Tag: ಆಮಂತ್ರಣ

  • Ayodhya Ram Mandir- ರಾಮಲಲ್ಲಾ ಪ್ರತಿಷ್ಠಾಪನೆಗೆ ಕೋಲಾರ ಅರ್ಚಕನಿಗೆ ಆಹ್ವಾನ

    Ayodhya Ram Mandir- ರಾಮಲಲ್ಲಾ ಪ್ರತಿಷ್ಠಾಪನೆಗೆ ಕೋಲಾರ ಅರ್ಚಕನಿಗೆ ಆಹ್ವಾನ

    ಕೋಲಾರ: ಜನವರಿ 22ರಂದು ಅಯೋಧ್ಯೆ ರಾಮಮಂದಿರ (Ayodhya Ram Mandir) ಉದ್ಘಾಟನೆಗೊಳ್ಳಲಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ಪ್ರಮುಖರಿಗೆ ಆಹ್ವಾನ ಪತ್ರಿಕೆಗಳನ್ನು (Invitation) ಕೂಡ ಕಳುಹಿಸಲಾಗುತ್ತಿದೆ. ಅಂತೆಯೇ ಈ ಆಮಂತ್ರಣ ಪತ್ರಿಕೆಯು ಇದೀಗ ಕೋಲಾರದ ಅರ್ಚಕರೊಬ್ಬರ ಕೈ ಸೇರಿದೆ.

    ಹೌದು. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಲು ಕೋಲಾರ ಮೂಲದ ಅರ್ಚಕ ರಮೇಶ್ ಭಟ್ (Ramesh Bhat) ಅವರನ್ನು ಆಹ್ವಾನಿಸಲಾಗಿದೆ. ರಮೇಶ್ ಭಟ್ ಅವರು ಕೋಲಾರ (Kolar) ಜಿಲ್ಲೆಯ ಕಲ್ಲೂರು ಗ್ರಾಮದ ನಿವಾಸಿ. ಇದೀಗ ಇವರನ್ನು ರಾಮಮಂದಿರ ಉದ್ಘಾಟನೆಯ ವೇಳೆ ಪರಿಚಾರಕ ಋತ್ವಿಕ್ ರಾಗಿ ಭಾಗವಹಿಸಲು ರಾಮಮಂದಿರ ದೇವಾಲಯ ಪ್ರತಿಷ್ಠಾಪನಾ ಸಮಿತಿಯು ಆಹ್ವಾನಿಸಿದೆ.

    ರಮೇಶ್ ಭಟ್ ಅವರು ಕೋಲಾರ ನಗರದ ಆರ್.ಎಲ್ ಜಾಲಪ್ಪ ಆಸ್ಪತ್ರೆ ಆವರಣದಲ್ಲಿನ ಗಣಪತಿ ದೇಗುಲದಲ್ಲಿ ಅರ್ಚಕರಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. ಸದ್ಯ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಶಿವ-ವಿಷ್ಣು ದೇಗುಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ಒಳಗಿನ ಚಿತ್ರಣ ಹೇಗಿದೆ? ಇಲ್ಲಿದೆ ಕೆಲವು ಫೋಟೋಸ್

  • ಮನೆಗೆ ಬಂದ ರಣಧೀರನಿಗೆ ವಿಗ್ರಹ ತೋರಿಸಿದ ಭಂಡ

    ಮನೆಗೆ ಬಂದ ರಣಧೀರನಿಗೆ ವಿಗ್ರಹ ತೋರಿಸಿದ ಭಂಡ

    ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಮಗಳ ಮದುವೆಯಲ್ಲಿ ಬ್ಯುಸಿಯಾಗಿದ್ದು, ಈಗ ಸ್ಯಾಂಡಲ್‍ವುಡ್‍ನ ಗಣ್ಯರು, ಸ್ನೇಹಿತರು, ಕುಟುಂಬದವರಿಗೆ ಮತ್ತು ಆಪ್ತರ ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನ ಮಾಡುತ್ತಿದ್ದಾರೆ.

    ರವಿಚಂದ್ರನ್ ತಮ್ಮ ಪುತ್ರ ಮನೋರಂಜನ್ ಜೊತೆ ಜಗ್ಗೇಶ್ ಮನೆಗೆ ತೆರಳಿ ಮಗಳ ಮದುವೆ ಕರೆಯೋಲೆ ನೀಡಿದ್ದಾರೆ. ಈ ವೇಳೆ ಜಗ್ಗೇಶ್ ಮನೆಗೆ ಬಂದ ರಣಧೀರನಿಗೆ ತಮ್ಮ ಮನೆಯಲ್ಲಿರುವ ವಿಗ್ರಹವೊಂದನ್ನು ತೋರಿಸಿದ್ದಾರೆ. ರಣಧೀರ ಮನೆಗೆ ಎಂಟ್ರಿ ಕೊಟ್ಟಾಗ ಕಷ್ಟಕಾಲದಲ್ಲಿ ತಮಗೆ ಸಹಾಯ ಮಾಡಿದ್ದ ರವಿಚಂದ್ರನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

    ನಟ ಜಗ್ಗೇಶ್ ಕಷ್ಟಕಾಲದಲ್ಲಿದ್ದಾಗ ರವಿಚಂದ್ರನ್ ಅವರು ಜಗ್ಗೇಶ್‍ಗೆ ಹಣ ಸಹಾಯ ಮಾಡಿದ್ದರು. ಆದರೆ ಆ ಹಣದಿಂದ ಜಗ್ಗೇಶ್ ದಂಪತಿ ಒಂದು ದೇವರ ವಿಗ್ರಹವನ್ನು ತಂದು ದೇವರ ಮನೆಯಲ್ಲಿ ಇಟ್ಟುಕೊಂಡಿದ್ದರು. ಈಗ ಮಗಳ ಮದುವೆಗೆ ಆಹ್ವಾನಿಸಲು ಬಂದ ರವಿಚಂದ್ರನ್ ಅವರನ್ನು ದೇವರ ಮನೆಗೆ ಕರೆದುಕೊಂಡು ಹೋಗಿ ಆ ವಿಗ್ರಹವನ್ನು ತೋರಿಸಿದ್ದಾರೆ. ಆಗ ರವಿಚಂದ್ರನ್ ಅದನ್ನು ನೋಡಿ ಮೂಕವಿಸ್ಮಿತರಾಗಿದ್ದಾರೆ.

    ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದೇನು?
    ಇದನ್ನು ಜಗ್ಗೇಶ್ “ಮಗಳ ಮದುವೆಯ ಮಮತೆಯ ಕರೆಯೋಲೆಗಾಗಿ ಬಂದಾಗ ಭಂಡನ ಮಡದಿ ಜೊತೆಯಾದಾಗ. ರಣಧೀರನಿಗೆ ನನ್ನ ದೇವರಮನೆ ತೋರಿ ರಣಧೀರ ಭಂಡನಿಗೆ ಕಷ್ಟಕಾಲದಲ್ಲಿ ಕೊಟ್ಟ ಹಣದಿಂದ ಅಂದು ಕೊಂಡ ದೇವರ ವಿಗ್ರಹ ತೋರಿದಾಗ ಮೂಕವಿಸ್ಮಿತ ರಣಧೀರ” ಎಂದು ಬರೆದುಕೊಂಡಿದ್ದಾರೆ.

    “ಕಷ್ಟಕಾಲದಲ್ಲಿ ನನಗೆ ಸಂಬಳ, ಪ್ರೀತಿ, ಉತ್ಸಾಹ ತುಂಬಿ ಭುಜ ತಟ್ಟಿದ ರಣಧೀರ ಮನೆಗೆ ಬಂದಾಗ ನನಗೆ ಹೆಮ್ಮೆಯಾಯಿತು. ಭವಿಷ್ಯ ನಾನು, ರಣಧೀರ, ಶಿವಣ್ಣ ಭಾವನಾತ್ಮಕವಾಗಿ ಬದುಕಿರುವ ಕಡೆಯ ತಲೆಮಾರು ಚಿತ್ರರಂಗಕ್ಕೆ ಅನ್ನಿಸಿತು ಮನ. ಹತ್ತಿದ್ದ ಏಣಿನಾ ಒದಿಬ್ಯಾಡ. ನನ್ನ ಹಾಡಿನ ಸಾಲಿನಂತೆ ಬದುಕಿರುವೆ ಕೊನೆಯವರೆಗೂ. ನೂರ್ಕಾಲ ದೀರ್ಘ ಸುಮಂಗಲಿಯಾಗಿ ಬಾಳಿ ಎಂದು ಶುಭ ಹಾರೈಸಿ ರಣಧೀರನ ಮಗಳಿಗೆ. ಇಂತಿ ರಣಧೀರನ ಅನ್ನ ಉಂಡವ” ಎಂದು ಬರೆದುಕೊಂಡು ರವಿಚಂದ್ರನ್ ಮಾಡಿದ ಸಹಾಯವನ್ನು ಮೆಲುಕು ಹಾಕಿದ್ದಾರೆ.

    ಮುಂದಿನ ತಿಂಗಳು ಮೇ 28 ಮತ್ತು 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಗೀತಾಂಜಲಿ ಮತ್ತು ಉದ್ಯಮಿ ಅಜಯ್ ಮದುವೆ ನಡೆಯಲಿದೆ.

    https://www.instagram.com/p/BwrR8gkjIGS/

  • ರಾಖಿ ಸಾವಂತ್ ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರದ ಫೋಟೋ ವೈರಲ್

    ರಾಖಿ ಸಾವಂತ್ ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರದ ಫೋಟೋ ವೈರಲ್

    – ನಾವಿಬ್ಬರೂ ವರ್ಜಿನ್ ಅಂದ್ರು ಭಾವಿ ಪತಿ

    ಹೈದರಾಬಾದ್: ಸಾಮಾಜಿಕ ಜಾಲತಾಣಗಳಿಗೆ ಫೋಟೋ, ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಸುದ್ದಿಯಾಗುವ ನಟಿ ರಾಖಿ ಸಾವಂತ್ ಅವರ ಕನ್ಯತ್ವ ಪರೀಕ್ಷೆಯ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ರಾಖಿ ಸಾವಂತ್ ಮದುವೆಗೂ ಮುನ್ನ ಕನ್ಯತ್ವ ಪರೀಕ್ಷೆ ಮಾಡಿಸಿದ್ದಾರೆ. ರಾಖಿಗೆ ಈಗಾಗಲೇ ಮದುವೆ ನಿಶ್ಚಯವಾಗಿದ್ದು, ಈ ಬಗ್ಗೆ ಇತ್ತೀಚೆಗಷ್ಟೇ ರಾಖಿ ಸಾವಂತ್ ಬಹಿರಂಗಪಡಿಸಿದ್ದರು.

    ಮದುವೆ ಆಮಂತ್ರಣ ಪತ್ರಿಕೆಯನ್ನ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡುವ ಮೂಲಕ ವಿವಾಹದ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ರಾಖಿ ಸಾವಂತ್  ನ ‘ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರ’ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದ್ದು, ಇದು ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಯಾಗಿದೆ.

    https://www.instagram.com/p/BquSSbsAxlL/

    ಅಂದಹಾಗೇ ರಾಖಿ ಸಾವಂತ್ ನ ಕನ್ಯತ್ವ ಪರೀಕ್ಷೆಯ ಪ್ರಮಾಣ ಪತ್ರವನ್ನು ಮದುವೆಯಾಗುತ್ತಿರುವ ಹುಡುಗ ತನ್ನ ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ರಾಖಿ ಸಾವಂತ್ ಮದುವೆ ಆಗುತ್ತಿರುವ ಹುಡುಗ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕವಾಗಿ ಪ್ರಚಾರ ಪಡೆದುಕೊಂಡಿದ್ದಾರೆ. ಅವರ ಹೆಸರು ದೀಪಕ್ ಕಲಾಲ್. ಇವರೇ ರಾಖಿ ಸಾವಂತ್ ನ ‘ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರ’ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ದೀಪಕ್ ಕಲಾಲ್ ಕೂಡ ತಮ್ಮ ಕನ್ಯತ್ವ ಪರೀಕ್ಷೆಯ ಪ್ರಮಾಣ ಪತ್ರವನ್ನು ಕೂಡ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ದೀಪಕ್ ಕಲಾಲ್, ”ನೀನು ಈಗ ಪವಿತ್ರವಾಗಿದ್ದೀಯಾ. ಹಿಂದೆ, ಮುಂದೆ ಮತ್ತು ಕೆಳಗೆ ಎಲ್ಲವೂ ನೀನು ಪವಿತ್ರ. ನೀನು ಖುಷಿನಾ ಬೇಬಿ” ಎಂದು ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರದ ಫೋಟೋ ಹಾಕಿ ಬರೆದುಕೊಂಡಿದ್ದಾರೆ.

