು ಹೇಳುವರಿ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದಿವ್ಯಾ ಹಾಗರಗಿ ಭೇಟಿಯಾಗಿದ್ದು ನಿಜ, ನನಗೂ ನೋಟಿಸ್ ಕೊಡಲಿ: ಡಿ.ಕೆ ಶಿವಕುಮಾರ್

    RAMULU WITH DHIVYA

    ಗೃಹ ಸಚಿವರ ರಾಜೀನಾಮೆಗೆ ಆಗ್ರಹ: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಜಭವನ ಕದ ತಟ್ಟಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆಗೆ ಎಎಪಿ ಆಗ್ರಹಿಸಿದ್ದು, ಎಎಪಿ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.

    ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಎಎಪಿ ನಾಯಕ ಭಾಸ್ಕರ್ ರಾವ್ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದ್ದ ಎಎಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿತ್ತು. ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ಗೃಹ ಸಚಿವರ ವೈಫಲ್ಯ ಕಾರಣ ಎಂದು ಆರೋಪಿಸಿದ್ದು, ಸಂಪುಟದಿಂದ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ವಜಾ ಮಾಡಲು ಆಪ್ ಆಗ್ರಹಿಸಿದೆ. ಇದನ್ನೂ ಓದಿ: PSI ನೇಮಕಾತಿಯಲ್ಲಿ ಅಕ್ರಮː ಪ್ರಮುಖ ಆರೋಪಿ ದಿವ್ಯಾ ಹಾಗರಗಿ – ಡಿಕೆಶಿ ಜೊತೆಗಿರುವ ಫೋಟೋ ವೈರಲ್

    ಈ ಪ್ರಕರಣಕ್ಕೆ ಸಂಭಂದಿಸಿದಂತೆ ಆಮ್‌ಆದ್ಮಿ ಪಕ್ಷದ ನಾಯಕ ಭಾಸ್ಕರ್ ರಾವ್ ಸಹ ಕಿಡಿ ಕಾರಿದ್ದು, ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಅಲ್ಲದೇ, ಇಲ್ಲಿವರೆಗೂ ಮಾಸ್ಟರ್ ಮೈಂಡ್ ಆರೋಪಿ ದಿವ್ಯಾ ಹಾಗರಗಿ ಅವರು ಏಕೆ ಬಂಧನವಾಗಿಲ್ಲ? ಎಂದು ಪ್ರಶ್ನಿಸಿದ್ದಾರೆ.

    ಅಲ್ಲದೆ, ಈ ಹಿಂದೆ ಪರೀಕ್ಷೆಯನ್ನು ನಮ್ಮ ಸಹಪಾಠಿಗಳು ಅತ್ಯಂತ ಪಾರದರ್ಶಕತೆಯಿಂದ ಮಾಡ್ತಿದ್ರು. ಈಗ ಪಾರದರ್ಶಕತೆ ಕಳೆದುಕೊಂಡಿದೆ ಅಂತಾ ಆರೋಪಿಸಿದ್ರು. ಸರ್ಕಾರ ನಂಬಿದ ಯುವಕರು ಮೋಸ ಹೋಗಿದ್ದಾರೆ. ತನಿಖೆ ಪಾಡಿಗೆ ತನಿಖೆ ನಡೆಯಲಿ. ಆದರೆ ಅಲ್ಲಿವರೆಗೂ ಕಾಯದೇ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಾಳಿ ಭಾಗ್ಯ, ಅನ್ನ ಭಾಗ್ಯದಂತಹ ದರಿದ್ರ ಭಾಗ್ಯಗಳು ಬೇಡ: ಸಿಎಂ ಮುಂದೆ ಯತ್ನಾಳ್ ಕಿಡಿ

    ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ತನಿಖೆ ಮುಗಿಯುವವರೆಗೂ ಕಾಯದೆ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಮಾಡಿಕೊಡಬೇಕು. ಪ್ರಕರಣದ ಆರೋಪಿ ದಿವ್ಯಾ ಹಾಗರಗಿ ಅಂತಿದ್ದಾರೆ. ಆದರೆ ಇನ್ನೂ ಅವರ ಬಂಧನ ಆಗಿಲ್ಲ. ಇದನ್ನೆಲ್ಲ ನೋಡ್ತಿದ್ರೆ ಈ ಪ್ರಕರಣದಲ್ಲಿ ಸರ್ಕಾರದ ಪ್ರಭಾವ ಇದೆ ಎಂಬ ಸಂಶಯ ಮೂಡ್ತಿದೆ ಎಂದು ಹೇಳಿದ್ದಾರೆ.

    ಗೃಹ ಸಚಿವರಿಗೆ ಅನುಭವದ ಕೊರತೆ ಇದೆ. ಆಗಸ್ಟ್ ನಿಂದ ಇಲ್ಲಿವರೆಗೂ ಮೆಚ್ಯೂರ್ಡ್ ಆದ ಸ್ಟೆಪ್‌ಗಳನ್ನು ತೆಗೆದುಕೊಂಡಿಲ್ಲ. ಇದರಿಂದ ಪೊಲೀಸ್ ಇಲಾಖೆಯ ನೈತಿಕತೆ ಕುಸಿದಿದೆ ಅಂತಾ ವಾಗ್ದಾಳಿ ನಡೆಸಿದ್ರು.