Tag: ಆಫ್ರಿಕಾ ಪ್ರಜೆ

  • ಆಫ್ರಿಕಾ ಪ್ರಜೆಯಿಂದಲೇ ಮತ್ತೊಬ್ಬ ಆಫ್ರಿಕಾ ಪ್ರಜೆಯ ಬರ್ಬರ ಹತ್ಯೆ

    ಆಫ್ರಿಕಾ ಪ್ರಜೆಯಿಂದಲೇ ಮತ್ತೊಬ್ಬ ಆಫ್ರಿಕಾ ಪ್ರಜೆಯ ಬರ್ಬರ ಹತ್ಯೆ

    ಬೆಂಗಳೂರು:  ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ವಿದೇಶಿ ಪ್ರಜೆಯೊಬ್ಬನನ್ನು ಮತ್ತೊಬ್ಬ ವಿದೇಶಿ ಪ್ರಜೆ ಕೊಲೆ ಮಾಡಿರುವ ಘಟನೆ ನಗರದ ಕಮ್ಮನಹಳ್ಳಿಯ ಕುಳ್ಳಪ್ಪ ಸರ್ಕಲ್ ಬಳಿ ನಡೆದಿದೆ.

    ಆಫ್ರಿಕನ್ ಪ್ರಜೆ ವಿಕ್ಟರ್ (35) ಕೊಲೆಯಾದ ದುರ್ದೈವಿ. ಭಾನುವಾರ ರಾತ್ರಿ 10 ಗಂಟೆ ವೇಳೆ ಒಟ್ಟಿಗೆ ನಡೆದುಕೊಂಡು ಬರುತ್ತಿದ್ದಾಗ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಹತ್ಯೆಯಲ್ಲಿ ಅಂತ್ಯವಾಗಿದೆ. ಕೊಲೆಯಾದ ವ್ಯಕ್ತಿ ವಿಕ್ಟರ್ ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿನ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಎರಡುವರೆ ವರ್ಷದ ಮಗು ಇದೆ ಎನ್ನಲಾಗಿದೆ. ಇದನ್ನೂ ಓದಿ: ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿ ಜೈಲಿನಲ್ಲಿಯೇ ಆತ್ಮಹತ್ಯೆ

    POLICE JEEP

    ಘಟನೆ ಬಳಿಕ ಆರೋಪಿ ಎಸ್ಕೆಪ್ ಆಗಿದ್ದು, ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಕ್ಟರ್ ಮೊಬೈಲ್ ವಶಕ್ಕೆ ಪಡೆದು ಕೊನೆಯ ಎಲ್ಲಾ ಇನ್ ಕಮ್ಮಿಂಗ್ ಮತ್ತು ಔಟ್ ಗೋಯಿಂಗ್ ಕರೆಗಳ ಮಾಹಿತಿ ಕಲೆ ಹಾಕುತ್ತಿರುವ ಖಾಕಿ ಪಡೆ, ಅನುಮಾನಸ್ಪದ ನಂಬರ್‌ಗಳ ನೆಟ್ ವರ್ಕ್ ಡಂಪ್ ತೆಗೆಯಲು ಮುಂದಾಗಿದ್ದು, ವಿಕ್ಟರ್ ಕುಟುಂಬಸ್ಥರ ಬಳಿಯು ಮಾಹಿತಿ ಕಲೆ ಹಾಕಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್‍ಗೆ 71ನೇ ಹುಟ್ಟುಹಬ್ಬದ ಸಂಭ್ರಮ

  • ಜಂಕ್ಷನ್ ನಲ್ಲಿ ಮೂತ್ರ ವಿಸರ್ಜಿಸಿ ಆಫ್ರಿಕಾ ಪ್ರಜೆಯಿಂದ ಅಸಭ್ಯ ವರ್ತನೆ

    ಜಂಕ್ಷನ್ ನಲ್ಲಿ ಮೂತ್ರ ವಿಸರ್ಜಿಸಿ ಆಫ್ರಿಕಾ ಪ್ರಜೆಯಿಂದ ಅಸಭ್ಯ ವರ್ತನೆ

    ಬೆಂಗಳೂರು: ನಗರದಲ್ಲಿ ವಿದೇಶಿಯರ ಪುಂಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಮವಾರ ರಾತ್ರಿ ಆಫ್ರಿಕಾ ಪ್ರಜೆಯೊಬ್ಬ ಜಂಕ್ಷನ್ ನಲ್ಲಿ ಮೂತ್ರ ವಿಸರ್ಜನೆ ಮಾಡಿ ತನ್ನ ಪುಂಡಾಟ ಮೆರೆದಿದ್ದಾನೆ.

    ಯಲಹಂಕದ ಕೋಗಿಲು ಕ್ರಾಸ್ ಜಂಕ್ಷನ್ ಬಳಿ ರಾತ್ರಿ 10ರ ಸುಮಾರಿಗೆ ಈ ಘಟನೆ ನಡೆದಿದೆ. ಯುವಕನನ್ನು ಆಫ್ರಿಕಾ ಮೂಲದ ವಾಸ್-ಯೂ ಎಂದು ಗುರುತಿಸಲಾಗಿದೆ. ಕಂಠಪೂರ್ತಿ ಕುಡಿದಿದ್ದ ವಾಸ್-ಯೂ ಜಂಕ್ಷನ್ ಬಳಿ ಜನ ಸಂಚರಿಸುವ ಮುಖ್ಯ ಜಂಕ್ಷನ್ ನಲ್ಲಿ ಮೂತ್ರ ವಿಸರ್ಜಿಸಿ ಅಸಭ್ಯ ವರ್ತನೆ ತೋರಿದ್ದಾನೆ. ಅಲ್ಲದೇ ಭಾರತೀಯರನ್ನು ನಿಂದಿಸಿದ್ದಾನೆ ಎಂದು ತಿಳಿದುಬಂದಿದೆ.

    ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಕಾರ್ಗೊದಲ್ಲಿ ಕೆಲಸ ಮಾಡುತ್ತಿದ್ದೇನೆಂದು ಹೇಳಿಕೊಂಡ ವಾಸ್-ಯೂ ವರ್ತನೆಯಿಂದ ಸಾರ್ವಜನಿಕರು ಹಾಗೂ ಯುವತಿಯರು ಕೆಲಕಾಲ ಕಸಿವಿಸಿಯಾಗಿದ್ದರು. ಸಾರ್ವಜನಿಕರು ಜಮಾವಣೆಯಾಗುತ್ತಿದ್ದಂತೆ ಆಫ್ರಿಕಾ ಪ್ರಜೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ.