Tag: ಆಫೀಸ್

  • ಆಫೀಸ್ ಬಿಟ್ಟು ಸ್ಮಶಾನದಲ್ಲಿ ಕೆಲಸಕ್ಕೆ ಸೇರಿದ ಪದವೀಧರೆ – ಕೆಲಸ ಏನು ಗೊತ್ತಾ?

    ಆಫೀಸ್ ಬಿಟ್ಟು ಸ್ಮಶಾನದಲ್ಲಿ ಕೆಲಸಕ್ಕೆ ಸೇರಿದ ಪದವೀಧರೆ – ಕೆಲಸ ಏನು ಗೊತ್ತಾ?

    ಬೀಜಿಂಗ್: ಆಫೀಸ್‍ನ (Office) ರಾಜಕೀಯದಿಂದ ತಪ್ಪಿಸಿಕೊಳ್ಳಲು ಪದವೀಧರೆಯೊಬ್ಬಳು ಸ್ಮಶಾನದಲ್ಲಿ (Cemetery) ಕೆಲಸ (Job) ಮಾಡುವ ಮೂಲಕ ಅಚ್ಚರಿಯನ್ನು ಉಂಟುಮಾಡಿದ್ದಾಳೆ.

    ಟಾನ್ (22) ಎಂಬ ಯುವತಿ ಉತ್ತಮ ಕೆಲಸ ಹಾಗೂ ಜೀವನದಲ್ಲಿ ಸಮತೋಲನ ಸಾಧಿಸಲು ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದಾಳೆ. ಈಕೆ ಚೀನೀ ವಿಶ್ವವಿದ್ಯಾನಿಲಯದ ಪದವೀಧರೆಯಾಗಿದ್ದಾಳೆ. ಟಾನ್ ವಾರದಲ್ಲಿ 6 ದಿನ ಬೆಳಗ್ಗೆ 8:30 ರಿಂದ ಸಂಜೆ 5ರವರೆಗೆ ಕೆಲಸ ಮಾಡುತ್ತಾಳೆ. ಅಷ್ಟೇ ಅಲ್ಲದೇ 2 ಗಂಟೆಗಳ ಕಾಲ ಊಟಕ್ಕೆಂದು ವಿರಾಮವನ್ನು ಪಡೆಯುತ್ತಾಳೆ. ಈಕೆ ಈ ಕೆಲಸದಿಂದ ಸುಮಾರು 4,000 ಯುವಾನ್ (45,766ರೂ.) ಮಾಸಿಕ ವೇತನವನ್ನು ಗಳಿಸುತ್ತಿದ್ದಾಳೆ. ಈ ಬಗ್ಗೆ ಟಾನ್ ಪಶ್ಚಿಮ ಚೀನಾದ ಚಾಂಗ್‍ಕಿಂಗ್ ಪುರಸಭೆಯಲ್ಲಿ ಪರ್ವತದ ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ಸ್ಥಳದ ವೀಡಿಯೋ ಹಾಗೂ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾಳೆ.

    ಈ ವೀಡಿಯೋದಲ್ಲಿ ಟಾನ್ ಅಲ್ಲೇ ವಾಸಿಸುವ ಕಾರಣದಿಂದಾಗಿ ತನ್ನನ್ನು ತಾನು ಸಮಾಧಿ ಕೀಪರ್ ಎಂದು ಪರಿಚಯಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಇದು ಬಹಳ ಸರಳ ಹಾಗೂ ಸುಲಭದ ಕೆಲಸವಾಗಿದೆ ಎಂದು ತಿಳಿಸಿದ್ದಾಳೆ. ಜೊತೆಗೆ ವೀಡಿಯೋದಲ್ಲಿ ತನ್ನ ಕೆಲಸದ ಬಗ್ಗೆ ತಿಳಿಸಿದ್ದು, ಸ್ಮಾಶಾನದಲ್ಲಿ ಮೃತದೇಹ ಹೂಳಲು ಜಾಗ ನೀಡುವುದು ಹಾಗೂ ಸತ್ತವರ ಸಂಬಂಧಿಕರ ಪರವಾಗಿ ಸಮಾಧಿಗಳನ್ನು ಮುಚ್ಚಲು ಸಹಾಯ ಮಾಡುವುದಾಗಿದೆ ಎಂದಿದ್ದಾಳೆ. ಇದನ್ನೂ ಓದಿ: ಕಾಡಾನೆ ಹಾವಳಿ ಗಂಭೀರವಾಗಿ ಪರಿಗಣಿಸಿ, ವಿಶೇಷ ಕಾರ್ಯಪಡೆ ರಚನೆ ಮಾಡಿದ್ದೇವೆ: ಬೊಮ್ಮಾಯಿ

    ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ಇಂತಹ ಕೆಲಸವನ್ನು ಹಳೆಯ ದಿನಗಳಲ್ಲಿ ದುರದೃಷ್ಟಕರವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಆಧುನಿಕ ಜನರಿಗೆ ಇದು ಒತ್ತಡವಿಲ್ಲದ ಕೆಲಸವಾಗಿದೆ ಎಂದು ಹೇಳಿದ್ದಾನೆ. ಮತ್ತೊಬ್ಬ ಪ್ರತಿಕ್ರಿಯೆ ನೀಡಿದ್ದು, ನನಗೂ ಈ ಕೆಲಸ ಇಷ್ಟವಾಗಿದೆ. ಅಲ್ಲಿ ಯಾವುದೇ ಕಚೇರಿ ರಾಜಕೀಯ ಇಲ್ಲ, ಜನರೊಂದಿಗೂ ವ್ಯವಹರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾನೆ. ಇದನ್ನೂ ಓದಿ: ಸೆರೆ ಹಿಡಿದಿದ್ದ ಆನೆ ಜೊತೆ ಕಾದಾಟ – ದಸರಾ ಆನೆ ಗೋಪಾಲಸ್ವಾಮಿ ಸಾವು

    Live Tv
    [brid partner=56869869 player=32851 video=960834 autoplay=true]

  • ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ

    ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ

    – ಬೆದರಿಕೆ ನಡುವೆಯೂ ಇಂದು ಮುಂಬೈಗೆ ಆಗಮಿಸಿದ ನಟಿ
    – ಶಿವಸೇನೆ, ಬಿಎಂಸಿ ವಿರುದ್ಧ ನೆಟ್ಟಿಗರು ಗರಂ

    ಮುಂಬೈ: ನಗರದಲ್ಲಿರುವ ನಟಿ ಕಂಗನಾ ರಣಾವತ್ ಅವರ ಮನೆ ಮತ್ತು ಆಫೀಸ್ ಅನ್ನು ಅಕ್ರಮವಾಗಿ ಮಾರ್ಪಾಡು ಮಾಡಲಾಗಿದೆ ಎಂದು ಆರೋಪಿಸಿ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್(ಬಿಎಂಸಿ) ಕೆಡವಿ ಹಾಕಿದೆ.

    ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನಟಿ ಕಂಗನಾ ರಣಾವತ್ ಅವರು, ಶಿವಸೇನಾ ವಿರುದ್ಧ ಮಾತನಾಡಿದ್ದಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ನನ್ನನ್ನು ಟಾರ್ಗೆಟ್ ಮಾಡಿದೆ. ಹೀಗಾಗಿ ಬಿಎಂಸಿಯನ್ನು ಉಪಯೋಗಿಸಿಕೊಂಡು ನನ್ನ ಮನೆ ಮತ್ತು ಆಫೀಸ್ ಅನ್ನು ಒಡೆದು ಹಾಕಿದೆ ಎಂದು ಆರೋಪ ಮಾಡಿದ್ದಾರೆ.

    ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಂಗನಾ, ನಾನು ಯಾವತ್ತೂ ತಪ್ಪು ಮಾಡುವುದಿಲ್ಲ ಎಂದು ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಹೀಗಾಗಿಯೇ ನಾನು ಹೇಳಿದ್ದು, ನನ್ನ ಮುಂಬೈ ಈಗ ಪಿಓಕೆ ಆಗಿದೆ ಎಂದು ಟ್ವೀಟ್ ಮಾಡಿ, ಅಧಿಕಾರಿಗಳು ಮನೆಯನ್ನು ಒಡೆದು ಹಾಕುತ್ತಿರುವ ಫೋಟೋವನ್ನು ಹಾಕಿದ್ದಾರೆ. ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಪಾಕಿಸ್ತಾನ ಪ್ರಜಾಪ್ರಭುತ್ವದ ಕಗ್ಗೋಲೆ ಬಾಬರ್ ಮತ್ತು ಅವನ ಸೈನಿಕರು ಎಂದು ವ್ಯಂಗ್ಯವಾಡಿದ್ದಾರೆ.

    ಮುಂಬೈನ ಪಾಲಿ ಹಿಲ್ಸ್‍ನಲ್ಲಿರುವ ಕಂಗನಾ ಅವರು ಕಚೇರಿಯಲ್ಲಿ 14 ಬಗೆಯ ನಿಯಮ ಉಲ್ಲಂಘನೆಗಳನ್ನು ಪಟ್ಟಿ ಮಾಡಿದ್ದೇವೆ. ಜೊತೆಗೆ ಆಕೆ ಬಾಂದ್ರಾ ಪ್ರದೇಶದಲ್ಲಿರುವ ಬಂಗಲೆಯಲ್ಲಿ ಕೂಡ ಅಕ್ರಮವಾದ ಕೆಲ ರಚನೆಗಳು ಕಂಡು ಬಂದಿವೆ. ಹೀಗಾಗಿ ನಾವು ಅವುಗಳನ್ನು ನೆಲಸಮ ಮಾಡಿ ಅವರಿಗೆ ವಿಳಾಸದಲ್ಲಿಯೇ ನೋಟಿಸ್ ನೀಡಲಾಗಿದೆ ಎಂದು ಬಿಎಂಸಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

    ನಾನು ಮುಂಬೈಗೆ ಬರಲು ವಿಮಾನ ನಿಲ್ದಾಣದಲ್ಲಿ ಇದ್ದಾಗ, ಮಹಾರಾಷ್ಟ್ರ ಸರ್ಕಾರ ಮತ್ತು ಅವರ ಗೂಂಡಾಗಳು ನನ್ನ ಮನೆಗ ಮತ್ತು ಆಫೀಸ್‍ಗೆ ಹೋಗಿ ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿ ಅದನ್ನು ಒಡೆದು ಹಾಕಿದ್ದಾರೆ. ಅವರು ಒಡೆದು ಹಾಕಲಿ. ನಾನು ಮುಂಬೈಗಾಗಿ ನನ್ನ ರಕ್ತವನ್ನು ಬೇಕಾದರೂ ಕೊಡಲು ಸಿದ್ಧವಿದ್ದೇನೆ. ಅವರು ಏನೇ ಕಿತ್ತುಕೊಂಡರೂ ನನ್ನ ಹೋರಾಟದ ಗುಣವನ್ನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಟ್ವೀಟ್ ಕಂಗನಾ ಟ್ವೀಟ್ ಮಾಡಿದ್ದಾರೆ.

    ಇನ್ನೊಂದು ಟ್ವೀಟ್ ಮಾಡಿರುವ, ನನ್ನ ಮನೆಯನ್ನು ಅಕ್ರಮವಾಗಿ ಕಟ್ಟಿದ್ದರೆ, ಅದನ್ನು ಈಗಲೇ ಒಡೆಯಬೇಕಿತ್ತಾ? ಕೊರೊನಾ ಕಾರಣದಿಂದ ಸೆಪ್ಟಂಬರ್ 30ವರೆಗೆ ಸುಪ್ರೀಂ ಕೋರ್ಟ್ ಯಾವುದೇ ರೀತಿಯ ಮನೆಗಳನ್ನು ಕೆಡವುವಂತಿಲ್ಲ ಎಂದು ಹೇಳಿದೆ. ಫ್ಯಾಸಿಸಮ್ ಎಂದರೆ ಏನು ಎಂಬುದನ್ನು ಬಾಲಿವುಡ್ ಈಗ ನೋಡುತ್ತಿದೆ ಎಂದು ಕಂಗನಾ ಹೇಳಿದ್ದಾರೆ. ಜೊತೆಗೆ ನಾನು ಪ್ರೀತಿ ಇಂದು ಹಲವಾರು ವರ್ಷದಿಂದ ಕಟ್ಟಿದ ಮನೆಯನ್ನು ಕೆಡವಲು ನನಗೆ ಎಚ್ಚರಿಕೆಯ ನೋಟಿಸ್ ಕಳುಹಿಸಲಾಗಿದೆ. ಅವರು ಮನೆಯನ್ನು ಕೆಡವಬಹುದು ನನ್ನ ಆತ್ಮಬಲವನ್ನು ಅಲ್ಲ ಎಂದು ಕಂಗನಾ ತಿಳಿಸಿದ್ದಾರೆ.

    https://twitter.com/ANI/status/1303585390146666497

    ಈ ಮೊದಲು ಕಂಗನಾ ರಣಾವತ್ ಅವರು, ಮುಂಬೈಯನ್ನು ಪಿಓಕೆ ಎಂದು ಹೇಳಿದ್ದರು. ಇದಕ್ಕೆ ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದ ಶಿವಸೇನಾ ನಾಯಕರು ಕಂಗನಾ ಮುಂಬೈಗೆ ಬರುವುದು ಬೇಡ ಎಂದು ಹೇಳಿದ್ದರು. ಜೊತೆಗೆ ಕೆಲವರು ಬೆದರಿಕೆಯನ್ನು ಹಾಕಿದ್ದರು. ಆದರೆ ಇದಕ್ಕೆ ಭಯಪಡದ ಕಂಗನಾ ಇಂದು ಮುಂಬೈಗೆ ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಅವರಿಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಿದೆ.

    ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸುತ್ತಿರುವ ಮುಂಬೈ ಪೊಲೀಸರು ಹಾಗೂ ಶಿವಸೇನೆಯ ಸರ್ಕಾರದ ವಿರುದ್ಧ ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಶಿವಸೇನೆ ಹಾಗೂ ಎನ್‍ಸಿಪಿ ಕಾರ್ಯಕರ್ತರು ನಟಿ ಮುಂಬೈಗೆ ಆಗಮಿಸಬಾರದು, ಅವರು ಮುಂಬೈನಿಂದ ದೂರ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಹೋರಾಟ ನಡೆಸಿದ್ದರು. ಬಳಿಕ ಎಂಪಿ ಸಂಜಯ್ ರಾವತ್ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರ ಮಧ್ಯೆಯೂ ಕಂಗನಾ ಇಂದು ಮುಂಬೈಗೆ ಆಗಮಿಸಿಸುತ್ತಿದ್ದಾರೆ.

  • ಬಿಬಿಎಂಪಿಯ ಸಿಬ್ಬಂದಿ, ಪೌರಕಾರ್ಮಿಕರಿಗೆ ಬಯೋಮೆಟ್ರಿಕ್ ಭಯ

    ಬಿಬಿಎಂಪಿಯ ಸಿಬ್ಬಂದಿ, ಪೌರಕಾರ್ಮಿಕರಿಗೆ ಬಯೋಮೆಟ್ರಿಕ್ ಭಯ

    ಬೆಂಗಳೂರು: ಕೊರೊನೊ ವೈರಸ್, ಕಾಲರಾ ಭಯ ಹರಡುವ ಭೀತಿ ಈಗ ಬಿಬಿಎಂಪಿಯ ಸಿಬ್ಬಂದಿ, ಪೌರಕಾರ್ಮಿಕರಿಗೂ ಕಾಡುತ್ತಿದೆ. ಕಾರಣ ಪಾಲಿಕೆಯಲ್ಲಿ ಹಾಜರಾತಿಗಾಗಿ ಈಗಲೂ ಬಯೋಮೆಟ್ರಿಕ್ ಮುಂದುವರಿಕೆ ಮಾಡಲಾಗಿದೆ.

    ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ, ಬ್ಯಾಟರಾಯನಪುರ, ತ್ಯಾಗರಾಜ್‍ನಗರ ಎಲ್ಲ ಕಡೆ ಬಯೋಮೆಟ್ರಿಕ್ ಮೂಲಕ ಹಾಜರಾತಿ ಪಡೆಯಲಾಗುತ್ತಿದೆ. ಇದು ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಗಿದೆ. ಇಡೀ ನಗರಕ್ಕೆ ಮುನ್ನಚ್ಚರಿಕೆ ಬಗ್ಗೆ ಅರಿವು ಹೇಳುವ ಬಿಬಿಎಂಪಿ ಮಾತ್ರ ಬಯೋಮೆಟ್ರಿಕ್ ಮುಂದುವರಿಸಿದೆ.

    ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಈ ವಿಚಾರ ನನ್ನ ಗಮನಕ್ಕೆ ಬೆಳಿಗ್ಗೆಯೇ ಬಂದಿದೆ. ಆಯುಕ್ತರು, ಆಡಳಿತ ವಿಭಾಗದ ವಿಶೇಷ ಆಯುಕ್ತರು, ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದೊಮ್ಮೆ ಬಯೋಮೆಟ್ರಿಕ್ ವ್ಯವಸ್ಥೆ ತೆಗೆದರೆ ದುರ್ಬಳಕೆ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಬಯೋಮೆಟ್ರಿಕ್ ಸಂಸ್ಥೆ ದೃಷ್ಟಿಯಿಂದ ತೀರ್ಮಾನ ಮಾಡಲಾಗುತ್ತದೆ ಎಂದರು.

  • ಡಿಸಿಎಂ ಪರಮೇಶ್ವರ್ ಸಾಹೇಬ್ರಿಂದ ಮತ್ತೆ ಸರ್ವಾಧಿಕಾರಿ ಧೋರಣೆ..!

    ಡಿಸಿಎಂ ಪರಮೇಶ್ವರ್ ಸಾಹೇಬ್ರಿಂದ ಮತ್ತೆ ಸರ್ವಾಧಿಕಾರಿ ಧೋರಣೆ..!

    ಬೆಂಗಳೂರು: ಖಾಲಿ ರೋಡ್ ಝೀರೋ ಟ್ರಾಫಿಕ್‍ನಲ್ಲಿ ರಾಜನಂತೆ ಹೋಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಉಪಮುಖ್ಯಮಂತ್ರಿ ಪರಮೇಶ್ವರ್ ಇದೀಗ ಮತ್ತೆ ತಮ್ಮ ಸರ್ವಾಧಿಕಾರಿ ಧೋರಣೆ ತೋರುವ ಮೂಲಕ ಚರ್ಚೆಗೀಡಾಗಿದ್ದಾರೆ.

    ಹೌದು. ಡಿಸಿಎಂ ಅವರಿಗೆ ಜನರನ್ನು ಕಂಡರೆ ಕಿರಿಕಿರಿ ಆಗುತ್ತಂತೆ. ಆಲಿ ಆಸ್ಕರ್ ರಸ್ತೆಯಲ್ಲಿರುವ ಬಿಎಂಆರ್ ಡಿಎ ಕಚೇರಿಗೆ ಡಿಸಿಎಂ ಇರುವಷ್ಟು ಹೊತ್ತು ಜನರು ಬರುವಂತಿಲ್ಲವೆಂಬ ಮಾಹಿತಿಯೊಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನಕ್ಷೆ ಮಂಜೂರಾತಿ, ಭೂ ಸರ್ವೆ ಸೇರಿದಂತೆ ಸಾಕಷ್ಟು ಸಮಸ್ಯೆಗಾಗಿ ಜನ ಈ ಕಚೇರಿಗೆ ಬರುತ್ತಾರೆ. ಆದರೆ ಡಿಸಿಎಂ ಪರಮೇಶ್ವರ್ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಕಚೇರಿಯಲ್ಲಿ ಇರುವಷ್ಟು ಹೊತ್ತು ಜನ ಬರುವಂತಿಲ್ಲ. ಒಂದು ವೇಳೆ ಜನ ಬಂದರೆ ಡಿಸಿಎಂ ಅವರಿಗೆ ಸಿಕ್ಕಾಪಟ್ಟೆ ಕಿರಿಕ್ ಆಗುತ್ತಂತೆ. ನಗರಾಭಿವೃದ್ಧಿ ಸಚಿವರಾದವರು ಈ ಪ್ರಾಧಿಕಾರಕ್ಕೆ ಉಪಾಧ್ಯಕ್ಷರು ಆಗಿರುತ್ತಾರೆ. ಆದ್ದರಿಂದ ಪರಮೇಶ್ವರ್ ಪದೇ ಪದೇ ಸಭೆ ಕರೆಯುತ್ತಾರೆ.

    ಪರಮೇಶ್ವರ್ ಅವರ ಸಭೆಗೆ ಜನರ ಪ್ರವೇಶ ನಿಷಿದ್ಧ ಮಾಡಿರುವುದು ಯಾಕೆ? ದಿನದಿಂದ ದಿನಕ್ಕೆ ಡಿಸಿಎಂ ಸಾಹೇಬರ ಸರ್ವಾಧಿಕಾರಿ ಧೋರಣೆ ರೇಜಿಗೆ ಹುಟ್ಟಿಸುವಂತಿದೆ.

    ಉಪಮುಖ್ಯಮಂತ್ರಿಯವರ ಈ ನಡೆಗೆ ನಿಮ್ಮ ಅಭಿಪ್ರಾಯವೇನು..? ಕಮೆಂಟ್ ಮಾಡಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹೆಂಡ್ತಿಯನ್ನ ಆಫೀಸ್‍ನಿಂದ ಕಿಡ್ನಾಪ್ ಮಾಡಿ ಕೊಲೆ ಮಾಡ್ದ

    ಹೆಂಡ್ತಿಯನ್ನ ಆಫೀಸ್‍ನಿಂದ ಕಿಡ್ನಾಪ್ ಮಾಡಿ ಕೊಲೆ ಮಾಡ್ದ

    ಖಮ್ಮಮ್: ಪತಿರಾಯನೇ ತನ್ನ ಹೆಂಡತಿಯನ್ನ ಕೆಲಸ ಮಾಡೋ ಜಾಗದಿಂದ ಕಿಡ್ನಾಪ್ ಮಾಡಿ ಬಳಿಕ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ಗುರುವಾರದಂದು ನಡೆದಿದೆ.

    ಬಂಢಾರಿ ಪದ್ಮಾ ಕೊಲೆಯಾದ ಮಹಿಳೆ. ಇವರು ಜಿಲ್ಲಾ ಪರಿಷತ್ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪದ್ಮಾ ಹಾಗೂ ಅವರ ಪತಿಯ ನಡುವೆ ಮನಸ್ತಾಪವಿತ್ತು. ಹೀಗಾಗಿ ಕೆಲ ಸಮಯದಿಂದ ಪದ್ಮಾ ತನ್ನ ಪತಿಯಿಂದ ದೂರವಾಗಿದ್ದರು ಎಂದು ವರದಿಯಾಗಿದೆ.

    ಗುರುವಾರ ಸಂಜೆ ಪದ್ಮಾ ಕೆಲಸ ಮುಗಿಸಿ ಮನೆಗೆ ಹೊರಡುವಾಗ ಆಕೆಯ ಪತಿ ಪ್ರಭಾಕರ್ ಇಬ್ಬರು ವ್ಯಕ್ತಿಗಳೊಂದಿಗೆ ಕಾರ್‍ನಲ್ಲಿ ಬಂದು ಪದ್ಮಾರನ್ನು ಕಿಡ್ನಾಪ್ ಮಾಡಿ ಇಲ್ಲೆಂಡು ಎಂಬಲ್ಲಿಗೆ ಕರೆದೊಯ್ದಿದ್ದಾರೆ. ಅಲ್ಲಿ ಪದ್ಮಾ ಅವರ ಕುತ್ತಿಗೆಯನ್ನ ದಾವಣಿಯಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಶವವನ್ನ ಹೊರವಲಯದಲ್ಲಿ ಎಸೆದಿದ್ದಾರೆ.

    ಪೊಲೀಸರು ಶವವನ್ನ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಪ್ರಭಾಕರ್ ಸದ್ಯ ಪರಾರಿಯಾಗಿದ್ದು, ಆತನಿಗಾಗಿ ಬಲೆ ಬೀಸಲಾಗಿದೆ.

  • ಆಫೀಸ್ ವ್ಯವಸ್ಥೆ ಸುಧಾರಣೆಗೆ ಯೋಗಿಯಿಂದ ಮತ್ತೊಂದು ಖಡಕ್ ಆದೇಶ

    ಆಫೀಸ್ ವ್ಯವಸ್ಥೆ ಸುಧಾರಣೆಗೆ ಯೋಗಿಯಿಂದ ಮತ್ತೊಂದು ಖಡಕ್ ಆದೇಶ

    ಲಕ್ನೋ: ಸಾಮಾನ್ಯ ಕೈದಿಗಳಿಗೆ ನೀಡುವ ಆಹಾರವನ್ನೇ ಡಾನ್‍ಗಳಿಗೆ ನೀಡಬೇಕೆಂದು ಸೂಚಿಸಿದ್ದ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಈಗ ಸರ್ಕಾರ ಎಲ್ಲ ಕಚೇರಿಗಳಲ್ಲಿ ಬಯೋಮಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವಂತೆ ಆದೇಶಿಸಿದ್ದಾರೆ.

    ಶನಿವಾರ ರಾತ್ರಿ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಯೋಗಿ, ಆಫೀಸ್‍ನಿಂದ ಆರಂಭವಾಗಿ ಬ್ಲಾಕ್ ಹಂತದ ಆಫೀಸ್ ವರೆಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಅಳವಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯ ಹೊರತಾಗಿ ಎಲ್ಲ ಗ್ರಾಮ ಪಂಚಾಯತ್‍ಗಳಲ್ಲಿ ಪ್ರಸ್ತುತ ಆಯ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿ ಕೆಲಸದ ಮಾಹಿತಿ ಮತ್ತು ಗ್ರಾಮದ ಪಂಚಾಯತ್‍ನ ಪ್ರಧಾನ್ ಸಂಪರ್ಕ ವಿಳಾಸವನ್ನು ಬೋರ್ಡ್ ಮೂಲಕ ಪ್ರಕಟಿಸಬೇಕೆಂದು ಸೂಚಿಸಿದ್ದಾರೆ.

    ಅಷ್ಟೇ ಅಲ್ಲದೇ ಪ್ರಧಾನ ಮಂತ್ರಿ ಅವಾಸ್ ಯೋಜನದ ಗುರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಮಹತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರ ಹೆಸರುಗಳು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗೆ ಸೇರ್ಪಡೆಯಾಗಬೇಕು ಎಂದು ಯೋಗಿ ಹೇಳಿದ್ದಾರೆ.

    ಇದನ್ನೂ ಓದಿ: ಸಾಮಾನ್ಯ ಕೈದಿಗಳಿಗೆ ನೀಡೋ ಆಹಾರವನ್ನೇ ಡಾನ್‍ಗಳಿಗೂ ನೀಡಿ: ಯೋಗಿ ಆದಿತ್ಯನಾಥ್