    https://www.instagram.com/p/BquSz99Am25/

    ”ನಾನು ಮತ್ತು ರಾಖಿ ಇಬ್ಬರು ಮದುವೆಗೂ ಮುನ್ನಾ ವೈದ್ಯರ ಬಳಿ ಹೋಗಿ ಕನ್ಯತ್ವ ಪರೀಕ್ಷೆ ಮಾಡಿಸಿದ್ದೇವೆ. ಇಬ್ಬರು ವರ್ಜಿನ್ ಆಗಿದ್ದೀವಿ. ಡಾ. ಚೌಧರಿ ನಮ್ಮಿಬ್ಬರ ಕನ್ಯತ್ವ ಪರೀಕ್ಷೆ ಮಾಡಿದ್ದಾರೆ” ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ.

    ಮದುವೆ ಯಾವಾಗ?
    ರಾಖಿ ಸಾವಂತ್ ಮತ್ತು ದೀಪಕ್ ಕಲಾಲ್ ಮದುವೆ ಡಿಸೆಂಬರ್ 31 ರಂದು ನಡೆಯಲಿದ್ದು, ಲಾಸ್ ಏಂಜಲೀಸ್ ನಲ್ಲಿ ವಿವಾಹ ಸಮಾರಂಭ ನಡೆಲಿದೆ. ಬಳಿಕ ಭಾರತದಲ್ಲಿ ಮದುವೆ ಪಾರ್ಟಿ ಮತ್ತು ಆರತಕ್ಷತೆಯನ್ನ ಆಯೋಜನೆ ಮಾಡಲಾಗುತ್ತೆ ಎಂದು ತಿಳಿದು ಬಂದಿದೆ.

    https://www.instagram.com/p/Bqt-3HMAfGl/

    https://www.instagram.com/p/Bqwtrv6hHIB/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 3 ಲಕ್ಷ ರೂ. ನಲ್ಲಿ ತಯಾರಾಯ್ತು ಇಶಾಅಂಬಾನಿ ಮದ್ವೆ ಆಮಂತ್ರಣ- ವಿಡಿಯೋ

    3 ಲಕ್ಷ ರೂ. ನಲ್ಲಿ ತಯಾರಾಯ್ತು ಇಶಾಅಂಬಾನಿ ಮದ್ವೆ ಆಮಂತ್ರಣ- ವಿಡಿಯೋ

    ಮುಂಬೈ: ಭಾರತದ ಖ್ಯಾತ ಮತ್ತು ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗಳು ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಾಲ್ ಮದುವೆಯ ಭಾರೀ ಮೊತ್ತದ ಆಮಂತ್ರಣ ಪತ್ರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜನಾರ್ದನ ರೆಡ್ಡಿ ಮಗಳ ಮದುವೆಯ ಆಮಂತ್ರಣದ ವೆಚ್ಚವನ್ನ ನೋಡಿ ಜನರು ಸುಸ್ತಾಗಿದ್ದರು. ಈಗ ಮುಖೇಶ್ ಅಂಬಾನಿ ಮಗಳ ಮದುವೆಯ ಆಮಂತ್ರಣ ಪತ್ರಿಕೆಯ ಬೆಲೆ ಕೇಳಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತೆ. ಇಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್ ಅವರ ಮದುವೆಯ ಆಮಂತ್ರಣ ಪತ್ರಿಕೆಯ ಬೆಲೆ ಬರೊಬ್ಬರಿ 3 ಲಕ್ಷ ರೂ.

    ಇನ್‍ಸ್ಟಾಗ್ರಾಂನಲ್ಲಿರುವ ವಿಡಿಯೋದಲ್ಲಿ ಆಮಂತ್ರಣ ಪತ್ರಿಕೆಯನ್ನು ಎರಡು ಬಾಕ್ಸ್‍ಗಳಲ್ಲಿ ಕಾಣಬಹುದು. ಮೊದಲ ಬಾಕ್ಸ್ ನ ಮೇಲೆ ಇಶಾ ಮತ್ತು ಆನಂದ್ ಅವರ ಮೊದಲ ಅಕ್ಷರಗಳನ್ನು ಸೇರಿಸಿ ‘ಐಎ’ ಎಂದು ಮುದ್ರಿಸಲಾಗಿದ್ದು, ಬಿಳಿ ಮತ್ತು ತಿಳಿ ಗುಲಾಬಿ ಬಣ್ಣದ ಹೂಗಳಿಂದ ಅಲಂಕೃತವಾಗಿದೆ. ಈ ಬಾಕ್ಸ್ ತೆರೆದರೆ ಒಂದು ಚೆಂದದ ಚಿತ್ತಾರದ ಆಹ್ವಾನ ಪತ್ರಿಕೆಯಲ್ಲಿ ಮದುವೆಗೆ ಆಹ್ವಾನ ಮಾಡಲಾಗಿದೆ. ಚಿನ್ನದ ಬಣ್ಣದ ದ್ವಾರಗಳಿಂದ ಕೂಡಿದ ಹಾಳೆಗಳು ಅದರಲ್ಲಿದ್ದು, ಈ ಆಮಂತ್ರಣ ಪತ್ರಿಕೆಯ ನಾಲ್ಕನೇ ಪುಟದಲ್ಲಿ ಇಶಾ ಮತ್ತು ಆನಂದ್ ಬರೆದ ಪತ್ರವೊಂದಿದೆ. ಇತರೆ ಪುಟಗಳಲ್ಲಿ ನಾನಾ ಸಂಗತಿಗಳಿದ್ದು, ‘ಶುಭ್ ಅಭಿನಂದನ್’ ಎಂದು ಬರೆಯಲಾಗಿದೆ.

    https://www.instagram.com/p/BpwL0xPDOwi/?utm_source=ig_embed

    ಇನ್ನೂ ಎರಡನೇ ಬಾಕ್ಸ್ ಗುಲಾಬಿ ಮತ್ತು ಚಿನ್ನದ ಹೂಗಳಿಂದ ಅಲಂಕೃತವಾಗಿದ್ದು, ಬಾಕ್ಸ್ ತೆರೆದ ಕೂಡಲೇ ಗಾಯತ್ರಿ ದೇವಿಯ ಮಂತ್ರ ಕೇಳಿಸುತ್ತದೆ. ಇದರಲ್ಲಿ ಲಕ್ಷ್ಮಿ ಫೋಟೋವನ್ನ ಇರಿಸಲಾಗಿದೆ. ಈ ವೈಭೋಗದ ಮದುವೆಗೆ ಗಣ್ಯಾತೀಗಣ್ಯರು ಆಗಮಿಸಲಿದ್ದು, ಅವರಿಗೆ ಆಮಂತ್ರಣ ನೀಡಲು ಈ ಅದ್ಧೂರಿಯ ಕರೆಯೋಲೆ ತಯಾರಾಗಿದೆ.

    ಕಳೆದ ಸೆಪ್ಟೆಂಬರ್‍ನಲ್ಲಿ ಇಟಲಿಯ ಲೇಕ್ ಕೊಮುನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನ ಮಾಡಿಕೊಂಡ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್, ಇದೇ ಡಿಸೆಂಬರ್ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಖೇಶ್ ಅಂಬಾನಿ ಕುಟುಂಬ ಈಗಾಗಲೇ ದೇವರಿಗೆ ಆಮಂತ್ರಣ ಪತ್ರಿಕೆ ಅರ್ಪಿಸಿ ಗಣ್ಯರಿಗೆ ಕಾರ್ಡ್ ಹಂಚುವ ಕೆಲಸವನ್ನ ಶುರು ಮಾಡಿದ್ದಾರೆ ಎನ್ನಲಾಗಿದೆ.

    https://www.instagram.com/p/Bp_GI4qHvN3/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಣ-ಸಚಿವ ಅನಂತ್ ಕುಮಾರ್ ಹೆಗಡೆ ಹೀಗಂದ್ರು

    ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಣ-ಸಚಿವ ಅನಂತ್ ಕುಮಾರ್ ಹೆಗಡೆ ಹೀಗಂದ್ರು

    ದಾವಣಗೆರೆ: ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಬೆಳಗಾಗಿ ಜಿಲ್ಲಾಡಳಿತ ವಿಶೇಷ ಅತಿಥಿಯಾಗಿ ಹೆಸರು ಮುದ್ರಿಸಿದ್ದಕ್ಕೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

    ಜಿಲ್ಲೆಯ ಚನ್ನಗಿರಿಯಲ್ಲಿ ತುಮ್ಕೋಸ್ ಅಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ ಎಂದು ಮನವಿ ಮಾಡಿದ್ದೆ. ಆದರೂ ಹಾಕಿದ್ದಾರೆ. ಕಾರ್ಯಕ್ರಮಕ್ಕೆ ಹೋಗುತ್ತೇನೋ, ಇಲ್ಲವೋ ಕಾದು ನೋಡಿ ಅಂತ ಹೇಳಿದ್ದಾರೆ.

    ಇದನ್ನೂ ಓದಿ:  ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಹಾಕ್ಬೇಡಿ: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪತ್ರ  

    ಸಂಸದ ಸುರೇಶ ಅಂಗಡಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮನವಿಯನ್ನು ಪರಿಗಣಿಸದೆ ಟಿಪ್ಪು ಜಯಂತಿಗೆ ವಿಶೇಷ ಆಮಂತ್ರಿತರು ಎಂದು ಬೆಳಗಾವಿ ಜಿಲ್ಲಾಡಳಿತ ಆಮಂತ್ರಣ ನೀಡಿದೆ. ಅಲ್ಲದೆ, ಆಮಂತ್ರಣ ಪತ್ರಿಕೆಯಲ್ಲೂ ಹೆಸರು ಮುದ್ರಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಹೆಗಡೆ ಟಿಪ್ಪು ಜಯಂತಿಯಲ್ಲಿ ಭಾಗವಹಿಸುವ ಬಗ್ಗೆ ಸ್ಪಷ್ಟ ಪ್ರತಿಕ್ರಿಯೆ ನೀಡಲಿಲ್ಲ.

    ಇದನ್ನೂ ಓದಿ: ಆಹ್ವಾನಪತ್ರಿಕೆಯಲ್ಲಿ ಹೆಸರು ಹಾಕ್ಸೋದು ಪ್ರೋಟೋಕಾಲ್, ಬರೋದು ಬಿಡೋದು ಸಚಿವರಿಗೆ ಬಿಟ್ಟಿದ್ದು- ಸಿಎಂ

    ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಟಿಪ್ಪು ಜಯಂತಿ ಆಮಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ ಅಂದ್ರೂ ಹಾಕಿದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಟಿಪ್ಪುವಿನ ಜನ್ಮ ಜಾಲಾಡುತ್ತೇನೆ ಅಂತ ಸಚಿವರು ಹೇಳಿದ್ದರು.

  • ನಿಶ್ಚಿತಾರ್ಥದ ಹಿಂದಿನ ದಿನವೇ ಯುವಕನ ನಿಗೂಢ ಸಾವು

    ನಿಶ್ಚಿತಾರ್ಥದ ಹಿಂದಿನ ದಿನವೇ ಯುವಕನ ನಿಗೂಢ ಸಾವು

    ತುಮಕೂರು: ನಿಶ್ಚಿತಾರ್ಥದ ಮುನ್ನ ದಿನವೇ ಯುವಕ ಶವವಾಗಿ ಪತ್ತೆಯಾಗಿರೋ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಹಾಗಲನಹಳ್ಳಿಯಲ್ಲಿ ನಡೆದಿದೆ.

    33 ವರ್ಷದ ಹಂಸಕುಮಾರ್ ಮೃತ ಯುವಕ. ಹಂಸಕುಮಾರ್‍ಗೆ ಬಾಗಲಕೋಟೆ ಯುವತಿಯೊಂದಿಗೆ ಇಂದು ನಿಶ್ಚಿತಾರ್ಥ ಇತ್ತು. ಶುಕ್ರವಾರ ಆಮಂತ್ರಣ ಹಂಚಲು ಹೋಗಿದ್ದ ಹಂಸಕುಮಾರ್ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಾರು ಸಮೇತ ಹಂಸಕುಮಾರ್ ಸುಟ್ಟು ಕರಕಲಾಗಿದ್ದಾರೆ.

    ಹಳೆಯ ದ್ವೇಷದ ಹಿನ್ನಲೆಯಲ್ಲಿ ಹಂಸಕುಮಾರ್‍ರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ದಂಡಿನಶಿವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

  • ನವಜೋಡಿಗೆ ಪತ್ರದ ಮೂಲಕ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

    ನವಜೋಡಿಗೆ ಪತ್ರದ ಮೂಲಕ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

    ಬೆಂಗಳೂರು: ಪ್ರಧಾನಿ ನರೇಂದ್ರಮೋದಿ ಅವರು ನವಜೋಡಿಗೆ ಪತ್ರದ ಮೂಲಕ ಶುಭಾಶಯ ತಿಳಿಸಿದ್ದಾರೆ.

    ಬೆಂಗಳೂರಿನ ಅಕಾಶ್ ಎಂಬವರು ಇತ್ತೀಚೆಗೆ ಸ್ವಚ್ಛ ಭಾರತ ಲೋಗೋ ಇರುವ ತನ್ನ ಸಹೋದರಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಪ್ರಧಾನಿ ಮೋದಿಗೆ ಟ್ವಟ್ಟರ್‍ನಲ್ಲಿ ಟ್ಯಾಗ್ ಮಾಡಿದ್ದರು. ಈ ಟ್ವಿಟ್ಟರ್ ಅನ್ನು ಅಂದು ರೀ ಟ್ವೀಟ್ ಮಾಡಿದ್ದ ಮೋದಿ ಏಪ್ರಿಲ್ 26ರಂದು ಭಾರತ ಸರ್ಕಾರದ ಲೋಗೋ ಇರುವ ಪತ್ರವನ್ನು ಕಳುಹಿಸಿ ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.

    ಗುಜರಾತ್ ಮೂಲದವರಾಗಿರೋ ಆಕಾಶ್ ಮೈಸೂರಿಗೆ ಬಂದು ನೆಲೆಸಿದ್ದು, ಪ್ರಸ್ತುತ ಬೆಂಗಳೂರಿನ ಬಾಣಸವಾಡಿಯಲ್ಲಿರೋ ಇವರು ತನ್ನ ಸಹೋದರಿಯ ಮದುವೆಯ ಅಮಂತ್ರಣ ಪತ್ರಿಕೆಯನ್ನು ಏಪ್ರಿಲ್ 1 ರಂದು ಪ್ರಧಾನಿಗೆ ಟ್ವೀಟ್ ಮಾಡಿದ್ರು. ಈ ಹೊಸ ಪ್ರಯೋಗಕ್ಕೆ ಪ್ರಧಾನಿಯವರೇ ಮೆಚ್ಚಿ ರೀ ಟ್ವೀಟ್ ಮಾಡಿದ್ರು.

    ಆಮಂತ್ರಣ ಪತ್ರಿಕೆಯಲ್ಲಿ ಸ್ವಚ್ಛ ಭಾರತ ಲೋಗೋ ಪ್ರಕಟಿಸಿದ್ದು, ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಆಕಾಶ್ ರನ್ನು ಸಂಪರ್ಕಿಸಿದಾಗ `ನನ್ನ ತಂದೆಯವರಿಗೆ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಬಹಳ ಇಷ್ಟವಾಗಿದೆ. ಏಪ್ರಿಲ್ 28 ರಂದು ರಾಜಸ್ಥಾನದ ಜೋದ್‍ಪುರದಲ್ಲಿ ನನ್ನ ಸಹೋದರಿಯ ಮದುವೆ ಇದೆ. ಈ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಏನಾದರೂ ಒಂದು ಉತ್ತಮ ಸಂದೇಶವನ್ನು ತಿಳಿಸುವ ಉದ್ದೇಶದಿಂದ ತಂದೆಯವರು ಸ್ವಚ್ಛ ಭಾರತದ ಲೋಗೋವನ್ನು ಪ್ರಿಂಟ್ ಹಾಕಿಸಿದ್ದಾರೆ’ ಎಂದು ತಿಳಿಸಿದ್ದರು.

    ನರೇಂದ್ರ ಮೋದಿಯವರ ಈ ಹಿಂದೆ ಪ್ರತಿನಿಧಿಸುತ್ತಿದ್ದ ಮಣಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಕುಟುಂಬ ನೆಲೆಸಿದೆ. ಹಿಂದಿನಿಂದಲೂ ನಾವು ಮೋದಿ ಅವರ ಕೆಲಸ ಕಾರ್ಯಗಳನ್ನು ನೋಡಿದ್ದೇವೆ. ನಮ್ಮ ಕುಟುಂಬ ಸದಸ್ಯರಿಗೆ ಮೋದಿ ಅಂದ್ರೆ ಅಚ್ಚುಮೆಚ್ಚು. ಈ ಹಿಂದೆ ನನ್ನ ತಂದೆ ಬಿಸಿನೆಸ್ ಮಾಡಲು ಮೈಸೂರಿಗೆ ಬಂದಿದ್ದರು. 12 ವರ್ಷ ಮೈಸೂರಿನಲ್ಲಿ ಇದ್ದು ಬಳಿಕ ಗುಜರಾತ್‍ಗೆ ಮರಳಿದ್ವಿ. ಇದಾದ ಬಳಿಕ 2009ರಲ್ಲಿ ಮೈಸೂರಿಗೆ ಪುನಃ ಬಂದು ಈಗ ಇಲ್ಲೇ ನೆಲೆಸಿದ್ದೇವೆ. ನಾನು ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಎಂಜಿನಿಯರ್ ಪದವಿ ಓದಿದ್ದೇನೆ ಎಂದರು.

    ಫಾಲೋ ಮಾಡಿದ್ರು: ಆಕಾಶ್ ಅವರ ಟ್ವೀಟನ್ನು ಮೋದಿ ರೀಟ್ವೀಟ್ ಮಾಡಿದ್ದು ಮಾತ್ರ ಅಲ್ಲದೇ ಈಗ ಅವರನ್ನು ಫಾಲೋ ಮಾಡಿದ್ದಾರೆ. ಮೋದಿಯವರು ಇದುವರೆಗೆ ಒಟ್ಟು 1,698 ಜನರನ್ನು ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ನಾನೂ ಒಬ್ಬನಾಗಿದ್ದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಆಕಾಶ್ ಸಂತಸ ಹಂಚಿಕೊಂಡಿದ್ದರು.

    ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಆಕಾಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉದ್ಯಮಿ, ಬ್ಲಾಗರ್, ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್ ಎಂದು ತಮ್ಮ ವೃತ್ತಿ ವಿವರನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೇ ಧೋನಿ ಅಭಿಮಾನಿ ಮತ್ತು ನರೇಂದ್ರ ಮೋದಿಯವರು ಫಾಲೋ ಮಾಡುತ್ತಿರುವ ವ್ಯಕ್ತಿ ಎಂದು ತಮ್ಮ ಪ್ರೊಫೈಲ್‍ನಲ್ಲಿ ಬರೆದುಕೊಂಡಿದ್ದರು.